Tuesday, September 28, 2010

ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

          ಹೇ.....! ಅಮೋಘ ಈ ನಡುವೆ ಬರ್ತಾ ಬರ್ತಾ ನಿಂದು ಜಾಸ್ತಿ ಆಯಿತು   ಕಣೇ ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip  ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್  ಕೋಪಾನಾ U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....! 
           ನನಗೂ  ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ  ಹುಡುಗಿನಾ ನಾನು ನಿನ್ನೆ ನೋಡ್ತಿರೋದು  ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ  ಬರೋದು ತುಂಬಾ ಕಷ್ಟ ,
                            ಓ ......! ಗೊತಯಿತು ಕಣೇ 
ಅಮೋಘ ,ನಾನು Mysore ನವಳು ಅಂತಾನ ಆಗಿನ ಕಾಲದ   ಕವಿಗಳಿಂದ ಹಿಡಿದು ಈಗಿನ  ಕಾಲದ ಸಿನಿಮ ಸ್ಟಾರ್ ಗಳ ವರಗೂ  Mysore   ಹುಡುಗಿರನ್ನ   ತುಂಬಾ ಹೊಗಳ್ತಾರೆ So  Bengalore  ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......!  ಹೋಗೆಲೇ ದಡ್ಡಿ ನೀನು . "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು  ತಾನೆ..?  ಅವನು ಯಾವೋನೋ "ದೇವದಾಸ್ " ಅಂತೆ  ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ  ಕೊಡ್ಕೊಂಡ್   ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ 

                              ಆದರೋ ನೀನು ಒಳ್ಳೆಯವಳು ಕಣೇ
ಅಮೋಘ ಹೇ ಹುಡುಗಿ  ಇಷ್ಟೊತ್ತು  ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry  ಕಣೇ ಅಮೋಘ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ  ನಿನಗೆ ಹೃದಯ  ಕೊಟ್ಟಿರೋದು ಅದನ್ನ ಇಟ್ಕೊಂಡು   ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ  ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose  ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆಪಾಪ,Exams Busy  ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
                    ಹೇ   
ಅಮೋಘ  ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ .  ನಿನಗೊತ್ತಾ ನಾನು "ಆಕಾಶ್ " Move  ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ"  ಹಾಡಿಗೋಸ್ಕರ ನೀನು ನನ್ನ Life  ನಲ್ಲಿ ಅಷ್ಟೊಂದು ಬೇರೆತೋ  ಹೋಗಿದಿಯ   ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ  ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ   ಕಣೇ ಅಮೋಘ. 
                    ನನಿಗನಿಸುತ್ತೆ  ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move   ನಲ್ಲಿ Climax  ಗೇ ಗಣೇಶ್  ಅಕೊತನಲ್ಲ ಆ ಗೆಟಪ್ ನ  Tilar ಗೇ ನಾನೆ Ader ಕೊಟ್ಟೋ Stich  ಮಾಡಿಸ  ಬೇಕಾಗುತ್ತೆ   ಕಣೇ 
                  Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ
ಅಮೋಘ  ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು  ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ   ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ  ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
                            ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ   ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ಎದೆಯಲ್ಲಿರಿವ ಮಳೆಯಂತ ಪ್ರಿತಿಯನ್ನ ನನ್ನ ಮೇಲೇ ಸುರಿಸ್ತಿಯ ಅಂತ  ಕಾಯಿತ  ಇದೀನಿ ಕಣೇ
ಅಮೋಘ......!

ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
SATISH N GOWDA 
9844773489 

Monday, September 27, 2010

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

 ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿ
ಅಂದದ ತೊದಲು ನುಡಿ
ಕಚಗುಳಿ ಇಡುವ ಕಣ್ಣ ನೋಟ
ರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆ
ಸುಂದರ , ರಮಣೀಯ , ಮನೋಹರ ...

ನನ್ನ ನಿನ್ನ ಮಿಲನ 
ಹೇಳಲಾಗದ ಪದಗಳ ನಯನ 
ಗೀಚಿ ಬರೆದರೂ ಕೂಡ 
ಮುಗಿಯಲಾರದ ಪ್ರೇಮ ಕವನ .

ದೇವರ ಮಹಿಮೆ ನಾ ಕಾಣೆ ಗೆಳತಿ 
ನಿನ್ನ ಕಣ್ಣ ನೋಟಕ್ಕೆ ನಾನದೆ 
ಸಿಪ್ಪೆಕಳಚಿದ ಬಾಳೆಹಣ್ಣಿನಂತೆ ,
ಭೂಮಿಯಲ್ಲಿ  ಬಿದ್ದು ಒದ್ದಾಡುವ ಮೀನಿನಂತೆ .

ನಿನ್ನ ಒಂದು ಸ್ಪರ್ಶಕ್ಕೆ 
ಕ್ಷಣರ್ದದಲ್ಲಿ   ಮೂಡಿದ ಸಂಚಲನ 
ಯಾವ ಬಿರುಗಾಳಿಗೂ ಕಡಿಮೆ ಇರಲಿಲ್ಲ ,
ಮತ್ತು ಬರಿಸುವ ಮದುರೆಯು ಅದಕ್ಕೆ ಸಾಟಿಯೇನಿಲ್ಲ.

ಏನಿದೆಯೋ ದೇವರೇ .....!
ಹೆಣ್ಣಿನ ಮನಸ್ಸಿನಲ್ಲಿ ನಾನಂತು ಅರಿಯೆ 
ತೊಳೆದು ಒರಸಿದರೋ ಕಾಣದ 
ಸುವರ್ಣಾಕ್ಷರಗಳ  ಸರಮಾಲೆ .

ಕೊಡಿಸಿ , ಗುಣಿಸಿ , ಭಾಗಿಸಿದರೋ 
ಬಾರದ ಉತ್ತರ ಹೆಣ್ಣು , ಮತ್ತು 
ಅವಳ ಮನಸ್ಸಿನ ಚಿತ್ರಗಳ ಭಾವನೆ 
ಹೆಣ್ಣನ್ನು ಸೃಷ್ಟಿಸಿದ   ದೇವರೇ 
ನಿನಗಿದೋ ನನ್ನದೊಂದು ಸಲಾಂ ....

.
ಅಪರೋಪಕ್ಕೊಮ್ಮೆ ಸಿಕ್ಕ ಹುಡುಗಿ ...
SATISH N GOWDA

Thursday, September 16, 2010

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

(ಚಿತ್ರ ಕೃಪೆ ಗೂಗಲ್ )


ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..

ಏನೋ ಆಗಿದೆ ನನಗೇನೋ ಆಗಿದೆ 
ಏನೆಂದು ಕೇಳ ಬೇಡ ನೀನು,
ನೀ .. ಸಿಗಲಿಲ್ಲ ವಾದ್ದರಿಂದ 
ನನ್ನೀ ಜೀವನ ಬೇಸರವಾಗಿದೆ .

ಹುಡುಕಾಡಿದೆ ನಿನ್ನನ್ನು 
ಸುತ್ತಾಡಿದೆ ನಿನ್ನ ಮನೆಯನ್ನು 
ಧಣಿದು ಬಸವಳಿದಿರುವೆ, ಆದರೋ
ಹುಡುಕಲಾಗಲಿಲ್ಲ ನಿನ್ನ ಸುಳಿವನ್ನು .

ಕೊರಗುತಿಹೇನು ನಿನ್ನ ನೆನೆಪಲ್ಲೆ
ನೊಂದು , ಬೆವರುತಿಹೇನು ನೀನಿಲ್ಲದ ನೋವಲ್ಲೆ 
ಸುಮ್ಮನೆ ಕೂರಲು  ಮನಸಿಲ್ಲ,
ನಿನ್ನ ಹುಡುಕುವ ಉತ್ಸಾಹವೂ ನನಗಿಲ್ಲ .

ಕಾರಣ ಹೇಳದೆ ಹೋರಟು ಹೋದ ಗೆಳತಿ ನೀನು ,
ನೀನಿಲ್ಲದ ಕಾರಣ ಜೀವನ ಸಾಗಿದೆ 
ತಂತಿ ಮುರಿದ ವೀಣೆಯ ರೀತಿ....,
ನಾವಿಕನಿಲ್ಲದ ದೋಣಿಯ  ರೀತಿ...!

ಎಲ್ಲಿಂದ ಬಂದ ಜೀವನವೋ ತಿಳಿಯದು 
ಎಲ್ಲಿಗೀ ಪಯಣವೋ ತಿಳಿಯದು 
ಕಾಲ ಬಂದಂತೆ ಕಳೆಯೆತಿಹೇನು ಜೀವನ ,
ಜೀವನದ ಮರೆಯಲ್ಲಿ ಸಾಗುತಿದೆ ನನ್ನೀ ಪಯಣ .

ಅಂದು...! ಇಂದು ..!ಎಂದೂ...!
ನನ್ನದೊಂದೇ ಶಪಥ 
ಪ್ರೀತಿ ನಿನ್ನಯ ಮಡಿಲಿಗೆ 
ದೇಹ ಪ್ರಕೃತಿಯ ಸೊಬಗಿಗೆ ....!

ಇಂತಿ ನೊಂದ ಜೀವ 
SATISH N GOWDA  

Saturday, September 4, 2010

ಯೋಚಿಸ ಬೇಡ ,ಪ್ರೀತಿಸಿ ನೋಡು ....

(ಚಿತ್ರ ಕೃಪೆ ಅಂತರ್ಜಾಲ )

ಪ್ರೀತಿಸಿ ನೋಡು ....

ಕನ್ನಡಿಯ
ಮುಂದೆ
ನಿಂತು
ನೀ ನಿನ್ನ 
ಪ್ರೀತಿಯ 
ಬಿಂಬ  
ಕಾಣುವಂತೆ
ಪ್ರಿತಿಯಲ್ಲಿಯೋ  
ನಿನ್ನ 
ಪ್ರೀತಿಯಬಿಂಬ 
ಕಾಣುತ್ತಿಯ
ಯೋಚಿಸ  ಬೇಡ
ಒಮ್ಮೆ 
ಪ್ರೀತಿಸಿ ನೋಡು ...

ಪ್ರೀತಿಸಿ ನೋಡು ....
SATISH N GOWDA

ಸೌಂದರ್ಯವತಿ ...


(ಚಿತ್ರ ಕೃಪೆ ಅಂತರ್ಜಾಲ)
ಸೌಂದರ್ಯವತಿ ...
ಇವಳ್ಯಾರ ಮಗಳೋ ನಾ ಕಾಣೆ
ಒಂದು ವಾರೆ ನೋಟದಿಂದ
ತನ್ನ ಗುಲಾಮನನ್ನಾಗಿ ಮಾಡಿಕೊಂಡ 
ಮೊದಲ ಹುಡುಗಿ 

ಆ ತುಂಟ ತನದ ಹುಡುಗಿ
ಬರೀ ಕಣ್ಣ ಸನ್ನೆಯಲ್ಲೇ 
ನನ್ನ ಹೃದಯ ಸ್ಪರ್ಶಿಸಿದ
ಮೊದಲ ಬೆಡಗಿ 

ಒಂದು ಮಿಂಚಿ ಮರೆಯಾಗುವ 
ಮುಗುಳ್ನಗೆಯಿಂದ ನೀನೇ
ನನ್ನ ಬಾಳ ಸಂಗಾತಿ
ಎಂದ ಸೌಂದರ್ಯವತಿ ...

ಸೌಂದರ್ಯವತಿ ...
SATISH N GOWDA