Friday, July 16, 2010

ಅದು ನಿನೇನಾ..!


ಅದು ನಿನೇನಾ..!
ನನ್ನಲೊಂದು
ಅಳಿಸಲಾಗದ
ಪ್ರೀತಿ ಇಹುದು
ಆ ಪ್ರೀತಿ ನೀನಾಗುವೆಯಾ ...!

ಮನಸ್ಸಿನಲ್ಲೊಂದು
ಮರೆಯಲಾಗದ
ಕನಸಿಹುದು
ಆ ಕನಸು ನಿಂದೇನಾ...!

ಸಂಜೆಯಾದರೆ
ಧೋ ಎಂದು ಅಪ್ಪಳಿಸುವ
ಸುಂದರ ನೆನೆಪಿಹುದು
ಆ ನೆನೆಪು ನಿನೇನಾ...!
                                    ಸತೀಶ್ ಏನ್ ಗೌಡ

4 comments:

ವಸಂತ್ said...

ಹಾಯ್ ಸತೀಶ್ ಗೌಡ ನಿಮ್ಮ ಕವನಗಳು ಚೆನ್ನಾಗಿದೆ. ಆದರೆ ನಿನ್ನ ಕವನಗಳಲ್ಲಿ ಕೇವಲ ಪ್ರೀತಿ, ಪ್ರೇಮ, ಮೋಹದ ಬಗ್ಗೆಯೆ ಇರುತ್ತವೆ. ಅವುಗಳನ್ನು ಬಿಟ್ಟು ಬೇರೆ ಏನಾದರೂ ಬರೆಯಬಹುದಲ್ಲ. ಎಂದರೆ ಹೆಣ್ಣಿನ ಶೋಚಣೆಯ ಬಗ್ಗೆ, ಬಡತನದ ಬಗ್ಗೆ, ಕೋಪ, ಅಸೂಯೆ, ಒಂಟಿತನ, ಒಡೆದುಹೋದ ಮನಸ್ಸುಗಳು ಮುಂತಾದವುಗಳ ಬಗ್ಗೆಯು ಸ್ವಲ್ಪ ಬರೆಯುವುದನ್ನು ಕಲಿತೆರೆ. ನಿನ್ನಿಂದಲೂ ಉತ್ತಮ ಸಾಹಿತ್ಯ ಹೊರಬರಲು ಸಾಧ್ಯವೆಂದು ನನ್ನ ಬಾವನೆ. ಕೋಪ ಗೊಳ್ಳದಿರು ಇದನ್ನು ನೀನು ಮಾಡಬೇಕೆಂದಲ್ಲ ಅವಕ್ಕೂ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ಒಳ್ಳೆಯದೆಂದು ಕೊಳ್ಳುತ್ತೇನೆ ಧನ್ಯವಾದಗಳು.

SATISH N GOWDA said...

ವಸಂತ್ ಹಾಗೇನಿಲ್ಲ ನಾನು ಕವನ , ಕವಿತೆ ಬರೆಯಬೇಕೆಂದು ಯಾವತ್ತೂ ಪೆನ್ನು ಹಿಡಿದವನಲ್ಲ. ಕನಸಿನ ಕೆಲವು ಅರ್ಥ ಗಳಿಗೆ ಬರವಣಿಗೆಯ ರೂಪ ಕೊಡುವ ಪ್ರಯತ್ನ ಮಾಡುತ್ತೆನೆ ಅಷ್ಟೇ ..! ಹಾಗಾಗಿ ಕವನಗಳು ತಾನಾಗಿಯೇ ಉದ್ಬವಗೊಳ್ಳುತ್ತವೆ . ನೀವು ಹೇಳಿದ ಮೇಲೇ ನಿಜವಾಗಿಯೂ ನಾನು ಪ್ರಯತ್ನ ಪಡುವ ನಿಟ್ಟಿನಲ್ಲಿ ಸಾಗುತ್ತೇನೆ. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ......... ಹೀಗೆ ನನ್ನೊಂದಿಗೆ ಹಜ್ಜೆ ಹಾಕಿ...

shivu.k said...

ಹಾಯ್ ಸತೀಶ್,

ನಿಮ್ಮ ಕವನ ಚೆನ್ನಾಗಿದೆ. ಭಾವಾನಾತ್ಮಕ ಲೋಕಕ್ಕೆ ಕರೆದೊಯ್ಯುತ್ತದೆ.
ಬಿಡುವಾದಾಗ ನನ್ನ ಮುಖ್ಯ ಬ್ಲಾಗ್ ಛಾಯಾಕನ್ನಡಿಗೆ ಬನ್ನಿ.

http://www.chaayakannadi.blogspot.com/

SATISH N GOWDA said...

ಶಿವು ,ಕೆ ಧನ್ಯವಾದಗಳು ........ ಖಂಡಿತಾ ಬರುತ್ತೇನೆ ......