Wednesday, November 10, 2010

ಆಕಸ್ಮಿಕವಾಗಿ ನೆಡೆದ ಅಚಾತುರ್ಯ.

 (ಚಿತ್ರ ಕೃಪೆ ಅಂತರ್ಜಾಲ )
ಆಕಸ್ಮಿಕವಾಗಿ ನೆಡೆದ ಅಚಾತುರ್ಯ.

           ತುಂಭಾದಿನಗಳಿಂದ (ಸೆಪ್ಟೆಂಬರ್ ತಿಂಗಳಿನಿಂದ) ಈ ಘಟನೆ ನನ್ನ ಮನಸಿನಲ್ಲಿತ್ತು ಏಕೋ ಎನೋ ಬರವಣಿಗೆಯ ರೂಪ ಕೊಡಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಒಲ್ಲದ ಮನಸ್ಸಿನಿಂದ ಈ ಘಟನೆಗೊಂದು ಲೇಖನ ರೂಪ ಕೊಡುವ ಪ್ರಯತ್ನದಲ್ಲಿ.....
        ಓದುವ ಮುನ್ನಾ...... ಗೊತ್ತಿಲ್ಲದೆ ನೆಡದ ಈ ಘಟನೆಯ ಕಥಾನಯಕಿಗೆ ಕ್ಷಮೇಯಾಚಿಸುತ್ತಾ..

                                             ಅಳಿದುಳಿದ ನೆನಪಿನೊಂದಿಗೆ ಘಟನೆ ಹೀಗಿದೆ  ,,,,,,,
         ಪ್ರತಿತಿಂಗಳು ಕೆಲವು ಮಾಸ ಪತ್ರಿಕೆಗಳನ್ನು(ರೂಪತಾರ, ಗೃಹಶೋಭ.ಚಿತ್ತಾರ. ಇತ್ಯಾದಿ..) ಕೊಂಡು ಓದುವ ಅಭ್ಯಾಸ ನನ್ನದು. ಅದೇ ರೀತಿ ಸೆಪ್ಟಂಬರ್ ತಿಂಗಳ ರೂಪತಾರ ಪತ್ರಿಕೆಯನ್ನು ತೆಗೆದು ಕೊಳ್ಳುವ ಎಂದು ನಮ್ಮ ಮನೆಯ ಪಕ್ಕದಲ್ಲೆ ಇದ್ದ ಒಂದು ಪುಸ್ತಕ ಮಳಿಗೆಗೆ ಬೇಟಿ ಕೊಟ್ಟೆ ನನ್ನ ದುರಾದೃಷ್ಟಕ್ಕೆ ಆ ಮಳಿಗೆಯಲ್ಲಿ ಅವತ್ತು ಒಂದು ಸುಂದರ ಹುಡುಗಿ ಇದ್ದಳು. ರೂಪತಾರವನ್ನು ನೋಡುತ್ತಾ ಅದರಲ್ಲಿರುವ ದಪ್ಪನೆಯ ಒಂದು ಕವರ್ ಕಣ್ಣಿಗೆ ಬಿತ್ತು(ಪುಸ್ತಕದ ಒಳಗಡೆ ಪ್ಯಾಕಿಂಗ್ ಮಾಡಲಾಗಿತ್ತು ) ಅದನ್ನು ವಿಚಾರಿಸಲು ಸಲುವಾಗಿ,
ನಾನು : ರೀ ಈ ಪುಸ್ತಕದಲ್ಲಿ ಏನಿದೆ
ಹುಡುಗಿ: ನೀವೇ ಓದಿ ಸರ್.
ನಾನು : ಅದು ಸರಿ ರಿ ಪುಸ್ತಕ ಪ್ಯಾಕಿಂಗ್ ಆಗಿದೆಯಲ್ಲ ..?
ಹುಡುಗಿ: Open ಮಾಡಿ ನೋಡಿ ಸರ್ (ನಗೆಮುಖದಿಂದ)
ನಾನು: ದುಡ್ಡು ಕೊಡದೆ Open ಮಾಡಬಹುದಾ..?
ಹುಡುಗಿ: ಹಾಗೆಲ್ಲಾ ಅಗೋಲ್ಲ ಸರ್ ದುಡ್ಡುಕೊಟ್ಟೆ Open ಮಾಡಬೇಕು ( ಕೋಪದಿಂದ)
ನಾನು : ಅದು ಸರಿ ರಿ ನೋಡಬೇಕಲ್ಲ ಒಳಗೇನಿದೆ ಅಂತ..!
ಹುಡುಗಿ: ಮನೆಗೆ ತಗೊಂಡು ಹೋಗಿ ನೋಡಿಸರ್ (ಮತ್ತೆ ಕೋಪದಿಂದ)
ನಾನು : ಸರಿ ಕೋಡಿ .
             ಇಷ್ಟೇಲ್ಲ ಆದರೂ ಪುಸ್ತಕದ ಒಳಗಡೆ ಏನಿದು ಎಂದು ಗೊತ್ತಾಗಲಿಲ್ಲ. ಅಲ್ಲಿಂದ ಮನೆಗೆ ಬಂದು Open ಮಾಡಿದರೆ ಶಾಕ್ ಒಳಗಡೆಇದ್ದದ್ದು "Wisper " .  ಸಂಚಿಕೆಯ ಮುಖಪುಟದ ಮೇಲೆ "ಈ ಸಂಚಿಕೆಯೊಂದಿಗೆ ಒಂದು "Wisper " ಉಚಿತ" ಎಂದು ಬರೆದಿತ್ತು. ..! ಅಯ್ಯೋ.. ದೇವರೆ ಸುಮ್ಮ-ಸುಮ್ಮನೆ ಒಂದು ಹುಡುಗಿಯ ಮನಸ್ಸು ನೊಯಿಸಿಬಿಟ್ಟೆನಲ್ಲ ಎಂದು ಕೊಂಡು ...... ನಾನು ಹೇಗಿದ್ರು ಬ್ಯಾಚುಲರ್ ನನಗೇನಕ್ಕೆ ಇದು,  ಸರಿ ಇದನ್ನು ಅವಳಿಗೇ ಕೊಟ್ಟು Sorry ಕೇಳಿಕೊಂಡು ಬರುವ ಎಂದು ಹೊರಟೆ.
ನಾನು: ಸಾರಿ ರಿ..
ಹುಡುಗಿ: ಮೌನ (ಕೋಪದ ಕಣ್ಣುಗಳಿಂದ)
ನಾನು : ನಿಜವಾಗಲು ನನಗೆ ಗೊತ್ತಿರಲಿಲ್ಲ.
ಹುಡುಗಿ: ಮೌನ (ಮುಗುಳ್ನಕ್ಕು)
ನಾನು : ಇದು ನನಗೆ ಬೇಡ ನೀವೆ ಇಟ್ಕೊಳ್ಳಿ.
ಹುಡುಗಿ: ಕೋಪದಿಂದ ನೋಡುತ್ತಾ (ಒಂದು ಲುಕ್ ಕೊಟ್ಟು ತಲೆಬಗ್ಗಿಸಿಕೊಂಡಳು)
        ಸರಿ ಒಲ್ಲದ ಮನಸ್ಸಿನಿಂದ ಆ ಕವರ್ ಅನ್ನು  ಅಲ್ಲಿಟ್ಟು ಹೊರಟೆ ಆ ದಿನದಿಂದ ಇವತ್ತಿನ ವರೆಗೊ ಆ ಹುಡುಗಿ ನನ್ನ ನೋಡಿದ ತಕ್ಷಣ ಮೌನವಾಗುತ್ತಾಳೆ....... ಕಾರಣ ಗೊತ್ತಿಲ್ಲ..! ಘಟನೆ ನೆಡೆದು ತಿಂಗಳುಗಳು ಕಳೆದರು ನನ್ನನ್ನು ಕಂಡ ಅವಳಿಗೆ ,ಅವಳನ್ನು ಕಂಡ ನನಗೆ ಆವರಿಸುವ  ಮೌನ ಮಾತ್ರ ದೂರವಾಗಿಲ್ಲ.


ಪ್ರಿಯ ಸ್ನೇಹಿತರೆ ಈ ಲೇಖನ ಓದಿದ ನಿಮಗೆ ಏನನಿಸುತ್ತದೊ 
ಒಂದು ಕಾಮೆಂಟ್ ಮೂಲಕ ತಿಳಿಸಿ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ.

SATISH N GOWDA