Saturday, July 31, 2010

ನಿಮಗಿದೋ ಶುಭೋದಯ ..


 ನಿಮಗಿದೋ ಶುಭೋದಯ ..

ಚಿಲಿಪಿಲಿಗುಟ್ಟುವ 
ಹಕ್ಕಿಗಳ ನಾದಮಯ 
ಇಂಚರಕ್ಕೆ ....

ಪಿಸುಗುಟ್ಟುವ ಬಣ್ಣದ 
ಚಿಟ್ಟೆಗಳ ವರ್ಣರಂಜನೆಯ 
ಜೇಂಕಾರಕ್ಕೆ....


ಮಧುವಣ ಗಿತ್ತಿಯಂತೆ 
ಅಲಂಕೃತ ಗೊಂಡ ಪ್ರಕೃತಿಯ 
ಸೊಬಗಿಗೆ ....

ಮನಸೋತ ಬಾಸ್ಕರನು 
ನಿದ್ರೆಯಿಂದ ಎದ್ದು ಬರುತ್ತಿರುವ ದೃಶ್ಯ 
ಸುಂದರ , ಮನೋಹರ , ರಮಣೀಯ ,
ನಿಮಗಿದೋ ಶುಭೋದಯ ..

SATISH N GOWDA

Thursday, July 29, 2010

ಓ ಮನಸ್ಸೇ ನಿನೇಷ್ಟು ಚನ್ನ


ಓ ಮನಸ್ಸೇ ನಿನೇಷ್ಟು ಚನ್ನ ...

ಪ್ರೀತಿಸಲು ಬಯಸಿದವರನ್ನ
ಬೇಡ ಎನ್ನಲಾರೆ 
ದ್ವೇಷಿಸಲು ಬಯಸಿದವರನ್ನ 
ಬೇಕು ಎನ್ನಲಾರೆ 
ಓ ಮನಸ್ಸೇ ನಿನೇಷ್ಟು ಚನ್ನ 


ಅಮ್ಮನ ಅಕ್ಕರೆ 
ನೀ ಕಂಡಿದ್ದಿಯ
ಪ್ರೇಯಸಿಯ ಹೃದಯ
ನೀ ಕಂಡಿದ್ದಿಯ 
ಓ ಮನಸ್ಸೇ ನಿನೇಷ್ಟು ಚನ್ನ 


ಕಷ್ಟ ಕಾರ್ಪಣ್ಯಗಳ 
ಗುಡಿಸಲು ನಿನಗೆ ಗೋತ್ತು 
ಸುಖ ಸುಪ್ಪತ್ತಿಗೆಯ 
ಆರಮನೆ ನಿನಗೆ ಗೋತ್ತು 
ಓ ಮನಸ್ಸೇ ನಿನೇಷ್ಟು ಚನ್ನ 
SATISH N GOWDA

ಹೇ ಹುಡುಗಿ ..


ಹೇ ಹುಡುಗಿ ..
ಹೇ ಹುಡುಗಿ ..
ನಿನ್ನ ಒಂದು 
ಕಣ್ಣ ನೋಟಕ್ಕೆ 
ಜಗದೊಡೆಯ 
ಸೂರ್ಯನೂ
ಕತ್ತಲ ಮರೆಗೆ 
ಸರಿಯುತ್ತಿದ್ದಾನೆ 
.... ಇನ್ನೂ ನಾನು ...?


ಹೇ ಹುಡುಗಿ ..
ನಿನ್ನ ಬಳೋಕೋ
ನಡೆಯ ಕಂಡು 
ನಾಟ್ಯ ಮಯೊರಿ
ನವಿಲು ಕೂಡ 
ನಾಚಿ ಓಡುತ್ತಿದೆ 
ಭಯದಿಂದ 
.... ಇನ್ನೂ ನಾನು ...?


ಹೇ ಹುಡುಗಿ ..
ನಿನ್ನ ಚಂದದ 
ನಗುವ ಕಂಡು 
ಸೌಂದರ್ಯದ  ಒಡತಿ
ಸೂರ್ಯಕಾಂತಿ ಯೊ ಕೊಡ
ತಲೆಬಗಿದ್ದಾಳೆ 
.... ಇನ್ನೂ ನಾನು ..?
SATISH N GOWDA

Monday, July 26, 2010

ಹೆಣ್ಣಿನ ಮನಸ್ಸು .......


ಹೆಣ್ಣಿನ  ಮನಸ್ಸು .......
ಹೆಣ್ಣಿನ ಮನಸ್ಸನ್ನು 
ವರ್ಣಿಸಲು  
ಪುಟಗಳು ಸಾಲೊಲ್ಲ
ಅದರೂ ನನ್ನ 
ಪ್ರಯತ್ನ ನಾ ಬಿಟ್ಟಿಲ್ಲ .......
 

ನಾನು ಎಂಬ 
ಅಹಂಕಾರ ಅವಳಲ್ಲಿದೆ 
ನನ್ನವರು ಎಂಬ 
ಸ್ವಾಭಿಮಾನ  ಅವಳ ಮನಸ್ಸಿನಲ್ಲಿದೆ .
 

ಎಲ್ಲವೂ ಬೇಕೆಂಬ 
ಆಸೆ ಅವಳಲ್ಲಿದೆ .
ಎಲ್ಲರು ಬದುಕಬೇಕೆಂಬ 
ಬಯಕೆ ಅವಳ ಮನಸಿನಲ್ಲಿದೆ . 

ಕನಸ್ಸು ಕಟ್ಟುವ 
ನಾರಿಯು ಅವಳೇ 
ಮನಸ್ಸು ಮುರಿಯುವ 
ಮಾರಿಯೂ ಅವಳೇ .
 

ಪ್ರೀತಿ ಕೂಡುವ 
ದೇವತೆಯು ಅವಳೇ .
ಪ್ರಾಣ ತೆಗೆಯುವ 
ರಾಕ್ಷಸಿಯು ಅವಳೇ .

SATISH N GOWDA

Wednesday, July 21, 2010

ಪ್ರೀತಿ ಅಂದರೇ ಇದೇನಾ..?


ಪ್ರೀತಿ ಅಂದರೇ ಇದೇನಾ..?

ಸಂಜೆಯಾದರೆ
ಅವಳದ್ದೇ ನೆನಪು
ರಾತ್ರಿಯಾಲ್ಲ
ನಿದ್ದೆ ಬರುವುದಿಲ್ಲ
ಕನಸಲ್ಲೂ ಕೂಡ
ಅವಳದ್ದೇ ಕನವರಿಕೆ
ಪ್ರೀತಿ ಎಂದರೆ ಇದೇನಾ...?

ಚಿಲಿ ಪಿಲಿ ಗುಟ್ಟುವ
ಹಕ್ಕಿಯಲ್ಲೂ ಅವಳದ್ದೇ ದ್ವನಿ
ತಂಪಾಗಿ ಬೀಸೊ ಗಾಳಿಯಲ್ಲೂ
ಅವಳದ್ದೇ ಸ್ಪರ್ಶ
ಹಿಂದೆ ಬರೋ ನೆರಳಿನಲ್ಲೂ
ಅವಳದ್ದೇ ಬಿಂಬ
ಪ್ರೀತಿ ಎಂದರೆ ಇದೇನಾ...?

ಅಮ್ಮನ ಅಕ್ಕರೆ
ನೆನೆಪಾಗುತ್ತಿಲ್ಲ
ಅತ್ತಿಗೆಯ ವಾತ್ಸಲ್ಯಕ್ಕೆ
ಮನಸೊಲುತ್ತಿಲ್ಲ
ಅಪ್ಪನ ಹಿತನುಡಿಗೆ
ದ್ವನಿಯಾಗುತ್ತಿಲ್ಲ
ದಯವಿಟ್ಟು   ಹೇಳಿ ಪ್ರೀತಿ ಎಂದರೆ ಇದೇನಾ...?

Friday, July 16, 2010

ಅದು ನಿನೇನಾ..!


ಅದು ನಿನೇನಾ..!
ನನ್ನಲೊಂದು
ಅಳಿಸಲಾಗದ
ಪ್ರೀತಿ ಇಹುದು
ಆ ಪ್ರೀತಿ ನೀನಾಗುವೆಯಾ ...!

ಮನಸ್ಸಿನಲ್ಲೊಂದು
ಮರೆಯಲಾಗದ
ಕನಸಿಹುದು
ಆ ಕನಸು ನಿಂದೇನಾ...!

ಸಂಜೆಯಾದರೆ
ಧೋ ಎಂದು ಅಪ್ಪಳಿಸುವ
ಸುಂದರ ನೆನೆಪಿಹುದು
ಆ ನೆನೆಪು ನಿನೇನಾ...!
                                    ಸತೀಶ್ ಏನ್ ಗೌಡ

Thursday, July 15, 2010

ಚಾಟಿಂಗ್ ನಲ್ಲಿ ಪರಿಚಯವಾದ ಗೆಳತಿಗೊಂದು .......

ಇದೊಂದು ಕೇವಲ ಕಲ್ಪನೆಯ ಬರವಣಿಗೆಯಷ್ಟೇ ..... ಬರೆಯಲು ಸ್ಪೂರ್ತಿ ನನ್ನ ಆರ್ಕುಟ್ ಗೆಳತಿ ಸಂಗೀತಾ ಈ ಆರ್ಟಿಕಲ್ ಅವಳ ನೆನಪಿನ ಬುಟ್ಟಿಯಲ್ಲಿ ಇರುವ ಅಸಂಖ್ಯಾ ಕನಸಿನ ನಕ್ಷತ್ರಗಳಲ್ಲಿ    ಒಂದು ಚಿಕ್ಕ ನಕ್ಷತ್ರಕ್ಕೆ ಬರವಣೆಗೆಯ ರೂಪ ಕೊಟ್ಟಿದ್ದೇನೆ .......  



ಚಾಟಿಂಗ್ ನಲ್ಲಿ ಪರಿಚಯವಾದ ಗೆಳತಿಗೊಂದು .......
           ಅರ್ಕುಟ್ ಅನ್ನೊ ಮಹಾ ಸಮುದ್ರದಲ್ಲಿ ಚಾಟ್ ಮಾಡಿ FRIND ಆದವರು  ಎಷ್ಟೊ ಜನರಿದ್ದಾರೆ . ಹಾಗೆ ಚಾಟ್ ಮಾಡಿ ಪ್ರೇಮಿಗಳಾದವರು ಬಹುಶಃನಾವೇ ಮೊದಲಿಗರು ಇರಬುದೆಂದು ನನ್ನ ಅನಿಸಿಕೆ.  ಹೇ ಗೆಳತಿ ನಮ್ಮದು ಯಾರೇ ನೀನು ಚಲುವೆ ಚಿತ್ರದ ಒಂದು ತುಣುಕು ಕೂಡ ಹೌದು ಅಲ್ವಾ..? ಈಗೀನ ಕಾಲದಲ್ಲಿ ಕಣ್ಣಿಂದ ನೋಡಿ, ಮನಸ್ಸಿನಿಂದ ಮಾತಾಡಿ, ಹೃದಯದಿಂದ ಪ್ರೇಮ ಲೇಖನ ಬರೆದು ಪಾರ್ಕು, ಸಿನಿಮಾ ಸುತ್ತಾಡಿ ಪ್ರೀತಿ ಮಾಡಿದರೂ ಆ ಪ್ರೀತಿ ಕೆಲಕಾಲ ಉಳಿಯುವುದೆ ಕಷ್ಟ . ಅದಕ್ಕಾಗಿಯೇ ನನ್ನ  ಪ್ರೀತಿಯನ್ನು ಹಂಚಿಕೊಳ್ಳಲು ಏನೂ ಕುತೂಹಲ,ಏನೂ ಅಂಬಲ, ಗೊತ್ತೇ .! ನನ್ನ ನಿನ್ನ ಮೊದಲ ಮಾತು ಕೇವಲ ಅರ್ಕುಟ್ ಚಾಟಿಂಗ್ ನಿಂದಲೆ ಶುರುವಾಯಿತು ಕಣ್ಣಿಂದ ನೋಡದಿದ್ದರೂ ಕನಸು ಕಟ್ಟುವ ಬೀಜ ಹೃದಯದಲ್ಲಿ ಮೊಳಯಿತು , ಮನಸ್ಸಿನಿಂದ ಮಾತಾಡದಿದ್ದರೂ ಚಾಟಿಂಗ ನಲ್ಲಿನ ಬರಹ ನಮ್ಮಿಬ್ಬರನ್ನ ಹತ್ತಿರಕ್ಕೆ ತಂದಿತ್ತು, ಪಾರ್ಕು, ಸಿನಿಮಾ ಸುತ್ತಾಡದಿದ್ದರೂ ಕನಸಿನ ಬೀಜ ಪ್ರೀತಿಯು ಹೆಮ್ಮರವಾಯಿತು .
ನಮ್ಮಿಬ್ಬರ ಪ್ರೀತಿಯನ್ನು  ಪ್ರೀತಿಯ ಗ್ರಂಥದಲ್ಲಿ ಮೊದಲ ಪುಟಗಳಲ್ಲಿ ಬರೆದಿಡಬೇಕಾದ ಸುವರ್ಣಾಕ್ಷರಗಳು. ಹಾಗೆ ನಮ್ಮಿಬ್ಬರ ಬೇಟಿ ಒಮ್ಮೆ ನೆನೆದು ನೋಡು ನಾನು ನೀನು ಮೀಟ್ ಅಗ್ತಿವೆ ಅಂತ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಅಂದಿನ ದಿನ. ಅವತ್ತು ನಾನು ನನ್ನ ಗೆಳೆಯನ ಜೊತೆ COFFI DAY  ಗೆ ಬಂದಿದ್ದೆ , ನೀನು ನಿನ್ನ ಗೆಳತಿಯೊಂದಿಗೆ ಅದೇ COFFI DAY  ಗೆ ಬಂದಿದ್ದಿಯ. ಅದರೂ ನಾನೆ ನಿನ್ನ ಪ್ರೀತಿಯ ದಾಸ ಅಂತ ನಿನಗೂ ತಿಳಿದಿರಲಿಲ್ಲ, ನನಗೂ ಕೂಡ ಇವಳೆ ನನ್ನಪ್ರೀತಿಯ ಪಟ್ಟದರಸಿ ಅಂತ ತಿಳಿದಿರಲಿಲ್ಲ . ನಿಜವಾಗಲೂ ಅಂದಿನ ದಿನ ಆಶ್ಚರ್ಯವೇ ನೀನು ನನ್ನನ್ನು ಮಾತಾನಡಿಸಲಿಲ್ಲ , ನಾನು ನಿನ್ನನ್ನು ಮಾತಾನಾಡಿಸುವ ದೈರ್ಯ ಮಾಡಲಿಲ್ಲ. ನಿನ್ನನ್ನು ನಿನ್ನ ಬಾಲ್ಯದ ಗೆಳತಿ ನನಗೆ ನಿನ್ನ ಪರಿಚಯಮಾಡಿಕೊಟ್ಟಗಲೂ ನೀನು ಹಾಯ್ ಅನ್ನುವ ಮಾತನ್ನು ಬಿಟ್ಟರೆ ಬೇರೆನೂ ಮಾತಾಡಲಿಲ್ಲ . ಆ ನಿನ್ನ ಅವತ್ತಿನ ನೆಡೆವಳೆಕೆಯನ್ನು ನೋಡಿ ಅವಳೇ ಇವಳಾಗಬಾರದೇ ಎಂದು ದೇವರಲ್ಲಿ ಪ್ರಾರ್ಥಿಸಿದ್ದು ಉಂಟು ಗೋತ್ತಾ.? ನಾನು ನಿನ್ನ ಕೈ ಹಿಡಿದು ಪರಿಚಯಿಸಿಕೊಳ್ಳುವಾಗ ಇಡೀ ಪ್ರಕೃತಿಯೇ ನಮ್ಮಿಬ್ಬರನ್ನ ಹರಸಿದ್ದವು..! ಧೋ ಎಂದು ಸುರಿಯುತ್ತಿದ್ದ ಮಳೆ ಸೋನೆಯಾಗಿ ಜಿನುಗುತ್ತಿತ್ತಿ ( ಮದುವೆ ಮನೆಯಲ್ಲಿ ಚಲ್ಲುವ ಅಕ್ಷತೆಯ ಹಾಗೆ ) ಮುಂದಿನ ಟೇಬಲ್ ನಲ್ಲಿ ಬಿಸಿ ಬಿಸಿ Coffi ಕುದಿಯುತ್ತಿತ್ತು (ತಾಳಿ ಕಟ್ಟುವ ಶುಭ ವೇಳೆಯಲ್ಲಿ ಮುಂದಿರುವ ಹೋಮದ ಹಾಗೆ ) ಅ ದಿನ Coffi Shop  ನಲ್ಲಿದ್ದ ಜನಗಳನ್ನು ನೊಡಿದೆಯ (ನಮ್ಮ ಮದುವೆಗೆ ಬಂದಿರುವ ಬಂದು ಮಿತ್ರರಹಾಗೆ ) ನಮ್ಮನ್ನೆ ಗುರುಗುಟ್ಟಿಕೊಂಡು ನೋಡುತ್ತಿದ್ದರು. ಹೋಗಲಿ ಸುತ್ತ ಮುತ್ತ ಆ ಶಬ್ದ ಕೇಳಿದೆಯ (ಮದುವೆಯಲ್ಲಿ ನುಡಿಸುವ ಮಂಗಳವಾದ್ಯಗಳ ಹಾಗೇ ) ಇದೆಲ್ಲದರ ಮದ್ಯ ನೀನು ಮಾತ್ರ ಮೌನ(ಮದುವೆ ಮಂಟಪದಡಿಯ ಹಸೆಮಣೆಯಲ್ಲಿ ಕುಳಿತ ನನ್ನ ಹೃದಯ ರಾಜಕುಮಾರಿಯಂತೆ ) ವಾಗಿ ಏನೂ ನನಗೆ ಗೊತ್ತಿಲ್ಲದವಳ ಹಾಗೆ ಕುಳಿತು ಎಲ್ಲವನ್ನು ನಿನ್ನ ಕಣ್ಣಿನ ಕ್ಯಾಮರದಲ್ಲಿ ಸೆರೆಹಿಡಿಯುತ್ತಿದ್ದೆ..ನನ್ನ ಮನಸ್ಸಿಗೆ ಅವತ್ತು ಯಾಕೊ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತಾನಾಡುವ ಅಸೆ.
             ಆ ದಿನ ನಿನ್ನ Gmail id ಕೊಡಿಸುವಂತೆ ನನ್ನ ಗೆಳೆಯನಿಗೆ ಪರಿಯಾಗಿ ಕೇಳಿದೆ ಪ್ರಯೋಜನವಾಗಲಿಲ್ಲ ನೀನ್ನ ಗೆಳತಿಗೂ ಕೇಳಿದೆ ಅವಳಿಗೆ ನೀನು ಒಂದೆ ಮಾತಿನಲ್ಲಿ ಉತ್ತರ ಕೊಟ್ಟಿದ್ದೆ . ನಾನು ಯಾರಿಗೂ ID ಕೂಡೊಲ್ಲ ಯಾರ Frindship ನನಗೆ ಬೇಕಿಲ್ಲ ಎಂದು ನೆನೆಪಿದೆಯ ಗೆಳತಿ . ಅದರೂ ನಿನ್ನ ಬಿಟ್ಟು ಬಿಡಲಾರದೆ ನಿನ್ನ ID ಹೇಗೂ ಸಂಪಾದಿಸಮೇಲೆನೆ ನೀನ ನನ್ನ ಪ್ರೀತಿಯ ಪಟ್ಟದರಸಿ ಎಂದು ಗೋತ್ತಾಗಿದ್ದು  . ಗೊತ್ತಾದ ತಕ್ಷಣ ನಿನಗೆ ಹೇಳಿದರೆ ನೀನು ನನ್ನ ತಬ್ಬಿ ಕೊಂಡಿದ್ದೆ . ನಿನ್ನ ಗೆಳತಿ ನಿನಗೆ ಕೇಳಿದರೆ ಏನೇ ಬರೀ Gmail ID ಕೊಡು ಅಂದ್ರೆ ಕೊಡಲಿಲ್ಲ, ಅವರಿಗೆ ಇವಗೇನು ಅವರನ್ನೆ ತಬ್ಬಿಕೊಂಡಿದ್ದಿಯ ಅಂತ ಕೇಳಿದ್ದಕ್ಕೆ..!  ಎನೇಂದೆ ನೆನಪಿಸಿಕೊ. ಹೇ ಹೊಗೇಲೇ ನಮ್ಮಬ್ಬರದ್ದು ಜನ್ಮ-ಜನ್ಮದ ಅನುಬಂದ ಅಂತ ಹೇಳಿದ್ದೆ. ಆ ಕ್ಷಣ ನನಗೆ ಎಲ್ಲಿಲ್ಲದ  ಸಂತೋಷ ನನಗೇ ಅಂತ ಅಲ್ಲ ನೀನು ಕೂಡ ಸಂತೋಷದ ಸಾಮ್ರಜ್ಯದಲ್ಲಿ ನನ್ನನ್ನು ಬಿಟ್ಟರೇ ಯಾರು ಇಲ್ಲ ಎಂದು ಬಿಗುತ್ತಿದ್ದೆ .. ಅವತ್ತಿನ ದಿನ ನಿನ್ನ ಮುದ್ದಾದ ಮೂತಿ ಎಷ್ಟು ಚಂದ ಎನ್ನುತ್ತಿಯ ನಿನ್ನನ್ನು ವರ್ಣಿಸಲು ಪದಗಳೇ ಇಲ್ಲ ಬಿಡು . ನಿನ್ನನ್ನು ನೋಡಲು Coffi Shop  ಮುಂದಿರುವ  ಪಾರ್ಕ್ ನಲ್ಲಿ ನಾನೊಬ್ಬನೆ ಬಂದಿರುವೆ ಎಂದು ತಿಳಿದುಕೊಂಡಿದ್ದೆ, ಅದರೇ ಅದು ನನ್ನ ಹುಚ್ಚು ಕಲ್ಪನೆ ಎಂದು ಅಲ್ಲೆ ಗೊತ್ತಾಯಿತು.. ಹೇಗೆ ಎಂದು ಕೇಳುತ್ತಿಯ...! ರಾತ್ರಿ ಕಾಣುವ ಚಂದ್ರ ನಿನ್ನ ಮುದ್ದು ಮುಖವ ನೋಡಲು ಸೂರ್ಯನೆ ಬೆಳಕಿನ ಮರೆಯಲ್ಲಿ ನಿಂತಿದ್ದ , ತಂಪಾದ ಗಾಳಿಯ ಮರೆಯಲ್ಲಿ ಕೆಂಗಣ್ಣಿನ ಸೂರ್ಯ ನಿನ್ನ ಮುದ್ದು ಮುಖವನ್ನು ಕದ್ದು-ಕದ್ದು ನೊಡುತಿದ್ದ , ಗಾಳಿಯೂ ಕೂಡ ನಾನೆನು ಕಮ್ಮಿಯಿಲ್ಲ ಎಂಬಂತೆ ಮಿಂಚಿಮಾಯವಾಗುತಿತ್ತು. ಅವುಗಳಿಗೆಲ್ಲ ಹೇಳಿದ್ದೇನೆ ಇವಳು ನನ್ನ ಮನದೊಡತಿ ಇವಳ ಮೇಲೇನಾದರು ನಿಮ್ಮ ಕಣ್ಣು ಬಿದ್ದರೆ ಒಬ್ಬೊಬ್ಬರಿಗೆ ಕೈ-ಕಾಲು ಮುರಿಯುತ್ತೆನೆ ಎಂದು ವಾರ್ನ್ ಮಾಡಿ ಬಂದಿದ್ದೆನೆ..
               ಹೇ ಹುಡುಗಿ ಇಷ್ಟೆಲ್ಲ ಪ್ರೀತಿ ಇದ್ದರೂ I LOVE U ಅಂತ ಹೇಳೊ ದೈರ್ಯ ಬರಲಿಲ್ಲ . ದೈರ್ಯ ಇಲ್ಲವಂತಲ್ಲ ನಾಚಿಕೆಯೂ ಅಲ್ಲ ಈ ಪಿಸುಮಾತನ್ನು ಮೊಬೈಲ್ ನಲ್ಲೆ ಹೇಳಿಬಿಡೊಣ ಎಂದು ಕೊಂಡೆ ಅದರೂ  ಅಂತ ಸಮಯ ಇನ್ನೂ ನಮ್ಮಿಬ್ಬರ ಮದ್ಯ ಬರಲಿಲ್ಲ . ಅದರೂ ನಾವಿಬ್ಬರು ಪ್ರೇಮಿಗಳು ಎಂದ ಮೇಲೆ ಆ ಮೊದಲ ಮಾತು ಹೇಳಲು ನಾಲಿಗೆ ಇಷ್ಟೊಂದು ತೊದಲುತ್ತಿದೆಯೇಕೆ . ಅಂದಿನಿಂದ ನಾವಿಬ್ಬರು ಪ್ರತಿಯೋಂದು ವಿಷಯವನ್ನೂ ಮೊಬೈಲ್ ನಲ್ಲೆ ಹಂಚಿಕೊಳ್ಳುತ್ತಿದ್ದೆವೆ. ನಮ್ಮಿಬ್ಬರಿಗೂ ಪ್ರಕ್ರಿತಿ ಸಾಕ್ಷಿಯಾಗಿ ಎಂದೋ ಮದುವೆಯಾಗಿ ಹೋಗಿದೆ ಇವಾಗ ಆ ಪದದ ಅವಶ್ಯಕಥೆಯೂ ಬೇಡ ಅಲ್ಲವೇ.. ನೀನು ಪರಿಚವಾದ ದಿನದಿಂದ ನಿನ್ನ ಜೊತೆ ಮಾತಾಡದಿದ್ದರೆ ಏನೋ ಕಳೆಕೊಂಡವನ ರೀತಿ ಹುಡುಕುತ್ತಿರುತ್ತೆನೆ ಜೀವನದೂದ್ದಕ್ಕು ಬರೀ ಕನಸುಗಳನ್ನು ಕಟ್ಟಿಕೊಂಡುಬಂದ ನನಗೆ ನಿನ್ನನ್ನು ಬಿಟ್ಟರೇ ಯಾರು ಈ ಕುರುಡು ಪ್ರಪಂಚದಲ್ಲಿ ಗೊತ್ತಿಲ್ಲ. ಈ ಪ್ರೀತಿನೆ ಹಾಗೆ ಯಾವಗ ಹುಟ್ಟೊತ್ತೊ ಗೊತ್ತಿಲ್ಲ. ಅದು ಹುಟ್ಟುವಾಗ ಮನಸ್ಸಿನಲ್ಲಿ ಎನೋ ತವಕ ನಿರೀಕ್ಷೆಗೂ ಮೀರಿ ಸಂತಸ. ಅದರೆ ಈ ನಡುವೆ  ನಿನ್ನ ಪ್ರೀತಿಯನ್ನು ಕಳೆದುಕೊಳ್ಳುವ ಭಯ ಶುರುವಾಗಿದೆ ನಿನ್ನ ಒಂದು ಕ್ಷಣದ ಅಗಲಿಕೆಯನ್ನು ಕಲ್ಪಿಸಿಕೊಂಡರೆ ಮನಸ್ಸು ಚಿದ್ರ-ಚಿದ್ರವಾಗುತ್ತದೆ.. ಹೇ ಗೆಳತಿ ನೀನು ನನ್ನ ಜೀವನದ ಕೋನೆ ನಿಮಿಷ... ಸಾರಿ..ಸಾರಿ ಕೊನೆ ಕ್ಷಣದವರೆಗೂ ನನ್ನ ಜೊತೆಯಲ್ಲಿರುತ್ತಿಯಲ್ಲ...?

ನಿನ್ನ ಪ್ರೀತಿಯ ಕಾಯಕ ...
SATISH N GOWDA
satishgowdagowda@gmail.com

Tuesday, July 13, 2010

ಹೀಗೊಂದು ಆಸೆ ..



ಹೀಗೊಂದು ಆಸೆ ....
ಟಮೋಟೊ ಹಣ್ಣಿನಂತಿರುವ ನಿನಗೆ
ಮೆಣಸಿನ ಕಾಯಿಯಂತಹ ಗಂಡು ಸಿಗಲಿ
ಈರುಳ್ಳಿಯಂತಹ ಅತ್ತೆ ಸಿಗಲಿ
ಬೆಳ್ಳುಳ್ಳಿಯಂತಹ ಮಾವ ಸಿಗಲಿ
ಹುಣಸೆ ಬೀಜದಂತಹ ಮಗುವಾಗಲಿ
ಒಟ್ಟಿನಲ್ಲಿ ನಿನ್ನ ಸಂಸಾರ ಒಳ್ಳೆ 
ಸಾಂಬಾರಿನಂತೆ ಚನ್ನಾಗಿರಲಿ......

                                ಸತೀಶ್ N ಗೌಡ

ನಿರೀಕ್ಷೆ....



ನಿರೀಕ್ಷೆ


ಪ್ರೀತಿಯ ಮಳೆ
ನೆನ್ನೆ ಮಿಂಚಿ
ಮಾಯವಾದ
ಪ್ರೀತಿಯ ಮಳೆಗೆ
ನನ್ನೆದೆಯ 
ಹೃದಯವನ್ನ
ಉತ್ತು ಹದ ಮಾಡಿರುವೆ.
ನಾಳೆ ಬರುವ
ಮುಂಗಾರುಮಳೆಗೆ
ಕನಸಿನ ಬೀಜಗಳನ್ನ
ನನ್ನೆದೆಯಲ್ಲಿ ಬಿತ್ತುವೆ.
ಮುಂಬರುವ
ದಿನಗಳಲ್ಲಿ
ಹುಟ್ಟುವ 
ಕನಸಿನ ಬೀಜಗಳ
ಪೈರಿನಿಂದ
ಪ್ರೀತಿಯ
ರಾಶಿ
ಕಟ್ಟುವ 
ಬಹುದೊಡ್ಡ 
ನಿರೀಕ್ಷೆ ಇದೆ...

                ಸತೀಶ್ N ಗೌಡ

ನನ್ನ ಪ್ರೀತಿ.....




ನನ್ನ ಪ್ರೀತಿ..

ನನ್ನ ಪ್ರೀತಿ ಹೂವಿನಷ್ಟು ಸುಂದರ
ಎಂದರೇ ತಪ್ಪಾದೀತು
ಬೆಳಗ್ಗೆ ಅರಳೊ ಹೂವು
ಸಂಜೆ ಬಾಡಿಹೊಗುತ್ತದೆ.

ನನ್ನ ಪ್ರೀತಿ ಚಂದ್ರನಷ್ಟು ಮಧುರ
ಎಂದರೆ ತಪ್ಪಾದೀತು
ರಾತ್ರಿ ಕಾಣುವ ಚಂದ್ರ
ಹಗಲು ಕಾಣಲಾರ.

ನನ್ನ ಪ್ರೀತಿ ಆಕಾಶದಷ್ಟು ಅಮರ
ಎಂದರೆ ಬಹುಶಃ ತಪ್ಪಾದೀತು
ಕಣ್ಣನೋಟಕ್ಕೆ ಅಷ್ಟೆ ಆಕಾಶ
ಒಳ ಹೊಕ್ಕರೆ ಬರೀ ಗಾಳಿ......


                                                            ಸತೀಶ್ N ಗೌಡ

ಈ ಬಡ ಪ್ರಪಂಚದಲ್ಲಿ......


ಈ ಬಡ ಪ್ರಪಂಚದಲ್ಲಿ......



ನನ್ನ ಹುಡುಗಿಯ
ಅಂದವ ನಾ ಹೊಗಳಲಾರೆ
ಅವಳ ಅಂದಕ್ಕೆ
ಸಾಟಿ ಏನಿಹುದು
ಈ ಬಡ ಪ್ರಪಂಚದಲ್ಲಿ
ನವಿಲಿನ ನಾಟ್ಯವೋ...?
ತಾವರೆಯ  ರೆಕ್ಕೆಯೋ..?

ನನ್ನ ಹುಡುಗಿಯ
ಚಿತ್ರವ ನಾ ಬಿಡಿಸಲಾರೆ
ಅವಳ ಚಿತ್ರವ
ಹೋಲುವುದೇನಿಹುದು
ಈ ಬಡ ಪ್ರಪಂಚದಲ್ಲಿ
ದಿಲ್ಲಿಯ ತಾಜ್ ಮಹಲ್ಲೋ...?
ದುಬೈನ ಬುರ್ಜ್ ಖಲಿಫಾನೋ ...?
                                               ಸತೀಶ್ N ಗೌಡ 

ನಾನಲ್ಲ....

 ನಾನಲ್ಲ....
ಕಲೆಗಾರ ನಾನಲ್ಲ
ಕವಿಗಾರನೂ ನಾನಲ್ಲ
ಭಾವನೆಗಳೊಂದಿಗೆ
ಬದುಕುವುದುನ್ನ ಬಿಟ್ಟರೇ
ಬೇರೆನೂ ನನಗೆ ಗೊತ್ತಿಲ್ಲ

ಕನಸುಗಾರ ನಾನಲ್ಲ
ಕನಸು ಕಾಣುವ ಆಸೆ ನನಗಿಲ್ಲ
ನನಸಾಗದ ಕನಸು
ಗಳನ್ನು ಕಾಣುವ
ಆ ರಾತ್ರಿಗಳು ನನಗೆ ಬೇಕಿಲ್ಲ

ಆಸೆಯೂ ನನಗಿಲ್ಲ
ಆಸ್ತಿಯೂ ನನಗಿಲ್ಲ
ನಿಮ್ಮ ಸ್ನೇಹ ಬಾಗ್ಯ
ಬಿಟ್ಟರೆ ಈ ಜಗದಲ್ಲಿ
ನನಗೆ ಬೇರೆನೂ ಗೊತ್ತಿಲ್ಲ

                                      ಸತೀಶ್ N ಗೌಡ

Thursday, July 8, 2010

ಪ್ರೀತಿ ಎಂದರೆ......


ಪ್ರೀತಿ ಎಂದರೆ....
ಪ್ರೀತಿ ಎಂದರೆ....
ಒಂದು ಹುಡುಗ
ಹುಡುಗಿಗೆ
ಕಣ್ಣು
ಹೊಡೆದಂಗಲ್ಲ
ಅಥವಾ...
ಆಕಾಶ
ಭೂಮಿಗೆ
ಸಿಡಿಲು
ಸಿಡಿಲು
ಬಡಿದಂತಲ್ಲ
ಬದಲಾಗಿ
ಕತ್ತಲೆ
ಮನೆಯೋಳೆಗೂ
ಬೆಳಕು ನೀಡುವ
ದೀಪವಿದ್ದಂತೆ.
ಪ್ರೀತಿಸಿ ನೋಡು
ಕನ್ನಡಿಯೊಳಗೆ
ನೀ ನಿನ್ನ
ಬಿಂಬ
ಕಾಣುವಂತೆ
ಪ್ರೀತಿಯಲ್ಲೂ
ನೀ ನಿನ್ನ
ಪ್ರೀತಿಯ
ಪ್ರತಿಬಿಂಬ
ಕಾಣುತ್ತಿಯ.

ಪ್ರೀತಿ ......!


ಪ್ರೀತಿ ......!
ಮೊದಲ ನೋಟ 
ಮೊದಲ ಮಾತು 
ಮೊದಲ ಸ್ಪರ್ಶ 
ಸಾಕಲ್ಲವೇ ಪ್ರೀತಿ ಹುಟ್ಟಲು ..

ಮೊದಲ ಉಡುಗೊರೆ 
ಮೊದಲ ಚುಂಬನ 
ಮೊದಲ ಮಿಲನ 
ಸಾಕಲ್ಲವೇ ಪ್ರೀತಿ  ಬೆಳೆಯಲು ....

ಮೊದಲ ಮುನಿಸು 
ಮೊದಲ ತಪ್ಪು 
ಮೊದಲ ಜಿಗುಪ್ಸೆ 
ಸಾಕಲ್ಲವೇ ಪ್ರೀತಿ ಸಾಯಲು .....



Monday, July 5, 2010

ನಾ ಬಡವನಲ್ಲ



ನಾ ಬಡವನಲ್ಲ
ನನ್ನ ಹೆಂಡತಿಗೆ
ಬಂಗಾರದ ಸೀರೆ ಕೊಡಿಸದಿದ್ದರೂ
ಬಣ್ಣ-ಬಣ್ಣದ ಸೀರೆಯನ್ನ
ನಾನೇ ಉಡಿಸಬಲ್ಲೆ- ನಾ ಬಡವನಲ್ಲ

ನನ್ನ ಹೆಂಡತಿಗೆ
ತಾಜ್ ಮಹಲ್ ನಂತ ಮನೆ ಕಟ್ಟದಿದ್ದರೂ
ನನ್ನ ಪುಟ್ಟ ಹೃದಯದಲ್ಲಿ
ನಾನೇ ದೇವತೆಯಾಗಿ ಪೂಜಿಸಬಲ್ಲೆ - ನಾ ಬಡವನಲ್ಲ

ನನ್ನ ಹೆಂಡತಿಗೆ
ಕಾರು- ಸ್ಕೋಟರ್ ಕೊಡಿಸದಿದ್ದರೂ
ಬಣ್ಣ ಬಣ್ಣದ  ತೇರಿನಲ್ಲಿ
ನಾನೇ ಕೂರಿಸಿ ಮೆರವಣಿಗೆ ಮಾಡಿಸ ಬಲ್ಲೆ - ನಾ ಬಡವನಲ್ಲ

ಹುಡಗರೇ ಹುಶಾರ್ "ಅಣ್ಣಾಮೇಲ್"( ಬ್ಲಾಕ್ ಮೇಲ್) ಗಳಿದ್ದಾರೆ......

ಹುಡುಗಿಯರಿಗೆ ಒಂದು ಕಿವಿ ಮಾತು .......
ಸಿಕ್ಕ-ಸಿಕ್ಕಾ ,ಕಡೆ -ಕಂಡ -ಕಂಡ ಹುಡುಗರು ನಿಮಗೆ I LOVE U ಹೇಳುತ್ತಿದ್ದಾರೆಯೇ ಅವರಿಗೆಲ್ಲ "ಅಣ್ಣಾ  ಮೇಲ್"
 ಮಾಡಿ ಇನ್ನೊಮ್ಮೆ ನಿಮ್ಮ ತಂಟೆಗೆ ಬರಲಾರರು ...

ಹುಡಗರೇ ಹುಶಾರ್ "ಅಣ್ಣಾಮೇಲ್"( ಬ್ಲಾಕ್ ಮೇಲ್) ಗಳಿದ್ದಾರೆ......

            ಈ ಕಾಲದಲ್ಲಿ  18 ರಿಂದ  22 ರವಯಸ್ಸಿನ ಹುಡುಗಿಯರು ಯಾರಿಗೆತಾನೆ ಇಷ್ಟ ಅಗೊಲ್ಲ ಹೇಳಿ... .? ಅದರಲ್ಲೂ ನಮ್ಮ ಚಿಂದಿ ಚೋರ್ ಹುಡುಗರು ಕೇಳಬೇಕಾ ಕಣ್ಣಿಗೆ ಕಾಣೊ ಹುಡುಗಿಯರಿಗೆಲ್ಲ I LOVE U  ಅಂತ ಹೇಳುವಷ್ಟು ವಿಶಾಲ  ಹೃದಯದವರು. ಒಂದು ಹುಡುಗಿ ಪರಿಚಯವಾದ ತಕ್ಷಣ ನಿಮ್ಮ ಅಪ್ಪ-ಅಮ್ಮ ಹೇಗಿದಾರೆ ? ನಿನಗೆ ಅಕ್ಕ -ತಂಗಿಯರಿದ್ದಾರ..? ಅಂತ ಮಾತು ಪ್ರಾರಂಬಿಸುವ ಮೂಲಕ ಸ್ನೇಹಿತೆಯರಲ್ಲಿ ಸೋದರ ಭಾವನೆ ಬಿತ್ತುವ, ಅಥಾವ ತನ್ನ ಅಯ್ಕೆಯನ್ನು ಸ್ವತಂತ್ರವಾಗಿಡುವ ತಂತ್ರವಿದು. ಬೆಂದಕಾಳುರು ಎಂಬ ಮಹನಗರದಲ್ಲಿ ಯಾವಗಲೂ ತುದಿ ಬಾಯಿಯಲ್ಲೆ ಇರುವ ಶಬ್ದವೆಂದರೆ "ಮಚ್ಚಾ" . ಈ ಪದ ಎಕ್ ದಮ್ ಸೋದರ ಭಾವನೆ ಮೂಡಿಸುವ ಪದಗಳಲ್ಲಿ ಒಂದು. ಈ ಹುಡುಗರು ಪ್ರಪೋಸ್ ಮಾಡುವ ರೀತಿ ಒಂದೇ ಎರಡೇ ಕಾಲೇಜ್ ಕ್ಯಾಂಪಸ್ , ಬಸ್ ಸ್ಟಾಪ್ ,ಪಾರ್ಕ್ , ಈ ನಡುವೆ ಇಂಟರನೆಟ್ ಚಾಟಿಂಗ್ ಗಳಲ್ಲಿ ಬಲು ನಜೋಕಾಗಿ ಹೇಳಬಲ್ಲರು.
        .... ಹೀಗೆ ಹುಡುಗಿಯರ ಹಿಂದೆ ಬೀಳುವ ಮಜ್ನುಗಳಿಂದ ತಪ್ಪಿಸಿಕೊಳ್ಳಲು ಹುಡುಗಿಯರ ಹತ್ತಿರ ಹತ್ತು ಹಲವಾರು ಅಸ್ತ್ರಗಳಿರುತ್ತವೆ  . ಒಂದೋ ರಾಖಿಕಟ್ಟಿಬಿಡುವುದು.... ರಾಖಿ ಕಟ್ಟುವ ಅಸ್ತ್ರ ಎಲ್ಲಾ ಸಮಯದಲ್ಲಿ ಉಪಯೋಗವಾಗುವುದಿಲ್ಲ . ಯಾಕೆಂದರೆ ರಾಖಿಕಟ್ಟುಲು ಹೋದ ಪ್ರಸಂಗವನ್ನೆ ಪ್ರಪೋಸ್ ಮಾಡಲು  USE ಮಾಡಿಕೊಂಡ ಪಡ್ಡೆ ಹುಡುಗರ  ದಂಡೇ ಇದ್ದಾರೆ. ಹಿಗಾಗಿ ರಾಖಿಕಟ್ಟುವ ವಿಷಯವನ್ನು ಬಿಟ್ಟು ಹುಡುಗಿಯರು ಅಯ್ದುಕೊಂಡ ಮತ್ತೊಂದು ಅಸ್ತ್ರವೆಂದರೆ . ಪರಿಚಯವಾದ ಮೊದಲ ನೋಟದಲ್ಲೆ "ಅಣ್ಣ" ಎಂದುಬಿಡುವುದು, ನಂತರ ಕಂಡು-ಕಂಡಲ್ಲಿ ಅಣ್ಣ ಎಂದು ತನ್ನ ಗೆಳತಿಯರಿಗೆ ತಾನೆ ಪರಿಚಯ ಮಾಡಿಕೊಡುವುದು. ಹೀಗೆ ಹೇಳಿದ ಮೇಲೆ ಹುಡುಗ ಬಾಯಿ ಬಿಡೊಹಾಗಿಲ್ಲ ಅಂತಹ "ಅಣ್ಣ ಮೇಲ್" (ಬ್ಲಾಕಮೇಲ್) ತಂತ್ರವಿದು . ಇದನ್ನೆಲ್ಲ ಮೀರಿ ಹೊರಟರೆ "ಪೋಲಿ" ಅನ್ನೊ ಪಟ್ಟ ಕಟ್ಟಿಬಿಡುತ್ತಾರೆ . ಇದರಿಂದ ಇದ್ದ ಹತ್ತಾರು ಹುಡುಗಿಯರ  ಸಂಪರ್ಕ ತಪ್ಪಿ ಹೋಗುತ್ತದೆ. ಆ ಹುಡುಗನಿಗೆ ಮುಂದೆ ಉಳಿಯೋ ಆಯ್ಕೆ ಈ ಮೋದಲು ಇದೇ  ತಂತ್ರಕ್ಕೆ ಬಲಿಯಾದ ಹತ್ತು ತಂಗಿಯರ ಜೊತೆ ಸೇರಿ ಹನ್ನೊಂದನೆ ಹುಡುಗಿಗೆ ಸ್ಕೇಚ್ ಹಾಕುವುದು
           ಇದೇನೆ ಇರಲಿ ಹುಡುಗಿಯರ ಬತ್ತಳಿಕೆಯಲ್ಲಿ ಇಂತದ್ದೆ ಅಸ್ತ್ರವಿರುತ್ತೆ ಅಂತ ಹೇಳೊಕ್ಕೆ ಅಗೋಲ್ಲ ಬಿಡಿ . ನಾನು ನನ್ನ ಕಾಲೇಜ್ ನಲ್ಲಿ ನೆಡದ ಘಟನೆಯನ್ನ ನಿಮಗೆ ಹೇಳುತ್ತೆನೆ. ನಾನು ನನ್ನ ಚಿಂದಿ ಚೋರ್ ಗೆಳೆಯರ ಜೋತೆ ಸೇರಿ ನಾಟಕ ಮಾಡಬೇಕೆಂದು ತಿರ್ಮಾನಿಸಿದೆವು . ನನ್ನನ್ನ ಆ ನಾಟಕದ ಸೋತ್ರದಾರಿಯನ್ನಾಗಿ ಮಾಡಿದರು. ಎಲ್ಲ ಪಾತ್ರಗಳಿಗೆ ಜನ ಸಿಕ್ಕರೋ ಹಿರೋಯಿನ್ ಅಪ್ಪನ ಪಾತ್ರ ಯಾರು ಮಾಡಲು ಸಿದ್ದವಿರಲಿಲ್ಲ  ಯಾರನ್ನ ಕೇಳಿದರೋ " ನೋಡು ಮಗಾ ನೀನ್ ಎನ್ ಬೇಕಾದ್ರು ಹೇಳು ಅದೋಂದು ಪಾತ್ರ ಮಾತ್ರ ಮಾಡೊಲ್ಲ " ಅಂತ ಖಾಡಾ ಖಂಡಿತವಾಗಿ ಹೇಳೊರು . ಕಡೆಗೆ ಹೀರೋಯಿನ್ ಅಪ್ಪನ ಪಾತ್ರ ನಾನೆ ಮಾಡಬೇಕಾಯಿತು . ಸರಿ ಅಂತ ನಾನೆ ಒಪ್ಪಿಕೊಂಡೆ. ಸರಿ ನಾಟಕದ ಪ್ರಾಕ್ಟೀಸ್ ಶುರುವಾಯಿತು ಹೀರೊಯಿನ್ ನನ್ನನ್ನ "ಡ್ಯಾಡಿ.. ಡ್ಯಾಡಿ "ಅಂತ ಕರೆಯುತ್ತಿದ್ದಳು ಇದನ್ನು ನೋಡಿ ಮಿಕ್ಕ ನನ್ನೆಲ್ಲ ಫ್ರೆಂಡ್ಸ್(ಹುಡುಗಿಯರು ಮಾತ್ರ ) ಡ್ಯಾಡಿ.. ಡ್ಯಾಡಿ.. ಅಂತ ಕರೆಯೊಕೆ ಶುರುಮಾಡಿದರು .ಇದೇನಪ್ಪಾ ಕರ್ಮ  ಗಣಪತಿಯನ್ನ ಮಾಡೊಕೆ ಹೋಗಿ ಅವರಪ್ಪನ್ನ ಮಾಡಿದ್ನಲ್ಲಾ..! ಅಂತ ಮನಸ್ಸಿನಲ್ಲೆ ಅಂದುಕೊಂಡು,  ಇರಲಿ ನಾಟಕ ಮುಗಿಯೋತನಕ ಅಲ್ವಾ ಅಂತ ಸಹಿಸಿಕೊಂಡೆ.
 ನಾಟಕ ಮುಗಿಯಿತು . ಒಳ್ಳೊಳ್ಳೆ ಪ್ರಶಂಸೆ ಗಳ ಸುರಿಮಾಳೆಯೇ ಬಂತು ಇಡೀ ಕಾಲೇಜ್ ನನ್ನ ಬಗ್ಗೆ ಮಾತಾಡೋಕೆ  ಶುರುಮಾಡಿದರು   ಮಾರನೆಯ ದಿನ ಕಾಲೇಜ್ ಕ್ಯಾಂಪಸ್ ಗೆ ಬರ್ತೀನಿ .....  ನನ್ನ ಪ್ರೆಂಡ್ಸ್ "ಏನ್ ಮಾಮ್ ನಾಟಕ ಪ್ರೈಜ್ ಹೊಡಿತಂತೆ " ಅನ್ನೋದೆ  ನಾನು ಕರೆಂಟ್ ಹೊಡದ ಕಾಗೆ ತರ ಆಗಿಹೋದೆ  ಶಿವ.. ಶಿವ . ಒಂದು ಕಡೆ ಈ ಹುಡುಗಿಯರು "ಡ್ಯಾಡಿ.. ಡ್ಯಾಡಿ" ಅನ್ನೋದು ಇನ್ನೊಂದು ಕಡೆ ಆ ಹುಡುಗಿಯರ ಎದುರಲ್ಲೆ ಹುಡುಗರು "ಮಾಮ್... ಮಾಮ್ " ಅನ್ನೊದು .... ಹಬ್ಬಾಬ್ಬ.. ನನಗೆ ಸಿಟ್ಟು ಬಂದು ಏಯ್ ಕೋತಿಗಳ ಮೂದಲು ನಿಮ್ಮ ಅತ್ತೆನಾ ಹುಡುಕಿಕೊಂಡು ಬನ್ನಿ . ಅಮೇಲೆ ಬೇಕಾದ್ರೆ ಮಾಮ್ ಅನ್ನಿ ಅಂದೆ . ಅವತ್ತೊ ಹೋದವರು ಇವತ್ತಿಗೊ ಬಂದಿಲ್ಲ....

SATISH N GOWDA 
satishgowdagowda@gmail.com

Thursday, July 1, 2010

ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.


ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.


ಎಲ್ಲಿ ನೋಡು ದೀಪ
ಎಲ್ಲಿ ನೋಡು ದೀಪದಿಂದ
ಅಲಂಕೃತಗೊಂಡ ಆ ದೇವರು
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.

ಎಲ್ಲಿ ನೋಡು ಹೂವು
ಎಲ್ಲಿ ನೋಡು ಹೂವಿನಿಂದ
ಅಲಂಕೃತಗೊಂಡ ಆ ದೇವರು
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.

ಎಲ್ಲಿ ನೋಡು ಜನರು
ಎಲ್ಲಿ ನೋಡು ಜನರಿಂದ
ಅಲಂಕೃತಗೊಂಡ ಆ ಬೋಗ ನಂದೀಶ್ವರ
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.

ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?



ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?

ನಿದ್ರೆಯಲ್ಲಿರುವವನ
ಕನಸನ್ನು ಸದ್ದಿಲ್ಲದೆ
ಕದಿಯುವ ನೀವು
ಎಷ್ಟು ಒಳ್ಳೆಯವರು...?

ಪ್ರೀತಿಸುವವನ
ಮನಸ್ಸನ್ನು ನೊಯಿಸದೇ
ಕದಿಯುವ ನೀವು
ಎಷ್ಟು ಒಳ್ಳೆಯವರು...?

ಕಷ್ಟ ಪಡುವವನ
ಆಸೆ ಯನ್ನು ಇಷ್ಟ ಪಟ್ಟು
ಕದಿಯುವ ನೀವು
ಎಷ್ಟು ಒಳ್ಳೆಯವರು...?

ನನ್ನ ಪ್ರೇಶ್ನೆಗೆ ಉತ್ತರಿಸಿ
ಓ  ಮುದ್ದು ಮುಖದ
ಹುಡುಗಿಯರೇ ನೀವು
ಎಷ್ಟು ಒಳ್ಳೆಯವರು...?

SATISH N GOWDA