Monday, September 27, 2010

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

 ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿ
ಅಂದದ ತೊದಲು ನುಡಿ
ಕಚಗುಳಿ ಇಡುವ ಕಣ್ಣ ನೋಟ
ರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆ
ಸುಂದರ , ರಮಣೀಯ , ಮನೋಹರ ...

ನನ್ನ ನಿನ್ನ ಮಿಲನ 
ಹೇಳಲಾಗದ ಪದಗಳ ನಯನ 
ಗೀಚಿ ಬರೆದರೂ ಕೂಡ 
ಮುಗಿಯಲಾರದ ಪ್ರೇಮ ಕವನ .

ದೇವರ ಮಹಿಮೆ ನಾ ಕಾಣೆ ಗೆಳತಿ 
ನಿನ್ನ ಕಣ್ಣ ನೋಟಕ್ಕೆ ನಾನದೆ 
ಸಿಪ್ಪೆಕಳಚಿದ ಬಾಳೆಹಣ್ಣಿನಂತೆ ,
ಭೂಮಿಯಲ್ಲಿ  ಬಿದ್ದು ಒದ್ದಾಡುವ ಮೀನಿನಂತೆ .

ನಿನ್ನ ಒಂದು ಸ್ಪರ್ಶಕ್ಕೆ 
ಕ್ಷಣರ್ದದಲ್ಲಿ   ಮೂಡಿದ ಸಂಚಲನ 
ಯಾವ ಬಿರುಗಾಳಿಗೂ ಕಡಿಮೆ ಇರಲಿಲ್ಲ ,
ಮತ್ತು ಬರಿಸುವ ಮದುರೆಯು ಅದಕ್ಕೆ ಸಾಟಿಯೇನಿಲ್ಲ.

ಏನಿದೆಯೋ ದೇವರೇ .....!
ಹೆಣ್ಣಿನ ಮನಸ್ಸಿನಲ್ಲಿ ನಾನಂತು ಅರಿಯೆ 
ತೊಳೆದು ಒರಸಿದರೋ ಕಾಣದ 
ಸುವರ್ಣಾಕ್ಷರಗಳ  ಸರಮಾಲೆ .

ಕೊಡಿಸಿ , ಗುಣಿಸಿ , ಭಾಗಿಸಿದರೋ 
ಬಾರದ ಉತ್ತರ ಹೆಣ್ಣು , ಮತ್ತು 
ಅವಳ ಮನಸ್ಸಿನ ಚಿತ್ರಗಳ ಭಾವನೆ 
ಹೆಣ್ಣನ್ನು ಸೃಷ್ಟಿಸಿದ   ದೇವರೇ 
ನಿನಗಿದೋ ನನ್ನದೊಂದು ಸಲಾಂ ....

.
ಅಪರೋಪಕ್ಕೊಮ್ಮೆ ಸಿಕ್ಕ ಹುಡುಗಿ ...
SATISH N GOWDA