Sunday, April 11, 2010

ಬಿತ್ತಿ ಪತ್ರಿಕೆಗಳಾಗುತ್ತಿರುವ ದಿನ ಪತ್ರಿಕೆಗಳು......

ಬಿತ್ತಿ ಪತ್ರಿಕೆಗಳಾಗುತ್ತಿರುವ ದಿನ ಪತ್ರಿಕೆಗಳು......

ಪತ್ರಿಕೆಗಳೆಂದರೆ ಜನಸಾಮಾನ್ಯರ ಕೈಗನ್ನಡಿ ಇದ್ದಂತೆ ರಾಜ್ಯದ ಹಾಗು ದೇಶದ ಹಾಗು ಹೋಗುಗಳನ್ನ ಎಲ್ಲೊ ಮೂಲೆಯಲ್ಲಿರುವ ಸಾಮನ್ಯಜನರಿಗೆ ತಿಳಿಸುವುದೌ ಎಂದರ್ಥ . ಆದರೆ ಈಗಿನ ಪತ್ರಿಕೆಗಳ ಮಾಡುತ್ತಿರುವುದಾದರು ಏನು ದಿನ ಬೆಳಗಾದರೆ ಜಾಹಿರಾತುಗಳದ್ದೆ ಪತ್ರಿಕೆಯ ತುಂಬೆಲ್ಲ ಕಾರುಬಾರು . ಸೋಮುವಾರ ದಿಂದ ಒಂದಲ್ಲ ಒಂದುರಿತಿಯಲ್ಲಿ ಯಾವುದಾದರು ಪತ್ರಿಕೆಯನ್ನೆ ನೋಡಿ ಜಾಹಿರಾತುಗಳಿದ್ದೆ ಇರುತ್ತವೆ . ಅದರಲ್ಲೂ ಶನಿವಾರ ಮತ್ತು ಭಾನುವಾರ ಬಂತೆಂದೆರೆ ಮುಗಿಯಿತು ಪತ್ರಿಕೆಯಲ್ಲಿ ಜಾಹಿರಾತುದಾರರದ್ದೆ ಎಲ್ಲ ಪುಟಗಳು ಸ್ವಲ್ಪಮಾತ್ರವಲ್ಲ ಮುಖಪುಟದ ತುಂಭ ತುಂಬಿರುತ್ತಾರೆ . ಮೂದಲೆಲ್ಲ ಮನೆಗೆ ಪೇಪರ್ ಬಂದರೆ ನಮಗೆ ಬೇಕಾದ ವಸ್ತುಗಳ ಅಥಾವ ಇನ್ನಾವುದೆ ವಿಷಯಗಳನ್ನು ಹುಡುಕಿ ಜನ ನೋಡುತ್ತಿದ್ದರು ಆದರೆ ಈಗಿನ ಪತ್ರಿಕೆಗಳಲ್ಲಿ ಹುಡುಕುವುದಿರಲಿ ದಪ್ಪ ದಪ್ಪ ಅಕ್ಷರಗಳಲ್ಲಿ ಕಣ್ಣಿಗೆ ರಾಚುವಂತೆ ಮುದ್ರಿಸಿರುತ್ತಾರೆ . ಇದರ ಮದ್ಯ ನಮ್ಮೂರಿನ ಸುದ್ದಿ ಎಲ್ಲಿಯಾದರು ಇದೆಯೇ ಎಂದು ಸುದ್ದಿಯನ್ನ ಹುಡುಕಬೇಕಿದೆ  ಭಾನುವಾರ ಬಂತೆಂದರೆ ಇದು ದಿನ ಪತ್ರಿಕೆಯೋ ಅಥಾವ ಜಾಹಿರಾತು ಪತ್ರಿಕೆ ತಿಳಿಯದಂತಾಗಿದೆ . ಪತ್ರಿಕೆಯ ಮುಖಪುಟದಲ್ಲೆ ದೂಡ್ಡ ದೂಡ್ಡ ಕಂಪನಿಗಳು ಮಾರುಕಟ್ಟೆಯನ್ನೆ ದಪ್ಪ ದಪ್ಪ ಅಕ್ಷರಗಳಲ್ಲಿ  ಬಿಂಬಿಸುತ್ತವೆ. ಈ ಜಾಹಿರಾತುಗಳ ಮದ್ಯ ಪುಟ ತಿರಿವಿದಂತೆ ಅಲ್ಲೋಂದು ಇಲ್ಲೋಂದು ದಿನದ ಸುದ್ದಿಗಳಿರುತ್ತವೆ 
  ಪತ್ರಿಕೆಗಳಲ್ಲಿ ಜಾಹಿರಾತು ಮುಂದ್ರಿಸುವುದು ತಪ್ಪು ಎಂದು ನಾನು ಹೇಳುವುದಿಲ್ಲ . ಪತ್ರಿಕೆಯ ಮಾಲಿಕರಿಗೆ ಜಾಹಿರಾತುಗಳಿಂದ ತಮ್ಮ ಪತ್ರಿಕೆಯ ಸಣ್ಣ ಪುಟ್ಟ ಖರ್ಚುಗಳು ಭರಿಸಬಹುದು ಒಂದು ಪತ್ರಿಕೆಗೆ ಜಾಹಿರಾತುದಾರರೆ ಜೀವಾಳ ನಿಜ . ಆದರೆ ಅದಕ್ಕೆಂದೆ ಪ್ರತ್ಯೆಕ ಪುಟಗಳನ್ನು ಮೀಸಲಿಡಿಲಿ ಓದುಗನಿಗೆ ಜಾಹಿರಾತುಗಳಿಂದ ಬೇಸರವಾಗಬಾರದಲ್ಲವೇ..? ಜಾಹಿರಾತು ಬೇಕಾದ ಓದುಗನಮನಸ್ಸು ನಿರ್ದಿಷ್ಟ ಪುಟಕ್ಕೆ ಹೋಗುತ್ತದೆ ಅದರಿಂದ ಸುದ್ದಿಗಳನ್ನು ಓದುವ ಮನಸ್ಸು ಹಗುರವಾಗುತ್ತದೆ ಅದನ್ನು ಬಿಟ್ಟು ಮಾಲಿಕನು ಜೇಬು ತುಂಬಿಕೋಳ್ಳುವ ಗೋಜಿನಿಂದ  "ದಿನಪತ್ರಿಕೆಯನ್ನ ಜಾಹಿರಾತು ಪತ್ರಿಕೆ"ಯನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಹೇಳಿ  ನಾವು ಜೇಬು ತುಂಬಿಕೋಳ್ಳುವುದರಿಂದ ಓದುಗನ ಮನಸ್ಸು ಕಲುಶಿತಗೂಳಿಸುವುದು ಸರಿಯೇ..? ಜಾಹಿರಾತುಗಳನ್ನು ಕೊನೆಯ ಅಥಾವ ಹಿಂದಿನ ಪುಟಗಳಲ್ಲಿ ಮುಂದ್ರಿಸುವುದು ಒಳ್ಳೆಯದು ಜಾಹಿರಾತು ಎಂಬುದು ಓದುಗನಿಗೆ ಹೊಸ ವಸ್ತುಗಳನ್ನು ಪರಿಚಯಸುವಂತಿರಬೇಕು , ಜಾಹಿರಾತೇ ಓದುಗನಿಗೆ ಮಾನಸಿಕ ಬೇಸರವಾಗ ಬಾರದು ಎಂಬುದು ನನ್ನ ಅನಿಸಿಕೆ.


SATISH N GOWDA
+91 98447 73489
e-mail
satishgowdagowda@gmail.com

No comments: