Monday, December 27, 2010

ಅಂದೊಂದಿತ್ತು "ಅಮ್ಮನ ಸೀರೆ "


ಅಂದೊಂದಿತ್ತು "ಅಮ್ಮನ ಸೀರೆ "
ಹೊಡೆದ  ಹಣೆ   ರಕ್ತವನ್ನ 
ಓರೆಸುವ ಕರವಸ್ತ್ರವಾಗಿತ್ತು,
ಮುರಿದ ಕಾಲ ಕಟ್ಟುವ 
ಮೊದಲ ಬಟ್ಟೆಯೂ ಅದಾಗಿತ್ತು . 

ಧಣಿದು ಬಂದ ಬೆವರಿಗೆ 
ಆಸರೆಯಾಗಿತ್ತು   "ಅಮ್ಮನ ಸೀರೆ "
 ಕೊಡಿಟ್ಟ ಪುಡಿಗಾಸಿನ
ಪೆಟ್ಟಿಗೆಯಾಗಿತ್ತು"ಅಮ್ಮನ ಸೀರೆ "

ನೆನೆದು ಬಂದ ತಲೆಯ 
ಒರೆಸುತ್ತಿತ್ತು "ಅಮ್ಮನ ಸೀರೆ "
ಚಳಿಗಾಲದಲ್ಲಿ ಬೆಚ್ಚನೆಯ 
ಕಂಬಳಿಯಾಗಿತ್ತು  "ಅಮ್ಮನ ಸೀರೆ "   


ಹೊತ್ತು ತರುವ ಮಡಿಕೆಗೆ 
ಒತ್ತಡಿಯಾಗಿತ್ತು  "ಅಮ್ಮನ ಸೀರೆ "
ಕಿತ್ತು ತಿನ್ನುವ ದೇಹಕ್ಕೆ 
ರಕ್ಷಣೆಯಾಗಿತ್ತು "ಅಮ್ಮನ ಸೀರೆ "  

ಇಂದಿನ ನಾರಿಗೆ ಸೀರೆ ಎಲ್ಲಿದೆ  
ತುಂಡು  Jeens Jacket ಗಳ ಮೋಹ ಹೆಚ್ಚಾಗಿದೆ  
ಇನ್ನೆಲ್ಲಿದೆ  ಕೈ ವರೆಸುವ ಕರವಸ್ತ್ರ .
ಮುರಿದ ಕಾಲಿಗೆ  ಕಟ್ಟುವ ಬಟ್ಟೆ . 

"ಅಮ್ಮನ ಸೀರೆ "
SATISH N GOWDA   

ಅಂದೊಂದಿತ್ತು "ಅಮ್ಮನ ಸೀರೆ "

ಅಂದೊಂದಿತ್ತು "ಅಮ್ಮನ ಸೀರೆ "
"ಅಮ್ಮನ ಸೀರೆ "

Thursday, December 23, 2010

( ನಿಜವಾದ ಪ್ರೇಮಿಗಳಿಗೆ ಮಾತ್ರ )

 

 

ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು
ಈ ಕಥೆಗಾರನ ಒಂದು ಪ್ರೇಮ ಸಂದೇಶ
ಪ್ರೇಮಿಗಳೆ ಎಚ್ಚರ !
ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು
ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು
ಪ್ರೀತಿ ಅಂದರೆ ಏನು....???
ಪ್ರೀತಿಲಿ ಏನಿದೆ...???
ಅದು ಪ್ರೀತ್ಸೊರಿಗೆ ಮಾತ್ರ ಗೊತ್ತು.ಪ್ರೀತಿ ಅಂದರೆ ಒಂದು ಚಟ.ಸಿಗರೇಟ್ ಸೇದೋದು ಬಿಡು ಅಂದ್ರೆ ಬಿಡಬಹುದು, ಕುಡಿಯೋದು ಬಿಡೋ ಅಂದ್ರೆ ಬಿಡಬಹುದು.ಆದ್ರೆ ಬಿಡಿಸಲಾಗದ ಒಂದೇ ಒಂದು ಚಟ ಅಂದ್ರೆ ಪ್ರೀತಿನೇ. ಪ್ರೀತಿಲಿ ಕಷ್ಟ-ಸುಖ, ನೋವಿ-ನಲಿವು ಎಲ್ಲಾ ಇದೇ ಆದರೆ ಎಷ್ಟೇ ನೋವಿದ್ರು ಅದನ್ನು ಮರೆಸುವಂತಹ ಶಕ್ತಿ ಪ್ರೀತಿಲಿದೆ. ಪ್ರೀತಿಗೊಸ್ಕರ ಯಾರ್‍ಯಾರೋ ಏನೇನೋ ಸಾಧನೆ ಮಾಡ್ತಾರೆ. ಪ್ರೀತಿಗಾಗಿ ಕೈ ಕುಯ್ದುಕೊಂತಾರೆ ಅಪ್ಪ-ಅಮ್ಮನ್ನು ಹೆದರಿಸಿ ಮದುವೆನೂ ಆಗ್ತಾರೆ ಇನ್ನೂ ಸ್ವಲ್ಪ ಜನ ಮುಟ್ಟಾಳರು ಪ್ರಾಣನೇ ಕಳ್ಕೊಳ್ತಾರೆ.ಸತ್ತು ಸಾಧಿಸೋದು ಪ್ರೀತಿ ಅಲ್ಲ ಇದ್ದು ಜಯಿಸೋದೆ ಪ್ರೀತಿ. ಪ್ರೀತಿಲಿ ಮೇಲು ಕೀಳೆಂಬ ಜಾತಿ-ಭೇಧವಿಲ್ಲ,ಬಡವ-ಶ್ರೀ ಮಂತನೆಂಬ ಭೇಧವಿಲ್ಲ.ಎಷ್ಟೋ ತಂದೆ-ತಾಯಿಗಳು ಮಕ್ಕಳ ಭವಿಷ್ಯ ನೋಡದೇ ಬರ್ಈ ಆಸ್ತಿ-ಅಂತಸ್ತು ಎಂಬ ವ್ಯಾಮೋಹದಿಂದ ಪ್ರೇಮಿಗಳನ್ನು ದೂರ ಮಾಡ್ತಾರೆ. ಈ ಕಾಲದಲ್ಲಿ ಹುಡುಗರಿಂದ ಮೋಸ ಹೋಗೋ ಹುಡುಗಿಯರಿಗಿಂತ ಹುಡ್ಗೀರಿಂದ ಮೋಸ ಹೋಗೋ ಹುಡುಗರ್ಏ ಜಾಸ್ತಿ.ಈ ಹುಡ್ಗೀರು ಪ್ರೀತಿ ಮಾಡಬೇಕಾದ್ರೆ ಯಾರ ಮಾತು ಕೇಳಲ್ಲ. ಮದುವೆ ಆಗಬೇಕಾದ್ರೆ ಅಪ್ಪ-ಅಮ್ಮನ ನೆನಪು ಬರುತ್ತೆ.ಮನಸ್ಸು ಕೊಟ್ಟಿದ್ದು ನಾನು ಮರೆತು ಮದುವೆಯಾದೇಯೇನು....???
ಮರೆಯ ಬೇಡವೇ ಹೃದಯಾ ಈ ನನ್ನ ಪ್ರೀತಿಯ
ಕರೆಯ ಬೇಡವೇ ಹೃದಯಾ ಈ ನನ್ನ ಪ್ರಾಣವ !!!
ಹಸಿವೆಂದರೆ ಗೊತ್ತಿಲ್ಲ
ನಿದಿರೇನು ಬರೋದಿಲ್ಲ
ಹಗಲಿರುಳು ತಿಳಿದಿಲ್ಲ
ಹಾಳಾದರು ಪ್ರೀತೀಲ್ ಬಿದ್ದೋರೆಲ್ಲ !!!
ಹುಡುಗರು ಪ್ರೀತಿ ಕೇಳಿದರೇ....
ಹುಡುಗಿಯರು ಪ್ರಾಣವನ್ನೇ ಕೇಳ್ತಾರೆ !!!
ಹಕ್ಕಿ ಮರಿಗಾಗಿ ಮರದಲ್ಲಿ ಗೂಡು ಕಟ್ಟಿದರೆ...
ಹುಡುಗರು ಹುಡುಗಿಯರಿಗಾಗಿ ಮನದಲ್ಲಿ ಗೂಡು ಕಟ್ತಾರೆ !!!
ಪ್ರೀತಿಸೋ ಹುಡುಗರ್ಏ ಇಗೋ ನನ್ನ ಪ್ರೇಮ ಸಂದೇಶ
ನೀವು ಪ್ರೀತಿಸಿದ ಹುಡುಗಿ ನಿಮಗೆ ಸಿಗಲ್ಲಿಲ್ಲ ಅಂತ ಬೇಜಾರು ಮಾಡ್ಕೋಬೇಡಿ ನಿಮ್ಮನ್ನು ಪ್ರೀತಿಸುವ ಹುಡುಗಿ ನಿಮಗೆ ಸಿಕ್ಕೇ ಸಿಕ್ತಾಳೆ.ನಾವು ಪ್ರೀತಿಸಿದ ಹುಡುಗಿ ನನ್ನೇ ಲವ್ ಮಾಡಬೇಕು, ನನ್ನನ್ನೇ ಮದುವೆಯಾಗಬೇಕು ನನ್ ಜೊತೇನೆ ಬಾಳಬೇಕು ಅಂದ್ರೆ ಅದು ಪ್ರೀತಿನೇ ಅಲ್ಲ ಬರ್ಈ ಸ್ವಾರ್ಥ !!! ನಾವು ಪ್ರೀತಿಸಿದ ಹುಡುಗಿ ಎಲ್ಲೇ ಇದ್ರು ಹೇಗೇ ಇದ್ರೂ ಚೆನ್ನಾಗಿ ಇರಬೇಕು ಅನ್ನೋದೇ ನಿಜವಾದ ಪ್ರೀತಿ. ನೀವು ಇಷ್ಟು ತ್ಯಾಗ ಮಾಡಿ ಸಾಕು ನಿಮ್ಮ ಜೀವನವೇ ಸಾರ್ಥಕ ಈ ಪ್ರಪಂಚದಲ್ಲಿ ಸಾವಿರಾರು ಜೀವಿಗಳು ಅದರಲ್ಲಿ ಯಾರ ಪ್ರೀತಿ ಯಾರಿಗೋ....ಯಾರ ಹೃದಯ ಇನ್ಯಾರಿಗೋ....
ಹಾಗೇನೆ ಪ್ರೀತಿಸೋ ಹುಡುಗಿಯರೇ ನಿಮಗೂ ನನ್ನ ಪ್ರೇಮ ಸಂದೇಶ
ಯಾರಾದರೂ ಹುಡುಗರು ಬಂದು ನಿಮಗೆ ಪ್ರಪೋಸ್ ಮಾಡಿದರೆ ನಿಮಗೆ ಇಷ್ಟ ಇದ್ರೆ ಪ್ರೀತಿ ಮಾಡಿ ಇಲ್ಲ ಅಂದ್ರೆ ಆಗೋಲ್ಲ ಅಂತ ನೇರವಾಗಿ ಹೇಳಿ ಪ್ಲೀಸ್ ಸುಮ್ನೆ ಪ್ರಾಣ ಹಿಂಡಬೇಡಿ ಯಾಕಂದ್ರೆ ಹುಡುಗ್ರು ನಿಮ್ಮನ್ನು ಹೃದಯಕ್ಕೆ ಕೊನೆಗೆ ದೇವತೆಗೂ ವರ್ಣನೆ ಮಾಡಿ ಹೋಲಿಸುತ್ತಾರೆ ಜನ್ಮ ಕೊಟ್ಟ ತಂದೆ-ತಾಯಿಗೋಸ್ಕರ ಪ್ರಾಣ ಕೊಟ್ಟಿರೋ ಘಟನೆ ಇತಿಹಾಸದಲ್ಲೆಲ್ಲೂ ಇಲ್ಲ ಅಂತಹದರಲ್ಲಿ ನಿನ್ನೆ ಮೊನ್ನೆ ಬಂದ ನಿಮಗೋಸ್ಕರ ಪ್ರಾಣನೆ ಕೊಡೊಕೆ ಸಿದ್ದವಾಗಿರುತ್ತಾರೆ ಪ್ಲೀಸ್ ಹುಡುಗರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ ಅವರಿಗೂ ಬದುಕಲು ಅವಕಾಶ ಕೊಡಿ !!!
ಬದುಕೋರಿಗೆ ಭೂ ಲೋಕ
ಸಾಯೋರಿಗೆ ಯಮಲೋಕ
ಪ್ರೀತ್ಸೋರಿಗೆ ಪ್ರೇಮಲೋಕ
ನಿಮಗಾಗಿ ನನ್ನ ಹೃದಯಲೋಕ
ಪಾರ್ಕು ಸಿನಿಮಾ ಸುತ್ತೋದಲ್ಲಾ ಪ್ರೀತಿ
ಮದುವೆಯಾಗಿ ಮಕ್ಕಳು ಮಾಡೋದಲ್ಲಾ ಪ್ರೀತಿ
ಕಾಫಿ ಡೇಲಿ ಕಾಲ ಕಳೆಯೋದಲ್ಲಾ ಪ್ರೀತಿ
ಕಣ್ಣು ತೆರೆದು ಕನಸು ಕಣೋದೇ ಈ ಪ್ರೀತಿ
ಪ್ರೀತಿ ಎಷ್ಟು ಎತ್ತರವೋ ನಿಜವಾಗಿ ಪ್ರೀತಿಸೋರಿಗೆ ಅದು ಹತ್ತಿರ.........
ಪ್ರೀತಿಗೋಸ್ಕರ ಸಾಯೋದಾಗಲಿ, ಸಾಯಿಸೋದಾಗಲಿ ಇನ್ನೊಬ್ಬರಿಗೆ ನೋವು ಮಾಡುವುದಾಗಲೀ ಮಾಡಿದರೆ ಅದು ಪ್ರೀತಿ ಅಲ್ಲ ಪ್ರೀತಿಗೆ ಮಾಡಿದ ಅವಮಾನ....
ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ....?????