Monday, September 27, 2010

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

 ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿ
ಅಂದದ ತೊದಲು ನುಡಿ
ಕಚಗುಳಿ ಇಡುವ ಕಣ್ಣ ನೋಟ
ರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆ
ಸುಂದರ , ರಮಣೀಯ , ಮನೋಹರ ...

ನನ್ನ ನಿನ್ನ ಮಿಲನ 
ಹೇಳಲಾಗದ ಪದಗಳ ನಯನ 
ಗೀಚಿ ಬರೆದರೂ ಕೂಡ 
ಮುಗಿಯಲಾರದ ಪ್ರೇಮ ಕವನ .

ದೇವರ ಮಹಿಮೆ ನಾ ಕಾಣೆ ಗೆಳತಿ 
ನಿನ್ನ ಕಣ್ಣ ನೋಟಕ್ಕೆ ನಾನದೆ 
ಸಿಪ್ಪೆಕಳಚಿದ ಬಾಳೆಹಣ್ಣಿನಂತೆ ,
ಭೂಮಿಯಲ್ಲಿ  ಬಿದ್ದು ಒದ್ದಾಡುವ ಮೀನಿನಂತೆ .

ನಿನ್ನ ಒಂದು ಸ್ಪರ್ಶಕ್ಕೆ 
ಕ್ಷಣರ್ದದಲ್ಲಿ   ಮೂಡಿದ ಸಂಚಲನ 
ಯಾವ ಬಿರುಗಾಳಿಗೂ ಕಡಿಮೆ ಇರಲಿಲ್ಲ ,
ಮತ್ತು ಬರಿಸುವ ಮದುರೆಯು ಅದಕ್ಕೆ ಸಾಟಿಯೇನಿಲ್ಲ.

ಏನಿದೆಯೋ ದೇವರೇ .....!
ಹೆಣ್ಣಿನ ಮನಸ್ಸಿನಲ್ಲಿ ನಾನಂತು ಅರಿಯೆ 
ತೊಳೆದು ಒರಸಿದರೋ ಕಾಣದ 
ಸುವರ್ಣಾಕ್ಷರಗಳ  ಸರಮಾಲೆ .

ಕೊಡಿಸಿ , ಗುಣಿಸಿ , ಭಾಗಿಸಿದರೋ 
ಬಾರದ ಉತ್ತರ ಹೆಣ್ಣು , ಮತ್ತು 
ಅವಳ ಮನಸ್ಸಿನ ಚಿತ್ರಗಳ ಭಾವನೆ 
ಹೆಣ್ಣನ್ನು ಸೃಷ್ಟಿಸಿದ   ದೇವರೇ 
ನಿನಗಿದೋ ನನ್ನದೊಂದು ಸಲಾಂ ....

.
ಅಪರೋಪಕ್ಕೊಮ್ಮೆ ಸಿಕ್ಕ ಹುಡುಗಿ ...
SATISH N GOWDA

10 comments:

Manju M Doddamani said...

ಚನ್ನಾಗಿ ಬರಿತ ಇದ್ದೀರಾ ನಿಮ್ಮ ಗಮನಕ್ಕೆ ಮುಂದೆ ಬರೆದು ಪೋಸ್ಟ್ ಮಾಡುವಾಗ ಫಾಂಟ್ ಗಳಿಗೆ ಇಟಾಲಿಕ್ ಸ್ಟಿಲ್ ಉಪಯೋಗಿಸಬೇಡಿ ನಾರ್ಮಲ್ ಆಗಿರಲಿ

ದಿನಕರ ಮೊಗೇರ said...

ಸತೀಶ್,
ಬಣ್ಣ ಬಣ್ಣದ ಕವನ ಬರೆಸಿದ ಹುಡುಗಿ ಇನ್ನೊಮ್ಮೆ ಸಿಗಲಿ..... ಇಂಥಹದೆ ಇನ್ನೊಂದು ಕವನ ಬರೆಸಲಿ..... ಚೆನ್ನಾಗಿದೆ.....

SATISH N GOWDA said...

ನಿಮ್ಮ ಅನಿಸಿಕೆಗೆ ಧನ್ಯವಾದಗಳು ಮಂಜು . ಅನ್ನ್ಮುಂದೆ ಇಟಲಿಯಲ್ಲಿ ಅಕೊಲ್ಲ ಬಿಡಿ ಹೀಗೇ ಕಾಮೆಂಟ್ ಮಾಡುತ್ತಿರಿ ನನ್ನ ತಪ್ಪುಗಳನ್ನು ತಿದ್ದುತ್ತ.... ಜೊತೆಯಲ್ಲಿ ಸಾಗಿ ......

SATISH N GOWDA said...

ದಿನಕರ್ ಮೊಗೆರೆ ಸರ್ ಖಂಡಿತ ಸಿಕ್ಕುತ್ತಾಳೆ ಆ ನಂಬಿಕೆ ನನಗೋ ಇದೆ .........
ನಿಮ್ಮ ಕಾಮೆಂಟ್ ಗೇ ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

"ಅಪರೋಪಕ್ಕೆ" ಅಲ್ಲಾ... "ಅಪರೂಪಕ್ಕೆ" ಎಂದಾಗಬೇಕು. ಇದೇ ರೀತಿಯ ತಪ್ಪುಗಳು ಕವನದಲ್ಲಿ ಇನ್ನೂ ಇವೆ. ಉದಾ: "ಹೆಣ್ಣು" ಎಂದಾಗಬೇಕಾದಲ್ಲಿ "ಹಣ್ಣು" ಎಂದಾಗಿದೆ.. "ಸೃಷ್ಟಿ" ಎಂದಾಗಬೇಕಾದಲ್ಲಿ "ಶ್ರುಷ್ಟಿ" ಎಂದಾಗಿದೆ. ಕವನ ಬರೆಯುವಾಗ ಸಾಹಿತ್ಯಕ್ಕೆ ಹಾಗೂ ಕಾಗುಣತಕ್ಕೆ ವಿಶೇಷ ಗಮನ ಕೊಟ್ಟರೆ ಒಳ್ಳೆಯದು. ಪ್ರಯತ್ನ ಮುಂದುವರಿಯಲಿ. ಕವನ ಚೆನ್ನಾಗಿದೆ.

SATISH N GOWDA said...

ತೇಜಸ್ವಿನಿ ಮೇಡಂ ರವರೆ ನನ್ನ ತಪ್ಪುಗಳನ್ನು ತಿದ್ದಿ ಹೇಳಿದ್ದಕ್ಕೆ ಧನ್ಯವಾದಗಳು
"ನನ್ನವಳಲೋಕಕ್ಕೆ " ಸ್ವಾಗತ ಹೀಗೇ ಕಾಮೆಂಟಿಸಿ ......

ಮನಸಿನಮನೆಯವನು said...

ನೀರಿನಲ್ಲಿ ಮೀನಂತೆ ಹಾಯಾಗಿದ್ದ ನಮ್ಮ ಸತಿ ಅವರನ್ನು ಆಕೆ ನೀರಿನಿಂದ ಹೊರಬೀಳುವಂತೆ ಮಾಡಿದಳೇ..

SATISH N GOWDA said...

ಕತ್ತಲೆ ಮನೆಯವರೇ ನಿಜ ಸರ್ ......

ತಮಷಗಾಗಿ ........

Unknown said...

ಇನ್ನೊಮ್ಮೆ ಸಿಕ್ಕೆ ಸಿಕ್ತಾಳೆ...
ಸಿಕ್ಕಾಗ ಮತ್ತೊಂದು ಇಂತದ್ದೆ ಕವನ ಬರೀರಿ ..

SATISH N GOWDA said...

ಖಂಡಿತ ಸಂಜನಾ ನಿಮ್ಮ ಅಸೆ ನಾನ್ಯಾಕೆ ಬೇಡ ಎನ್ನಬೇಕು ....