Monday, June 21, 2010

ನಿಜ ಹೇಳು ಗೆಳತಿ ನಿನ್ಯಾರು....?

ನಿಜ ಹೇಳು ಗೆಳತಿ ನಿನ್ಯಾರು....?

ಮುಂಜಾನೆ ಹರಳುವ ಗುಲಾಬಿ 
ನಾಚಿ ನಿಂತಿದೆ  
ನಿನ್ನಯ ಚಲುವ ಕಂಡು 
ಗೆಳತಿ ನಿನ್ಯಾರೆ...?
 
ಹಸಿರು ಹುಲ್ಲಿನ ಹಾಸಿಗೆ 
 ಕಾದು ನಿಂತಿದೆ 
ನಿನ್ನಯ ಪಾದದ ಒಂದು ಸ್ಪರ್ಷಕ್ಕಾಗಿ 
ಗೆಳತಿ ನಿನ್ಯಾರೆ...?
 
ತಂಪಾಗಿ ಬೀಸೋ ಗಾಳಿ 
ಬೆರಗಾಗಿ ನಿಂತಿದೆ 
ನಿನ್ನಯ ಸೋಂಟ ಬಳಕೋ ರೀತಿಯ ಕಂಡು
 ಗೆಳತಿ ನಿನ್ಯಾರೆ...?
 
ಸಂಜೆ ಧೋ ಎಂದು ಸುರಿಯುವ ಮಳೆ 
ಸೋನೆಯಾಗಿ ಹನಿಯುತಿದೆ 
ನಿನ್ನಯ ನಗುವ ಕಂಡು 
ಗೆಳತಿ ನಿನ್ಯಾರೆ...?
 
ಪಳ ಪಳ ಹೊಳೆಯುವ ನಕ್ಷತ್ರಗಳು
 ಕತ್ತಲ ಮರೆಯಲ್ಲಿ ಅಡಗಿವೆ 
ನಿನ್ನಯ ಒಂದು ಕಣ್ಣ ಮಿಂಚಿಗೆ 
ಗೆಳತಿ ನಿನ್ಯಾರೆ...?
 
ಕಣ್ಣ ನೋಟಕ್ಕೆ ಸಿಲುಕದ ಆಕಾಶ ಕೂಡ 
 ತಲೆ ಬಾಗಿ ನಿಂತಿದೆ 
ನಿನ್ನ ಹೃದಯದಲ್ಲಿರುವ ಪ್ರೀತಿಯನ್ನ ಆಲಿಸಲು
 ಗೆಳತಿ ನಿನ್ಯಾರೆ...?
 
ನಿಜ ಹೇಳು ಗೆಳತಿ ನನ್ನ ಹೃದಯ ಕದ್ದ ಕಳ್ಳಿ ನಿನ್ಯಾರು....?

2 comments:

SANGETHA'S BLOG said...

ಒಂದು ಹೆಣ್ಣನ್ನ ವರ್ಣನೆ ಮಾಡಿರುವ ರೀತಿ ತುಂಬಾ ಚನ್ನಾಗಿದೆ SATISH HATS UP 2 U.

SATISH N GOWDA said...

THANXS............