Wednesday, August 11, 2010

ಬಾ ನನ್ನ ಜೋತೆಯಲ್ಲಿ...



ಬಾ ನನ್ನ ಜೋತೆಯಲ್ಲಿ...

ರಾತ್ರಿಯಾಗುತ್ತಿದ್ದಂತೆ
ಕಂಗೊಳಿಸುವ  ಚಂದ್ರ
ಬೆಳಗಿನ ಸೂರ್ಯನ ಮುಂದೆ ನಿಲ್ಲಲಾರ
ಆದರೂ ಅವನಿಗೂಂದು ಅಹಂಕಾರ ವಿದೆ
ನಾನೇ ಸೌಂದರ್ಯವಂತನೆಂದು
ನಿನ್ನನ್ನು ತೋರಿಸಿ ಅವನ
ಸೊಕ್ಕು  ಅಡಗಿಸಬೇಕಿದೆ
ಬಾ ನನ್ನ ಜೋತೆಯಲ್ಲಿ....

ಬೆಳಗ್ಗೆ ಹರಳುವ
ಕೆಂಪು ಗುಲಾಬಿ
ಸಂಜೆಯಾಗುತ್ತಿದ್ದಂತೆ
ಬಾಡಿ ನೆಲಕ್ಕುರುಳುತ್ತದೆ
ಆದರೂ ಅವಳು ನಾನೇ
ಅಂದಗತ್ತಿ ಎಂದು ಬೀಗುತ್ತಿದ್ದಾಳೆ
ನಿನ್ನನ್ನು ತೋರಿಸಿ ಅವಳ
  ಅಹಂಕಾರ ಮುರಿಯಬೇಕಿದೆ
ಬಾ ನನ್ನ ಜೊತೆಯಲ್ಲಿ....

ಸೂರ್ಯನ ಬಿಸಿಲನ್ನೂ
ತಾಳಿಕೊಳ್ಳದೆ ಕರಗಿಹೋಗುವ
ಮೋಡಗಳು ದುರಹಂಕಾರ ದಿಂದ
ನಗುತ್ತಿವೆ ನಾವೇ ನಮಗಿಂತ
ಸೌಂದರ್ಯವಂತರಿಲ್ಲ ಎಂದು
ನಿನ್ನನ್ನ ತೋರಿಸಿ ಅವುಗಳ
ಅಹಂಕಾರ ಅಡಗಿಸ ಬೇಕಿದೆ
ಬಾ ನನ್ನ ಜೊತೆಯಲ್ಲಿ...


ಬಾ ನನ್ನ ಜೋತೆಯಲ್ಲಿ... 
SATISH N GOWDA

12 comments:

Unknown said...

nice. da

ಪ್ರಗತಿ ಹೆಗಡೆ said...

ಸತೀಶ್ ಅವರೇ.. ಕವನ ಚೆನ್ನಾಗಿದೆ... ಆದರೆ ಕೆಲವು ಪದಗಳಲ್ಲಿ ಬದಲಾವಣೆ ಮಾಡಬೇಕಿದೆ ಎಂದು ನನ್ನ ಅನಿಸಿಕೆ.. ಬೇಸರಿಸದಿರಿ...
ಕಂಗೋಳಿಸುವ -ಕಂಗೊಳಿಸುವ
ಅಹಾಂಕಾರ - ಅಹಂಕಾರ
ಸೋಕ್ಕು- ಸೊಕ್ಕು
ಹರಳುವ - ಅರಳುವ
ಕರಿಗಿಹೋಗುವ - ಕರಗಿಹೋಗುವ
ಧನ್ಯವಾದಗಳು...

SATISH N GOWDA said...

ಸಂಜನಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ..

SATISH N GOWDA

SATISH N GOWDA said...

ಪ್ರಗತಿ ಯವರೇ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ .. ನನ್ನ ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ ಇದರಲ್ಲಿ ಬೆಸರಸಿಕೊಳ್ಳುವುದು ಏನು ಇಲ್ಲ ನನ್ನ ತಪ್ಪನ್ನು ತಿದ್ದಿ ಹೇಳಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್ ಹೀಗೆ ಜೊತೆಯಲ್ಲಿ ಸಾಗಿ ...........


SATISH N GOWDA
ನನ್ನ ಸ್ನೇಹಲೋಕ (ORKUT)
ನನ್ನ ಬ್ಲಾಗ್
www.nannavalaloka.blogspot.com

ನನ್ನವಳಲೋಕ ವನ್ನು ನೋಡಿದ್ದಿರಿ ,ಒಮ್ಮೆ ಬನ್ನಿ ನನ್ನ ಸ್ನೇಹಲೋಕಕ್ಕೆ

ಮನಸು said...

chennagide kavana

ಸಾಗರದಾಚೆಯ ಇಂಚರ said...

ಸತೀಶ್ ಸರ್

ಚೆನ್ನಾಗಿದೇರಿ ಕವನ
ಬರಿತ ಇರಿ

ಮನಸಿನಮನೆಯವನು said...

ಮೊದಲೆರಡು ತುಂಬಾ ಸೊಗಸಾಗಿವೆ..
ಮೂರನೆಯದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ..
[ಜೊತೆಯಲಿ ಬದಲಾಗಿ ಜೋತೆಯಲ್ಲಿ... ಆಗಿದೆ..]

SATISH N GOWDA said...

ತಪ್ಪನ್ನು ತೀದ್ದಿ ಅಂತ ಹೇಳಿದ್ದಕ್ಕೆ ಧನ್ಯವಾದಗಳು ನೀವೂ ಹೇಳಿದ ತಪ್ಪನ್ನು ತಿದ್ದಿಕೊಂಡಿದ್ದೇನೆ . ಹಾಗೇ ಕೊನೆಯ ಪ್ಯಾರವನ್ನು ಓದಿ ಅದರಲ್ಲೂ ತುಂಬಾ ಅರ್ಥ ವಿದೆ ಎಂಬುದು ನನ್ನ ಭಾವನೆ ಕಾಮೆಂಟ್ ಮಾಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು

SATISH N GOWDA said...

ಇಂಚರ ರವರೆ ದನ್ಯವಾದಗಳು ಹೀಗೇ ನನ್ನ ಜೊತೆ ಇರಿ

SATISH N GOWDA said...

ಥ್ಯಾಂಕ್ಸ್ ಮನಸು ರವರೆ ನಿಮ್ಮ ಕಾಮೆಂಟ್ ನೋಡಿ ನನಗೆ ತುಂಬಾ ಖುಷಿ ಆಯಿತು ಹೀಗೇ ನನ್ನ ಜೊತೆ ಇರಿ

SANGETHA'S BLOG said...

yappa super kanri.

SATISH N GOWDA said...

THANK U SANGETHA MEDAM