Thursday, July 15, 2010

ಚಾಟಿಂಗ್ ನಲ್ಲಿ ಪರಿಚಯವಾದ ಗೆಳತಿಗೊಂದು .......

ಇದೊಂದು ಕೇವಲ ಕಲ್ಪನೆಯ ಬರವಣಿಗೆಯಷ್ಟೇ ..... ಬರೆಯಲು ಸ್ಪೂರ್ತಿ ನನ್ನ ಆರ್ಕುಟ್ ಗೆಳತಿ ಸಂಗೀತಾ ಈ ಆರ್ಟಿಕಲ್ ಅವಳ ನೆನಪಿನ ಬುಟ್ಟಿಯಲ್ಲಿ ಇರುವ ಅಸಂಖ್ಯಾ ಕನಸಿನ ನಕ್ಷತ್ರಗಳಲ್ಲಿ    ಒಂದು ಚಿಕ್ಕ ನಕ್ಷತ್ರಕ್ಕೆ ಬರವಣೆಗೆಯ ರೂಪ ಕೊಟ್ಟಿದ್ದೇನೆ .......  



ಚಾಟಿಂಗ್ ನಲ್ಲಿ ಪರಿಚಯವಾದ ಗೆಳತಿಗೊಂದು .......
           ಅರ್ಕುಟ್ ಅನ್ನೊ ಮಹಾ ಸಮುದ್ರದಲ್ಲಿ ಚಾಟ್ ಮಾಡಿ FRIND ಆದವರು  ಎಷ್ಟೊ ಜನರಿದ್ದಾರೆ . ಹಾಗೆ ಚಾಟ್ ಮಾಡಿ ಪ್ರೇಮಿಗಳಾದವರು ಬಹುಶಃನಾವೇ ಮೊದಲಿಗರು ಇರಬುದೆಂದು ನನ್ನ ಅನಿಸಿಕೆ.  ಹೇ ಗೆಳತಿ ನಮ್ಮದು ಯಾರೇ ನೀನು ಚಲುವೆ ಚಿತ್ರದ ಒಂದು ತುಣುಕು ಕೂಡ ಹೌದು ಅಲ್ವಾ..? ಈಗೀನ ಕಾಲದಲ್ಲಿ ಕಣ್ಣಿಂದ ನೋಡಿ, ಮನಸ್ಸಿನಿಂದ ಮಾತಾಡಿ, ಹೃದಯದಿಂದ ಪ್ರೇಮ ಲೇಖನ ಬರೆದು ಪಾರ್ಕು, ಸಿನಿಮಾ ಸುತ್ತಾಡಿ ಪ್ರೀತಿ ಮಾಡಿದರೂ ಆ ಪ್ರೀತಿ ಕೆಲಕಾಲ ಉಳಿಯುವುದೆ ಕಷ್ಟ . ಅದಕ್ಕಾಗಿಯೇ ನನ್ನ  ಪ್ರೀತಿಯನ್ನು ಹಂಚಿಕೊಳ್ಳಲು ಏನೂ ಕುತೂಹಲ,ಏನೂ ಅಂಬಲ, ಗೊತ್ತೇ .! ನನ್ನ ನಿನ್ನ ಮೊದಲ ಮಾತು ಕೇವಲ ಅರ್ಕುಟ್ ಚಾಟಿಂಗ್ ನಿಂದಲೆ ಶುರುವಾಯಿತು ಕಣ್ಣಿಂದ ನೋಡದಿದ್ದರೂ ಕನಸು ಕಟ್ಟುವ ಬೀಜ ಹೃದಯದಲ್ಲಿ ಮೊಳಯಿತು , ಮನಸ್ಸಿನಿಂದ ಮಾತಾಡದಿದ್ದರೂ ಚಾಟಿಂಗ ನಲ್ಲಿನ ಬರಹ ನಮ್ಮಿಬ್ಬರನ್ನ ಹತ್ತಿರಕ್ಕೆ ತಂದಿತ್ತು, ಪಾರ್ಕು, ಸಿನಿಮಾ ಸುತ್ತಾಡದಿದ್ದರೂ ಕನಸಿನ ಬೀಜ ಪ್ರೀತಿಯು ಹೆಮ್ಮರವಾಯಿತು .
ನಮ್ಮಿಬ್ಬರ ಪ್ರೀತಿಯನ್ನು  ಪ್ರೀತಿಯ ಗ್ರಂಥದಲ್ಲಿ ಮೊದಲ ಪುಟಗಳಲ್ಲಿ ಬರೆದಿಡಬೇಕಾದ ಸುವರ್ಣಾಕ್ಷರಗಳು. ಹಾಗೆ ನಮ್ಮಿಬ್ಬರ ಬೇಟಿ ಒಮ್ಮೆ ನೆನೆದು ನೋಡು ನಾನು ನೀನು ಮೀಟ್ ಅಗ್ತಿವೆ ಅಂತ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಅಂದಿನ ದಿನ. ಅವತ್ತು ನಾನು ನನ್ನ ಗೆಳೆಯನ ಜೊತೆ COFFI DAY  ಗೆ ಬಂದಿದ್ದೆ , ನೀನು ನಿನ್ನ ಗೆಳತಿಯೊಂದಿಗೆ ಅದೇ COFFI DAY  ಗೆ ಬಂದಿದ್ದಿಯ. ಅದರೂ ನಾನೆ ನಿನ್ನ ಪ್ರೀತಿಯ ದಾಸ ಅಂತ ನಿನಗೂ ತಿಳಿದಿರಲಿಲ್ಲ, ನನಗೂ ಕೂಡ ಇವಳೆ ನನ್ನಪ್ರೀತಿಯ ಪಟ್ಟದರಸಿ ಅಂತ ತಿಳಿದಿರಲಿಲ್ಲ . ನಿಜವಾಗಲೂ ಅಂದಿನ ದಿನ ಆಶ್ಚರ್ಯವೇ ನೀನು ನನ್ನನ್ನು ಮಾತಾನಡಿಸಲಿಲ್ಲ , ನಾನು ನಿನ್ನನ್ನು ಮಾತಾನಾಡಿಸುವ ದೈರ್ಯ ಮಾಡಲಿಲ್ಲ. ನಿನ್ನನ್ನು ನಿನ್ನ ಬಾಲ್ಯದ ಗೆಳತಿ ನನಗೆ ನಿನ್ನ ಪರಿಚಯಮಾಡಿಕೊಟ್ಟಗಲೂ ನೀನು ಹಾಯ್ ಅನ್ನುವ ಮಾತನ್ನು ಬಿಟ್ಟರೆ ಬೇರೆನೂ ಮಾತಾಡಲಿಲ್ಲ . ಆ ನಿನ್ನ ಅವತ್ತಿನ ನೆಡೆವಳೆಕೆಯನ್ನು ನೋಡಿ ಅವಳೇ ಇವಳಾಗಬಾರದೇ ಎಂದು ದೇವರಲ್ಲಿ ಪ್ರಾರ್ಥಿಸಿದ್ದು ಉಂಟು ಗೋತ್ತಾ.? ನಾನು ನಿನ್ನ ಕೈ ಹಿಡಿದು ಪರಿಚಯಿಸಿಕೊಳ್ಳುವಾಗ ಇಡೀ ಪ್ರಕೃತಿಯೇ ನಮ್ಮಿಬ್ಬರನ್ನ ಹರಸಿದ್ದವು..! ಧೋ ಎಂದು ಸುರಿಯುತ್ತಿದ್ದ ಮಳೆ ಸೋನೆಯಾಗಿ ಜಿನುಗುತ್ತಿತ್ತಿ ( ಮದುವೆ ಮನೆಯಲ್ಲಿ ಚಲ್ಲುವ ಅಕ್ಷತೆಯ ಹಾಗೆ ) ಮುಂದಿನ ಟೇಬಲ್ ನಲ್ಲಿ ಬಿಸಿ ಬಿಸಿ Coffi ಕುದಿಯುತ್ತಿತ್ತು (ತಾಳಿ ಕಟ್ಟುವ ಶುಭ ವೇಳೆಯಲ್ಲಿ ಮುಂದಿರುವ ಹೋಮದ ಹಾಗೆ ) ಅ ದಿನ Coffi Shop  ನಲ್ಲಿದ್ದ ಜನಗಳನ್ನು ನೊಡಿದೆಯ (ನಮ್ಮ ಮದುವೆಗೆ ಬಂದಿರುವ ಬಂದು ಮಿತ್ರರಹಾಗೆ ) ನಮ್ಮನ್ನೆ ಗುರುಗುಟ್ಟಿಕೊಂಡು ನೋಡುತ್ತಿದ್ದರು. ಹೋಗಲಿ ಸುತ್ತ ಮುತ್ತ ಆ ಶಬ್ದ ಕೇಳಿದೆಯ (ಮದುವೆಯಲ್ಲಿ ನುಡಿಸುವ ಮಂಗಳವಾದ್ಯಗಳ ಹಾಗೇ ) ಇದೆಲ್ಲದರ ಮದ್ಯ ನೀನು ಮಾತ್ರ ಮೌನ(ಮದುವೆ ಮಂಟಪದಡಿಯ ಹಸೆಮಣೆಯಲ್ಲಿ ಕುಳಿತ ನನ್ನ ಹೃದಯ ರಾಜಕುಮಾರಿಯಂತೆ ) ವಾಗಿ ಏನೂ ನನಗೆ ಗೊತ್ತಿಲ್ಲದವಳ ಹಾಗೆ ಕುಳಿತು ಎಲ್ಲವನ್ನು ನಿನ್ನ ಕಣ್ಣಿನ ಕ್ಯಾಮರದಲ್ಲಿ ಸೆರೆಹಿಡಿಯುತ್ತಿದ್ದೆ..ನನ್ನ ಮನಸ್ಸಿಗೆ ಅವತ್ತು ಯಾಕೊ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತಾನಾಡುವ ಅಸೆ.
             ಆ ದಿನ ನಿನ್ನ Gmail id ಕೊಡಿಸುವಂತೆ ನನ್ನ ಗೆಳೆಯನಿಗೆ ಪರಿಯಾಗಿ ಕೇಳಿದೆ ಪ್ರಯೋಜನವಾಗಲಿಲ್ಲ ನೀನ್ನ ಗೆಳತಿಗೂ ಕೇಳಿದೆ ಅವಳಿಗೆ ನೀನು ಒಂದೆ ಮಾತಿನಲ್ಲಿ ಉತ್ತರ ಕೊಟ್ಟಿದ್ದೆ . ನಾನು ಯಾರಿಗೂ ID ಕೂಡೊಲ್ಲ ಯಾರ Frindship ನನಗೆ ಬೇಕಿಲ್ಲ ಎಂದು ನೆನೆಪಿದೆಯ ಗೆಳತಿ . ಅದರೂ ನಿನ್ನ ಬಿಟ್ಟು ಬಿಡಲಾರದೆ ನಿನ್ನ ID ಹೇಗೂ ಸಂಪಾದಿಸಮೇಲೆನೆ ನೀನ ನನ್ನ ಪ್ರೀತಿಯ ಪಟ್ಟದರಸಿ ಎಂದು ಗೋತ್ತಾಗಿದ್ದು  . ಗೊತ್ತಾದ ತಕ್ಷಣ ನಿನಗೆ ಹೇಳಿದರೆ ನೀನು ನನ್ನ ತಬ್ಬಿ ಕೊಂಡಿದ್ದೆ . ನಿನ್ನ ಗೆಳತಿ ನಿನಗೆ ಕೇಳಿದರೆ ಏನೇ ಬರೀ Gmail ID ಕೊಡು ಅಂದ್ರೆ ಕೊಡಲಿಲ್ಲ, ಅವರಿಗೆ ಇವಗೇನು ಅವರನ್ನೆ ತಬ್ಬಿಕೊಂಡಿದ್ದಿಯ ಅಂತ ಕೇಳಿದ್ದಕ್ಕೆ..!  ಎನೇಂದೆ ನೆನಪಿಸಿಕೊ. ಹೇ ಹೊಗೇಲೇ ನಮ್ಮಬ್ಬರದ್ದು ಜನ್ಮ-ಜನ್ಮದ ಅನುಬಂದ ಅಂತ ಹೇಳಿದ್ದೆ. ಆ ಕ್ಷಣ ನನಗೆ ಎಲ್ಲಿಲ್ಲದ  ಸಂತೋಷ ನನಗೇ ಅಂತ ಅಲ್ಲ ನೀನು ಕೂಡ ಸಂತೋಷದ ಸಾಮ್ರಜ್ಯದಲ್ಲಿ ನನ್ನನ್ನು ಬಿಟ್ಟರೇ ಯಾರು ಇಲ್ಲ ಎಂದು ಬಿಗುತ್ತಿದ್ದೆ .. ಅವತ್ತಿನ ದಿನ ನಿನ್ನ ಮುದ್ದಾದ ಮೂತಿ ಎಷ್ಟು ಚಂದ ಎನ್ನುತ್ತಿಯ ನಿನ್ನನ್ನು ವರ್ಣಿಸಲು ಪದಗಳೇ ಇಲ್ಲ ಬಿಡು . ನಿನ್ನನ್ನು ನೋಡಲು Coffi Shop  ಮುಂದಿರುವ  ಪಾರ್ಕ್ ನಲ್ಲಿ ನಾನೊಬ್ಬನೆ ಬಂದಿರುವೆ ಎಂದು ತಿಳಿದುಕೊಂಡಿದ್ದೆ, ಅದರೇ ಅದು ನನ್ನ ಹುಚ್ಚು ಕಲ್ಪನೆ ಎಂದು ಅಲ್ಲೆ ಗೊತ್ತಾಯಿತು.. ಹೇಗೆ ಎಂದು ಕೇಳುತ್ತಿಯ...! ರಾತ್ರಿ ಕಾಣುವ ಚಂದ್ರ ನಿನ್ನ ಮುದ್ದು ಮುಖವ ನೋಡಲು ಸೂರ್ಯನೆ ಬೆಳಕಿನ ಮರೆಯಲ್ಲಿ ನಿಂತಿದ್ದ , ತಂಪಾದ ಗಾಳಿಯ ಮರೆಯಲ್ಲಿ ಕೆಂಗಣ್ಣಿನ ಸೂರ್ಯ ನಿನ್ನ ಮುದ್ದು ಮುಖವನ್ನು ಕದ್ದು-ಕದ್ದು ನೊಡುತಿದ್ದ , ಗಾಳಿಯೂ ಕೂಡ ನಾನೆನು ಕಮ್ಮಿಯಿಲ್ಲ ಎಂಬಂತೆ ಮಿಂಚಿಮಾಯವಾಗುತಿತ್ತು. ಅವುಗಳಿಗೆಲ್ಲ ಹೇಳಿದ್ದೇನೆ ಇವಳು ನನ್ನ ಮನದೊಡತಿ ಇವಳ ಮೇಲೇನಾದರು ನಿಮ್ಮ ಕಣ್ಣು ಬಿದ್ದರೆ ಒಬ್ಬೊಬ್ಬರಿಗೆ ಕೈ-ಕಾಲು ಮುರಿಯುತ್ತೆನೆ ಎಂದು ವಾರ್ನ್ ಮಾಡಿ ಬಂದಿದ್ದೆನೆ..
               ಹೇ ಹುಡುಗಿ ಇಷ್ಟೆಲ್ಲ ಪ್ರೀತಿ ಇದ್ದರೂ I LOVE U ಅಂತ ಹೇಳೊ ದೈರ್ಯ ಬರಲಿಲ್ಲ . ದೈರ್ಯ ಇಲ್ಲವಂತಲ್ಲ ನಾಚಿಕೆಯೂ ಅಲ್ಲ ಈ ಪಿಸುಮಾತನ್ನು ಮೊಬೈಲ್ ನಲ್ಲೆ ಹೇಳಿಬಿಡೊಣ ಎಂದು ಕೊಂಡೆ ಅದರೂ  ಅಂತ ಸಮಯ ಇನ್ನೂ ನಮ್ಮಿಬ್ಬರ ಮದ್ಯ ಬರಲಿಲ್ಲ . ಅದರೂ ನಾವಿಬ್ಬರು ಪ್ರೇಮಿಗಳು ಎಂದ ಮೇಲೆ ಆ ಮೊದಲ ಮಾತು ಹೇಳಲು ನಾಲಿಗೆ ಇಷ್ಟೊಂದು ತೊದಲುತ್ತಿದೆಯೇಕೆ . ಅಂದಿನಿಂದ ನಾವಿಬ್ಬರು ಪ್ರತಿಯೋಂದು ವಿಷಯವನ್ನೂ ಮೊಬೈಲ್ ನಲ್ಲೆ ಹಂಚಿಕೊಳ್ಳುತ್ತಿದ್ದೆವೆ. ನಮ್ಮಿಬ್ಬರಿಗೂ ಪ್ರಕ್ರಿತಿ ಸಾಕ್ಷಿಯಾಗಿ ಎಂದೋ ಮದುವೆಯಾಗಿ ಹೋಗಿದೆ ಇವಾಗ ಆ ಪದದ ಅವಶ್ಯಕಥೆಯೂ ಬೇಡ ಅಲ್ಲವೇ.. ನೀನು ಪರಿಚವಾದ ದಿನದಿಂದ ನಿನ್ನ ಜೊತೆ ಮಾತಾಡದಿದ್ದರೆ ಏನೋ ಕಳೆಕೊಂಡವನ ರೀತಿ ಹುಡುಕುತ್ತಿರುತ್ತೆನೆ ಜೀವನದೂದ್ದಕ್ಕು ಬರೀ ಕನಸುಗಳನ್ನು ಕಟ್ಟಿಕೊಂಡುಬಂದ ನನಗೆ ನಿನ್ನನ್ನು ಬಿಟ್ಟರೇ ಯಾರು ಈ ಕುರುಡು ಪ್ರಪಂಚದಲ್ಲಿ ಗೊತ್ತಿಲ್ಲ. ಈ ಪ್ರೀತಿನೆ ಹಾಗೆ ಯಾವಗ ಹುಟ್ಟೊತ್ತೊ ಗೊತ್ತಿಲ್ಲ. ಅದು ಹುಟ್ಟುವಾಗ ಮನಸ್ಸಿನಲ್ಲಿ ಎನೋ ತವಕ ನಿರೀಕ್ಷೆಗೂ ಮೀರಿ ಸಂತಸ. ಅದರೆ ಈ ನಡುವೆ  ನಿನ್ನ ಪ್ರೀತಿಯನ್ನು ಕಳೆದುಕೊಳ್ಳುವ ಭಯ ಶುರುವಾಗಿದೆ ನಿನ್ನ ಒಂದು ಕ್ಷಣದ ಅಗಲಿಕೆಯನ್ನು ಕಲ್ಪಿಸಿಕೊಂಡರೆ ಮನಸ್ಸು ಚಿದ್ರ-ಚಿದ್ರವಾಗುತ್ತದೆ.. ಹೇ ಗೆಳತಿ ನೀನು ನನ್ನ ಜೀವನದ ಕೋನೆ ನಿಮಿಷ... ಸಾರಿ..ಸಾರಿ ಕೊನೆ ಕ್ಷಣದವರೆಗೂ ನನ್ನ ಜೊತೆಯಲ್ಲಿರುತ್ತಿಯಲ್ಲ...?

ನಿನ್ನ ಪ್ರೀತಿಯ ಕಾಯಕ ...
SATISH N GOWDA
satishgowdagowda@gmail.com