Tuesday, July 13, 2010

ನನ್ನ ಪ್ರೀತಿ.....




ನನ್ನ ಪ್ರೀತಿ..

ನನ್ನ ಪ್ರೀತಿ ಹೂವಿನಷ್ಟು ಸುಂದರ
ಎಂದರೇ ತಪ್ಪಾದೀತು
ಬೆಳಗ್ಗೆ ಅರಳೊ ಹೂವು
ಸಂಜೆ ಬಾಡಿಹೊಗುತ್ತದೆ.

ನನ್ನ ಪ್ರೀತಿ ಚಂದ್ರನಷ್ಟು ಮಧುರ
ಎಂದರೆ ತಪ್ಪಾದೀತು
ರಾತ್ರಿ ಕಾಣುವ ಚಂದ್ರ
ಹಗಲು ಕಾಣಲಾರ.

ನನ್ನ ಪ್ರೀತಿ ಆಕಾಶದಷ್ಟು ಅಮರ
ಎಂದರೆ ಬಹುಶಃ ತಪ್ಪಾದೀತು
ಕಣ್ಣನೋಟಕ್ಕೆ ಅಷ್ಟೆ ಆಕಾಶ
ಒಳ ಹೊಕ್ಕರೆ ಬರೀ ಗಾಳಿ......


                                                            ಸತೀಶ್ N ಗೌಡ

4 comments:

SANGETHA'S BLOG said...

enri nimma lovvernna ishtella "LOVE" madtira.. idu swalpa jasti anta anislillva satish ...

SATISH N GOWDA said...

ಹಾ ಹಾಹ ಸಂಗೀತಾ ನಿಮ್ಮ ಕಾಮೆಂಟ್ ನೋಡಿ ನನಗೆ ನಗು ಬರುತ್ತೆ . ಕನಸುಗಳನ್ನ ಯಾರದ್ರು ಜಾಸ್ತಿ ಅಂತ ಹೇಳ್ತಾರ ..? ಇದು ಅಷ್ಟೇ , ಈ ಕವನ ನನ್ನ ಹುಡುಗಿ ಕಲ್ಪನೆಯ ಪ್ರತೀಕ ಅಷ್ಟೇ ..... ಅವಳ ಬಗ್ಗೆ ಎಷ್ಟು ಬರೆದರೂ ನನಗೆ ಕಡಿಮೆ ಅನಿಸುತ್ತೆ . ನನ್ನ ಹುಡುಗಿ ಬಗ್ಗೆ ಎಷ್ಟು ಬರೆದರೂ ನನ್ನಲ್ಲಿರುವ ಕಲ್ಪೆನೆಯ ಶಕ್ತಿ ಒಂದಿಂಚು ಸವೆಯೋಲ್ಲ . ನನ್ನ ಹುಡುಗಿ ಕಲ್ಪನೆಗಳನ್ನ ಕೊಡುವ "ಅಕ್ಷಯ ಪಾತ್ರೆ"

Unknown said...

ಅವರು ಹಾಗೆ ಬಿಡಿ ಸಂಗೀತಾ . ನಿಮಗೆನದ್ರು ಸತೀಶ್ ಸಿಕ್ಕರೆ ಸ್ವಲ್ಪ ಕನಸುಗಳನ್ನು ಕಾಣೋದು ಕಡಿಮೆ ಮಾಡೋಕ್ಕೆ ಹೇಳಿ....

SATISH N GOWDA said...

ಥ್ಯಾಂಕ್ಸ್ ಸಂಜನಾ . ನೋಡೋಣ ಕಡಿಮೆ ಮಾಡುವ . ಕಾಮೆಂಟ್ ಬರೆದದ್ದಕ್ಕೆ ಧನ್ಯವಾದಗಳು