ಸಾರೀ ಕಣೇ ನಿನ್ನ ಮದುವೆಗೆ ನಾನು ಬರೋಕ್ಕೆ ಆಗೋಲ್ಲ
ಗೇಳತಿ ಅಂದು ಮಾರ್ಚ್ 17 ಆ ದಿನ ನನ್ನ ಹಿಡೀ ಜೀವನದಲ್ಲಿ ಮರೆಯಲಾಗದ ದಿನವಾಗುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಆ ದಿನ ಸಂಜೆ ನನ್ನ ಸ್ನೆಹಿತನೊಬ್ಬ ನನಗೆ ಮತ್ತು ನನ್ನ ಗೆಳೆಯರಿಗೆ ಪಾರ್ಟಿ ಕೊಡುತ್ತಿದ್ದ ನನಗೆ ಸ್ವಲ್ಪ ಬೇಜಾರಾಗಿದ್ದರಿಂದ ಅಪರೊಪಕ್ಕೆ ನಾನು ಸಹ ವಿಸ್ಕಿ ಕುಡಿದಿದ್ದೆ . ಆ ದಿನ ಸಮಯ ಸುಮಾರು 9:30ಕ್ಕೆ ಸರಿಯಾಗಿ ನನ್ನ ಬಾಳನ್ನೆ ಕತ್ತೆಲೆಯಾಗಿಸುವಂತ ಫೊನ್ ಕಾಲ್ ಬಂದೇ ಬಿಟ್ಟಿತು ಆ ಕಡೆಯಿಂದ ನನ್ನ ಇನ್ನೋಬ್ಬ ಗೆಳೆಯ ಮಗಾ ನಿನ್ನ ಹುಡುಗಿಗೆ ಮದುವೆ ಫಿಕ್ಸ್ ಅಯಿತು ಮಾರಾಯ ಮುಂದಿನ ತಿಂಗಳು ಮದುವೆ ಅಂತ ಹೇಳಿಯೇಬಿಟ್ಟ.
ನನಗೆ ಒಂದು ಕ್ಷಣ ಸಿಡಿಲು ಬಡಿದಂತಾಯಿತು ಕಣ್ಣೆಲ್ಲ ಮಂಜು-ಮಂಜಾಯಿತು ಕುಡಿದ ನಿಶೆಯಲ್ಲ ಒಂದೇ ಒಂದು ಫೊನ್ ಕಾಲ್ ಗೆ ಇಳಿದು ಹೋಯಿತು ನಿಂತಲ್ಲಿ ನಿಲ್ಲಲಾಗಲಿಲ್ಲ . ಪಾರ್ಟಿಗೆ ಕರೆದಿದ್ದ ಸ್ನೆಹೀತನಿಗೂ ಹೇಳದೆ ಅಲ್ಲಿಂದ ಹೋರಟೆ ಬಿಟ್ಟೆ. ವಿಜಯನಗರದಿಂದ ಬಸವೇಶ್ವರನಗರದವರೆಗೂ ನೆಡದೆ ಹೋರಟೆ . ಏನು ಮಾಡಬೇಕು ಅಂತ ತೋಚಲಿಲ್ಲ , ಅಲ್ಲಿಯೇ ಸಮೀಪದಲ್ಲಿದ್ದ ನನ್ನ ಮತ್ತೊಬ್ಬ ಗೆಳೆಯನಿಗೆ ಫೊನ್ ಮಾಡಿ ಕರೆಸಿಕೋಂಡೆ . ಮಾತನಾಡಲು ಅಗಲಿಲ್ಲ ದುಃಖ ಉಮ್ಮಳಿಸಿ ಬರುತ್ತಿತ್ತು ಅವನು ನನ್ನ ಪರಿಸ್ಥಿಯನ್ನು ಅರ್ಥಮಾಡಿಕೋಂಡ . ಬಸವೇಶ್ವರನಗರದ ಬಸ್ ಸ್ಟಾಪ್ ನಲ್ಲಿ ಅವನ ತೊಡೆಯಮೇಲೆ ಮಲಗಿಕೋಂಡು ಅತ್ತೆ ನನ್ನ ಕಣ್ಣಿರು ಧರೆಗೆ ಅವನ ಪ್ಯಾಂಟೆಲ್ಲ ಒದ್ದೆಯಾಗಿತ್ತು . ಅಮೇಲೆ ನನ್ನನ್ನು ಮನೆಯವರೆಗು ಕರೆದುಕೋಡು ಬಂದು ಬಿಟ್ಟ. ಆ ದಿನ ಪುರ್ತಿ ನೂವು ಸಂಕಟದಿಂದ ನಿದ್ದೆ ಬಾರದೆ ಹೋರಳಾಡಿದ್ದೆ ಆದರೆ ನೀನು ಮಾತ್ರ ನಿನ್ನ ಭಾವಿ ಪತಿಯೊಂದಿಗೆ ಪೋನಿನಲ್ಲಿ ಹರುಟುತ್ತಿದ್ದೆ ಅಲ್ವಾ..? ಈ ಮೊದಲಿ ನಿನು ನನ್ನ ಹೊಂದಿಗೆ ದಿನ ರಾತ್ರಿ ಎನ್ನದೇ ಘಂಟೆಗಟ್ಟಲೇ ಪೋನಿನಲ್ಲಿ ಮಾತಾನಾಡುತ್ತಿದ್ದೆ ಈವಾಗ ಬೇರೆಯವರೊಂದಿಗೆ ! ಇಬ್ಬರೂ ಗಂಡಸರೆ ಆದರೆ ವ್ಯಕ್ತಿಗಳು ಬೇರೆ-ಬೇರೆ...!
ಮೊನ್ನೆ ಸ್ನೆಹೀತನೊಬ್ಬ ಹೀಗೆ ಸಿಕ್ಕು ಕೇಳಿದ ..! ಒಂದು ವೇಳೆ ನಿನ್ನ ಹುಡುಗಿ ನಿನ್ನನ್ನು ತನ್ನ ಮದುವೆಗೆ ಕರೆದರೆ ಹೋಗುತ್ತಿಯಾ...? ಎಂದು ಕೇಳಿದ ನೀನೇ ಹೇಳೆ ಗೆಳತಿ ನಿನ್ನ ಮದುವೆಗೆ ನಾನು ಹೇಗೆ ಬರಲು ಸಾದ್ಯ...? ಒಂದು ವೇಳೆ ನಿನ್ನ ಒತ್ತಾಯದ ಮೇರೆಗೆ ನಾನು ನಿನ್ನ ಮದುವೆಗೆ ಬಂದರೂ ಆ ಮದುವೆಯ ಊಟ ನನಗೆ ಮದುವೆಯ ಊಟ ಅನಿಸುವುದಿಲ್ಲ ಬದಲಾಗಿ ತಿಥಿಯ ಊಟ ಎಂದನಿಸುತ್ತದೆ . ಏಕೆಂದರೆ ಅಲ್ಲಿ ನಮ್ಮ ಪ್ರೀತಿಯ ಕೋಲೆ ನೆಡೆಯುತ್ತದೆ ಒಂದು ಸಾವು ಅದ ನಂತರ ಅಲ್ಲಿ ನೆಡೆಯುವುದು ತಿಥಿ ಮಾತ್ರ ಅಲ್ಲವೇ ..?
ನೀನು ನನಗೆ ಸಿಗುವುದಿಲ್ಲ ಎನ್ನುವುದಕ್ಕಿಂತ ನನಗೇ ನಾನೆ ಮೊಸ ಹೋದೆನಲ್ಲ ಎಂಬ ಭಾವನೆ ಕಾಡುತ್ತಿದೆ . ಹೇ ಗೆಳತಿ ನನಗೆ ಒಂದು ದೊಡ್ಡ ಯಕ್ಷ ಪ್ರೆಶ್ನೆ ಕಾಡುತ್ತಿದೆ ಕಣೇ.. ನಾವಿಬ್ಬರು ಸೇರಿ ಹೀಗೆ ಬಾಳಬೇಕು ಹಾಗೆ ಬಾಳಬೇಕು ಎಂದು ಕಂಡ ಕನಸುಗಳು ನೂರಾರು ಆ ಕನಸುಗಳಲ್ಲಿ ನಾವು ಮತ್ತು ನಮ್ಮ ಮಕ್ಕಳು ಮಾತ್ರ ಇದ್ದೆವು ! ಇನ್ನು ಮುಂದೆ ನನ್ನ ಸ್ಥಾನ ದಲ್ಲಿ ಬೇರೊಬ್ಬರನ್ನು ತಂದು ಕೊಳ್ಳಿರಿಸಿಕೋಡಿದ್ದಿಯಲ್ಲ ಇದು ಸರಿನಾ..? ನನಗಂತೂ ಅದನ್ನು ಕಲ್ಪಿಸಿಕೋಳ್ಳಲು ಕೂಡ ಸಾದ್ಯಾವಾಗುತ್ತಿಲ್ಲ ಕಣೇ ...!
ಒಂದು ಪ್ರೀತಿ ಕೊಲೆಯಾದಗ ಆ ಪ್ರೀತಿ ಮುಂದೆ ದೆವ್ವ ಅಗುತ್ತಂತೆ .. ಆ ದೆವ್ವ ಪ್ರೀತಿಯನ್ನು ಕೊಲೆ ಮಾಡಿದವರನ್ನು ಕಾಡದೆ ಬಿಡುವುದಿಲ್ಲವಂತೆ ಆ ದೆವ್ವಕ್ಕೆ ನನ್ನದೂಂದು ಸಣ್ಣ ಮನವಿ ಅದೇನಂದರೆ ನನ್ನ ಹುಡುಗಿಯನ್ನು ಹಾಗೆ ಕಾಡುವುದು ಬೇಡ. ಯಾಕೆಂದರೆ ಅವಳು ಮಾತ್ರ ಅವಳ ಪ್ರೀತಿಯನ್ನು ಕೊಂದುಕೋಂಡಿದ್ದಾಳೆ . ನನ್ನ ಪ್ರೀತಿ ಇನ್ನು ಉಸಿರಾಡುತ್ತಿದೆ ಉಸಿರಾಡುತ್ತಲೆ ಇರುತ್ತದೆ..! ಅವಳು ಎಲ್ಲೆ ಇರಲಿ ಹೇಗೆ ಇರಲಿ ತುಂಬ ಸುಖವಾಗಿರಲಿ ಅವಳನ್ನು ಈವಾಗ್ಲು ನಾನು ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ಥಾ ಇದ್ದಿನಿ .. .. ಪ್ರೀತಿಸುತ್ಥೆಲೆ ಇರುತ್ತೆನೆ ...!
SATISH N GOWDA
+91 98447 73489
No comments:
Post a Comment