Friday, August 27, 2010

ವಾರೇ..... ವಾಹ್.

( ಚಿತ್ರ ಕೃಪೆ ಅಂತರ್ಜಾಲ)

ವಾರೇ..... ವಾಹ್.......

ನಮ್ಮೂರಿನ ಕೆಸರು ಗದ್ದೆಯಲ್ಲಿ
ಸೊಗಸಾಗಿ ಬೆಳದ ಹುಲ್ಲಿನ ಮದ್ಯ
ಸುಂದರವಾಗಿ ಕಂಡ
ಹುಡುಗಿಯೊಬ್ಬಳ ಜೊತೆಯಲ್ಲಿ
ಅಣ್ಣಾವ್ರ ಹಾಡು ಹಾಡಿಕೊಂಡು
ಹಾಗೆ ಸುಮ್ಮನೆ
ಒಂದು ಲುಕ್ ಕೊಟ್ಟರೆ
ಎನ್ ಮಜಾ ಅಂತೀರಾ...!
ವಾರೇ..... ವಾಹ್.....

ಬೆಂಗಳೊರಿನ M G ರಸ್ತೆಯಲ್ಲಿ
ಧೋ ಎಂದು ಸುರಿಯುತ್ತಿರುವ ಮಳೆಯ ಮದ್ಯ
ಇಷ್ಟವಾದ ಹುಡುಗಿಯನ್ನು
ಹೃದಯಕ್ಕೆ ಅಪ್ಪಿಕೊಂಡು
ರಸ್ತೆಯಲ್ಲಿ, ಸುರಿಯುತ್ತಿರುವ ಮಳೆಯಲ್ಲಿ
ಹಾಗೆ ಒಂದು ರೌಂಡ್ ಬಂದರೆ
 
ವಾರೇ..... ವಾಹ್.....
ಎನ್ ಮಜಾ ಅಂತೀರಾ...!

ರಾತ್ರಿಯ ನವಿರಾದ ನಿದ್ರೆಯಲ್ಲಿ
ಸುಂದರವಾದ ಕನಸಿನ ಒಳಗೆ
ಪ್ರೀತಿಸಿದ ಹುಡುಗಿಯನ್ನ
ಕಲ್ಪನೆ ಮಾಡಿಕೊಂಡು
ಬೆಳಗ್ಗೆ ಕಣ್ಣು ಬಿಡೊ ಸಮಯದಲ್ಲಿ
ಅಮ್ಮನ ಬದಲು
ಪ್ರೀತಿಸಿದ ಹುಡುಗಿ
ಕಾಫ್ಫಿ  ಮಾಡಿಕೊಂಡು ಬಂದರೆ....
ಎನ್ ಮಜಾ ಅಂತೀರಾ...!
 
ವಾರೇ..... ವಾಹ್....

ವಾರೇ..... ವಾಹ್.
SATISH N GOWDA

Sunday, August 22, 2010

ಎನೋ ಒಂಥರಾ..!

                                               (ಚಿತ್ರ ಕೃಪೆ ಅಂತರಜಾಲ )
ಎನೋ ಒಂಥರಾ..!

ಮರೆಯಲಾಗದ ನಿನ್ನಯ
ಪ್ರೇಮಗೀತೆಯಲ್ಲಿ
ಅಳಿಸಲಾಗದ ಸಾಲುಗಳನ್ನು
ನೆನೆಸಿಕೊಂಡರೆ
ಮನಸ್ಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ..!

ಹಳೆಯ ನಿನ್ನಯ ಹಾಡು,
ಜಿನುಗುವ ತುಂತುರು ಮಳೆಯಲ್ಲಿ
ನೆನೆ, ನೆನೆಯುತ್ತಾ...
ಮೂಗಿನ ತುದಿಯಲ್ಲಿ ಗುನುಗಿದರೆ
ಈ ಪುಟ್ಟ ಹೃದಯದಲ್ಲಿ
ಹೇಳಲಾಗದ
ಎನೋ ಒಂಥರಾ ಉಲ್ಲಾಸ ಸಂತೋಷ..!

ಮುಂಜಾನೆಯ ಬೆಳದಿಂಗಳಲ್ಲಿ
ಬೆಚ್ಚನೆಯ ಕನಸು ಬೀಳೊದೆ ಒಂಥಾರ ಉಲ್ಲಾಸ.
ಆ ಕನಸು ನೀನಾದರೆ....?
ನೀನೇ ನಾನದರೆ....?
ಮನಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ...!

ಪ್ರೀತಿಯ ಮಳೆಯಲ್ಲಿ ನಾನು,
ನನ್ನ ಈ ಪುಟ್ಟ ಹೃದಯದಲ್ಲಿ ನೀನು,
ಒಮ್ಮೆ ಹಾಗೆ ಕಣ್ಣಮುಂದೆ ನೆಡೆದಾಡುತ್ತಿದ್ದರೆ,
ಅಥಾವ ಹೃದಯದ  ಹತ್ತಿರದಲ್ಲಿ
ನಿನ್ನನ್ನು ತಬ್ಬಿಕೊಂಡರೆ, ಎನೋ
ಒಂಥರಾ ಉಲ್ಲಾಸ ಸಂತೊಷ....!

ಎನೋ ಒಂಥರಾ..!
SATISH N GOWDA

ಮಳೆಯಲಿ ಜೊತೆಯಲಿ ಚಿತ್ರದ ಸವಿ ನೆನೆಪು ನನ್ನವಳಜೋತೆ 
ನೋಡಲು ಇಲ್ಲಿ ಕ್ಲಿಕ್ಕಿಸಿ ...
http://nannavalaloka.blogspot.com/2010/01/blog-post_06.html

Wednesday, August 18, 2010

ಇದು ನನ್ನ ಬಾಲ್ಯದ ನೆನಪು...!

            
  ಹಾರುವ ಹಕ್ಕಿಯಾಗಿ

      ಪ್ರತಿಬಾರಿ ಸ್ವತಂತ್ರ್ಯ ದಿನಾಚರಣೆ ಬಂದಾಗಲೂ ನನಗೆ ನನ್ನ ಬಾಲ್ಯ ಊಮ್ಮಳಿಸಿಬರುತ್ತದೆ . ಗರಿ-ಗರಿ ಚಡ್ಡಿ ಬಿಳಿ ಅಂಗಿ ತೊಟ್ಟು ನಾನು ಮತ್ತು ನನ್ನ ಗೆಳೆಯರು ಶಾಲೆಗೆ ಓಡುತ್ತಿದ್ದೆವು . ನಮ್ಮೂರಿನಿಂದ ಶಾಲೆ ಸ್ವಲ್ಪ ದೂರವಿತ್ತು . ಹೀಗಾಗಿ ಬೆಳಗ್ಗೆ ನಸುಕಿನ ವೇಳೆಯಲ್ಲೆ ನಮ್ಮ ಪಯಣ ಆರಂಭವಾಗುತ್ತಿತ್ತು. ಜೊತೆಗೆ ಅಕ್ಕ ಕೊಡಿಟ್ಟುಕೊಟ್ಟ ಸುಮಾರು ಏಳೆಂಟು ಬಣ್ಣದ ಹೂವುಗಳು. ಜೋತೆಗೆ ನನ್ನ ಹೈದಾರು ಜನ ಗೆಳೆಯ ಗೆಳತಿಯರು . ಚುಮು ಚುಮು ಚಳಿಯಲ್ಲಿ ಮಂಜುಕರಗಿ , ಇಷ್ಟಿಷ್ಟೆ ಬೆಳಕು ಮೂಡುವ ಹೊತ್ತಿಗೆ ನಾವು ಶಾಲೆ ಸೇರುತ್ತೆದ್ದೆವು. ಮೋಡದಿಂದ ಕೆಳಗಿಳಿದು ಬಂದ ದೇವರ ಮಕ್ಕಳ ಹಾಗೆ .... ತಂದ ಹೂಗಳನ್ನು ಶಾಲೆಯಲ್ಲಿ ಬಿಡಿಸಿದ ಭೂಪಟದಲ್ಲಿ ಅಲಂಕರಿಸುವ ಮೂಲಕ ನಮ್ಮ ಕೆಲಸ ಶುರುಗೊಳ್ಳುತ್ತಿತ್ತು.
                ಸ್ವಾತಂತ್ರದಿನಾಚರಣೆಯ ದಿನದಂದು ಶಾಲೆಗೆ ಮೂದಲು ಬರಿತ್ತಿದ್ದವರು ನಾವೆ. ಆನಂತರ ಸುವರ್ಣ ಟೀಚರ್ ಬರುತ್ತಿದ್ದರು ನಾವೆಲ್ಲ ಹೊಗಿ ಅವರು ಬಸ್ ಬರುವುದನ್ನೆ ಕಾಯ್ದು ಶಾಲೆಯ ಕೀಯನ್ನು ಮೊದಲು ಹಕ್ಕಿ ತರುತ್ತೆದ್ದೆವು . ತದ ನಂತರ ಶಾಲೆಯ ಹಕ್ಕಿಗಳಂತೆ ಇತರೆ ಸ್ನೇಹಿತರು,ಸ್ನೇಹಿತೆಯರು ಬರುತ್ತಿದ್ದರು . ನಾವೆಲ್ಲರು ಬಿಳಿಯ ಶರ್ಟ್ ಮತ್ತು ನೀಲಿಯ ಚಡ್ಡಿ ತೊಟ್ಟು ಎಲ್ಲರೂ ಕೊಕ್ಕರೆಗಳಂತೆ ಕಾಣುತ್ತೆದ್ದೆವು . ಎಲ್ಲವೂ ಶುಭ್ರ, ಹಾಗತಾನೆ ಹುಟ್ಟುವ ಸೂರ್ಯಕೊಡ  ನಮ್ಮನ್ನು ಕಂಡು , ನಮ್ಮ ಶುಭ್ರತೆಯನ್ನು ಕಂಡು ನಾಚಿ ಒಮ್ಮೆ ಕಣ್ಣು ಮಿಟುಕಿಸುತ್ತಿದ್ದ. ನಮ್ಮೂರಿನ ಹಿರಿಯರು ದ್ವಜವನ್ನು ಕಟ್ಟಿ ಅದೋರೊಳಗೆ ನಾವು ತಂದಿರುತ್ತಿದ್ದ ಬಿಡಿ ಹೂವುಗಳನ್ನು ಹಾಕಲು ಹೇಳುತ್ತಿದ್ದರು. ನಾವೆಲ್ಲ ಇಬ್ಬನಿಯ ಮುತ್ತುಗಳ ಇನ್ನೂ ಹಾರದ ಕೆಂಪು ಗುಲಾಬಿಯ ರೆಕ್ಕೆಗಳನ್ನು ಬಿಡಿಸಿ ರಾಷ್ಟ್ರದ್ವಜದೊಳಗೆ ಹಾಕುತ್ತಿದ್ದೆವು. ಅಂದಿನ ದಿನ ನಮ್ಮಲ್ಲಿ ಏನೋ ಪುಳಕ , ಉಕ್ಕಿಬರುವ ಉಲ್ಲಾಸ, ಶಾಲೆಯ ಮುಂದೆ ದೊಡ್ಡದಾದ ಭೂಪಟವನ್ನು ಬಿಡಿಸಿ ಅದರೋಳಗೆ ನಮ್ಮನ್ನು ಸಾಲು ಸಾಲಾಗಿ ನಿಲ್ಲಿಸುತ್ತಿದ್ದರು . ನಾವೆಲ್ಲ ಅಭಿಮಾನದಿಂದ ಕತ್ತೆತ್ತಿಕೊಂಡು ಪಟಪಟಿಸುವ ರಾಷ್ಟ್ರದ್ವಜವನ್ನು ನೋಡುತ್ತಿದ್ದೆವು.

        ನಮ್ಮೊರಿನ ಹಿರಿಯ ಜೀವ ರಾಮಜ್ಜ ದ್ವಜಾರೋಹಣ ಮಾಡುತ್ತಿದ್ದರು . ಮಕ್ಕಳೆ ಸತ್ಯ ನುಡಿಯಿರಿ, ಒಳ್ಳೆಯದನ್ನೆ ಪ್ರೀತಿಸಲು ಕಲಿಯಿರಿ, ಸ್ವಾತಂತ್ರ್ಯ ನಮಗೆ ತುಂಭಾಕಷ್ಟದಿಂದ ಬಂದದ್ದು. ದೇಶದ ಎಷ್ಟೊ ಮಹಾನುಬಾವರು ಇ ಮುತ್ತಿಗಾಗಿ ತನ್ನ ಪ್ರಾಣವನ್ನೆ ಇತ್ತಿದ್ದಾರೆ ಎಂಬ ಮುತ್ತಿನಂತ ಮಾತುಗಳನ್ನಾಡುತ್ತಿದ್ದರು. ನಾವು ಮೇಲುದ್ವನಿಯಲ್ಲಿ "ಜನಗಣ ಮನ" ಮತ್ತು "ಒಂದೇ ಮಾತರಂ" ಹಾಡಿ . ನಿಂಬೆಹುಳಿ ಚಾಕಲೇಟ್ ಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆಗ ಮಾತ್ರ ಸ್ವಲ್ಪ ಗಲಾಟೆಯಾಗುತ್ತಿತ್ತು.
     ನಂತರ ಭಾಷಣದ್ದು ನಾನು ಮಾತ್ರ ಸ್ವಾತಂತ್ರದಿನಾಚರಣೆಗೆ ಒಂದು ತಿಂಗಳು ಇರುವಾಗಲೆ ಭಾಷಣ ಬರಿಸಿಕೊಂಡು ಕಂಠಪಾಠಮಾಡುತ್ತಿದ್ದೆ . ಎಂಥಾ ಸಂಬ್ರಮ ಎನ್ನುತ್ತಿರಾ...? ನಿಶ್ಕಲ್ಮಶ ಮನಸ್ಸಿನಿಂದ ಮಾಡಿದ ಭಾಷಣಕ್ಕೆ ಚಿತ್ರಪಟದಲ್ಲಿರುವ ಗಾಂಧಿ ತಾತನೇ ಎದ್ದು ಬಂದು ಕೆನ್ನೆಗೆ ಮುತ್ತು ಕೊಡುತ್ತಿದ್ದನೋ ಎನೋ....! ಆಷ್ಟು ಮಾದುರ್ಯವಾಗಿರುತ್ತಿತ್ತು . ಇದು ನನ್ನ ಬಾಲ್ಯದ ನೆನಪು...!
      ಈಗ ಮತ್ತೆ ಅದೇ ಸ್ವಾತಂತ್ರ್ಯದಿನ ಬಂದಿದೆ . ನನಗೀಗ ೨೫ರವಯಸ್ಸು ಮೊದಲಿನಂತೆ ಖುಷಿ ಇಲ್ಲ, ಉತ್ಸಹವಿಲ್ಲ, ಯಾರೊ ಕಳುಹಿಸಿದ ಒಂದು ಮೆಸೇಜ್ ಗೆ ಸೇಮ್ ಟು ಯು ಎಂದು ರಿಪ್ಲೇ ಕುಟ್ಟಿ ಮುಖ ಕೆಳಗೆ ಹಾಕಿಕೊಂಡು ಕುಳಿತಿದ್ದೆನೆ . ನನ್ನ ಮನೆ ಎದುರಿಗೆ ಮಲ್ಲಿಗೆ ಮೊಗ್ಗಿನಂತ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೊಗುತ್ತಿದ್ದಾರೆ. ಆ ಮೊಗ್ಗಿನ ಮನಸ್ಸಿನಂತ ಮಕ್ಕಳೊಂದಿಗೆ ದ್ವಜಾರೊಹಣ ನೋಡಲು ಹೋಗುವ ಆಸೆ. ಅವರ ನಡುವೆ ನಿಂತು ಅವರದೇ ಆದ ಮೇಲು ದ್ವನಿಯಲ್ಲಿ ಜನಗಣ ಮನ ಹಾಡುವ ಆಸೆ, ಮಕ್ಕಳೆ ಒಳ್ಳೆಯದನ್ನೆ ಕಲಿಯಿರಿ ಎಂದು ಹೇಳುವ ಆಸೆ, ಮನೆಮುಂದೆ ಇರುವ ಸುಂದರ ಹೂವುಗಳನ್ನು ಕಿತ್ತುಕೊಂಡು ಹೋಗಿ ದ್ವಜದಲ್ಲಿ ಹಾರಿಸುವ ಆಸೆ, ಆದರೆ ಕಳ್ಳ ಮನಸ್ಸು ಸಿಕ್ಕಾ-ಪಟ್ಟೆ ಸೊಂಬೆರಿಯಾಗಿಬಿಟ್ಟಿದೆ.
     ಆದರೆ ಈ ಬಾರಿ ಹೋಗೆ.. ಹೊಗುತ್ತೆನೆ ಎದರುಮನೆಯ ಪುಟಾಣಿಗೊಂದು ಚುಟುಕಾದ ಬಾಷಣ ಬರೆದುಕೊಟ್ಟಿದ್ದೆನೆ . ನಾನು ಚಿಕ್ಕವನಾಗಿದ್ದಾಗ ನನ್ನ ಸುವರ್ಣಾ ಟೀಚರ್ ಬರೆದುಕೊಟ್ಟಿದ್ದರಲ್ಲ ಅದೇ ಭಾಷಣವನ್ನ ಒಂದೇ ಒಂದು ಪ್ಯಾರ. ಆ ಚೂಟಿ ಮಾಡುವ ನನ್ನದೇ ಭಾಷಣ ಕೇಳಲು, ನನ್ನದೇ ಬಾಲ್ಯಕ್ಕೆ ಮರಳ ಹೊರಟಿದ್ದೆನೆ .ಹೌದು ಈ ಬಾರಿ ಖಂಡಿತಾ ದ್ವಜಾರೋಹಣಕ್ಕೆ ಹೋಗಿಬರುತ್ತೆನೆ ಎಳೆಯ ಮಗುವಾಗಿ ...... ಹಾರುವ ಹಕ್ಕಿಯಾಗಿ....

SATISH N GOWDA

Tuesday, August 17, 2010

ಹೇ ಗಾಗ್ರ ಚಲುವೆ


ಹೇ ಗಾಗ್ರ ಚಲುವೆ..

ಹಾಲಿನಂತೆ ಉಕ್ಕಿ ಹರಿಯುವ
ಚಂದ್ರನ ಬೆಳದಿಂಗಳಲ್ಲಿ
ಕಂಡ ಸುಂದರ ಹುಡುಗಿಯ
ಚಂದದ ವರ್ತೆನೆಗೆ ಹುಟ್ಟಿದ
ನನ್ನೀ ಕವಿತೆ ....


ಹೇ ಗಾಗ್ರ ಚಲುವೆ
ನೀ ನೆಡೆಯೋ ರೀತಿಗೆ
ನಿನ್ನ ಬಳಕೋ ಸೊಂಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನೀ ನಾಡೊ ಮಾತಿಗೆ
ನಿನ್ನ ಕಣ್ಣನೋಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಬಿಸಿ ಅಪ್ಪುಗೆಗೆ
ನೀ ಕೊಡುವ ಸಿಹಿಮುತ್ತಿಗಾಗಿ
ಆತೊರೆಯುತಿಹದು
ನನ್ನೀ ಮನಸ್ಸು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಸಿಹಿ ನೆನೆಪಿಗೆ
ಒಂದಿಷ್ಟು ಕಹಿ ಮುನಿಸಿಗೆ
ಮನಸೊತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?
 ಹೇ ಗಾಗ್ರ ಚಲುವೆ
SATISH N GOWDA

Wednesday, August 11, 2010

ಬಾ ನನ್ನ ಜೋತೆಯಲ್ಲಿ...



ಬಾ ನನ್ನ ಜೋತೆಯಲ್ಲಿ...

ರಾತ್ರಿಯಾಗುತ್ತಿದ್ದಂತೆ
ಕಂಗೊಳಿಸುವ  ಚಂದ್ರ
ಬೆಳಗಿನ ಸೂರ್ಯನ ಮುಂದೆ ನಿಲ್ಲಲಾರ
ಆದರೂ ಅವನಿಗೂಂದು ಅಹಂಕಾರ ವಿದೆ
ನಾನೇ ಸೌಂದರ್ಯವಂತನೆಂದು
ನಿನ್ನನ್ನು ತೋರಿಸಿ ಅವನ
ಸೊಕ್ಕು  ಅಡಗಿಸಬೇಕಿದೆ
ಬಾ ನನ್ನ ಜೋತೆಯಲ್ಲಿ....

ಬೆಳಗ್ಗೆ ಹರಳುವ
ಕೆಂಪು ಗುಲಾಬಿ
ಸಂಜೆಯಾಗುತ್ತಿದ್ದಂತೆ
ಬಾಡಿ ನೆಲಕ್ಕುರುಳುತ್ತದೆ
ಆದರೂ ಅವಳು ನಾನೇ
ಅಂದಗತ್ತಿ ಎಂದು ಬೀಗುತ್ತಿದ್ದಾಳೆ
ನಿನ್ನನ್ನು ತೋರಿಸಿ ಅವಳ
  ಅಹಂಕಾರ ಮುರಿಯಬೇಕಿದೆ
ಬಾ ನನ್ನ ಜೊತೆಯಲ್ಲಿ....

ಸೂರ್ಯನ ಬಿಸಿಲನ್ನೂ
ತಾಳಿಕೊಳ್ಳದೆ ಕರಗಿಹೋಗುವ
ಮೋಡಗಳು ದುರಹಂಕಾರ ದಿಂದ
ನಗುತ್ತಿವೆ ನಾವೇ ನಮಗಿಂತ
ಸೌಂದರ್ಯವಂತರಿಲ್ಲ ಎಂದು
ನಿನ್ನನ್ನ ತೋರಿಸಿ ಅವುಗಳ
ಅಹಂಕಾರ ಅಡಗಿಸ ಬೇಕಿದೆ
ಬಾ ನನ್ನ ಜೊತೆಯಲ್ಲಿ...


ಬಾ ನನ್ನ ಜೋತೆಯಲ್ಲಿ... 
SATISH N GOWDA

ಓ ಪ್ರಕೃತಿ ದೇವತೆಯೇ....




ಓ ಪ್ರಕೃತಿ ದೇವತೆಯೇ....

ಓ ಪ್ರಕೃತಿ
ದೇವತೆಯೇ
ನೀ ಉಡುವ ಸೀರೆಯ
ಹೆಸರನ್ನಾದರೂ ಹೇಳಿಬಿಡು
ಸಾವಿರ
ಕನಸುಗಳ
ರಾಶಿಯಿಟ್ಟದರೂ
ನನ್ನ ಹುಡುಗಿಗೆ
ಉಡುಗರೆಯಾಗಿ
ತಂದುಕೊಡುವೆ.

ಓ ಗಾನಗಂದರ್ವ
ಕೋಗಿಲೆಯೇ
ನಿನ್ನ ಮಧುರ
ಕಂಠದ ದ್ವನಿಯನ್ನು
ತಿದ್ದಿ ತೀಡಿದ
ಮಹಾನುಭಾವನಾರೆಂದು ಹೇಳಿಬಿಡು
ಸಾವಿರ ಜನ್ಮಗಳ
ತಪಸ್ಸು ಮಾಡಿಯಾದರೂ
ನನ್ನ ಹುಡುಗಿಗೆ
ವರವಾಗಿ ಸಾದಿಸಿ ಕೂಡುವೆ.
ಓ ಪ್ರಕೃತಿ ದೇವತೆಯೇ.... 
SATISH N GOWDA

Tuesday, August 10, 2010

ವಿರಹಾ.... ನೂರು, ನೂರು ತರಹಾ...




ವಿರಹಾ.... ನೂರು, ನೂರು ತರಹಾ...
ವಿರಹಾ.... ಪ್ರೇಮಲೋಕದ ಕಹಿ ಬರಹ


ಮರಳುಗಾಡಿನ
ಮದ್ಯದಲ್ಲಿ
ಬಿರುಬಿಸಿಲಿನಲ್ಲಿ
ಉರಿಯುವ
ಸೂರ್ಯನಮುಂದೆ
ದಿನವಿಡೀ ನಿಂತಿರಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಕ್ಷಣವನ್ನು ಸಹಿಸಲಾಗುತ್ತಿಲ್ಲ.

ನಮ್ಮೂರಿನ
ಕೆಂಡಮಲ್ಲಿಗೆ
ಜಾತ್ರೆಯಲ್ಲಿ
ಹೊತ್ತಿ ಉರಿಯುತ್ತಿರುವ
ಬೆಂಕಿಯಲ್ಲಿ ಹಾಗೆ ಸುಮ್ಮನೆ
ನೆಡೆದಾಡಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಜನರ ಮಧ್ಯ
ನೆಡೆದಾಡುವುದು ಬಲು ಕಷ್ಟ.

ನಂದಿಬೆಟ್ಟದ
ಬಲು ಎತ್ತರವಾದ
ಶಿಕರದಿಂದ
ಕಲ್ಲು ಬಂಡೆಗಳ
ಮೇಲಿನಿಂದ ಪಾತಳಕ್ಕೆ
ಹಾಗೆ ಒಮ್ಮೆಲೇ ನೆಗೆಯಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಪ್ರಪಂಚದಲ್ಲಿ
ಕುಳಿತಿರುವುದು ನನ್ನಿಂದ ಸಾದ್ಯವಿಲ್ಲ
ವಿರಹಾ.... ನೂರು, ನೂರು ತರಹಾ...
SATISH N GOWDA

Saturday, August 7, 2010

ಕಾಣದ ಗೆಳತಿಗೂಂದು ಪ್ರೇಮಕಾವ್ಯ ....



ಕಾಣದ ಗೆಳತಿಗೂಂದು ಪ್ರೇಮಕಾವ್ಯ ....

ಹೇ ಹುಡುಗಿ ...
ನಿನ್ಯಾವ ದೇಶದ
ರಾಜಕುಮಾರಿಯೋ ಹೇಳಿಬಿಡು
ನಾ ಆ ದೇಶಕ್ಕೆ
ಬರುವೆ ನಿನ್ನನ್ನು
ಬಾಳಸಂಗಾತಿಯಾಗಿ
ವರಿಸುವ "ಸ್ವಯಂವರನಾಗಿ"

ಹೇ ಹುಡುಗಿ...
ನಿನ್ನನ್ನ ಹೆತ್ತ
ಆ ಮಹಾತಾಯಿ
ಯಾವ ಊರೆಂದೆ ಹೇಳಿಬಿಡು
ನಾ ಹೋಗಿ ನಮಿಸುವೆ
ಆ ತಾಯಿಯ ಪಾದ ಕಮಲಗಳಿಗೆ
ಕೋಟಿ.. ಕೋಟಿ "ನಮನಗಳನ್ನ"

ಹೇ ಹುಡುಗಿ...
ನೀ ನೆಡೆದಾಡುವ ದಾರಿಯಾದರೂ
ಒಮ್ಮೆ ಹೇಳಿಬಿಡು
ಅಲ್ಲಿಗೆ ಬರುವೆ
ನಾ ಸಾರಥಿಯಾಗಿ
ಸೂರ್ಯ,ಚಂದ್ರ ರನ್ನ
ಪಲ್ಲಕ್ಕಿಯ ಚಕ್ರಗಳನ್ನಾಗಿಸಿ
ಬೆಳದಿಂಗಳನ್ನ
ಹಾಸಿಗೆಯಾಗಿ ಹಾಸಿ
ನಿನ್ನನ್ನ ಪ್ರೇಮಲೋಕಕ್ಕೆ
ಕರೆದೂಯ್ಯುವ "ಪ್ರೇಮಿಯಾಗಿ"

ಕಾಣದ ಗೆಳತಿಗೂಂದು ಪ್ರೇಮಪತ್ರ..
SATISH N GOWDA

Thursday, August 5, 2010

ಕನಸಿನ ಹುಡುಗಿ..



ಕನಸಿನ ಹುಡುಗಿ..

ನೆನೆಸಿಕೊಂಡರೆ ನೀ ಕೋಟ್ಟ
"ಕನಸಿನ" ಸುಂದರ ನೆನೆಪುಗಳನ್ನ
ಕಳೆಯಲಾಗುತ್ತಿಲ್ಲ
ನೀನಿಲ್ಲದ ಈ ದಿನಗಳನ್ನ
ತಾಳಲಾಗುತ್ತಿಲ್ಲ ನಿನ್ನ
ಅಗಲಿಕೆಯ ಕ್ಷಣಗಳನ್ನ
ಸುಖಾ ಸುಮ್ಮನೆ ನೀ
ಕಾಯಿಸಬೇಡ ನನ್ನನ್ನು
ಬಂದುಬಿಡೆ ಹುಡುಗಿ
ನನ್ನ ಹೃದಯದ ಬಾಗಿಲಿಗೆ.

ಕಾಯಿಸಿ... ಕಾಯಿಸಿ
ಕೊಲ್ಲಬೇಡವೇ ಗೆಳತಿ
ನಿನ್ನ ಅಗಲಿಕೆಯಲ್ಲಿ
ನಾ ಬೆಂದು ಬಡವನಾಗಿರುವೆ
ನಿನ್ನ ನೋಡೊ ಆ ಒಂದು
ಸುಮಧುರ ಕ್ಷಣಕ್ಕಾಗಿ
ಕೋಟಿ...ಕೋಟಿ ಜನ್ಮಗಳ
ತಪಸ್ಸಿನ ಪಲವಾಗಿ
ಹುಟ್ಟಿ ಬಂದಿರುವೆ
ಸುಖಾ ಸುಮ್ಮನೆ ಕಾಯಿಸಬೇಡ
ಒಮ್ಮೆ ಬಂದುಬಿಡೆ ನನ್ನ ಕಣ್ಣಮುಂದೆ.

ಗೆಳತಿ ನೀ ನನ್ನ
ಪ್ರೀತಿಸಿದ್ದೆ ಆದರೆ
ಇನ್ನೊಂದು "ತಾಜ್ ಮಹಲ್"
ಕಟ್ಟೊ ತಾಕತ್
ಮತ್ತೊಂದು "ಪ್ರೇಮಲೋಕ"
ಸೃಷ್ಟಿಸೊ ದೈರ್ಯ ನನಗಿದೆ
ಸುಖಾ ಸುಮ್ಮನೆ ಕಾಯಿಸಬೇಡವೇ ಗೇಳತಿ
ಇನ್ನೊಂದು ಜನ್ಮದ ನಂಬಿಕೆ ನನಗಿಲ್ಲ
ಬಂದು ಬಿಡೆ ಹುಡುಗಿ ನನ್ನ ಕಣ್ಣಮುಂದೆ

SATISH N GOWDA

Wednesday, August 4, 2010

ಓ ಪ್ರಕೃತಿಯೇ ನಿನೇಷ್ಟು ವಿಸ್ಮಯ....!


ಓ ಪ್ರಕೃತಿಯೇ ನಿನೇಷ್ಟು ವಿಸ್ಮಯ....!
ಕತ್ತಲೆಯ ಕರ್ಮೋಡ
ಕವಿಯುತ್ತಿದ್ದಂತೆ
ಹಕ್ಕಿಗಳಂತೆ ನಕ್ಷತ್ರಗಳು
ರೆಕ್ಕೆ ಬಿಚ್ಚಿ ಹಾರಲಾರಂಬಿಸುತ್ತವೆ
ಆ ಸುಂದರ ಸೊಬಗನ್ನು ಕಂಡು ಅನಿಸುತ್ತದೆ
ಓ ಪ್ರಕೃತಿಯೇ
ನಿನೇಷ್ಟು ವಿಸ್ಮಯ....!

ಕತ್ತಲಲ್ಲಿಯೂ
ಕೂಡ ಕಂಗೊಳಿಸುವ
ಈ ಜಗತ್ತಿಗೆಲ್ಲ ನಾನೆ ಓಡೆಯ
ಎಂದು ಬೀಗುತ್ತಿರುವ
ಚಂದ್ರನನ್ನು ಕಂಡು ಅನಿಸುತ್ತದೆ
ಓ ಪ್ರಕೃತಿಯೇ
ನಿನೇಷ್ಟು ವಿಸ್ಮಯ...!

ಸೂರ್ಯನಿಲ್ಲದ
ಕಗ್ಗತ್ತಲಿನಲ್ಲಿ
ರಾಜನೆಂದು ಬೀಗುತ್ತಿದ್ದ
ಚಂದ್ರ ಮುಂಜಾನೆ
ಸೂರ್ಯನನ್ನ ಕಂಡು
ಕಳ್ಳನಂತೆ ಓಡುತ್ತಿದ್ದಾಗ ಅನಿಸುತ್ತದೆ
ಓ ಪ್ರಕೃತಿಯೇ
ನಿನೇಷ್ಟು ವಿಸ್ಮಯ....!
SATISH N GOWDA