Monday, February 8, 2010

ಹುಡುಗಿಯರು ಹೀಗೋ ಇರ್ತಾರೆ

           
"ಹುಡುಗಿಯರು  ಹೀಗೋ ಇರ್ತಾರೆ "

          "ಏನ್ ಮಾಡೋದು ಅಂತಾನೆ ಗೊತ್ತಿಲ್ಲ ಕಣ್ರೆ .....! ನಾನ್ Cell Number   ಅವಳಿಗೆ ಹೇಗೆ ಸಿಕ್ಕಿತೋ  ಅಂತಾನು ಗೊತ್ತಿಲ್ಲ ...! ಅವಳು ಯಾರು ಅನ್ನೋದು ಮೊದಲೇ ಗೊತ್ತಿಲ್ಲ ...! ಸಿಕ್ಕಾ ಪಟ್ಟೆ ಕಾಡ್ತಾಳೆ ಕಣ್ರೆ ದಿನಕ್ಕೆ ಒಂದು 100 ಸರಿ Message ಮಾಡ್ತಾಳೆ  Phone  ಮಾಡಿದರೆ ಇಡುವುದೇ ಇಲ್ಲ  ಹೊತಲ್ಲದ ಹೊತ್ತಲ್ಲಿ ಫೋನ್ ಮಾಡ್ತಾಳೆ , ಮಾತಾಡಲೇ ಬೇಕು ಅಂತಾಳೆ  ನನಗೆ ನಿಜಕ್ಕೂ ಭಯ ಆಗ್ತಿದೆ ಕಣ್ರೆ ಅವಳ ಕಾಟದಿಂದ Phone Swich Off  ಮಾಡಿದ್ರೆ ಮನೆಯ ಅಥವಾ Office  ಲ್ಯಾಂಡ್ ಲೈನಿಗೆ ಕಾಲ್ ಮಾಡ್ತಾಳೆ ಈ ನಡುವೆ ಅಂತು ತುಂಬಾ ಜಾಸ್ತಿ ಕಾಡ್ತಾಳೆ ಅದ್ಯಾರು ನನ್  Number  ಅವಳಿಗೆ ಕೊಟ್ಟರೋ ಗೊತ್ತಿಲ್ಲ ಕಣ್ರೆ ..! ಯಾವ ಕ್ಷಣದಲ್ಲಿ  ಅವಳಿಗೆ ಸಿಕ್ಕಿ ಹಾಕಿಕೊಲ್ಳುತಿನೋ  ಗೊತ್ತಿಲ್ಲ ಇನ್ನೂ  ಯಾವತ್ತೋ ದೇವರಾಣಿಗು   ಹುಡುಗಿಯರ ಕಾಲ್ Receive    ಮಾಡೋಲ್ಲ  ಕಣ್ರೆ ಅಷ್ಟು ಬೇಜಾರ್ ಆಗಿದೆ  "
                - ಈಗಂಥ ಒಂದು ಹುಡುಗ ಹೇಳ್ತಾನೆ ಅಂದ್ರೆ ನೀವು ನಂಬ್ತೀರಾ .....?  ನಂಬಲೇ ಬೇಕು  ಯಾಕೆ ಅಂದ್ರೆ ಇದು 1947ಅಲ್ಲಾ ಬದಲಾಗಿ 2010 ಕಣ್ರೆ ಇದು ಒಬ್ಬಿಬ್ರ ದ್ವನಿ ಅಲ್ಲಾ ಈ ಚಕ್ರವ್ಯುಹಕ್ಕೆ  ಸಿಕ್ಕಿ ಹಾಕಿಕೊಂಡಿರೋ ಹುಡುಗರಿಗೆ ಗೊತ್ತು ಅದರ ಸಂಕಟ  ಎಂಥದ್ದು ಅಂತ , ಈ ಹುಡುಗಿಯರು ಕಾಲ್ ಮಾಡೋದು ಒಬ್ಬ ಹುಡುಗನಿಗಲ್ಲ ಹಲವು ಹುಡುಗರಿಗೆ ಇದೆ ರೀತಿ ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನ ಅತ್ರ ಹೇಳಿಕೊಂಡಾಗ ಅದೇ ರೀತಿ ಅದೇ ಹುಡುಗಿ , ಮತ್ತೊಬ್ಬನದು ಇದೆ ಕಥೆ , ಇನ್ನೂ ಮತ್ಹೆಷ್ಟೋ........! 
                 ಇನ್ನು ಕೆಲವು ಹುಡುಗಿಯರಂತು Miss Call  ರಾಣಿಯರು, ಮಿಸ್ ಕಾಲ್ ಕೊಡ್ತಾರೆ ಯಾರದು ಅಂತ ನಾವು ಏನಾದರು ತಿರುಗಿ ಕಾಲ್ ಮಾಡಿದರೆ ಮುಗಿತು ....! ನಿನಗೆ ನನ್  Number  ಯಾರ್ ಕೊಟ್ರು ನಿನ್ ಎಲ್ಲಿ ಕೆಲಸ ಮಾಡ್ತಿರೋದು ಹೀಗೇ ಪ್ರಶ್ನೆ ಗಳ ಮೇಲೆ ಪ್ರಶ್ನಗಳು ಅಲ್ಲಾ ಕಣ್ರೆ ನೀವೇ ಅಲ್ವೇನ್ರಿ Miss Call  ಕೊಟ್ಟಿದ್ದು ಅಂದ್ರೆ  ಇಲ್ಲವೇ ಇಲ್ಲ ಎನ್ನುವಷ್ಟು ವಾದ  ಮಡ್ತಾರೆ ಒಂದು ಸಲ ಕನಕ್ಶನ್ ಸಿಕ್ಕರೆ ಸಾಕು ಅದನ್ನ ಹೇಗೆ ಹಿಡಿದಿಟ್ಟು  ಕೊಳ್ಳಬೇಕೋ  ಅಂತ ಚನ್ನಾಗಿ ಗೊತ್ತು ಈ Miss Call ರಾಣಿಯರಿಗೆ,

                            ನೆನ್ನೆ ಮೊನ್ನೆಯವರಿಗೋ ಒಂದು ಹುಡುಗಿ ತನ್ನ Cell Number ನ  ಮನೆ Number ನ ಯಾರ ಹುಡುಗರಿಗೋ ಸಿಗದಿರಲಿ ಅಂತ ಕಾದು ಇಡುತಿದ್ದಳು  ತೀರ ಅತ್ಮಿಯರಿಗೆ  ತನ್ನ Number  ಕೊಡುತಿದ್ದಳು ಈ Number  ಸಿಕ್ಕಿದವನು ತುಂಬಾ ವಿಶ್ವಾಸಿ ಇನ್ನೂ ಹೇಳ್ಬೇಕು ಅಂದ್ರೆ ಅವನು ಗಾಂದಿನೆ   ಆಗಿರಬೇಕು  ಅಂತಾನೆ ಅರ್ಥ ಆದರೆ ಇವಾಗ ಹುಡುಗರ Cell Number ಹುಡುಗಿಯರಿಗೆ ಸಿಗದಿರಲಿ ಅಂತ ದೇವರಲ್ಲಿ ಕೆಳ್ಕೊಲ್ಲೋ   ಕಾಲ ಬಂದಿದೆ  ಅಂದ್ರೆ ನೀವು ನಂಬಲೇ ಬೇಕು ,
                 ಅದ್ಯಾವ ಪುಣ್ಯಾತ್ಮರು ಇವರಿಗೆ Curance  ಹಾಕ್ತಾರೋ ಗೊತ್ತಿಲ್ಲ Phone ಮಾಡೋ ಹುಡುಗಿಯರ ಬೇಡಿಕೆ ಗಳು ತುಂಬ ವಿಚಿತ್ರ . ಸಣ್ಣ ದೈರ್ಯದ     ಹುಡುಗರಿಗೆ ಭಯ ಹುಟ್ಟಿಸಿ ತಮ್ಮ ಕೆಲಸ ಮಾಡಿಸಿಕೊಳ್ಳೋ ಒಣಸಾಹಾಸ ಅಂತ ನನ್ ತಿಳ್ಕೊತಿನಿ . ಹೇಗೋ ಸಿಗೋ Number  ಗಳಿಗೆ Phone  ಮಾಡೋ ಹುಡುಗಿಯರು ಒಂದು ಕಡೆ ಇದ್ರೆ ಪೇಪರ್ ನಲ್ಲಿ  ಬರೋ   Number ಗಳಿಗೆ Phone  ಮಾಡೋ ಹುಡುಗಿಯರು ಇನ್ನೊಂದು ಕಡೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ಪೇಪರ್ ನಲ್ಲಿ ತಮ್ಮ Number ಹಾಕಿ ಅನ್ನೋ ಹುಡುಗಿಯರು ಇರ್ತಾರೆ ಅಂತ ನಿಮಗೆ ಗೊತಿರ್ಲಿಕ್ಕಿಲ್ಲ ,
                       ಇದಷ್ಟೇ ಅಲ್ಲಾ ಕಣ್ರೆ ಇವತ್ತು  F M Radio ಗಳಲ್ಲಿ ಬರೋ ಅಷ್ಟೋ ಕಾರ್ಯಕ್ರಮಗಳು  ಹುಡುಗಿಯರಿಂದನೆ  ಪ್ರಚಾರಕ್ಕೆ  ಬರುತ್ತಿವೆ ಅದರಲ್ಲಿ ಭಾಗವಹಿಸುವವರಲ್ಲಿ  ಸುಮಾರು 85% ಹುಡುಗಿಯರೇ , ಕಾದು Phone ಮಾಡಿ  ಅದರಲ್ಲೋ ಮದ್ಯರಾತ್ರಿಯಲ್ಲೋ ಕೊಡ ಪಿಸುಮಾತಿನ ಮೊಲಕ ತನ್ನ Boy Frind ನ ಸಿಹಿ  ನೆನಪುಗಳನ್ನು ಹಂಚಿಕೊಳ್ಳುವ ರೀತಿ , ಹುಡುಗರನ್ನು    ಹೇಗೆ ಒಲಿಸಿಕೊಳ್ಳ  ಬೇಕೆನ್ನುವ ಪರಿ  ಕೇಳಿದರೆ ನಿಜಕ್ಕೂ ಮೈ  ನವಿರೆಳುತದೆ ,
           ನೆನಪಿರಲಿ ಗುರುತು ಪರಿಚಯವಿಲ್ಲದೆ ಹುಡುಗರ ಜೊತೆ ಗಂಟೆಗಟ್ಟಲೆ ಮಾತನಾಡುವ, ಹಾಗು Message ಗಳ ಮೇಲೆ Message ಗಳು ಕಳಹಿಸುವ  ಹುಡುಗಿಯರು ತನ್ನ ಮನೆಗಳಲ್ಲಿ ಪರಮ  ಮೌನಿಗಳು    ಆಗಿರುತಾರೆ       ತನಗೆ ಏನೋ ಗೊತ್ತಿಲ್ಲ ದವರಂತೆ ಇರುತಾರೆ  ಅಪ್ಪ -ಅಮ್ಮನಲ್ಲೂ ಮಾತಿಲ್ಲ...! ಅಜ್ಜ ಅಜ್ಜಿಯಲ್ಲೂ ಕೊಡ,  ತಂಗಿಯಲ್ಲೋ ಮಾತನಾಡೋಲ್ಲ ಇವರ ಮಾತು  ಏನಿದ್ದರೂ  ಬರಿ Phone  ನಲ್ಲೆ ಮೊದಲು ಸಿಲ್ಲಿ -ಲಲ್ಲಿ ಅನಂತರ ಸ್ವಲ್ಪ ತರಲೆ ಸ್ವಲ್ಪ ಧುಕ್ಖ , ಆಮೇಲೆ ಜೋರು ಅಳು ಹೀಗೆ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು (ಕೇಳಿ )   ಬೇರೆ ಯಾರು ಇಲ್ಲ ಅನ್ನುವಷ್ಟು ಮುಗ್ದತೆ  ಮಾತೆತ್ತಿದರೆ ಕೋಪ ಸಿಡುಕು ಏನೇ ಕೇಳಿದರು ಗೊತ್ತಿಲ್ಲ ತನಗೆ ಏನೂ ಕೇಳಬೇಡಿ ಅನ್ನುವಷ್ಟು  ಅಮಾಯಕತೆ ತನ್ನ ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರೆ ಮುಗಿಯಿತು ಅವರದ್ದೇ ಪ್ರಪಂಚ ಅವರ Phone   ಗಳನ್ನೂ ಯಾರು ಮುಟ್ಟುವಂತಿಲ್ಲ ಬಂದ ಕಾಲ್ ಗಳಲ್ನ್ನು ಯಾರು Receive  ಮಾಡುವಂತಿಲ್ಲ
              ಈ ಹುಡುಗಿಯರು ಯಾಕೆ ಈ ರೀತಿ ಆಗುತಿದ್ದರೋ ಗೊತ್ತಿಲ್ಲ ಈ ಎಲ್ಲ ಪರದೆಗಳನ್ನು ಮೀರುತ್ತಿದ್ದಾರೆ   ಅನ್ನೋದಕ್ಕೆ  ಸ್ವಷ್ಟ ಉತ್ತರಗಳಿಲ್ಲ ಭಹುಶ ಇವರಿಗೆ ಸಿಕ್ಕಿರುವ ಅತಿಯಾದ ಸ್ವಾತಂತ್ರ್ಯ ಅಥವಾ Collage  ಗೆ,  ಉದ್ಯೋಗಕ್ಕೆ ,ಹೋಗುವ ಹುಡುಗಿಯರನ್ನ ನಿಯಂತ್ರಿಸಲಾಗದ ಹೆತ್ತವರ ಅಸಹಾಯಕತೆ ಜೊತೆಗೆ ಪೇಯಿಂಗ್ ಗೆಸ್ಟ್ (P G)ಗಳಲ್ಲಿ ವ್ಯಾಸಂಗ ಮಾಡುವುದೇ.....! ಅಥವಾ ತನ್ನ ಭಾವನೆ ಗಳನ್ನೂ ಹಂಚಿ ಕೊಳ್ಳಬೇಕುನ್ನುವ  ಹಂಬಲ , ಆತುರ ಇದಕ್ಕಾಗಿ ಯಾರಾದರು ಸರಿ ಎನ್ನುವ ತವಕ   ಮೈ ತುಂಬಿರುವ ಹುಡುಗಿರನ್ನು ಈ ದಾರಿಗೆ ಎಳೆದು ತರುತ್ತಿವೆ      ಎಂಬುದು  ನನ್ನ ಅನಿಸಿಕೆ , ಈ ಹುಡುಗಿಯರು ಹೀಗೆ  ಮುಂದುವರೆದರೆ  ಎಂತೆಂಥಹವ್ರ ಕೈ ಗಳಲ್ಲಿ ಸಿಕ್ಕಿಹಾಕಿಕೊಳ್ಳುವ  ಸ್ತಿತಿ ಬಂದರೆ ಅವರನ್ನು ಕಾಪಾಡುವವರು ಯಾರು ......?


ನನ್ನ ಬ್ಲಾಗ್
ನನ್ನ e-mail

No comments: