Monday, June 21, 2010

ನನ್ನ ಕಲ್ಪನೆಯ ಹುಡುಗಿ

ನನ್ನ ಕಲ್ಪನೆಯ ಹುಡುಗಿ...


ನನ್ನ ಕಲ್ಪನೆಯ ಹುಡುಗಿ...
ಕನಸಿನ ರಾಣಿಯೆನಲ್ಲ
ಕಣ್ಣಂಚಲ್ಲೆ ಇರುವವಳು
ಕಣ್ಣು ಮುಚ್ಚಿದರೆ ಬರುವವಳು

ನನ್ನ ಕಲ್ಪನೆಯ ಹುಡುಗಿ...
ಜೀನ್ಸು ಮಿಡ್ಡಿ ತೊಟ್ಟವಳೇನಲ್ಲ
ಕನಸಿನ ಉಡುಗೆಗೆ ಒಡತಿಯಾದವಳು
ಆ ಉಡುಗೆಗೆ ತಾನೆ ಒಡತಿಯಾದವಳು

ನನ್ನ ಕಲ್ಪನೆಯ ಹುಡುಗಿ...
ಸೌಂದರ್ಯದ ಗಣಿಯೇನಲ್ಲ
ರಾತ್ರಿ ಹುಟ್ಟುವ ಚಂದ್ರನನ್ನೂ ನಾಚಿಸುವವಳು
ಬೆಳಗ್ಗೆ ಹರಳೊ ಹೂವಿಗೆ ಒಡತಿಯವಳು

ನನ್ನ ಕಲ್ಪನೆಯ ಹುಡುಗಿ...
ಬರೀ ಕಲ್ಪನೆಯಲ್ಲೆ ಇರುವವಳು ಅಲ್ಲ
ನನ್ನ ಕಲ್ಪನೆಯನ್ನು ನನಸಾಗಿಸದಿದ್ದರೂ
ನನ್ನನ್ನು ಕವಿಯಾಗಿಸಿದವಳು

ನನ್ನ ಕಲ್ಪನೆಯ ಹುಡುಗಿ...
ಇವೆಲ್ಲಕ್ಕಿಂತ ಮಿಗಿಲಾಗಿ
ನನ್ನ ಹೃದಯದ ಮಂದಿರದಲ್ಲಿ
ತಾನೆ "ವದು"ವಾದವಳು. ಹುಡುಗಿ ನಿನ್ಯಾರೆ...?

No comments: