Monday, April 19, 2010

ಸಾರೀ ಕಣೇ ನಿನ್ನ ಮದುವೆಗೆ ನಾನು ಬರೋಕ್ಕೆ ಆಗೋಲ್ಲ




ಸಾರೀ ಕಣೇ ನಿನ್ನ ಮದುವೆಗೆ ನಾನು ಬರೋಕ್ಕೆ ಆಗೋಲ್ಲ 

ಗೇಳತಿ ಅಂದು ಮಾರ್ಚ್ 17 ಆ ದಿನ ನನ್ನ ಹಿಡೀ ಜೀವನದಲ್ಲಿ ಮರೆಯಲಾಗದ ದಿನವಾಗುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಆ ದಿನ ಸಂಜೆ ನನ್ನ ಸ್ನೆಹಿತನೊಬ್ಬ ನನಗೆ ಮತ್ತು ನನ್ನ ಗೆಳೆಯರಿಗೆ ಪಾರ್ಟಿ ಕೊಡುತ್ತಿದ್ದ ನನಗೆ ಸ್ವಲ್ಪ ಬೇಜಾರಾಗಿದ್ದರಿಂದ ಅಪರೊಪಕ್ಕೆ ನಾನು ಸಹ ವಿಸ್ಕಿ ಕುಡಿದಿದ್ದೆ . ಆ ದಿನ ಸಮಯ ಸುಮಾರು 9:30ಕ್ಕೆ ಸರಿಯಾಗಿ ನನ್ನ ಬಾಳನ್ನೆ ಕತ್ತೆಲೆಯಾಗಿಸುವಂತ ಫೊನ್ ಕಾಲ್ ಬಂದೇ ಬಿಟ್ಟಿತು ಆ ಕಡೆಯಿಂದ ನನ್ನ ಇನ್ನೋಬ್ಬ ಗೆಳೆಯ ಮಗಾ ನಿನ್ನ ಹುಡುಗಿಗೆ ಮದುವೆ ಫಿಕ್ಸ್  ಅಯಿತು ಮಾರಾಯ ಮುಂದಿನ ತಿಂಗಳು ಮದುವೆ ಅಂತ ಹೇಳಿಯೇಬಿಟ್ಟ.
     ನನಗೆ ಒಂದು ಕ್ಷಣ ಸಿಡಿಲು ಬಡಿದಂತಾಯಿತು ಕಣ್ಣೆಲ್ಲ ಮಂಜು-ಮಂಜಾಯಿತು ಕುಡಿದ ನಿಶೆಯಲ್ಲ ಒಂದೇ ಒಂದು ಫೊನ್ ಕಾಲ್ ಗೆ ಇಳಿದು ಹೋಯಿತು ನಿಂತಲ್ಲಿ ನಿಲ್ಲಲಾಗಲಿಲ್ಲ . ಪಾರ್ಟಿಗೆ ಕರೆದಿದ್ದ ಸ್ನೆಹೀತನಿಗೂ ಹೇಳದೆ ಅಲ್ಲಿಂದ ಹೋರಟೆ ಬಿಟ್ಟೆ. ವಿಜಯನಗರದಿಂದ ಬಸವೇಶ್ವರನಗರದವರೆಗೂ ನೆಡದೆ ಹೋರಟೆ . ಏನು ಮಾಡಬೇಕು ಅಂತ ತೋಚಲಿಲ್ಲ , ಅಲ್ಲಿಯೇ ಸಮೀಪದಲ್ಲಿದ್ದ ನನ್ನ ಮತ್ತೊಬ್ಬ ಗೆಳೆಯನಿಗೆ ಫೊನ್ ಮಾಡಿ ಕರೆಸಿಕೋಂಡೆ . ಮಾತನಾಡಲು ಅಗಲಿಲ್ಲ ದುಃಖ ಉಮ್ಮಳಿಸಿ ಬರುತ್ತಿತ್ತು ಅವನು ನನ್ನ ಪರಿಸ್ಥಿಯನ್ನು ಅರ್ಥಮಾಡಿಕೋಂಡ . ಬಸವೇಶ್ವರನಗರದ ಬಸ್ ಸ್ಟಾಪ್ ನಲ್ಲಿ ಅವನ ತೊಡೆಯಮೇಲೆ ಮಲಗಿಕೋಂಡು ಅತ್ತೆ ನನ್ನ ಕಣ್ಣಿರು ಧರೆಗೆ ಅವನ ಪ್ಯಾಂಟೆಲ್ಲ ಒದ್ದೆಯಾಗಿತ್ತು . ಅಮೇಲೆ ನನ್ನನ್ನು ಮನೆಯವರೆಗು ಕರೆದುಕೋಡು ಬಂದು ಬಿಟ್ಟ. ಆ ದಿನ ಪುರ್ತಿ ನೂವು ಸಂಕಟದಿಂದ ನಿದ್ದೆ ಬಾರದೆ ಹೋರಳಾಡಿದ್ದೆ  ಆದರೆ  ನೀನು ಮಾತ್ರ ನಿನ್ನ ಭಾವಿ ಪತಿಯೊಂದಿಗೆ ಪೋನಿನಲ್ಲಿ ಹರುಟುತ್ತಿದ್ದೆ ಅಲ್ವಾ..? ಈ  ಮೊದಲಿ ನಿನು ನನ್ನ ಹೊಂದಿಗೆ ದಿನ ರಾತ್ರಿ ಎನ್ನದೇ ಘಂಟೆಗಟ್ಟಲೇ ಪೋನಿನಲ್ಲಿ   ಮಾತಾನಾಡುತ್ತಿದ್ದೆ ಈವಾಗ ಬೇರೆಯವರೊಂದಿಗೆ  ! ಇಬ್ಬರೂ ಗಂಡಸರೆ ಆದರೆ ವ್ಯಕ್ತಿಗಳು ಬೇರೆ-ಬೇರೆ...!
     ಮೊನ್ನೆ ಸ್ನೆಹೀತನೊಬ್ಬ ಹೀಗೆ ಸಿಕ್ಕು ಕೇಳಿದ ..! ಒಂದು ವೇಳೆ ನಿನ್ನ ಹುಡುಗಿ  ನಿನ್ನನ್ನು ತನ್ನ ಮದುವೆಗೆ ಕರೆದರೆ ಹೋಗುತ್ತಿಯಾ...? ಎಂದು ಕೇಳಿದ  ನೀನೇ ಹೇಳೆ ಗೆಳತಿ ನಿನ್ನ ಮದುವೆಗೆ ನಾನು ಹೇಗೆ ಬರಲು ಸಾದ್ಯ...? ಒಂದು ವೇಳೆ ನಿನ್ನ ಒತ್ತಾಯದ ಮೇರೆಗೆ ನಾನು ನಿನ್ನ ಮದುವೆಗೆ ಬಂದರೂ ಆ ಮದುವೆಯ ಊಟ ನನಗೆ ಮದುವೆಯ ಊಟ ಅನಿಸುವುದಿಲ್ಲ ಬದಲಾಗಿ ತಿಥಿಯ ಊಟ ಎಂದನಿಸುತ್ತದೆ . ಏಕೆಂದರೆ ಅಲ್ಲಿ ನಮ್ಮ ಪ್ರೀತಿಯ ಕೋಲೆ ನೆಡೆಯುತ್ತದೆ ಒಂದು ಸಾವು ಅದ ನಂತರ ಅಲ್ಲಿ ನೆಡೆಯುವುದು ತಿಥಿ ಮಾತ್ರ ಅಲ್ಲವೇ ..?
 ನೀನು ನನಗೆ ಸಿಗುವುದಿಲ್ಲ ಎನ್ನುವುದಕ್ಕಿಂತ ನನಗೇ ನಾನೆ ಮೊಸ ಹೋದೆನಲ್ಲ ಎಂಬ ಭಾವನೆ ಕಾಡುತ್ತಿದೆ .   ಹೇ ಗೆಳತಿ ನನಗೆ ಒಂದು ದೊಡ್ಡ ಯಕ್ಷ ಪ್ರೆಶ್ನೆ ಕಾಡುತ್ತಿದೆ ಕಣೇ.. ನಾವಿಬ್ಬರು ಸೇರಿ ಹೀಗೆ ಬಾಳಬೇಕು ಹಾಗೆ ಬಾಳಬೇಕು ಎಂದು ಕಂಡ ಕನಸುಗಳು ನೂರಾರು ಆ ಕನಸುಗಳಲ್ಲಿ ನಾವು ಮತ್ತು ನಮ್ಮ ಮಕ್ಕಳು ಮಾತ್ರ ಇದ್ದೆವು ! ಇನ್ನು ಮುಂದೆ ನನ್ನ ಸ್ಥಾನ ದಲ್ಲಿ ಬೇರೊಬ್ಬರನ್ನು ತಂದು ಕೊಳ್ಳಿರಿಸಿಕೋಡಿದ್ದಿಯಲ್ಲ ಇದು ಸರಿನಾ..?  ನನಗಂತೂ ಅದನ್ನು ಕಲ್ಪಿಸಿಕೋಳ್ಳಲು ಕೂಡ ಸಾದ್ಯಾವಾಗುತ್ತಿಲ್ಲ ಕಣೇ ...!
ಒಂದು ಪ್ರೀತಿ ಕೊಲೆಯಾದಗ ಆ ಪ್ರೀತಿ ಮುಂದೆ ದೆವ್ವ ಅಗುತ್ತಂತೆ .. ಆ ದೆವ್ವ ಪ್ರೀತಿಯನ್ನು ಕೊಲೆ ಮಾಡಿದವರನ್ನು ಕಾಡದೆ ಬಿಡುವುದಿಲ್ಲವಂತೆ ಆ ದೆವ್ವಕ್ಕೆ ನನ್ನದೂಂದು ಸಣ್ಣ ಮನವಿ ಅದೇನಂದರೆ ನನ್ನ ಹುಡುಗಿಯನ್ನು ಹಾಗೆ ಕಾಡುವುದು ಬೇಡ. ಯಾಕೆಂದರೆ ಅವಳು ಮಾತ್ರ ಅವಳ ಪ್ರೀತಿಯನ್ನು ಕೊಂದುಕೋಂಡಿದ್ದಾಳೆ . ನನ್ನ ಪ್ರೀತಿ ಇನ್ನು ಉಸಿರಾಡುತ್ತಿದೆ ಉಸಿರಾಡುತ್ತಲೆ ಇರುತ್ತದೆ..! ಅವಳು ಎಲ್ಲೆ ಇರಲಿ ಹೇಗೆ ಇರಲಿ ತುಂಬ ಸುಖವಾಗಿರಲಿ ಅವಳನ್ನು ಈವಾಗ್ಲು ನಾನು ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ಥಾ ಇದ್ದಿನಿ .. ..  ಪ್ರೀತಿಸುತ್ಥೆಲೆ ಇರುತ್ತೆನೆ ...!
SATISH N GOWDA 
+91 98447 73489

Sunday, April 11, 2010

ಬಿತ್ತಿ ಪತ್ರಿಕೆಗಳಾಗುತ್ತಿರುವ ದಿನ ಪತ್ರಿಕೆಗಳು......

ಬಿತ್ತಿ ಪತ್ರಿಕೆಗಳಾಗುತ್ತಿರುವ ದಿನ ಪತ್ರಿಕೆಗಳು......

ಪತ್ರಿಕೆಗಳೆಂದರೆ ಜನಸಾಮಾನ್ಯರ ಕೈಗನ್ನಡಿ ಇದ್ದಂತೆ ರಾಜ್ಯದ ಹಾಗು ದೇಶದ ಹಾಗು ಹೋಗುಗಳನ್ನ ಎಲ್ಲೊ ಮೂಲೆಯಲ್ಲಿರುವ ಸಾಮನ್ಯಜನರಿಗೆ ತಿಳಿಸುವುದೌ ಎಂದರ್ಥ . ಆದರೆ ಈಗಿನ ಪತ್ರಿಕೆಗಳ ಮಾಡುತ್ತಿರುವುದಾದರು ಏನು ದಿನ ಬೆಳಗಾದರೆ ಜಾಹಿರಾತುಗಳದ್ದೆ ಪತ್ರಿಕೆಯ ತುಂಬೆಲ್ಲ ಕಾರುಬಾರು . ಸೋಮುವಾರ ದಿಂದ ಒಂದಲ್ಲ ಒಂದುರಿತಿಯಲ್ಲಿ ಯಾವುದಾದರು ಪತ್ರಿಕೆಯನ್ನೆ ನೋಡಿ ಜಾಹಿರಾತುಗಳಿದ್ದೆ ಇರುತ್ತವೆ . ಅದರಲ್ಲೂ ಶನಿವಾರ ಮತ್ತು ಭಾನುವಾರ ಬಂತೆಂದೆರೆ ಮುಗಿಯಿತು ಪತ್ರಿಕೆಯಲ್ಲಿ ಜಾಹಿರಾತುದಾರರದ್ದೆ ಎಲ್ಲ ಪುಟಗಳು ಸ್ವಲ್ಪಮಾತ್ರವಲ್ಲ ಮುಖಪುಟದ ತುಂಭ ತುಂಬಿರುತ್ತಾರೆ . ಮೂದಲೆಲ್ಲ ಮನೆಗೆ ಪೇಪರ್ ಬಂದರೆ ನಮಗೆ ಬೇಕಾದ ವಸ್ತುಗಳ ಅಥಾವ ಇನ್ನಾವುದೆ ವಿಷಯಗಳನ್ನು ಹುಡುಕಿ ಜನ ನೋಡುತ್ತಿದ್ದರು ಆದರೆ ಈಗಿನ ಪತ್ರಿಕೆಗಳಲ್ಲಿ ಹುಡುಕುವುದಿರಲಿ ದಪ್ಪ ದಪ್ಪ ಅಕ್ಷರಗಳಲ್ಲಿ ಕಣ್ಣಿಗೆ ರಾಚುವಂತೆ ಮುದ್ರಿಸಿರುತ್ತಾರೆ . ಇದರ ಮದ್ಯ ನಮ್ಮೂರಿನ ಸುದ್ದಿ ಎಲ್ಲಿಯಾದರು ಇದೆಯೇ ಎಂದು ಸುದ್ದಿಯನ್ನ ಹುಡುಕಬೇಕಿದೆ  ಭಾನುವಾರ ಬಂತೆಂದರೆ ಇದು ದಿನ ಪತ್ರಿಕೆಯೋ ಅಥಾವ ಜಾಹಿರಾತು ಪತ್ರಿಕೆ ತಿಳಿಯದಂತಾಗಿದೆ . ಪತ್ರಿಕೆಯ ಮುಖಪುಟದಲ್ಲೆ ದೂಡ್ಡ ದೂಡ್ಡ ಕಂಪನಿಗಳು ಮಾರುಕಟ್ಟೆಯನ್ನೆ ದಪ್ಪ ದಪ್ಪ ಅಕ್ಷರಗಳಲ್ಲಿ  ಬಿಂಬಿಸುತ್ತವೆ. ಈ ಜಾಹಿರಾತುಗಳ ಮದ್ಯ ಪುಟ ತಿರಿವಿದಂತೆ ಅಲ್ಲೋಂದು ಇಲ್ಲೋಂದು ದಿನದ ಸುದ್ದಿಗಳಿರುತ್ತವೆ 
  ಪತ್ರಿಕೆಗಳಲ್ಲಿ ಜಾಹಿರಾತು ಮುಂದ್ರಿಸುವುದು ತಪ್ಪು ಎಂದು ನಾನು ಹೇಳುವುದಿಲ್ಲ . ಪತ್ರಿಕೆಯ ಮಾಲಿಕರಿಗೆ ಜಾಹಿರಾತುಗಳಿಂದ ತಮ್ಮ ಪತ್ರಿಕೆಯ ಸಣ್ಣ ಪುಟ್ಟ ಖರ್ಚುಗಳು ಭರಿಸಬಹುದು ಒಂದು ಪತ್ರಿಕೆಗೆ ಜಾಹಿರಾತುದಾರರೆ ಜೀವಾಳ ನಿಜ . ಆದರೆ ಅದಕ್ಕೆಂದೆ ಪ್ರತ್ಯೆಕ ಪುಟಗಳನ್ನು ಮೀಸಲಿಡಿಲಿ ಓದುಗನಿಗೆ ಜಾಹಿರಾತುಗಳಿಂದ ಬೇಸರವಾಗಬಾರದಲ್ಲವೇ..? ಜಾಹಿರಾತು ಬೇಕಾದ ಓದುಗನಮನಸ್ಸು ನಿರ್ದಿಷ್ಟ ಪುಟಕ್ಕೆ ಹೋಗುತ್ತದೆ ಅದರಿಂದ ಸುದ್ದಿಗಳನ್ನು ಓದುವ ಮನಸ್ಸು ಹಗುರವಾಗುತ್ತದೆ ಅದನ್ನು ಬಿಟ್ಟು ಮಾಲಿಕನು ಜೇಬು ತುಂಬಿಕೋಳ್ಳುವ ಗೋಜಿನಿಂದ  "ದಿನಪತ್ರಿಕೆಯನ್ನ ಜಾಹಿರಾತು ಪತ್ರಿಕೆ"ಯನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಹೇಳಿ  ನಾವು ಜೇಬು ತುಂಬಿಕೋಳ್ಳುವುದರಿಂದ ಓದುಗನ ಮನಸ್ಸು ಕಲುಶಿತಗೂಳಿಸುವುದು ಸರಿಯೇ..? ಜಾಹಿರಾತುಗಳನ್ನು ಕೊನೆಯ ಅಥಾವ ಹಿಂದಿನ ಪುಟಗಳಲ್ಲಿ ಮುಂದ್ರಿಸುವುದು ಒಳ್ಳೆಯದು ಜಾಹಿರಾತು ಎಂಬುದು ಓದುಗನಿಗೆ ಹೊಸ ವಸ್ತುಗಳನ್ನು ಪರಿಚಯಸುವಂತಿರಬೇಕು , ಜಾಹಿರಾತೇ ಓದುಗನಿಗೆ ಮಾನಸಿಕ ಬೇಸರವಾಗ ಬಾರದು ಎಂಬುದು ನನ್ನ ಅನಿಸಿಕೆ.


SATISH N GOWDA
+91 98447 73489
e-mail
satishgowdagowda@gmail.com

Monday, April 5, 2010

ಹುಡುಗರೇ ಹುಷಾರ್ ಹುಡುಗಿಯರಿದ್ದಾರೆ .....!

ಹುಡುಗರೇ ಹುಷಾರ್ ಹುಡುಗಿಯರಿದ್ದಾರೆ .....!

ಹುಡುಗರೇ ಹುಷಾರ್ ಹುಡುಗಿಯರಿದ್ದಾರೆ .....! , ನಿಮ್ಮ ಮೊಬೈಲ್ ಗಳನ್ನು ಚಕ್ ಮಾಡುವುದರಲ್ಲಿ ಹುಡುಗಿಯರು ಚಾಣಾಕ್ಷರು , ಹಾಗೊಂದು ವೇಳೆ ಚೆಕ್ ಮಾಡುವಾಗ ಬೇಡದ Message ಗಮನಕ್ಕೆ ಬಂದರೆ ನಿಮ್ಮ ಸಂಬಂದವನ್ನೇ ಕಡಿದು ಕೊಳ್ಳುತ್ತಾರೆ ಎಂದು ವರ್ಜಿನ್ ಮೊಬೈಲ್ ಕಂಪನಿಯವರು ನಡೆಸಿದ ಇತ್ತೀಚಿನ Online  ಸಮೀಕ್ಷೆ ಒಂದರಲ್ಲಿ ವರದಿ ಮಾಡಿದೆ ಪ್ರತಿಶಹ ಎಪ್ಪತ್ತು ರಷ್ಟು ಹುಡುಗಿಯರು ತಮ್ಮ ಜೊತೆಯಲ್ಲಿರುವ ಹುಡುಗರ ಮೊಬೈಲ್ ಗಲನ್ನು ಚೆಕ್ ಮಾಡುತ್ತಾರೆ ಹಾಗೇ ಮಾಡುತ್ತ ಅವರಿಗೆ ಬಂದMessage ಗಳನ್ನು ಓದುತ್ತಾರೆ ಹಾಗೇ ಓದಿದವರಲ್ಲಿ ಶೇ 90% ರಷ್ಟು ಹುಡುಗಿಯರು ಸಂಬಂದ ವನ್ನೇ ಕಡಿದು ಕೊಳ್ಳುತ್ತರಂತೆ
  ಹುಡುಗರು ಎಷ್ಟೇ ಎಚ್ಚರಕೆಯಿಂದ ತಮ್ಮ ಮೊಬೈಲ್ ಗಳನ್ನು ಕಾಪಾಡಿಕೊಂಡರು ಅವರು ಸ್ನಾನ ಮಾಡುವ ಹೊತ್ತಲ್ಲಿ , ಚಾರ್ಜಿಗೆ ಹಾಕಿರುವ ಸಮಯದಲ್ಲಿ ಅಥವಾ ಅವರು ನಿದ್ರಿಸುವ ಸಮಯದಲ್ಲಿ ಅವರಿಗೆ ಬಂದ  ಹುಡುಗಾ ಅಥವಾ ಹುಡುಗಿಯರ  Messageಗಳನ್ನು ಓದುವ ಹವ್ಯಾಸ ಬೆಳಸಿಕೊಂಡಿರುತ್ತಾರೆ   ಸುಮಾರು 18 ರಿಂದ 22 ವರ್ಷದೊಳಗಿನ 500 ಜನ ಮೊಬೈಲ್ ಬಳಿಕೆದಾರರನ್ನು  ಸಂಪರ್ಕಿಸಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ , ಸಮಿಕ್ಷಯಿಂದ ಬೆಳಕಿಗೆ ಬಂದ ಅಂಶವೆಂದರೆ ಮೊಬೈಲ್ ನಿಂದ ಕಾಲ್ ಮಾಡುವುದಕ್ಕಿಂತ .ಮಿಸ್ ಕಾಲ್  ಕೊಡುವುದಕ್ಕಿಂತ , Message ಕಳುಹಿಸುವುದು ಹೆಚ್ಹು ಅಪಾಯಕಾರಿ ಎಂದು ತಿಳಿಸಿದ್ದಾರೆ
SATISH N GOWDA
+91 98447 73489

Sunday, April 4, 2010

ಹೊಡಾಡುವ B M T C ಎಂದರೆ ಹಾಸ್ಯ ಕಥೆಯುಳ್ಳ ಸಿನಿಮಾಗಳಿಗೇನು ಕಮ್ಮಿ ಇಲ್ಲ ..!

ಹೊಡಾಡುವ   B M T C  ಎಂದರೆ ಹಾಸ್ಯ ಕಥೆಯುಳ್ಳ ಸಿನಿಮಾಗಳಿಗೇನು ಕಮ್ಮಿ ಇಲ್ಲ  ..!

ಬೆಳಗ್ಗೆ ಎದ್ದು ರೆಡಿಯಾಗಿ ವಿಜಯನಗರದ BUS STOP ಗೇ ಹೊರಟರೆ ಹಾಗೇ ಕಣ್ಣಮುಂದೆ ಹಿರೋಹಿನ್ ಎಂಟ್ರಿ ಆಗ್ತಾರೆ ಸಿನಿಮಾದಲ್ಲಿಯಾದರೆ ಒಬ್ಬಳೇ ಹಿರೋಹಿನ್ ಆದರೆ ಇಲ್ಲಿ ಎಲ್ಲರು ಹಿರೋಹಿನ್ ಗಳೇ  ವಿಜಯನಗರದಿಂದ ಮೆಜೆಸ್ಟಿಕ್ ಗೇ ಹೊರಟರೆ ಸುಮಾರು ನಲವತ್ತು   ನಿಮಿಷಗಳ ಕಾಲ ಪಯಣ ಆ ನಲವತ್ತು ನಿಮಿಷದಲ್ಲಿ ಬುಸ್ನೋಳ ಒಕ್ಕರೆ ನಲವತ್ತು ಹಾಸ್ಯಮಯ ದೃಶ್ಯಗಳು ಕಾಣುತ್ತವೆ ಹಾಗೇ ಹೊರಟಂತೆ ನಲವತ್ತು ನಿಮಿಷಗಳ ಪಯಣ ನಾಲಕ್ಕೆ ನಿಮಿಷಕ್ಕೆ ಬಂದರು ಸೋಜಿಗವೆನಿಸುವುದಿಲ್ಲ
    ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಕೆಂಪು ಬಣ್ಣದ  BUS  ಬಂದೊಡನೆ ನಿಲ್ಲುವ  ಬಸ್ಸಿನೊಳಗೆ ಅಷ್ಟೇ ನೀಟಾದ ಸಮವಸ್ತ್ರ ದರಿಸಿ ಕಸಿ ಬಿಸಿ ಅಂತ ಹತ್ತೋ ಹೈಸ್ಕೊಲ್ ಹುಡುಗಿಯರ ಗುಂಪು ಒಂದು ಕಡೆ ಯಾದರೆ, TIP TOP JEENS  ಹಕೊಂಡಿರೋ   COLLAGE    ಹುಡುಗಿಯರ ಗುಂಪು ಇನ್ನೊಂದು  ಕಡೆ, ಎಲ್ಲರು ಒಂದೇ ಒಟ್ಟಿನಲ್ಲಿ ಕಸಿ ಬಿಸಿ ಅಂತ ಬಸ್ ಹತ್ತಬೇಕು ಹೇಗಾದರೂ ಮಾಡಿ ಕಿಟಕಿ ಪಕ್ಕ ಸೀಟ್ ಸಂಪಾದಿಸಿ, ಕುತ್ಕೊಂಡು ರಸ್ತೆಯಲ್ಲಿ ಹೋಗೋ ಬರೋರನ್ನ ನೋಡ್ಕೊಂಡು ಹರಟೆ ಹೊಡಿಬೇಕು .  ಕಣ್ಣುಮುಚ್ಚಿ ಕಣ್ಣು ತೆಗೆಯೋದೊರೊಳಗೆ BUS STOP  ನಲ್ಲಿದ್ದ ಅಷ್ಟೂ ಜನ ಖಾಲಿ BUS  ನಲ್ಲಿರುವ ಅಷ್ಟೂ ಸೀಟ್ ಬರ್ತಿ  ಇದರ ಮದ್ಯ ಕಚೇರಿಗಳಿಗೆ ಹೋಗೋ ಕೆಲ ಹುಡುಗಾ ಅಥವಾ ಹುಡುಗಿಯರು ಪಾಡು ಹೇಳತೀರದು ಜೊತೆಯಲ್ಲಿ ಟಿಫಿನ್ ಬಾಕ್ಸ್ . ಕಷ್ಟ ಪಟ್ಟು ಹತ್ತಿ ಯಾವುದೊ ಒಂದು ಸೀಟ್ ನಲ್ಲಿ ಪವಡಿಸಿ ನಿಟ್ಟುಸಿರು ಬಿಡುವವರೆ ಹೆಚ್ಚು ಇನ್ನೂ ಮಿಕ್ಕವರದ್ದು ಸೀಟಿನ  ಪಕ್ಕದಲ್ಲಿ ನಿಂತು ಸೀಟ್ ಎಲ್ಲಿ ಸಿಗುತ್ತೋ ಎಂದು ಕಾಯತ್ತ ಇರ್ತಾರೆ ಇನ್ನೂ ಕೆಲವರದ್ದು  ಅರ್ಜೆಂಟ್ ಆಫೀಸಿನ ಕೆಲಸ ಇದ್ದು ಪಾಪ ಯಾವಾಗ್ ಸ್ಟಾಪ್ ಬರುತ್ತದೋ ಎಂದು ವಾಚ್ ನೋಡೋತಿರುತ್ತಾರೆ
          ಸದಾ ಕಿಟಕಿ ಪಕ್ಕ ಕೂರೊ ಹುಡುಗಿಯರಿಗೆ ಅಪ್ಪಿ ತಪ್ಪಿ ಸೀಟ್ ಸಿಗಲಿಲ್ಲ ಎಂದರೆ ಇರಸು ಮುರಿಸು ಕಿಟಕಿ ಪಕ್ಕ ರೆಗುಲರ್ ಅಲ್ಲದೆ ಟೆಂಪ್ರವರಿ  ಕೂರೊ ಪಾಪ ಕೆಲಸಕ್ಕೆ ಹೋಗೋ ಅಂಟಿ ಯಂದಿರೆನಾದರೂ  ಕೊತರೆ  ಇಲ್ಲಸಲ್ಲದ ಸಿಟ್ಟು ಇನ್ನೂ ಕೆಲ ಹುಡುಗಿಯರು  ಎಲ್ಲಿ ಇಳಿಯುತ್ತರೋ ಎಂದು ಹದ್ದಿನ ಕಣ್ಣಿನ ತರ ನೋಡುತ್ತಲೇ ಇರುತ್ತಾ ಆ ಸೀಟ್ ಖಾಲಿ ಅದ ತಕ್ಷಣ   ಗಬಕ್ಕನೆ ಸೀಟ್ ಕಸಿದುಕೊಳ್ಳುವ ಪರಿ ರೋಮಾಂಚಕ ಅದರೊ ಕೆಲವರದ್ದು ಒರೆ ನೋಟ . ಕಿಟಿಕಿ ಪಕ್ಕ ಕೂರುವ ಬ್ಲಾಕ್ DRESS ಹುಡುಗಿಗೆ ಯಾವಾಗಲು ತನ್ನ ಪ್ರಿಯಕರನಿಗೆ MEASSEGES ರವಾನಿಸುವುದೇ ದೊಡ್ದಕೆಲಸ , ಡ್ರೈವರ್ ಸೀಟ್ ನಾ ಹಿಂದೆ ಕುಳಿತು ಕೊಳ್ಳುವ ರೆಡ್ ಟಾಪ್ ವೈಟ್ ಪ್ಯಾಂಟ್ ನ ಹುಡುಗಿಗೆ ಬರೇ ಫೋನ್ ನಲ್ಲಿ ಮಾತಾಡುವುದು ಬಿಟ್ಟರೆ ಪಕ್ಕದಲ್ಲಿ ಯಾರನ್ನು ಮಾತಾಡಿಸೋ ಟೈಮ್ ಇಲ್ಲ . ಮತ್ತು ಸಮವಸ್ತ್ರ ಧರಿಸಿರುವ ಹೈಸ್ಕೊಲ್ ಹುಡುಗಿಯರದ್ದು ತಲಹರಟೆ ಹಿಡಿ ಬಸ್ ನಲ್ಲಿರುವ ಜನರು ತನ್ನತ್ತ ನೋಡಿದರು ತಲೆ ಕೆಡಿಸಿಕೊಳ್ಳುವುದಿಲ್ಲ . ಇನ್ನೂ ಬಿಳಿ ಶರ್ಟ್ ಕಪ್ಪು ಪ್ಯಾಂಟಿನ ಯಾವದೋ ಮಾಲ್ ನಲ್ಲಿ ಕೆಲಸ ಮಾಡುವ ಅಂಟಿ ನಕ್ಕಿದ್ದೆ ಕಂಡಿಲ್ಲ , ಎರಡನೇ ಸ್ಟಾಪ್ ನಲ್ಲಿ ಹತ್ತುವ ಹುಡುಗಿಯಂತೂ ಎವುದದಾರು  ಟೆಂಪಲ್ ಬಂದರೆ ಒಂದು ನೂರು ಸಲ ತನ್ನ ಎದೆಗು ತುಟಿಗೂ ಕೈ ತಾಕಿಸುವ ಯತ್ನ (ಕೈ ಮುಗಿಯೋ ಪರಿ ) ರಾಜಾಜಿನಗರದ 6th  ಬ್ಲಾಕ್ನಲ್ಲಿ ಇಳಿಯೋ ಹುಡುಗಿ ತನ್ನ ಬಸ್ ಸ್ಟಾಪ್ ನವರೆಗೂ ನಿತ್ಕೊಂಡೆ ಅಲ್ಲ-ಅಲ್ಲಾ ಸೀಟಿಗೆ ಅಂಟಿಕೊಂಡೇ ಕೈಲಿರುವ ಮೊಬೈಲಿನಿಂದ ಎಸ್ ಎಮ್ ಎಸ್ ಸೆಂಡಿಸುವ    ಆತುರ.ಫುಟ್ ಬೋರ್ಡ್ ನಲ್ಲಿ ನಿಂತ್ಕೊಳೋ ಕಪ್ಪು ಬಣ್ಣದ ಪ್ಯಾಂಟ್  ಬಿಳಿಯ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಟೈ ತೊಟ್ಕೊಂಡಿರೋ    ಹುಡುಗಿ ಫೋನ್ ಕಿವಿಯಲ್ಲಿ ಇಟ್ಕೊಂಡರೆ ಹೆಗಲ ಮೇಲಿರೋ ಬ್ಯಾಗ್ ಕದ್ದು ಕೊಂಡು ಹೋದರು ಸಹ ಗೊತ್ತಾಗಲ್ಲ .     ಇವರೆಲ್ಲರಿಗೋ ಹೋಲಿಸಿದರೆ ಕೆಂಪು ಚುಡಿದಾರ ಹಾಕಿರೋ ಜಿಂಕೆ ಮರಿ ಥರಾ ಇರೋ ಹುಡುಗಿ ಲೇಸು BUS STOP ನಲ್ಲಿ BOOK ಇಡಿದು ಕೊಂಡರೆ ತನ್ನ COLLAGE ಬರೋ ವರಿಗೂ ಯಾರನ್ನು ಮಾತಾಡಿಸೋಲ್ಲ ತಿರಿಗೂ ನೋಡಲ್ಲ ತನ್ನ ಪಾಡಿಗೆ ತಾನು ಓದಿಕೊಂಡು ಇರ್ತಾಳೆ    ಇಷ್ಟೆಲ್ಲಾ ಅದರೂ  ಪಕ್ಕದಲ್ಲಿರುವ ಬೋಪನಿಗೆ ಬೇರೊಬ್ಬರ ಕೈಲಿರುವ ದಿನ ಪತ್ರಿಕೆಯನ್ನ ಕಸಿದು ಕೊಂಡು ಬಿಟ್ಟಿಓದುವ ಚಪಲ.  ಇಷ್ಟೆಲ್ಲಾ ಕಾಮಿಡಿಯ ನಡುವೆ ಕಂಡಕ್ಟರ್ ಮಾವನ "ಯಾರನ್ನು ಕೇಳಿದರು ಪಾಸ್ ಪಾಸ್ ಎಂತಾರೆ ಯಾರು ಕಾಸು ಕೊಡೋರೇ ಇಲ್ಲ " ಅನ್ನೋ ಡೈಲಾಗ್ ಇವತ್ತಿಂದೋ ನೆನ್ನೆಯದ್ದೋ ನೆನಪಿಗೆ ಬರ್ತಿಲ್ಲ ....!
 
SATISH N GOWDA
cell +91 98447 73489
e-mail 
satishgowdagowda@gmail.com
sati_gowda@yahoo.com
my blog
www.nannavalaloka.blogspot.com

Saturday, April 3, 2010

ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ ನಿಂತಿಲ್ಲ ....!

ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ  ನಿಂತಿಲ್ಲ ....!

ಮೋಹಕ ಕಂಗಳ ಚಲುವೆಗೆ ...

ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ ನಿಂತಿಲ್ಲ ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ. ಆ ಮಳೆ ಬಂದ ರಬಸದಷ್ಟೇ ಕಾಡಾಲಾರಾ0ಬಿಸಿತ್ತು  ನಿನ್ನಯ ನೆನೆಪು ಹೇ ಹುಡುಗಿ ಈ ಮಳೆಗೂ ನಿನ್ನ ನನ್ನ ಪ್ರೀತಿಗೂ ಏನೋ ಒಂತರ ಅನುಬಂಧ ,ನಂಟು ನಮ್ಮಿಬ್ಬರ ಪ್ರೀತಿ ಚಿಗುರಿದ ದಿನವನ್ನು ನೆನೆದು ನೋಡು ...! ಅಂದು ನಾವಿದ್ದದ್ದು ನಿಮ್ಮೂರಿನ ಆ ಮಲೆನಾಡ ಗುಡ್ಡದ ಮೇಲೆ ನನ್ನ ಪ್ರೀತಿಯ ಕರೆಗೆ ಒಗುಟ್ಟು  ನಿನ್ನೆಲ್ಲ ಕೆಲಸಗಳನ್ನು ಬಿಟ್ಟು .ಅಂದು ಮಧುರ ಭಾಂದವ್ಯ ದೊಂದಿಗೆ ನನ್ನ ನಿನ್ನ ಪ್ರೀತಿಗೆ ಅಂಕಿತ ಹಾಡಿದ್ದೆ ನೆನಪಿದೆಯ ..? ಹುಡುಗಿ ಹಾಗೇ ನೀನು ನನಗೆ    I LOVE U 2  ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ನಮ್ಮಿಬ್ಬರ ಪ್ರೀತಿಗೆ ಹನಿಯ ಸಿಂಚನ ಮಾಡಿದ್ದ . ನನ್ನ ಪ್ರೀತಿಯ ಗುಬ್ಬಚಿ ಮರಿ ಒದ್ದೆಯಗದಿರಲೆಂದು ಎದೆಯತೋಳಲ್ಲಿ  ನಿನ್ನನ್ನು ಸೇರಿಸಿದ್ದೆ . ಮೊದಲಿನಿಂದಲೂ ಅಷ್ಟೇ ಮಳೆ ಬಂತೆಂದರೆ ಸಾಕು ನನ್ನೆಲ್ಲಾ ನೆನಪುಗಳ ಹಕ್ಕಿಗೆ ರೆಕ್ಕೆ ಬಿಚ್ಚಿ ಹಾರೋ ಸಮಯ ಶುರುವಾಯಿತೆಂದೇ   ಅರ್ಥ ಇದು ನೆನ್ನೆ ಮೊನ್ನೆಯದಲ್ಲ ಸರಿ ಸುಮಾರು ನನ್ನ ಬಾಲ್ಯದಿಂದಲೂ ಕೋಡ  ಅದು ನಿನಗೂ ಗೊತಿಲ್ಲದ ವಿಷಯವೇನಲ್ಲ ಬಿಡು .ಆದರೆ ಅಂತಹ ಎಷ್ಟೋ  ಮಳೆಯದಿನಗಳು ನಮ್ಮಿಬ್ಬರನ್ನ ಭಾವುಕರನ್ನಗಿಸಿವೆ ಅಲ್ಲವೇನೆ ಪಾಪು ...!
             ಕಳೆದ ವಾರ ನಾನು ನನ್ನ ಸ್ನೇಹಿತರ ಜೊತೆಗೊಡಿ  ನಿಮ್ಮೂರಿನ ಕೆಲ ಪ್ರವಾಸಿ ತಾಣಗಳನ್ನು ಸುತ್ತಾಡಿ ಕೊನೆಗೊಮ್ಮೆ  ಆಕಸ್ಮಿಕವಾಗಿ ನಾವು ಪ್ರತಿ ಬೇಟೆಯಲ್ಲೂ  ಕುಳಿತು ಕೊಳ್ಳೋ ಜಾಗದಲ್ಲಿ   ಹೋಗಿ ಕುಳಿತೆ . ಆಕಸ್ಮಿಕವೋ ಅಥವಾ ಅದೃಷ್ಟವೋ ಎಂಬಂತೆ ವರುಣರಾಯ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದ .ಆಗ ಕಾಡಿತ್ತು ಏಕಾಂಗಿತನ ಅವಾಗ ನಿನ್ನ ನೆನಪಿನೊಂದಿಗೆ ಹುಟ್ಟಿದ ಕವನವೇ ಇದು  ಹೇಗೂ ಮುಂದಿನ ರಜಾ ದಿನಗಳಲ್ಲಿ ನಾನು ನಿಮ್ಮ ಊರಿಗೆ ಬರ್ತಿದೀನಿ  ನಿನ್ನ ಹೆಜ್ಜೆಯ ಜೊತೆ ಹೆಜ್ಜೆ ಸೇರಿಸುವ ಆಸೆ, ಕೈ ಕೈ ಹಿಡಿದು ಒಂದಿಡೀ ದಿನ ನಿನ್ನ ಜೊತೆ ಸಾಗುತ್ತಾ ನಿಮ್ಮೂರಿನ ಬೆಟ್ಟ ಗುಡ್ಡಗಳನ್ನು ಪರಿಚಯಸು ನಮ್ಮಿಬ್ಬರಿಗೆ ಆಸರೆಯಾಗಿ ವರುಣರಾಯ ಜೊತೆಯಲ್ಲಿ ಇದ್ದೇ ಇರುತ್ತಾನೆ ಒಂದಿಷ್ಟು ಸಮಯ ಪ್ರೀತಿಯ  ಲೋಕದಲ್ಲಿ ರಾಜ ರಾಣಿ ಯಾಗಿ ಮೆರೆದಾಡುವ ಹಾಗೇ   ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅದರಲ್ಲಿ ನನ್ನ ಪ್ರತಿಬಿಂಬ ಕಾಣುವ ಆಸೆಯಾಗಿದೆ   ಹಾಗೇ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು  ಹೇ ಪಾಪು ರೆಡಿಯಾಗಿರು ....!

SATISH N GOWDA
e-mail
satishgowdagowda@gmail.com
sati_gowda@yahoo.com
my blog
www.nannavalaloka.blogspot.com

Thursday, April 1, 2010

ಹಾಯ್ ಬಣ್ಣದ ಕಾಲವಳೇ ....!



ಹೇಗೇ ಶುರು ಮಾಡಬೇಕೋ ತೋಚುತ್ತಿಲ್ಲ ಕಣೇ ಹೋದ ವರ್ಷವೆಲ್ಲ ನನ್ನನ್ನ ಪ್ರೀತ್ಸೋ  ಪ್ರೀತ್ಸೋ ಅಂತ ನನ್ನ ಬೆನ್ನ ಹಿಂದೆ ಬಿದ್ದಿದ್ದೆ ನೆನಪಿದೆಯ ...? iam love with u ಅಂತ bord ಹಿಡಿದುಕೊಂಡು ಒಂದಿನ ನನ್ನ ರೋಮಿನ ತನಕ ಬಂದಿದ್ದೆ ನೆನಪಿದೆಯ ...? ನನಗೋ ಮನಸಿನಲ್ಲಿರುವವಳು ನಿನಲ್ಲ ಅಂತ ಹೇಗೇ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರುಅಗಿ ನಿಂತಿದ್ದೆ . ನೀನು ಅತ್ತು. ಗೊಗೆರೆದು ಬೆನ್ನಿಗೆ ಗುದ್ದು ಮಾಡಿ please ಕಣೋ ನನಗೇನು ಕಡಿಮೆ ಆಗಿದೆ ಹೇಳು ..? ನಾನು ಚನ್ನಾಗಿಲ್ವ ..? ಓದಿಲ್ವಾ ..? ಅಥವಾ ನಿನ್ನ ಟೆಸ್ಟ್ಗೆ ಒಗ್ಗೊಲ್ಲವ ಹೈಟು ನಿನಗಿಂತ ಎರಡಿಂಚು ಕಡಿಮೆ ಇದೀನಿ ಅಷ್ಟೇ ..! ನಿನಗೆ ಬೇಕಂದ್ರೆ ಒಂಚೂರು ದಪ್ಪ ಆಗ್ತೀನಿ ಹೇ ಹುಡುಗ ಸತ್ಯ ಹೇಳ್ತೀನಿ ಕೇಳೋ ಹುಡುಗಾ Realy love with u  dear ನೀನು ನನ್ನನ್ನು ಪ್ರೀತಿ ಮಾಡ್ತೀನಿ ಅಂತ ಒಂದೇ ಒಂದ್ಸಲಿ  ಹೇಳೋ  ಅಲ್ಲಿ ನನ್ನದು ಅಂತ ಏನೂ  ಇರಲ್ಲ ಎಲ್ಲಾ ನಿನ್ನ ಆಣತೆಯಂತೆ  ನೆಡೆದು  ಕೊಳ್ಳುತ್ತೇನೆ    . ನಿನ್ನ ದಿನಕೊಂದು ಸಿನಿಮಾ ನೋಡೋ ಹುಚ್ಚಿಗೆ ನಾನೂ ಬಲಿಯಗುತ್ತೇನೆ  ಆದರೆ ಅವೆರಡನ್ನು ಬಿಟ್ಟು ..! ಒಂದು ನೀನು ನಿಮಿಷಕ್ಕೆ ಹತ್ತು ಸಲ ಎಳೆದು ಬಿಡ್ತಿಯಲ್ಲ ಸಿಗರೇಟಿನ ಹೋಗೆ ಅದು ಮತ್ತೆ ಕಣ್ಣು ಮಿಟಿಕಿಸದೇ ಹುಡುಗಿಯರನ್ನ ನೋಡ್ತಿಯಲ್ಲ ಅದು ಇದೆಲ್ಲ ನನಗೀಗೆ ಗೊತ್ತಾಯಿತು ಅಂಥಾನ ಲೋ ಹುಡುಗಾ ನಿನ್ನ ಬಗ್ಗೆ ನನಗೆಲ್ಲ ಗೋತ್ತು ಕಣೋ ...! ಇಲ್ಲ ಅನ್ನಬೇಡ Please ನನಗೆ ನಿನ್ನ ಮುಖ ನೋಡದೆ ಇರೋಕ್ಕೆ ಆಗ್ತಿಲ್ಲ ಕಣೋ, ನೀನು ಹೇಗೇ ಇದ್ದರೂ  ನಾನು ಸಹಿಸಿಕೊಂಡು ನಿನ್ನ ಜೊತೆ ಜೀವನ ಮಾಡ್ತೀನಿ ಅಂತ ಹೇಳ್ತಿದ್ದಿಯಲ್ಲ ಕೇಳು ಪ್ರೀತಿಯ ಹುಡುಗಿ ನಿನ್ನ ಮೇಲೆ ನನಗೀಗ ಮನಸಾಗಿದೆ  . so iam love with u now  .
       ಹೇ ಹುಡುಗಿ ನಿನಗೆ ಗೋತ್ತಾ ಈ ಬಡ್ಡಿ ಮಗಂದು ಈ ಪ್ರಿತೀನೆ ಹಾಗೇ ಕಣೇ ಯಾರೋ ನನ್ನನ್ನ ಪ್ರಿತಿಸ್ತಿದಿನಿ ಅಂದಾಗ ....! ಇವಳಿಗೆ ಮಾಡೋದಕ್ಕೆ ಬೇರೇ ಕೆಲಸ ಇಲ್ವಾ ಅನಿಸಿಬಿಡುತ್ತೆ . ಅದೇ ಅವಳು ದೂರ ಅದಾಗ ಛೀ ಅವಳನ್ನ ತುಂಬಾ miss   ಮಾಡ್ಕೊತಿದಿನಿ  ಅಂತ ಅನಿಸುತ್ತೆ . realy i miss u dear .ಹೇ ಪಾಪು ಮನಸ್ಸು ನೀನಿಲ್ಲದೆ ಬೇಕೋ ಅಂತಿದೆ ಕಣೇ ನೀನು ನನಗೆ ಕೊಟ್ಟ ಪ್ರೀತಿಯ ಉಡುಗೊರೆಯನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ ಗೋತ್ತಾ ...! ಅವತ್ತೇಕೋ ಸುಮ್ಮನೆ ಕುಳಿತಿದ್ದ ನನಿಗೆ ನೀನು ಕಾಡಿದ ಪರಿ ಸ್ವಲ್ಪ ಸಮಯದ ನಂತರ ನಾನು ಸತ್ತರು ಪರವಾಗಿಲ್ಲ ನಿನ್ನನ್ನು ಆಗಲೇ ನೋಡಬೇಕು ಅನಿಸಿಬಿಡ್ತು ಕಣೇ ನಿನ್ನ ಹಾಸ್ಟೆಲ್  ಅತ್ರ ಹೋದರೆ ಅವಳು ಊರಿಗೆ ಹೋಗಿ ಒಂದು ಘಂಟೆ ಆಯಿತು ಅಂದ್ರು .ಅವತ್ತು ಇಡೀ ದಿನಾ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತು ಅತ್ತು ಬಿಟ್ಟೆ ಗೋತ್ತಾ ಪಾಪು . ಆ ಕಲ್ಲಿಗೋ ಕನಿಕರ ಬಂತೇನೆ ಗೊತ್ತಿಲ್ಲ ....? ನನಗೆ ಗೋತ್ತು ನಿನಗೆ ಸಿಟ್ಟು ಬಂದಿದೆ ಅಂತ ಆದರೆ ಏನೂ ಮಾಡಲಿ ಮನಸ್ಸು ನೀನೇ ಬೇಕು ಅಂತಿದೆ ಕಣೇ ..! ಅವಗೆಲ್ಲ ನಿನ್ನ ಮುಖ ನೋಡೋಕ್ಕೆ ಬೇಜಾರು ಆಗ್ತಿತ್ತು ನಿಜ ,ಈಗ ಅದೇ ಮುಖ ನೋಡ್ಬೇಕು ಅಂತ ಕಂಗೊಲೀಸುತ್ತಿದ್ದೇನೆ , ನಿನ್ನ ನಗು ನೋಡಬೇಕು ಅಂತ ಅನಿಸ್ತಾ ಇದೆ ಕಣೇ .ಮಾತು ಕೇಳಬೇಕೆನಿಸುತ್ತಿದೆ  ನನ್ನೆಲ್ಲಾ ಮೌನ ನಾ ಕಟ್ಟಿಟ್ಟು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ  ಹಾಡನ್ನ ನನ್ನೆದೆ ಹೊಳಗಡೆ ಗೊನಗಬೇಕಿದೆ ಎಲ್ಲಿ ಹೋದೆ ಸುಂದರ ಹುಡುಗಿ ...? ಹೇ ನಿಜ ಹೇಳು ನನ್ನ ನೀನು ಟೆಸ್ಟ್ ಮಾಡ್ತಿಲ್ಲ ತಾನೆ ..?
         ಮುಂದಿನ ಬಾನುವಾರದಂದು ನಿನಗೆ i love u ಹೇಳಲಿಕ್ಕೆ ಕಾದು ಕುಳಿತಿದ್ದೇನೆ . ಎದೆಯಲ್ಲಿ ಅದೆಂತದ್ದೋ  ಪುಳಕವಿದೆ  , ಆಸೆ ಇದೆ , ಅಧಮ್ಯ ಉತ್ಸಾಹವಿದೆ , ನೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ , ಜೊತೆಗೆ ಭಯವು ಇದೆ ಇವತ್ತು ಕೂತು ಮಾತಾಡಿಕೊಳ್ಳೋದೇ   ಬೇಡೆ . ಜೆಸ್ಟ್ ನೀನು ಸಿಗು  ಸಾಕು ತಾಳಿಕಟ್ಟಿ ಬಿಡುತ್ತೇನೆ .ಈವತ್ತಿನಿಂದ ನೀನು ನನ್ನವಳು ಅದೇನು ಪಟ್ಟದ ರಾಣಿ ಅಂತಾರಲ್ಲ ಹಾಗೇ ನಿನ್ನ ನೋಡ್ಕೋತೀನಿ . ನಿನ್ನ ರವಕೆಯ ಹುಕ್ ಹಾಕುವುದರಿಂದ ಹಿಡಿದು ಮುಡಿಗೆ ಮಲ್ಲಿಗೆ ಹೂ ಮುದಿಸುವುದರ ತನಕ ಎಲ್ಲಾ ಜವಾಬ್ದಾರಿ ನನ್ನದು "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೇ  ಮಹಾ ರಾಣಿಯ ಹಾಗೇ ಎಲ್ಲಾ ಕೆಲಸ ಮಾಡಿ ಮುಗಿಸುವೆ " ತಪ್ಪು ನನ್ನದಾಗಿದೆ ನಿಜ . ಹಾಗಂತ ಮತ್ತೊಮ್ಮೆ ಕಾಡಬೇಡ ಕಣೇ . ಸತಾಯಿಸಬೇಡ ,ಕೊಲ್ಲಬೇಡ ನನ್ನೆಲ್ಲಾ ತಪ್ಪುಗಳನ್ನು jest ಕ್ಷಮಿಸಿ ಬಿಡೇ .
        ಇದೆ  ಬಾನುವಾರ ಬೆಳಗ್ಗೆ ನಾನು ನೀನು ಸೇರೋ ಅದೇ ಲಾಲ್ ಬಾಗ್ ನಾ ಎಡ ತಿರುವಿನಲ್ಲಿ ಪುಟ್ಟ ಹೊವಿನ ಗಿಡದ ಹತ್ತಿರ ಕಾಯತ್ತ ನಿಂತಿರುತ್ತೇನೆ ಅವತ್ತಿನಿಂದ ಬದುಕೊದಾದರೆ ಇಬ್ಬರು ಒಟ್ಟಿಗೆ ಬದುಕೋಣ ಸತ್ತರು ಕೋಡ  ಒಟ್ಟಿಗೆ ...! ಬರ್ತಿಯಲ್ಲ ನೀ ಬರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ .....! 

SATISH N GOWDA
e-mail
my blog's