Saturday, October 9, 2010

ಹೇಳು ಹುಡುಗಿ ನೀನ್ಯಾರೆ...?


ಹೇಳು ಹುಡುಗಿ ನೀನ್ಯಾರೆ...?
ಹೇ ಹುಡುಗಿ
ನೀ ತೊಟ್ಟರೆ ಲಂಗಾ-ದಾವಣಿ
ರಾಜಕುಮಾರಿಯೂ ಎದ್ದು ಬಂದಾಳಲ್ಲಾ
ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು.
ನಿನ್ನ ನಗುವ ಕಂಡ ರಾಜಕುಮಾರ
ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು
ನಿನೇನು ಹುಡುಗಿಯೋ ಅಥವಾ
ಧರೆಗೀಳಿದು ಬಂದ ಇಂದ್ರಲೋಕದ
ಸ್ಪಪ್ನ ಸುಂದರಿಯೋ...?


ಹೇ ಹುಡುಗಿ
ನೀ ತೊಟ್ಟರೆ ಗಾಗ್ರ ಚೋಲಿಯ
ನಾಚಿ ನಿಂತಾನಲ್ಲಾ
ನಿನಗೆ ಜನ್ಮ ಕೊಟ್ಟ ಆ ಬ್ರಹ್ಮ,
ಧುಮಕ ಹೊಂಟಾನಲ್ಲಾ,
ಆ ಸಮುದ್ರಕ್ಕೆ ಈ ಸೂರ್ಯ
ನಿನೇನು ಹುಡುಗಿಯೋ ಅಥವಾ
ಸೌಂದರ್ಯದ ರಾಕ್ಷಸಿಯೋ..?


ಹೇ ಹುಡುಗಿ
ನೀ ತೊಟ್ಟರೆ ಸ್ಯಾರಿ, ರವಕೆಯ
ಓಡಿ ಬಂದಾರಲ್ಲಾ
ನಿನ್ನ ನೋಡಲು ರೆಂಬೆ,ಊರ್ವಶಿ,ಮೇನಕೆಯರು
ಸಾರ ಹೊರಟಾರಲ್ಲಾ
ದೇವಲೋಕದ ಇಂದ್ರನೆ ಮೇಲೆ ಯುದ್ದವ
ನಿನೇನು ಹುಡುಗಿಯೋ ಅಥವ ದೇವ ಕನ್ಯಯೋ...?


ನೀ ನಿಂತರೆ ಕಣ್ಣ ಮುಂದೆ
ಕಾಣದಾಯಿತು ಮುಂದಿನ ಪ್ರಪಂಚ
ಬಾರದಾಯಿತು ಮಾತುಗಳ ಸ್ವರಮಾಲೆ
ನಿನ್ನ ಹೊಗಳಲು ಚಂದದ ಪದಗಳಿಲ್ಲ
ನಾ ನೋಡಲು ಈ ಪ್ರಪಂಚದಲ್ಲಿ ಎನೋ ಉಳಿದಿಲ್ಲ
ನೆನ್ನೆ ಮೊನ್ನೆಯವರಿಗೊ ನೀ ಕಾಣಲಿಲ್ಲ
ಹೇಳು ಹುಡುಗಿ ನೀನ್ಯಾರೆ...?


ಹೇಳು ಹುಡುಗಿ ನೀನ್ಯಾರೆ...?
SATISH N GOWDA

13 comments:

Anonymous said...

''ನಿನ್ನ ನಗುವ ಕಂಡ ರಾಜಕುಮಾರ
ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು''


ಸತೀಶ್ ಅವರೇ ಆ ಮೇಲ್ಕಂಡ ಸಾಲುಗಳಲ್ಲಿ ಹುಡುಗ ಹುಡುಗಿಯ ಅಂದವನ್ನು ಕಂಡು ಕಾಶಿ ಯಾತ್ರೆಗೆ ಹೋಗ್ತಾನೆ ಅಂತ ಬರೆದಿದ್ದೀರಿ, ಆದ್ರೆ ಯಾತ್ರೆಗೆ ಹೋಗೋರು ಜೀವನ ಬೇಸರವಾಗಿ ವ್ರುದಪ್ಯ ದಲ್ಲಿರೋರ್ರು . ಆದರೆ ಆಕೆಯ ಅಂದ ನೋಡಿ ಬೆರಗಾಗಿರುವ ಹುಡುಗ ಗೃಹಸ್ತ್ರಾಶ್ರಮ ಕ್ಕೆ ಕಾಲಿಡಲು ಬಯಸ್ಥಾನೆಯೇ ವಿನಹ ತೀರ್ಥ ಯಾಥ್ರೆಗಲ್ಲ ಅಲ್ವಾ ? ದಯವಿಟ್ಟು ಆ ಸಾಲುಗಳನ್ನ ಬದಲಾಯಿಸಿ ಓ.ಕೆ.?

SATISH N GOWDA said...

ನಿಜ ವಿದ್ಯಾ ......
ಕಾಶಿ ಯಾತ್ರೆ ಗೇ ಹೋಗೋದು ಜೀವನದ ಎಲ್ಲಾ ಕಷ್ಟ ಸುಖಗಳನ್ನು ನೋಡಿದೆ ಮೇಲೇನೆ ಅಂತ ಇಟ್ಕೊಳ್ಳೋಣ ...... ಆದರೆ ...... ಇಡೀ ಪ್ರಪಂಚದ ಅತೀ ಸುಂದರವನ್ನು ಕಂಡ ಕಣ್ಣುಗಳು ಇನ್ನೇನು ನೋಡಲು ಈ ಬೊಮಿಯಲ್ಲಿ ಉಳಿದಿಲ್ಲ .ನಮಗ್ಯಾಕೆ ಇನ್ನ ಈ ಜೀವನ ಅಂತ ಹೊರಟಿರ ಬಹುದಲ್ಲವೇ ...? ನಮ್ಮ ಮನಸ್ಸಿಗೆ ಹೇಗೇ ತಿಳಿ ಹೇಳುತ್ತಿವೋ ಹಾಗೇ ಅರ್ಥಿಸಿ ಕೊಳ್ಳ ಬಹುದಲ್ಲವೇ ಗೆಳತಿ ....
ಇನ್ನೊಮ್ಮೆ ಓದಿ ನೋಡಿ ಅರ್ಥ ಕೆಟ್ಟ ರೀತಿಯಲ್ಲಿ ಬರುವಂತಿದ್ದರೆ ಖಂಡಿತ ತಿದ್ದುತ್ತೇನೆ

ಧನ್ಯವಾದಗಳು ವಿದ್ಯಾ ...
ನನ್ನವಳಲೋಕಕ್ಕೆ ಸ್ವಾಗತ
ಸತೀಶ್ ಏನ್ ಗೌಡ

Unknown said...

ವಿದ್ಯಾ ರವರು ಹೇಳಿರೋದು ನಿಜಾನೆ ಅಲ್ವ ಸತೀಶ್

Unknown said...

ಚೆನ್ನಾಗಿದೆ ಕವನ.

SANGETHA'S BLOG said...

it's twooo gud keep writing ri.

ಸಾಗರದಾಚೆಯ ಇಂಚರ said...

enu sir

tumba romantic agidira

chennagide kavana

ಮನಸಿನಮನೆಯವನು said...

ಸೂಪರ್...

..ನನ್ನ ಮನಸಿನಮನೆ'ಗೆ ಬನ್ನಿ..

SATISH N GOWDA said...

ನನಗು ಹಾಗೇ ಹನಿಸುತ್ತೆ ಸಂಜನಾ .... ನನ್ನವಳಲೋಕಕ್ಕೆ ಸ್ವಾಗತ

SATISH N GOWDA said...

ಥ್ಯಾಂಕ್ಸ್ ಸಂಗೀತ .... ನನ್ನವಳಲೋಕಕ್ಕೆ ಸ್ವಾಗತ

SATISH N GOWDA said...

ಹಾಗೇನು ಇಲ್ಲ ಇಂಚರ ಸರ್ ಕಾಮೆಂಟ್ ಬರೆದದ್ದಕ್ಕೆ ಧನ್ಯವಾದಗಳು ಮತ್ತೊಮ್ಮೆ ನನ್ನವಳಲೋಕಕ್ಕೆ ಸ್ವಾಗತ

SATISH N GOWDA said...

ಖಂಡಿತ ಬರುತ್ತೇನೆ ಕತ್ತಲೆ ಮನೆಯವರೇ ಕಾಮೆಂಟ್ ಬರೆದದ್ದಕ್ಕೆ ಧನ್ಯವಾದಗಳು. ಮತ್ತೊಮ್ಮೆ ನನ್ನವಳಲೋಕಕ್ಕೆ ಸ್ವಾಗತ

ಸೀತಾರಾಮ. ಕೆ. / SITARAM.K said...

ಮದುವೆಯಲ್ಲಿ ಹುಡುಗನೂ ಮಾಡೋ ಕಪಟ ಕಾಶಿಯಾತ್ರೆ ತರಾ ಅನ್ಕೊಂಡ್ರಾಯಿತು ಅಲ್ಲವೇ..
ಚೆನ್ನಾಗಿದೆ.

SATISH N GOWDA said...

ಧನ್ಯವಾದಗಳು ಸೀತಾರಾಂ ಸರ್