Thursday, November 11, 2010

ಅವಳು ನನ್ನಾಕೆ...


ಅವಳು ನನ್ನಾಕೆ... 
ಹುಣ್ಣಿಮೆಯ ರಾತ್ರಿಯಲ್ಲಿ
ನಿಂತಿದ್ದ ಸುಂದರ ಹುಡುಗಿಯ
ಸೌಂದರ್ಯದ ಸೊಬಗನ್ನು ಕಂಡು
ಚಂದಿರನೂ ಕೂಡ ಒಮ್ಮೊಮ್ಮೆ ಕಣ್ಣು ಮಿಟಿಕುಸುತ್ತಿದ್ದ
ಬಹುಶಃ ಇರಬೇಕು ಅವಳು ನನ್ನಾಕೆ..!

ಬೆಳ್ಳಂಬೆಳಗಿನ ಮುಂಜಾನೆಯಲ್ಲಿ
ಜುಳು ಜುಳು ಹರಿಯುವ ಜಲಧಾರೆಯಲಿ
ಮಿಂದು ಬರುತ್ತಿದ್ದ ಯುವತಿಯ ಕಂಡ
ಆ ಸೂರ್ಯನೂ ಒಂದು ಕ್ಷಣ ಕೆಂಪಾಗಿದ್ದ
ನನಗನಿಸುತ್ತೆ ಅವಳು ನನ್ನಾಕೆ..!

ಇಂದ್ರಲೋಕದ
ರಂಗು ರಂಗುನ ನೃತ್ಯಮಂದಿರದಲ್ಲಿ
ನಾಟ್ಯಮಯೂರಿ ನಾರಿಯರ ಸಮ್ಮುಖದಲ್ಲಿ
ನಾರ ಮಡಿಯಲ್ಲಿ ಬಂದ ನಾರಿಯ ನೆಡೆಗೆಯ ಕಂಡು
ನೃತ್ಯ ಮಂದಿರದ ಸಭೆಯೇ ಒಮ್ಮೆ ದಂಗು ಬಡಿದಂತಿತ್ತು
ಬಹುಶಃ ಇರಬೇಕು ಅವಳು ನನ್ನಾಕೆ..!

ಕಡು ಕಗ್ಗತ್ತೆಲೆಯ ನಡು ರಾತ್ರಿಯಲಿ
ಧರೆಗಿಳಿದ ದೇವತೆಯ
ಮೋಹಕ ಕಣ್ಣುಗಳನೋಟಕ್ಕೆ
ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಒಮ್ಮೆ ಮೋಹ ಉಂಟಾಯಿತು
ಬಹುಶಃ ಇರಬೇಕು ಇವಳು ನನ್ನಾಕೆ..?


SATISH N GOWDA