Monday, December 27, 2010

ಅಂದೊಂದಿತ್ತು "ಅಮ್ಮನ ಸೀರೆ "


ಅಂದೊಂದಿತ್ತು "ಅಮ್ಮನ ಸೀರೆ "
ಹೊಡೆದ  ಹಣೆ   ರಕ್ತವನ್ನ 
ಓರೆಸುವ ಕರವಸ್ತ್ರವಾಗಿತ್ತು,
ಮುರಿದ ಕಾಲ ಕಟ್ಟುವ 
ಮೊದಲ ಬಟ್ಟೆಯೂ ಅದಾಗಿತ್ತು . 

ಧಣಿದು ಬಂದ ಬೆವರಿಗೆ 
ಆಸರೆಯಾಗಿತ್ತು   "ಅಮ್ಮನ ಸೀರೆ "
 ಕೊಡಿಟ್ಟ ಪುಡಿಗಾಸಿನ
ಪೆಟ್ಟಿಗೆಯಾಗಿತ್ತು"ಅಮ್ಮನ ಸೀರೆ "

ನೆನೆದು ಬಂದ ತಲೆಯ 
ಒರೆಸುತ್ತಿತ್ತು "ಅಮ್ಮನ ಸೀರೆ "
ಚಳಿಗಾಲದಲ್ಲಿ ಬೆಚ್ಚನೆಯ 
ಕಂಬಳಿಯಾಗಿತ್ತು  "ಅಮ್ಮನ ಸೀರೆ "   


ಹೊತ್ತು ತರುವ ಮಡಿಕೆಗೆ 
ಒತ್ತಡಿಯಾಗಿತ್ತು  "ಅಮ್ಮನ ಸೀರೆ "
ಕಿತ್ತು ತಿನ್ನುವ ದೇಹಕ್ಕೆ 
ರಕ್ಷಣೆಯಾಗಿತ್ತು "ಅಮ್ಮನ ಸೀರೆ "  

ಇಂದಿನ ನಾರಿಗೆ ಸೀರೆ ಎಲ್ಲಿದೆ  
ತುಂಡು  Jeens Jacket ಗಳ ಮೋಹ ಹೆಚ್ಚಾಗಿದೆ  
ಇನ್ನೆಲ್ಲಿದೆ  ಕೈ ವರೆಸುವ ಕರವಸ್ತ್ರ .
ಮುರಿದ ಕಾಲಿಗೆ  ಕಟ್ಟುವ ಬಟ್ಟೆ . 

"ಅಮ್ಮನ ಸೀರೆ "
SATISH N GOWDA   

3 comments:

ಮೌನರಾಗ said...

ಬಹಳ ಸುಂದರವಾಗಿದೆ ಅಮ್ಮನ ಸೀರೆ..
ಆದರೆ ಕಾಲಕ್ಕೆ ತಕ್ಕಂತೆ ಬದಲಾಗಬೇಕಿರುವುದು ಸಹಜವೇ ಅಲ್ಲವೇ...jeans ಆದರೇನು ಸೀರೆ ಆದರೇನು ಮನದೊಳಗಿನ ಮಮತೆ ಒಂದಲ್ಲವೇ..ಅಮ್ಮ ಯಾವತ್ತೂ ಅಮ್ಮನೇ..ಅದು jeans ತೊಟ್ಟರೂ ಸೀರೆ ತೊಟ್ಟರೂ..ಏನಂತೀರಿ...?

--

ಮನಸಿನಮನೆಯವನು said...

ಅರ್ಥಪೂರ್ಣ kavite..
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

Chetana Hegde said...

ಸತೀಶ್ ಗೌಡರಿಗೆ ನಮಸ್ಕಾರ.
’ಅಮ್ಮನ ಸೀರೆ’ಯಲ್ಲಿ ನಿಮ್ಮ ಅಭಿಪ್ರಾಯ - ಬರವಣಿಗೆ ಚೆನ್ನಾಗಿ ಮೂಡಿ ಬ೦ದಿದೆ. ಆದರೆ, ಅದರಲ್ಲಿ ಅನೇಕ ಸ್ಪೆಲ್ಲ್೦ಗ್ ತಪ್ಪುಗಳಿವೆ. ’ನನ್ನ ಬಗ್ಗೆ ಸ್ವಲ್ಪ’ ಇದರಲ್ಲಿಯೂ ಸ್ಪೆಲ್ಲಿ೦ಗ್ ತಪ್ಪುಗಳು ಇವೆ. ಅವುಗಳನ್ನು ತಿದ್ದಿಕೊ೦ಡರೆ, ಉತ್ತಮ.
-chetana.