Wednesday, November 24, 2010

ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....


ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....

ಓದುವ ಮುನ್ನ....
ಪ್ರಿಯ ಬ್ಲಾಗಿಗರೇ... ಈ ಲೇಖನವನ್ನು ಪ್ರಕಟಿಸಿದ್ದು ಯಾರ 
ಮನಸ್ಸು ನೊಯಿಸಲಿಕ್ಕಾಗಲಿ ,ಅಥಾವ ಓಲೈಸಲಿಕ್ಕಾಗಲಿ ಅಲ್ಲ. 
ಕೆಲವೊಮ್ಮೆ ಇಂತಹ ಘಟನೆಗಳು ಗೊತ್ತಿದ್ದೊ ಅಥವ ಗೊತ್ತಿಲ್ಲದೆಯೊ 
ನಮ್ಮ ಮದ್ಯ ನೆಡೆದುಹೊಗುತ್ತವೆ ಅಂತಹ ನೂರಾರು ಘಟನೆಗಳಲ್ಲಿ ಇದು 
ಸಹ ಒಂದು. ಹೆಂಗೆಳೆಯರ ಮನಸ್ಸಿನಲ್ಲಿ ನನ್ನ ಮೇಲೆ ಕ್ಷಮೆ ಇರಲಿ.....

             ಸುಮಾರು 8-10  ವರ್ಷಗಳ ಹಿಂದೆ ...ನಾನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ  S S L C  ಓದುತ್ತಿದ್ದ ಸಮಯ School Day ಅಂತ ಒಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಇಟ್ಟುಕೊಂಡಿದ್ದರು ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಮೇಡಂ,  ಯಾರಾದರು ಕಥೆ, ಕವನ, ಚುಟುಕು ಹಾಸ್ಯ, ನಾಟಕ, ಇತ್ಯಾದಿಗಳಲ್ಲಿ ಭಾಗವಹಿಸುವವರು ತಮ್ಮ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು ಎಂದು ಮೇಮೊ ಕಳುಹಿಸಿದ್ದರು. ನನ್ನ ತರಗತಿಯ ಹೈದಾರು (ಪಕ್ಕಾ ಲೋ ಕ್ಲಾಸ್) ಹುಡುಗರ ಗುಂಪಿನ ನಾಯಕ ನಾನು , ಎಲ್ಲರೂ ಕುಳಿತುಕೊಂಡು ಕೆಲಕಾಲದ ಚರ್ಚೆಯ ನಂತರ ಒಂದು ನಾಟಕ ಮಾಡಿಯೇ ತೀರುವುದಾಗಿ ನಿರ್ಣಯಸಿದೆವು.

              ನಾಟಕದ ಒಳ ಅರ್ಥ:  1947ರ ಸ್ವಾತಂತ್ರ್ಯಕ್ಕೂ ಮೂದಲು ಭಾರತ ಬ್ರಿಟಿಷರ  ಆಳ್ವಿಕೆಯಲ್ಲಿ ಇದ್ದಾಗ ಭಾರತೀಯರು ಯಾವುದೆ ಸಭೆ, ಸಮಾರಂಭ ನೆಡೆಸುವಂತಿರಲಿಲ್ಲ, ನಾಲ್ಕೈದು ಜನ ಗುಂಪು ಕಟ್ಟಿಕೊಂಡು ರಸ್ತೆಗಳಲ್ಲಿ ಮಾತನಾಡುವಂತಿರಲಿಲ್ಲ ಹಾಗು ಯಾವುದೇ ವಿಷಯಗಳನ್ನು ಚರ್ಚಿಸುವಂತಿರಲಿಲ್ಲ. ಹಾಗೇನಾದರು ಅವರ ಮಾತಿಗೆ ಮೀರಿ ನೆಡೆದಿದ್ದಲ್ಲಿ ಬ್ರಿಟೀಷ್ ಕಾರ್ಯಕರ್ತರು ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಈ ಅರ್ಥ ಬಿಂಬಿಸುವಂತ ನಾಟಕ ಆಡುವುದು ಎಂದು ನಮ್ಮ-ನಮ್ಮಲ್ಲಿ ತೀರ್ಮಾನಿಸಿಕೊಂಡೆವು ಅದಕ್ಕೆ ಎಲ್ಲರ ಸಮ್ಮತಿಯು ಇತ್ತು. ಸರಿ next day ಇಂದ ನಾಟಕದ ಪ್ರಾಕ್ಟೀಸ್ ಶುರುವಾಯಿತು.

            ನಾಟಕದ ಅಂತಿಮ ಪ್ರಾಕ್ಟೀಸ್:ಎಲ್ಲಾ ಪ್ರಾಕ್ಟೀಸ್ ಮುಗಿಯಿತು ನಾವೊಂದು ನಾಲ್ಕೈದು ಜನ ರಸ್ತೆಯಲ್ಲಿ ಮತಾನಾಡುತ್ತಿದ್ದಾಗ ಬ್ರಿಟಿಷ  ಅದಿಕಾರಿಯಾದ ನೀನು ನಮ್ಮನ್ನು "ಆ.... ಡಮಾರ್. ಆ ಡಮಾರ್....." ಎಂದು ಪಿಸ್ತೂಲಿನಿಂದ ಕೊಲ್ಲ ಬೇಕು ಎಂದು "ರವಿ" ಯನ್ನು ನೇಮಿಸಿದೆವು. ಅವನಿಗೆ ಸ್ವಲ್ಪ ನಾಲಿಗೆ ತೊದಲಿತ್ತು. ಅವನಿಗೆ ಎಷ್ಟು ಹೇಳಿಕೊಟ್ಟರು ನಾಯಿಬಾಲ ಡೊಂಕು ಎಂಬಂತೆ ಆ..... ಡಗಾರ್. ಆ ಡಗಾರ್.... ಎನ್ನುತ್ತಿದ್ದ. ಡಗರ್ ಎಂದರೆ ಅಗಷ್ಟೆ ವೇಶ್ಯಚಾರಿಣಿ ಎಂಬ ಅರ್ಥಕ್ಕೆ ಮಾರ್ಪಾಡುತ್ತಿದ್ದ ದಿನಗಳು ಅವು. ಇದನ್ನೆಲ್ಲ ಅರಿಯದ   ಮುಗ್ದ ಮನಸ್ಸಿನ ಪುಟ್ಟ ಯುವಕರಾದ ನಾವು  ನಾಟಕ ಪ್ರದರ್ಶಿಸುವ ದಿನ ಬಂದೇ ಬಿಟ್ಟಿತ್ತು.
            
              ನಾಟಕದ ಸ್ಟೇಜಿನಲ್ಲಿ: ಅಂದಿನ ದಿನ ಒಂದು ರೀತಿಯ ಭಯ, ಅತಂಕ ನಮ್ಮಲ್ಲಿ ಮನೆ ಮಾಡಿತ್ತು. " ರೋಗಿ ಬಯಸಿದ್ದು ಹಾಲು,ಅನ್ನ. ಡಾಕ್ಟರ್ ಹೇಳಿದ್ದೂ ಹಾಲು, ಅನ್ನ" ಎನ್ನುವ ಹಾಗೆ ನಮ್ಮ ಹೆಸರನ್ನು ಕೊನೆಯಲ್ಲಿ ಸೇರಿಸಿದ್ದರು. ನಾಟಕ ಶುರುವಾಯಿತು 15 ನಿಮಿಷಗಳ ನಮ್ಮ ನಾಟಕವನ್ನು ನೋಡಲು ಜನರು ಹುಮ್ಮಸ್ಸಿನಿಂದ ಕೇಕೆ ಹಾಕುತ್ತಿದ್ದರು ( ನಾಟಕದ ವಿಷಯ ಪಾಪ ಅವರಿಗೊ ಗೊತ್ತಿಲ್ಲ)  ನಾವು ರಸ್ತೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅದಿಕಾರಿಯಾದ ರವಿ ನಮ್ಮನ್ನು ಗುರಿಯುಟ್ಟು ಆ....ಡಗಾರ್. ಆ.....ಡಗಾರ್ ಎನ್ನುತ್ತಿದ್ದರೆ ಅಲ್ಲಿದ್ದ ಅಷ್ಟು ಜನ ಸಿಳ್ಳೆಹೊಡೆದು ನಗುತ್ತಿದ್ದರು. ಮುಂದಿನ ಸೀಟುಗಳಲ್ಲಿ ಕುಳಿತ ಹುಡುಗಿಯರತ್ತ ಪಿಸ್ತೂಲ್ ಗುರಿಮಾಡಿ ಆ...ಡಗಾರ್. ಆ....ಡಗಾರ್ ಎನ್ನುತ್ತಿದ್ದಾಗ ಹುಡುಗಿಯರು ಕೂಡ ಕೇಕೆ ಹಾಕಿ ನಗುತ್ತಿದ್ದರು. ಅಷ್ಟೇ ಆದರೆ ಜನ enjay ಮಾಡಿ ನಕ್ಕು ಮನೆಗೆ ಹೋಗುತ್ತಿದ್ದರೋ ಎನೋ..! ಅದರೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ಮೇಡಂ ಕಡೆಗೊ ಗುರಿಮಾಡಿ ಆ....ಡಗಾರ್. ಆ..ಡಗಾರ್ ಎಂದ. ಅಲ್ಲಿದ್ದ ಅಷ್ಟೊ ಜನ ಶಿಕ್ಷಕರೂ ಸೇರಿ ನಗಲು ಪ್ರಾಂರಬಿಸಿದರು. ನಾಟಕ ಮುಗಿಯುತು ಅವರೆಲ್ಲ ಎದ್ದು ಮನೆಗೆ ಹೊರಟು ಹೋದರು ನಮಗೆ ಕಾದಿತ್ತು "ಮಾರಿ ಹಬ್ಬ"
       
             next day : ನಾವೆಲ್ಲ ನಾರ್ಮಲ್ ಹಾಗಿ ಶಾಲೆಗೆ ಹೊದೆವು ಹುಡುಗರೆಲ್ಲ ನಮ್ಮ ನಾಟಕ ಮೆಚ್ಚಿಕೊಂಡಿದ್ದರು ಬೆಳಗಿನ ಪ್ರಾರ್ಥನೆ ಮುಗಿದು ಶಾಲೆಗೆ ಹೊಗುವ ಸಮಯದಲ್ಲಿ ಸತೀಶ್ ಅವನ ಗ್ರೂಪ್ ಪ್ರಾಂಶುಪಾಲರನ್ನ ಕಾಣತಕ್ಕದ್ದು ಎಂದು ಮೇಮೋ ಕಳಿಹಿಸಿ ಕರೆಸಿಕೊಂಡರು. ಕಾರಣ ಗೊತ್ತಿರಲಿಲ್ಲ ಹೊಳಗಿದ್ದ ಮೇಡಂ ಬಡ್ಡಿಮಕ್ಳ ನನ್ನನ್ನೇ "ಡಗಾರ್" ಅಂತ ಕರೀತಿರಾ.... ಅಂತ ಹೇಳಿ, ನಾಟಕ ಮಾಡಿದ ತಪ್ಪಿಗೆ ಬಾಸುಣಿಗೆ ಬರೊ ತರ ಹೊಡೆದು ಕಿವಿ  ಹಿಡಿದು ದಿನವಿಡೀ ಕುರ್ಚಿಯಲ್ಲಿ ಕುಳ್ಳರಸಿದ್ದರು. 

SATISH N GOWDA

10 comments:

ವಸಂತ್ said...

Nic....

ಸಾಗರದಾಚೆಯ ಇಂಚರ said...

aa age nalli inthaha eshto ghatanegalu nadedirutte
ade maja alva nenapu maadikoloke eaga

Shashi jois said...

ಸತೀಶ್,
ನಿಮ್ಮ ನಾಟಕದ ಕತೆ ಓದಿ ತುಂಬಾ ನಗು ಬಂತು .ಪಾಪ ಮೇಡಂ ಗೆ ಹೇಗೆ ಆಗಿರಬಹುದಲ್ವಾ ಆ ಪದ ಕೇಳಿ

ಸತೀಶ್ ಗೌಡ said...

ಧನ್ಯವಾದಗಳು ವಸಂತ್ ನನ್ನವಳಲೋಕಕ್ಕೆ ಸ್ವಾಗತ

ಸತೀಶ್ ಗೌಡ said...

ಇಂಚರ ಸರ್ ಖಂಡಿತ ನೆನಪು ಮಾಡಿಕೊಂಡು ನಿಮ್ಮ ಮುಂದೆ ಬರೆಯಲು tri ಮಾಡುತ್ತೇನೆ .... ಈ ಲಿಂಕನ್ನು ನೋಡಿ ನೀವೂ ಕಂಡಿತ ಖುಷಿಯಗ್ತಿರ http://nannavalaloka.blogspot.com/2010/11/blog-post_10.html

ಸತೀಶ್ ಗೌಡ said...

ಶಶಿ ಮೇಡಂ ನಿಜ . ಪಾಪ ಅನುಸುತ್ತೆ ನಾನು ಕೊಡ ಅವರಿಗೆ ತುಂಬಾ ಸರಿ ಸಾರೀ ಕೆಳಿದ್ದಿನೆ, ಅವರು ಇವಗ್ಲು ಕೊಡ ಟಚ್ ನಲ್ಲಿದ್ದಾರೆ. ಈ ಲಿಂಕನ್ನು ನೋಡಿ ತುಂಬಾ ಖುಷಿ ಪಡ್ತೀರ
http://nannavalaloka.blogspot.com/2010/07/blog-post_05.html

ಶಿವಪ್ರಕಾಶ್ said...

ha ha ha

ಜಲನಯನ said...

ಸತೀಶ್..ಡಗಾರ್ ಗೆ ಡಮಾರ್ ಆಗ್ತಾ ಇದೆಯಾ ಈಗ..?? ಹಹಹ ಚನ್ನಾಗಿದೆ ನಿಮ್ಮ ಕಥೆಯ..ವ್ಯಥೆ...

ಸತೀಶ್ ಗೌಡ said...

dhanyavadagalu shivaprakasha

ಸತೀಶ್ ಗೌಡ said...

thanks jalanayana ravare comentesadakke . . . . .