Thursday, May 20, 2010

Frind Ship ಮಾಡಲು ಜಿಪುಣ ತನ ವೇಕೆ..?

Frind Ship ಮಾಡಲು ಜಿಪುಣ ತನ ವೇಕೆ..?

      ಕ್ತ ಸಂಬಂಧಗಳ ವಿಷಯದಲ್ಲಿ ನಮಗೆ ಛಾಯ್ಸ್ ಇಲ್ಲ ನಿಜ ಆದರೆ ಗೆಳೆತನ ವಿಷಯದಲ್ಲಿ ತುಂಭಾ ಛಾಯ್ಸ್ ಗಳಿವೆ. ಹಾಗಂತೆ ಅದಕ್ಕಾಗಿ ಒಂದು ಕೇರ್ ಅಥಾವ ಪಾಲಿಸಿ ಇಲ್ಲದಿದ್ದರೆ ಹೇಗೆ ಹೇಳಿ..? ನಾನು ಸಾಮಾನ್ಯವಾಗಿ ಲವ್ ಮ್ಯಾರೇಜ್ ಮಾಡಿಕೊಂಡು ಹತ್ತು ಹನ್ನೇರ‍ಡು ತಿಂಗಳು ಸಂಸಾರ ಮಾಡಿದ ದಂಪತಿಗಳನ್ನು ಬೇಟೆಯಾದಾಗ ಅವರ ಬಾಳಿನಲ್ಲಿ ಪ್ರೀತಿ ಹಾಗು ಸಂತೋಷಗಳು ಎಷ್ಟರ ಮಟ್ಟಿಗೆ ಉಳಿದಿದೆ ಎಂಬುದನ್ನು ಗಮನಿಸುತ್ತಿರುತ್ತೇನೆ . ಹೀಗೆ ಸಮಯವಿದ್ದರೆ ಲೆಕ್ಕಹಾಕುತ್ತಿರುತ್ತೇನೆ ಪ್ರೀತಿ ಪ್ರೇಮವನ್ನು ಲೆಕ್ಕಹಾಕಲು ನಿಶ್ಚಿತ ಮಾನದಂಡಗಳೆನು ಇಲ್ಲ ಅಂದುಕೊಳ್ಳಿ . ಕೆಲವು ಪ್ರೆಶ್ನೆಗಳನ್ನು   ಅವರಿಗೆ ಕೇಳಿಕೊಳ್ಳಲು ಬಿಡುತ್ತೆನೆ .  ತನ್ನಲ್ಲಿ ಹೊಳೆಯುವ ಕೆಲ ಪ್ರೆಶ್ನೆಗಳು ನಾನು ಇವನನ್ನು ಯಾಕೆ ಕಟ್ಟಿಕೋಂಡೆ.? ನಾನು ಇವಳನ್ನೇ ಏಕೆ ಮದುವೆ ಯಾದೆ.? ಅವತ್ತಿಗದು ಅನಿವಾರ್ಯ ವಾಗಿತ್ತಾ..? ಮಾಡಿಕೋಂಡ ಮದುವೆ ಹತ್ತಾರು ವರ್ಷಗಳ ನಂತರವೂ ಅರ್ಥ ಪೂರ್ಣವಗಿ ಉಳಿದಿದೆಯೇ.? ಪ್ರೀತಿಯ  ತೀವ್ರತೆಗಳಲ್ಲಿ ಏರುಪೇರು ಇರಬಹುದು ಸಹಜ ಇವತ್ತು ಬೆಳಗ್ಗೆ ಚಂದಮಾಮನಂತಿರುವ ಹೆಂಡತಿ ನಾಳೆ ಮದ್ಯಾನದ ಹೊತ್ತಿಗೆ ಒಂದಿಷ್ಟು ತವರುಮನೆಗೆ ಹೋಗಿಬರಬಾರದೇ ಅನ್ನಿಸಬಹುದು.
             ಅಥಾವ ಗಂಡ ಟೊರಿಗೆ ಹೋದರೆ ಒಂದಿಷ್ಟು ದಿನ ನೆಮ್ಮದಿಯಾಗಿರಬಹುದಲ್ಲಾ..? ಎಂದು ತನ್ನ ಹೆಂಡತಿಗೆ ಅನಿಸಿದರೆ ಅದು ತೀರಾ ದಾಂಪತ್ಯ ಹಳಸಿ ಹೋದುದರ ಸಂಕೇತವೇನಲ್ಲ . ಏಕೆಂದರೆ ಎಷ್ಟೇ ಪ್ರೀತಿಯಿಂದ ಮಗುವನ್ನು ಎತ್ತಿಕೊಂಡರೂ , ತುಂಭಾ ಹೊತ್ತು ಅಪ್ಪಿಕೋಂಡರೆ ಆ ಮಗುವಿಗೆ ಉಸಿರು ಕಟ್ಟಿದಂತಾಗುತ್ತದೆ . ಅಂಥ ಚಿಕ್ಕ ಪುಟ್ಟ ರಿಲೀಫ್  ಗಳನ್ನು ದಾಂಪತ್ಯ ಬೇಡುವುದರಲ್ಲಿ ತಪ್ಪೇನಿಲ್ಲ ನಾನು ಅದರ ಬಗ್ಗೆ ಮಾತಾಡುತ್ತಿಲ್ಲ ಆದರೇ ಒಬ್ಬ ವ್ಯಕ್ತಿಯನ್ನ ಅಪ್ಪಿಕೋಂಡು ತುಂಬ ತಪ್ಪು ಮಾಡಿದೆ ಅಂತ ಪದೇ ಪದೇ ಗಂಭೀರವಾಗಿ ಅನಿಸತೊಡಗಿದಿಯ.? ಅದು ನಿಜವಾಗಿಯೋ ಹಳಸಿದುದರ ಪರಿಣಾಮ .
                ಎಷ್ಟೋ ಸಲ ನಾವು ಬೇರೆ ದಾರಿಯಿಲ್ಲ ಎಂಬ ಕಾರಣಕ್ಕೆ ಕೆಲವು ಕೆಲಸಗಳನ್ನು ಮಾಡಿಬಿಟ್ಟಿರುತ್ತೆವೆ ಸರಿಯಾಗಿ ಅಲೋಚಿಸಿ ನೋಡಿದರೆ ಬೇರೆದಾರಿಗಳನ್ನು ನಾವು ಹುಡುಕುವುದೇ ಇಲ್ಲ ಅಂತ ಎಷ್ಟೊ ವರ್ಷಗಳಾದ ಮೇಲೆ ನಮ್ಮ ಗಮನಕ್ಕೆ ಬರುತ್ತದೆ . ಮಾಡಲು ಬೇರೆ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಟೇಸ್ಟಿಗೆ ಸಂಭಂದವೆ ಇಲ್ಲದ ಒಂದು ಸಿನಿಮಾಕ್ಕೆ ಹೊರಟುಬಿಟ್ಟಂತೆ , ಅಥಾವ ಕ್ಲಾಸಿನಲ್ಲಿದ್ದವಳು ಇವಳೊಬ್ಬಳೆ ಸುಂದರಿ ಎಂಬ ಕಾರಣಕ್ಕೆ ಅವಳ್ಯವಳನ್ನೋ ತನ್ನ ಟೇಸ್ಟಿಗೆ ಸಂಭಂದವೇ ಇಲ್ಲದಂತೆ ಅವಳನ್ನು ಪ್ರೀತಿಸಿ ಬಿಟ್ಟಿರುತ್ತೇವೆ .  ಸಿನಿಮಾಕ್ಕೆ ಹೊಗುವಬದಲು ಪುಸ್ತಕ ಓದಬಹುದಿತ್ತು. ಸಂಗೀತ ಕೇಳಬಹುದಿತ್ತು, ಸುಮ್ಮನೆ ಪಾರ್ಕ್ ಗೆ ಹೋಗಬಹುದಿತ್ತು. ಅಂತೆಲ್ಲ ಅಮೇಲೆ ಅನಿಸುತ್ತದೆ ಇವಲನ್ನು ಪ್ರೀತಿಸುವ ಬದಲು ಗೆಳೆಯರಾಗಿರಬಹುದಿತ್ತು ಅಂತಲೂ ಅನಿಸಿಬಿಡುತ್ತದೆ . ನೀವು ಪರೀಕ್ಷಿಸಿ ನೋಡಿ ಅತ್ಯತಮ ಗೆಳೆಯನಾಗಿದ್ದ ಒಬ್ಬ ವ್ಯಕ್ತಿ ಮದುವೆಯಾಗಿ ಅತೀ ಕೆಟ್ಟ ಗಂಡನೆನಿಸಿಕೊಂಡಿರುತ್ತಾನೆ . ಗೆಳೆತನದ ಅವನನ್ನು ಒಂದು ವರ್ಷದಿಂದ ಒಂದೇ ಸಮನೆ ಗಬಗಬನೆ ಪ್ರೀತಿಸಿದ್ದು ಅಲ್ಲದೆ ಇವನನ್ನು ಬಿಟ್ಟರೆ ಬೇರೆ ಗಂಡನಿಲ್ಲ ಎಂದು ಮದುವೆಯಾದದ್ದು ಇವಳತಪ್ಪು ಅಲ್ಲ ಅಲ್ಲವೇ.?
ಎಷ್ಟೊ ಸಲ ಹುಡುಗಿಯರನ್ನ ಕೇಳಿ ನೋಡಿ "ಅವನನ್ನು ಯಾಕೆ ಪ್ರೀತಿಸಿದೆ..? " ಅಂತ ಕೇಳಿದರೆ  ಈ ಪ್ರೇಶ್ನೆಗೆ ಉತ್ತರ ಹೇಗೆ ಹೇಳುತ್ತಾರೆ  "ಮನಸ್ಸು ಯಾವ ಕ್ಷಣದಲ್ಲಿ, ಯಾರ ಮೇಲೆ, ಹೇಗೆ ವಾಲುತ್ತದೋ..?" ಎಂಬಂತಹ ಸ್ಟುಪ್ಪಿಡ್ ಉತ್ತರಗಳನ್ನು ಕೊಡುತ್ತಾರೆ . ನಿಜವಾಗಲು ಆ ಉತ್ತರ ಸರಿಯಲ್ಲ ಸಮಕ್ಕೆ ಸರಿ ಇರಬಹುದು ಅಷ್ಟೆ. ಅವತ್ತು ಆ ಕ್ಷಣದಲ್ಲಿ ಅವನು ಸರಿ ಅನ್ನಿಸಿದ್ದ, ಅವತ್ತು ಆ ಕ್ಷಣದಲ್ಲಿ ಮತ್ತೊಬ್ಬ ತನಗೆ ಪರಿಚಯವಿರಲಿಲ್ಲ , ಅವತ್ತಿನ ಆಕ್ಷಣದಲ್ಲಿ ಅವಳ ಬದುಕಿಗೆ ಬೇರೆ ಪರ್ಯಯ ವ್ಯವಸ್ತೆ ಇರಲಿಲ್ಲ, ಅವತ್ತಿನ ಕ್ಷಣ ಅವಳು ಕೊಲಂಕುಷವಾಗಿ ಏನನ್ನೂ ಯೋಚಿಸುವ ಸ್ತಿತಿಯಲ್ಲಿರಲಿಲ್ಲ , ತನ್ನ ನಿಲವು, ಅಂತಸ್ತು ವ್ಯಕ್ತಿಗಳಿಗೆ ಸಂಭಂದವೇ ಇಲ್ಲದಂತ , ಕೆಲಸಕ್ಕೆ ಬಾರದ ಒಬ್ಬ ಡಿಂಗೋ ವ್ಯಕ್ತಿಯನ್ನ ಪ್ರೀತಿಸಿ  ಮದುವೆಯಾದಳು ಎಂಬುದಷ್ಟೆ ನಿಜ. ಇಂಥ ತಪ್ಪುಗಳು ಕೇವಲ ಮದುವೆಯ ವಿಷಯದಲೂ ಅಥವಾ ಇನ್ನಾವುದೆ ವಿಷಯದಲ್ಲೂ ಅಗಿರುವುದಿಲ್ಲ ಪ್ರತಿಯೊಂದು ಹಂತದಲ್ಲಿ ಕೂದ ಮುನ್ನೆಡೆಯುತ್ತಿದೆ. ಕಾಲೇಜಿಗೆ ಹೋದ ಹೊಸತರಲ್ಲಿ ಬೇರೇ ಯಾರು ಸಿಕ್ಕಲಿಲ್ಲವೆಂದು , ಬಸ್ಸಿನಲ್ಲಿ ಜೊತೆ ಅಂತ ಯಾರು ಇರಲಿಲ್ಲ, ನನ್ನ ಆತ್ಮ ಸಂಗಾತಿ ಬೇರೆ ಯಾವುದೋ ಊರಲ್ಲಿ ಕುಕ್ಕರಿಬಡಿದಿದ್ದರಿಂದ, ನಮ್ಮ ಊರಿನವನಲ್ಲಾ .? ಇವೆ ಅಭಿಪ್ರಾಯದಿಂದ ನಮ್ಮ ವ್ಯಕ್ತಿತ್ವ ,ಬುದ್ದಿವಂತಿಕೆಗಳಿಗೆ ಸಂಬಂದ ವೇ ಇಲ್ಲದ ಒಬ್ಬನನ್ನ ನಾವು ಫ್ರೆಂಡ್ ಮಾಡಿಕೊಂಡು ಬಿಟ್ಟಿರುತ್ತೆವೆ . ಪ್ರೆಂಡ್ ಶಿಪ್ ಆಗಲಿ ಎಂದುಕೊಳ್ಳೊಣ ಆತ ಅಥಾವ ಆಕೆ ಅದೇ ಕಾರಣಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಇಮೋಷನ್ ಹಾಗಿ ಡಿಪಂಡೆಂಟ್ ಆಗಿಬಿಟ್ಟರೆ ಕೋನೆಗಾದರು ಸುಖ ಸಿಗುತ್ತದ..?
            ತೀರಾ ಚಿಕ್ಕ ವಯಾಸ್ಸಾದರೆ ಆ ಮಾತು ಬೇರೆ ಬಿಡಿ . ತನ್ನ ಕೇರಿಯಲ್ಲೆ ತನ್ನ ಗೆಳಯರನ್ನು ಆಯ್ಕೆ ಮಾಡಿಕೊಳ್ಳಬೇಕು . ತಾನು ಓದುವ ಶಾಲೆಯಲ್ಲಿ ಸಿಕ್ಕವರೆ ಗೆಳೆಯರಾಗಬೇಕು, ಆದರೆ ಬೇಳೆಯುತ್ತ ನಮ್ಮ ಬದುಕಿಗೆ ಸಾವಿರ ಪಾಟಗಳನ್ನು    ಕೊಡುತ್ತದೆ . ವಯಸ್ಸಿನಲ್ಲೆ ಅಂತರವಿಲ್ಲದವರು ಗೆಳೆಯರಾಗುತ್ತಾರೆ , ಎಂಥಾ ಸಂದರ್ಬದಲ್ಲೊ ಮಿಸ್ ಬಿಹೆವ್ ಮಾಡದ, ದಾರಿ ತಪ್ಪಿಸದ, ಸುಳ್ಲು ಹೇಳದ , ವಂಚಿಸದ, ನಮ್ಮನ್ನು ತೊರೆದರೊ ನಮ್ಮ ಬಗ್ಗೆ ಕೆಟ್ತ ಮಾತಾಡದ ಗೆಳೆಯರು ಸಿಗುತ್ತಾರೆ  . ನಿಮಗೆ ಜಾಲಿ ಲೈಪ್ ನಲ್ಲಿ ಆಸಕ್ತಿ ಇದ್ದರೆ ಅದಕ್ಕಾಗಿಯೇ ಒಂದು ಸಮೂಹ, ಸಾಹಿತ್ಯಾಸಕ್ತಿ ಇದ್ದರೆ ಅದಕ್ಕಂತಲೇ ಒಂದು ಗೆಳೆಯರ ಬಳಗ , ನಿಮಗೆ ಹಣಕಾಸಿನತೊಂದರೆ ಇದ್ದರೆ ಹಣಕಾಸಿನ ವ್ಯವಾಹರಕ್ಕಾಗಿಯೇ ಕೆಲವು ಮಿತ್ರರು, ಹೀಗೇ ಹತ್ತು ಹಲವಾರು ಗೆಳೆಯರು ಸಿಗುತ್ತಾರೆ . ಅಂಥ ಒಂದು ಛಾಯ್ಸ್ ನಿಮ್ಮ ಕೈಲಿದೆ.
ಆದರೆ ನಾವು ಅಂಥದರ ಬಗ್ಗೆ ತಿಂಕ್ ಮಾಡುವುದೇ ಇಲ್ಲ ಹೊಸ ಗೆಳೆತನಗಳತ್ತ ಕೈ ಚಾಚುವುದೇ ಇಲ್ಲ  ಇರೊ ಚಿಕ್ಕ ಊರಿನಲ್ಲೆ , ಅದೇ ಕೇರಿಯಲ್ಲೆ, ಮತ್ತದೇ ಬಾರ್ ಗಳಲ್ಲಿ ನಮ್ಮನ್ನು ವಾಚಾಮಗೋಚರ ಹೊಗಳುವವರೊ ಅಥಾವ ನಮ್ಮ ಖರ್ಚಿನಲ್ಲೆ ಕುಡಿದು ಹೊಗುವವರೊ ಅಂಥವರೊಂದಿಗೆ ನಮ್ಮದೊಂದು ವಲಯ ಸೃಷ್ಟಿಸಿಕೊಂಡು ಬಿಟ್ಟಿರುತ್ತೆವೆ  . ವರೆತು ಅದರಾಚೆಗೆ ನಾವು ಬೆಳೆಯುವುದೆ ಇಲ್ಲ . ಅವರೂ ಕೂಡ ನಮ್ಮನ್ನು ಬೆಳೆಸುವ ಸಾದ್ಯತೆಗಳಿರುವುದಿಲ್ಲ . ಕೊಂಚ ಪ್ರಯತ್ನಿಸಿ ನೋಡಿ ಹೊಸಗೆಳೆತನಗಳಲ್ಲಿ ಸುಖವಿದೆ, ಸೌಖ್ಯವಿದೆ . ಹೋಸ ಜೀವನೋತ್ಸಹ ತುಂಬಿ(ನುಗ್ಗಿ)ಬರುವ ಸಾದ್ಯತೆಗಳಿವೆ . ಒಂದು ನಿಮಿಷ ನಿಲ್ಲಿ,
           ಒಂದು ಆಸ್ತಿ ಖರೀದಿಸಿದರೆ ಇದರಿಂದ ಎಷ್ಟು ಲಾಭ ಎಂದು ನೀವು ಯೋಚಿಸುತ್ತಿರೂ ಇಲ್ಲವೂ, ಈ ಗೆಳತನದಿಂದ ನಷ್ಟವಿಲ್ಲ ತಾನೆ ಅಂಥ ನಾನಂತೂ ಖಂಡಿತ ಯೋಚಿಸುತ್ತೆನೆ . ಹುಟ್ಟಿಕೊಂಡ ಹೊಸ ಮೈತ್ರಿ ನನ್ನನ್ನ ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತದ.? ನನ್ನ ಮನಸ್ಸಿಗೆ ಹೊಸ ಅನುಭವವನ್ನು ಹುಟ್ಟು ಹಾಕುತ್ತದ..? ನನ್ನ ಮನೆಗೆ ಮತ್ತು ನನ್ನ ಮನಸ್ಸಿಗೆ ಒಳ್ಳೆಯದಾಗುತ್ತದ..? ಕೊನೆ ಪಕ್ಷ ಒಂದಿಷ್ಟು ನನ್ನಲ್ಲಿರುವ ದುಗುಡ ನೀಗಿ ಮನಕ್ಕೆ ಚಿಕ್ಕ ಚಿಕ್ಕ ಸಂತೋಷಗಲನ್ನು ನೀಡುತ್ತದ.? ಅಂತ ಖಂಡಿತ ಯೋಚಿಸುತ್ತೆನೆ .
       "ಪ್ರಾಣಕ್ಕೆ ಪ್ರಾಣಕೊಡ್ತಿನಿ ಕಣೇ" ಅಂಥ ಎಮೋಷನಲ್ ಆಗಿ ಮಾತಾನಾಡುವ ಗೆಳೆಯರಿಗಿಂತ ಪ್ರಾಣ ತಿನ್ನದೆ ತಮ್ಮ ಪಾಡಿಗೆ ತಾವಿದ್ದು ಭಾವ , ಬುದ್ದಿ ಬೆಳಸುವ ಗೆಳೆಯರ ಅವಶ್ಯಕತೆ ನಿಮಗಿದೆ ಎಂದು ಅನಿಸುವುದಿಲ್ಲವೆ.?
my e-mail
satishgowdagowda@gmail
my blog
www.nannavalaloka.blogspot.com
my cell
+91 98447 73489

4 comments:

Unknown said...

ಪ್ರಾಣಕ್ಕೆ ಪ್ರಾಣಕೊಡ್ತಿನಿ ಕಣೇ" ಅಂಥ ಎಮೋಷನಲ್ ಆಗಿ ಮಾತಾನಾಡುವ ಗೆಳೆಯರಿಗಿಂತ dis line a am veryy intresting ri.... good article keep it.

SATISH N GOWDA said...

ಸಂಜನಾ ರವರೆ ನಿಮ್ಮ ಅಭಿನಂದೆನೆಗೆ ನನ್ನ ಧನ್ಯವಾದಗಳು ...... ಹೀಗೇ ಕಾಮೆಂಟ್ ಬರೆಯತ್ತಿರಿ....

Unknown said...

channagide ri article nanu nimma blag na ide modalu nodiddu tumba channagide

SATISH N GOWDA said...

SMITHA ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು
SATISH N GOWDA