Monday, May 24, 2010

ಪ್ರೀತಿಗೆ ಕೊನೆ ಇಲ್ಲ

ಪ್ರೀತಿಗೆ ಕೊನೆ ಇಲ್ಲ


ನಿನ್ನದೇ ಧ್ಯಾನ
ಅಂತೇನೂ ಅಲ್ಲಾ
ನಿನ್ನ ಬಿಟ್ಟು ಬೇರೇನೂ
ನೆನಪಾಗೋಲ್ಲ ಅಷ್ಟೆ

ನಿನ್ನ ಬಗ್ಗೆನೇ ಪದ್ಯ
ಬರಿತೀನಿ ಅಂತಲ್ಲ
ಬರೆದ ಪದ್ಯದಲ್ಲೆಲ್ಲಾ
ನೀನಿರ್ತಿಯಾ ಅಷ್ಟೆ

ಕಣ್ಮುಚ್ಚಿ ದಿನಾ ನಾನು
ನಿದ್ದೆ ಮಾಡ್ತೀನಿ ಅಂತಲ್ಲ
ಕಣ್ಣಿಟ್ಟರೆ ಮಾಯವಾಗ್ತೀಯ
ಅನ್ನೋ ಭಯ ಅಷ್ಟೆ

ನಿನ್ನ ಬಿಟ್ಟು ನನಗೆ
ಬಾಳಕ್ಕಾಗೊಲ್ಲಾ ಅಂತಲ್ಲಾ
ಅಥ೯ವಿಲ್ಲದೇ ಬಾಳಬೇಕಲ್ಲಾ
ಅನ್ನೋ ಬೇಜಾರು ಅಷ್ಟೆ !!!

 ತಾಯಿಯ ಪ್ರೀತಿಗೆ ಶರಣಾಗದವರಿಲ್ಲ ,
ತಂದೆಯ ಪ್ರೀತಿಗೆ ತಲೆ ಭಾಗದವರಿಲ್ಲ ,
ಪ್ರೇಯಸಿಯ ಪ್ರೀತಿಗೆ ಮರುಳಾಗದವರಿಲ್ಲ,
ಸ್ನೇಹಿತನ ಪ್ರೀತಿಗೆ ಕೊನೆ ಇಲ್ಲ 


ನಿಮ್ಮವ ಸತೀಶ್ ಏನ್ ಗೌಡ 

Thursday, May 20, 2010

Frind Ship ಮಾಡಲು ಜಿಪುಣ ತನ ವೇಕೆ..?

Frind Ship ಮಾಡಲು ಜಿಪುಣ ತನ ವೇಕೆ..?

      ಕ್ತ ಸಂಬಂಧಗಳ ವಿಷಯದಲ್ಲಿ ನಮಗೆ ಛಾಯ್ಸ್ ಇಲ್ಲ ನಿಜ ಆದರೆ ಗೆಳೆತನ ವಿಷಯದಲ್ಲಿ ತುಂಭಾ ಛಾಯ್ಸ್ ಗಳಿವೆ. ಹಾಗಂತೆ ಅದಕ್ಕಾಗಿ ಒಂದು ಕೇರ್ ಅಥಾವ ಪಾಲಿಸಿ ಇಲ್ಲದಿದ್ದರೆ ಹೇಗೆ ಹೇಳಿ..? ನಾನು ಸಾಮಾನ್ಯವಾಗಿ ಲವ್ ಮ್ಯಾರೇಜ್ ಮಾಡಿಕೊಂಡು ಹತ್ತು ಹನ್ನೇರ‍ಡು ತಿಂಗಳು ಸಂಸಾರ ಮಾಡಿದ ದಂಪತಿಗಳನ್ನು ಬೇಟೆಯಾದಾಗ ಅವರ ಬಾಳಿನಲ್ಲಿ ಪ್ರೀತಿ ಹಾಗು ಸಂತೋಷಗಳು ಎಷ್ಟರ ಮಟ್ಟಿಗೆ ಉಳಿದಿದೆ ಎಂಬುದನ್ನು ಗಮನಿಸುತ್ತಿರುತ್ತೇನೆ . ಹೀಗೆ ಸಮಯವಿದ್ದರೆ ಲೆಕ್ಕಹಾಕುತ್ತಿರುತ್ತೇನೆ ಪ್ರೀತಿ ಪ್ರೇಮವನ್ನು ಲೆಕ್ಕಹಾಕಲು ನಿಶ್ಚಿತ ಮಾನದಂಡಗಳೆನು ಇಲ್ಲ ಅಂದುಕೊಳ್ಳಿ . ಕೆಲವು ಪ್ರೆಶ್ನೆಗಳನ್ನು   ಅವರಿಗೆ ಕೇಳಿಕೊಳ್ಳಲು ಬಿಡುತ್ತೆನೆ .  ತನ್ನಲ್ಲಿ ಹೊಳೆಯುವ ಕೆಲ ಪ್ರೆಶ್ನೆಗಳು ನಾನು ಇವನನ್ನು ಯಾಕೆ ಕಟ್ಟಿಕೋಂಡೆ.? ನಾನು ಇವಳನ್ನೇ ಏಕೆ ಮದುವೆ ಯಾದೆ.? ಅವತ್ತಿಗದು ಅನಿವಾರ್ಯ ವಾಗಿತ್ತಾ..? ಮಾಡಿಕೋಂಡ ಮದುವೆ ಹತ್ತಾರು ವರ್ಷಗಳ ನಂತರವೂ ಅರ್ಥ ಪೂರ್ಣವಗಿ ಉಳಿದಿದೆಯೇ.? ಪ್ರೀತಿಯ  ತೀವ್ರತೆಗಳಲ್ಲಿ ಏರುಪೇರು ಇರಬಹುದು ಸಹಜ ಇವತ್ತು ಬೆಳಗ್ಗೆ ಚಂದಮಾಮನಂತಿರುವ ಹೆಂಡತಿ ನಾಳೆ ಮದ್ಯಾನದ ಹೊತ್ತಿಗೆ ಒಂದಿಷ್ಟು ತವರುಮನೆಗೆ ಹೋಗಿಬರಬಾರದೇ ಅನ್ನಿಸಬಹುದು.
             ಅಥಾವ ಗಂಡ ಟೊರಿಗೆ ಹೋದರೆ ಒಂದಿಷ್ಟು ದಿನ ನೆಮ್ಮದಿಯಾಗಿರಬಹುದಲ್ಲಾ..? ಎಂದು ತನ್ನ ಹೆಂಡತಿಗೆ ಅನಿಸಿದರೆ ಅದು ತೀರಾ ದಾಂಪತ್ಯ ಹಳಸಿ ಹೋದುದರ ಸಂಕೇತವೇನಲ್ಲ . ಏಕೆಂದರೆ ಎಷ್ಟೇ ಪ್ರೀತಿಯಿಂದ ಮಗುವನ್ನು ಎತ್ತಿಕೊಂಡರೂ , ತುಂಭಾ ಹೊತ್ತು ಅಪ್ಪಿಕೋಂಡರೆ ಆ ಮಗುವಿಗೆ ಉಸಿರು ಕಟ್ಟಿದಂತಾಗುತ್ತದೆ . ಅಂಥ ಚಿಕ್ಕ ಪುಟ್ಟ ರಿಲೀಫ್  ಗಳನ್ನು ದಾಂಪತ್ಯ ಬೇಡುವುದರಲ್ಲಿ ತಪ್ಪೇನಿಲ್ಲ ನಾನು ಅದರ ಬಗ್ಗೆ ಮಾತಾಡುತ್ತಿಲ್ಲ ಆದರೇ ಒಬ್ಬ ವ್ಯಕ್ತಿಯನ್ನ ಅಪ್ಪಿಕೋಂಡು ತುಂಬ ತಪ್ಪು ಮಾಡಿದೆ ಅಂತ ಪದೇ ಪದೇ ಗಂಭೀರವಾಗಿ ಅನಿಸತೊಡಗಿದಿಯ.? ಅದು ನಿಜವಾಗಿಯೋ ಹಳಸಿದುದರ ಪರಿಣಾಮ .
                ಎಷ್ಟೋ ಸಲ ನಾವು ಬೇರೆ ದಾರಿಯಿಲ್ಲ ಎಂಬ ಕಾರಣಕ್ಕೆ ಕೆಲವು ಕೆಲಸಗಳನ್ನು ಮಾಡಿಬಿಟ್ಟಿರುತ್ತೆವೆ ಸರಿಯಾಗಿ ಅಲೋಚಿಸಿ ನೋಡಿದರೆ ಬೇರೆದಾರಿಗಳನ್ನು ನಾವು ಹುಡುಕುವುದೇ ಇಲ್ಲ ಅಂತ ಎಷ್ಟೊ ವರ್ಷಗಳಾದ ಮೇಲೆ ನಮ್ಮ ಗಮನಕ್ಕೆ ಬರುತ್ತದೆ . ಮಾಡಲು ಬೇರೆ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಟೇಸ್ಟಿಗೆ ಸಂಭಂದವೆ ಇಲ್ಲದ ಒಂದು ಸಿನಿಮಾಕ್ಕೆ ಹೊರಟುಬಿಟ್ಟಂತೆ , ಅಥಾವ ಕ್ಲಾಸಿನಲ್ಲಿದ್ದವಳು ಇವಳೊಬ್ಬಳೆ ಸುಂದರಿ ಎಂಬ ಕಾರಣಕ್ಕೆ ಅವಳ್ಯವಳನ್ನೋ ತನ್ನ ಟೇಸ್ಟಿಗೆ ಸಂಭಂದವೇ ಇಲ್ಲದಂತೆ ಅವಳನ್ನು ಪ್ರೀತಿಸಿ ಬಿಟ್ಟಿರುತ್ತೇವೆ .  ಸಿನಿಮಾಕ್ಕೆ ಹೊಗುವಬದಲು ಪುಸ್ತಕ ಓದಬಹುದಿತ್ತು. ಸಂಗೀತ ಕೇಳಬಹುದಿತ್ತು, ಸುಮ್ಮನೆ ಪಾರ್ಕ್ ಗೆ ಹೋಗಬಹುದಿತ್ತು. ಅಂತೆಲ್ಲ ಅಮೇಲೆ ಅನಿಸುತ್ತದೆ ಇವಲನ್ನು ಪ್ರೀತಿಸುವ ಬದಲು ಗೆಳೆಯರಾಗಿರಬಹುದಿತ್ತು ಅಂತಲೂ ಅನಿಸಿಬಿಡುತ್ತದೆ . ನೀವು ಪರೀಕ್ಷಿಸಿ ನೋಡಿ ಅತ್ಯತಮ ಗೆಳೆಯನಾಗಿದ್ದ ಒಬ್ಬ ವ್ಯಕ್ತಿ ಮದುವೆಯಾಗಿ ಅತೀ ಕೆಟ್ಟ ಗಂಡನೆನಿಸಿಕೊಂಡಿರುತ್ತಾನೆ . ಗೆಳೆತನದ ಅವನನ್ನು ಒಂದು ವರ್ಷದಿಂದ ಒಂದೇ ಸಮನೆ ಗಬಗಬನೆ ಪ್ರೀತಿಸಿದ್ದು ಅಲ್ಲದೆ ಇವನನ್ನು ಬಿಟ್ಟರೆ ಬೇರೆ ಗಂಡನಿಲ್ಲ ಎಂದು ಮದುವೆಯಾದದ್ದು ಇವಳತಪ್ಪು ಅಲ್ಲ ಅಲ್ಲವೇ.?
ಎಷ್ಟೊ ಸಲ ಹುಡುಗಿಯರನ್ನ ಕೇಳಿ ನೋಡಿ "ಅವನನ್ನು ಯಾಕೆ ಪ್ರೀತಿಸಿದೆ..? " ಅಂತ ಕೇಳಿದರೆ  ಈ ಪ್ರೇಶ್ನೆಗೆ ಉತ್ತರ ಹೇಗೆ ಹೇಳುತ್ತಾರೆ  "ಮನಸ್ಸು ಯಾವ ಕ್ಷಣದಲ್ಲಿ, ಯಾರ ಮೇಲೆ, ಹೇಗೆ ವಾಲುತ್ತದೋ..?" ಎಂಬಂತಹ ಸ್ಟುಪ್ಪಿಡ್ ಉತ್ತರಗಳನ್ನು ಕೊಡುತ್ತಾರೆ . ನಿಜವಾಗಲು ಆ ಉತ್ತರ ಸರಿಯಲ್ಲ ಸಮಕ್ಕೆ ಸರಿ ಇರಬಹುದು ಅಷ್ಟೆ. ಅವತ್ತು ಆ ಕ್ಷಣದಲ್ಲಿ ಅವನು ಸರಿ ಅನ್ನಿಸಿದ್ದ, ಅವತ್ತು ಆ ಕ್ಷಣದಲ್ಲಿ ಮತ್ತೊಬ್ಬ ತನಗೆ ಪರಿಚಯವಿರಲಿಲ್ಲ , ಅವತ್ತಿನ ಆಕ್ಷಣದಲ್ಲಿ ಅವಳ ಬದುಕಿಗೆ ಬೇರೆ ಪರ್ಯಯ ವ್ಯವಸ್ತೆ ಇರಲಿಲ್ಲ, ಅವತ್ತಿನ ಕ್ಷಣ ಅವಳು ಕೊಲಂಕುಷವಾಗಿ ಏನನ್ನೂ ಯೋಚಿಸುವ ಸ್ತಿತಿಯಲ್ಲಿರಲಿಲ್ಲ , ತನ್ನ ನಿಲವು, ಅಂತಸ್ತು ವ್ಯಕ್ತಿಗಳಿಗೆ ಸಂಭಂದವೇ ಇಲ್ಲದಂತ , ಕೆಲಸಕ್ಕೆ ಬಾರದ ಒಬ್ಬ ಡಿಂಗೋ ವ್ಯಕ್ತಿಯನ್ನ ಪ್ರೀತಿಸಿ  ಮದುವೆಯಾದಳು ಎಂಬುದಷ್ಟೆ ನಿಜ. ಇಂಥ ತಪ್ಪುಗಳು ಕೇವಲ ಮದುವೆಯ ವಿಷಯದಲೂ ಅಥವಾ ಇನ್ನಾವುದೆ ವಿಷಯದಲ್ಲೂ ಅಗಿರುವುದಿಲ್ಲ ಪ್ರತಿಯೊಂದು ಹಂತದಲ್ಲಿ ಕೂದ ಮುನ್ನೆಡೆಯುತ್ತಿದೆ. ಕಾಲೇಜಿಗೆ ಹೋದ ಹೊಸತರಲ್ಲಿ ಬೇರೇ ಯಾರು ಸಿಕ್ಕಲಿಲ್ಲವೆಂದು , ಬಸ್ಸಿನಲ್ಲಿ ಜೊತೆ ಅಂತ ಯಾರು ಇರಲಿಲ್ಲ, ನನ್ನ ಆತ್ಮ ಸಂಗಾತಿ ಬೇರೆ ಯಾವುದೋ ಊರಲ್ಲಿ ಕುಕ್ಕರಿಬಡಿದಿದ್ದರಿಂದ, ನಮ್ಮ ಊರಿನವನಲ್ಲಾ .? ಇವೆ ಅಭಿಪ್ರಾಯದಿಂದ ನಮ್ಮ ವ್ಯಕ್ತಿತ್ವ ,ಬುದ್ದಿವಂತಿಕೆಗಳಿಗೆ ಸಂಬಂದ ವೇ ಇಲ್ಲದ ಒಬ್ಬನನ್ನ ನಾವು ಫ್ರೆಂಡ್ ಮಾಡಿಕೊಂಡು ಬಿಟ್ಟಿರುತ್ತೆವೆ . ಪ್ರೆಂಡ್ ಶಿಪ್ ಆಗಲಿ ಎಂದುಕೊಳ್ಳೊಣ ಆತ ಅಥಾವ ಆಕೆ ಅದೇ ಕಾರಣಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಇಮೋಷನ್ ಹಾಗಿ ಡಿಪಂಡೆಂಟ್ ಆಗಿಬಿಟ್ಟರೆ ಕೋನೆಗಾದರು ಸುಖ ಸಿಗುತ್ತದ..?
            ತೀರಾ ಚಿಕ್ಕ ವಯಾಸ್ಸಾದರೆ ಆ ಮಾತು ಬೇರೆ ಬಿಡಿ . ತನ್ನ ಕೇರಿಯಲ್ಲೆ ತನ್ನ ಗೆಳಯರನ್ನು ಆಯ್ಕೆ ಮಾಡಿಕೊಳ್ಳಬೇಕು . ತಾನು ಓದುವ ಶಾಲೆಯಲ್ಲಿ ಸಿಕ್ಕವರೆ ಗೆಳೆಯರಾಗಬೇಕು, ಆದರೆ ಬೇಳೆಯುತ್ತ ನಮ್ಮ ಬದುಕಿಗೆ ಸಾವಿರ ಪಾಟಗಳನ್ನು    ಕೊಡುತ್ತದೆ . ವಯಸ್ಸಿನಲ್ಲೆ ಅಂತರವಿಲ್ಲದವರು ಗೆಳೆಯರಾಗುತ್ತಾರೆ , ಎಂಥಾ ಸಂದರ್ಬದಲ್ಲೊ ಮಿಸ್ ಬಿಹೆವ್ ಮಾಡದ, ದಾರಿ ತಪ್ಪಿಸದ, ಸುಳ್ಲು ಹೇಳದ , ವಂಚಿಸದ, ನಮ್ಮನ್ನು ತೊರೆದರೊ ನಮ್ಮ ಬಗ್ಗೆ ಕೆಟ್ತ ಮಾತಾಡದ ಗೆಳೆಯರು ಸಿಗುತ್ತಾರೆ  . ನಿಮಗೆ ಜಾಲಿ ಲೈಪ್ ನಲ್ಲಿ ಆಸಕ್ತಿ ಇದ್ದರೆ ಅದಕ್ಕಾಗಿಯೇ ಒಂದು ಸಮೂಹ, ಸಾಹಿತ್ಯಾಸಕ್ತಿ ಇದ್ದರೆ ಅದಕ್ಕಂತಲೇ ಒಂದು ಗೆಳೆಯರ ಬಳಗ , ನಿಮಗೆ ಹಣಕಾಸಿನತೊಂದರೆ ಇದ್ದರೆ ಹಣಕಾಸಿನ ವ್ಯವಾಹರಕ್ಕಾಗಿಯೇ ಕೆಲವು ಮಿತ್ರರು, ಹೀಗೇ ಹತ್ತು ಹಲವಾರು ಗೆಳೆಯರು ಸಿಗುತ್ತಾರೆ . ಅಂಥ ಒಂದು ಛಾಯ್ಸ್ ನಿಮ್ಮ ಕೈಲಿದೆ.
ಆದರೆ ನಾವು ಅಂಥದರ ಬಗ್ಗೆ ತಿಂಕ್ ಮಾಡುವುದೇ ಇಲ್ಲ ಹೊಸ ಗೆಳೆತನಗಳತ್ತ ಕೈ ಚಾಚುವುದೇ ಇಲ್ಲ  ಇರೊ ಚಿಕ್ಕ ಊರಿನಲ್ಲೆ , ಅದೇ ಕೇರಿಯಲ್ಲೆ, ಮತ್ತದೇ ಬಾರ್ ಗಳಲ್ಲಿ ನಮ್ಮನ್ನು ವಾಚಾಮಗೋಚರ ಹೊಗಳುವವರೊ ಅಥಾವ ನಮ್ಮ ಖರ್ಚಿನಲ್ಲೆ ಕುಡಿದು ಹೊಗುವವರೊ ಅಂಥವರೊಂದಿಗೆ ನಮ್ಮದೊಂದು ವಲಯ ಸೃಷ್ಟಿಸಿಕೊಂಡು ಬಿಟ್ಟಿರುತ್ತೆವೆ  . ವರೆತು ಅದರಾಚೆಗೆ ನಾವು ಬೆಳೆಯುವುದೆ ಇಲ್ಲ . ಅವರೂ ಕೂಡ ನಮ್ಮನ್ನು ಬೆಳೆಸುವ ಸಾದ್ಯತೆಗಳಿರುವುದಿಲ್ಲ . ಕೊಂಚ ಪ್ರಯತ್ನಿಸಿ ನೋಡಿ ಹೊಸಗೆಳೆತನಗಳಲ್ಲಿ ಸುಖವಿದೆ, ಸೌಖ್ಯವಿದೆ . ಹೋಸ ಜೀವನೋತ್ಸಹ ತುಂಬಿ(ನುಗ್ಗಿ)ಬರುವ ಸಾದ್ಯತೆಗಳಿವೆ . ಒಂದು ನಿಮಿಷ ನಿಲ್ಲಿ,
           ಒಂದು ಆಸ್ತಿ ಖರೀದಿಸಿದರೆ ಇದರಿಂದ ಎಷ್ಟು ಲಾಭ ಎಂದು ನೀವು ಯೋಚಿಸುತ್ತಿರೂ ಇಲ್ಲವೂ, ಈ ಗೆಳತನದಿಂದ ನಷ್ಟವಿಲ್ಲ ತಾನೆ ಅಂಥ ನಾನಂತೂ ಖಂಡಿತ ಯೋಚಿಸುತ್ತೆನೆ . ಹುಟ್ಟಿಕೊಂಡ ಹೊಸ ಮೈತ್ರಿ ನನ್ನನ್ನ ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತದ.? ನನ್ನ ಮನಸ್ಸಿಗೆ ಹೊಸ ಅನುಭವವನ್ನು ಹುಟ್ಟು ಹಾಕುತ್ತದ..? ನನ್ನ ಮನೆಗೆ ಮತ್ತು ನನ್ನ ಮನಸ್ಸಿಗೆ ಒಳ್ಳೆಯದಾಗುತ್ತದ..? ಕೊನೆ ಪಕ್ಷ ಒಂದಿಷ್ಟು ನನ್ನಲ್ಲಿರುವ ದುಗುಡ ನೀಗಿ ಮನಕ್ಕೆ ಚಿಕ್ಕ ಚಿಕ್ಕ ಸಂತೋಷಗಲನ್ನು ನೀಡುತ್ತದ.? ಅಂತ ಖಂಡಿತ ಯೋಚಿಸುತ್ತೆನೆ .
       "ಪ್ರಾಣಕ್ಕೆ ಪ್ರಾಣಕೊಡ್ತಿನಿ ಕಣೇ" ಅಂಥ ಎಮೋಷನಲ್ ಆಗಿ ಮಾತಾನಾಡುವ ಗೆಳೆಯರಿಗಿಂತ ಪ್ರಾಣ ತಿನ್ನದೆ ತಮ್ಮ ಪಾಡಿಗೆ ತಾವಿದ್ದು ಭಾವ , ಬುದ್ದಿ ಬೆಳಸುವ ಗೆಳೆಯರ ಅವಶ್ಯಕತೆ ನಿಮಗಿದೆ ಎಂದು ಅನಿಸುವುದಿಲ್ಲವೆ.?
my e-mail
satishgowdagowda@gmail
my blog
www.nannavalaloka.blogspot.com
my cell
+91 98447 73489

Tuesday, May 18, 2010

ಹತ್ತಿರದಲ್ಲಿ ನೀನಿಲ್ಲ ನನ್ನೋಳಗೆ ನಾನಿಲ್ಲ ..



ಹತ್ತಿರದಲ್ಲಿ ನೀನಿಲ್ಲ ನನ್ನೋಳಗೆ ನಾನಿಲ್ಲ ..
ಪ್ರೀತಿಯ  ಪಾಪು ... .
ಬೆಳಗ್ಗೆ ಎದ್ದಿದ್ದೆ ಲೇಟು ಹಾಗೆ ನಿದ್ದೆ ಕಣ್ಣಲ್ಲಿ ಕಾಲು ಚಾಚಿ ಕುಳಿತುಕೊಂಡಿದ್ದವನ ಕೈಯಲ್ಲಿ ಉರಿಯುತ್ತಿದ್ದ ಸಿಗರೇಟು ಆರಿಸಿ ಕಿಟಕಿಯಾಚೆ ಕಣ್ಣಾಡಿಸಿದರೆ ಯಾರು ಕಾಣಲಿಲ್ಲ ಕಿವಿಯಲ್ಲಿ "ಯಾರೇ  ನೀ ದೇವತೆಯ ಹಾಡು" ತಂಪು ನೀಡುತ್ತಿತ್ತು. "ಹತ್ತಿರದಲಿ ನೀನಿಲ್ಲ , ನನ್ನೊಳಗೆ ನಾನಿಲ್ಲ" . ಇವತ್ತು ಬೆಳಗ್ಗೆ ಏಳುತ್ತಲೆ ನಿನ್ನಯ ನೆನಪು ನನಗೆ ಕಾಡಿದ ರೀತಿ ಇದು .  ನೀನು ಜೊತೆಯಲ್ಲಿದ್ದರೆ ಎರಡು ಹಸಿ ಮುನಿಸು . ಒಂದು ಪುಟ್ಟ ಜಗಳ , ಮೂರು ತಬ್ಬುಗೆ ಜೊತೆಗೆ ಹೋಟ್ಟೆಮೇಲಿನ ಹುಟ್ಟು ಮಚ್ಚೆಗೆ  ಹತ್ತು ಮುತ್ತು , ಇನ್ನೂ ಏನೇಲ್ಲಾ ಅಗುತ್ತಿತ್ತೊ..? ಹಟಕ್ಕೆ ಬಿದ್ದರೆ ಥೇಟ್ ಪಾಪಚ್ಚಿ. ಅದೇ ಪ್ರೀತಿಯಲ್ಲಿ ಅಮ್ಮನನ್ನೆ ಮೀರಿಸುವ ನಿನ್ನ ಗುಣ ಎಷ್ಟೊ ಚನ್ನ ನನಗೆ ಚಿನ್ನ.
          ನಿನ್ನ ಬಗ್ಗೆ ನನ್ನ ಹೊಸ ತಕರಾರುಗಳೆನು ಇಲ್ಲ ಕಣೇ . ಒಮ್ಮಮ್ಮೆ ಮನೆಯಿಂದ ಹೊರಬಂದರೆ ಹಾಗೆ ನೆನಪಾಗಿ ಬಿಡುತ್ತಿಯ , ಉರಿವ ಗಾಯದಂತೆ , ಮನೆಯಲ್ಲಿ ಮಗುವನ್ನು ಬಿಟ್ಟು ಬಂದ ತಾಯಿಯ ಹಾಗೆ  ನೆನಪಾಗುತ್ತಿಯಲ್ಲ ..? ಹಾಗೆಲ್ಲ ಒಂದು ಕ್ಷಣ ಮಂಕಾಗುತ್ತೆನೆ . ಗತಿಸಿ ಹೋದ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಜೀವನದ ಉಳಿದ  ಕಾಲವನ್ನು ಕಳೆಯುತ್ತಿದ್ದೆನೆ . ಅಸಲಿಗೆ ನಿನು ಸಿಗದೇ ಹೋಗಿದ್ದರೆ ಈ ಬದುಕು ಎಷ್ಟು ವ್ಯರ್ಥವಾಗುತ್ತಿತ್ತು ಅಲ್ಲವೇ ಹುಡುಗಿ . ಸಮುದ್ರದ ಮದ್ಯ ಬಿದ್ದ ಮಳೆ ಹನಿಯ ಹಾಗೆ, ಎಂದು ಅಂದುಕೂಂಡು ಸಾಗುತ್ತಿದ್ದೆನೆ .
              ನಿಜ ಕಣೇ ಈ ಬದಕು ನನಗೆ ಎಲ್ಲವನ್ನು ಕೊಟ್ಟಿದೆ .  Iam Reyaly happy With My Lif ಈಗಷ್ಟೆ ಮಿಲಟರಿಯಿಂದ ಬಂದಂತೆ ಕಾಣುವ ನಮ್ಮಪ್ಪನ ದೋಡ್ಡ ಮೀಸೆ, ನಿಜಕ್ಕೂ ನಮ್ಮಪ್ಪ ಹೃದಯವಂತ , ಕೈಗೆ ಮೊಬೈಲ್ ಕೊಟ್ಟರೆ ಇದನ್ನ ಸ್ವಿಚ್ ಆಫ್ ಮಾಡೋದು ಹ್ಯಾಗೊ ಅನ್ನೊದನ್ನು ಕಾಣದೆ ಪಜೀತ ಪಡುವ ಅಮ್ಮನ ಮುಗ್ದ ಮನಸ್ಸು , ಹಾಗು ಅಮಾಯಿಕಥೆ , ಚನ್ನಾಗಿರುವುದೆಲ್ಲವು ಅಣ್ಣನಿಗೆ ಇರಲಿ ಎಂದು ಉಳಿದದ್ದರಲ್ಲೆ ತೃಪ್ತಿಪಡುವ ತಮ್ಮ , ಗಂಡನಿಂದ ಮುಚ್ಚಿಟ್ಟ ಪ್ರೀತಿಯನ್ನು ತಮ್ಮನಿಗೆ ಸಿಗಲೆಂದು ಕಾಯ್ದು ಧಾರೆಯೆರೆಯುವ ಮೂವರು ಅಕ್ಕಂದಿರು ಮತ್ತು ತಮ್ಮನ ಮದ್ಯ ಕಂಪನಿಗೆ ಓಡಾಡಲು ಸಾಯಂಕಾಲದ ಸೂರ್ಯನಂತೆ ಹೊಳೆಯುವ ನನ್ನ ಕೆಂಪು ಕಲರ್ pulsar  ಬೈಕು . ನನಗೆ ಇನ್ನೇನು ಬೇಕೆತ್ತು ಹೇಳು.?
      ಹಾಗೆ ಸಂತೋಷವಾಗಿದ್ದವನ ಮೊಬೈಲಿಗೆ ಅವತ್ತು ಅನೀರಿಕ್ಷಿತವಾದ ಫೋನ್ ಕಾಲ್ ಬಂದದ್ದು ನಿಜಕ್ಕೊ ಆಶ್ಚರ್ಯವಾಗಿತ್ತು. ಅದು ರಾಂಗ್ ನಂಬರ್ "ಮಂಜು ಇದಾನಾ..?" ಅಂತ ಕೇಳಿದ್ದೇ ಕೇಳಿದ್ದು ಇದು ಮಂಜು ನಂಬರ್ ಅಲ್ಲ ಅಂತ ಹೇಳುವುದೊರೊಳಗಾಗಿ ನೀನು ಬಿಟ್ಟು ಬಿಡದೆ ಒಂದರ್ದಘಂಟೆ  ಬೈದದ್ದು ಎಲ್ಲ ಆದಮೇಲೆ ನಾನು ಮಂಜು ಅಲ್ಲ ಕಣ್ರೀ ... ಸತೀಶ್ ಅಂಥ ಮೇಲು ದ್ವನಿಯಲ್ಲಿ  ಹೇಳಿದೆ  ನೀವು ಮಂಜು ಅಲ್ಲ ಅಂದಮೇಲೆ ಫೋನ್ ಯಾಕ್ರಿ ತಗೊಂಡ್ರಿ ಅಂತ ಮತ್ತೆ ಬೈದೆ . ಫೋನ್ ನಂದು ನನ್ನ ಫೋನ್ ಗೆ ಕಾಲ್ ಬಂದರೆ ನಾನ್ ತಗೊಬಾರದ?  ನೀವು ಡಯಲ್ ಮಾಡಿದ್ದು ರಾಂಗ್ ನಂಬರ್ ಅಂತ ಹೇಳಿದೆ . ಸಾರಿ ಹೇಳುವ ಬದಲು ನೀನು ಎಷ್ಟು ಚನ್ನಾಗಿ ನಕ್ಕಿದ್ದೆ ನೆನಪಿದಯಾ..?
          ಇದು ನಮ್ಮ ಗೆಳತನ ಶುರುವಾದ ರೀತಿ ನೀವು ಮಾಡಿದ್ದು ರಾಂಗ್ ನಂಬರ್ ಆದ್ರು ರೈಟ್ ಪರಸನ್ ಗೆ    ಅದು ಕನಕ್ಟ್ ಆಗಿತ್ತು . ಮೊದಲ ಬಾರಿಗೆ ನಾ ನಿನ್ನ ಬೇಟಿಯಾದಗ ನಿನು  ಇಷ್ಟು ಸುಂದರವಾಗಿರುತ್ತಿಯ ಅಂತ ಕನಸು ಮನಸಿನಲ್ಲೂ ಗೇಸ್ ಮಾಡಿರಲಿಲ್ಲ. ನಿನ್ನ ನಾನು ಮೊದಲ ನೋಟದಲ್ಲಿ ನೋಡಿದ ತಕ್ಷಣ ಪೇದೆ ಹಾಗಿಹೊಗಿದ್ದೆ . ಆಮೇಲೆ ನಾವು ದಿನಾ ಬೇಟೆಯಾಗ ತೊಡಗಿದವು ಬಿಡು ನಂತರ ಘಂಟೆ ಗಟ್ಟಲೆ ಮೊಬೈಲ್ ಗಳಲ್ಲಿ ಮಾತುಗಳು ಹರಿದಾಡ ತೊಡಗಿದವು . ಮೇಸೆಜ್ ಗಳಂತು ಲೆಕ್ಕವಿಟ್ಟವರು ಯಾರು ..?
ಹೀಗೆಲ್ಲ ನನ್ನ ಜೀವನದಲ್ಲಿ ನನ್ನವಳೆ ಹಾಗಿ ಬೆರತು ಹೋದ ನೀನು ಮೊನ್ನೆ ಪಿಯು ಪರೀಕ್ಷೆಯ ರಜೆ ಗೆಂದು ಮೈಸೂರಿಗೆ ಹೊರಟೆಯಲ್ಲ ನನ್ನ ನೆನಪು ನಿನಗೆ ಬರುವುದಿಲ್ಲವೆ ಅಥಾವ ನಾನೇ ನಿನಗೆ ನೆನಪಿಲ್ಲದಷ್ಟು ದೊರವಾ ಆ ಮೈಸೂರು . ನೆನಪುಗಳನ್ನು ಕೆದಕಿಕೊಂಡಂತೆಲ್ಲ ಆಸೆಗಳು ಆರಳಿ ನಿಲ್ಲುತ್ತವೆ . ನೀನು ಊರಲ್ಲಿಲ್ಲ ಸರಿ ನಿನ್ನ ಫೋನಿಗೆ ಏನಾಗಿದೆ ? ದಿನ ಬೆಳಾಗಾದರೆ ಶುಭದಿನ ಮೊದಲು ಹೇಳುತ್ತಿದ್ದ ನಿನ್ನ ಮಾತುಗಳನ್ನು ಕೇಳದೆ , ನಿನ್ನ ಮೇಸೆಜ್ ಗಳನ್ನು ನೋಡದೆ ನನಗೆ ಹುಚ್ಚು ಹಿಡಿದಂತೆ ಹಾಗುತ್ತಿದೆ . ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆ ನನ್ನ ಮೊಬೈಲ್ ಕಡೆಗೆ ನೋಡುತ್ತಿದ್ದಿನೆ. ಇವಾಗ ಮೇಸೆಜ್ ಬರಬಹುದೆ ಅಥಾವ ಮುಂದಿನ ಎರಡು ನಿಮಿಷದಲ್ಲಿ ನಿನ್ನ ನಂಬರ್ ಯಿಂದ ಕಾಲ್ ಬರಬಹುದೆಂದು ದಿನ ಬೆಳಗಾದರೆ ನಿನ್ನದೆ ನೆನಪು .  ಈ ಟೈಮ್ ನಲ್ಲಿ ಎನೂ ಮಾಡುತ್ತಿದ್ದಳೆ ಎಂದು . ಹೇ ಪಾಪು ನನ್ನ ತಾಳ್ಮೆ ಯನ್ನ ಪರ‍ೀಕ್ಷಿಸ ಬೇಡ .  ನಿನಗೆ ಅರ್ಥ ವಾಗದಿರುವುದು ಏನಿದೆ ಒಂದು ಮೇಸೆಜ್ ಅಥಾವ ಫೋನ್ ಮಾಡಬಾರದೇ...?

my e-mail
satishgowdagowda@gmail.com
my blog
www.nannavalaloka.blogspot.com

Friday, May 14, 2010

ಮಾಯವಾದ ನಮ್ಮೂರ ಹುಡುಗಿಯರು.....!

ಎಲ್ಲಾ ಪ್ಯಾಶನ್ ಲೋಕದ ಮಾಯೆ ...
ಮಾಯವಾದ ನಮ್ಮೂರ ಹುಡುಗಿಯರು.....!  

             ಹೆಣ್ಣುಮಕ್ಕಳು ಬಳೆ ತೊಟ್ಟರೆ ಮಂಗಳ ಸೂಚಕ. ಹಣೆಗೆ ಸಿಂಧೂರ ಇಟ್ಟರೆ, ಕಣ್ಣಿಗೆ ಕಾಡಿಗೆ ಇಟ್ಟರೆ ಒಳ್ಳೆಯದು, ಮೂಗಿಗೆ ಮೂಗನತ್ತು , ಕಿವಿಗೆ ವಾಲೆ, ಜುಮುಕಿ ಕತ್ತಿಗೊಂದು ಮಣಿಸರ , ಕಾಲಿಗೊಂದು ಅಂದದ ಗೆಜ್ಜೆ, ಇವೆಲ್ಲ ಹೆಣ್ಣಿಗೆ ಭೂಷಣ ಇದರ ಜೊತೆಗೆ ಸೀರೆ ಉಟ್ಟು ಹಸಿರುಗಾಜಿನ ಬಳೆ ಧರಿಸಿದರಂತೂ ಆಕೆ ಧರೆಗಿಳಿದ ವಸುಂಧರೆ . ಎಂದೆಲ್ಲ ಮಾತಾನಾಡಿದ ನೆನಪುಗಳಿವೆ.  ಅವೆಲ್ಲ ಈಗ ಬರಿ ನೆನಪುಗಳು ಅಷ್ಟೆ . ಈಗಿನ ಹುಡುಗಿಯರು ಸ್ಟಿಕ್ಕರ್ ಹಿಟ್ಕೊಳ್ಳೂದೆ ಹೆಚ್ಚಿನ ವಿಷಯ ಅದೆಲ್ಲ ತೊಟ್ಕೊಳ್ಳೊಕೆ ನಾವೇನು  ಬಿಚ್ಚೊಲೆ ಗೌರಮ್ಮನಾ....? ಎಂದು ಕೇಳುತ್ತಾರೆ . ಇದನ್ನು ತನ್ನ ತಂದೆ ತಾಯಂದಿರು ಕೇಳೋಹಾಗಿಲ್ಲ ಏಕೆಂದರೆ ಇವರು ಮೊದಲೇ ಹೇಳಿರುತ್ತಾರೆ ಇದೆಲ್ಲ ಪ್ಯಾಶನ್ ಮಮ್ಮಿ .ಇನ್ನೂ ಜಾಸ್ತಿ ಮಾತನಾಡಿದರೆ    ...! ಪ್ಯಾಷನ್ ಇಷ್ಟು ತೊಡೊದೆ ಹೆಚ್ಚು ಕಾಲ ಬದಲಾಗಿದೆ ಅಂತ ಸಬೂಬು ಹೇಳುತ್ತಾರೆ  ಇದೆಲ್ಲ ಈಗಿನ ಕಾಲೇಜ್ ಹುಡುಗಿಯರ ಹೊಸ ಡೈಲಾಗ್ .
              ಈ ನಡುವೆ ಅಂತು ಕೈಯಲ್ಲೂ ಇಲ್ಲ ಕತ್ತಲ್ಲೂ ಇಲ್ಲ , ಮೊಗಲ್ಲು  ಇಲ್ಲ, ಕೊನೆಗೆ ಕಿವಿಯಲ್ಲೂ ಇಲ್ಲ ,ಬರೀ ಬೊಳು . ಬೋಳಾಗಿರೊದೆ ಒಂದು ಪ್ಯಾಷನ್. ಹೆಚ್ಚೆಂದರೆ ಕೈಗೆ ಒಂದು ವಾಚ್ ಮತ್ತೊಂದು ಕೈಗೆ ಸಿಂಗಲ್ ಬಳೆ ಅಷ್ಟೆ. ವಾಲೆ ಜುಮುಕಿ ಊಹೊ..!    ಆದರು ಅವೆಲ್ಲ ಯಾರಿಟ್ಟುಕೊತಾರೆ.? ಅಷ್ಟು ಭಾರ ಯಾರ್ ಹೊರತಾರೆ  ಅಂತಾರೆ . ಇನ್ನು  ಬೆಂದಕಾಳುರು ಎಂಬ ನಗರಕ್ಕೆ ಕಾಲಿಟ್ಟರಂತು ಪ್ಯಾಷನ್ ಲೋಕದ ಇನ್ನೊಂದು ರೋಪವೇ  ಇಲ್ಲಿದೆ. ಎಲ್ಲಿ ನೋಡಿದರು ತುಂಡು ಬಟ್ಟೆಗಳದ್ದೆ ಕಾರುಬಾರು ಎಲ್ಲಿಯಾದರು ಲಂಗಾದಾವಣಿ ಎನಾದರು ಕಾಣುತ್ತದ..? ಎಂದು ಕಣ್ಣಲ್ಲಿ ಕಣ್ಣು ಬಿಟ್ಟು ನೋಡಿದರು ಕಾಣಲ್ಲ ಕಂಡರು ಅದು ಅದ್ಬುತವೆ ಸರಿ. ದಿನ ದಿನಕ್ಕೆ ಇವರ ಉಡುಗೆಗಳು ಬದಲಾಗುತ್ತಿವೆ ಭಾರತದ ಉಡುಗೆಗಳನ್ನು ಬಿಟ್ಟು  ಪಾರಿನ್ ಉಡುಗೆಗಳಿಗೆ ಮಾರು ಹೂಗುತ್ತಿದ್ದಾರೆ. 
      ಈಗೀನ ಹೆಣ್ಣುಮಕ್ಕಳು ಡೆಜನ್ ಘಟ್ಟಳೆ ಬಳೆ ತೋಡೊದು ಎಲ್ಲಿಯಾದರು ಉಂಟೆ . ಎಲ್ಲಿಯಾದರು ತೊಟ್ಟಿದ್ದಾರೆ ಎಂದರೆ ಅಲ್ಲಿ ಎನೋ ಶುಭ ಸಮಾರಂಭ ಇದೆ ಅಂತ . ಹಾಗದರೆ ಮದುವೆ ಅಥಾವ ಮುಂಜಿ ಕಾರ್ಯಕ್ರಮಗಳಿಗೆ ಮಾತ್ರ ಬಳೆ ತೋಡೊದು ಅಂತ ಅಯೀತು ಎನ್ನಿ. ಇನ್ನು ಇವರು ಧರಿಸುವ ಬಟ್ಟೆಗಳಿಗೆ ಬಂದರಂತು ಮುಗಿಯಿತು ಒಂದು ಹುಡುಗಿ ಮನೆಯಿಂದ ಹೊರ ಹೊರಟರೆ ಸದ್ಯ ಯಾರು  ರೇಪ್ ಮಾಡಲಿಲ್ಲವಲ್ಲ ಎಂದು ತಂದೆ ತಾಯಿಗಳು ಬಾಯಿ ಬಿಟ್ಟುಕೊಂಡು ನೋಡುವಂತ ಕಾಲ ಬಂದಿದೆ ಎಂದರೆ ಆಚರ್ಯ ಪಡಬೇಕಾಗಿಲ್ಲ ಬಿಡಿ .         ಹಾಗೆ ಇರುತ್ತದೆ ಈ ಬೆಂಗಳೊರ್ ಹುಡುಗಿಯರ ಡ್ರೆಸ್ ಗಳು . ಇದಕ್ಕೆಲ್ಲ ಕಾರಣ ಬದಲಾಗುತ್ತಿರುವ ಬೆಳವಣಿಗೆಯ ಜೊತೆಗೆ ದಿನಬೆಳಗಾಗುವುದರೋಳಗಾಗಿ ಹಳೆತಾಗುವ ಪ್ಯಾಶನ್ ಲೋಕ , ಪ್ರತಿ ದಿನ ಸೂರ್ಯೋದಯದೊಂದಿಗೆ ಹೊಸ ಹೊಸ ಡಿಸೈನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ . ಹಾಗಾಗಿ ಈ ಹುಡುಗಿಯರ ಅಭಿರುಚಿ ಅದೇ ರೀತಿ ಹೊಂದಿಕೊಂಡಿದೆ. ಈ ಯುಗದ ಪ್ಯಾಶನ್ ಲೋಕಕ್ಕೆ ತಕ್ಕಂತೆ ದಿನಕ್ಕೊಂದು ಮಾದರಿಯ ಸ್ಟಿಕ್ಕರ್ , ಬಳೆ ಮನೆಯ ಡ್ರೆಸ್ಸಿಂಗ್ ರೊಮನ್ನು ಅಲಂಕರಿಸಿವೆ ಎಂದರೆ ತಪ್ಪಾಗಲಾರದು.
my e-mail
satishgowdagowda@gmail.com
my blog 
www.nannavalaloka.blogspot.com

Thursday, May 13, 2010

ನನ್ನ ಹೃದಯದ ತುಂಬೆಲ್ಲ ನಿನ್ನದೇ ಫೋಟೋ

ನನ್ನ ಹೃದಯದ ತುಂಬೆಲ್ಲ ನಿನ್ನದೇ ಫೋಟೋ

 


ಪ್ರಿತೀಯ ಐಂದ್ರಿತ ಮೇಡಂ....

   ಒಂದೇ ಮಾತಲ್ಲಿ ಹೇಳತೀನಿ ಕೇಳಿ ನಿವಂದ್ರೆ ನನಗೆ ತುಂಬ ತುಂಬಾ ಇಷ್ಟ ನಿಮ್ಮ ಮೆರ‍ವಣಿಗೆ ಸಿನಿಮಾನ 26 ಸಲ ನೋಡಿದಿನಿ ..! ಪ್ರಜ್ವಲ್ ದೇವರಾಜ್ ತೆರೆಮೇಲೆ ಬಂದಾಗಲೆಲ್ಲ ಕಣ್ಣು ಮುಚ್ಚಿಕೊಂಡು ಕೂತಿದಿನಿ ಹಿಡಿ ಸಿನಿಮಾನ 26 ಸಲ ನೋಡಿದಾಗಲೂ ಪ್ರಜ್ವಲ್ ದೇವರಾಜ್ ನನಗೆ ಇಷ್ಟ ಅಗಲೇ ಇಲ್ಲ ಯಾಕೆಂದ್ರೆ ನಿಮ್ಮನ್ನ ಬೇರೆ ಯಾರೊ LOVE ಮಾಡೋದು ನಂಗೆ ಇಷ್ಟ ಇಲ್ಲ ಅದಕ್ಕೆ .
         ನನಗೇನೊ ತುಂಬಾ ಆಸೆ ಇದೆ ನಿಜ ... ಅದ್ರೆ ನನಗೂ ನನ್ನ ಯೊಗ್ಯತೆ ಗೊತ್ತು ಬಿಡಿ. ನಾನು ತಿಂಗಳೆಲ್ಲ ಕೆಲಸ ಮಾಡಿದ್ರು ನಿಮ್ಮ ಲಿಪ್ಸ್ಟಿಕ್ -ಫುರ್ಫುಮ್  ಗೆ ಸಾಕಾಗೊಲ್ಲ ಇಂಥ ಲೊಕ್ಲಾಸ್ ಹುಡುಗ ನಿಮ್ಮ ಮುಂದೆ I LOVE U ಅಂಥ ಅಂದ್ರೆ ನಿಮಗೆ ಹೇಗೆ ಅಗ್ಬೋದು ಅಂಥ ನನಗೂ ಗೊತ್ತು.
          ಆದ್ರೂ ನಿಮ್ಮ ಮುಂದೆ ನಿಂತು I LOVE U ಅಂತ ಹೇಳೊ ಆಸೆ. ನೀವೇನಾದ್ರು ಅಂದ್ಕೊಳ್ಳಿ ಪರವಾಗಿಲ್ಲ ನನ್ನ ಮನಸ್ಸಿಗೆ ಮಾತ್ರ ಸ್ವಲ್ಪ ಸಮಾಧಾನ ಅಗುತ್ತೆ ಮೇಡಂ . ನೀವು ಕೆನ್ನೆಗೆ ಬಾರಿಸಿದ್ರು ನನಗೆ ಖುಷಿನೇ ..! ಬೇಕಾದ್ರೆ ನನ್ನ ಮೇಲೆ ಏಷ್ಟಾದ್ರು ಕೋಪ ಮಾಡ್ಕೊಳ್ಳಿ.. ಆದ್ರೆ ಬೇಜರ್ ಮಾತ್ರ ಮಾಡ್ಕೊಬೇಡಿ Please   ಒಂದೇ ಒಂದು ಸಲ ನನಗೆ I LOVE U  ಅಂಥ ಹೇಳೊಕೆ ಅವಕಾಶ ಮಾಡಿಕೊಡಿ..!
          ಏನ್ ಇವನೊಬ್ಬ ಹುಚ್ಚ ಅಂತ ನಗ್ತಿದೀರ..? ಓ.. ನನಥರಾನೇ ಏಷ್ಟೊ ಹುಡುಗಿಯರಿಗೆ I LOVE U ಅಂಥ ಅಂದಿದಾನೊ ಅಂಥ Think  ಮಾಡ್ತಿದೀರಾ..? ನಿಮ್ಮಾಣೆಗು ಸುಳ್ಳು ಮೇಡಂ ನಾನು ತುಂಬಾ ಓಳ್ಳೆ ಹುಡ್ಗ. ನಾನು ತುಂಬಾ ಚನ್ನಾಗಿ ಓದ್ತಾ ಇದ್ದೆ..!
S S L C  ನಲ್ಲಿ 80% ಕಾಲೇಜ್ ನಲ್ಲಿ ಒಂದು ಹುಡುಗಿ ತಾನಾಗೆ ಬಂದು I LOVE U ಅಂದಿದ್ಲು. ನನಗಂತೂ ತಲೆ ಕೆಟ್ಟೋಗಿತ್ತು ಅಮೇಲೆ ಅವಳು ಕೈಗೂ ಸಿಗಲಿಲ್ಲ ಮಾತಾಡುಕೂ ಬರಲಿಲ್ಲ ದೂರದಿಂದಲೇ ನಗತಿದ್ದಳು ಆ ಟೈಮಲ್ಲಿ ಸ್ವಲ್ಪ ತಲೆ ಕೆಟ್ಟೋಗಿತ್ತು ಕೋನೆಗೆ ಅಲ್ಲಿ ಇಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡ್ತಿದೀನಿ.
          ನಿಜ ಏನೂಂತ ನನಗೆ ಅಮೇಲೆ ಗೊತ್ತಾಯಿತು ಮೇಡಂ ಅವಳು ಸ್ಕೊಲ್ ನಿಂದಾನೂ ನನ್ನ ಕ್ಲಾಸ್ ಮೆಂಟ್ ನಾನು ಫಸ್ಟು ಅವಳು ಸೆಕೆಂಡ್ .. ಅದಕ್ಕೆ ನನ್ನನ್ನ ಹಾಳು ಮಾಡೊಕ್ಕೆ ಅಂತೆ ಅವಳು ಹೀಗೆ ಮಾಡಿದ್ದಂತೆ ಅಗ್ಲಿಂದ ನನಗೆ ಈ ಹುಡುಗಿಯರು ಅಂದ್ರೆ ಅಗ್ತಿರಲಿಲ್ಲ . ಯಾರನ್ನು ನೋಡಿದರು ಮೈ ಊರಿತಿತ್ತು ಹೊಟ್ಟೆಗೆ ಒಂದಿಷ್ಟು ಅಯಿಲ್ ಹಾಕಿದ್ಮೆಲ್ ಅಂತೂ ಸಿಕ್ಕಾಪಟ್ಟೆ ರೋಷ ಬರ್ತಿತ್ತು . ಅವಗೆಲ್ಲ ನನಗೆಲ್ಲ ಒಬ್ಬನೆ ಗುರು ಅವರು ನಮ್ಮ ಉಪೇಂದ್ರ ..
       "ಮೆರವಣಿಗೆ" ಬಂದ್ಮೇಲೆ .. ನನ್ನ ಮನಸ್ಸು ತಂಪಾಗಿದೆ ಎಲ್ಲಿ ನೋಡಿದರೂ ನೀವೆ ಕಾಣ್ತಿದಿರಾ...! ಯಾರನ್ನ ನೋಡಿದರು ನಿಮ್ಮ ಥರಾನೇ ಕಾಣಸ್ಥಾರೆ ,  ಮೆರವಣಿಗೆ ಚಿತ್ರದಲ್ಲಿ "ಪತಂಗವಾಗಿ ಹಾರಡಬಲ್ಲೆ" ಹಾಡು ಅಂತು ನನಗೆ ತುಂಬಾ ದಿನಾ ನಿದ್ದೆ ಮಾಡೋಕೆ ಬಿಟ್ಟಿಲ್ಲ ಬಿಡಿ ಮದುವೆ ಅಂತ ಆದ್ರೆ ನಿಮ್ಮನ್ನೇ ಆಗಬೇಕು ಅಂತ ಥಿಯೇಟರ್ ನಿಂದ ಬಂದ ತಕ್ಷಣ ಡಿಸೈಡ್  ಮಾಡಿಬಿಟ್ಟೆ .     ಹಾಗಂತ ನಿಜವಾಗ್ಲೂ ನಾನು ಯಾರಿಗು ಇದುವರೆಗೂ I LOVE U  ಅಂತ ಹೇಳಿಲ್ಲ ಮೇಡಂ ನಿಮ್ಮಾಣೆಗೂ . ಒಂದು ವೇಳೆ ನಿವೇನಾದ್ರು ಸಿಗಲಿಲ್ಲ ಅಂದ್ರೆ...! ಅಥವಾ ಬೇರೆ ಯಾರನ್ನಾದ್ರು ಕಟ್ಟಿಕೊಂಡು ಬಿಟ್ಟ್ರೇ ಜೋರಾಗಿ ಹತ್ತು ಬಿಡ್ತಿನಿ..
     ಒಂದೇ.. ಒಂದು ಸಲ ನಿಮ್ಮನ್ನು ಕಣ್ಣಾರೆ ನೋಡಿ ಕೈಕುಲುಕಿ ಮಾತಾಡಿಸ್ಬೇಕು ನನ್ನ ಹೃದಯದ ತುಂಬ ನಿನ್ನದೇ ಫೊಟೂಗಳನ್ನ ತೊರಿಸಿ ಅದರಮೇಲೆಲ್ಲ ನಿಮ್ಮ ಆಟೋಗ್ರಾಪ್ ತಗೋಬೇಕು ಅಂತ ಆಸೆ ಇದೆ ಹೂಂ.... ಅಂತಿರಾ Please ......!
more blogs click hear
my cell
+91 98447 73489