Sunday, October 17, 2010

ಮೋಹಕ ಕಂಗಳ ಚಲುವೆಗೆ ...




ಮೋಹಕ ಕಂಗಳ ಚಲುವೆಗೆ ...



           ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ ನಿಂತಿಲ್ಲ ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ. ಆ ಮಳೆ ಬಂದ ರಬಸದಷ್ಟೇ ಕಾಡಾಲಾರಾ0ಬಿಸಿತ್ತು  ನಿನ್ನಯ ನೆನೆಪು ಹೇ ಹುಡುಗಿ ಈ ಮಳೆಗೂ ನಿನ್ನ ನನ್ನ ಪ್ರೀತಿಗೂ ಏನೋ ಒಂತರ ಅನುಬಂಧ ,ನಂಟು ನಮ್ಮಿಬ್ಬರ ಪ್ರೀತಿ ಚಿಗುರಿದ ದಿನವನ್ನು ನೆನೆದು ನೋಡು ...! ಅಂದು ನಾವಿದ್ದದ್ದು ನಿಮ್ಮೂರಿನ ಆ ಮಲೆನಾಡ ಗುಡ್ಡದ ಮೇಲೆ ನನ್ನ ಪ್ರೀತಿಯ ಕರೆಗೆ ಒಗುಟ್ಟು  ನಿನ್ನೆಲ್ಲ ಕೆಲಸಗಳನ್ನು ಬಿಟ್ಟು .ಅಂದು ಮಧುರ ಭಾಂದವ್ಯ ದೊಂದಿಗೆ ನನ್ನ ನಿನ್ನ ಪ್ರೀತಿಗೆ ಅಂಕಿತ ಹಾಡಿದ್ದೆ ನೆನಪಿದೆಯ ..? ಹುಡುಗಿ ಹಾಗೇ ನೀನು ನನಗೆ    I LOVE U 2  ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ನಮ್ಮಿಬ್ಬರ ಪ್ರೀತಿಗೆ ಹನಿಯ ಸಿಂಚನ ಮಾಡಿದ್ದ . ನನ್ನ ಪ್ರೀತಿಯ ಗುಬ್ಬಚಿ ಮರಿ ಒದ್ದೆಯಗದಿರಲೆಂದು ಎದೆಯತೋಳಲ್ಲಿ  ನಿನ್ನನ್ನು ಸೇರಿಸಿದ್ದೆ . ಮೊದಲಿನಿಂದಲೂ ಅಷ್ಟೇ ಮಳೆ ಬಂತೆಂದರೆ ಸಾಕು ನನ್ನೆಲ್ಲಾ ನೆನಪುಗಳ ಹಕ್ಕಿಗೆ ರೆಕ್ಕೆ ಬಿಚ್ಚಿ ಹಾರೋ ಸಮಯ ಶುರುವಾಯಿತೆಂದೇ   ಅರ್ಥ ಇದು ನೆನ್ನೆ ಮೊನ್ನೆಯದಲ್ಲ ಸರಿ ಸುಮಾರು ನನ್ನ ಬಾಲ್ಯದಿಂದಲೂ ಕೋಡ  ಅದು ನಿನಗೂ ಗೊತಿಲ್ಲದ ವಿಷಯವೇನಲ್ಲ ಬಿಡು .ಆದರೆ ಅಂತಹ ಎಷ್ಟೋ  ಮಳೆಯದಿನಗಳು ನಮ್ಮಿಬ್ಬರನ್ನ ಭಾವುಕರನ್ನಗಿಸಿವೆ ಅಲ್ಲವೇನೆ ಪಾಪು ...!
             ಕಳೆದ ವಾರ ನಾನು ನನ್ನ ಸ್ನೇಹಿತರ ಜೊತೆಗೊಡಿ  ನಿಮ್ಮೂರಿನ ಕೆಲ ಪ್ರವಾಸಿ ತಾಣಗಳನ್ನು ಸುತ್ತಾಡಿ ಕೊನೆಗೊಮ್ಮೆ  ಆಕಸ್ಮಿಕವಾಗಿ ನಾವು ಪ್ರತಿ ಬೇಟೆಯಲ್ಲೂ  ಕುಳಿತು ಕೊಳ್ಳೋ ಜಾಗದಲ್ಲಿ   ಹೋಗಿ ಕುಳಿತೆ . ಆಕಸ್ಮಿಕವೋ ಅಥವಾ ಅದೃಷ್ಟವೋ ಎಂಬಂತೆ ವರುಣರಾಯ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದ .ಆಗ ಕಾಡಿತ್ತು ಏಕಾಂಗಿತನ ಅವಾಗ ನಿನ್ನ ನೆನಪಿನೊಂದಿಗೆ ಹುಟ್ಟಿದ ಕವನವೇ ಇದು  ಹೇಗೂ ಮುಂದಿನ ರಜಾ ದಿನಗಳಲ್ಲಿ ನಾನು ನಿಮ್ಮ ಊರಿಗೆ ಬರ್ತಿದೀನಿ  ನಿನ್ನ ಹೆಜ್ಜೆಯ ಜೊತೆ ಹೆಜ್ಜೆ ಸೇರಿಸುವ ಆಸೆ, ಕೈ ಕೈ ಹಿಡಿದು ಒಂದಿಡೀ ದಿನ ನಿನ್ನ ಜೊತೆ ಸಾಗುತ್ತಾ ನಿಮ್ಮೂರಿನ ಬೆಟ್ಟ ಗುಡ್ಡಗಳನ್ನು ಪರಿಚಯಸು ನಮ್ಮಿಬ್ಬರಿಗೆ ಆಸರೆಯಾಗಿ ವರುಣರಾಯ ಜೊತೆಯಲ್ಲಿ ಇದ್ದೇ ಇರುತ್ತಾನೆ ಒಂದಿಷ್ಟು ಸಮಯ ಪ್ರೀತಿಯ  ಲೋಕದಲ್ಲಿ ರಾಜ ರಾಣಿ ಯಾಗಿ ಮೆರೆದಾಡುವ ಹಾಗೇ   ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅದರಲ್ಲಿ ನನ್ನ ಪ್ರತಿಬಿಂಬ ಕಾಣುವ ಆಸೆಯಾಗಿದೆ   ಹಾಗೇ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು  ಹೇ ಪಾಪು ರೆಡಿಯಾಗಿರು ....!


SATISH N GOWDA
9844773489

5 comments:

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಪ್ರೇಮ ಪತ್ರ

ಪ್ರೀತಿಯ ಶಕ್ತಿ ಹಾಗೆ

ಸೀತಾರಾಮ. ಕೆ. / SITARAM.K said...

ಭಾವಗಳ ತೀಕ್ಷ್ಣತೆ ಚೆನ್ನಾಗಿದೆ ಪ್ರೇಮಪತ್ರದಲ್ಲಿ.

SATISH N GOWDA said...

ಇಂಚರ ಸರ್ ನೀವೂ ಹೇಳಿದ್ದು ನಿಜ ಪ್ರೀತಿಗೆ ಅದರದ್ದೇ ಆದ ಶಕ್ತಿ ಇದೆ

SATISH N GOWDA said...

ಧನ್ಯವಾದಗಳು ವಸಂತ್ ನಿಮ್ಮ ಪ್ರತಿಕ್ರೆಯೆಗೆ ,,,, ಹೀಗೇ ಕಮೆಂಟಿಸುತ್ತಿರಿ

SATISH N GOWDA said...

ಸೀತಾರಾಂ ಸರ್ ನಿಮ್ಮ ಅನಿಸಿಕೆಗೆ ನಾನು ಚಿರಋಣಿ ........
ಹೀಗೇ ನನ್ನೆಲ್ಲಾ ಲೇಖನಗಳನ್ನು ಓದಿ ಪ್ರತಿಕ್ರಿಯಿಸಿ ..
ನಮ್ಮಥವರಿಗೆ ನಿಮ್ಮಂಥ ಆಶಿರ್ವಾದ ಮಾಡುವ ಕೈ ಗಳ ಅವಶ್ಯಕತೆ ಇದೆ ,,