Wednesday, November 24, 2010

ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....


ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....

ಓದುವ ಮುನ್ನ....
ಪ್ರಿಯ ಬ್ಲಾಗಿಗರೇ... ಈ ಲೇಖನವನ್ನು ಪ್ರಕಟಿಸಿದ್ದು ಯಾರ 
ಮನಸ್ಸು ನೊಯಿಸಲಿಕ್ಕಾಗಲಿ ,ಅಥಾವ ಓಲೈಸಲಿಕ್ಕಾಗಲಿ ಅಲ್ಲ. 
ಕೆಲವೊಮ್ಮೆ ಇಂತಹ ಘಟನೆಗಳು ಗೊತ್ತಿದ್ದೊ ಅಥವ ಗೊತ್ತಿಲ್ಲದೆಯೊ 
ನಮ್ಮ ಮದ್ಯ ನೆಡೆದುಹೊಗುತ್ತವೆ ಅಂತಹ ನೂರಾರು ಘಟನೆಗಳಲ್ಲಿ ಇದು 
ಸಹ ಒಂದು. ಹೆಂಗೆಳೆಯರ ಮನಸ್ಸಿನಲ್ಲಿ ನನ್ನ ಮೇಲೆ ಕ್ಷಮೆ ಇರಲಿ.....

             ಸುಮಾರು 8-10  ವರ್ಷಗಳ ಹಿಂದೆ ...ನಾನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ  S S L C  ಓದುತ್ತಿದ್ದ ಸಮಯ School Day ಅಂತ ಒಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಇಟ್ಟುಕೊಂಡಿದ್ದರು ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಮೇಡಂ,  ಯಾರಾದರು ಕಥೆ, ಕವನ, ಚುಟುಕು ಹಾಸ್ಯ, ನಾಟಕ, ಇತ್ಯಾದಿಗಳಲ್ಲಿ ಭಾಗವಹಿಸುವವರು ತಮ್ಮ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು ಎಂದು ಮೇಮೊ ಕಳುಹಿಸಿದ್ದರು. ನನ್ನ ತರಗತಿಯ ಹೈದಾರು (ಪಕ್ಕಾ ಲೋ ಕ್ಲಾಸ್) ಹುಡುಗರ ಗುಂಪಿನ ನಾಯಕ ನಾನು , ಎಲ್ಲರೂ ಕುಳಿತುಕೊಂಡು ಕೆಲಕಾಲದ ಚರ್ಚೆಯ ನಂತರ ಒಂದು ನಾಟಕ ಮಾಡಿಯೇ ತೀರುವುದಾಗಿ ನಿರ್ಣಯಸಿದೆವು.

              ನಾಟಕದ ಒಳ ಅರ್ಥ:  1947ರ ಸ್ವಾತಂತ್ರ್ಯಕ್ಕೂ ಮೂದಲು ಭಾರತ ಬ್ರಿಟಿಷರ  ಆಳ್ವಿಕೆಯಲ್ಲಿ ಇದ್ದಾಗ ಭಾರತೀಯರು ಯಾವುದೆ ಸಭೆ, ಸಮಾರಂಭ ನೆಡೆಸುವಂತಿರಲಿಲ್ಲ, ನಾಲ್ಕೈದು ಜನ ಗುಂಪು ಕಟ್ಟಿಕೊಂಡು ರಸ್ತೆಗಳಲ್ಲಿ ಮಾತನಾಡುವಂತಿರಲಿಲ್ಲ ಹಾಗು ಯಾವುದೇ ವಿಷಯಗಳನ್ನು ಚರ್ಚಿಸುವಂತಿರಲಿಲ್ಲ. ಹಾಗೇನಾದರು ಅವರ ಮಾತಿಗೆ ಮೀರಿ ನೆಡೆದಿದ್ದಲ್ಲಿ ಬ್ರಿಟೀಷ್ ಕಾರ್ಯಕರ್ತರು ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಈ ಅರ್ಥ ಬಿಂಬಿಸುವಂತ ನಾಟಕ ಆಡುವುದು ಎಂದು ನಮ್ಮ-ನಮ್ಮಲ್ಲಿ ತೀರ್ಮಾನಿಸಿಕೊಂಡೆವು ಅದಕ್ಕೆ ಎಲ್ಲರ ಸಮ್ಮತಿಯು ಇತ್ತು. ಸರಿ next day ಇಂದ ನಾಟಕದ ಪ್ರಾಕ್ಟೀಸ್ ಶುರುವಾಯಿತು.

            ನಾಟಕದ ಅಂತಿಮ ಪ್ರಾಕ್ಟೀಸ್:ಎಲ್ಲಾ ಪ್ರಾಕ್ಟೀಸ್ ಮುಗಿಯಿತು ನಾವೊಂದು ನಾಲ್ಕೈದು ಜನ ರಸ್ತೆಯಲ್ಲಿ ಮತಾನಾಡುತ್ತಿದ್ದಾಗ ಬ್ರಿಟಿಷ  ಅದಿಕಾರಿಯಾದ ನೀನು ನಮ್ಮನ್ನು "ಆ.... ಡಮಾರ್. ಆ ಡಮಾರ್....." ಎಂದು ಪಿಸ್ತೂಲಿನಿಂದ ಕೊಲ್ಲ ಬೇಕು ಎಂದು "ರವಿ" ಯನ್ನು ನೇಮಿಸಿದೆವು. ಅವನಿಗೆ ಸ್ವಲ್ಪ ನಾಲಿಗೆ ತೊದಲಿತ್ತು. ಅವನಿಗೆ ಎಷ್ಟು ಹೇಳಿಕೊಟ್ಟರು ನಾಯಿಬಾಲ ಡೊಂಕು ಎಂಬಂತೆ ಆ..... ಡಗಾರ್. ಆ ಡಗಾರ್.... ಎನ್ನುತ್ತಿದ್ದ. ಡಗರ್ ಎಂದರೆ ಅಗಷ್ಟೆ ವೇಶ್ಯಚಾರಿಣಿ ಎಂಬ ಅರ್ಥಕ್ಕೆ ಮಾರ್ಪಾಡುತ್ತಿದ್ದ ದಿನಗಳು ಅವು. ಇದನ್ನೆಲ್ಲ ಅರಿಯದ   ಮುಗ್ದ ಮನಸ್ಸಿನ ಪುಟ್ಟ ಯುವಕರಾದ ನಾವು  ನಾಟಕ ಪ್ರದರ್ಶಿಸುವ ದಿನ ಬಂದೇ ಬಿಟ್ಟಿತ್ತು.
            
              ನಾಟಕದ ಸ್ಟೇಜಿನಲ್ಲಿ: ಅಂದಿನ ದಿನ ಒಂದು ರೀತಿಯ ಭಯ, ಅತಂಕ ನಮ್ಮಲ್ಲಿ ಮನೆ ಮಾಡಿತ್ತು. " ರೋಗಿ ಬಯಸಿದ್ದು ಹಾಲು,ಅನ್ನ. ಡಾಕ್ಟರ್ ಹೇಳಿದ್ದೂ ಹಾಲು, ಅನ್ನ" ಎನ್ನುವ ಹಾಗೆ ನಮ್ಮ ಹೆಸರನ್ನು ಕೊನೆಯಲ್ಲಿ ಸೇರಿಸಿದ್ದರು. ನಾಟಕ ಶುರುವಾಯಿತು 15 ನಿಮಿಷಗಳ ನಮ್ಮ ನಾಟಕವನ್ನು ನೋಡಲು ಜನರು ಹುಮ್ಮಸ್ಸಿನಿಂದ ಕೇಕೆ ಹಾಕುತ್ತಿದ್ದರು ( ನಾಟಕದ ವಿಷಯ ಪಾಪ ಅವರಿಗೊ ಗೊತ್ತಿಲ್ಲ)  ನಾವು ರಸ್ತೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅದಿಕಾರಿಯಾದ ರವಿ ನಮ್ಮನ್ನು ಗುರಿಯುಟ್ಟು ಆ....ಡಗಾರ್. ಆ.....ಡಗಾರ್ ಎನ್ನುತ್ತಿದ್ದರೆ ಅಲ್ಲಿದ್ದ ಅಷ್ಟು ಜನ ಸಿಳ್ಳೆಹೊಡೆದು ನಗುತ್ತಿದ್ದರು. ಮುಂದಿನ ಸೀಟುಗಳಲ್ಲಿ ಕುಳಿತ ಹುಡುಗಿಯರತ್ತ ಪಿಸ್ತೂಲ್ ಗುರಿಮಾಡಿ ಆ...ಡಗಾರ್. ಆ....ಡಗಾರ್ ಎನ್ನುತ್ತಿದ್ದಾಗ ಹುಡುಗಿಯರು ಕೂಡ ಕೇಕೆ ಹಾಕಿ ನಗುತ್ತಿದ್ದರು. ಅಷ್ಟೇ ಆದರೆ ಜನ enjay ಮಾಡಿ ನಕ್ಕು ಮನೆಗೆ ಹೋಗುತ್ತಿದ್ದರೋ ಎನೋ..! ಅದರೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ಮೇಡಂ ಕಡೆಗೊ ಗುರಿಮಾಡಿ ಆ....ಡಗಾರ್. ಆ..ಡಗಾರ್ ಎಂದ. ಅಲ್ಲಿದ್ದ ಅಷ್ಟೊ ಜನ ಶಿಕ್ಷಕರೂ ಸೇರಿ ನಗಲು ಪ್ರಾಂರಬಿಸಿದರು. ನಾಟಕ ಮುಗಿಯುತು ಅವರೆಲ್ಲ ಎದ್ದು ಮನೆಗೆ ಹೊರಟು ಹೋದರು ನಮಗೆ ಕಾದಿತ್ತು "ಮಾರಿ ಹಬ್ಬ"
       
             next day : ನಾವೆಲ್ಲ ನಾರ್ಮಲ್ ಹಾಗಿ ಶಾಲೆಗೆ ಹೊದೆವು ಹುಡುಗರೆಲ್ಲ ನಮ್ಮ ನಾಟಕ ಮೆಚ್ಚಿಕೊಂಡಿದ್ದರು ಬೆಳಗಿನ ಪ್ರಾರ್ಥನೆ ಮುಗಿದು ಶಾಲೆಗೆ ಹೊಗುವ ಸಮಯದಲ್ಲಿ ಸತೀಶ್ ಅವನ ಗ್ರೂಪ್ ಪ್ರಾಂಶುಪಾಲರನ್ನ ಕಾಣತಕ್ಕದ್ದು ಎಂದು ಮೇಮೋ ಕಳಿಹಿಸಿ ಕರೆಸಿಕೊಂಡರು. ಕಾರಣ ಗೊತ್ತಿರಲಿಲ್ಲ ಹೊಳಗಿದ್ದ ಮೇಡಂ ಬಡ್ಡಿಮಕ್ಳ ನನ್ನನ್ನೇ "ಡಗಾರ್" ಅಂತ ಕರೀತಿರಾ.... ಅಂತ ಹೇಳಿ, ನಾಟಕ ಮಾಡಿದ ತಪ್ಪಿಗೆ ಬಾಸುಣಿಗೆ ಬರೊ ತರ ಹೊಡೆದು ಕಿವಿ  ಹಿಡಿದು ದಿನವಿಡೀ ಕುರ್ಚಿಯಲ್ಲಿ ಕುಳ್ಳರಸಿದ್ದರು. 

SATISH N GOWDA

ಎಲ್ಲಿರುವೆ ನೀ ಚಲುವೆ


ಎಲ್ಲಿರುವೆ ನೀ ಚಲುವೆ

ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ.. ಏನೋ.. ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೋಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

ಎಲ್ಲಿರುವೆ ನೀ ಚಲುವೆ
SATISH N GOWDA 

ನಿನ್ನ ಪ್ರೀತಿಗೆ ದಾಸನಾಗಲು..?

  
ನಿನ್ನ ಪ್ರೀತಿಗೆ ದಾಸನಾಗಲು..?

ನಿನ್ನ ಸುಂದರ ರೂಪ
ನನ್ನ ಕನಸಲ್ಲಿ ಬಂದು
ನ್ನನ್ನೆಲ್ಲ ರಾತ್ರಿಗಳನ್ನು
ಒಂದೇ ಸಮನೆ ಲೋಟಿ ಮಾಡುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರಿಯತಮನಾಗಲು..?

ಜೇನಿನ ಹನಿಯಂತ ನಿನ್ನ ಪ್ರೀತಿ
ನ್ನನ್ನೀ ಹೂವಿನಂತ ಮನಸ್ಸುನ್ನು
ಸದ್ದಿಲ್ಲದೇ ದಿನೇ ದಿನೇ ದೋಚಿ ಹೊಯ್ಯುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?

ಸದಾ ನಿನ್ನದೇ ನೆನಪುಗಳು
ನನ್ನ ಈ ಪುಟ್ಟ ಹೃದಯದಲ್ಲಿ
ದಿನಕಳೆದಂತೆ ರಾಶಿಯಾಗುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ಶರಣಾಗಲು..?

ನಾಳಿನ ಕನಸುಗಳನ್ನು ಹೊತ್ತ ನನ್ನೀ ದೇಹ
ದಿನ ಬೆಳಗಾಗುವುದುರೊಳಗಾಗಿ
ನಿನ್ನ ನೆನಪುಗಳೊಂದಿಗೆ ಮಿಲನವಾಗುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?

ನಿನ್ನ ಪ್ರೀತಿಗೆ ದಾಸನಾಗಲು..?
SATISH N GOWDA

Friday, November 12, 2010

ನೆಚ್ಚಿನಗೆಳತಿಗೊಂದು ಆಹ್ವಾನ


ನೆಚ್ಚಿನಗೆಳತಿಗೊಂದು ಆಹ್ವಾನ

ಬಣ್ಣ-ಬಣ್ಣದ ಕನಸುಗಳನ್ನು ಹೊತ್ತ ತೇರು ನಾನು
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ನೀ ಕೂರೆ ಬಂದು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..

ಕಡಲತೀರದ ಮುತ್ತನ್ನು ಹಿಡಿದಿಡುವೆ ಅಲ್ಲೆ
ನಕ್ಷತ್ರಗಳನ್ನು ಬರಸೆಳೆದು ನಾ ಕೊಡುವೆ ನಲ್ಲೆ
ಸಿಹಿಮುತ್ತನ ಸುರಿಮಳೆಯನ್ನೆ ಸುರಿಸುವೆ ನಿಂತಲ್ಲೆ
ಮರೆಯದೆ ಬಂದುಬಿಡು ನೀ ಹುಡುಗಿ ಒಮ್ಮೆ.

ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು
ಹೇಳದೇ ಹೋದ ನೀ, ಮತ್ತೆ ಬರುವುದಾದರು ಎಂದು.

ಮನ್ನಿಸೇ ಹುಡುಗಿ ಈ ಭಗ್ನ ಪ್ರೇಮಿಯನ್ನ
ಮಾಡಲಾರೆ ಇನ್ನೊಮ್ಮೆ ಇಂತಹ ತಪ್ಪನ್ನ
ಕ್ಷಣವಾದರು ಒಮ್ಮೆ ನೀ ನೋಡಬಾರದೆ ನನ್ನನ್ನ
ಹಗಲುಗನಸಲ್ಲೂ ಪರಿತಪಿಸುತ್ತಿರುವೆ ನಾ ನಿನ್ನನ್ನ.

ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ


ನೆಚ್ಚಿನಗೆಳತಿಗೊಂದು ಆಹ್ವಾನ
SATISH N GOWDA

Thursday, November 11, 2010

ಅವಳು ನನ್ನಾಕೆ...


ಅವಳು ನನ್ನಾಕೆ... 
ಹುಣ್ಣಿಮೆಯ ರಾತ್ರಿಯಲ್ಲಿ
ನಿಂತಿದ್ದ ಸುಂದರ ಹುಡುಗಿಯ
ಸೌಂದರ್ಯದ ಸೊಬಗನ್ನು ಕಂಡು
ಚಂದಿರನೂ ಕೂಡ ಒಮ್ಮೊಮ್ಮೆ ಕಣ್ಣು ಮಿಟಿಕುಸುತ್ತಿದ್ದ
ಬಹುಶಃ ಇರಬೇಕು ಅವಳು ನನ್ನಾಕೆ..!

ಬೆಳ್ಳಂಬೆಳಗಿನ ಮುಂಜಾನೆಯಲ್ಲಿ
ಜುಳು ಜುಳು ಹರಿಯುವ ಜಲಧಾರೆಯಲಿ
ಮಿಂದು ಬರುತ್ತಿದ್ದ ಯುವತಿಯ ಕಂಡ
ಆ ಸೂರ್ಯನೂ ಒಂದು ಕ್ಷಣ ಕೆಂಪಾಗಿದ್ದ
ನನಗನಿಸುತ್ತೆ ಅವಳು ನನ್ನಾಕೆ..!

ಇಂದ್ರಲೋಕದ
ರಂಗು ರಂಗುನ ನೃತ್ಯಮಂದಿರದಲ್ಲಿ
ನಾಟ್ಯಮಯೂರಿ ನಾರಿಯರ ಸಮ್ಮುಖದಲ್ಲಿ
ನಾರ ಮಡಿಯಲ್ಲಿ ಬಂದ ನಾರಿಯ ನೆಡೆಗೆಯ ಕಂಡು
ನೃತ್ಯ ಮಂದಿರದ ಸಭೆಯೇ ಒಮ್ಮೆ ದಂಗು ಬಡಿದಂತಿತ್ತು
ಬಹುಶಃ ಇರಬೇಕು ಅವಳು ನನ್ನಾಕೆ..!

ಕಡು ಕಗ್ಗತ್ತೆಲೆಯ ನಡು ರಾತ್ರಿಯಲಿ
ಧರೆಗಿಳಿದ ದೇವತೆಯ
ಮೋಹಕ ಕಣ್ಣುಗಳನೋಟಕ್ಕೆ
ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಒಮ್ಮೆ ಮೋಹ ಉಂಟಾಯಿತು
ಬಹುಶಃ ಇರಬೇಕು ಇವಳು ನನ್ನಾಕೆ..?


SATISH N GOWDA

Wednesday, November 10, 2010

ಆಕಸ್ಮಿಕವಾಗಿ ನೆಡೆದ ಅಚಾತುರ್ಯ.

 (ಚಿತ್ರ ಕೃಪೆ ಅಂತರ್ಜಾಲ )
ಆಕಸ್ಮಿಕವಾಗಿ ನೆಡೆದ ಅಚಾತುರ್ಯ.

           ತುಂಭಾದಿನಗಳಿಂದ (ಸೆಪ್ಟೆಂಬರ್ ತಿಂಗಳಿನಿಂದ) ಈ ಘಟನೆ ನನ್ನ ಮನಸಿನಲ್ಲಿತ್ತು ಏಕೋ ಎನೋ ಬರವಣಿಗೆಯ ರೂಪ ಕೊಡಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಒಲ್ಲದ ಮನಸ್ಸಿನಿಂದ ಈ ಘಟನೆಗೊಂದು ಲೇಖನ ರೂಪ ಕೊಡುವ ಪ್ರಯತ್ನದಲ್ಲಿ.....
        ಓದುವ ಮುನ್ನಾ...... ಗೊತ್ತಿಲ್ಲದೆ ನೆಡದ ಈ ಘಟನೆಯ ಕಥಾನಯಕಿಗೆ ಕ್ಷಮೇಯಾಚಿಸುತ್ತಾ..

                                             ಅಳಿದುಳಿದ ನೆನಪಿನೊಂದಿಗೆ ಘಟನೆ ಹೀಗಿದೆ  ,,,,,,,
         ಪ್ರತಿತಿಂಗಳು ಕೆಲವು ಮಾಸ ಪತ್ರಿಕೆಗಳನ್ನು(ರೂಪತಾರ, ಗೃಹಶೋಭ.ಚಿತ್ತಾರ. ಇತ್ಯಾದಿ..) ಕೊಂಡು ಓದುವ ಅಭ್ಯಾಸ ನನ್ನದು. ಅದೇ ರೀತಿ ಸೆಪ್ಟಂಬರ್ ತಿಂಗಳ ರೂಪತಾರ ಪತ್ರಿಕೆಯನ್ನು ತೆಗೆದು ಕೊಳ್ಳುವ ಎಂದು ನಮ್ಮ ಮನೆಯ ಪಕ್ಕದಲ್ಲೆ ಇದ್ದ ಒಂದು ಪುಸ್ತಕ ಮಳಿಗೆಗೆ ಬೇಟಿ ಕೊಟ್ಟೆ ನನ್ನ ದುರಾದೃಷ್ಟಕ್ಕೆ ಆ ಮಳಿಗೆಯಲ್ಲಿ ಅವತ್ತು ಒಂದು ಸುಂದರ ಹುಡುಗಿ ಇದ್ದಳು. ರೂಪತಾರವನ್ನು ನೋಡುತ್ತಾ ಅದರಲ್ಲಿರುವ ದಪ್ಪನೆಯ ಒಂದು ಕವರ್ ಕಣ್ಣಿಗೆ ಬಿತ್ತು(ಪುಸ್ತಕದ ಒಳಗಡೆ ಪ್ಯಾಕಿಂಗ್ ಮಾಡಲಾಗಿತ್ತು ) ಅದನ್ನು ವಿಚಾರಿಸಲು ಸಲುವಾಗಿ,
ನಾನು : ರೀ ಈ ಪುಸ್ತಕದಲ್ಲಿ ಏನಿದೆ
ಹುಡುಗಿ: ನೀವೇ ಓದಿ ಸರ್.
ನಾನು : ಅದು ಸರಿ ರಿ ಪುಸ್ತಕ ಪ್ಯಾಕಿಂಗ್ ಆಗಿದೆಯಲ್ಲ ..?
ಹುಡುಗಿ: Open ಮಾಡಿ ನೋಡಿ ಸರ್ (ನಗೆಮುಖದಿಂದ)
ನಾನು: ದುಡ್ಡು ಕೊಡದೆ Open ಮಾಡಬಹುದಾ..?
ಹುಡುಗಿ: ಹಾಗೆಲ್ಲಾ ಅಗೋಲ್ಲ ಸರ್ ದುಡ್ಡುಕೊಟ್ಟೆ Open ಮಾಡಬೇಕು ( ಕೋಪದಿಂದ)
ನಾನು : ಅದು ಸರಿ ರಿ ನೋಡಬೇಕಲ್ಲ ಒಳಗೇನಿದೆ ಅಂತ..!
ಹುಡುಗಿ: ಮನೆಗೆ ತಗೊಂಡು ಹೋಗಿ ನೋಡಿಸರ್ (ಮತ್ತೆ ಕೋಪದಿಂದ)
ನಾನು : ಸರಿ ಕೋಡಿ .
             ಇಷ್ಟೇಲ್ಲ ಆದರೂ ಪುಸ್ತಕದ ಒಳಗಡೆ ಏನಿದು ಎಂದು ಗೊತ್ತಾಗಲಿಲ್ಲ. ಅಲ್ಲಿಂದ ಮನೆಗೆ ಬಂದು Open ಮಾಡಿದರೆ ಶಾಕ್ ಒಳಗಡೆಇದ್ದದ್ದು "Wisper " .  ಸಂಚಿಕೆಯ ಮುಖಪುಟದ ಮೇಲೆ "ಈ ಸಂಚಿಕೆಯೊಂದಿಗೆ ಒಂದು "Wisper " ಉಚಿತ" ಎಂದು ಬರೆದಿತ್ತು. ..! ಅಯ್ಯೋ.. ದೇವರೆ ಸುಮ್ಮ-ಸುಮ್ಮನೆ ಒಂದು ಹುಡುಗಿಯ ಮನಸ್ಸು ನೊಯಿಸಿಬಿಟ್ಟೆನಲ್ಲ ಎಂದು ಕೊಂಡು ...... ನಾನು ಹೇಗಿದ್ರು ಬ್ಯಾಚುಲರ್ ನನಗೇನಕ್ಕೆ ಇದು,  ಸರಿ ಇದನ್ನು ಅವಳಿಗೇ ಕೊಟ್ಟು Sorry ಕೇಳಿಕೊಂಡು ಬರುವ ಎಂದು ಹೊರಟೆ.
ನಾನು: ಸಾರಿ ರಿ..
ಹುಡುಗಿ: ಮೌನ (ಕೋಪದ ಕಣ್ಣುಗಳಿಂದ)
ನಾನು : ನಿಜವಾಗಲು ನನಗೆ ಗೊತ್ತಿರಲಿಲ್ಲ.
ಹುಡುಗಿ: ಮೌನ (ಮುಗುಳ್ನಕ್ಕು)
ನಾನು : ಇದು ನನಗೆ ಬೇಡ ನೀವೆ ಇಟ್ಕೊಳ್ಳಿ.
ಹುಡುಗಿ: ಕೋಪದಿಂದ ನೋಡುತ್ತಾ (ಒಂದು ಲುಕ್ ಕೊಟ್ಟು ತಲೆಬಗ್ಗಿಸಿಕೊಂಡಳು)
        ಸರಿ ಒಲ್ಲದ ಮನಸ್ಸಿನಿಂದ ಆ ಕವರ್ ಅನ್ನು  ಅಲ್ಲಿಟ್ಟು ಹೊರಟೆ ಆ ದಿನದಿಂದ ಇವತ್ತಿನ ವರೆಗೊ ಆ ಹುಡುಗಿ ನನ್ನ ನೋಡಿದ ತಕ್ಷಣ ಮೌನವಾಗುತ್ತಾಳೆ....... ಕಾರಣ ಗೊತ್ತಿಲ್ಲ..! ಘಟನೆ ನೆಡೆದು ತಿಂಗಳುಗಳು ಕಳೆದರು ನನ್ನನ್ನು ಕಂಡ ಅವಳಿಗೆ ,ಅವಳನ್ನು ಕಂಡ ನನಗೆ ಆವರಿಸುವ  ಮೌನ ಮಾತ್ರ ದೂರವಾಗಿಲ್ಲ.


ಪ್ರಿಯ ಸ್ನೇಹಿತರೆ ಈ ಲೇಖನ ಓದಿದ ನಿಮಗೆ ಏನನಿಸುತ್ತದೊ 
ಒಂದು ಕಾಮೆಂಟ್ ಮೂಲಕ ತಿಳಿಸಿ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ.

SATISH N GOWDA

Sunday, November 7, 2010

ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೇ ...

(ಚಿತ್ರ ಕೃಪೆ ಅಂತರ್ಜಾಲ)

ನನ್ನದೆಯ ತುಂಬ ಪ್ರೀತಿ ಇರುವಾಗ ದ್ವೆಶಕ್ಕೆಲ್ಲಿದೆ ಹೇಳ್ರಿ ಜಾಗ................?       ರೀ ....... !ಮೇಡಂ ಸುತ್ತಿ ಬಳಸಿ ಯಾಕ್ರಿ ಮಾತು ! ಇದ್ದದ್ದು ಇದ್ದಂಗೆ ಹೇಳಿಬಿಡ್ತೀನಿ ಕೇಳಿ. ... ನಾನು ನಿಮ್ಮನ್ನು ಪ್ರೀತಿಸ್ತಾ ....! ಇದೀನಿ ನಿಮ್ಮ ಮೇಲೇ ನಂಗೆ ಹಾಳಾದ್ದು ಮೋಹ ಶುರು ಆಗಿದೆ . ಸ್ವಲ್ಪ ದಿನಗಳ ಹಿಂದೆ  ಅವತ್ತು ವಿಜಯನಗರದ ಅಯ್ಯಂಗಾರ್ ಬೇಕರಿಗೆ ಅಂತ  ಬಂದಿದ್ರೆಲ್ವ ಅವಾಗ ನಾನು ನಿಮ್ಮನ್ನ ನೋಡಿದೆ ಕಣ್ರೀ.! ತ್ಹೊಥ್ ಅವತ್ತಿನಿಂದ ನನ್ನ ಮನುಸು ನನ್ನ ಮಾತೇ ಕೆಳ್ತಿಲ್ಲ ಕಣ್ರೀ ........ ..!ಅವತ್ಹ್ಹು ನಿಮ್ಮನ್ನ ನೋಡಿದ ಕ್ಷಣ ದಿಂದ ಹೇಗಾದರು ಮಾಡಿ ನಿಮ್ಮನ್ನ ಮಾತಾಡ್ಬೇಕು ಅಂತ ಅನಿಸುತ್ತೆ ಆದರೆ ಹಾಳಾದ್ದು ದ್ಯರ್ಯ  ಇಲ್ಲ ಕಣ್ರೀ .ಅದರೂ  ಕೊಡ ನಿಮ್ಮ ಮೇಲಿನ ಪ್ರೀತಿ ದಿನೇ ದಿನೇ ಜಾಸ್ತಿ ಅಗ್ಥಇದಿಯಲ್ಲ ಇದಕ್ಕೆ ಏನಂಥ ಕರೀಬೇಕೂ ಅರ್ಥನೇ ಆಗ್ತಿಲ್ಲ ಕಣ್ರೀ ..!
           ರೀ .. ಮೇಡಂ ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೇ  ನಮ್ಮ ಊರಲ್ಲೇ ಸ್ವಲ್ಪ ಹುಷಾರಾಗಿ ಹುಡಿಕಿದರೆ ನಿಮಗಿಂತ ಸುಂದರ ವಾಗಿರೋ ಹುಡಿಗೀರು ದೇವರಾಣೆಗೂ ಸಿಕ್ತಾರೆ ಆದ್ರೆ ಏನ್ ಮಾಡೋದು ನನ್ನ ಮನಸು ನೀವೇ ಬೇಕು ಅಂತ ಕೇಳ್ತಿದೆ  .! ನೀವು ನೋಡಿದ್ರೆ ದೂರದಲ್ಲಿರೋ ಅಯ್ಯಂಗಾರ್ ಬೇಕರಿಗೆ ಬರ್ತಿರ . ಅಲ್ಲಿ ಸರಿಯಾಗಿ ಇಪ್ಪತೈದು  ನಿಮಿಷ ವ್ಯಾಪಾರ ಮಾಡಿ ಹೋಗಿಬಿಡ್ತಿರಾ ಆಗೆಲ್ಲ ನಂಗೆ ಅದಿಷ್ಟು ಸಂತೋಷ ಆಗುತ್ತೆ ಗೊತ್ತ ಮೇಡಂ ....? ಇಡೀ ದಿನಾ ನಿಮ್ಮನ್ನೇ ನೋಡೋ ಆಸೆ !ಹಾಗೆ ನೋಡ್ತಾ ಇರಬೇಕು ಅನಿಸುತ್ತೆ ........!
        ಮೊನ್ನೆ ದೀಪಾವಳಿ ಬಂತಲ್ಲ ಅವತ್ತು ಏನಾಯ್ತು ಗೊತ್ತಾ ಮೇಡಂ .....?
ದಿಪಾವಳಿಗೆ ಅಂತ ರಜೆ ಸಿಕ್ತಲ್ಲ . ಅ ನೆಪದಲ್ಲಿ ಆರಾಮಾಗಿ ಊರಿಗೆ ಹೊರಟೆ ಚಿಕ್ಕಬಳ್ಳಾಪುರ ತಲುಪಿದ್ದೆ  ತಡಾ ಇದ್ದಕಿದ್ದಂತೆ ನಿಮ್ಮ ನೆನಪಾಯಿತು ಸರಿ ಹೇಳಿ .. ಕೇಳಿ .. ದೀಪಾವಳಿ ರಜೆ ಇದೆಯಲ್ಲ ? ಆ ನೆಪದಲ್ಲಿ ನೀವು ಅಯ್ಯಂಗಾರ್ ಬೇಕರಿಗೆ ಬಂದೇ.. ಬರ್ತೀರಾ.. ಹಾಗೆ  ಬಂದವರು ಇಪ್ಪತೈದು  ನಿಮಿಷ ವ್ಯಾಪಾರ ಮಾಡಿ ಅವತ್ಹ್ಹು ಸಂಜೆ ಪಟಾಕಿ ಹೊಡಿಯೋ ನೆಪದಲ್ಲಿ ಮನೆ ಇಂದ ಹೊರಗೆ ಇರ್ತಿರಾ ಅನ್ನಿಸಿಬಿಡ್ತು , ನಿಮ್ಮನ್ನು ನೋಡಲೇ ಬೇಕು ಹೇಗಾದರು ಮಾಡಿ ಮಾತಾಡಿಸಲೇ ಬೇಕು ಅನಿಸ್ಥ್ಹು ಕಣ್ರೆ .. ಮತ್ತೆ ವಾಪಸು ಅದೇ ವಿಜಯನಗರದ ಅಯ್ಯಂಗಾರ್ ಬೇಕರಿ ಗೆ ಬಂದೇ , ಸಂಜೆ ಬೇಕರಿ ಅತ್ರ ನಿಮ್ಮನ್ನು ನೋಡಿದೆ ದೂರದಿಂದಲೇ ಒಂದು ಲುಕ್ ಕೊಟ್ಟೆ . ನಿಮಗೆ ಕಾಣಿಸುವ ಹಾಗೆ ಒಂದು ಸ್ಮೈಲ್ ಕೊಟ್ಟೆ . ನೀವು ನನ್ನ ನೋಡ್ತಿರೋ ಹಾಗೆ ಒಮ್ಮೆ ಕಣ್ಣು ಹೊಡೆದೆ .. ನೀವು ಏನೂ ಅನ್ನಿಲಿಲ್ವಲ್ಲ ಅದನ್ನು ಕಂಡು ನನೆಗೆ ಸ್ವಲ್ಪ ದ್ಯರ್ಯ ಬಂತು ಕಣ್ರೆ ,,,,,,, ಅವತ್ತ್ತು ರಾತ್ರಿ ನೋಡಿದ್ರೆ ನಿಮ್ಮ ಇಂದೇ ಮುಂದೆ ನಿಮ್ಮ ಅಣ್ಣ ಇದ್ರೂ ಮೇಡಂ ... ನಾನು ಹೇಗೆ ನಿಮ್ಮನ್ನ ಮಾತಾಡಿಸಲು ಸಾದ್ಯ ಹೇಳಿ ? ಅವರು ನನಗಿಂತ ಸಿನಿಯರ್ ಗಳು ಧಹಿಕವಾಗಿ - ಆರ್ಥಿಕವಾಗಿ ಕೊಡ ನನಗಿಂತ ಜೋರಗಿದ್ರು . ನಾನೇನಾದ್ರು ಅವತ್ಹ್ಹು ನಿಮ್ಮನ್ನ ಮಾತಾಡಿಸಿದರೆ ನನ್ನ ಮೊಳೆ  ಮುರಿತಿದ್ರು ಅನಿಸುತ್ತೆ , ಹಾಗಾಗಿ ನಾನು ಏನೋ ಮಾತಾಡದೆ ವಾಪಸ್ಸು ಬಂದೇ ........!
 ಆದರೆ ಇವಾಗ ಯಾವ ಭಯನು ಇಲ್ಲ .....! ಇವಾಗ ಹೇಳ್ತಿನೆ ಕೇಳಿ ನಾನು ನಿಮ್ಮನ್ನ ತುಂಬಾ ಪ್ರಿತಿಸ್ಥಾ ಇದೀನಿ ಕಣ್ರೆ ....ನೀವು ಇಲ್ಲ ಅಂದ್ರೆ ನಾನು ಸತ್ತೆ ಹೋಗ್ತೀನಿ ಕಣ್ರೀ ........!
         ನಿಮ್ಮ-ನನ್ನ ಪ್ರೀತಿಯ ವಿಷಯ ಹೇಗೂ ನಿಮ್ಮ ಮನೆಯವರಿಗೆ ಗೂತ್ತಾಗಿ ಹೋಗಿದೆ ನನ್ನನ್ನ ಕರೆದು ಎಚ್ಚರಿಕೆ ಕೊಟ್ಟಿದ್ದಾರೆ .ನನ್ನ ಮಗಳ ತಂಟೆಗೆ ಬರಬೇಡ.....!ಬಂದ್ರೆ ಕಾಲೂ ಕೈ ಮುರೀತೀನಿ ... ನಿನ್ನದು ಯಾವ ಊರೂ.. ...ಯಾರೂ ನೀನು...!ನನ್ನ ಮಗಳನ್ನು ಪ್ರಿತಿಸಬೇಡ ದ್ವೇಷಿಸು ಅಂತ ನನ್ನ ಮನಸಿಗೆ ನೋವಗೂ ಥರ ನಡೆದುಕೊಂಡಿದ್ದಾರೆ .....!
                ಅದ್ರು .....ಮೇಡಂ ..... ನಾನು ನಿಮ್ಮನ್ನು ದ್ವೆಶಿಶಲಾರೆ ಅದರ ಬದಲು ನಾನು ನಿಮ್ಮನ್ನು ಪ್ರೀತಿಸ್ತೀನಿ .... ಇವತ್ತಲ್ಲ ನಾಳೆ ದ್ಯರ್ಯ ತಂದುಕೊಂಡು ನಿಮ್ಮದೆರು ನಿಂತು "I LOVE U" ಅಂತ ಹೇಳೇ  ಹೇಳ್ತೀನಿ....!ಅಲ್ಲಾ ರೀ ನಿಮ್ಮ ತಂದೆ ಪ್ರಿತಿಸ್ಬೇಡ ನನ್ನ ಮಗಳನ್ನ ದ್ವೇಷಿಸು ಅಂತ ಹೇಳ್ತಾರಲ್ಲ .ನನ್ನೆದೆಯ ತುಂಬಾ ಪ್ರೀತಿ ಇರುವಾಗ ನಾನು ಹೇಗೇ ರೀ ನಿಮ್ಮನ್ನ ದ್ವೆಶಿಸಲಿ ......?


cell 9844773489