Tuesday, March 30, 2010

"ಬಾರ್ ಬಾಲಿಕೆಯರಿಗೆ ಲಂಗಾ ದಾವಣಿ"



 "ಬಾರ್ ಬಾಲಿಕೆಯರಿಗೆ ಲಂಗಾ ದಾವಣಿ"


ಬಿಸಿಯಾಗಿದೆ ,ನಶೆಯೇರಿದೆ , ಮಿತಿಮಿರೀದೆ ಜೊಪಾನ ಎಂದು ಎಚ್ಚೆರಿಸುತ್ತೆಲೇ ಕುಡಿತಕ್ಕೆ ಜಾರುವ ಭಾರತದ ಸಿಲಿಕಾನ ಮಂದಿಗೆ ಇಲ್ಲಿದೆ ಹೊಸ ಉಪಾಯ , ಬೆಂಗಳೊರಲ್ಲಿ ಬಾರ್ ಬಾಲಿಕೆಯರು ಮೈ ತೋರಿಸುವಂತಿಲ್ಲ ಬದಲಾಗಿ ಇವರು ಭಾರತದ ವಿಶೆಷ ಉಡುಗೆಯಾದ ಲಂಗ-ದಾವಣಿಯನ್ನೆ ಹಾಕಿಕೊಂಡು ಬಾರ್ ಬಾಲಿಕೆಯರು ಸಪ್ಲೆಮಾಡಬೇಕಂತೆ ಇದು ಸಚಿವ ರೇಣುಕಾಚಾರ್ಯನ ಹೊಸ ಕಾನುನು ಹಾಗಾಗಿ ಇನ್ನು ಮುಂದೆ ಬಾರಗಳ ಹೊಳ ಹೊಕ್ಕರೆ ನಿಮಗೆ ಭಾರತಿಯತೆ ಸವಿ ಕಟ್ಟಿಟ್ಟಬುತ್ತಿ ಇದೆಕ್ಕೆಲ್ಲ ಕಾರಣ ಆಡಿಳಿತಾರೋಡಿ ಬಿ ಜೆ ಪಿ ಸರ್ಕಾರ .ಬಾರಗಳಲ್ಲಿ ಮದ್ಯ ಪುರೈಸುವ ನೂರಾರು ಬಾರ್ ಬಾಲೆಯರು ತನ್ನ ಮೈ ತೊರಿಸುತ್ತಾ ಗ್ರ‍ಾಹಕರನ್ನು ಸೆಳೆಯುತ್ತಿದ್ದು ಹೀಗೆ ಸೆಳೆಯುತ್ತಾ ಮದ್ಯ ಸರಬಾರಜು ಮಾಡುವುದು ಹೀಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಸರ್ಕಾರಕ್ಕೆ ಇರಸು ಮುರಸು ಉಂಟಾಗಿದೆಂತೆ ಹಾಗಾಗಿ ಇದನ್ನು ತಪ್ಪಿಸಲು ಸಲುವಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗು ಹೀಗಿನ ಅಬಕಾರಿ ಸಚಿವ ರೇಣುಕಾಚಾರ್ಯರವರು ಬಾರ್ ಬಾಲಿಕೆಯರಿಗೆ ಲಂಗ ದಾವಣಿ ತೋಡಿಸಲು ಉದ್ದೆಶಿಸಿದ್ದಾರೆ

ಇದೇ ಕಾರಣಕ್ಕಾಗಿ ಇನ್ನು ಡೀಸೆಂಟ್ ಅಗಿರೊ ಉಡುಗೆ ತಯಾರಿಸಿಕೊಡುವಂತೆ ಸರ್ಕಾರವು ಬೆಂಗಳೊರಿನ ಪ್ಯಾಶನ್ ಸಂಸ್ತೆಯೊಂದರ ಮೋರೆ ಹೋಗಿದ್ದಾರೆ ಇದಕ್ಕೆ ಶ್ರಿರಾಮಸೆನೆಯ "ಸಂಸ್ಕ್ರತಿ ರಕ್ಷಣೆ " ಅಭಿಯಾನವೇ ಪ್ರೇರಣೆಯಾಗಿರಬಹುದೆ...? ಇಲ್ಲ ಎನ್ನುತ್ತಾರೆ ಹೀಗಿನ ಅಬಾಕಾರಿ ಸಚಿವ ಎಂ ಪಿ ರೇಣುಕಾಚಾರ್ಯ .

ಹುಡುಗಿಯರು ಕೊಡ ಬಾರ್ ಟೆಂಡರ್ ಗಳಲ್ಲಿ ಕೆಲಸ ಮಾಡಲು ಸುಪ್ರಿಂಕೊರ್ಟ್ ನೀಡಿರುವ ಅನುಮತಿಯನ್ನು ಈ ಬಾರ್ ಮಾಲಿಕರು ದುರುಪಯೊಗ ಮಾಡಿಕೊಳ್ಳುತ್ತಿದ್ದಾರೆ .ಅದರಲ್ಲೊ ಹೆಚ್ಚಿನವರು ನಮ್ಮ ಆಡು ಭಾಷೆಯಲ್ಲಿ ಹೇಳಬಹುದಾದರೆ ಲೈವ್ ಬ್ಯಾಂಡ್ ಕಲಾವಿದರಾಗಿ ಹಾಗು ಬಾರ್ ನರ್ತಕಿಯರಾಗಿ ಕಾರ್ಯನಿರ್ವೈಸುತ್ತಿದ್ದಾರೆ ಎಂದು ಹೀಗಿನ ಅಬಕಾರಿ ಸಚಿವ ರೇಣುಕಾಚಾರ್ಯರವರು ಆರಿಪಿಸಿದ್ದಾರೆ

ಕೆಲಸ ತೀರಾ ಅನಿವರ್ಯ ಸ್ಥಿತಿಯಲ್ಲಿರುವ ಹುಡುಗಿಯರು ಬಾರ್ ಟೆಂಡರ್ ಗಳಲ್ಲಿ ಕೆಲಸ ಮಾಡಲಿ ಅದರೆ ಅವರಿಗೊ ಕೊಡ ವಸ್ತ್ರಸಂಹಿತೆಯೊಂದನ್ನ ಜಾರಿಗೊಳಿಸಿದರೆ . ನಾವು ಈ ಲೈವ್ ಬ್ಯಾಂಡ್ ಕಲಾವಿದರು ಎಂಬ ಕಲಾವಿದರು ಎಂಬ ಕಳಂಕ ನೀಗಿಸಬಹುದು ಎನ್ನುತ್ತಾರೆ

ಅದರೆ ಇದಕ್ಕೆ ವಿರೊದ ಪಕ್ಷಗಳ ವಿರೋದ ಇದ್ದೇ ಇದೆ . ಮಾಜಿ ಕಾನುನು ಸಚಿವ ಜೆಡಿಎಸ್ ಶಾಸಕ ಎಂ.ಸಿ.ನಾಣಯ್ಯ ಅವರಂತೂ "ಇದೊಂದು ಅರ್ ಎಸೆಸ್ ಪ್ರೆರಿತ ನಿರ್ದಾರ ಬಾರ ಹುಡುಗಿಯರು ಖಾಕಿ ಪ್ಯಾಂಟ್ ಹಾಗು ಬಿಳಿ ರವಕೆ ಮತ್ತು ಬಿಳಿ ಟೊಪಿ ಧರಿಸಬೇಕೆಂಬುದು ಅವರ ಉದ್ದೇಶವೇ...? ಎಂದು ರೇಣುಕಾಚಾರ್ಯರವರು ಪ್ರಶ್ನಿಸಿದ್ದಾರೆ

ಅದರೆ ಬಾರ್ ಬಾಲೆಯರು ಹೇಚ್ಚಾಗಿ ಆಶ್ಲಿಲ ಚಟುವಟಿಕೆಗಳಲ್ಲಿ ತಮ್ಮನ್ನು ತೋಡಗಿಸಿಕೊಂಡರಿವುದು ಹಾಗ್ಗಾಗ್ಗೆ ಪತ್ತೆಯಾಗುತ್ತಲೆ ಇರುತ್ತದೆ ಎನ್ನುತ್ತಾರೆ ಅಬಾಕಾರಿ ಕೆಲ ಅದಿಕಾರಿಗಳು "ಲೈವ್ ಬಾಂಡ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಕೆಲ ಹುಡುಗಿಯರು ಟೆಂಡರ್ ಗಳಲ್ಲಿ ಕೆಲಸ ಮಾಡುವುದಲ್ಲದೆ ಮದ್ಯ ಸರಬರಾಜು ಮಾಡುವುದರ ಜೋತೆಗೆ ಗ್ರಾಹಕರೊಂದಿಗೆ ನರ್ತಿಸುತ್ತಿರುವುದನ್ನು ಕೆಲ ಪಬ್ ಗಳಲ್ಲಿ ನೋಡಿದ್ದೆವೆ ಕೆಲವರಂತು ಅವರಿಗೆ ಪೂರ್ಣ ಮನರಂಜನೆ ನೀಡುತ್ತಾರೆ . ಇದು ನಿಯಮಾವಳಿಗಳ ಉಲ್ಲಂಗನೆ ಎಂದು ಕೆಲ ಅಬಾಕಾರಿ ಆದಿಕಾರಿಗಳು ವ್ಯಕ್ತಪಡಿಸಿದ್ದಾರೆ

ಕಾನುನು ಸುವ್ಯವಸ್ಠೆ ಸಮಸ್ಯೆ ಕಾಣಿಸಿಕೋಂಡಿರುವ ಹಿನ್ನೆಲೆಯಲ್ಲಿ ಸರ್ಕಾರವು ಪಬ್ ಗಳಲ್ಲಿ ಹಾಗು ಬಾರ್ ಗಳಲ್ಲಿ "ಲೈವ್ ಬ್ಯಾಂಡನ್ನು "ನಿಷೇದಿಸಿತು ಗೂಂಡಾಗಳು ಇಲ್ಲಿಗೆ ನುಗ್ಗಿ ಅಗ್ಗಾಗ್ಗೆ ಈ ಹುಡುಗಿ(ಕಲಾವಿದರನ್ನು) ಅಪಹರಿಸುತ್ತಿದ್ದರು ಅದಕ್ಕಾಗಿಯೇ ಇಂತಹ ಪ್ರದರ್ಶನಗಳನ್ನು ರದ್ದುಮಾಡಿರುವುದಾಗಿ ಮುಖಂಡರು ತಿಳಿಸಿದ್ದಾರೆ ಹಾಗಾಗಿ ಇನ್ನು ಮುಂದೆ ಬಾರ್ ಬಾಲಿಕೆಯರು "ಲಂಗ ದಾವಣಿಯನ್ನು ತೊಟ್ಟುಕೊಂಡೆ ಬಾರಗಳಲ್ಲಿ ಕೆಲಸ ನಿರ್ವೈಸಲಿದ್ದಾರೆ ಅದರೆ ಇದು ಅಪ್ಪಟ ಕನ್ನಡ ಹುಡುಗಿಯ ವಿಶೇಷ ಉಡುಗೆ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇನೊ ಪಾಪ ಗೊತ್ತಿದ್ದರೆ ಬೇರೆ ಉಡುಗೆಯನ್ನೆ ಹಾರಿಸಿಕೊಳ್ಳುತ್ತಿದ್ದರು

SATISH N GOWDA
my blog's

No comments: