Friday, February 5, 2010

ರಮ್ಯಾ ಜೊತೆ ನಂದಿ ಬೆಟ್ಟಕ್ಕೆ ಒಂದು ದಿನಾ

                  ರಮ್ಯಾ ಜೊತೆ ನಂದಿ ಬೆಟ್ಟಕ್ಕೆ ಒಂದು ದಿನಾ              ಮೊನ್ನೆ ಯುಗಾದಿ ಹಬ್ಬಕ್ಕೆ ಅಂತ ಊರಿಗೆ  ಹೋಗಿದ್ದೆ. ಹೇಳಿ ಕೇಳಿ ಯುಗಾದಿ ಅಲ್ವಾ ....! " ಯುಗಾ- ಯುಗಾದಿ ಕಳೆದರು ಉದಾಗಿ ಮರಳಿ ಬರುತಿದೆ ......"ಮೊಂದೆ ಹಾಡಲ್ಲ ಬಿಡಿ ನಿಮಗೆ ಮರ್ತಿದ್ದ ಹಾಡನ್ನ ನೆನಪಿಸಿದೆ ಅಷ್ಟೇ ....!
                ಬೇಡಮ್ಮ  ....! ಬೇಡಮ್ಮ ....! ಈಗಾಗಲೇ  ಕರಿದ ಹಪ್ಪಳದಂತೆ ಇದೀನಿ ಅಂದ್ರು ಕೇಳದೆ ನಮ್ಮ ಅಮ್ಮ ತಲೆಗೆ ಎಣ್ಣೆ ಸ್ನಾನ ಮಾಡಿಸಿ ಬಚ್ಹಲ ಮನೇಲಿ ಒಂದು ಅರ್ದ ಗಂಟೆ ತಲೆ ಉಜ್ಜಿ ಹೇಗೂ ತಲೆ ಯಲ್ಲಿ ಇದ್ದ ಎಣ್ಣೆ ಎಲ್ಲಾ ಹೋಗಿಸಿದಳು , ನಂತರ ಉಟಕ್ಕೆ ಕರೆದಳು ಹೇಳಿ ಕೇಳಿ ಹಳ್ಳಿಯಲ್ಲಿ ಹಬ್ಬದ ಊಟ ಅಂದ್ರೆ ಗೊತ್ತೆ    ಇದಿಯಲ್ಲ ಸುಮಾರು
5-6 ತರ ಅಡುಗೆ ಮಾಡಿರ್ತಾರೆ , ಅಂತು ದೇವರಿಗೆ ಚನ್ನಾಗಿ ಬಯ್ಕೊಂಡೆ ಬಿಡಿ ಯಾಕೆಂದ್ರೆ ಎರಡು ಕೈ  ಎರಡು ಕಾಲು ಎರಡು ಕಿವಿ ಕೊಟ್ಟ ದೇವರು ತಿನ್ನೋಕೆ  ಮಾತ್ರ ಒಂದೇ ಹೊಟ್ಟೆ ಕೊಟ್ಟಿದನಾಲ್ಲ   ಅದಿಕ್ಕೆ....! ಊಟ ಮಾಡಿ ಸ್ವಲ್ಪ  ವಿಶ್ರಾಂತಿ ತಗೊಳೋಣ  ಅಂತ ರೋಮಿಗೆ ಹೊರಟೆ Cell  ಹೊಡ್ಕೊತಿತ್ತು ನನ್ನ Cell  ನಾ ಊರಿಗೆ ಹೊರಟರೆ ಎಲ್ಲಾದರು ಬಿಸಾಡಿರ್ತೀನಿ ಹೇಗೋ ಹುಡುಕಿ ಅಮ್ಮ ಯರೋದು ಫೋನ್ ಬರ್ತಿದೆ ನೋಡೋ ಅಂತ ಕೊಟ್ಳು ತೆಗದು ನೋಡಿದ್ರೆ  ನನ್ನ ಹಳೆಯ "Dove" ರಮ್ಯಾ . ಹಾಯ್ ಅಂದ್ಲು ನಾನು ಕೊಡ ಹಾಯ್ ಅಂದೇ "Happy Ugadi " ಅಂದ್ಲು Seam 2 U ಅಂದೇ ಏನ್ ಸಾಹುಕರ್ರೆ  ನಾನು ನೆನಪಿದಿಯ ....? ಮಾರ್ತಾರೆ ತಾನೆ ನೆನಪಿಸಿಕೊಳ್ಳೋಕೆ ನಾನು ಯಾವತು ನಿನ್ನನ್ನ ಮರಿಯೋಲ್ಲ ಕಣೇ ನಮ್ಮಿಬ್ರದ್ದು ಜನ್ಮ ಜನ್ಮದ ಪ್ರೀತಿ ....! ಸಾಕು ಜಾಸ್ತಿ ಹೋಗಳಬೇಡ ನಾನು ನೋಗ್ಗೆ ಮರಕ್ಕೆ ಹತ್ತೋದು ಬಿಟ್ಟು ಜಾಸ್ತಿ ದಿನಾ ಆಯಿತು .....!
           ಸರಿ ಹೀಗೇ ಮಾತಾಡ್ತಾ  ಹಳೆಯ ಕಹಿ ನೆನಪುಗಳನ್ನ ಒಂದಿಷ್ಟು ಮೆಲುಕು ಹಾಕಿದಳು .
 ರಮ್ಯಾ : ಊಟ ಆಯ್ತಾ ....?
ಸತೀಶ್  :ಇಲ್ಲ ಕಣೇ .....! ಇವತು ಉಪವಾಸ ...! ಅಲ್ಲಾ ಕಣೇ ಹಬ್ಬದ ದಿನಾ ಯಾರದ್ರು ಉಪವಾಸ ಇರ್ತಾರ ...? 
ರಮ್ಯಾ : ಯಾರಿದ್ರು ನಿನಿರೋಲ್ಲ ಬಿಡು ...! ಸರಿ ಬೇವು -ಬೆಲ್ಲ ತಿಂದಿಯ ...?
ಸತೀಶ್ : ಇಷ್ತೋತು   ಬೇವು ತಿನಿಸಿದಿಯ ಇನ್ನು ನಿನ್ನ ಮುದ್ದಾದ ಒಂದು ಮುತ್ಹು ಕೊಟ್ರೆ ಬೆಲ್ಲ ತಿಂದಷ್ಟೇ ಖುಷಿ
(ನಾಚಿಕೊಂಡಳು  ಅಂತ ಕಾಣುತ್ತೆ  )
ರಮ್ಯಾ : ಛೀ ತುಂಟ ...!
ಸತೀಶ್ : ಸರಿ ಹೇಳಿ ಕೇಳಿ ರಜೆ ಅಲ್ವಾ, ಬಾರೆ ನಂದಿ  ಬೆಟ್ಟಕ್ಕೆ ಹೋಗೋಣ ....?
ರಮ್ಯಾ : ಇಲ್ಲಪ್ಪ ನಾನು ಬರೋಲ್ಲ ...!
ಸತೀಶ್ : Please  ಕಣೇ  .....
ರಮ್ಯಾ : ಅಮ್ಮ ಬಯ್ತಾರೆ ಕಣೋ ....!
ಸತೀಶ್ : Please  ಕಣೇ .....Please ಕಣೇ .....!
ರಮ್ಯಾ : ಸರಿ 6 ಗಂಟೆ ಗೇ ಕರ್ಕೊಂಡು ಬಂದು  ಬಿಡಬೇಕು... ok  ....?
ಸತೀಶ್: ಸರಿ ರೆಡೆ ಆಗು ನೋಡೋಣ.........!
        ನನಗೆ ಅಂತು ಹೊಟ್ಟೆ  ತುಂಬಾ ಲೋಡ್ ಆಗಿತು ಇವಳನ್ನು ಬೇರೆ ಬಾರೋಕೆ ಹೇಳಿದೀನಿ ಅನ್ಕೊಂಡು . ಹೇಗೋ ಅವಳನ್ನ ಬೈಕ್ ನಲ್ಲಿ ಕೊರಿಸಿಕೊಂಡು ನಂದಿ ಬೆಟ್ಟಕ್ಕೆ ಹೊರಟೆ ಮೊದಲೇ ಗೊತ್ತಲ್ಲ ಒಳ್ಳೆ ಗಾಳಿ . ಒಳ್ಳೆಯ ವಾತಾವರಣ . ನನಿಗೆ ಯಾಕೊ ನಿದ್ದೆ ಬರ್ತಿದೆ ಕಣೇ ರಮ್ಯಾ ....! ಯಾಕೊ....! ನಾನ್ ತೊಡೆ ಮಲಿಗಿ ತುಂಬಾ ದಿನಾ ಅಯಿತಲ್ಲ ಅದಿಕ್ಕೆ ಈ ನಾಟಕನಾ ....! ಅಂದ್ಲು ಹೇ Stuped ಅಂತ ಕಿವಿ ಚಿವಿಟಿದೆ, ಒಂದ್ಸಲಾ ಜೋರಾಗಿ ಚೇರಿದ್ಲು  ಹೀಗೇ ಸಾಗುತ್ತಾ  ನಮ್ಮ  ತುಂಟಟಿಕೆ ನನ್ನನಿದ್ದೆಯನ್ನ ಅವಳೇ ಹೊಡಿಸಿದ್ಲು ಹಾಗೇ ಒಂದು ರೌಂಡ್      ನಂದಿ ಬೆಟ್ಟ ನಾ ಸುತ್ಕೊಂಡ್ ಮತ್ತದೇ  ಜಾಗಕ್ಕೆ ಬಂದು ನಿತ್ಕೊಂಡಿವಿ.
ರಮ್ಯಾ : ಹೇ ಇನ್ನು Time  ಇದೆ ಕಣೋ ....!
ಸತೀಶ್ : ಸರಿ ಏನಾದ್ರು Game ಆಡೋಣ ...!
ರಮ್ಯಾ : ಏನ್ ಆಟ ಆಡೋದು ....?
ಸತೀಶ್ : ಅಪ್ಪ - ಅಮ್ಮ ಆಟಾ ಆಡೋಣ ಕಣೇ .....!
ರಮ್ಯಾ : ಹೋಗೊಲೋ ನಿನಗೆ ಬೇರೇ ಕೆಲಸ ಇಲ್ವಾ .....?
             ಅಂತ ಮತ್ತೆ ಅದೇ  ತುಂಟ ಆಟ ಶುರು . ಅಲ್ಲಿ ಪಕ್ಕದಲ್ಲಿದ್ದ ಪ್ರೇಮಿ ಗಳು ಒಂದ್ಸಲಾ ಮುಖ ನೋಡಿ ಅವರವರ ಕೆಲಸದಲ್ಲಿ Busy ಆಗಿದ್ರು ನಾನು ಕೋಪ ಬಂದವನ ತರ ಮುಖ ತಿರಿಗಿಸಿ ಕೊಂಡೆ . ಕೋಪಾನಾ.......! ಸಾರೀ ಕಣೋ ನೀನು ಆಗಲೇ ಕೆಳಿದಿಯಲ್ಲ ....? ಬೆಲ್ಲ ಕೊಡ್ತೀನಿ ....! ಹ...!  ಹ...! ಖುಷಿ ನೋಡು ಅನ್ಕೊಂಡು ಒಂದಲ್ಲ....! ಮೊರು ಕೊಟ್ಳು ಕೆನ್ನೆಗೆ ಒಂದು ತುಟಿಗೆ ಎರಡು ಅಂತು ಇಂತು ಟೈಮ್ ಆಯಿತು. ಅಲ್ಲಿದ್ದ Wach man  ಎಲ್ಲರನ್ನು ಹೋಡಿಸ್ತಿದ್ದ Atleast  ಅವನಿಗಾದ್ರು  ಬೆಲೆ ಕೊಡ್ಬೇಕಲ್ವ ಅನ್ಕೊಂಡು ಅಲ್ಲಿಂದ  ಅವಳನ್ನ ಕರ್ಕೊಂಡು  ಮನೆಗೆ ಬಿಟ್ಟು ಸೀದಾ ಮನೆಗೆ ಬಂದೆ .
            ಈ ಕಡೆ ಅಮ್ಮ ಬಯ್ತಿದ್ಲು ,ನಿನಗೆ ಈ ನಡುವೆ ತುಂಬಾ ಮರವು ಜಾಸ್ತಿ ಆಯಿತು . ಅಲ್ಲಾ ಕಣೋ ಈ Phone  ಬೇರೇ ಮನೆಯಲ್ಲಿ ಇಟ್ಟು  ಹೋಗಿದಿಯ   ಬೆಳೆಗ್ಗೆ ಇಂದ ಒಂದೇ ಸಮನೆ ಹೊಡ್ಕೊತಿದೆ  , ನನಿಗೆ ಬೇರೇ ಫೋನ್ ತೆಗೆಯೋಕೆ  ಬೋರೋಲ್ಲ , ಅಂದ್ಲು , ನನಿಗೆ ಶಾಕ್ ಆಗಿ ನೋಡಿದ್ರೆ ನಮ್ಮ Boss  . ನಾಳೆ ಬೇಗ ಬಾರಪ್ಪ Work  ಜಾಸ್ತಿ ಇದೆ ಹಾಗಾಗಿ ನೀನು ಇವಥೆ ಅಲ್ಲಿಂದ ಹೊರಡು  ಅಂದ್ರು , Soo Bad  ಅನ್ಕೊಂಡು ಅಲ್ಲಿಂದ Bangalore ಗೇ ಬಂದೆ Travel  ಮಾಡಿದ್ನಲ್ಲ ಸ್ವಲ್ಪ ಸುಸ್ತಾಗಿತು, ಹಾಗೇ ಒಂದು ಪೆಗ್ ಹಾಕಿ ನಂದಿ ಬೆಟ್ಟದ ತುಂಟಟಿಕೆ ನೆನಸ್ಕೊಂಡು ಮಲ್ಕೊಂಡೆ ಕಣ್ಮುಚಿ- ಕಣ್ಣು ತೇರೋಯೋದ್ರೊಳಗೆ ಬೆಳಗ್ಗೆ ಆಗಿ ಬಿಟ್ಟಿದೆ ,
                  ಛೇ....!  ಛೇ....!  ಈ ನಡುವೆ ಯಾಮಾರಿದರೆ ಬೆಳಗ್ಗೆ ಆಗಿಬಿಡುತ್ತೆ ಅನ್ಕೊಂಡು ಎದ್ದು ಗಣೇಶನಿಗೆ ಒಂದು ಕೈ ಮುಗಿದು ಕೆಲಸಕ್ಕೆ ಹೊರಟೆ .....!

Satish N Gowda
my e-mail
My Blog

No comments: