Wednesday, June 9, 2010

ನಾ ಬರೆದ ಕವನ

ನಾ ಬರೆದ ಕವನ
ಪ್ರೀತಿಯ ಮಳೆಯಲ್ಲಿ
ನೀ ನನ್ನ
ನೆನಸಿದೆಯೇ
ಹೊರೆತು
ಕೊಡೆಯಾಗಲಿಲ್ಲ
ಕಾಲೇಜ್ ಹುಡುಗರ ಪಜೀತಿ

ಕಾಲೆಜು ಎಂದರೆ ಬಲೆ ಮೋಜು
ಅಲ್ಲಿ ಬರುವುದು ಹುಡುಗಿಯರಿಗೆ ಏಜು
ಹಾಕುವರು ಹುಡುಗಿಯರ ಹತ್ತಿರ ಸ್ಟೇಜು
ಆಡುವರು ಪ್ರಿನ್ಸಿಪಾಲರ ಹತ್ತಿರ ಜೂಜು
ಕೋನೆಗಾಗುವುದು ಕಾಲೇಜು ಕ್ಲೋಜು

ಹುಡುಗಿಯರು
ಅಲ್ಲಿ ನೋಡು ಹುಡುಗಿಯರ ಗುಂಪು
ಅವರ ಡ್ರಸ್ಸೆಲ್ಲ ಕೆಂಪು
ಅವರಲ್ಲಿ ಯಾರನ್ನು ಮುಟ್ಟಿದರೂ ತಂಪು
ಆದರೆ ಮುಟ್ಟಿಸಿಕೊಳ್ಳಲ್ಲ ಅದೇ ತಪ್ಪು


ಓ ನನ್ನ ನಲ್ಲೆ...
ನಲ್ಲೆ ನೀ ನಗುವಾಗ ನಿನ್ನ ಹಲ್ಲಿ ದಾಳಿಂಬೆ
ನಲ್ಲೆ ನೀ ಕೋಪಗೊಂಡಾಗ ನಿನ್ನ ತುಟಿ ಸೇಬು
ನಲ್ಲೆ ನೀ ನೋಡಿದಾಗ ನಿನ್ನ ಕಣ್ಣು ನವಿಲು
ನಲ್ಲೆ ನೀ ನೆಡೆದಾಗ ನಿನ್ನ ಕಾಲು ಹಂಸ
ನಲ್ಲೆ ನಾ ನಿನ್ನ ಜೊತೆ ಇದ್ದರೆ
ಅದೆ ಆ ದೆವರು ನನಗೆ ಕೊಟ್ಟ ಸ್ವರ್ಗ

ಹೃದಯ...
ನಲ್ಲೆ ನಾ
ನಿನ್ನ ಹೃದಯದ
ಬಿಗಿಮುಷ್ಟಿಯಲ್ಲಿ
ಬಂದಿಯಾಗಿರುವೆ
ಕರುಣೆಯಿಟ್ಟು ಪ್ರೀತಿ ಕೊಡು

ಓ ನನ್ನ ನಲ್ಲೆ
ನಾ
ಪ್ರೀತಿಯ ಕಾಡಿನಲ್ಲಿ
ಕುರಡನಾಗಿರುವೆ ನೀನೆ
ಕೈ ಹಿಡಿದು ನೆಡೆಸು ಬಾ.....

ನಾನೇ ಧನ್ಯ... ಯಾಕೆ ಗೊತ್ತಾ...!
ನಲ್ಲೆಯ ಕಣ್ಣಿಂದ ಎರಡು ಹನಿ
ಕೆನ್ನೆಯ ಮೇಲೆ ಊರುಳಿ
ಭೂಮಿಗೆ ಬಿದ್ದು ತೇವ ಗೊಂಡು
ಅಲ್ಲೊಂದು ಸಸಿಯೊಟ್ಟಿ
ಗಿಡವಾಗಿ ಬೆಳೆದು ಮರವಾಯಿತು
ಆ ಮರದ ತುಂಬೆಲ್ಲಾ ಬಣ್ಣ ಬಣ್ಣದ ಹೂವುಗಳು

ನಾನೇ ಧನ್ಯ... ಯಾಕೆ ಗೊತ್ತಾ...!
ನಲ್ಲೆಯ ಕಣ್ಣಿಂದ ಎರಡು ಹನಿ
ಕೆನ್ನೆಯ ಮೇಲೆ ಊರುಳಿ
ಭೂಮಿಗೆ ಬಿದ್ದು ಕಾಲುವೆಯಾಗಿ ಹರಿದು
ನದಿಯಾಗಿ ಸಮುದ್ರ ಸೇರಿತು
ಆ ಸಮುದ್ರದ ತುಂಬೆಲ್ಲ ಸುಂದರ ಮುತ್ತುಗಳು ...

ನಾನೇ ಧನ್ಯ... ಯಾಕೆ ಗೊತ್ತಾ...!
ನಲ್ಲೆಯ ಕಣ್ಣಿಂದ ಎರಡು ಹನಿ
ಕೆನ್ನೆಯ ಮೇಲೆ ಊರುಳಿ
ಭೂಮಿಗೆ ಬಿದ್ದು ಭೂಮಿ ತೆವಗೊಂಡು
ಹಾವಿಯಾಗಿ ಮೋಡವಾಯಿತು
ಆ ಆಕಾಶದ ತುಂಬೆಲ್ಲ ಮಿನು ಮಿನುಗುವ ನಕ್ಷತ್ರಗಳು

ನಿಜವಾಗಿಯೂ ಆ ಎರಡು ಹನಿಗೆ ಕಾರಣವಾದ ನಾನೇ ಧನ್ಯ........


ಆ ದೇವರು ಅಂತ ಮೇಲಿರೊ ಮುರ್ಖನಿಗೆ.....


ಭೂಮಿಯಲ್ಲಿ ಹುಟ್ಟಿದ ಬಳ್ಳಿಗೊಂದು ಹೂ ಕೊಟ್ಟೆ
ಆಕಾಶದಿಂದ ಕೆಳಗಿಳಿಯೊ ಹನಿಗೊಂದು ಸಮುದ್ರ ಕೊಟ್ಟೆ
ಗಾಳಿಯಲ್ಲಿರೊ ಮೋಡಕ್ಕೊಂದು ಅಂದ ಕೊಟ್ಟೆ
ನೀರಿನಲ್ಲಿರೊ ಮೀನಿಗೊಂದು ಸುಂದರ ಕೊಟ್ಟೆ
ಇದೆಲ್ಲದರ ಮದ್ಯ ಮಾನವನಾಗಿ ಹುಟ್ಟಿದ ನನಗೇನು ಕೊಟ್ಟೆ ನೀನು...

ಸಂಡೆ ಟು ಮಂಡೆ
ಸೋಮುವಾರ ಬೆಳಗ್ಗೆ ಶುರುವಾದರೆ
ಮಂಗಳವಾರ ಆದ್ರು ಮಂಗಳ ಆಡೊಕೆ ಟೈಮ್ ಇರೊಲ್ಲ
ಬುಧವಾರ ಬೆಳಗ್ಗೆ ಎದ್ದು ಇನ್ಮೆಲೆ ಇದನ್ನೆಲ್ಲ ಬಿಟ್ಟುಬಿಡ ಬೇಕು ಅಂತ
ಗುರುವಾರ ಗುರು, ಶಿಷ್ಯರ ಜೊತೆ ಸ್ಕೆಚ್ ಹಾಕಿ
ಶುಕ್ರವಾರ ರಾಬರಿ ಮತ್ತೆ ಶುರು ಮಾಡಿ
ಶನಿವಾರ ಶನಿನ ಹೆಗಲೇರಿಸಿಕೊಂಡಿದ್ದರೂ
ಭಾನುವಾರ ಬೆಳಗ್ಗೆಯಿಂದ ಸಾಯಂಕಾಲು ಹಾಲಿಡೆ ಅಂತಾರೆ ಮುಂದೆವು...

ಪಾರಿವಾಳವಾಗು
ನೀ ನನ್ನದೆಯಲ್ಲಿ ಸ್ವಚ್ಚಂದವಾಗಿ ಹಾರಡುವ ಪಾರಿವಾಳ ವಾಗು.....

No comments: