Sunday, February 14, 2010

ಅಮ್ಮನಿಗೆ ಅನುಮಾನ ಶುರುವಾಗಿದೆ ......!

    ಪ್ರಿಯ ಓದುಗರಿಗೆ ಧನ್ಯವಾದಗಳು ಇವತ್ತು ಪ್ರೇಮಿಗಳ ದಿನಾ ನಿಮಗೆಲ್ಲ ಗೊತ್ತೇ ಇದೆ ಅನ್ಕೊತಿನಿ , ನನ್ನ ಓದುಗರಿಗೆ ಏನಾದರು ಕೊಡಬೇಕು ಅಂತ ಬೆಳಗ್ಗೆ ಇಂದ ಥಿಂಕ್ ಮಾಡಿದೆ ನನಗೇನು ಹೊಳಿಲೆ ಇಲ್ಲ ಇದೆ ಸಮಯಕ್ಕೆ ನನ್ನ ಗೆಳತಿ ನನಿಗೊಂದು ಪತ್ರ ಬರಿದಿದ್ದಾಳೆ ಸೊ ನಾನೀಗ ಆ ಪತ್ರ ನಿಮ್ಮುಂದೆ ಇಡಿತಿದಿನಿ.....! ನನ್ನೆಲ್ಲಾ ಓದುಗರಿಗೋ "ಪ್ರೇಮಿಗಳ ದಿನಾ" ದ ಶುಬಾಶಯಗಳು....!


ಅಮ್ಮನಿಗೆ ಅನುಮಾನ ಶುರುವಾಗಿದೆ ......!

      ಅಮ್ಮನಿಗೆ ಅನುಮಾನ ಶುರುವಾಗಿದೆ ......! ನೀವು ಬರೆದ ಪತ್ರ ನನ್ನ ಕೈ ಸೇರಿದೆ . ಓದಿದಾಗಿನಿಂದ ನಿಮ್ಮದೇ ಮದುರ ಯೋಚನೆ . ನಿಮ್ಮ ಯಾವ ಪತ್ರವು ನನ್ನನ್ನು ಇಷ್ಟು ಉದ್ರೇಕ ಗೊಳಿಸಿರಲಿಲ್ಲ ಆದರೆ ಆ ಪತ್ರ ನನ್ನೆಲ್ಲಾ ಅಸೆಗಳಿಗೋ ಒಮ್ಮೆ ಬಣ್ಣ ಹಚ್ಚಿದೆ , ಮೊನ್ನೆ ನಿಮ್ಮ ಪತ್ರ ಬಂದು ಕೈ ಸೇರಿತಲ್ಲ ಅಮ್ಮನಿಗೆ ಏನೋ ಅನುಮಾನ ನಾನು ನಿಮಗೆ ಬಿಟ್ಟು ಬಿಡದೆ ಎಸ್ ಎಮ್ ಎಸ್ ಮಾಡುವುದು ನೋಡಿ ಅಕ್ಕನ  ಮುದ್ದು ಮಗಳಿಗೆ  ಏನೋ ಕುತೂಹಲ ಯಾರಿಗೆ ಈ ಥರಾ    ಎಸ್ ಎಮ್ ಎಸ್  ಮಾಡ್ತಿದ್ದೀಯ   ಎಂಬಂತೆ ಕಣ್ಣಲ್ಲೇ ಕಣ್ಣಿಟ್ಟು ನೋಡುತ್ತಾ ಇರುತ್ತಾಳೆ   ರಾತ್ರಿ    ನಿದ್ರಿಸುವಾಗ ಅವಳಿಗೆ ನಾನೆ ಬೇಕು ಅವಳ ಅಮ್ಮನಿಗಿಂತಲೂ ಹೆಚ್ಹು ನನ್ನ ಜೊತೆ ಕಳೆದವಳು ಅವಳು ಯಾರಿಗೆ ಫೋನ್ ಮಾಡುತ್ತಿಯ ಎಂದು ಪ್ರೆಶ್ನೆ ಕೇಳುತ್ತಾಳೆ...! 
          ಅವಳಿದಿನ್ನು  ಮಗುವಿನ ಮನಸ್ಸು  ಪಾಪ ಅವಳಿಗೆ ಎಲ್ಲಿ ಗೋತ್ತು ಪ್ರೀತಿ ಪ್ರೇಮದ ಅರಿವು ಅದಕ್ಕೆ ಅವಳಿಗೆ ಪ್ರೇಮಿಗಳ ಆರಾದ್ಯ ದ್ಯವ ರೋಮಿಯೋ -ಜೋಲೆಟ್ ರ ಪ್ರೀತಿಯನ್ನು ಕಥೆಯಾಗಿಸಿ ಹೇಳುತ್ತಿರುತ್ತೇನೆ   ಅವಳು ಮಗುವಾಗುತಾಳೆ  ಆ ಕಥೆ ಹೇಳುವಾಗ ನನಗೋ ಮನಸ್ಸು ಹಗುರಾಗುತ್ತದೆ ಅವಳು ಕೋಡ ಮಲಗುತ್ತಾಳೆ  ಆದರೆ ಮನಸ್ಸಿನಲ್ಲಿ ಅದೇ ರೋಮಿಯೋ -ಜೋಲೆಟ್ ರ ಪ್ರೇಮದ ಕಥೆ ಕಣ್ಮುಂದೆ ಹಾದು  ಹೋಗುತ್ತದೆ ನೀವು ನನಗೆ ಕೊಟ್ಟ ಪ್ರೀತಿಯನ್ನು ನೆನೆಯತ್ತ ಆ ಜೋಡಿಯ ಅಗಲಿಕೆಯನ್ನು ಯೋಚಿಸಬೇಕಾದರೆ ಮನಸ್ಸು ಕಿನ್ನಿತ ಗೊಳ್ಳುತ್ತದೆ ಹಾಗೇ ಕಣ್ಣಂಚಲಿ ನಿರು ಹರಿದು ಬರುತ್ತದೆ 
           ಮರು ದಿನಾ ರಾತ್ರಿಯಗುವ ವೇಳೆಗೆ  ಮತ್ತೆ ನನ್ನ ಕೇಳುತ್ತಾಳೆ  ನಾನು ಅದೇ ಸುಂದರ ದಿನಾ ಗಳನ್ನೂ ಹೇಳುತ್ತಾ ಸಾಗುತ್ತೇನೆ ಆದರು ಮನಸ್ಸಿನಲ್ಲಿ ನೋವು ಕಾಡುತಿರುತ್ತೆ ......!   ಹಾಗೇ ಕಣ್ಣಿರು ತಲೆ ದಿಂಬನ್ನು ಒದ್ದೆ ಮಾಡಿ ದಾಗಲೋ ನನಗೆ ನಿಮ್ಮದೇ ನೆನಪು ಕಾಡದಿರದು ನೀವು ಕಟ್ಟುವ ಮಾಂಗಲ್ಯ ಸೂತ್ರಕ್ಕೆ ಬಂದಿಯಗುವ ಆಸೆ ಅಂತೋ ನೆನೆಯುತೇನೆ ನಿನ್ನ ಜೊತೆ ಸಪ್ತಪದಿ ತುಳಿಯೋ  ಅಸೆ ಹೇಳಿ ಕೇಳಿ ನನ್ನದು ಹುಚ್ಹು ಪ್ರೀತಿ, ಎಲ್ಲ ನನ್ನದೇ ಆಯಿತು ನಿಮ್ಮ ವಿಶೇಷ ಏನಾದರು ಇದ್ದರೇ ಹೇಳಿ .......?
                       ನಿನ್ನ ಪ್ರೀತಿಯ ಅನಾಮಿಕೆ
ಲೇಕಕಿ ಗೆಳತಿ
********
ಉಪಲೆಕನ
Satish N Gowda
Blog



No comments: