ಮಾಯವಾದ ನಮ್ಮೂರ ಹುಡುಗಿಯರು.....!
ಹೆಣ್ಣುಮಕ್ಕಳು ಬಳೆ ತೊಟ್ಟರೆ ಮಂಗಳ ಸೂಚಕ. ಹಣೆಗೆ ಸಿಂಧೂರ ಇಟ್ಟರೆ, ಕಣ್ಣಿಗೆ ಕಾಡಿಗೆ ಇಟ್ಟರೆ ಒಳ್ಳೆಯದು, ಮೂಗಿಗೆ ಮೂಗನತ್ತು , ಕಿವಿಗೆ ವಾಲೆ, ಜುಮುಕಿ ಕತ್ತಿಗೊಂದು ಮಣಿಸರ , ಕಾಲಿಗೊಂದು ಅಂದದ ಗೆಜ್ಜೆ, ಇವೆಲ್ಲ ಹೆಣ್ಣಿಗೆ ಭೂಷಣ ಇದರ ಜೊತೆಗೆ ಸೀರೆ ಉಟ್ಟು ಹಸಿರುಗಾಜಿನ ಬಳೆ ಧರಿಸಿದರಂತೂ ಆಕೆ ಧರೆಗಿಳಿದ ವಸುಂಧರೆ . ಎಂದೆಲ್ಲ ಮಾತಾನಾಡಿದ ನೆನಪುಗಳಿವೆ. ಅವೆಲ್ಲ ಈಗ ಬರಿ ನೆನಪುಗಳು ಅಷ್ಟೆ . ಈಗಿನ ಹುಡುಗಿಯರು ಸ್ಟಿಕ್ಕರ್ ಹಿಟ್ಕೊಳ್ಳೂದೆ ಹೆಚ್ಚಿನ ವಿಷಯ ಅದೆಲ್ಲ ತೊಟ್ಕೊಳ್ಳೊಕೆ ನಾವೇನು ಬಿಚ್ಚೊಲೆ ಗೌರಮ್ಮನಾ....? ಎಂದು ಕೇಳುತ್ತಾರೆ . ಇದನ್ನು ತನ್ನ ತಂದೆ ತಾಯಂದಿರು ಕೇಳೋಹಾಗಿಲ್ಲ ಏಕೆಂದರೆ ಇವರು ಮೊದಲೇ ಹೇಳಿರುತ್ತಾರೆ ಇದೆಲ್ಲ ಪ್ಯಾಶನ್ ಮಮ್ಮಿ .ಇನ್ನೂ ಜಾಸ್ತಿ ಮಾತನಾಡಿದರೆ ...! ಪ್ಯಾಷನ್ ಇಷ್ಟು ತೊಡೊದೆ ಹೆಚ್ಚು ಕಾಲ ಬದಲಾಗಿದೆ ಅಂತ ಸಬೂಬು ಹೇಳುತ್ತಾರೆ ಇದೆಲ್ಲ ಈಗಿನ ಕಾಲೇಜ್ ಹುಡುಗಿಯರ ಹೊಸ ಡೈಲಾಗ್ .
ಈ ನಡುವೆ ಅಂತು ಕೈಯಲ್ಲೂ ಇಲ್ಲ ಕತ್ತಲ್ಲೂ ಇಲ್ಲ , ಮೊಗಲ್ಲು ಇಲ್ಲ, ಕೊನೆಗೆ ಕಿವಿಯಲ್ಲೂ ಇಲ್ಲ ,ಬರೀ ಬೊಳು . ಬೋಳಾಗಿರೊದೆ ಒಂದು ಪ್ಯಾಷನ್. ಹೆಚ್ಚೆಂದರೆ ಕೈಗೆ ಒಂದು ವಾಚ್ ಮತ್ತೊಂದು ಕೈಗೆ ಸಿಂಗಲ್ ಬಳೆ ಅಷ್ಟೆ. ವಾಲೆ ಜುಮುಕಿ ಊಹೊ..! ಆದರು ಅವೆಲ್ಲ ಯಾರಿಟ್ಟುಕೊತಾರೆ.? ಅಷ್ಟು ಭಾರ ಯಾರ್ ಹೊರತಾರೆ ಅಂತಾರೆ . ಇನ್ನು ಬೆಂದಕಾಳುರು ಎಂಬ ನಗರಕ್ಕೆ ಕಾಲಿಟ್ಟರಂತು ಪ್ಯಾಷನ್ ಲೋಕದ ಇನ್ನೊಂದು ರೋಪವೇ ಇಲ್ಲಿದೆ. ಎಲ್ಲಿ ನೋಡಿದರು ತುಂಡು ಬಟ್ಟೆಗಳದ್ದೆ ಕಾರುಬಾರು ಎಲ್ಲಿಯಾದರು ಲಂಗಾದಾವಣಿ ಎನಾದರು ಕಾಣುತ್ತದ..? ಎಂದು ಕಣ್ಣಲ್ಲಿ ಕಣ್ಣು ಬಿಟ್ಟು ನೋಡಿದರು ಕಾಣಲ್ಲ ಕಂಡರು ಅದು ಅದ್ಬುತವೆ ಸರಿ. ದಿನ ದಿನಕ್ಕೆ ಇವರ ಉಡುಗೆಗಳು ಬದಲಾಗುತ್ತಿವೆ ಭಾರತದ ಉಡುಗೆಗಳನ್ನು ಬಿಟ್ಟು ಪಾರಿನ್ ಉಡುಗೆಗಳಿಗೆ ಮಾರು ಹೂಗುತ್ತಿದ್ದಾರೆ.
ಈಗೀನ ಹೆಣ್ಣುಮಕ್ಕಳು ಡೆಜನ್ ಘಟ್ಟಳೆ ಬಳೆ ತೋಡೊದು ಎಲ್ಲಿಯಾದರು ಉಂಟೆ . ಎಲ್ಲಿಯಾದರು ತೊಟ್ಟಿದ್ದಾರೆ ಎಂದರೆ ಅಲ್ಲಿ ಎನೋ ಶುಭ ಸಮಾರಂಭ ಇದೆ ಅಂತ . ಹಾಗದರೆ ಮದುವೆ ಅಥಾವ ಮುಂಜಿ ಕಾರ್ಯಕ್ರಮಗಳಿಗೆ ಮಾತ್ರ ಬಳೆ ತೋಡೊದು ಅಂತ ಅಯೀತು ಎನ್ನಿ. ಇನ್ನು ಇವರು ಧರಿಸುವ ಬಟ್ಟೆಗಳಿಗೆ ಬಂದರಂತು ಮುಗಿಯಿತು ಒಂದು ಹುಡುಗಿ ಮನೆಯಿಂದ ಹೊರ ಹೊರಟರೆ ಸದ್ಯ ಯಾರು ರೇಪ್ ಮಾಡಲಿಲ್ಲವಲ್ಲ ಎಂದು ತಂದೆ ತಾಯಿಗಳು ಬಾಯಿ ಬಿಟ್ಟುಕೊಂಡು ನೋಡುವಂತ ಕಾಲ ಬಂದಿದೆ ಎಂದರೆ ಆಚರ್ಯ ಪಡಬೇಕಾಗಿಲ್ಲ ಬಿಡಿ . ಹಾಗೆ ಇರುತ್ತದೆ ಈ ಬೆಂಗಳೊರ್ ಹುಡುಗಿಯರ ಡ್ರೆಸ್ ಗಳು . ಇದಕ್ಕೆಲ್ಲ ಕಾರಣ ಬದಲಾಗುತ್ತಿರುವ ಬೆಳವಣಿಗೆಯ ಜೊತೆಗೆ ದಿನಬೆಳಗಾಗುವುದರೋಳಗಾಗಿ ಹಳೆತಾಗುವ ಪ್ಯಾಶನ್ ಲೋಕ , ಪ್ರತಿ ದಿನ ಸೂರ್ಯೋದಯದೊಂದಿಗೆ ಹೊಸ ಹೊಸ ಡಿಸೈನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ . ಹಾಗಾಗಿ ಈ ಹುಡುಗಿಯರ ಅಭಿರುಚಿ ಅದೇ ರೀತಿ ಹೊಂದಿಕೊಂಡಿದೆ. ಈ ಯುಗದ ಪ್ಯಾಶನ್ ಲೋಕಕ್ಕೆ ತಕ್ಕಂತೆ ದಿನಕ್ಕೊಂದು ಮಾದರಿಯ ಸ್ಟಿಕ್ಕರ್ , ಬಳೆ ಮನೆಯ ಡ್ರೆಸ್ಸಿಂಗ್ ರೊಮನ್ನು ಅಲಂಕರಿಸಿವೆ ಎಂದರೆ ತಪ್ಪಾಗಲಾರದು.
my e-mail
satishgowdagowda@gmail.com
my blog
www.nannavalaloka.blogspot.com
No comments:
Post a Comment