Tuesday, June 1, 2010

ತಪ್ಪು ಮಾಡದೋರ್ ಯರವರೋ ತಪ್ಪೇ ಮಾಡದೋರ್ ಎಲ್ಲೋವರೋ

                     ಪ್ರಿಯ ಓದುಗರೇ......  ನಾನು ಲಾಸ್ಟ್ ಟೈಮ್ ಮೊಬೈಲ್ ನಿಂದ ಹುಡುಗಿಯರ ಮೇಲಾಗುವ ಪರಿಣಾಮಗಳ ಬಗ್ಗೆ " ಹುಡುಗಿಯರು ಹೀಗು ಇರುತ್ತಾರೆ " ಎಂದು  ಬರೆದಿದ್ದೆ . ನನ್ನ ಕೆಲ ಮಿತ್ರರು ಉತ್ತಮ ಅಬಿಪ್ರಾಯ ತಿಳಿಸಿದ್ದರು  ಹಾಗೆ ಸಲಹೆಗಳು ಕೊಟ್ಟಿದ್ದರು . ಅದರಲ್ಲಿ ಒಬ್ಬ ಗೆಳೆಯ  ಮಾತ್ರ ಈ ಸಲ ಬರಿದಾಗ ಆರ್ಕುಟ್ ಬಗ್ಗೆ ಬರೆಯೋ ಮಗ ಅಂತ ಹೇಳಿದ್ದ  ಈ ನನ್ನ ಬ್ಲಾಗ್  ನಾನು ಬ್ಲಾಗ್ ನ ಬರೆಯಲು ಸ್ಪೂರ್ತಿ ಕೊಟ್ಟ ಆ ನನ್ನ ಗೆಳೆಯನಿಗೆ ಕೃತಜ್ಞೆತೆಗಳು . ಅದನ್ನು ನೋಡಲು ಕೆಳಗಿರುವ ಲಿಂಕನ್ನು  ಕ್ಲಿಕ್ ಮಾಡಿ 
http://nannavalaloka.blogspot.com/2010/02/blog-post_08.html

             "ತಪ್ಪು ಮಾಡುವುದರಲ್ಲಿ ಹೆಣ್ಣು ಮೂದಲ ಗುರು""ತಪ್ಪು ಮಾಡದೋರ್  ಯರವರೋ ತಪ್ಪೇ ಮಾಡದೋರ್ ಎಲ್ಲೋವರೋ "
             ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ಕೆಲಸದ ನಿಮಿತ್ತ ದೂರದ ಊರಿನಲ್ಲಿರುವ, ಅಥಾವ ಗೆಳೆಯರ ಜೊತೆ ಸಂಪರ್ಕ ಸಾದಿಸುವಂತ ಈ ಸಾಮಾಜಿಕ ಸಂಪರ್ಕ ಜಾಲದಲ್ಲಿ ಖಾತೆ ತೆರೆಯುವವರ ಸಂಖ್ಯ ಇತ್ತಿಚೆಗೆ ಕಡಿಮೆ ಎಂದೇ ಹೇಳಬಹುದು ಕಾರಣ ಇಂತಹ ಸುಮಾರು ಜಾಲಗಳು ಈಗ ನಮ್ಮ ಮದ್ಯ ಹುಟ್ಟಿಕೊಂಡಿವೆ. ಕೆಲಸದಲ್ಲಿ ಬ್ಯುಸಿ ಆದ ಕಾರಣ ಇತ್ತಿಚೆಗೆ ನಾನು ಕೂಡ ಅರ್ಕುಟ್ ಗೆ ಬೇಟಿನೀಡಿ ತುಂಬಾ ದಿನಗಳಾಗಿದ್ದವು ಒಂದಿನ SUNDAY ಅಲ್ಲವಾ ಎಂದುಕೊಂಡು ಹಳೆಯ ಗೆಳತಿಯರ , ಮತ್ತು ಬಂದಿರುವ ಸ್ಕ್ರಾಪ್ ಗಳಿಗೆ REPLAY ಮಾಡೊಣ ಎಂದು ಕೆಲವು ತಿಂಗಳುಗಳನಂತರ ಅರ್ಕುಟ್ ಗೆ ಬೇಟಿನಿಡಿದ್ದೆ. ಹಳೆಯ ನೆನಪುಗಳನ್ನು ಕೆದುಕುತ್ತಾ.. ಗೆಳತಿಯರ ಪ್ರೊಫೈಲ್  ಕ್ಲಿಕ್ ಮಾಡುತ್ತಾ ಹೊಗುವಾಗ ಕಂಡಿದ್ದು ಹೆಚ್ಚಿನ ಗೆಳತಿಯರು ಸಿಂಗಲ್ ಆಗಿದ್ದವರು ಕಮಿಟೆಡ್ ಎಂದು ಬರೆದುಕೊಂಡಿದ್ದಾರೆ. ಕಮಿಟೆಡ್...! ಎಲಾ ಇವಳಾ ಎಂದು ಅವಳಿಗೆ ಪೊನಾಯಿಸಿದರೆ ಅವಳಿಂದ ಬಂದ ಉತ್ತರ ಎಸ್ ಐಯಾಮ್ ಕಮಿಟೆಡ್.... ಹೇ ನಿಂಗೊತ್ತಾ ನಾನು ಒಂದು ಹುಡುಗನನ್ನ ಲವ್ ಮಾಡ್ತಿದ್ದೆನೆ ಅದಕ್ಕೆ ಕಮಿಟೆಡ್ ಅಂತ ಬರದೆ.......... ಕಾಲೇಜ್ ನಲ್ಲಿ ಲವ್ ಬಗ್ಗೆ ಪ್ರಬಂದ ಬರೆಯೊ ಥರ ಹೇಳುತ್ತಾ ಹೋದಳು......   I Think  ಎಲ್ಲ ಹುಡುಗಿಯರು ಪ್ರೇಮದಲ್ಲಿ ಬೀಳೊದೆ ಬದಕು ಗೆದ್ದಂತೆ ಅಂದುಕೊಂಡಿದ್ದಾರೆ. ಈ ಹುಡುಗಿಯರು ತಾನು ಪ್ರೀತಿ ಮಾಡುವ ವಿಷಯವನ್ನು ಅಪ್ಪ-ಅಮ್ಮನಿಂದ ಮುಚ್ಚಿಡುತ್ತಾರೆ ಆದರೆ ಗೆಳೆಯರ ಮುಂದೆ ಒಂದು ದೂಡ್ಡ ಸಾದನೆ ಮಾಡಿದ ಹಾಗೆ ಡಂಗೋರ ಸಾರುತ್ತಾರೆ .
               ಇದೇಲ್ಲ ಆದ ಮೇಲೆ ಅರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲಗಳಲ್ಲಿ ನಾನು ಒಂಟಿಯಲ್ಲ ಅಂತ ಬರೆದುಕೊಂಡಿರುತ್ತಾರೆ . ಅಂದ ಹಾಗೆ ಪ್ರೀತಿ ಮಾಡುವುದು ತಪ್ಪೇಂದು ನನ್ನ ಅಬಿಪ್ರಾಯವಲ್ಲ...! ಹುಡುಗಿಯರು ಪ್ರೀತಿಯಲ್ಲಿ ಬೀಳುವಂತೆ ಬಹಳ ನಾಜೊಕಾಗಿ ಹುಡುಗರು ಸಹ  ಪ್ರೀತಿಯಲ್ಲಿ ಬೀಳುತ್ತಿದ್ದಾರೆ ಆದರೆ ಇಂತಹ ಪ್ರೇಮಿಗಳಾದ ಹುಡುಗರು ಎಷ್ಟರ ಮಟ್ಟಿಗೆ  ತನ್ನ ಸೈಟ್ ಗಳಲ್ಲಿ  ಈ ತರಹ ತಾನೂ ಕಮಿಟೆಡ್ ಅಂತ ಬರೆದುಕೊಂಡಿರುತ್ತಾರೆ ಹೇಳಿ...?  ಸುಮಾರು ಹುಡುಗರು ತನಗೆ ಪ್ರೀತಿಯಲ್ಲಿ  ಬಿದ್ದಿದ್ದರು ಕಮಿಟೆಡ್ ಅಂತ ಬರೆಯೊ ಪ್ರಯತ್ನ ಮಾಡೊಲ್ಲ ಅದಕ್ಕೆ ಹೇಳೊದು ಗಂಡಸರಿಗೆ ಹೇಗೆ ತನ್ನ ಸೀಕ್ರೆಟ್ ನ ಹಿಡಿದಿಟ್ಟುಕೊಳ್ಳ ಬೇಕೊ ಚಾನ್ನಾಗಿ ಗೊತ್ತು ಅಂತ...!
                 ಹುಡುಗಿಯರು ಪ್ರೀತಿಯಲ್ಲಿ  ಬಿದ್ದರೆ (ಒಂದು ಹುಡುಗಿ ಹೇಳಿದ್ದು) ಅವನೇ ನನ್ನ ಸರ್ವಸ್ವ ಎಂದುಕೊಳ್ಳುತ್ತಾರಂತೆ ಬೇರೆ ಯಾರೆ ಬಂದರು ಅವಳಿಗೆ ಲವ್ವರ್ ಬಾವನೆ ಬರೊದಿಲ್ಲವಂತೆ , ತನ್ನ ಎಲ್ಲಾ ಪ್ರೀತಿಯನ್ನು ಅವನಿಗೆ ಧಾರೆ ಎರೆದು ಕೊಡುತ್ತಾಳಂತೆ. ನಿಜಾನಾ...? ನನಗೊತ್ತಿಲ್ಲಪ್ಪಾ......? ಇದೇ ಗೆಳತಿಯ ಪ್ರೊಫೈಲ್  ನಲ್ಲಿ ಕಮಿಟೆಡ್ ಅಂತ ಬರದಿದ್ದಾಳೆ. ತನ್ನ Gmail  ನ Welcome ಲೈನ್ ನಲ್ಲಿ "ಪ್ರೀತಿ ಜೀವನದ ಮೇಟ್ಟಿಲಿದ್ದಂತೆ" ಎಂದು ಬರೆದು ಕೊಂಡಿದ್ದಾಳೆ . ಇಂತಹ ಮೇಸಜ್ ಗಳನ್ನ ನೋಡಿಯೇ ಕೆಲ ಹುಡುಗಿಯರು ಲವ್ ನಲ್ಲಿ ಬೀಳುತ್ತಿದ್ದಾರೆ ಎಂದು ನನ್ನ ಭಾವನೆ. ಆದರೆ ಇವಳ ಪ್ರಿಯಕರನ ಪ್ರೊಫೈಲ್ ನಲ್ಲಿ ಸಿಂಗಲ್ ಅಂತಾನೆ ಬರೆದಿರುತ್ತಾನೆ . ಇನ್ನಾವುದಾದರು ಹುಡುಗಿ ನಿನಗೆ ಗರ್ಲ್ ಪ್ರೇಂಡ್ ಇದ್ದಾನ..? ಅಂತ ಕೇಳೀದರೆ ಇವನು ಮೊದಲು "ಇಲ್ಲ" ಅಂತಾನೆ ಶುರು ಮಾಡ್ತಾನೆ ಚಾಟಿಂಗ್ ಕೂಡ ಮಾಡ್ತಾನೆ. "ಚಾಟಿಂಗ್ ಮಾಡೊದೇ ಬೇರೆ, ಪ್ರೀತಿ ಮಾಡೊದೆ ಬೇರೆ "ಎಂದು ಅವನ ವಾದ ವಾಗಿರುತ್ತದೆ ಎಂದುಕೂಳ್ಳೋಣ ಬಿಡಿ.  ಆದರೆ ಹುಡುಗಿ ಹಾಗಲ್ಲ . ಒಬ್ಬನನ್ನೆ ಪ್ರೀತಿಸುತ್ತಾಳೆ , ಅಷ್ಟರಲ್ಲಿ ಮತ್ತೇವನೊ ಸಿಕ್ಕರೆ ಅವಳಿಗೆ ಪ್ರಪೋಸ್ ಮಾಡಿದರೆ ಮೊದಲು ಈಗಾಗಲೆ ಮತ್ತೊಬ್ಬನನ್ನು ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪನೆ ಮಾಡುತ್ತಾಳೆ. ಅದಕ್ಕೆ ಹೇಳುವುದು "ಹುಡುಗಿಯರು ಎಲ್ಲವನ್ನು ಹೇಳಿಬಿಡುತ್ತಾರೆ" ಅಂತ. ಇದಿಷ್ಟು ಒಂದು ಹುಡುಗಿಯ ವಾದ.
               ಇನ್ನು ಕೆಲ ಹುಡುಗಿಯರು ಇದ್ದಾರೆ ತನ್ನ ಪ್ರಿಯಕರನ ಹೆಸರನ್ನು ತನ್ನ  ಇಮೇಲ್ ಮತ್ತು ಪಾಸ್ ವರ್ಡ್ ಗಳಿಗೂ ಕೂಡ ಬಳಸುತ್ತಾರೆ ಎಲ್ಲದರಲ್ಲು ತನ್ನ ಪ್ರಿಯಕರನನ್ನು ಕಾಣುವ ತವಕ ಇದ್ದರು ಇರಬಹುದು ಬಿಡಿ . ಇನ್ನು "ಪೀಜಿ" ಎಂದು ಬಹು ಮುದ್ದಾಗಿ ಕರೆಯಲ್ಪಡುವ ಪೇಯಿಂಗ್ ಗೆಸ್ಟ್ ಗಳಲ್ಲಿರುವ ಹುಡುಗಿಯರ ಬಗ್ಗೆ .(ನಾ ಹೇಳ ಹೊರಟಿರುವುದು ಲೇಡಿಸ್ ಪೀಜಿ ಗಳ ಬಗ್ಗೆ  ) ಈ ಬೆಂದಕಾಳು ಎಂಬ ಮಹನಾಗರದಲ್ಲಿ ಪೀಜಿಗಳಿಗೆ ಅಪ್ಪಾ... ಅಪ್ಪಾ ಎಂಥಾ ಡಿಮಾಂಡು ಅಂತೀರಾ...? ಕೆಲವೊಂದು ಕಡೆ ದುಡ್ಡು ಕೊಟ್ಟರು ಪೀಜಿ ಗಳು ಸಿಗುವುದು ಕಷ್ಟಕರ. ಪೀಜಿ ಮಾಲೀಕರಿಗಂತೂ ದುಡ್ಡೊ.. ದುಡ್ಡೊ... ಎಲ್ಲಾ ಪೀಜಿಗಳಲ್ಲಿ ಕೂಡ ಒಬ್ಬ ಮೇಲ್ಚಾರಿಕಿ ಇದ್ದೆ ಇರುತ್ತಾಳೆ (ಆಂಟಿ) ಈ ಆಂಟಿಗಳ ಸ್ವಾಬಾವ ಏಗಿರುತೊ ಹಾಗೆ ಹುಡುಗಿಯರ ಸಂಖ್ಯಯು ಕೂಡ ಜಾಸ್ತಿ ಇರುತ್ತೆ. ಅಂದರೆ ಮುಖ ಸಿಂಡರಿಸಿಕೊಂಡು ತುಂಭಾ ಸ್ಟಿಟ್ ಹಾಗಿದ್ದರೆ ಯಾವ ಹುಡುಗಿ ಬರುತ್ತಾಳೆ ಹೇಳಿ..? ಈ ವಿಷಯ ಆಂಟಿಯರಿಗು ಗೊತ್ತು, ಅದಕ್ಕಾಗಿಯೇ ಹುಡುಗಿಯರಿಗೆ ಎಲ್ಲಾ ಸ್ವಾತಂತ್ರ್ಯ ಕೊಟ್ಟಿರುತ್ತಾರೆ.  ಇನ್ನೊಂದು ವಿಷಯ ಏನಪ್ಪ ಅಂದರೆ ಪೀಜಿಗಳಲ್ಲಿ ಇಷ್ಟೊಂದು ದುಡ್ಡು ಕೊಟ್ಟಿರುತ್ತೆವೆ ನಮ್ಮನ್ನ್ಯಾರು ಕೇಳುವವರಿಲ್ಲ ಎಂಬ ಬಾವನೆ ಹುಡುಗಿಯರಲ್ಲಿ ಮೂಡಿರುತ್ತದೆ. ಈ ಪೀಜಿ ಮಾಲಿಕರು ಹಾಗೆ ಇರುತ್ತಾರೆ ಯಾರು ಏನೇ ಮಾಡಿಕೊಳ್ಳಲಿ ತಿಂಗಳಿಗೆ ಬಾಡಿಗೆ ಬರುತ್ತದೆ ಎಂದು ಸುಮ್ಮನಿರುತ್ತಾರೆ.
             ದೂರದ ಊರಿಂದ ಅಥಾವ ಕೆಲಸದ ನಿಮಿತ್ತ ಬೆಂಗಳೊರಿಗೆ ಬಂದವರು ಮೂದಲು ತಂಗಲು ವಿಚಾರಿಸುವುದು ಈ ಪೀಜಿಗಳ ಬಗ್ಗೆ  ಅಂತೂ ತಮ್ಮ ಮಗಳನ್ನು ಸುರಕ್ಷಿತವಾಗಿ ಪೀಜಿಯೊಂದರಲ್ಲಿ ಸೇರಿಸಿದ್ದೆವೆ ಎಂದು ನಿಟ್ಟುಸುರು ಬಿಟ್ಟು ಅಪ್ಪ-ಅಮ್ಮತಮ್ಮ ಮನೆಗೆ ಹಿಂದಿರುಗುತ್ತಾರೆ. ಹೊಸ ವಾತರಣಕ್ಕೆ ಹೊಂದಿಕೊಳ್ಳಾಬೇಕಾದ ಹುಡುಗಿ ಒಂದೆರೆಡು ದಿನ ನೀರಲ್ಲಿ ಬಿದ್ದ ಕೋಳಿತರಹ ಇರುತ್ತಾಳೆ . ಬರು-ಬರುತ್ತಾ ಅಬ್ಬಾಬ್ಬ ಎಂದು ಹೇಳುವಷ್ಟು ದೈರ್ಯ ಸಾದಿಸುತ್ತಾಳೆ. ಮೂದಲೇ ಹೇಳಿದಂತೆ ಹೇಳುವವರು , ಕೇಳುವವರು ಯಾರು ಇಲ್ಲ ಹೇಳಿ ಕೇಳಿ ಇವರದೇ ಸಾಮ್ರಾಜ್ಯ.
               ಈ ಮದ್ಯ ಒಬ್ಬ ಬಾಯ್ ಫ್ರೆಂಡ್  ಸಿಕ್ಕಿ ಬಿಡುತ್ತಾನೆ . ಇನ್ನೊಂದು ವಿಷಯ ಪೀಜಿಗಳಲ್ಲಿ ನನಗೊಬ್ಬ ಬಾಯ್ ಫ್ರೆಂಡ್  ಇದ್ದಾನೆ ಅಂತ ಹೇಳಿಕೊಳ್ಳುವುದೆ ಒಂದು ಘನತೆಯ ವಿಷಯ .ಆಮೇಲೆ  ಬಣ್ಣ ಬಣ್ಣದ ಡ್ರೆಸ್ ಗಳನ್ನೂ ಅಥವಾ ತುಂಡು ತುಂಡು ಜೀನ್ಸ್ ಗಳನ್ನೂ ಹಾಕಿಕೊಂಡು ಸಿನಿಮಾ, ಪಾರ್ಕು, ಡಿನ್ನರ್ ಅಂತ ಸುತಾಡುವುದು ಇದ್ದೆ ಇರುತ್ತದೆ ವೀಕೆಂಡ್ ಬಂತು ಅಂದರೆ ಇಡೀ ಪೀಜಿ ಖಾಲಿ... ಖಾಲಿ. ಈ ನಡುವೆ ಅಂತೂ ಅಂಗಿ ಬದಲಿಸಿದ ಹಾಗೆ   ಅದೇಷ್ಟೊ ಹುಡುಗಿಯರು ತಮ್ಮ ತಮ್ಮ ಬಾಯ್ ಫ್ರೆಂಡ್  ಗಳನ್ನು ಬದಲಿಸುವುದನ್ನು ನೋಡಿದ್ದೆನೆ. ಇದೆಲ್ಲ ಬೆಂಗಳೊರ್ ನಲ್ಲಿ ಸಾರ್ವೇ - ಸಾಮನ್ಯ ಬಿಡಿ . ಇನ್ನು ಕೆಲ ಹುಡುಗಿಯರಿರುತ್ತಾರೆ 3500 ರಷ್ಟು ದುಡ್ಡು ಕೊಟ್ಟು ಪೀಜಿಗೆ ಸೇರಿದ್ದರೂ ಸಹ ಒಂದು ದಿನವು ಸರಿಯಾಗಿ ಪೀಜಿಗಳಲ್ಲಿ ಇರುವುದಿಲ್ಲ ಎಂದರೆ ನಂಬಿ .  ಅವಳಿರುವುದು ತನ್ನ ಬಾಯ್ ಫ್ರೆಂಡ್  ಜೊತೆ  ಕೇಳಿದರೆ "ಲಿವಿಂಗ್ ಟುಗೇದರ್" ದೂರದ ಊರಿನಲ್ಲಿರುವ ಅಪ್ಪ ಅಮ್ಮ ಮಗಳು ಎಲ್ಲಿರುತ್ತಾಳೆ ಎಂದು ಅವರಿಗೆ ತಾನೆ ಹೇಗೆ ಗೊತ್ತಾಗುತ್ತೆ ...? ಅವರು  ಯಾರ‍ದರು ಬೆಂಗಳೊರಿಗೆ ಬರುತ್ತಿದ್ದಾರೆ ಎಂದಾಗ "ಬಾಯ್ ಫ್ರೆಂಡ್ ರೂಂ ಖಾಲಿ ಪೀಜಿ ಯಲ್ಲಿ ಹಾಜರ್ "ಕುಂಟುಂಬದವರು ಊರಿಗೆ ಹಿಂದಿರುಗಿದ ಕೂಡಲೇ ಪೀಜಿ ಖಾಲಿ ಬಾಯ್ ಫ್ರೆಂಡ್ ರೂಂ ಗೆ ಹಾಜರ್.  ಇನ್ನು ಪ್ರೀತಿಯಲ್ಲಿ  ಬಿದ್ದು ಜೀವನ ಹಾಳು ಮಾಡಿಕೊಂಡ ಹುಡುಗಿಯರು, ಕದ್ದು ಮುಚ್ಚಿ ಮದೆವೆಯಾದವರು , ಮದ್ಯ, ಸಿಗರೇಟ್ ಸೇದುವವರು  ಎಷ್ಟೊ....! ಹುಡುಗಿಯರು ತಿಳಿದು,ತಿಳಿದು ಇಂಥ ತಪ್ಪುಗಳನ್ನು ಮಾಡುತ್ತಿದ್ದಾರೆ ಇವರಿಗೆಲ್ಲ ಏನನ್ನ ಬೇಕೊ ಗೊತ್ತಾಗುತ್ತಿಲ್ಲ. ಹೆಣ್ಣಿಗೆ ಸ್ವಾತಂತ್ರ್ಯ ಬೇಕು ನಿಜ ಆದರೆ ಅದನ್ನು ಬಳಿಸಿಕೊಳ್ಲುವ ರೀತಿಯು ಚಾನ್ನಾಗಿ ತಿಳಿದಿರಬೇಕು. ತಮ್ಮ ಅಪ್ಪಾ-ಅಮ್ಮಾ ಅಮ್ಮ ಮೇಲೆ ಅದೆಷ್ಟೊ  ನಿರೀಕ್ಷೆಗಳನ್ನು  ಇಟ್ಟಿರುತ್ತಾರೆ ಎಂಬುದನ್ನು ಈ ಹುಡುಗಿಯರು ಮನವರಿಕೆ ಮಾಡಿಕೊಳ್ಳುವುದೇ ಇಲ್ಲ . ಪ್ರೀತಿ  ಪ್ರೇಮದ ಬಲೆಯಲ್ಲಿ ಬಿದ್ದು ತನ್ನ ತಾನೆ ಬಲಿಮಾಡಿಕೊಳ್ಳುವ ಹುಡುಗಿಯರು ಅವಿದ್ಯಾವಂತರೇನು ಅಲ್ಲಾ , ಎಲ್ಲರೂ ಚಾನ್ನಾಗಿ ಓದಿದವರೇ ಆದರು "ಇರಳು ಕಂಡ ಬಾವಿಗೆ ಹಗಲು ಹಾರುತ್ತಾರೆ"  ಊರಿನಿಂದ ಬರಬೇಕಾದಗ ಮುಗ್ದೆಯಾಗಿದ್ದ ಹೆಣ್ಣು ಬೆಂಗಳೊರಿನ ಆಡಂಬರದ ಜೀವನಕ್ಕೆ ಮಾರು ಹೊಗುತ್ತಾಳೆ. ಲೈಫ್ ಎಂಜಾಯ್ ಮಾಡಬೇಕೆಂಬ ಆಸೆ, ಪ್ರೀತಿ ಪ್ರೇಮದ ಮೇಲಿರುವ ವ್ಯಾಮೋಹ, ಹೆಣ್ಣಿನ ಜೀವನವನ್ನು ಹಾಳುಮಾಡುತ್ತಿದೆ.  ಇಂತಹ ಸುದ್ದಿಗಳನ್ನು ನಾವು ದಿನನಿತ್ಯ ನೋಡುತ್ತಿವೆ, ಕೇಳುತ್ತಿವೆ ಆದರು ಇಂತಹ ತಪ್ಪುಗಳು ಪುನಾರಾವರ್ತನೆಯಾಗುತ್ತಿವೆ . ಯಾಕೆ ಎಂದು ಕೇಳಿದರೆ "ತಪ್ಪು ಮಾಡುವುದರಲ್ಲಿ ಹೆಣ್ಣು ಮೂದಲ ಗುರು" ಎನ್ನಬಹುದೇನೊ......! ಅಥವಾ ಜೆಗ್ಗೆಶ್  ರವರ "ತಪ್ಪು ಮಾಡದೋರ್  ಯರವರೋ ತಪ್ಪೇ ಮಾಡದೋರ್ ಎಲ್ಲೋವರೋ " ಅನ್ನೋ ಸಿದ್ದಾಂತ  ಮೇಲೆ ಜಿವನಮಾಡುತ್ತಿರಬೇಕು  .
ನಿಮ್ಮ ಅನಿಸಿಕೆ ನನ್ನಲ್ಲಿ ಹಂಚಿಕೊಳ್ಳಿ
+91 98447 73489
SATISH N GOWDA
satishgowdagowda@gmail.com 
www.nannavalaloka.blogspot.com 

No comments: