Friday, November 12, 2010

ನೆಚ್ಚಿನಗೆಳತಿಗೊಂದು ಆಹ್ವಾನ


ನೆಚ್ಚಿನಗೆಳತಿಗೊಂದು ಆಹ್ವಾನ

ಬಣ್ಣ-ಬಣ್ಣದ ಕನಸುಗಳನ್ನು ಹೊತ್ತ ತೇರು ನಾನು
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ನೀ ಕೂರೆ ಬಂದು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..

ಕಡಲತೀರದ ಮುತ್ತನ್ನು ಹಿಡಿದಿಡುವೆ ಅಲ್ಲೆ
ನಕ್ಷತ್ರಗಳನ್ನು ಬರಸೆಳೆದು ನಾ ಕೊಡುವೆ ನಲ್ಲೆ
ಸಿಹಿಮುತ್ತನ ಸುರಿಮಳೆಯನ್ನೆ ಸುರಿಸುವೆ ನಿಂತಲ್ಲೆ
ಮರೆಯದೆ ಬಂದುಬಿಡು ನೀ ಹುಡುಗಿ ಒಮ್ಮೆ.

ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು
ಹೇಳದೇ ಹೋದ ನೀ, ಮತ್ತೆ ಬರುವುದಾದರು ಎಂದು.

ಮನ್ನಿಸೇ ಹುಡುಗಿ ಈ ಭಗ್ನ ಪ್ರೇಮಿಯನ್ನ
ಮಾಡಲಾರೆ ಇನ್ನೊಮ್ಮೆ ಇಂತಹ ತಪ್ಪನ್ನ
ಕ್ಷಣವಾದರು ಒಮ್ಮೆ ನೀ ನೋಡಬಾರದೆ ನನ್ನನ್ನ
ಹಗಲುಗನಸಲ್ಲೂ ಪರಿತಪಿಸುತ್ತಿರುವೆ ನಾ ನಿನ್ನನ್ನ.

ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ


ನೆಚ್ಚಿನಗೆಳತಿಗೊಂದು ಆಹ್ವಾನ
SATISH N GOWDA

4 comments:

V.R.BHAT said...

ಸತೀಶ್,ಹೇಳುವುದಕ್ಕೆ ಬೇಸರಿಸಬೇಡಿ, ನಾನು ಜಾಸ್ತಿ ಇಂಥಾ ಕವನಗಳನ್ನೆಲ್ಲಾ ಇಷ್ಟಪಡೋದಿಲ್ಲ, ಯಾವಾಗಲೂ ಹುಡುಗಿಯರ ಬಗ್ಗೇ ಬರೆಯುವ ಬ್ಲಾಗ್ ಗಳಿಗೆ ನಾನು ಕಾಮೆಂಟು ಹಾಕುವುದಿಲ್ಲ, ಮೇಲಾಗಿ ನೀವು ಬರೆಯುವಾಗ ಸ್ವಲ್ಪ ಕಾಗುಣಿತ, ಶಬ್ದ ಪ್ರಯೋಗ, ವ್ಯಾಕರಣ ಇವುಗಳನ್ನು ಸರಿಯಗಿ ಅಭ್ಯಸಿಸಿದರೆ ಒಳ್ಳೆಯದು ಅನ್ನಿಸಿತು, ಇದು ನನ್ನ ಅವಲೋಕನದಿಂದ ಕೋದುತ್ತಿರುವ ವೈಯ್ಯಕ್ತಿಕ ಅಭಿಪ್ರಾಯ.ಇದೇ ರೀತಿ ಹಲವು ಹೊಸಬರಿಗೆ ನಾನು ಹೇಳಿದ್ದಿದೆ, ಭಾಷೆಗೆ ಅದರದ್ದೇ ಆದ ವೈಖರಿಯಿದೆ, ನಿಯಮವಿದೆ, ಅದನ್ನು ಅನುಸರಿಸಿ ನಡೆಯೋಣ ಅಲ್ಲವೇ? ನಿಮ್ಮ ಬರಹಗಳನ್ನು ಪ್ರಕಟಿಸುವ ಮುನ್ನ ಬಲ್ಲವರನ್ನು ಒಮ್ಮೆ ಕೇಳಿ ಪ್ರಕಟಿಸಿದರೆ ಒಳ್ಳೆಯದೇನೋ! ನಿಮಗೆ ಶುಭವಾಗಲಿ

ಅನಂತ್ ರಾಜ್ said...

ಬಣ್ಣ-ಬಣ್ಣದ ಕನಸುಗಳನ್ನು ಹೊತ್ತ ತೇರು ನಾನು
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ಬಂದು ಕೂರೆ ನೀನು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..

ಸತೀಶ್ - ಉಳೆದೆಲ್ಲ ಸಾಲುಗಳು ಪ್ರಾಸಬಧ್ಧವಾಗಿವೆ, ಅದಕ್ಕೆ ನಿಮ್ಮನುಮತಿಯಿಲ್ಲದೆ.. ಮೇಲಿನ ಸಾಲುಗಳಲ್ಲಿ ಕಡೆಯ ಪದಗಳನ್ನು ಅದಲುಬದಲು ಮಾಡಿದೆ..dont mistake..

ಕುದುರೆಯನ್ನೇರಿ ಓಡುವ ನಿಮ್ಮ ಲಹರಿ ಇಷ್ಟವಾಯಿತು.

ಶುಭಾಶಯಗಳು
ಅನ೦ತ್

SATISH N GOWDA said...

ಇದರಲ್ಲಿ ಬೇಸರ ಪಟ್ಟು ಕೊಳ್ಳುವಂತದ್ದು ಏನೂ ಇಲ್ಲ ಅರ ವಿ ಭಟ್ ಸರ್ ಅವರಮನಸ್ಸಿಗೆ ಏನೂ ಇಷ್ಟ ಆಗುತ್ತೋ ಅದನ್ನೇ ತಾನೆ ಮನಸ್ಸಿಗೆ ಹಚ್ಹ್ಚಿಕೊಲ್ಲೋದು. ನನ್ನವಳಲೋಕಕ್ಕೆ ಸ್ವಾಗತ ಧನ್ಯವಾದಗಳು ...

SATISH N GOWDA said...

ನಿಮ್ಮ ಪದಜೋಡನೆ ತುಂಬಾ ಚನ್ನಾಗಿದೆ ಅನಂತ್ ರಾಜ್ ಸರ್ ಅದಕ್ಕೆ ನಿಮ್ಮ ಅನುಮತಿಯೂ ಕೇಳದೆ ನನ್ನ ಕವಿತೆಯಲ್ಲಿ ನಿಮ್ಮ ಕೊನೆಯ ಪದವನ್ನ ಸೇರಿಸಿದ್ದೇನೆ ..... ನನ್ನವಳಲೋಕಕ್ಕೆ ಸ್ವಾಗತ ಹೀಗೇ ಓದುತ್ತಿರಿ ....