Sunday, December 13, 2009

ಎಲ್ಲಾ ಓಕೆ ಈ ಸೋಡಾ ಬುಡ್ಡಿ ಯಾಕೆ

ಎಲ್ಲಾ ಓಕೆ ಈ ಸೋಡಾ ಬುಡ್ಡಿ ಯಾಕೆ.......!     ಅಂದೊಂದು ದಿನಾ .. ನಾನು ನನ್ನ ಗೆಳೆಯರು ಜೊತೆಗೂಡಿ ಅಮ್ಮ ಮಾಡಿದ ಕಾಫ್ಫಿ ಹೀರುತ್ತಾ ವಿಜಯನಗರದ ನಮ್ಮ ಮಹಡಿಯ ಮೇಲೆ ಕಾಲ ಕಳೆಯೋ ಸಮಯ ನಮ್ಮ  ಮನಸಿಗೆ ಬಂದ ಕೆಲವು ವಿಷಯಗಳ ಬಗ್ಗೆ ಚೆರ್ಚೆ. ಗಂಡ -ಹೆಂಡತಿ ಚಿತ್ರ ಬಂದ ಸಮಯ ಅದರ ನಾಯಕಿ  ಸಂಜನಳ ಮುಕ  ವನ್ನೇ ಹೋಲುವ ನಮ್ಮ ಕಾಲೇಜಿನ ಒಂದು ಸುಂದರ ಹುಡುಗಿಯ ಬಗ್ಗೆ ಮಾತನಾಡಿ ಕೊಳ್ಳುತ್ತಾ ............. ನನ್ನ ಆಪ್ತಮಿತ್ರ ಮೋಹನ ನ ಬಿಳಿ ಹಾಳೆಗಳ ಸಿಹಿ ನೆನಪುಗಳನ್ನು ಹೇಳುತ್ತಾ ಹೋದ ನಾನು ಅವನ ಕನಸಿಗೆ ಒಂದು ಬರವಣಿಗೆಯ ರೂಪ ಕೊಡುವ ಪ್ರಯತ್ನದಲ್ಲಿ......

ಮೋಹನ ........!

          sslc ಮುಗಿಸಿ pu ಕಾಲೇಜಿಗೆ ಮೊದಲ ದಿನಾ ಅಡ್ಮಿಶನ್ ಗೇ ಹೊರಟೆ ನಾನು ಸ್ವಲ್ಪ ಕಷ್ಟ ಪಟ್ಟು ಹೇಗೂ ಅವರಿವರ ಅತ್ರ ಡಿಲ್ ಮಾಡಿ ಚಕ -ಚಕ ಅಂತ ಅಡ್ಮಿಶನ್ ಮುಗಿಸಿ ಹೊರಗೆ ಬಂದೆ . ಹಿಂದಯಿಂದ  Excuse Me ಅಂತ ಒಂದು ಸಿಹಿ ದ್ವನಿ ಬಂತು ನಾನು ಹಿಂದೆ ತಿರುಗಿ ನೋಡಿದರೆ .... !ಒಂದು  ಸೋಡಾ ಬುಡ್ಡಿ (ಹುಡುಗಿ) ನನ್ನೇ ಕರಿತಿದ್ಲು ,ನಾನು "O God "ಅಂತ ಮನಸಿನಲ್ಲೇ ಇವತೆಲ್ಲೋ  ನರಿ ಮುಕ ನೋಡಿಕೊಂಡು ಬಂದಿರಬೇಕು ಅಂತ ಹೋದೆ .........! Admishan ಗೇ  prosess ಏನು ಅಂದ್ಲು ನನಿಗೆ ಗೊತ್ತಿರೋದು  ಹೇಳ್ದೆ   ಸ್ವಲ್ಪ ಕ್ಲೂ ನೂ ಕೊಟ್ಟೆ ನಾನು ಮನಸಿನಲ್ಲೇ ಇವಳು ನನಿಗೆ ಕ್ಲಾಸ್ ಮೆಟ್ ಆಗ್ತಾಳೆ ಅಂದುಕೊಂಡೆ ಅದರೂ ಎಲ್ಲಾ ಓಕೆ  ಈ ಸೋಡಾ ಬುಡ್ಡಿ ಯಾಕೆ ಅಂತ ಇದ್ದೇ ಇತ್ತು !

          Next  ಡೇ ಕಾಲೇಜು ಶೋರು 1st ಡೇ ಅಲ್ವ ನಾನು ಮಾತ್ರ ಪಂಕಾಗಿ ರೆಡಿ ಆಗಿ ಬಂದಿದ್ದೆ ನನ್ನ ಕಣ್ಣುಗಳು ಮಾತ್ರ ಈ ಸೋಡಾ ಬುಡ್ಡಿ ಎಲ್ಲಿ ಅಂತ ಹುಡುಕುತಿದ್ದವು .ಹಿಂದೆ ಇಂದ ಹಾಯ್ ಮೋಹನ ಅಂದ್ಲು ....... ಆದರೆ ಇವತ್ತು ಅವಳ ಸೋಡಾ ಬುಡ್ಡಿ ಆಗಿರಲಿಲ್ಲ ನಿಜವಾಗಲು ಸಕತ್ ಫಿಗರ್ ಆಗಿದ್ಲು (ಎಲ್ಲಾ ಲೆನ್ಸ್  ಮಹಿಮೆ ) ಅಗಿಲಿಂದ ಅವಳ Frind ಲಿಸ್ಟ್ ನಲ್ಲಿ ನಾನು ಮೊದಲೆನೆಯವನು. ಹೀಗೇ ದಿನಾ ಕಳಯುತ ಒಳ್ಳೆ Frind  ಆದಳು  ..........! ಹಾಗೇ....... ! ಗ್ರೋಪ್ ಸ್ಟಡೀಸ್ ಅಂತ ಕ್ಯಾಂಟೀನ್ ನಲ್ಲಿ  ಕಾಫ್ಫಿ ಕುಡಿಯತ   ನನ್ನವಳ ಅತ್ರ ಎಲ್ಲಾ Infarmation ತಗೊಂಡೆ  ಆದರೆ ಈ ಚಿಂದಿ ಚೂರ್ Frinz ಇದ್ದೇ ಇರ್ತಾರೆ  ನಮ್ಮಿಬ್ರನ್ನ "DOVE" ಗಳು ಅಂತ ಅನ್ಕೊಂಡಿದ್ರು .... !ಅದು ನಂಗೂ ಒಂತರ ಮಜಾ ಕೊಡ್ತಿತ್ತು ....! ನಾನು ಹಾಗೇ ಹರಕೊತಿದ್ದೆ ......! ಹೀಗೇ 1 ವರ್ಷ ಮುಗ್ದೆ ಹೋಯ್ತು .....! ಇನ್ನೊಂದು ವರ್ಷ ಬರೇ ಕನಸು ಕಂಡು ....!Pulasar ನಲ್ಲಿ ಓಡಾಡಿದ್ದೆ  ಆಯಿತು ಅಷ್ಟ್ರಲ್ಲಿ ನಮ್ಮ dady puc ಆದ  ಮೇಲೆ ಏನೂ ಮಾಡ್ತಿಯ ಅಂದ್ರು ನಾನು ಶಾಕ್ ಆಗಿ ಒಂದು Smile  ಕೊಟ್ಟು ಅಲ್ಲಿಂದ Escap ಅದೇ ........!

         ಸರಿ ..... ! ಹಾಗೇ ನಮ್ಮ ಹುಡುಗಿ ಹಿಂದೆ  Pulsar ನಲ್ಲಿ ಸುತ್ತೋದು ಅವಳ ಮನೆ ಮುಂದೆ ಬಿಟ್ ಹೊಡೆಯೋದು ಮಾಡಿ ...! ಮಾಡಿ ....! ಮಾಡಿ ನನ್ನ ಬೈಕ್ ನ Tyar ಸವಿತು ಹೊರತು ನಂಗೆ ಅಂತ ಏನೂ ಪ್ರಯಜೋನವಗಲಿಲ್ಲ .....!
ಹಾಗೇ ಯೋಚನೆ  ಮಾಡ್ತಾ....! ಮಾಡ್ತಾ .....! ಅನಿಸ್ತ ಇತ್ತು .... !ಎಷ್ಟು ಸಲ ನಾನು ಅವಳಿಗೆ ನೋಟ್ಸ್ ಕೊಟ್ಟಿಲ್ಲ ಅದು ನಾನೆ  Xerax ಮಾಡಿಸಿ  . ಎಷ್ಟು  ಸಲ ಲ್ಯಾಬ್ Exam ನಲ್ಲಿ ನಾನೆ ಪಾಸ್ ಮಾಡಿಸಿಲ್ಲ . ಎಸ್ಟೋ ಸಲ ನಾನೆ ಅವಳ ರಿಸಲ್ಟ್ ನೋಡಿ ಫೋನ್ ಮಾಡಿ Congrats ಹೇಳಿಲ್ಲ .... ಎಷ್ಟು  ಸಲ ನಾನು ಅವಳಿಗೋಸ್ಕರ ಆ ಡಬ್ಬ Library  ನಲ್ಲಿ ಕೊಲ್ತಿಲ್ಲ ಎಷ್ಟು  ಸಲ ಅವಳ ಅತ್ರ ರಾತ್ರಿಯಲ್ಲ Chat ಮಾಡಿಲ್ಲ ಇಷ್ಟೆಲ್ಲಾ ಅದ್ರು ಈ Relationship ಗೇ ಹೆಸರು ಏನು ಅಂತ ಅರ್ಥ  ಆಗತ್ತಾ ಇರಲಿಲ್ಲ .......! ಹಾಗೇ......ಮಾತಾಡ್ತಾ .....ಮಾತಾಡ್ತಾ .. ಕೇಳಿದೆ "ನನ್ನಬಗ್ಗೆ ಏನ್ ಅನಿಸುತ್ತೆ ನಿನಗೆ " ಅವಳು ಸ್ವಲ್ಪ Shok ಆದಳು ... ಆದರೂ  pu girl ಅಲ್ವ ನನಗೋ 1 Shok  ಕೊಟ್ಟಳು "ನೀನು  ನನಿಗೆ Best Frind ಕಣೋ " ನನ್ನಬಗ್ಗೆ  ಸಕತ್ ಕೇರ್ ತೊಗೊತಿಯ Cheng ಆಗಬೇಡ ಅಂದಳು " ಸೂ ಜಾಸ್ತಿ ಮತೊಡೋದು ಬೇಡ ಅನಿಸ್ತು ... !ಹಾಗೇ  ಬಿಟ್ಟು  ಬಿಟ್ಟೆ.. ಹೃದಯಕ್ಕೂ ಬಾಯಿಗೋ 1 Low Pass Filtar ಹಾಕಿ ಸುಮ್ಮನೆ ಆಗಿ ಬಿಟ್ಟೆ , Sweet Memoris  ಹಾಗೇ ಇರಲಿ ಅಂತನೋ ಗೊತ್ತಿಲ್ಲ But  ನನಿಗಂತೋ "ಪ್ರಣಯ ರಾಜ ಶ್ರೀನಾಥ್  "ಅವರ ಹಾಡು ನೆನಪಿಗೆ ಬಂತು "ನೀನೇ ಸಾಕಿದ ಗಿಣಿ .... ನಿನ್ನ ಮುದ್ದಿನ ಗಿಣಿ "........!

          ಸರಿ ... ಹೀಗೇ 1 ದಿನಾ ಸಿಕ್ಕು ಹೇಳಿದಳು ..... "ನಮ್ಮಣ್ಣ America  ನಲ್ಲಿ ಇದಾನೆ ,ಅಲ್ಲೇ  ಹೋಗಿ Digri ಮಾಡ್ತೀನಿ ಅಲ್ಲೇ Job ಕೊಡ ಹೊಡ್ಕೊತೀನಿ ..... ನಿಂಗೆ Mail.Chat ಮಾಡ್ತಾ ಇರ್ತೀನಿ ...... ! ಅವಾಗ ನನಿಗೆ ಇನ್ನೊಂದು ಹಾಡು ನೆನಪಿಗೆ ಬಂತು ........ ! "ನೂರೊಂದು  ನೆನಪು ಎದೆಯಾಳದಿಂದ ..........." ಈವಗ್ಲೋ ಈ..ನೂರೊಂದು ನೆನಪು ಇದೆ ...! But  ಆ ನೆನಪಿನ ಸೋತ್ರದಾರಿನೂ  ಇಲ್ಲ.... ಆ ನೆನಪುಗಳನ್ನ ಮುಂದೆ ತಗೊಂಡ್ ಹೋಗೋ ದ್ಯರ್ಯನೂ ಇಲ್ಲ .....! ಬರಿ ನೆನಪುಗಳು ಅಷ್ಟೇ .................! ಯಾವುದಾದರು ವಿಮಾನ ಬಂದ್ರೆ ಈವಗ್ಲೋ  ನನ್ನ ಸೋಡಾ ಬುಡ್ಡಿ  ಕಾಣ್ಥಳ ಅಂತ ನೋಡ್ತೀನಿ ....! ಕಾಯ್ತೀನಿ ...!. ಕಾಯ್ತಾನೆ ಇರ್ತೀನಿ ..........!
ಮುಗಿಸಿದ ಮೋಹನ , 
ಎಷ್ಟೆಲ್ಲಾ ಆದರೋ ಅವನ ಹುಡುಗಿ ಹೆಸರು ಬೇಡ ಅದು ಅವನ ನೆನಪಲ್ಲೇ ಇರಲಿ ..!


ಕನ್ನಡಿಗರೇ ಇಷ್ಟ ಆದ್ರೆ ಒಂದು ಕಾಮೆಂಟ್ ಬರೆಯಿರಿ ಇಷ್ಟ ಆಗಿಲ್ಲ ಅಂದ್ರು ಒಂದು ಕಾಮೆಂಟ್  ಬರೆಯಿರಿ ನಾನೇನು ಬೇಜಾರು ಮಾಡಿಕೊಳ್ಳಲ್ಲ ಕಾಮೆಂಟ್ ಬರೆಯುವ ಬರಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ 
www.nannavalaloka.blogspot.com

6 comments:

Basu said...

super kanri

Anonymous said...

satish superb but whats that girl name ...
its ur imagination story or ur memory plz tell me

ಸತೀಶ್ ಗೌಡ said...

ಥ್ಯಾಂಕ್ಸ್ ಬಸು . ನನ್ನವಳಲೋಕಕ್ಕೆ ಸ್ವಾಗತ

ಸತೀಶ್ ಗೌಡ said...

ಇಲ್ಲ ಬಾಸ್ ಅನಾಮಿಕ ಇದು ರಿಯಲ್ ಸ್ಟೋರಿ ನೇ .......
ಸ್ವಲ್ಪ ಕಲ್ಪನೆ ಸೇರಿಸಿ ಒಂದು ಲೇಖನ ಮಾಡಿದ್ದೀನಿ ಅಷ್ಟೇ , ನನ್ನವಳಲೋಕಕ್ಕೆ ಸ್ವಾಗತ

ನಲ್ಮೆಯ ಗೆಳತಿ said...

avalanna kayodralli arta ella sir...

ನಲ್ಮೆಯ ಗೆಳತಿ said...

avalanna kayodralli arta ella sir....