ನಿನ್ನ ಪ್ರೀತಿಗೆ ದಾಸನಾಗಲು..?
ನಿನ್ನ ಸುಂದರ ರೂಪ
ನನ್ನ ಕನಸಲ್ಲಿ ಬಂದು
ನ್ನನ್ನೆಲ್ಲ ರಾತ್ರಿಗಳನ್ನು
ಒಂದೇ ಸಮನೆ ಲೋಟಿ ಮಾಡುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರಿಯತಮನಾಗಲು..?
ಜೇನಿನ ಹನಿಯಂತ ನಿನ್ನ ಪ್ರೀತಿ
ನ್ನನ್ನೀ ಹೂವಿನಂತ ಮನಸ್ಸುನ್ನು
ಸದ್ದಿಲ್ಲದೇ ದಿನೇ ದಿನೇ ದೋಚಿ ಹೊಯ್ಯುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?
ಸದಾ ನಿನ್ನದೇ ನೆನಪುಗಳು
ನನ್ನ ಈ ಪುಟ್ಟ ಹೃದಯದಲ್ಲಿ
ದಿನಕಳೆದಂತೆ ರಾಶಿಯಾಗುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ಶರಣಾಗಲು..?
ನಾಳಿನ ಕನಸುಗಳನ್ನು ಹೊತ್ತ ನನ್ನೀ ದೇಹ
ದಿನ ಬೆಳಗಾಗುವುದುರೊಳಗಾಗಿ
ನಿನ್ನ ನೆನಪುಗಳೊಂದಿಗೆ ಮಿಲನವಾಗುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?
ನಿನ್ನ ಪ್ರೀತಿಗೆ ದಾಸನಾಗಲು..?
SATISH N GOWDA

No comments:
Post a Comment