Tuesday, July 13, 2010
ನನ್ನ ಪ್ರೀತಿ.....
ನನ್ನ ಪ್ರೀತಿ..
ನನ್ನ ಪ್ರೀತಿ ಹೂವಿನಷ್ಟು ಸುಂದರ
ಎಂದರೇ ತಪ್ಪಾದೀತು
ಬೆಳಗ್ಗೆ ಅರಳೊ ಹೂವು
ಸಂಜೆ ಬಾಡಿಹೊಗುತ್ತದೆ.
ನನ್ನ ಪ್ರೀತಿ ಚಂದ್ರನಷ್ಟು ಮಧುರ
ಎಂದರೆ ತಪ್ಪಾದೀತು
ರಾತ್ರಿ ಕಾಣುವ ಚಂದ್ರ
ಹಗಲು ಕಾಣಲಾರ.
ನನ್ನ ಪ್ರೀತಿ ಆಕಾಶದಷ್ಟು ಅಮರ
ಎಂದರೆ ಬಹುಶಃ ತಪ್ಪಾದೀತು
ಕಣ್ಣನೋಟಕ್ಕೆ ಅಷ್ಟೆ ಆಕಾಶ
ಒಳ ಹೊಕ್ಕರೆ ಬರೀ ಗಾಳಿ......
ಸತೀಶ್ N ಗೌಡ
ಈ ಬಡ ಪ್ರಪಂಚದಲ್ಲಿ......
ಈ ಬಡ ಪ್ರಪಂಚದಲ್ಲಿ......
ನನ್ನ ಹುಡುಗಿಯ
ಅಂದವ ನಾ ಹೊಗಳಲಾರೆ
ಅವಳ ಅಂದಕ್ಕೆ
ಸಾಟಿ ಏನಿಹುದು
ಈ ಬಡ ಪ್ರಪಂಚದಲ್ಲಿ
ನವಿಲಿನ ನಾಟ್ಯವೋ...?
ತಾವರೆಯ ರೆಕ್ಕೆಯೋ..?
ನನ್ನ ಹುಡುಗಿಯ
ಚಿತ್ರವ ನಾ ಬಿಡಿಸಲಾರೆ
ಅವಳ ಚಿತ್ರವ
ಹೋಲುವುದೇನಿಹುದು
ಈ ಬಡ ಪ್ರಪಂಚದಲ್ಲಿ
ದಿಲ್ಲಿಯ ತಾಜ್ ಮಹಲ್ಲೋ...?
ದುಬೈನ ಬುರ್ಜ್ ಖಲಿಫಾನೋ ...?
ಸತೀಶ್ N ಗೌಡ
ನಾನಲ್ಲ....
ನಾನಲ್ಲ....
ಕಲೆಗಾರ ನಾನಲ್ಲ
ಕವಿಗಾರನೂ ನಾನಲ್ಲ
ಭಾವನೆಗಳೊಂದಿಗೆ
ಬದುಕುವುದುನ್ನ ಬಿಟ್ಟರೇ
ಬೇರೆನೂ ನನಗೆ ಗೊತ್ತಿಲ್ಲ
ಕನಸುಗಾರ ನಾನಲ್ಲ
ಕನಸು ಕಾಣುವ ಆಸೆ ನನಗಿಲ್ಲ
ನನಸಾಗದ ಕನಸು
ಗಳನ್ನು ಕಾಣುವ
ಆ ರಾತ್ರಿಗಳು ನನಗೆ ಬೇಕಿಲ್ಲ
ಆಸೆಯೂ ನನಗಿಲ್ಲ
ಆಸ್ತಿಯೂ ನನಗಿಲ್ಲ
ನಿಮ್ಮ ಸ್ನೇಹ ಬಾಗ್ಯ
ಬಿಟ್ಟರೆ ಈ ಜಗದಲ್ಲಿ
ನನಗೆ ಬೇರೆನೂ ಗೊತ್ತಿಲ್ಲ
ಸತೀಶ್ N ಗೌಡ
ಕಲೆಗಾರ ನಾನಲ್ಲ
ಕವಿಗಾರನೂ ನಾನಲ್ಲ
ಭಾವನೆಗಳೊಂದಿಗೆ
ಬದುಕುವುದುನ್ನ ಬಿಟ್ಟರೇ
ಬೇರೆನೂ ನನಗೆ ಗೊತ್ತಿಲ್ಲ
ಕನಸುಗಾರ ನಾನಲ್ಲ
ಕನಸು ಕಾಣುವ ಆಸೆ ನನಗಿಲ್ಲ
ನನಸಾಗದ ಕನಸು
ಗಳನ್ನು ಕಾಣುವ
ಆ ರಾತ್ರಿಗಳು ನನಗೆ ಬೇಕಿಲ್ಲ
ಆಸೆಯೂ ನನಗಿಲ್ಲ
ಆಸ್ತಿಯೂ ನನಗಿಲ್ಲ
ನಿಮ್ಮ ಸ್ನೇಹ ಬಾಗ್ಯ
ಬಿಟ್ಟರೆ ಈ ಜಗದಲ್ಲಿ
ನನಗೆ ಬೇರೆನೂ ಗೊತ್ತಿಲ್ಲ
ಸತೀಶ್ N ಗೌಡ
Thursday, July 8, 2010
ಪ್ರೀತಿ ಎಂದರೆ......
ಪ್ರೀತಿ ಎಂದರೆ....
ಪ್ರೀತಿ ಎಂದರೆ....
ಒಂದು ಹುಡುಗಹುಡುಗಿಗೆ
ಕಣ್ಣು
ಹೊಡೆದಂಗಲ್ಲ
ಅಥವಾ...
ಆಕಾಶ
ಭೂಮಿಗೆ
ಸಿಡಿಲು
ಸಿಡಿಲು
ಬಡಿದಂತಲ್ಲ
ಬದಲಾಗಿ
ಕತ್ತಲೆ
ಮನೆಯೋಳೆಗೂ
ಬೆಳಕು ನೀಡುವ
ದೀಪವಿದ್ದಂತೆ.
ಪ್ರೀತಿಸಿ ನೋಡು
ಕನ್ನಡಿಯೊಳಗೆ
ನೀ ನಿನ್ನ
ಬಿಂಬ
ಕಾಣುವಂತೆ
ಪ್ರೀತಿಯಲ್ಲೂ
ನೀ ನಿನ್ನ
ಪ್ರೀತಿಯ
ಪ್ರತಿಬಿಂಬ
ಕಾಣುತ್ತಿಯ.
ಪ್ರೀತಿ ......!
ಪ್ರೀತಿ ......!
ಮೊದಲ ನೋಟ
ಮೊದಲ ಮಾತು
ಮೊದಲ ಸ್ಪರ್ಶ
ಸಾಕಲ್ಲವೇ ಪ್ರೀತಿ ಹುಟ್ಟಲು ..
ಮೊದಲ ಉಡುಗೊರೆ
ಮೊದಲ ಚುಂಬನ
ಮೊದಲ ಮಿಲನ
ಸಾಕಲ್ಲವೇ ಪ್ರೀತಿ ಬೆಳೆಯಲು ....
ಮೊದಲ ಮುನಿಸು
ಮೊದಲ ತಪ್ಪು
ಮೊದಲ ಜಿಗುಪ್ಸೆ
ಸಾಕಲ್ಲವೇ ಪ್ರೀತಿ ಸಾಯಲು .....
Monday, July 5, 2010
ನಾ ಬಡವನಲ್ಲ
ನಾ ಬಡವನಲ್ಲ
ನನ್ನ ಹೆಂಡತಿಗೆ ಬಂಗಾರದ ಸೀರೆ ಕೊಡಿಸದಿದ್ದರೂ
ಬಣ್ಣ-ಬಣ್ಣದ ಸೀರೆಯನ್ನ
ನಾನೇ ಉಡಿಸಬಲ್ಲೆ- ನಾ ಬಡವನಲ್ಲ
ನನ್ನ ಹೆಂಡತಿಗೆ
ತಾಜ್ ಮಹಲ್ ನಂತ ಮನೆ ಕಟ್ಟದಿದ್ದರೂ
ನನ್ನ ಪುಟ್ಟ ಹೃದಯದಲ್ಲಿ
ನಾನೇ ದೇವತೆಯಾಗಿ ಪೂಜಿಸಬಲ್ಲೆ - ನಾ ಬಡವನಲ್ಲ
ನನ್ನ ಹೆಂಡತಿಗೆ
ಕಾರು- ಸ್ಕೋಟರ್ ಕೊಡಿಸದಿದ್ದರೂ
ಬಣ್ಣ ಬಣ್ಣದ ತೇರಿನಲ್ಲಿ
ನಾನೇ ಕೂರಿಸಿ ಮೆರವಣಿಗೆ ಮಾಡಿಸ ಬಲ್ಲೆ - ನಾ ಬಡವನಲ್ಲ
ಹುಡಗರೇ ಹುಶಾರ್ "ಅಣ್ಣಾಮೇಲ್"( ಬ್ಲಾಕ್ ಮೇಲ್) ಗಳಿದ್ದಾರೆ......
ಹುಡುಗಿಯರಿಗೆ ಒಂದು ಕಿವಿ ಮಾತು .......
ಸಿಕ್ಕ-ಸಿಕ್ಕಾ ,ಕಡೆ -ಕಂಡ -ಕಂಡ ಹುಡುಗರು ನಿಮಗೆ I LOVE U ಹೇಳುತ್ತಿದ್ದಾರೆಯೇ ಅವರಿಗೆಲ್ಲ "ಅಣ್ಣಾ ಮೇಲ್"
ಮಾಡಿ ಇನ್ನೊಮ್ಮೆ ನಿಮ್ಮ ತಂಟೆಗೆ ಬರಲಾರರು ...
ಹುಡಗರೇ ಹುಶಾರ್ "ಅಣ್ಣಾಮೇಲ್"( ಬ್ಲಾಕ್ ಮೇಲ್) ಗಳಿದ್ದಾರೆ......
ಈ ಕಾಲದಲ್ಲಿ 18 ರಿಂದ 22 ರವಯಸ್ಸಿನ ಹುಡುಗಿಯರು ಯಾರಿಗೆತಾನೆ ಇಷ್ಟ ಅಗೊಲ್ಲ ಹೇಳಿ... .? ಅದರಲ್ಲೂ ನಮ್ಮ ಚಿಂದಿ ಚೋರ್ ಹುಡುಗರು ಕೇಳಬೇಕಾ ಕಣ್ಣಿಗೆ ಕಾಣೊ ಹುಡುಗಿಯರಿಗೆಲ್ಲ I LOVE U ಅಂತ ಹೇಳುವಷ್ಟು ವಿಶಾಲ ಹೃದಯದವರು. ಒಂದು ಹುಡುಗಿ ಪರಿಚಯವಾದ ತಕ್ಷಣ ನಿಮ್ಮ ಅಪ್ಪ-ಅಮ್ಮ ಹೇಗಿದಾರೆ ? ನಿನಗೆ ಅಕ್ಕ -ತಂಗಿಯರಿದ್ದಾರ..? ಅಂತ ಮಾತು ಪ್ರಾರಂಬಿಸುವ ಮೂಲಕ ಸ್ನೇಹಿತೆಯರಲ್ಲಿ ಸೋದರ ಭಾವನೆ ಬಿತ್ತುವ, ಅಥಾವ ತನ್ನ ಅಯ್ಕೆಯನ್ನು ಸ್ವತಂತ್ರವಾಗಿಡುವ ತಂತ್ರವಿದು. ಬೆಂದಕಾಳುರು ಎಂಬ ಮಹನಗರದಲ್ಲಿ ಯಾವಗಲೂ ತುದಿ ಬಾಯಿಯಲ್ಲೆ ಇರುವ ಶಬ್ದವೆಂದರೆ "ಮಚ್ಚಾ" . ಈ ಪದ ಎಕ್ ದಮ್ ಸೋದರ ಭಾವನೆ ಮೂಡಿಸುವ ಪದಗಳಲ್ಲಿ ಒಂದು. ಈ ಹುಡುಗರು ಪ್ರಪೋಸ್ ಮಾಡುವ ರೀತಿ ಒಂದೇ ಎರಡೇ ಕಾಲೇಜ್ ಕ್ಯಾಂಪಸ್ , ಬಸ್ ಸ್ಟಾಪ್ ,ಪಾರ್ಕ್ , ಈ ನಡುವೆ ಇಂಟರನೆಟ್ ಚಾಟಿಂಗ್ ಗಳಲ್ಲಿ ಬಲು ನಜೋಕಾಗಿ ಹೇಳಬಲ್ಲರು.
.... ಹೀಗೆ ಹುಡುಗಿಯರ ಹಿಂದೆ ಬೀಳುವ ಮಜ್ನುಗಳಿಂದ ತಪ್ಪಿಸಿಕೊಳ್ಳಲು ಹುಡುಗಿಯರ ಹತ್ತಿರ ಹತ್ತು ಹಲವಾರು ಅಸ್ತ್ರಗಳಿರುತ್ತವೆ . ಒಂದೋ ರಾಖಿಕಟ್ಟಿಬಿಡುವುದು.... ರಾಖಿ ಕಟ್ಟುವ ಅಸ್ತ್ರ ಎಲ್ಲಾ ಸಮಯದಲ್ಲಿ ಉಪಯೋಗವಾಗುವುದಿಲ್ಲ . ಯಾಕೆಂದರೆ ರಾಖಿಕಟ್ಟುಲು ಹೋದ ಪ್ರಸಂಗವನ್ನೆ ಪ್ರಪೋಸ್ ಮಾಡಲು USE ಮಾಡಿಕೊಂಡ ಪಡ್ಡೆ ಹುಡುಗರ ದಂಡೇ ಇದ್ದಾರೆ. ಹಿಗಾಗಿ ರಾಖಿಕಟ್ಟುವ ವಿಷಯವನ್ನು ಬಿಟ್ಟು ಹುಡುಗಿಯರು ಅಯ್ದುಕೊಂಡ ಮತ್ತೊಂದು ಅಸ್ತ್ರವೆಂದರೆ . ಪರಿಚಯವಾದ ಮೊದಲ ನೋಟದಲ್ಲೆ "ಅಣ್ಣ" ಎಂದುಬಿಡುವುದು, ನಂತರ ಕಂಡು-ಕಂಡಲ್ಲಿ ಅಣ್ಣ ಎಂದು ತನ್ನ ಗೆಳತಿಯರಿಗೆ ತಾನೆ ಪರಿಚಯ ಮಾಡಿಕೊಡುವುದು. ಹೀಗೆ ಹೇಳಿದ ಮೇಲೆ ಹುಡುಗ ಬಾಯಿ ಬಿಡೊಹಾಗಿಲ್ಲ ಅಂತಹ "ಅಣ್ಣ ಮೇಲ್" (ಬ್ಲಾಕಮೇಲ್) ತಂತ್ರವಿದು . ಇದನ್ನೆಲ್ಲ ಮೀರಿ ಹೊರಟರೆ "ಪೋಲಿ" ಅನ್ನೊ ಪಟ್ಟ ಕಟ್ಟಿಬಿಡುತ್ತಾರೆ . ಇದರಿಂದ ಇದ್ದ ಹತ್ತಾರು ಹುಡುಗಿಯರ ಸಂಪರ್ಕ ತಪ್ಪಿ ಹೋಗುತ್ತದೆ. ಆ ಹುಡುಗನಿಗೆ ಮುಂದೆ ಉಳಿಯೋ ಆಯ್ಕೆ ಈ ಮೋದಲು ಇದೇ ತಂತ್ರಕ್ಕೆ ಬಲಿಯಾದ ಹತ್ತು ತಂಗಿಯರ ಜೊತೆ ಸೇರಿ ಹನ್ನೊಂದನೆ ಹುಡುಗಿಗೆ ಸ್ಕೇಚ್ ಹಾಕುವುದು
ಇದೇನೆ ಇರಲಿ ಹುಡುಗಿಯರ ಬತ್ತಳಿಕೆಯಲ್ಲಿ ಇಂತದ್ದೆ ಅಸ್ತ್ರವಿರುತ್ತೆ ಅಂತ ಹೇಳೊಕ್ಕೆ ಅಗೋಲ್ಲ ಬಿಡಿ . ನಾನು ನನ್ನ ಕಾಲೇಜ್ ನಲ್ಲಿ ನೆಡದ ಘಟನೆಯನ್ನ ನಿಮಗೆ ಹೇಳುತ್ತೆನೆ. ನಾನು ನನ್ನ ಚಿಂದಿ ಚೋರ್ ಗೆಳೆಯರ ಜೋತೆ ಸೇರಿ ನಾಟಕ ಮಾಡಬೇಕೆಂದು ತಿರ್ಮಾನಿಸಿದೆವು . ನನ್ನನ್ನ ಆ ನಾಟಕದ ಸೋತ್ರದಾರಿಯನ್ನಾಗಿ ಮಾಡಿದರು. ಎಲ್ಲ ಪಾತ್ರಗಳಿಗೆ ಜನ ಸಿಕ್ಕರೋ ಹಿರೋಯಿನ್ ಅಪ್ಪನ ಪಾತ್ರ ಯಾರು ಮಾಡಲು ಸಿದ್ದವಿರಲಿಲ್ಲ ಯಾರನ್ನ ಕೇಳಿದರೋ " ನೋಡು ಮಗಾ ನೀನ್ ಎನ್ ಬೇಕಾದ್ರು ಹೇಳು ಅದೋಂದು ಪಾತ್ರ ಮಾತ್ರ ಮಾಡೊಲ್ಲ " ಅಂತ ಖಾಡಾ ಖಂಡಿತವಾಗಿ ಹೇಳೊರು . ಕಡೆಗೆ ಹೀರೋಯಿನ್ ಅಪ್ಪನ ಪಾತ್ರ ನಾನೆ ಮಾಡಬೇಕಾಯಿತು . ಸರಿ ಅಂತ ನಾನೆ ಒಪ್ಪಿಕೊಂಡೆ. ಸರಿ ನಾಟಕದ ಪ್ರಾಕ್ಟೀಸ್ ಶುರುವಾಯಿತು ಹೀರೊಯಿನ್ ನನ್ನನ್ನ "ಡ್ಯಾಡಿ.. ಡ್ಯಾಡಿ "ಅಂತ ಕರೆಯುತ್ತಿದ್ದಳು ಇದನ್ನು ನೋಡಿ ಮಿಕ್ಕ ನನ್ನೆಲ್ಲ ಫ್ರೆಂಡ್ಸ್(ಹುಡುಗಿಯರು ಮಾತ್ರ ) ಡ್ಯಾಡಿ.. ಡ್ಯಾಡಿ.. ಅಂತ ಕರೆಯೊಕೆ ಶುರುಮಾಡಿದರು .ಇದೇನಪ್ಪಾ ಕರ್ಮ ಗಣಪತಿಯನ್ನ ಮಾಡೊಕೆ ಹೋಗಿ ಅವರಪ್ಪನ್ನ ಮಾಡಿದ್ನಲ್ಲಾ..! ಅಂತ ಮನಸ್ಸಿನಲ್ಲೆ ಅಂದುಕೊಂಡು, ಇರಲಿ ನಾಟಕ ಮುಗಿಯೋತನಕ ಅಲ್ವಾ ಅಂತ ಸಹಿಸಿಕೊಂಡೆ.
ನಾಟಕ ಮುಗಿಯಿತು . ಒಳ್ಳೊಳ್ಳೆ ಪ್ರಶಂಸೆ ಗಳ ಸುರಿಮಾಳೆಯೇ ಬಂತು ಇಡೀ ಕಾಲೇಜ್ ನನ್ನ ಬಗ್ಗೆ ಮಾತಾಡೋಕೆ ಶುರುಮಾಡಿದರು ಮಾರನೆಯ ದಿನ ಕಾಲೇಜ್ ಕ್ಯಾಂಪಸ್ ಗೆ ಬರ್ತೀನಿ ..... ನನ್ನ ಪ್ರೆಂಡ್ಸ್ "ಏನ್ ಮಾಮ್ ನಾಟಕ ಪ್ರೈಜ್ ಹೊಡಿತಂತೆ " ಅನ್ನೋದೆ ನಾನು ಕರೆಂಟ್ ಹೊಡದ ಕಾಗೆ ತರ ಆಗಿಹೋದೆ ಶಿವ.. ಶಿವ . ಒಂದು ಕಡೆ ಈ ಹುಡುಗಿಯರು "ಡ್ಯಾಡಿ.. ಡ್ಯಾಡಿ" ಅನ್ನೋದು ಇನ್ನೊಂದು ಕಡೆ ಆ ಹುಡುಗಿಯರ ಎದುರಲ್ಲೆ ಹುಡುಗರು "ಮಾಮ್... ಮಾಮ್ " ಅನ್ನೊದು .... ಹಬ್ಬಾಬ್ಬ.. ನನಗೆ ಸಿಟ್ಟು ಬಂದು ಏಯ್ ಕೋತಿಗಳ ಮೂದಲು ನಿಮ್ಮ ಅತ್ತೆನಾ ಹುಡುಕಿಕೊಂಡು ಬನ್ನಿ . ಅಮೇಲೆ ಬೇಕಾದ್ರೆ ಮಾಮ್ ಅನ್ನಿ ಅಂದೆ . ಅವತ್ತೊ ಹೋದವರು ಇವತ್ತಿಗೊ ಬಂದಿಲ್ಲ....

SATISH N GOWDA
satishgowdagowda@gmail.com
Thursday, July 1, 2010
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.
ಎಲ್ಲಿ ನೋಡು ದೀಪ
ಎಲ್ಲಿ ನೋಡು ದೀಪದಿಂದ
ಅಲಂಕೃತಗೊಂಡ ಆ ದೇವರು
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.
ಎಲ್ಲಿ ನೋಡು ಹೂವು
ಎಲ್ಲಿ ನೋಡು ಹೂವಿನಿಂದ
ಅಲಂಕೃತಗೊಂಡ ಆ ದೇವರು
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.
ಎಲ್ಲಿ ನೋಡು ಜನರು
ಎಲ್ಲಿ ನೋಡು ಜನರಿಂದ
ಅಲಂಕೃತಗೊಂಡ ಆ ಬೋಗ ನಂದೀಶ್ವರ
ನನ್ನನ್ನು ಕರೆಯಲಿಲ್ಲ ನೀ ಬಾರ ಎಂದು.
ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?
ಓ ಹುಡುಗಿಯರೇ ನೀವೆಷ್ಟು ಒಳ್ಳೆಯವರು...?
ನಿದ್ರೆಯಲ್ಲಿರುವವನ
ಕನಸನ್ನು ಸದ್ದಿಲ್ಲದೆ
ಕದಿಯುವ ನೀವು
ಎಷ್ಟು ಒಳ್ಳೆಯವರು...?
ಪ್ರೀತಿಸುವವನ
ಮನಸ್ಸನ್ನು ನೊಯಿಸದೇ
ಕದಿಯುವ ನೀವು
ಎಷ್ಟು ಒಳ್ಳೆಯವರು...?
ಕಷ್ಟ ಪಡುವವನ
ಆಸೆ ಯನ್ನು ಇಷ್ಟ ಪಟ್ಟು
ಕದಿಯುವ ನೀವು
ಎಷ್ಟು ಒಳ್ಳೆಯವರು...?
ನನ್ನ ಪ್ರೇಶ್ನೆಗೆ ಉತ್ತರಿಸಿ
ಓ ಮುದ್ದು ಮುಖದ
ಹುಡುಗಿಯರೇ ನೀವು
ಎಷ್ಟು ಒಳ್ಳೆಯವರು...?
ನಿದ್ರೆಯಲ್ಲಿರುವವನ
ಕನಸನ್ನು ಸದ್ದಿಲ್ಲದೆ
ಕದಿಯುವ ನೀವು
ಎಷ್ಟು ಒಳ್ಳೆಯವರು...?
ಪ್ರೀತಿಸುವವನ
ಮನಸ್ಸನ್ನು ನೊಯಿಸದೇ
ಕದಿಯುವ ನೀವು
ಎಷ್ಟು ಒಳ್ಳೆಯವರು...?
ಕಷ್ಟ ಪಡುವವನ
ಆಸೆ ಯನ್ನು ಇಷ್ಟ ಪಟ್ಟು
ಕದಿಯುವ ನೀವು
ಎಷ್ಟು ಒಳ್ಳೆಯವರು...?
ನನ್ನ ಪ್ರೇಶ್ನೆಗೆ ಉತ್ತರಿಸಿ
ಓ ಮುದ್ದು ಮುಖದ
ಹುಡುಗಿಯರೇ ನೀವು
ಎಷ್ಟು ಒಳ್ಳೆಯವರು...?
SATISH N GOWDA
Wednesday, June 30, 2010
Subscribe to:
Posts (Atom)