Tuesday, August 10, 2010

ವಿರಹಾ.... ನೂರು, ನೂರು ತರಹಾ...




ವಿರಹಾ.... ನೂರು, ನೂರು ತರಹಾ...
ವಿರಹಾ.... ಪ್ರೇಮಲೋಕದ ಕಹಿ ಬರಹ


ಮರಳುಗಾಡಿನ
ಮದ್ಯದಲ್ಲಿ
ಬಿರುಬಿಸಿಲಿನಲ್ಲಿ
ಉರಿಯುವ
ಸೂರ್ಯನಮುಂದೆ
ದಿನವಿಡೀ ನಿಂತಿರಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಕ್ಷಣವನ್ನು ಸಹಿಸಲಾಗುತ್ತಿಲ್ಲ.

ನಮ್ಮೂರಿನ
ಕೆಂಡಮಲ್ಲಿಗೆ
ಜಾತ್ರೆಯಲ್ಲಿ
ಹೊತ್ತಿ ಉರಿಯುತ್ತಿರುವ
ಬೆಂಕಿಯಲ್ಲಿ ಹಾಗೆ ಸುಮ್ಮನೆ
ನೆಡೆದಾಡಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಜನರ ಮಧ್ಯ
ನೆಡೆದಾಡುವುದು ಬಲು ಕಷ್ಟ.

ನಂದಿಬೆಟ್ಟದ
ಬಲು ಎತ್ತರವಾದ
ಶಿಕರದಿಂದ
ಕಲ್ಲು ಬಂಡೆಗಳ
ಮೇಲಿನಿಂದ ಪಾತಳಕ್ಕೆ
ಹಾಗೆ ಒಮ್ಮೆಲೇ ನೆಗೆಯಬಹುದಿತ್ತೆನೂ ಗೆಳತಿ
ನೀನಿಲ್ಲದ ಈ ಪ್ರಪಂಚದಲ್ಲಿ
ಕುಳಿತಿರುವುದು ನನ್ನಿಂದ ಸಾದ್ಯವಿಲ್ಲ
ವಿರಹಾ.... ನೂರು, ನೂರು ತರಹಾ...
SATISH N GOWDA

12 comments:

ದಿನಕರ ಮೊಗೇರ said...

viraha tumbi tuLukaaDuttide nimma kavanadalli ... chennaagide..... munduvarisi...

SATISH N GOWDA said...

ತುಂಬಾ ಧನ್ಯವಾದಗಳು ಸರ್ ನಿಮ್ಮೆಲ್ಲರ ಆಶಿರ್ವಾದ ದಿಂದ ಮುಂದುವರೆಯುತ್ತಿದ್ದೇನೆ ....

SATISH N GOWDA

ಸೀತಾರಾಮ. ಕೆ. / SITARAM.K said...

ವಿರಹ ತುಂಬಿ ತುಳುಕುತ್ತಿದೆ. ಆದರೆ ತುಳುಕದಿರಲಿ!

ಮನಸು said...

very nice kavana

SATISH N GOWDA said...

ವಿರಹಾ... ವನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ ಸರ್ ನಿಮ್ಮ ಪ್ರತಿಕ್ರೆಯೆಗೆ ಧನ್ಯವಾದಗಳು ಸೀತಾರಾಂ ಸರ್

SATISH N GOWDA said...

ಥ್ಯಾಂಕ್ಸ್ ಮನಸು ರವರೆ ನಿಮ್ಮ ಪ್ರತಿಕ್ರೆಯೇಕ್ಕೆ ನಮನಾ ...

Unknown said...

ಕವನದಲ್ಲಿ ಬರೀ ವಿರಹ ಬಿಟ್ಟರೆ ನನಗೆ ಬೇರೇನೂ ಕಾಣುತ್ತಿಲ್ಲ . ಆದಷ್ಟು ಬೇಗ ನಿನಗೆ ನಿಮ್ಮ ಗೆಳತಿ ಸಿಗಲಿ

SATISH N GOWDA said...

ಧನ್ಯವಾದಗಳು ನಿಮ್ಮ ಕಾಮೆಂಟ್ ಗೆ , ನಾನು ಮೊದಲೇ ಹೇಳಿದಂತೆ ಅಲ್ಲಿ ವಿರಹಾ ಬಿಟ್ಟರೆ ಬೇರೆ ಏನು ಇಲ್ಲ ..

SATISH N ಗೌಡ
ನನ್ನ ಸ್ನೇಹಲೋಕ (ORKUT)
ನನ್ನ ಬ್ಲಾಗ್
www.nannavalaloka.blogspot.com

ನನ್ನವಳಲೋಕ ವನ್ನು ನೋಡಿದ್ದಿರಿ ,ಒಮ್ಮೆ ಬನ್ನಿ ನನ್ನ ಸ್ನೇಹಲೋಕಕ್ಕೆ

ಮನಸಿನಮನೆಯವನು said...

ಆದಷ್ಟು ಬೇಗ ವಿರಹ ತೀರಲಿ..

SATISH N GOWDA said...

ಥ್ಯಾಂಕ್ಸ್ ಕತ್ತಲೆ ಮನೆಯವರೇ ...

SANGETHA'S BLOG said...

ಅದ್ಬುತವಾದ ಕವಿತೆ . ಅದ್ಬುತವಾದ ಕಲ್ಪನೆ . ಸೂಪರ್ ಕಣ್ರೀ ಸತೀಶ್

SATISH N GOWDA said...

thanks sangetha .ಸಂಗೀತಾ ನಾನು ನನ್ನ ಹುಡುಗಿನ ತುಂಬಾ love ಮಾಡ್ತೀನಿ ಎಷ್ಟು love ಮಾಡ್ತೀನಿ ಅಂತ ನನಗೋ ಗೊತ್ತಿಲ್ಲ ಬಹುಶ ಅದಕ್ಕೆ ಅವಳು ಇನ್ನೂ ನನಗೆ ಸಿಕ್ಕಿಲ್ಲ ....