Sunday, October 31, 2010

ನಿನ್ನಯ ನೆನಪು...

 (ಚಿತ್ರ ಕೃಪೆ ಗೂಗೆಲ್ )
ನಿನ್ನಯ ನೆನಪು...
ಮರೆತಿಲ್ಲ ನಾ ನಿನ್ನನ್ನು
ಮರೆಯಲು ಸಾಧ್ಯವಿಲ್ಲ ನಿನ್ನಯ ನೆನಪನ್ನು
ನಿನ್ನ ನೆನಪೊಂದೆ ನನ್ನ ಜೀವ
ಹೇಗೆ ಮರಯಲಿ ಗೆಳತಿ ನಾ ನಿನ್ನನ್ನ..?

ಹತ್ತಿರದಲ್ಲಿ ನೀನಿಲ್ಲ
ನಿನ್ನಯ ನೆನಪು ನನ್ನದೆಯಲ್ಲಿ ಮಾಸಿಲ್ಲ
ಮರೆತರೂ ಮರೆಯಲಾಗದ ನೆನಪು ನೀ ಕೊಟ್ಟ ಪ್ರೀತಿ
ಹೇಗೆ ಮರೆಯಲಿ ಹೇಳು ನೀ ಕೊಟ್ಟ ಪ್ರೀತಿಯ ಬಳ್ಳಿಯನ್ನ..?

ಅಳಿಸಲು ಮನಸಿಲ್ಲ ನಿನ್ನ ನೆನೆಪನ್ನ
ಉಳಿಸಲು ನೀನಿಲ್ಲ ನೆನಪಿನ ಸಾಲನ್ನ
ತೊದಲುತ್ತಿರುವ ಯುವ ಪ್ರೀತಿ ನಂದು
ಹೇಳು ಗೆಳತಿ ನಾ ಹೇಗೆ ಮರೆಯಲಿ ನಿನ್ನನ್ನ..?

ನೀ ಕೊಟ್ಟ ಪ್ರೀತಿಯ ನೆನಪಿನ ದೀಪದಿಂದ
ಜಗತ್ತನ್ನೇ ಬೆಳಗಿಸಲು ಹೊರಟಿರುವ ಹುಚ್ಚು ಮನಸ್ಸು ನಂದು
ಹುರಿದುಂಬಿಸಲು ನೀನಿಲ್ಲ, ಹಿಂತಿರುಗಲು ಮನಸಿಲ್ಲ
ಹೇಳು ಗೆಳತಿ ಮುಂದೇನು ಮಾಡಲಿ..?

ಕಣ್ಣ ಬಿಟ್ಟರೆ ನೀ ಕಾಣಲ್ಲ
ಕಣ್ಣು ಮುಚ್ಚಿದರೆ ನಿನೇ ಎಲ್ಲಾ
ನಿನ್ನ ನೆನಪಿನ ವೇದನೆ ಪಾತಳಕ್ಕಿಂತ ಆಳ
ಅನುಭವಿಸುವ ನನಗೇ ಗೊತ್ತು ಅದರ ಯಾತನೆ
ಹೇಗೆ ಮರೆಯಲಿ ಹೇಳು ಗೆಳತಿ ನಾ ನಿನ್ನನ್ನ..?


ನಿನ್ನಯ ನೆನಪು...
SATISH N GOWDA 

Friday, October 29, 2010

ದೇವರವ್ನೆ ನೀ ನೈಂಟಿ ಹೊಡಿ


ದೇವರವ್ನೆ ನೀ ನೈಂಟಿ ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಒಳ್ಳೆ ಕಾರ್ಡು ಬಿತ್ತು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ತು ಅಂದ್ರೆ, ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ ಕಳ್ನನನ್ಮಗಂದು
ನಾವಾಡಬೇಕು ದೇವರನ್ನೇ ನೆಚ್ಚಿಕೊಂಡು

ಒಂದೇ ಆಟ ಒಂದೇ ಆಟ ಎಂದುಕೊಂಡು ಎಂಡಿನಲ್ಲಿ
ಸೇರಬೇಕು ಸಾಲ ಎಂಬ ಸುಡುಗಾಡು
ನಾವ್ ನಮ್ಮ ಹೆಣ ನಾವುಗಳೇ ಹೊತ್ತುಕೊಂಡು

ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ಸಾಯಬೇಡ ಅಷ್ಟು ಬೇಗ
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ದೇವರವ್ನೆ ನೀ ನೈಂಟಿ ಹೊಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಯಾವ್ದು ಇಲ್ಲಿ ಅಂದರ್ ಆಯ್ತು
ಯಾವ್ದು ಇಲ್ಲಿ ಬಾಹರ್ ಆಯ್ತು
ಯಾವ್ದು ಇಲ್ಲಿ ಅಂದರ್ ಆಯ್ತು, ಯಾವ್ದು ಇಲ್ಲಿ ಬಾಹರ್ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವು ಗ್ಯಾಪು ಕೊಡದೆ ಆಡಬೇಕು ಮುಚ್ಚಿಕೊಂಡು

ಸಿಂಪಲ್ ಮಂದಿ ನಾವ್ ಶೋಕಿಗಂತ ಆಡುತೀವಿ
ಹೆದ್ರೋಲ್ಲ ಮನೆ-ಮಠ ಮಾರಿಕೊಂಡ್ರು
ಪಾಪ ಪಾಂಡವರೇ ಹೆಂಡ್ತೀನ ಕಳಕೊಂಡ್ರು

ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ
ಸಾಲ, ಜಾಸ್ತಿ ಆದ್ರೆ ಆಗ್ಲಿ ಬಿಡಿ
ದೇವರವ್ನೆ ಮನೆ ಮಾರಿ ಬಿಡಿ

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ

ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ

SATISH N GOWDA 

Wednesday, October 20, 2010

ನೀ ನನ್ನ ಪ್ರೀತಿಯ ದೇವತೆ ಕಣೇ....

ನೀ ನನ್ನ ಪ್ರೀತಿಯ ದೇವತೆ ಕಣೇ...

        ಓದುವ ಮುನ್ನ.....
ಇದು ಕೇವಲ ಕಾಲ್ಪನಿಕ ಬರವಣಿಗೆ  
ಯಾರ ಜಿವನಕ್ಕೋ ಸಂಬಂದ ಪಟ್ಟಿರುವುದಿಲ್ಲ
ಇದುನ್ನು ಕೇಳುವ ಹಕ್ಕು ಯಾವುದೇ ಹುಡುಗಿಗಾಗಲಿ 
ಅಥವಾ  ಯಾವುದೇ ಮಹಿಳೆಗಾಗಲಿ    ಇರುವುದಿಲ್ಲ  ..
(ಚಿತ್ರಗಳು ಅಂತರ್ಜಾಲದಿಂದ  ಆಯ್ದುಕೊಳ್ಳಲಾಗಿದೆ ) 
                 ಹಾಯ್ ಸುಷಿ.. ( ನಾ ನನ್ನ ದೇವತೆಗೆ ಇಟ್ಟ ಪ್ರೀತಿಯ ಹೇಸರು) ನಮ್ಮಿಬ್ಬರ ಮಾತಿನ ಒಪ್ಪಂದದ ನಂತರ ನಾನಂತು ನಿನ್ನನ್ನ ನೆನಸಿಕೊಳ್ಳುವುದನ್ನ ಬಿಟ್ಟಿದ್ದಿನಿ ಕಣೇ ಆದರೋ ನಿನ್ನ ನೆನಪು ದುಮಿಕ್ಕುವ ಜಾಲಧಾರೆಯಂತೆ ಕಾಡುತ್ತಿರುತ್ತದೆ ನೆನ್ನೆ ನನ್ನ ಕನಸಲ್ಲಿ ಬಂದುಕಾಡಿದ ನಿನ್ನಯ ನೆನಪು ಅವಿಸ್ಮರಣಿಯ... ಈ ಪ್ರಪಂಚದ ಪರಿವೆ ಇಲ್ಲದೆ ರಾತ್ರಿ ತಿಂದುಂಡು ಮಲಗಿದ್ದೆ, ನಿನ್ನಯ ನೆನೆಪಿನ ಕನಸು ನನ್ನನ್ನು ಒಮ್ಮೆ ಬೆಚ್ಚಿಬಿಳಿಸುವಂತೆ ಮಾಡಿತ್ತು.
ನಿನ್ನೆಯ ಕನಸು ಬಂದ ಬಗೆ...
ಈಡೀ ಕಗ್ಗತ್ತೆಲೆಯನ್ನು ಸೂರ್ಯ
ಒಮ್ಮೆಲೆ ನುಂಗಿದ ಹಾಗೆ...
ಅಯಾಗಿ ಮಲಗಿದ್ದವನ ಕನಸಲ್ಲಿ
ಭೂಮಿ ಪ್ರಳಯವಾದ ಹಾಗೆ....
ಒಂದು ದೈತ್ಯ ಕಲ್ಲು ಬಂಡೆ
ತಂತಾನೆ ಬಂದು ಎದೆಗೆ ಅಪ್ಪಳಿಸಿದ ಹಾಗೆ...
ಇದ್ದಕ್ಕಿದ್ದಂತೆ ಈ ಭೂಮಿ
ಪಾತಳಕ್ಕೆ ಕುಸಿದು ಬಿದ್ದ ಹಾಗೆ....
ಮರುಭೂಮಿಯಲ್ಲಿ ಬಿಸುವ
ಬಿರುಗಾಳಿಯ ಹಾಗೆ....

           ನಿಜ ಅಲ್ವೆನೆ ಸುಷಿ... ಕಾಲ ಎಷ್ಟೊಂದು ಕ್ರೂರಿ ಅಲ್ವಾ..? ಪ್ರೀತ್ಸೊ ಹೃದಯಗಳನ್ನ ಹುಡುಕಿ... ಹುಡುಕಿ.. ಕೊಲ್ಲೊದೆ ಈ ಕಾಲದ ನಿಯಮ ಅಂತ ನನಗನಿಸುತ್ತೆ.. ಕಣೇ. ನಿನ್ನಯ ನೆನುಪುಗಳು ನನ್ನೆದೆಯಲ್ಲಿ ಇನ್ನು ಮಾಸಿಲ್ಲ ಕಣೇ ಹುಡುಗಿ ಹಿಮಾಲಯ ಬೆಟ್ಟದಿಂದ ಜಿನುಗುವ ಮಂಜಿನಹನಿಯ ಹಾಗೆ ಈ ಪ್ರಾಣ ಇರೊವರೆಗೊ ಜಿನುಗುತ್ತಲೇ ಇರುತ್ತದೆ . ನೀನು ಹೇಳಿದ ಒಂದು ಚಿಕ್ಕ ಪದ (ನನ್ನನ್ನು ಮರೆತು ಬಿಡು ಸತೀಶ) ನನ್ನೆಲ್ಲ ಕನಸುಗಳನ್ನ ಸುಡುವ ಕಾಳ್ಗಿಚ್ಚಿನಂತೆ ಹಬ್ಬುತ್ತದೆ ಎಂದು ನಾನು ಬಾವಿಸಿರಲಿಲ್ಲ ನಾ ನಿನ್ನ ಮರೆಯೋದ...?
ಅದು ಸಾದ್ಯವಿಲ್ಲದ ಮಾತು.
ಯಾಕೆ ಗೊತ್ತಾ....?
ಲೇ ದಡ್ಡಿ
ಭೊಮಿ ಆಕಾಶ ಎಲ್ಲದರೂ ಒಂದಾಗುತ್ತಾ...?
ಸೂರ್ಯ- ಚಂದ್ರ ಎಲ್ಲದರೂ ಸೇರುತ್ತಾರ...?
ಸಮುದ್ರ ಯಾವಗಲಾದ್ರು ಬರಿದಾಗುತ್ತಾ...?

               ನಾ ಹೇಳಿದ ಇವಿಷ್ಟರಲ್ಲಿ ಯಾವದಕ್ಕಾದರು ಹೌದು ಅಂತ ಉತ್ತರ ಕೊಡು ಸಾಕು ಆ ಕ್ಷಣದಲ್ಲೆ ನಾ ನಿನ್ನನ್ನ ಮರೆಯುವ ಪ್ರಯತ್ನ ಮಾಡುತ್ತೆನೆ ....! ಅಗೊಲ್ಲ ಅಲ್ವ....! ಹಾಗೆ ನಾನು ನಿನ್ನ ಮರೆಯೊಕೆ ಅಗೊಲ್ಲ ಕಣೇ ಹುಡುಗಿ ನೀ ನನ್ನ ಜೀವ ಕಣೇ.  ಬೇಕಾದರೇ ಪ್ರಾಣ ಬಿಡು ಅಂತ ಹೇಳು ಬಿಟ್ಟುಬಿಡುತ್ತೆನೆ ನನ್ನನ್ನ ಮರೆತುಬಿಡು ಅಂತ ಮಾತ್ರ ಹೇಳಬೇಡ ಕಣೇ ಸುಷಿ ...
ನಿನ್ನನ್ನ ನಾ ಮರೆಯಲು ಕಾರಣಗಳಿಲ್ಲ . ನಿನ್ನ ನೆನಪುಗಳು ನನ್ನಲ್ಲಿ ಸವೆಯುದೂ ಇಲ್ಲ .
ನೆನಪಾದೆ ಇಂದು ನೀನು ... ಹಾಗೆ ಸುಮ್ಮನೆ...
ಹೇ ಗೆಳತಿ
ಅಂದು ನೀ ಕೊಟ್ಟ
ಪ್ರೀತಿಯ ಸಿಹಿ ಮುತ್ತುಗಳನ್ನ
ಮರಯಲಾದೀತೆ ಇಂದು..?

ಹೇ ಗೆಳತಿ
ಅಂದು ನೀನಾಡಿದ
ಪಿಸುಮಾತಿನ
ಕಲರವವನ್ನ
ಮರಯಲಾದೀತೆ ಇಂದು..?

                ಹೇ ಸುಷಿ ನನ್ನ  ನೆನಪಿನ ಚೀಲದಲ್ಲಿ ಹೇಳಲಾಗದ ಕವಿತೆಗಳ ಸರಮಾಲೆ. ಗೀಚಿಬರೆದರೂ ಮಗಿಯದ ಪ್ರೇಮದ ಸಂದೇಶಗಳನ್ನ  ಅವಿತಿಟ್ಟುಕೊಂಡಿದ್ದೆನೆ  ಹೇ ಹುಡುಗಿ "ನೀ ನನ್ನ ಪ್ರೀತಿಯ ದೇವತೆ" ಕಣೇ ಈ ಭಕ್ತನ ಕೂಗು ನಿನಗೆ ಕೇಳಿಸದಿದ್ದರೆ ನಾನು ಹುಟ್ಟಿದ್ದೆ ದಂಡ....  "ಕೂಗಿ.. ಕೂಗಿ ಕರೆದರೂ ನಾನು ಕೇಳಲಿಲ್ಲವೇ ಒಮ್ಮೆ ಬಂದು ಹೋಗೆ ನೀನು ಕರುಣೆ ಇಲ್ಲವೇ.."
ನೀನಿಲ್ಲದ ನಾನು.......
ನಾನಾಡುವ ಈ ಮಾತು ವ್ಯರ್ಥ.
ಉಸಿರಾಡುವ ಗಾಳಿ ವ್ಯರ್ಥ.
ನಾ ನೋಡುವ ಕಣ್ಣು ವ್ಯರ್ಥ.
ನಾ ಹುಟ್ಟಿದ ಈ ಜನ್ಮ ವ್ಯರ್ಥ.
         ಇನ್ನೊಮ್ಮೆ, ಮತ್ತೊಮ್ಮೆ , ಮಗದೊಮ್ಮೆ ಯೋಚನೆ ಮಾಡು ಸುಷಿ ನಾ ನಿನ್ನ  ಮೇಲಿಟ್ಟ ಪ್ರೀತಿ ಯಾವ ಮಜ್ನುಗೂ ಕಡಿಮೇನಿಲ್ಲ ಈ ಜನ್ಮ ಪೂರ್ತಿ ನಿನ್ನ ಪ್ರೀತಿನ ಕಾಯುವ ದಾಸ ನಾನು.  ನಿನ್ನ ಪ್ರೀತಿ ಪಡೆಯಲೇಂದೆ  ಆ ಬ್ರಹ್ಮನಲ್ಲಿ ವರ ಪಡೆದು ಹುಟ್ಟಿದ ಕೂಸೆ ನಾನು  .  ಪಡೆಯದೆ ಹೊದರೆ ನಿನ್ನ ಪ್ರೀತಿ ನನ್ನಂತ ಪಾಪಿ ಇನ್ನೊಬ್ಬನಿಲ್ಲ ನನಗೇಂದೆ ಇನ್ನೊಂದು ಜನ್ಮವಿದ್ದರೆ ಅದು ಕೂಡ ನಿನ್ನ ಪ್ರೀತಿಗೆ ಮುಡಿಪು.....

ನಿನ್ನ ಪ್ರೀತಿಯ ಕಾಯಕ
SATISH N GOWDA

ಅವಳ ಬಗ್ಗೆ ಇಣುಕು ನೋಟ 
ನೆಚ್ಚಿನ  ಗೆಳತಿಗೆ  ಮೊದಲ  ಪ್ರೀತಿಯ ಪತ್ರ .....
http://nannavalaloka.blogspot.com/2009/12/hi-sushma.html
"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "
http://nannavalaloka.blogspot.com/2010/02/blog-post_11.html 

Sunday, October 17, 2010

ಮೋಹಕ ಕಂಗಳ ಚಲುವೆಗೆ ...
ಮೋಹಕ ಕಂಗಳ ಚಲುವೆಗೆ ...           ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ ನಿಂತಿಲ್ಲ ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ. ಆ ಮಳೆ ಬಂದ ರಬಸದಷ್ಟೇ ಕಾಡಾಲಾರಾ0ಬಿಸಿತ್ತು  ನಿನ್ನಯ ನೆನೆಪು ಹೇ ಹುಡುಗಿ ಈ ಮಳೆಗೂ ನಿನ್ನ ನನ್ನ ಪ್ರೀತಿಗೂ ಏನೋ ಒಂತರ ಅನುಬಂಧ ,ನಂಟು ನಮ್ಮಿಬ್ಬರ ಪ್ರೀತಿ ಚಿಗುರಿದ ದಿನವನ್ನು ನೆನೆದು ನೋಡು ...! ಅಂದು ನಾವಿದ್ದದ್ದು ನಿಮ್ಮೂರಿನ ಆ ಮಲೆನಾಡ ಗುಡ್ಡದ ಮೇಲೆ ನನ್ನ ಪ್ರೀತಿಯ ಕರೆಗೆ ಒಗುಟ್ಟು  ನಿನ್ನೆಲ್ಲ ಕೆಲಸಗಳನ್ನು ಬಿಟ್ಟು .ಅಂದು ಮಧುರ ಭಾಂದವ್ಯ ದೊಂದಿಗೆ ನನ್ನ ನಿನ್ನ ಪ್ರೀತಿಗೆ ಅಂಕಿತ ಹಾಡಿದ್ದೆ ನೆನಪಿದೆಯ ..? ಹುಡುಗಿ ಹಾಗೇ ನೀನು ನನಗೆ    I LOVE U 2  ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ನಮ್ಮಿಬ್ಬರ ಪ್ರೀತಿಗೆ ಹನಿಯ ಸಿಂಚನ ಮಾಡಿದ್ದ . ನನ್ನ ಪ್ರೀತಿಯ ಗುಬ್ಬಚಿ ಮರಿ ಒದ್ದೆಯಗದಿರಲೆಂದು ಎದೆಯತೋಳಲ್ಲಿ  ನಿನ್ನನ್ನು ಸೇರಿಸಿದ್ದೆ . ಮೊದಲಿನಿಂದಲೂ ಅಷ್ಟೇ ಮಳೆ ಬಂತೆಂದರೆ ಸಾಕು ನನ್ನೆಲ್ಲಾ ನೆನಪುಗಳ ಹಕ್ಕಿಗೆ ರೆಕ್ಕೆ ಬಿಚ್ಚಿ ಹಾರೋ ಸಮಯ ಶುರುವಾಯಿತೆಂದೇ   ಅರ್ಥ ಇದು ನೆನ್ನೆ ಮೊನ್ನೆಯದಲ್ಲ ಸರಿ ಸುಮಾರು ನನ್ನ ಬಾಲ್ಯದಿಂದಲೂ ಕೋಡ  ಅದು ನಿನಗೂ ಗೊತಿಲ್ಲದ ವಿಷಯವೇನಲ್ಲ ಬಿಡು .ಆದರೆ ಅಂತಹ ಎಷ್ಟೋ  ಮಳೆಯದಿನಗಳು ನಮ್ಮಿಬ್ಬರನ್ನ ಭಾವುಕರನ್ನಗಿಸಿವೆ ಅಲ್ಲವೇನೆ ಪಾಪು ...!
             ಕಳೆದ ವಾರ ನಾನು ನನ್ನ ಸ್ನೇಹಿತರ ಜೊತೆಗೊಡಿ  ನಿಮ್ಮೂರಿನ ಕೆಲ ಪ್ರವಾಸಿ ತಾಣಗಳನ್ನು ಸುತ್ತಾಡಿ ಕೊನೆಗೊಮ್ಮೆ  ಆಕಸ್ಮಿಕವಾಗಿ ನಾವು ಪ್ರತಿ ಬೇಟೆಯಲ್ಲೂ  ಕುಳಿತು ಕೊಳ್ಳೋ ಜಾಗದಲ್ಲಿ   ಹೋಗಿ ಕುಳಿತೆ . ಆಕಸ್ಮಿಕವೋ ಅಥವಾ ಅದೃಷ್ಟವೋ ಎಂಬಂತೆ ವರುಣರಾಯ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದ .ಆಗ ಕಾಡಿತ್ತು ಏಕಾಂಗಿತನ ಅವಾಗ ನಿನ್ನ ನೆನಪಿನೊಂದಿಗೆ ಹುಟ್ಟಿದ ಕವನವೇ ಇದು  ಹೇಗೂ ಮುಂದಿನ ರಜಾ ದಿನಗಳಲ್ಲಿ ನಾನು ನಿಮ್ಮ ಊರಿಗೆ ಬರ್ತಿದೀನಿ  ನಿನ್ನ ಹೆಜ್ಜೆಯ ಜೊತೆ ಹೆಜ್ಜೆ ಸೇರಿಸುವ ಆಸೆ, ಕೈ ಕೈ ಹಿಡಿದು ಒಂದಿಡೀ ದಿನ ನಿನ್ನ ಜೊತೆ ಸಾಗುತ್ತಾ ನಿಮ್ಮೂರಿನ ಬೆಟ್ಟ ಗುಡ್ಡಗಳನ್ನು ಪರಿಚಯಸು ನಮ್ಮಿಬ್ಬರಿಗೆ ಆಸರೆಯಾಗಿ ವರುಣರಾಯ ಜೊತೆಯಲ್ಲಿ ಇದ್ದೇ ಇರುತ್ತಾನೆ ಒಂದಿಷ್ಟು ಸಮಯ ಪ್ರೀತಿಯ  ಲೋಕದಲ್ಲಿ ರಾಜ ರಾಣಿ ಯಾಗಿ ಮೆರೆದಾಡುವ ಹಾಗೇ   ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅದರಲ್ಲಿ ನನ್ನ ಪ್ರತಿಬಿಂಬ ಕಾಣುವ ಆಸೆಯಾಗಿದೆ   ಹಾಗೇ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು  ಹೇ ಪಾಪು ರೆಡಿಯಾಗಿರು ....!


SATISH N GOWDA
9844773489

Saturday, October 9, 2010

ಹೇಳು ಹುಡುಗಿ ನೀನ್ಯಾರೆ...?


ಹೇಳು ಹುಡುಗಿ ನೀನ್ಯಾರೆ...?
ಹೇ ಹುಡುಗಿ
ನೀ ತೊಟ್ಟರೆ ಲಂಗಾ-ದಾವಣಿ
ರಾಜಕುಮಾರಿಯೂ ಎದ್ದು ಬಂದಾಳಲ್ಲಾ
ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು.
ನಿನ್ನ ನಗುವ ಕಂಡ ರಾಜಕುಮಾರ
ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು
ನಿನೇನು ಹುಡುಗಿಯೋ ಅಥವಾ
ಧರೆಗೀಳಿದು ಬಂದ ಇಂದ್ರಲೋಕದ
ಸ್ಪಪ್ನ ಸುಂದರಿಯೋ...?


ಹೇ ಹುಡುಗಿ
ನೀ ತೊಟ್ಟರೆ ಗಾಗ್ರ ಚೋಲಿಯ
ನಾಚಿ ನಿಂತಾನಲ್ಲಾ
ನಿನಗೆ ಜನ್ಮ ಕೊಟ್ಟ ಆ ಬ್ರಹ್ಮ,
ಧುಮಕ ಹೊಂಟಾನಲ್ಲಾ,
ಆ ಸಮುದ್ರಕ್ಕೆ ಈ ಸೂರ್ಯ
ನಿನೇನು ಹುಡುಗಿಯೋ ಅಥವಾ
ಸೌಂದರ್ಯದ ರಾಕ್ಷಸಿಯೋ..?


ಹೇ ಹುಡುಗಿ
ನೀ ತೊಟ್ಟರೆ ಸ್ಯಾರಿ, ರವಕೆಯ
ಓಡಿ ಬಂದಾರಲ್ಲಾ
ನಿನ್ನ ನೋಡಲು ರೆಂಬೆ,ಊರ್ವಶಿ,ಮೇನಕೆಯರು
ಸಾರ ಹೊರಟಾರಲ್ಲಾ
ದೇವಲೋಕದ ಇಂದ್ರನೆ ಮೇಲೆ ಯುದ್ದವ
ನಿನೇನು ಹುಡುಗಿಯೋ ಅಥವ ದೇವ ಕನ್ಯಯೋ...?


ನೀ ನಿಂತರೆ ಕಣ್ಣ ಮುಂದೆ
ಕಾಣದಾಯಿತು ಮುಂದಿನ ಪ್ರಪಂಚ
ಬಾರದಾಯಿತು ಮಾತುಗಳ ಸ್ವರಮಾಲೆ
ನಿನ್ನ ಹೊಗಳಲು ಚಂದದ ಪದಗಳಿಲ್ಲ
ನಾ ನೋಡಲು ಈ ಪ್ರಪಂಚದಲ್ಲಿ ಎನೋ ಉಳಿದಿಲ್ಲ
ನೆನ್ನೆ ಮೊನ್ನೆಯವರಿಗೊ ನೀ ಕಾಣಲಿಲ್ಲ
ಹೇಳು ಹುಡುಗಿ ನೀನ್ಯಾರೆ...?


ಹೇಳು ಹುಡುಗಿ ನೀನ್ಯಾರೆ...?
SATISH N GOWDA

Saturday, October 2, 2010

ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!


              (ಚಿತ್ರ ಕೃಪೆ ಗೂಗಲ್ )
         ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!

                       ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ಈ ಡೈಲಾಗ್  ಎಲ್ಲೋ  ಕೇಳಿದೀನಿ...! ಅನಿಸ್ತಿದೆ ಆಲ್ವಾ  Canfuse ಬೇಡ ..! ಇದು "ನಾಗರಹಾವು " ಚಿತ್ರದ ಅಂಬಿ ಹುಡುಗಿಯರನ್ನ ರೇಗಿಸುವು ಪರಿ  ಇದೀಗ ಈ ಹಾಡು ಬದಲಾಗಿದೆ ಹೇಗೇ ಅಂತ ಕೇಳಿ ... !  F M  ರೇಡಿಯೋ ಗಳಲ್ಲಿ    ವ್ಹ್ಹಾರೆವ್ಹಾ ....! ಮೇರಿ ಬುಲ್...! ಬುಲ್.....!  ಲಡಕಿ.....  ತಿರಗಕಿಲ್ಲ್ವಾ ಹೋಗು....! ಹೋಗು ...! ಹೋಗ್ತಾ ಅಂಗೆ ಅಪ್ಪನ ಕಾಲದ ಸೂಪರ್ ಹಿಟ್ ಸಾಂಗನ ಕೇಳ್ಕೊಂಡು ಹೋಗು ..!  ಹಾಗಂತ  ನಮ್ಮ ಊರಿನ ಹುಡುಗಿಯರೇನು ಕಮ್ಮಿ ಇಲ್ಲ "ಕಾಲಕ್ಕೆ ತಕ್ಕಂತೆ ತಾಳ "ಅನ್ನೋ ಹಾಗೆ  ಅವರೂ ಕೋಡ  ಪ್ರೇಮದ ಪತ್ರ ಹೋಗಿ ಎಲ್ಲಾ ಮೊಬೈಲ್ ಬಂದಿದೆ ಇವರಿಗೆ ಎಲ್ಲಾ ಮೊಬೈಲ್ ಲ್ಲೇ , ಮೊಬೈಲ್ ಬಿಟ್ಟರೆ ಬೇರೇ ಲೋಕ ತಿಳಿಯದು ಮೊದಲೆಲ್ಲ ಒಂದು ಹುಡುಗ ಹುಡುಗಿಗೆ ಪ್ರಪೋಸೆ ಮಾಡಿದರೆ ಅವಳು ಸ್ವಲ್ಪ ಯೋಚನೆ  ಮಾಡಿ ಬೆಳಗ್ಗಿ ಉತ್ತರ ಹೇಳುತಿದ್ದಳು ದ್ಯರ್ಯ ಇಲ್ಲದ ಹುಡುಗಿಯರು ತನ್ನ  ಉಡುಗೆಯ  ಮೊಲಕ ಪ್ರಿಯಕರನಿಗೆ  ಪ್ರೇಮ  ಪತ್ರ ನೀಡುತ್ತಿದ್ದಳು  ಹೇಗೆಂದರೆ  ರೆಡ್  -ಒಪ್ಪಿಗಿಇಲ್ಲ ಯಲ್ಲೋ - ವೈಟೆ ಮಾಡ್ತಿದ್ದೇನೆ  ಬ್ಲೂ - ನಾನು ನಿನ್ನನ್ನ ಪ್ರಿತಿಸ್ತಿದೇನೆ  ಅಂತ ನಮ್ಮ ಚಿಂದಿ -ಚೋರ್ ಹುಡುಗರು ಅರ್ಥ  ಮಾಡಿ ಕೊಳ್ಳುತ್ತಿದ್ದರು ,                   ಈ ಹದಿಹರೆಯದ  ಮನಸ್ಸೇ ಹೀಗೇ  ಅರ್ದ ಬೆಂದ ಮಡಿಕೆಯ ಹಾಗೆ  "ಎಲ್ಲವೂ ತಿಳಿದಂತೆ ಹೋಗಿ ಏನೋ ತಿಳಿಯದಾಯಿತು ಸರ್ವಜ್ಞ "   ಅನ್ನೋ ಹಾಗೇ ಇಲ್ಲಿ ಎಲ್ಲವೂ ಅರೆ -ಬರೇ ಕಲಿತು ಕುತೋಹಲದ ಮದ್ಯಯೇ ಇವರ ಜೀವನ ಸಾಗುತಿರುತ್ತದೆ  ಸಮಾನ ವಯಸ್ಸಿನ ಗೆಳೆಯರು  ಮನದಾಳದ  ಮಾತುಗಳು  , ಸ್ವಚಂದವಾದ ಕನಸುಗಳು  .ನೆಚ್ಚಿನ ಗೆಳತಿಯರ  ಹೊಸ ಹೊಸ ಟೇಸ್ಟ್ ಗಳು    . ಈ ಮೂಲಕ ಕಾಲೇಜುಗಳಲ್ಲಿ  ಹುಡುಗ ಹುಡುಗಿಯರನ್ನು ಚುಡಾಯಿಸುವುದು  ಒಬ್ಬರೊನ್ನಬ್ಬರು ಪರಿಚಯಿಸಿಕೊಳ್ಳುವುದು , ಹುಡುಗರು  ಹುಡುಗಿಯರಿಗೆ  ಹೊಡೆಯುವ   ಡೈಲಾಗ್ ಗಳು    ಇವೆಲ್ಲವೂ ವಿಬಿನ್ನ ರೀತಿಯ ಮಾಯಾಲೋಕಕ್ಕೆ ಈ ನಮ್ಮೊರಿನ ಹುಡುಗಿಯರನ್ನು ಕರೆದೊಯ್ಯುವ ನಾನಾ ಪ್ರಯತ್ನಗಳು ,               ಈಗಿನ ಕಾಲೇಜುಗಳಲ್ಲಿ  ಹುಡುಗ ಹುಡುಗಿಯ ಬೇದವಿಲ್ಲದೆ ಇರುವುದು ಒಂದು ರೀತಿಯ ಅಗತ್ಯವಾದರೂ ಕೆಲವೊಮ್ಮೆ ಇದು ಮಿತಿಯಾದರೆ .....? ಯೋಚಿಸಿ ನೋಡಿ ...! ಇದೆಲ್ಲವನ್ನು ಮರೆತು ನಮ್ಮೊರಿನ ಹುಡುಗಿಯರು ಜೀವನವನ್ನ ಎಂಜಾಯ್  ಮಾಡ್ತಿದ್ದಾರೆ  ಅಂದರೆ ಮೆಚ್ಚಲೇ ಬೇಕು ಅದಕ್ಕೆ ನಾ ಹೇಳಿದ್ದು ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ... ಅದರಲ್ಲೂ ನಮ್ಮ ಪಡ್ಡೆ ಹುಡುಗರು ಕೇಳ್ಬೇಕಾ ....? ಒಂದು ಒಳ್ಳೆ ಹುಡುಗಿ ಕಾಲೇಜುಗೇ ಬಂದರೆ "ಯಾರೇ ನೀ ದೇವತೆಯಅಂತ ಹಾಡಕ್ಕೆ ಶುರುಮಾಡ್ತಾರೆ   ಅಕಸ್ಮಾತ್  ಹುಡುಗಿ  ಕಾಲೇಜುಗಳಲ್ಲಿ  ಬೇಗ ಬಂದರೆ " ಬಾರೆ ...! ಬಾರೆ ..! ಚಂದದ  ಚಲುವೆಯೇ  ಬಾರೆ...!  ಅಪ್ಪಿ ತಪ್ಪಿ ಆ ಹುಡುಗಿ ನಕ್ಕರೆ  " ಸುಮಸುಮ್ನೆ ನಗ್ತಾಳೆ " ಅಂತಾರೆ     ಹೀಗೇ ಒಂದಿಲ್ಲದ  ಒಂದು  ಹಾಡಿನ ಮೂಲಕ ಹುಡುಗಿಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡ್ತಾರೆ  ಇವೆಲ್ಲ ಹುಡುಗರು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಕೆಲ ಹುಡುಗಿಯರು ಪಡ್ಡೆ ಹುಡುಗರನ್ನು ಕಂಡು ಕಾಣದೆಯೇ "ಪೂಲ್ಸ್ " ಗಳು  ಎಂದು  ಮೂಗು  ತಿರಿಗಿಸಿಕೊಂಡು ಹೊರಡೋ ಹುಡುಗಿಯರಿರುತ್ತಾರೆ ಇಂತ ಹುಡುಗಿಯರು ಕೋಡ  ಚತುರರೆ ಆದರೆ ತೋರಿಸಿಕೊಳ್ಳಲ್ಲ ಅಷ್ಟೇ . ಆದರೆ  ವೇಟಿಂಗ್   ರೋಮ್  ನಲ್ಲಿ ಕುಳಿತು ತನ್ನ ಗೆಳತಿಯರೊಂದಿಗೆ ಹುಡುಗರು ರೇಗಿಸುವ ಮತ್ತು ಚುಡಾಯಿಸುವ ವಿಷಯ ಗಳನ್ನೇ ಚರ್ಚೆ ಮಾಡುವುದಂತೋ ನಿಜ ಎಲ್ಲಾ  ತಮಾಷೆಗೆ  ...! ತಮಾಷೆಗೆ ...!                        ಇದನ್ನೆಲ್ಲಾ ಮಾಡುತ್ತಾ  ಹುಡುಗಿಯರು ತುಂಬಾ ಬುದ್ದಿವಂತರಾಗಿದ್ದರೆ  ಹೇಗೆಂದರೆ ತನ್ನತ್ತ ಬರುವ ಹುಡುಗರಿಗೆ ಹೇಗೇ ,ಎಲ್ಲಿ ,ಚಳ್ಳೆ ಹಣ್ಣು ತಿನಸಬೇಕೆಂಬುದು  ನಮ್ಮೊರ ಹುಡುಗಿಯರು ತುಂಬಾ  ಚಾನ್ನಗಿ ತಿಳಿದುಕೊಂಡಿದ್ದಾರೆ   ಹುಡುಗರ ಕೈಗೆ ಸಿಕ್ಕು ಸಿಕ್ಕದ ಹಾಗೇ   ತನ್ನ ಸೌಂದರ್ಯ ವನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ   "ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....!  ಹಾಟ್ಸ್ ಅಪ್ ಟು    ನಮ್ಮೊರ ಹುಡುಗಿಯರು "                   "ಹಾಗೇ ನನ್ನದೊಂದು ಚಿಕ್ಕ ಮನವಿ  ದಯವಿಟ್ಟು  ಸುಮಸುಮ್ನೆ ಫೋನ್ ಮಾಡೋ ಹುಡುಗರನ್ನ ಅಥವಾ ನೀವೇ ಕಾಲ್ ಮಾಡಿ ಫ್ರಿಂಡ್   ಮಾಡ್ಕೊಳ್ಳೋ  ಹುಡಗರನ್ನ  ನಿಮ್ಮ ಚಿಕ್ಕ ಚಿಕ್ಕ ಸಂತೋಷ ಗಳಿಗೋಸ್ಕರ    ಒಮ್ಮೆಲೇ ಡ್ರಾಪ್ ಮಾಡಬೇಡಿ  ಪ್ಲೀಸ್  ಯಾಕೆಂದರೆ   ನೀವೇನೋ ವಿಶಾಲ ಹೃದಯದವರು ಆದರೆ ಅವರು  ಪುಟ್ಟ ಹೃದಯದ  ಹುಚ್ಹು ಪ್ರೇಮಿಗಳು ನೀವೂ ಶೋಕಿ ಮಾಡಿ, ನಾನು ಬೇಡ ಅನ್ನಲಿಲ್ಲ  ಆದರೆ  ಹರೇಹುಡುಗರ ಮನಸ್ಸು ನೋಯಿಸಬೇಡಿ   ಅವರು ಪಡೋ ನೋವು ತುಂಬಾ ದೊಡ್ಡದು "  ಒಮ್ಮೊಮ್ಮೆ ಅತ್ಮಾತ್ಯೆ ಗಳಿಗೋ ಪ್ರಯತ್ನ ಪಡಬಹುದು ಜೋಕೇ ....!  ಒಮ್ಮೆ ಯೋಚಿಸಿ ನೋಡಿ  ಯೋಚನೆ ಮನುಕುಲಕ್ಕೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ ....! 

SATISH N GOWDA