Thursday, May 13, 2010

ನನ್ನ ಹೃದಯದ ತುಂಬೆಲ್ಲ ನಿನ್ನದೇ ಫೋಟೋ

ನನ್ನ ಹೃದಯದ ತುಂಬೆಲ್ಲ ನಿನ್ನದೇ ಫೋಟೋ

 


ಪ್ರಿತೀಯ ಐಂದ್ರಿತ ಮೇಡಂ....

   ಒಂದೇ ಮಾತಲ್ಲಿ ಹೇಳತೀನಿ ಕೇಳಿ ನಿವಂದ್ರೆ ನನಗೆ ತುಂಬ ತುಂಬಾ ಇಷ್ಟ ನಿಮ್ಮ ಮೆರ‍ವಣಿಗೆ ಸಿನಿಮಾನ 26 ಸಲ ನೋಡಿದಿನಿ ..! ಪ್ರಜ್ವಲ್ ದೇವರಾಜ್ ತೆರೆಮೇಲೆ ಬಂದಾಗಲೆಲ್ಲ ಕಣ್ಣು ಮುಚ್ಚಿಕೊಂಡು ಕೂತಿದಿನಿ ಹಿಡಿ ಸಿನಿಮಾನ 26 ಸಲ ನೋಡಿದಾಗಲೂ ಪ್ರಜ್ವಲ್ ದೇವರಾಜ್ ನನಗೆ ಇಷ್ಟ ಅಗಲೇ ಇಲ್ಲ ಯಾಕೆಂದ್ರೆ ನಿಮ್ಮನ್ನ ಬೇರೆ ಯಾರೊ LOVE ಮಾಡೋದು ನಂಗೆ ಇಷ್ಟ ಇಲ್ಲ ಅದಕ್ಕೆ .
         ನನಗೇನೊ ತುಂಬಾ ಆಸೆ ಇದೆ ನಿಜ ... ಅದ್ರೆ ನನಗೂ ನನ್ನ ಯೊಗ್ಯತೆ ಗೊತ್ತು ಬಿಡಿ. ನಾನು ತಿಂಗಳೆಲ್ಲ ಕೆಲಸ ಮಾಡಿದ್ರು ನಿಮ್ಮ ಲಿಪ್ಸ್ಟಿಕ್ -ಫುರ್ಫುಮ್  ಗೆ ಸಾಕಾಗೊಲ್ಲ ಇಂಥ ಲೊಕ್ಲಾಸ್ ಹುಡುಗ ನಿಮ್ಮ ಮುಂದೆ I LOVE U ಅಂಥ ಅಂದ್ರೆ ನಿಮಗೆ ಹೇಗೆ ಅಗ್ಬೋದು ಅಂಥ ನನಗೂ ಗೊತ್ತು.
          ಆದ್ರೂ ನಿಮ್ಮ ಮುಂದೆ ನಿಂತು I LOVE U ಅಂತ ಹೇಳೊ ಆಸೆ. ನೀವೇನಾದ್ರು ಅಂದ್ಕೊಳ್ಳಿ ಪರವಾಗಿಲ್ಲ ನನ್ನ ಮನಸ್ಸಿಗೆ ಮಾತ್ರ ಸ್ವಲ್ಪ ಸಮಾಧಾನ ಅಗುತ್ತೆ ಮೇಡಂ . ನೀವು ಕೆನ್ನೆಗೆ ಬಾರಿಸಿದ್ರು ನನಗೆ ಖುಷಿನೇ ..! ಬೇಕಾದ್ರೆ ನನ್ನ ಮೇಲೆ ಏಷ್ಟಾದ್ರು ಕೋಪ ಮಾಡ್ಕೊಳ್ಳಿ.. ಆದ್ರೆ ಬೇಜರ್ ಮಾತ್ರ ಮಾಡ್ಕೊಬೇಡಿ Please   ಒಂದೇ ಒಂದು ಸಲ ನನಗೆ I LOVE U  ಅಂಥ ಹೇಳೊಕೆ ಅವಕಾಶ ಮಾಡಿಕೊಡಿ..!
          ಏನ್ ಇವನೊಬ್ಬ ಹುಚ್ಚ ಅಂತ ನಗ್ತಿದೀರ..? ಓ.. ನನಥರಾನೇ ಏಷ್ಟೊ ಹುಡುಗಿಯರಿಗೆ I LOVE U ಅಂಥ ಅಂದಿದಾನೊ ಅಂಥ Think  ಮಾಡ್ತಿದೀರಾ..? ನಿಮ್ಮಾಣೆಗು ಸುಳ್ಳು ಮೇಡಂ ನಾನು ತುಂಬಾ ಓಳ್ಳೆ ಹುಡ್ಗ. ನಾನು ತುಂಬಾ ಚನ್ನಾಗಿ ಓದ್ತಾ ಇದ್ದೆ..!
S S L C  ನಲ್ಲಿ 80% ಕಾಲೇಜ್ ನಲ್ಲಿ ಒಂದು ಹುಡುಗಿ ತಾನಾಗೆ ಬಂದು I LOVE U ಅಂದಿದ್ಲು. ನನಗಂತೂ ತಲೆ ಕೆಟ್ಟೋಗಿತ್ತು ಅಮೇಲೆ ಅವಳು ಕೈಗೂ ಸಿಗಲಿಲ್ಲ ಮಾತಾಡುಕೂ ಬರಲಿಲ್ಲ ದೂರದಿಂದಲೇ ನಗತಿದ್ದಳು ಆ ಟೈಮಲ್ಲಿ ಸ್ವಲ್ಪ ತಲೆ ಕೆಟ್ಟೋಗಿತ್ತು ಕೋನೆಗೆ ಅಲ್ಲಿ ಇಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡ್ತಿದೀನಿ.
          ನಿಜ ಏನೂಂತ ನನಗೆ ಅಮೇಲೆ ಗೊತ್ತಾಯಿತು ಮೇಡಂ ಅವಳು ಸ್ಕೊಲ್ ನಿಂದಾನೂ ನನ್ನ ಕ್ಲಾಸ್ ಮೆಂಟ್ ನಾನು ಫಸ್ಟು ಅವಳು ಸೆಕೆಂಡ್ .. ಅದಕ್ಕೆ ನನ್ನನ್ನ ಹಾಳು ಮಾಡೊಕ್ಕೆ ಅಂತೆ ಅವಳು ಹೀಗೆ ಮಾಡಿದ್ದಂತೆ ಅಗ್ಲಿಂದ ನನಗೆ ಈ ಹುಡುಗಿಯರು ಅಂದ್ರೆ ಅಗ್ತಿರಲಿಲ್ಲ . ಯಾರನ್ನು ನೋಡಿದರು ಮೈ ಊರಿತಿತ್ತು ಹೊಟ್ಟೆಗೆ ಒಂದಿಷ್ಟು ಅಯಿಲ್ ಹಾಕಿದ್ಮೆಲ್ ಅಂತೂ ಸಿಕ್ಕಾಪಟ್ಟೆ ರೋಷ ಬರ್ತಿತ್ತು . ಅವಗೆಲ್ಲ ನನಗೆಲ್ಲ ಒಬ್ಬನೆ ಗುರು ಅವರು ನಮ್ಮ ಉಪೇಂದ್ರ ..
       "ಮೆರವಣಿಗೆ" ಬಂದ್ಮೇಲೆ .. ನನ್ನ ಮನಸ್ಸು ತಂಪಾಗಿದೆ ಎಲ್ಲಿ ನೋಡಿದರೂ ನೀವೆ ಕಾಣ್ತಿದಿರಾ...! ಯಾರನ್ನ ನೋಡಿದರು ನಿಮ್ಮ ಥರಾನೇ ಕಾಣಸ್ಥಾರೆ ,  ಮೆರವಣಿಗೆ ಚಿತ್ರದಲ್ಲಿ "ಪತಂಗವಾಗಿ ಹಾರಡಬಲ್ಲೆ" ಹಾಡು ಅಂತು ನನಗೆ ತುಂಬಾ ದಿನಾ ನಿದ್ದೆ ಮಾಡೋಕೆ ಬಿಟ್ಟಿಲ್ಲ ಬಿಡಿ ಮದುವೆ ಅಂತ ಆದ್ರೆ ನಿಮ್ಮನ್ನೇ ಆಗಬೇಕು ಅಂತ ಥಿಯೇಟರ್ ನಿಂದ ಬಂದ ತಕ್ಷಣ ಡಿಸೈಡ್  ಮಾಡಿಬಿಟ್ಟೆ .     ಹಾಗಂತ ನಿಜವಾಗ್ಲೂ ನಾನು ಯಾರಿಗು ಇದುವರೆಗೂ I LOVE U  ಅಂತ ಹೇಳಿಲ್ಲ ಮೇಡಂ ನಿಮ್ಮಾಣೆಗೂ . ಒಂದು ವೇಳೆ ನಿವೇನಾದ್ರು ಸಿಗಲಿಲ್ಲ ಅಂದ್ರೆ...! ಅಥವಾ ಬೇರೆ ಯಾರನ್ನಾದ್ರು ಕಟ್ಟಿಕೊಂಡು ಬಿಟ್ಟ್ರೇ ಜೋರಾಗಿ ಹತ್ತು ಬಿಡ್ತಿನಿ..
     ಒಂದೇ.. ಒಂದು ಸಲ ನಿಮ್ಮನ್ನು ಕಣ್ಣಾರೆ ನೋಡಿ ಕೈಕುಲುಕಿ ಮಾತಾಡಿಸ್ಬೇಕು ನನ್ನ ಹೃದಯದ ತುಂಬ ನಿನ್ನದೇ ಫೊಟೂಗಳನ್ನ ತೊರಿಸಿ ಅದರಮೇಲೆಲ್ಲ ನಿಮ್ಮ ಆಟೋಗ್ರಾಪ್ ತಗೋಬೇಕು ಅಂತ ಆಸೆ ಇದೆ ಹೂಂ.... ಅಂತಿರಾ Please ......!
more blogs click hear
my cell
+91 98447 73489

2 comments:

Unknown said...

wt AINDRITHA RAI nima lover . wt,,,,?

SATISH N GOWDA said...

ಸಂಜನಾ ರವರೆ ನಿಮ್ಮ ಅಭಿನಂದೆನೆಗೆ ನನ್ನ ಧನ್ಯವಾದಗಳು ...... ಹೀಗೇ ಕಾಮೆಂಟ್ ಬರೆಯತ್ತಿರಿ.... nanna lover antha enu illa dis;s jest article ashte.... mattenu gottilla..........