Thursday, July 1, 2010

ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.


ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.


ಎಲ್ಲಿ ನೋಡು ದೀಪ
ಎಲ್ಲಿ ನೋಡು ದೀಪದಿಂದ
ಅಲಂಕೃತಗೊಂಡ ಆ ದೇವರು
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.

ಎಲ್ಲಿ ನೋಡು ಹೂವು
ಎಲ್ಲಿ ನೋಡು ಹೂವಿನಿಂದ
ಅಲಂಕೃತಗೊಂಡ ಆ ದೇವರು
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.

ಎಲ್ಲಿ ನೋಡು ಜನರು
ಎಲ್ಲಿ ನೋಡು ಜನರಿಂದ
ಅಲಂಕೃತಗೊಂಡ ಆ ಬೋಗ ನಂದೀಶ್ವರ
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.

ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?



ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?

ನಿದ್ರೆಯಲ್ಲಿರುವವನ
ಕನಸನ್ನು ಸದ್ದಿಲ್ಲದೆ
ಕದಿಯುವ ನೀವು
ಎಷ್ಟು ಒಳ್ಳೆಯವರು...?

ಪ್ರೀತಿಸುವವನ
ಮನಸ್ಸನ್ನು ನೊಯಿಸದೇ
ಕದಿಯುವ ನೀವು
ಎಷ್ಟು ಒಳ್ಳೆಯವರು...?

ಕಷ್ಟ ಪಡುವವನ
ಆಸೆ ಯನ್ನು ಇಷ್ಟ ಪಟ್ಟು
ಕದಿಯುವ ನೀವು
ಎಷ್ಟು ಒಳ್ಳೆಯವರು...?

ನನ್ನ ಪ್ರೇಶ್ನೆಗೆ ಉತ್ತರಿಸಿ
ಓ  ಮುದ್ದು ಮುಖದ
ಹುಡುಗಿಯರೇ ನೀವು
ಎಷ್ಟು ಒಳ್ಳೆಯವರು...?

SATISH N GOWDA