Monday, July 5, 2010

ಹುಡಗರೇ ಹುಶಾರ್ "ಅಣ್ಣಾಮೇಲ್"( ಬ್ಲಾಕ್ ಮೇಲ್) ಗಳಿದ್ದಾರೆ......

ಹುಡುಗಿಯರಿಗೆ ಒಂದು ಕಿವಿ ಮಾತು .......
ಸಿಕ್ಕ-ಸಿಕ್ಕಾ ,ಕಡೆ -ಕಂಡ -ಕಂಡ ಹುಡುಗರು ನಿಮಗೆ I LOVE U ಹೇಳುತ್ತಿದ್ದಾರೆಯೇ ಅವರಿಗೆಲ್ಲ "ಅಣ್ಣಾ  ಮೇಲ್"
 ಮಾಡಿ ಇನ್ನೊಮ್ಮೆ ನಿಮ್ಮ ತಂಟೆಗೆ ಬರಲಾರರು ...

ಹುಡಗರೇ ಹುಶಾರ್ "ಅಣ್ಣಾಮೇಲ್"( ಬ್ಲಾಕ್ ಮೇಲ್) ಗಳಿದ್ದಾರೆ......

            ಈ ಕಾಲದಲ್ಲಿ  18 ರಿಂದ  22 ರವಯಸ್ಸಿನ ಹುಡುಗಿಯರು ಯಾರಿಗೆತಾನೆ ಇಷ್ಟ ಅಗೊಲ್ಲ ಹೇಳಿ... .? ಅದರಲ್ಲೂ ನಮ್ಮ ಚಿಂದಿ ಚೋರ್ ಹುಡುಗರು ಕೇಳಬೇಕಾ ಕಣ್ಣಿಗೆ ಕಾಣೊ ಹುಡುಗಿಯರಿಗೆಲ್ಲ I LOVE U  ಅಂತ ಹೇಳುವಷ್ಟು ವಿಶಾಲ  ಹೃದಯದವರು. ಒಂದು ಹುಡುಗಿ ಪರಿಚಯವಾದ ತಕ್ಷಣ ನಿಮ್ಮ ಅಪ್ಪ-ಅಮ್ಮ ಹೇಗಿದಾರೆ ? ನಿನಗೆ ಅಕ್ಕ -ತಂಗಿಯರಿದ್ದಾರ..? ಅಂತ ಮಾತು ಪ್ರಾರಂಬಿಸುವ ಮೂಲಕ ಸ್ನೇಹಿತೆಯರಲ್ಲಿ ಸೋದರ ಭಾವನೆ ಬಿತ್ತುವ, ಅಥಾವ ತನ್ನ ಅಯ್ಕೆಯನ್ನು ಸ್ವತಂತ್ರವಾಗಿಡುವ ತಂತ್ರವಿದು. ಬೆಂದಕಾಳುರು ಎಂಬ ಮಹನಗರದಲ್ಲಿ ಯಾವಗಲೂ ತುದಿ ಬಾಯಿಯಲ್ಲೆ ಇರುವ ಶಬ್ದವೆಂದರೆ "ಮಚ್ಚಾ" . ಈ ಪದ ಎಕ್ ದಮ್ ಸೋದರ ಭಾವನೆ ಮೂಡಿಸುವ ಪದಗಳಲ್ಲಿ ಒಂದು. ಈ ಹುಡುಗರು ಪ್ರಪೋಸ್ ಮಾಡುವ ರೀತಿ ಒಂದೇ ಎರಡೇ ಕಾಲೇಜ್ ಕ್ಯಾಂಪಸ್ , ಬಸ್ ಸ್ಟಾಪ್ ,ಪಾರ್ಕ್ , ಈ ನಡುವೆ ಇಂಟರನೆಟ್ ಚಾಟಿಂಗ್ ಗಳಲ್ಲಿ ಬಲು ನಜೋಕಾಗಿ ಹೇಳಬಲ್ಲರು.
        .... ಹೀಗೆ ಹುಡುಗಿಯರ ಹಿಂದೆ ಬೀಳುವ ಮಜ್ನುಗಳಿಂದ ತಪ್ಪಿಸಿಕೊಳ್ಳಲು ಹುಡುಗಿಯರ ಹತ್ತಿರ ಹತ್ತು ಹಲವಾರು ಅಸ್ತ್ರಗಳಿರುತ್ತವೆ  . ಒಂದೋ ರಾಖಿಕಟ್ಟಿಬಿಡುವುದು.... ರಾಖಿ ಕಟ್ಟುವ ಅಸ್ತ್ರ ಎಲ್ಲಾ ಸಮಯದಲ್ಲಿ ಉಪಯೋಗವಾಗುವುದಿಲ್ಲ . ಯಾಕೆಂದರೆ ರಾಖಿಕಟ್ಟುಲು ಹೋದ ಪ್ರಸಂಗವನ್ನೆ ಪ್ರಪೋಸ್ ಮಾಡಲು  USE ಮಾಡಿಕೊಂಡ ಪಡ್ಡೆ ಹುಡುಗರ  ದಂಡೇ ಇದ್ದಾರೆ. ಹಿಗಾಗಿ ರಾಖಿಕಟ್ಟುವ ವಿಷಯವನ್ನು ಬಿಟ್ಟು ಹುಡುಗಿಯರು ಅಯ್ದುಕೊಂಡ ಮತ್ತೊಂದು ಅಸ್ತ್ರವೆಂದರೆ . ಪರಿಚಯವಾದ ಮೊದಲ ನೋಟದಲ್ಲೆ "ಅಣ್ಣ" ಎಂದುಬಿಡುವುದು, ನಂತರ ಕಂಡು-ಕಂಡಲ್ಲಿ ಅಣ್ಣ ಎಂದು ತನ್ನ ಗೆಳತಿಯರಿಗೆ ತಾನೆ ಪರಿಚಯ ಮಾಡಿಕೊಡುವುದು. ಹೀಗೆ ಹೇಳಿದ ಮೇಲೆ ಹುಡುಗ ಬಾಯಿ ಬಿಡೊಹಾಗಿಲ್ಲ ಅಂತಹ "ಅಣ್ಣ ಮೇಲ್" (ಬ್ಲಾಕಮೇಲ್) ತಂತ್ರವಿದು . ಇದನ್ನೆಲ್ಲ ಮೀರಿ ಹೊರಟರೆ "ಪೋಲಿ" ಅನ್ನೊ ಪಟ್ಟ ಕಟ್ಟಿಬಿಡುತ್ತಾರೆ . ಇದರಿಂದ ಇದ್ದ ಹತ್ತಾರು ಹುಡುಗಿಯರ  ಸಂಪರ್ಕ ತಪ್ಪಿ ಹೋಗುತ್ತದೆ. ಆ ಹುಡುಗನಿಗೆ ಮುಂದೆ ಉಳಿಯೋ ಆಯ್ಕೆ ಈ ಮೋದಲು ಇದೇ  ತಂತ್ರಕ್ಕೆ ಬಲಿಯಾದ ಹತ್ತು ತಂಗಿಯರ ಜೊತೆ ಸೇರಿ ಹನ್ನೊಂದನೆ ಹುಡುಗಿಗೆ ಸ್ಕೇಚ್ ಹಾಕುವುದು
           ಇದೇನೆ ಇರಲಿ ಹುಡುಗಿಯರ ಬತ್ತಳಿಕೆಯಲ್ಲಿ ಇಂತದ್ದೆ ಅಸ್ತ್ರವಿರುತ್ತೆ ಅಂತ ಹೇಳೊಕ್ಕೆ ಅಗೋಲ್ಲ ಬಿಡಿ . ನಾನು ನನ್ನ ಕಾಲೇಜ್ ನಲ್ಲಿ ನೆಡದ ಘಟನೆಯನ್ನ ನಿಮಗೆ ಹೇಳುತ್ತೆನೆ. ನಾನು ನನ್ನ ಚಿಂದಿ ಚೋರ್ ಗೆಳೆಯರ ಜೋತೆ ಸೇರಿ ನಾಟಕ ಮಾಡಬೇಕೆಂದು ತಿರ್ಮಾನಿಸಿದೆವು . ನನ್ನನ್ನ ಆ ನಾಟಕದ ಸೋತ್ರದಾರಿಯನ್ನಾಗಿ ಮಾಡಿದರು. ಎಲ್ಲ ಪಾತ್ರಗಳಿಗೆ ಜನ ಸಿಕ್ಕರೋ ಹಿರೋಯಿನ್ ಅಪ್ಪನ ಪಾತ್ರ ಯಾರು ಮಾಡಲು ಸಿದ್ದವಿರಲಿಲ್ಲ  ಯಾರನ್ನ ಕೇಳಿದರೋ " ನೋಡು ಮಗಾ ನೀನ್ ಎನ್ ಬೇಕಾದ್ರು ಹೇಳು ಅದೋಂದು ಪಾತ್ರ ಮಾತ್ರ ಮಾಡೊಲ್ಲ " ಅಂತ ಖಾಡಾ ಖಂಡಿತವಾಗಿ ಹೇಳೊರು . ಕಡೆಗೆ ಹೀರೋಯಿನ್ ಅಪ್ಪನ ಪಾತ್ರ ನಾನೆ ಮಾಡಬೇಕಾಯಿತು . ಸರಿ ಅಂತ ನಾನೆ ಒಪ್ಪಿಕೊಂಡೆ. ಸರಿ ನಾಟಕದ ಪ್ರಾಕ್ಟೀಸ್ ಶುರುವಾಯಿತು ಹೀರೊಯಿನ್ ನನ್ನನ್ನ "ಡ್ಯಾಡಿ.. ಡ್ಯಾಡಿ "ಅಂತ ಕರೆಯುತ್ತಿದ್ದಳು ಇದನ್ನು ನೋಡಿ ಮಿಕ್ಕ ನನ್ನೆಲ್ಲ ಫ್ರೆಂಡ್ಸ್(ಹುಡುಗಿಯರು ಮಾತ್ರ ) ಡ್ಯಾಡಿ.. ಡ್ಯಾಡಿ.. ಅಂತ ಕರೆಯೊಕೆ ಶುರುಮಾಡಿದರು .ಇದೇನಪ್ಪಾ ಕರ್ಮ  ಗಣಪತಿಯನ್ನ ಮಾಡೊಕೆ ಹೋಗಿ ಅವರಪ್ಪನ್ನ ಮಾಡಿದ್ನಲ್ಲಾ..! ಅಂತ ಮನಸ್ಸಿನಲ್ಲೆ ಅಂದುಕೊಂಡು,  ಇರಲಿ ನಾಟಕ ಮುಗಿಯೋತನಕ ಅಲ್ವಾ ಅಂತ ಸಹಿಸಿಕೊಂಡೆ.
 ನಾಟಕ ಮುಗಿಯಿತು . ಒಳ್ಳೊಳ್ಳೆ ಪ್ರಶಂಸೆ ಗಳ ಸುರಿಮಾಳೆಯೇ ಬಂತು ಇಡೀ ಕಾಲೇಜ್ ನನ್ನ ಬಗ್ಗೆ ಮಾತಾಡೋಕೆ  ಶುರುಮಾಡಿದರು   ಮಾರನೆಯ ದಿನ ಕಾಲೇಜ್ ಕ್ಯಾಂಪಸ್ ಗೆ ಬರ್ತೀನಿ .....  ನನ್ನ ಪ್ರೆಂಡ್ಸ್ "ಏನ್ ಮಾಮ್ ನಾಟಕ ಪ್ರೈಜ್ ಹೊಡಿತಂತೆ " ಅನ್ನೋದೆ  ನಾನು ಕರೆಂಟ್ ಹೊಡದ ಕಾಗೆ ತರ ಆಗಿಹೋದೆ  ಶಿವ.. ಶಿವ . ಒಂದು ಕಡೆ ಈ ಹುಡುಗಿಯರು "ಡ್ಯಾಡಿ.. ಡ್ಯಾಡಿ" ಅನ್ನೋದು ಇನ್ನೊಂದು ಕಡೆ ಆ ಹುಡುಗಿಯರ ಎದುರಲ್ಲೆ ಹುಡುಗರು "ಮಾಮ್... ಮಾಮ್ " ಅನ್ನೊದು .... ಹಬ್ಬಾಬ್ಬ.. ನನಗೆ ಸಿಟ್ಟು ಬಂದು ಏಯ್ ಕೋತಿಗಳ ಮೂದಲು ನಿಮ್ಮ ಅತ್ತೆನಾ ಹುಡುಕಿಕೊಂಡು ಬನ್ನಿ . ಅಮೇಲೆ ಬೇಕಾದ್ರೆ ಮಾಮ್ ಅನ್ನಿ ಅಂದೆ . ಅವತ್ತೊ ಹೋದವರು ಇವತ್ತಿಗೊ ಬಂದಿಲ್ಲ....

SATISH N GOWDA 
satishgowdagowda@gmail.com

6 comments:

SANGETHA'S BLOG said...
This comment has been removed by the author.
SANGETHA'S BLOG said...

HI satish ನಾಟಕದ ಜೋಕ್ ಚನ್ನಾಗಿದೆ .......... keep writing...

Anonymous said...

hahahaha thumba chennagide satish ee article , adarallu koneya nimma dailogue superbbb kanri

SANGETHA'S BLOG said...

TUMBA CHANNAGIDE SATISH NIVU YAKE KAVIYADABARADU......

SATISH N GOWDA said...

SANGETHA ಕವಿಯಾಗೊದಕ್ಕೆ TRI ಮಾಡ್ತಿದೀನಿ ನನ್ನವಳಿಗೊಸ್ಕರ ALMOST ಕವಿಯಗಿದಿನಿ. ಧನ್ಯವಾದಗಳು ಕಾಮೆಂಟ್ ಬರೆದಿದ್ದಕ್ಕೆ ...

SATISH N GOWDA said...

ಹಾ ...! ವಿದ್ಯಾ ಅದು ನಿಜವಾಗ್ಲೂ ನಡೆದದ್ದು . ನಾನು ನಿಮಗೆ ನಾಟಕದ ರೂಪದಲ್ಲಿ ಹೇಳಿದ್ದೇನೆ ಥ್ಯಾಂಕ್ಸ್ ಕಾಮೆಂಟ್ ಬರೆದದ್ದಕ್ಕೆ Keep With Me........ vidya...