Tuesday, May 18, 2010

ಹತ್ತಿರದಲ್ಲಿ ನೀನಿಲ್ಲ ನನ್ನೋಳಗೆ ನಾನಿಲ್ಲ ..



ಹತ್ತಿರದಲ್ಲಿ ನೀನಿಲ್ಲ ನನ್ನೋಳಗೆ ನಾನಿಲ್ಲ ..
ಪ್ರೀತಿಯ  ಪಾಪು ... .
ಬೆಳಗ್ಗೆ ಎದ್ದಿದ್ದೆ ಲೇಟು ಹಾಗೆ ನಿದ್ದೆ ಕಣ್ಣಲ್ಲಿ ಕಾಲು ಚಾಚಿ ಕುಳಿತುಕೊಂಡಿದ್ದವನ ಕೈಯಲ್ಲಿ ಉರಿಯುತ್ತಿದ್ದ ಸಿಗರೇಟು ಆರಿಸಿ ಕಿಟಕಿಯಾಚೆ ಕಣ್ಣಾಡಿಸಿದರೆ ಯಾರು ಕಾಣಲಿಲ್ಲ ಕಿವಿಯಲ್ಲಿ "ಯಾರೇ  ನೀ ದೇವತೆಯ ಹಾಡು" ತಂಪು ನೀಡುತ್ತಿತ್ತು. "ಹತ್ತಿರದಲಿ ನೀನಿಲ್ಲ , ನನ್ನೊಳಗೆ ನಾನಿಲ್ಲ" . ಇವತ್ತು ಬೆಳಗ್ಗೆ ಏಳುತ್ತಲೆ ನಿನ್ನಯ ನೆನಪು ನನಗೆ ಕಾಡಿದ ರೀತಿ ಇದು .  ನೀನು ಜೊತೆಯಲ್ಲಿದ್ದರೆ ಎರಡು ಹಸಿ ಮುನಿಸು . ಒಂದು ಪುಟ್ಟ ಜಗಳ , ಮೂರು ತಬ್ಬುಗೆ ಜೊತೆಗೆ ಹೋಟ್ಟೆಮೇಲಿನ ಹುಟ್ಟು ಮಚ್ಚೆಗೆ  ಹತ್ತು ಮುತ್ತು , ಇನ್ನೂ ಏನೇಲ್ಲಾ ಅಗುತ್ತಿತ್ತೊ..? ಹಟಕ್ಕೆ ಬಿದ್ದರೆ ಥೇಟ್ ಪಾಪಚ್ಚಿ. ಅದೇ ಪ್ರೀತಿಯಲ್ಲಿ ಅಮ್ಮನನ್ನೆ ಮೀರಿಸುವ ನಿನ್ನ ಗುಣ ಎಷ್ಟೊ ಚನ್ನ ನನಗೆ ಚಿನ್ನ.
          ನಿನ್ನ ಬಗ್ಗೆ ನನ್ನ ಹೊಸ ತಕರಾರುಗಳೆನು ಇಲ್ಲ ಕಣೇ . ಒಮ್ಮಮ್ಮೆ ಮನೆಯಿಂದ ಹೊರಬಂದರೆ ಹಾಗೆ ನೆನಪಾಗಿ ಬಿಡುತ್ತಿಯ , ಉರಿವ ಗಾಯದಂತೆ , ಮನೆಯಲ್ಲಿ ಮಗುವನ್ನು ಬಿಟ್ಟು ಬಂದ ತಾಯಿಯ ಹಾಗೆ  ನೆನಪಾಗುತ್ತಿಯಲ್ಲ ..? ಹಾಗೆಲ್ಲ ಒಂದು ಕ್ಷಣ ಮಂಕಾಗುತ್ತೆನೆ . ಗತಿಸಿ ಹೋದ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಜೀವನದ ಉಳಿದ  ಕಾಲವನ್ನು ಕಳೆಯುತ್ತಿದ್ದೆನೆ . ಅಸಲಿಗೆ ನಿನು ಸಿಗದೇ ಹೋಗಿದ್ದರೆ ಈ ಬದುಕು ಎಷ್ಟು ವ್ಯರ್ಥವಾಗುತ್ತಿತ್ತು ಅಲ್ಲವೇ ಹುಡುಗಿ . ಸಮುದ್ರದ ಮದ್ಯ ಬಿದ್ದ ಮಳೆ ಹನಿಯ ಹಾಗೆ, ಎಂದು ಅಂದುಕೂಂಡು ಸಾಗುತ್ತಿದ್ದೆನೆ .
              ನಿಜ ಕಣೇ ಈ ಬದಕು ನನಗೆ ಎಲ್ಲವನ್ನು ಕೊಟ್ಟಿದೆ .  Iam Reyaly happy With My Lif ಈಗಷ್ಟೆ ಮಿಲಟರಿಯಿಂದ ಬಂದಂತೆ ಕಾಣುವ ನಮ್ಮಪ್ಪನ ದೋಡ್ಡ ಮೀಸೆ, ನಿಜಕ್ಕೂ ನಮ್ಮಪ್ಪ ಹೃದಯವಂತ , ಕೈಗೆ ಮೊಬೈಲ್ ಕೊಟ್ಟರೆ ಇದನ್ನ ಸ್ವಿಚ್ ಆಫ್ ಮಾಡೋದು ಹ್ಯಾಗೊ ಅನ್ನೊದನ್ನು ಕಾಣದೆ ಪಜೀತ ಪಡುವ ಅಮ್ಮನ ಮುಗ್ದ ಮನಸ್ಸು , ಹಾಗು ಅಮಾಯಿಕಥೆ , ಚನ್ನಾಗಿರುವುದೆಲ್ಲವು ಅಣ್ಣನಿಗೆ ಇರಲಿ ಎಂದು ಉಳಿದದ್ದರಲ್ಲೆ ತೃಪ್ತಿಪಡುವ ತಮ್ಮ , ಗಂಡನಿಂದ ಮುಚ್ಚಿಟ್ಟ ಪ್ರೀತಿಯನ್ನು ತಮ್ಮನಿಗೆ ಸಿಗಲೆಂದು ಕಾಯ್ದು ಧಾರೆಯೆರೆಯುವ ಮೂವರು ಅಕ್ಕಂದಿರು ಮತ್ತು ತಮ್ಮನ ಮದ್ಯ ಕಂಪನಿಗೆ ಓಡಾಡಲು ಸಾಯಂಕಾಲದ ಸೂರ್ಯನಂತೆ ಹೊಳೆಯುವ ನನ್ನ ಕೆಂಪು ಕಲರ್ pulsar  ಬೈಕು . ನನಗೆ ಇನ್ನೇನು ಬೇಕೆತ್ತು ಹೇಳು.?
      ಹಾಗೆ ಸಂತೋಷವಾಗಿದ್ದವನ ಮೊಬೈಲಿಗೆ ಅವತ್ತು ಅನೀರಿಕ್ಷಿತವಾದ ಫೋನ್ ಕಾಲ್ ಬಂದದ್ದು ನಿಜಕ್ಕೊ ಆಶ್ಚರ್ಯವಾಗಿತ್ತು. ಅದು ರಾಂಗ್ ನಂಬರ್ "ಮಂಜು ಇದಾನಾ..?" ಅಂತ ಕೇಳಿದ್ದೇ ಕೇಳಿದ್ದು ಇದು ಮಂಜು ನಂಬರ್ ಅಲ್ಲ ಅಂತ ಹೇಳುವುದೊರೊಳಗಾಗಿ ನೀನು ಬಿಟ್ಟು ಬಿಡದೆ ಒಂದರ್ದಘಂಟೆ  ಬೈದದ್ದು ಎಲ್ಲ ಆದಮೇಲೆ ನಾನು ಮಂಜು ಅಲ್ಲ ಕಣ್ರೀ ... ಸತೀಶ್ ಅಂಥ ಮೇಲು ದ್ವನಿಯಲ್ಲಿ  ಹೇಳಿದೆ  ನೀವು ಮಂಜು ಅಲ್ಲ ಅಂದಮೇಲೆ ಫೋನ್ ಯಾಕ್ರಿ ತಗೊಂಡ್ರಿ ಅಂತ ಮತ್ತೆ ಬೈದೆ . ಫೋನ್ ನಂದು ನನ್ನ ಫೋನ್ ಗೆ ಕಾಲ್ ಬಂದರೆ ನಾನ್ ತಗೊಬಾರದ?  ನೀವು ಡಯಲ್ ಮಾಡಿದ್ದು ರಾಂಗ್ ನಂಬರ್ ಅಂತ ಹೇಳಿದೆ . ಸಾರಿ ಹೇಳುವ ಬದಲು ನೀನು ಎಷ್ಟು ಚನ್ನಾಗಿ ನಕ್ಕಿದ್ದೆ ನೆನಪಿದಯಾ..?
          ಇದು ನಮ್ಮ ಗೆಳತನ ಶುರುವಾದ ರೀತಿ ನೀವು ಮಾಡಿದ್ದು ರಾಂಗ್ ನಂಬರ್ ಆದ್ರು ರೈಟ್ ಪರಸನ್ ಗೆ    ಅದು ಕನಕ್ಟ್ ಆಗಿತ್ತು . ಮೊದಲ ಬಾರಿಗೆ ನಾ ನಿನ್ನ ಬೇಟಿಯಾದಗ ನಿನು  ಇಷ್ಟು ಸುಂದರವಾಗಿರುತ್ತಿಯ ಅಂತ ಕನಸು ಮನಸಿನಲ್ಲೂ ಗೇಸ್ ಮಾಡಿರಲಿಲ್ಲ. ನಿನ್ನ ನಾನು ಮೊದಲ ನೋಟದಲ್ಲಿ ನೋಡಿದ ತಕ್ಷಣ ಪೇದೆ ಹಾಗಿಹೊಗಿದ್ದೆ . ಆಮೇಲೆ ನಾವು ದಿನಾ ಬೇಟೆಯಾಗ ತೊಡಗಿದವು ಬಿಡು ನಂತರ ಘಂಟೆ ಗಟ್ಟಲೆ ಮೊಬೈಲ್ ಗಳಲ್ಲಿ ಮಾತುಗಳು ಹರಿದಾಡ ತೊಡಗಿದವು . ಮೇಸೆಜ್ ಗಳಂತು ಲೆಕ್ಕವಿಟ್ಟವರು ಯಾರು ..?
ಹೀಗೆಲ್ಲ ನನ್ನ ಜೀವನದಲ್ಲಿ ನನ್ನವಳೆ ಹಾಗಿ ಬೆರತು ಹೋದ ನೀನು ಮೊನ್ನೆ ಪಿಯು ಪರೀಕ್ಷೆಯ ರಜೆ ಗೆಂದು ಮೈಸೂರಿಗೆ ಹೊರಟೆಯಲ್ಲ ನನ್ನ ನೆನಪು ನಿನಗೆ ಬರುವುದಿಲ್ಲವೆ ಅಥಾವ ನಾನೇ ನಿನಗೆ ನೆನಪಿಲ್ಲದಷ್ಟು ದೊರವಾ ಆ ಮೈಸೂರು . ನೆನಪುಗಳನ್ನು ಕೆದಕಿಕೊಂಡಂತೆಲ್ಲ ಆಸೆಗಳು ಆರಳಿ ನಿಲ್ಲುತ್ತವೆ . ನೀನು ಊರಲ್ಲಿಲ್ಲ ಸರಿ ನಿನ್ನ ಫೋನಿಗೆ ಏನಾಗಿದೆ ? ದಿನ ಬೆಳಾಗಾದರೆ ಶುಭದಿನ ಮೊದಲು ಹೇಳುತ್ತಿದ್ದ ನಿನ್ನ ಮಾತುಗಳನ್ನು ಕೇಳದೆ , ನಿನ್ನ ಮೇಸೆಜ್ ಗಳನ್ನು ನೋಡದೆ ನನಗೆ ಹುಚ್ಚು ಹಿಡಿದಂತೆ ಹಾಗುತ್ತಿದೆ . ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆ ನನ್ನ ಮೊಬೈಲ್ ಕಡೆಗೆ ನೋಡುತ್ತಿದ್ದಿನೆ. ಇವಾಗ ಮೇಸೆಜ್ ಬರಬಹುದೆ ಅಥಾವ ಮುಂದಿನ ಎರಡು ನಿಮಿಷದಲ್ಲಿ ನಿನ್ನ ನಂಬರ್ ಯಿಂದ ಕಾಲ್ ಬರಬಹುದೆಂದು ದಿನ ಬೆಳಗಾದರೆ ನಿನ್ನದೆ ನೆನಪು .  ಈ ಟೈಮ್ ನಲ್ಲಿ ಎನೂ ಮಾಡುತ್ತಿದ್ದಳೆ ಎಂದು . ಹೇ ಪಾಪು ನನ್ನ ತಾಳ್ಮೆ ಯನ್ನ ಪರ‍ೀಕ್ಷಿಸ ಬೇಡ .  ನಿನಗೆ ಅರ್ಥ ವಾಗದಿರುವುದು ಏನಿದೆ ಒಂದು ಮೇಸೆಜ್ ಅಥಾವ ಫೋನ್ ಮಾಡಬಾರದೇ...?

my e-mail
satishgowdagowda@gmail.com
my blog
www.nannavalaloka.blogspot.com

No comments: