Wednesday, October 20, 2010

ನೀ ನನ್ನ ಪ್ರೀತಿಯ ದೇವತೆ ಕಣೇ....

ನೀ ನನ್ನ ಪ್ರೀತಿಯ ದೇವತೆ ಕಣೇ...

        ಓದುವ ಮುನ್ನ.....
ಇದು ಕೇವಲ ಕಾಲ್ಪನಿಕ ಬರವಣಿಗೆ  
ಯಾರ ಜಿವನಕ್ಕೋ ಸಂಬಂದ ಪಟ್ಟಿರುವುದಿಲ್ಲ
ಇದುನ್ನು ಕೇಳುವ ಹಕ್ಕು ಯಾವುದೇ ಹುಡುಗಿಗಾಗಲಿ 
ಅಥವಾ  ಯಾವುದೇ ಮಹಿಳೆಗಾಗಲಿ    ಇರುವುದಿಲ್ಲ  ..
(ಚಿತ್ರಗಳು ಅಂತರ್ಜಾಲದಿಂದ  ಆಯ್ದುಕೊಳ್ಳಲಾಗಿದೆ ) 
                 ಹಾಯ್ ಸುಷಿ.. ( ನಾ ನನ್ನ ದೇವತೆಗೆ ಇಟ್ಟ ಪ್ರೀತಿಯ ಹೇಸರು) ನಮ್ಮಿಬ್ಬರ ಮಾತಿನ ಒಪ್ಪಂದದ ನಂತರ ನಾನಂತು ನಿನ್ನನ್ನ ನೆನಸಿಕೊಳ್ಳುವುದನ್ನ ಬಿಟ್ಟಿದ್ದಿನಿ ಕಣೇ ಆದರೋ ನಿನ್ನ ನೆನಪು ದುಮಿಕ್ಕುವ ಜಾಲಧಾರೆಯಂತೆ ಕಾಡುತ್ತಿರುತ್ತದೆ ನೆನ್ನೆ ನನ್ನ ಕನಸಲ್ಲಿ ಬಂದುಕಾಡಿದ ನಿನ್ನಯ ನೆನಪು ಅವಿಸ್ಮರಣಿಯ... ಈ ಪ್ರಪಂಚದ ಪರಿವೆ ಇಲ್ಲದೆ ರಾತ್ರಿ ತಿಂದುಂಡು ಮಲಗಿದ್ದೆ, ನಿನ್ನಯ ನೆನೆಪಿನ ಕನಸು ನನ್ನನ್ನು ಒಮ್ಮೆ ಬೆಚ್ಚಿಬಿಳಿಸುವಂತೆ ಮಾಡಿತ್ತು.
ನಿನ್ನೆಯ ಕನಸು ಬಂದ ಬಗೆ...
ಈಡೀ ಕಗ್ಗತ್ತೆಲೆಯನ್ನು ಸೂರ್ಯ
ಒಮ್ಮೆಲೆ ನುಂಗಿದ ಹಾಗೆ...
ಅಯಾಗಿ ಮಲಗಿದ್ದವನ ಕನಸಲ್ಲಿ
ಭೂಮಿ ಪ್ರಳಯವಾದ ಹಾಗೆ....
ಒಂದು ದೈತ್ಯ ಕಲ್ಲು ಬಂಡೆ
ತಂತಾನೆ ಬಂದು ಎದೆಗೆ ಅಪ್ಪಳಿಸಿದ ಹಾಗೆ...
ಇದ್ದಕ್ಕಿದ್ದಂತೆ ಈ ಭೂಮಿ
ಪಾತಳಕ್ಕೆ ಕುಸಿದು ಬಿದ್ದ ಹಾಗೆ....
ಮರುಭೂಮಿಯಲ್ಲಿ ಬಿಸುವ
ಬಿರುಗಾಳಿಯ ಹಾಗೆ....

           ನಿಜ ಅಲ್ವೆನೆ ಸುಷಿ... ಕಾಲ ಎಷ್ಟೊಂದು ಕ್ರೂರಿ ಅಲ್ವಾ..? ಪ್ರೀತ್ಸೊ ಹೃದಯಗಳನ್ನ ಹುಡುಕಿ... ಹುಡುಕಿ.. ಕೊಲ್ಲೊದೆ ಈ ಕಾಲದ ನಿಯಮ ಅಂತ ನನಗನಿಸುತ್ತೆ.. ಕಣೇ. ನಿನ್ನಯ ನೆನುಪುಗಳು ನನ್ನೆದೆಯಲ್ಲಿ ಇನ್ನು ಮಾಸಿಲ್ಲ ಕಣೇ ಹುಡುಗಿ ಹಿಮಾಲಯ ಬೆಟ್ಟದಿಂದ ಜಿನುಗುವ ಮಂಜಿನಹನಿಯ ಹಾಗೆ ಈ ಪ್ರಾಣ ಇರೊವರೆಗೊ ಜಿನುಗುತ್ತಲೇ ಇರುತ್ತದೆ . ನೀನು ಹೇಳಿದ ಒಂದು ಚಿಕ್ಕ ಪದ (ನನ್ನನ್ನು ಮರೆತು ಬಿಡು ಸತೀಶ) ನನ್ನೆಲ್ಲ ಕನಸುಗಳನ್ನ ಸುಡುವ ಕಾಳ್ಗಿಚ್ಚಿನಂತೆ ಹಬ್ಬುತ್ತದೆ ಎಂದು ನಾನು ಬಾವಿಸಿರಲಿಲ್ಲ ನಾ ನಿನ್ನ ಮರೆಯೋದ...?
ಅದು ಸಾದ್ಯವಿಲ್ಲದ ಮಾತು.
ಯಾಕೆ ಗೊತ್ತಾ....?
ಲೇ ದಡ್ಡಿ
ಭೊಮಿ ಆಕಾಶ ಎಲ್ಲದರೂ ಒಂದಾಗುತ್ತಾ...?
ಸೂರ್ಯ- ಚಂದ್ರ ಎಲ್ಲದರೂ ಸೇರುತ್ತಾರ...?
ಸಮುದ್ರ ಯಾವಗಲಾದ್ರು ಬರಿದಾಗುತ್ತಾ...?

               ನಾ ಹೇಳಿದ ಇವಿಷ್ಟರಲ್ಲಿ ಯಾವದಕ್ಕಾದರು ಹೌದು ಅಂತ ಉತ್ತರ ಕೊಡು ಸಾಕು ಆ ಕ್ಷಣದಲ್ಲೆ ನಾ ನಿನ್ನನ್ನ ಮರೆಯುವ ಪ್ರಯತ್ನ ಮಾಡುತ್ತೆನೆ ....! ಅಗೊಲ್ಲ ಅಲ್ವ....! ಹಾಗೆ ನಾನು ನಿನ್ನ ಮರೆಯೊಕೆ ಅಗೊಲ್ಲ ಕಣೇ ಹುಡುಗಿ ನೀ ನನ್ನ ಜೀವ ಕಣೇ.  ಬೇಕಾದರೇ ಪ್ರಾಣ ಬಿಡು ಅಂತ ಹೇಳು ಬಿಟ್ಟುಬಿಡುತ್ತೆನೆ ನನ್ನನ್ನ ಮರೆತುಬಿಡು ಅಂತ ಮಾತ್ರ ಹೇಳಬೇಡ ಕಣೇ ಸುಷಿ ...
ನಿನ್ನನ್ನ ನಾ ಮರೆಯಲು ಕಾರಣಗಳಿಲ್ಲ . ನಿನ್ನ ನೆನಪುಗಳು ನನ್ನಲ್ಲಿ ಸವೆಯುದೂ ಇಲ್ಲ .
ನೆನಪಾದೆ ಇಂದು ನೀನು ... ಹಾಗೆ ಸುಮ್ಮನೆ...
ಹೇ ಗೆಳತಿ
ಅಂದು ನೀ ಕೊಟ್ಟ
ಪ್ರೀತಿಯ ಸಿಹಿ ಮುತ್ತುಗಳನ್ನ
ಮರಯಲಾದೀತೆ ಇಂದು..?

ಹೇ ಗೆಳತಿ
ಅಂದು ನೀನಾಡಿದ
ಪಿಸುಮಾತಿನ
ಕಲರವವನ್ನ
ಮರಯಲಾದೀತೆ ಇಂದು..?

                ಹೇ ಸುಷಿ ನನ್ನ  ನೆನಪಿನ ಚೀಲದಲ್ಲಿ ಹೇಳಲಾಗದ ಕವಿತೆಗಳ ಸರಮಾಲೆ. ಗೀಚಿಬರೆದರೂ ಮಗಿಯದ ಪ್ರೇಮದ ಸಂದೇಶಗಳನ್ನ  ಅವಿತಿಟ್ಟುಕೊಂಡಿದ್ದೆನೆ  ಹೇ ಹುಡುಗಿ "ನೀ ನನ್ನ ಪ್ರೀತಿಯ ದೇವತೆ" ಕಣೇ ಈ ಭಕ್ತನ ಕೂಗು ನಿನಗೆ ಕೇಳಿಸದಿದ್ದರೆ ನಾನು ಹುಟ್ಟಿದ್ದೆ ದಂಡ....  "ಕೂಗಿ.. ಕೂಗಿ ಕರೆದರೂ ನಾನು ಕೇಳಲಿಲ್ಲವೇ ಒಮ್ಮೆ ಬಂದು ಹೋಗೆ ನೀನು ಕರುಣೆ ಇಲ್ಲವೇ.."
ನೀನಿಲ್ಲದ ನಾನು.......
ನಾನಾಡುವ ಈ ಮಾತು ವ್ಯರ್ಥ.
ಉಸಿರಾಡುವ ಗಾಳಿ ವ್ಯರ್ಥ.
ನಾ ನೋಡುವ ಕಣ್ಣು ವ್ಯರ್ಥ.
ನಾ ಹುಟ್ಟಿದ ಈ ಜನ್ಮ ವ್ಯರ್ಥ.
         ಇನ್ನೊಮ್ಮೆ, ಮತ್ತೊಮ್ಮೆ , ಮಗದೊಮ್ಮೆ ಯೋಚನೆ ಮಾಡು ಸುಷಿ ನಾ ನಿನ್ನ  ಮೇಲಿಟ್ಟ ಪ್ರೀತಿ ಯಾವ ಮಜ್ನುಗೂ ಕಡಿಮೇನಿಲ್ಲ ಈ ಜನ್ಮ ಪೂರ್ತಿ ನಿನ್ನ ಪ್ರೀತಿನ ಕಾಯುವ ದಾಸ ನಾನು.  ನಿನ್ನ ಪ್ರೀತಿ ಪಡೆಯಲೇಂದೆ  ಆ ಬ್ರಹ್ಮನಲ್ಲಿ ವರ ಪಡೆದು ಹುಟ್ಟಿದ ಕೂಸೆ ನಾನು  .  ಪಡೆಯದೆ ಹೊದರೆ ನಿನ್ನ ಪ್ರೀತಿ ನನ್ನಂತ ಪಾಪಿ ಇನ್ನೊಬ್ಬನಿಲ್ಲ ನನಗೇಂದೆ ಇನ್ನೊಂದು ಜನ್ಮವಿದ್ದರೆ ಅದು ಕೂಡ ನಿನ್ನ ಪ್ರೀತಿಗೆ ಮುಡಿಪು.....

ನಿನ್ನ ಪ್ರೀತಿಯ ಕಾಯಕ
SATISH N GOWDA

ಅವಳ ಬಗ್ಗೆ ಇಣುಕು ನೋಟ 
ನೆಚ್ಚಿನ  ಗೆಳತಿಗೆ  ಮೊದಲ  ಪ್ರೀತಿಯ ಪತ್ರ .....
http://nannavalaloka.blogspot.com/2009/12/hi-sushma.html
"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "
http://nannavalaloka.blogspot.com/2010/02/blog-post_11.html 

12 comments:

Mahesh said...

ಸೊಗಸಾಗಿದೆ , ಪ್ರೀತಿಯ ತೀವ್ರತೆ ಅರಿತವರಿಗೆ ಮಾತ್ರ ಗೊತ್ತು

ಜಲನಯನ said...

ಸತೀಶ್ ಏನಿದು ಕವನ್ಗಥೆ...??
ಯಾರಲ್ಲಿ ಅನುರಕ್ತ ಬೆಂದ ಮನಸಿದು
ತುಡಿತ ಕಡಿತವಾಗುವ ಕನಸಿದು
ಬೇಡ ಈ ಪರಿಯ ತಾಪ, ಈ ಖ್ವಾಯೀಶ್
ಕವನ್ಗಥೆಯ ಮೂಲಕದ ವ್ಯಥೆ ಸತೀಶ್

ಸತೀಶ್ ಗೌಡ said...

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಮಹೇಶ್ .... ಹೀಗೇ ಓದುತ್ತಿರಿ ...

ಸತೀಶ್ ಗೌಡ said...

ಧನ್ಯವಾದಗಳು ಜಲಾನಯನ ಸರ್ ಗೆ ....
ಈ ಕಥೆ ನನ್ನಜಿವನದ್ದೆ ಈ ಲೇಖನದಲ್ಲಿ ಮೊಲ ಹುಡುಗಿಯ ಹೆಸರನ್ನ ಬದಿಲಿಸಲಾಗಿದೆ . ತುಂಬಾ ದಿನಗಳ ನಂತರ ನನ್ನವಳಲೋಕಕ್ಕೆ ಬಂದಿದಿರಿ ಸ್ವಾಗತ ನಿಮಗೆ .... ಹೀಗೇ ಓದುತ್ತಿರಿ ...

- ಕತ್ತಲೆ ಮನೆ... said...

ಏನಯ್ಯ.. ನಿನ್ ಕಥೆ?/..

ನನ್ನ 'ಮನಸಿನಮನೆ'ಗೂ ಬನ್ನಿ..

ಸತೀಶ್ ಗೌಡ said...

ಏನಿದೆ ಸರ್ ನಾ ಹೇಳೋದನಲ್ಲ ಹೇಳಿದ್ದೇನೆ ... ಇನ್ನೂ ಮುಂದೆ ನೀವೇ ಹೇಳ್ಬೇಕು

ಸೀತಾರಾಮ. ಕೆ. / SITARAM.K said...

ತೀವ್ರತೆಯ ಕಥನ. ಮರೆಯಲೇಬೇಕು...ಇನ್ನೊಂದರ ಹಿಂದೆ ಹೊರಟರೆ ಎಲ್ಲಾ ಮರೆಯುತ್ತೇ,

ಸತೀಶ್ ಗೌಡ said...

ಹಹ್ಹಹ ಹಹ್ಹ್ಹ್ಹಹಹ ..... ಕಾಮಿಡಿ ಮಾಡ್ತಿದ್ದೀರ ಸರ್ ...?

SANGETHA'S BLOG said...

seetaram sir heliddanne nanu helbeku ankonde satish

Anonymous said...

ಪರಾವಾಗಿಲ್ಲ ಬಿಡಿ ಸರ್ . ಒಂದು ಹುಡುಗಿ ಇಲ್ಲ ಅಂದ್ರೆ ಏನಂತೆ ,ಇನ್ನೋಬ್ಬಳು ಇದ್ದೆ ಇರ್ತಾಳೆ. ಅಲ್ವಾ.. ನೈಸ್ ವ್ರೈಟಿಂಗ್..

ಸತೀಶ್ ಗೌಡ said...

ಹಾಗಿದ್ರೆ ಸಂಗೀತಾನೀವೂ ಕೂಡ ಕಾಮಿಡಿ ಮಾಡ್ತಿದ್ದೀರಾ .... ನನ್ನವಳಲೋಕಕ್ಕೆ ಸ್ವಾಗತ

ಸತೀಶ್ ಗೌಡ said...

ಅನಾಮಿಕ ಬಾಸ್ ನೀವು ಲವ್ ಮಾಡಿಲ್ಲ ಅನಿಸುತ್ತೆ ಅದಕ್ಕೆ ಈ ರೀತಿ ಹೇಳ್ತಿದ್ದಿರಾ ಇದು ರಿಯಲ್ ಲವ್ ಎಫೆಕ್ಟ್ "ನಾವು ಹಾಕಿರೋ ಶರ್ಟ್ ಹರಿದು ಹೋದರೆ ಚೇಂಜ್ ಮಾಡಬಹುದು ಮನಸ್ಸು (ಪ್ರೀತಿಸಿದ ಹುಡುಗಿ )ಹೊಡೆದು ಹೋದರೆ ಚೇಂಜ್ ಮಾಡೋದು ಕಷ್ಟ" .... ನನ್ನವಳಲೋಕಕ್ಕೆ ಸ್ವಾಗತ