Saturday, June 12, 2010

ಹಾರುವ ಹಕ್ಕಿಯಾಗಿ

            
  ಹಾರುವ ಹಕ್ಕಿಯಾಗಿ

      ಪ್ರತಿಬಾರಿ ಸ್ವತಂತ್ರ್ಯ ದಿನಾಚರಣೆ ಬಂದಾಗಲೂ ನನಗೆ ನನ್ನ ಬಾಲ್ಯ ಊಮ್ಮಳಿಸಿಬರುತ್ತದೆ . ಗರಿ-ಗರಿ ಚಡ್ಡಿ ಬಿಳಿ ಅಂಗಿ ತೊಟ್ಟು ನಾನು ಮತ್ತು ನನ್ನ ಗೆಳೆಯರು ಶಾಲೆಗೆ ಓಡುತ್ತಿದ್ದೆವು . ನಮ್ಮೂರಿನಿಂದ ಶಾಲೆ ಸ್ವಲ್ಪ ದೂರವಿತ್ತು . ಹೀಗಾಗಿ ಬೆಳಗ್ಗೆ ನಸುಕಿನ ವೇಳೆಯಲ್ಲೆ ನಮ್ಮ ಪಯಣ ಆರಂಭವಾಗುತ್ತಿತ್ತು. ಜೊತೆಗೆ ಅಕ್ಕ ಕೊಡಿಟ್ಟುಕೊಟ್ಟ ಸುಮಾರು ಏಳೆಂಟು ಬಣ್ಣದ ಹೂವುಗಳು. ಜೋತೆಗೆ ನನ್ನ ಹೈದಾರು ಜನ ಗೆಳೆಯ ಗೆಳತಿಯರು . ಚುಮು ಚುಮು ಚಳಿಯಲ್ಲಿ ಮಂಜುಕರಗಿ , ಇಷ್ಟಿಷ್ಟೆ ಬೆಳಕು ಮೂಡುವ ಹೊತ್ತಿಗೆ ನಾವು ಶಾಲೆ ಸೇರುತ್ತೆದ್ದೆವು. ಮೋಡದಿಂದ ಕೆಳಗಿಳಿದು ಬಂದ ದೇವರ ಮಕ್ಕಳ ಹಾಗೆ .... ತಂದ ಹೂಗಳನ್ನು ಶಾಲೆಯಲ್ಲಿ ಬಿಡಿಸಿದ ಭೂಪಟದಲ್ಲಿ ಅಲಂಕರಿಸುವ ಮೂಲಕ ನಮ್ಮ ಕೆಲಸ ಶುರುಗೊಳ್ಳುತ್ತಿತ್ತು.
                ಸ್ವಾತಂತ್ರದಿನಾಚರಣೆಯ ದಿನದಂದು ಶಾಲೆಗೆ ಮೂದಲು ಬರಿತ್ತಿದ್ದವರು ನಾವೆ. ಆನಂತರ ಸುವರ್ಣ ಟೀಚರ್ ಬರುತ್ತಿದ್ದರು ನಾವೆಲ್ಲ ಹೊಗಿ ಅವರು ಬಸ್ ಬರುವುದನ್ನೆ ಕಾಯ್ದು ಶಾಲೆಯ ಕೀಯನ್ನು ಮೊದಲು ಹಕ್ಕಿ ತರುತ್ತೆದ್ದೆವು . ತದ ನಂತರ ಶಾಲೆಯ ಹಕ್ಕಿಗಳಂತೆ ಇತರೆ ಸ್ನೇಹಿತರು,ಸ್ನೇಹಿತೆಯರು ಬರುತ್ತಿದ್ದರು . ನಾವೆಲ್ಲರು ಬಿಳಿಯ ಶರ್ಟ್ ಮತ್ತು ನೀಲಿಯ ಚಡ್ಡಿ ತೊಟ್ಟು ಎಲ್ಲರೂ ಕೊಕ್ಕರೆಗಳಂತೆ ಕಾಣುತ್ತೆದ್ದೆವು . ಎಲ್ಲವೂ ಶುಭ್ರ, ಹಾಗತಾನೆ ಹುಟ್ಟುವ ಸೂರ್ಯಕೊಡ  ನಮ್ಮನ್ನು ಕಂಡು , ನಮ್ಮ ಶುಭ್ರತೆಯನ್ನು ಕಂಡು ನಾಚಿ ಒಮ್ಮೆ ಕಣ್ಣು ಮಿಟುಕಿಸುತ್ತಿದ್ದ. ನಮ್ಮೂರಿನ ಹಿರಿಯರು ದ್ವಜವನ್ನು ಕಟ್ಟಿ ಅದೋರೊಳಗೆ ನಾವು ತಂದಿರುತ್ತಿದ್ದ ಬಿಡಿ ಹೂವುಗಳನ್ನು ಹಾಕಲು ಹೇಳುತ್ತಿದ್ದರು. ನಾವೆಲ್ಲ ಇಬ್ಬನಿಯ ಮುತ್ತುಗಳ ಇನ್ನೂ ಹಾರದ ಕೆಂಪು ಗುಲಾಬಿಯ ರೆಕ್ಕೆಗಳನ್ನು ಬಿಡಿಸಿ ರಾಷ್ಟ್ರದ್ವಜದೊಳಗೆ ಹಾಕುತ್ತಿದ್ದೆವು. ಅಂದಿನ ದಿನ ನಮ್ಮಲ್ಲಿ ಏನೋ ಪುಳಕ , ಉಕ್ಕಿಬರುವ ಉಲ್ಲಾಸ, ಶಾಲೆಯ ಮುಂದೆ ದೊಡ್ಡದಾದ ಭೂಪಟವನ್ನು ಬಿಡಿಸಿ ಅದರೋಳಗೆ ನಮ್ಮನ್ನು ಸಾಲು ಸಾಲಾಗಿ ನಿಲ್ಲಿಸುತ್ತಿದ್ದರು . ನಾವೆಲ್ಲ ಅಭಿಮಾನದಿಂದ ಕತ್ತೆತ್ತಿಕೊಂಡು ಪಟಪಟಿಸುವ ರಾಷ್ಟ್ರದ್ವಜವನ್ನು ನೋಡುತ್ತಿದ್ದೆವು.

        ನಮ್ಮೊರಿನ ಹಿರಿಯ ಜೀವ ರಾಮಜ್ಜ ದ್ವಜಾರೋಹಣ ಮಾಡುತ್ತಿದ್ದರು . ಮಕ್ಕಳೆ ಸತ್ಯ ನುಡಿಯಿರಿ, ಒಳ್ಳೆಯದನ್ನೆ ಪ್ರೀತಿಸಲು ಕಲಿಯಿರಿ, ಸ್ವಾತಂತ್ರ್ಯ ನಮಗೆ ತುಂಭಾಕಷ್ಟದಿಂದ ಬಂದದ್ದು. ದೇಶದ ಎಷ್ಟೊ ಮಹಾನುಬಾವರು ಇ ಮುತ್ತಿಗಾಗಿ ತನ್ನ ಪ್ರಾಣವನ್ನೆ ಇತ್ತಿದ್ದಾರೆ ಎಂಬ ಮುತ್ತಿನಂತ ಮಾತುಗಳನ್ನಾಡುತ್ತಿದ್ದರು. ನಾವು ಮೇಲುದ್ವನಿಯಲ್ಲಿ "ಜನಗಣ ಮನ" ಮತ್ತು "ಒಂದೇ ಮಾತರಂ" ಹಾಡಿ . ನಿಂಬೆಹುಳಿ ಚಾಕಲೇಟ್ ಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆಗ ಮಾತ್ರ ಸ್ವಲ್ಪ ಗಲಾಟೆಯಾಗುತ್ತಿತ್ತು.
     ನಂತರ ಭಾಷಣದ್ದು ನಾನು ಮಾತ್ರ ಸ್ವಾತಂತ್ರದಿನಾಚರಣೆಗೆ ಒಂದು ತಿಂಗಳು ಇರುವಾಗಲೆ ಭಾಷಣ ಬರಿಸಿಕೊಂಡು ಕಂಠಪಾಠಮಾಡುತ್ತಿದ್ದೆ . ಎಂಥಾ ಸಂಬ್ರಮ ಎನ್ನುತ್ತಿರಾ...? ನಿಶ್ಕಲ್ಮಶ ಮನಸ್ಸಿನಿಂದ ಮಾಡಿದ ಭಾಷಣಕ್ಕೆ ಚಿತ್ರಪಟದಲ್ಲಿರುವ ಗಾಂಧಿ ತಾತನೇ ಎದ್ದು ಬಂದು ಕೆನ್ನೆಗೆ ಮುತ್ತು ಕೊಡುತ್ತಿದ್ದನೋ ಎನೋ....! ಆಷ್ಟು ಮಾದುರ್ಯವಾಗಿರುತ್ತಿತ್ತು . ಇದು ನನ್ನ ಬಾಲ್ಯದ ನೆನಪು...!
      ಈಗ ಮತ್ತೆ ಅದೇ ಸ್ವಾತಂತ್ರ್ಯದಿನ ಬಂದಿದೆ . ನನಗೀಗ ೨೫ರವಯಸ್ಸು ಮೊದಲಿನಂತೆ ಖುಷಿ ಇಲ್ಲ, ಉತ್ಸಹವಿಲ್ಲ, ಯಾರೊ ಕಳುಹಿಸಿದ ಒಂದು ಮೆಸೇಜ್ ಗೆ ಸೇಮ್ ಟು ಯು ಎಂದು ರಿಪ್ಲೇ ಕುಟ್ಟಿ ಮುಖ ಕೆಳಗೆ ಹಾಕಿಕೊಂಡು ಕುಳಿತಿದ್ದೆನೆ . ನನ್ನ ಮನೆ ಎದುರಿಗೆ ಮಲ್ಲಿಗೆ ಮೊಗ್ಗಿನಂತ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೊಗುತ್ತಿದ್ದಾರೆ. ಆ ಮೊಗ್ಗಿನ ಮನಸ್ಸಿನಂತ ಮಕ್ಕಳೊಂದಿಗೆ ದ್ವಜಾರೊಹಣ ನೋಡಲು ಹೋಗುವ ಆಸೆ. ಅವರ ನಡುವೆ ನಿಂತು ಅವರದೇ ಆದ ಮೇಲು ದ್ವನಿಯಲ್ಲಿ ಜನಗಣ ಮನ ಹಾಡುವ ಆಸೆ, ಮಕ್ಕಳೆ ಒಳ್ಳೆಯದನ್ನೆ ಕಲಿಯಿರಿ ಎಂದು ಹೇಳುವ ಆಸೆ, ಮನೆಮುಂದೆ ಇರುವ ಸುಂದರ ಹೂವುಗಳನ್ನು ಕಿತ್ತುಕೊಂಡು ಹೋಗಿ ದ್ವಜದಲ್ಲಿ ಹಾರಿಸುವ ಆಸೆ, ಆದರೆ ಕಳ್ಳ ಮನಸ್ಸು ಸಿಕ್ಕಾ-ಪಟ್ಟೆ ಸೊಂಬೆರಿಯಾಗಿಬಿಟ್ಟಿದೆ.
     ಆದರೆ ಈ ಬಾರಿ ಹೋಗೆ.. ಹೊಗುತ್ತೆನೆ ಎದರುಮನೆಯ ಪುಟಾಣಿಗೊಂದು ಚುಟುಕಾದ ಬಾಷಣ ಬರೆದುಕೊಟ್ಟಿದ್ದೆನೆ . ನಾನು ಚಿಕ್ಕವನಾಗಿದ್ದಾಗ ನನ್ನ ಸುವರ್ಣಾ ಟೀಚರ್ ಬರೆದುಕೊಟ್ಟಿದ್ದರಲ್ಲ ಅದೇ ಭಾಷಣವನ್ನ ಒಂದೇ ಒಂದು ಪ್ಯಾರ. ಆ ಚೂಟಿ ಮಾಡುವ ನನ್ನದೇ ಭಾಷಣ ಕೇಳಲು, ನನ್ನದೇ ಬಾಲ್ಯಕ್ಕೆ ಮರಳ ಹೊರಟಿದ್ದೆನೆ .ಹೌದು ಈ ಬಾರಿ ಖಂಡಿತಾ ದ್ವಜಾರೋಹಣಕ್ಕೆ ಹೋಗಿಬರುತ್ತೆನೆ ಎಳೆಯ ಮಗುವಾಗಿ ...... ಹಾರುವ ಹಕ್ಕಿಯಾಗಿ



           ಪ್ರೀತಿಯ ಓದುಗರೇ ಇದು ನಾ ಬರೆದ ಆರ್ಟಿಕಲ್ ಅಲ್ಲಾ... ಇದು ವೆಬ್ ದುನಿಯಾ ದಲ್ಲಿ ಸ್ನೇಹಿತೆ ಕಾವ್ಯ ಬರೆದದ್ದು ನಾ ಓದಿದೆ ನನ್ನ ಬಾಲ್ಯ ನೆನಪಾಯಿತು ಹಾಗೆ ಸ್ವಲ್ಪ ಬದಲಾವಣೆ ಮಾಡಿ ಬರೆದಿದ್ದಿನೆ ಇದರ ಸೌಂದರ್ಯದ ಪಾಲು ಆ ನನ್ನ ಪ್ರೀತಿಯ ಗೆಳತಿಗೆ ಸೇರುತ್ತದೆ. ಈ ಆರ್ಟಿಕಲ್ ನಲ್ಲಿ ತೃಣಮಾತ್ರವೂ ನನ್ನದಲ್ಲಾ. ನೀವು ಓದಿ ನಿಮ್ಮ ಬಾಲ್ಯ ನೆನಪಾಗುತ್ತದೆ ಅದರಿಂದ ಕಾವ್ಯಳಿಗೆ ಖುಶಿಯಾಗ ಬಹುದು.... ಕಾವ್ಯ ಬರೆದ ಬರವಣಿಗೆಯನ್ನ ನೋಡಲು ಈ ಕೆಳಗಿರುವ ಲಿಂಕನ್ನು ಕ್ಲಿಕ್ಕಿಸಿ
http://kansukanavarike.mywebdunia.com/2008/08/14/1218720180000.html

No comments: