Monday, November 1, 2021
Happy sir wee miss u so much
Appu we miss u so much....
Thursday, July 23, 2015
ತಿರುಪತಿಯಲ್ಲಿನ ಶ್ರೀನಿವಾಸನ ಮೂರ್ತಿ.
ತಿರುಪತಿಯಲ್ಲಿನ ಶ್ರೀನಿವಾಸನ ಮೂರ್ತಿಯ
ವಿಸ್ಮಯಗಳು:-
1] ಶ್ರೀನಿವಾಸನ ಪೂರ್ತಿ ವಿಗ್ರಹ
ಸೊಪೂರ್ಣವಾಗಿ ಸ್ವಯ೦
ಉದ್ಭವಮೂರ್ತಿ.
ಇದನ್ನು ಯಾರೂ ಸ್ಥಾಪನೆಮಾಡಿಲ್ಲ.
ಸ್ವಯ೦ ಉದ್ಭವ ಮೂರ್ತಿಯಾಗಿದ್ದರೂ ಅದರ
ಪ್ರತಿಯೊ೦ದು ಅ೦ಗಾಗಳ ಗಾತ್ರ
ಪ್ರಮಾಣಬದ್ಧವಾಗಿದೆ.!!
2] ಈ ರೀತಿಯಾದ ಶ್ರೀನಿವಾಸನ ವಿಗ್ರಹ
ಜಗತ್ತಿನ ಬೇರೆಲ್ಲೂ ಇಲ್ಲ. ಜಗತ್ತಿನಲ್ಲಿರುವ
ಈ ರೀತಿಯ ಏಕಮಾತ್ರ ವೆ೦ಕಟೇಶ್ವರನ ವಿಗ್ರಹ
ಇದು.
3] ಕಲ್ಲುಗಳನ್ನು ಕೂಡಾ ಕರಗಿಸುವಷ್ಟು
ಶಕ್ತಿಶಾಲಿಯಾಗಿರುವ ಪಚ್ಚ ಕರ್ಪೂರವನ್ನು
ಮೂರ್ತಿಗೆ ಬಳಿದು, ಸಾಕಷ್ಟು ಸಮಯದ ನ೦ತರ
ಮೂರ್ತಿಯನ್ನು ತೊಳೆದು ಅಭಿಷೇಕ
ಮಾಡಲಾಗುತ್ತದೆ. ಹೀಗೆ ಶತಮಾನಗಳಿ೦ದ
ಮೂರ್ತಿಗೆ ಅದರಿ೦ದ ಅಭಿಷೇಕ ಮಾಡುತ್ತಾ
ಬ೦ದಿದ್ದರೂ, ಮೂರ್ತಿಯು ಒ೦ದಿಷ್ಟು
ಹೊಳಪನ್ನು ಕೂಡಾ ಕಳೆದುಕೊ೦ಡಿಲ್ಲ,
ಸ್ವಲ್ಪವೂ ಭಗ್ನವಾಗಿಲ್ಲ. ಶತಮಾನಗಳ ಹಿ೦ದೆ
ಹೇಗಿತ್ತೋ ಈಗಲೂ ಹಾಗೆಯೇ ಇದೆ.
4] ಬೆಳಿಗ್ಗೆ ಮೂರ್ತಿಗೆ ನೀರು & ಹಸುವಿನ
ಹಾಲಿನಿ೦ದ ಅಭಿಷೇಕ ಮಾಡಿದ ನ೦ತರ,
ಮೂರ್ತಿಯ ಮೇಲೆ ಬೆವರಿನ ಹನಿಗಳು
ಮೂಡುತ್ತವೆ.!! ಅವುಗಳನ್ನು ಸ್ವಚ್ಛಗೊಳಿಸಿ
ನ೦ತರ ಅಲ೦ಕಾರ ಮಾಡಲಾಗುತ್ತದೆ.
5] ಅನೇಕ ಜನ ಅರ್ಚಕರಿಗೆ ಮೂರ್ತಿಯ
ಪಾದವನ್ನು ಸ್ಪರ್ಶಿಸುವಾಗ, ಜೀವ೦ತ
ಪಾದವನ್ನು ಸ್ಪರ್ಶಿಸಿದ ಅನುಭವಗಳಾಗಿವೆ.
6] ಪುರಾಣಗಳ ಪ್ರಕಾರ ಈ ವಿಗ್ರಹ
ದೇವತೆಗಳಿ೦ದಾಗಲಿ ಅಥವಾ ಶಿಲೆಯಿ೦ದಾಗಲಿ
ಮಾಡಿದ್ದಲ್ಲ.ಅದು ಜನರ ಕಣ್ಣಿಗೆ ಶಿಲೆಯ೦ತೆ
ಕಾಣುತ್ತದೆ ಅಷ್ಟೇ.
7] ತಜ್ನರ ಪ್ರಕಾರವೂ ಈ ವಿಗ್ರಹ ಭೂಮಿಯ
ಮೇಲಿನ ಶಿಲೆಯಿ೦ದ ಮಾಡಲ್ಪಟ್ಟಿದ್ದಲ್ಲ. ಅವರ
ಪ್ರಕಾರ ಇದು ಭೂಮಿಯ ತಳಭಾಗದಲ್ಲಿನ
ಒತ್ತಡದಿ೦ದು೦ಟಾದ ಶಿಲೆಯಿರಬಹುದು ಅಥವಾ
ಇದು ಅನ್ಯಗ್ರಹದಿ೦ದ ಬ೦ದ
ಶಿಲೆಯಾಗಿರಬಹುದು.!!
8] ಗ್ರ೦ಥಗಳ ಪ್ರಕಾರ ಈ ವಿಗ್ರಹ ಯುಗಗಳ
ಹಿ೦ದೆಯೇ ಉದ್ಭವಿಸಿದ್ದು ಎ೦ದಿದ್ದರೆದಿದ್ದರೆ,
ಆಧುನಿಕ ಅಧ್ಯಯನಗಳ ಪ್ರಕಾರ ಈ ವಿಗ್ರಹ
ಎಷ್ಟು ಹಳೆಯದ್ದು ಎ೦ಬುದಕ್ಕೆ ಯಾವುದೇ
ಖಚಿತ ಆಧಾರಗಳಿಲ್ಲ.
9] ರಾತ್ರಿಯ ಸಮಯದಲ್ಲಿ ಅಥವಾ ನೈವೇದ್ಯ
ಸಮರ್ಪಣೆಗಾಗಿ ಗರ್ಭಗುಡಿಯ ಬಾಗಿಲು
ಮುಚ್ಚಿದ ಕೆಲ ಸ೦ದರ್ಭಗಳಲ್ಲಿ, ಒ೦ದು ಬೆಕ್ಕು
ಗರ್ಭಗುಡಿಯಿ೦ದ ನಿಗೂಢವಾಗಿ
ಹೊರಬರುತ್ತದೆ. ಅದು ಬರುವ ದಾರಿಗಳಾಗಲಿ
ಅಥವಾ ಹೇಗೆ ಪ್ರತ್ಯಕ್ಷವಾಗುತ್ತದೆ
ಎನ್ನುವುದಾಗಲಿ ಎಲ್ಲವೂ ನಿಗೂಢ.!!
ವಿಸ್ಮಯಗಳು:-
1] ಶ್ರೀನಿವಾಸನ ಪೂರ್ತಿ ವಿಗ್ರಹ
ಸೊಪೂರ್ಣವಾಗಿ ಸ್ವಯ೦
ಉದ್ಭವಮೂರ್ತಿ.
ಇದನ್ನು ಯಾರೂ ಸ್ಥಾಪನೆಮಾಡಿಲ್ಲ.
ಸ್ವಯ೦ ಉದ್ಭವ ಮೂರ್ತಿಯಾಗಿದ್ದರೂ ಅದರ
ಪ್ರತಿಯೊ೦ದು ಅ೦ಗಾಗಳ ಗಾತ್ರ
ಪ್ರಮಾಣಬದ್ಧವಾಗಿದೆ.!!
2] ಈ ರೀತಿಯಾದ ಶ್ರೀನಿವಾಸನ ವಿಗ್ರಹ
ಜಗತ್ತಿನ ಬೇರೆಲ್ಲೂ ಇಲ್ಲ. ಜಗತ್ತಿನಲ್ಲಿರುವ
ಈ ರೀತಿಯ ಏಕಮಾತ್ರ ವೆ೦ಕಟೇಶ್ವರನ ವಿಗ್ರಹ
ಇದು.
3] ಕಲ್ಲುಗಳನ್ನು ಕೂಡಾ ಕರಗಿಸುವಷ್ಟು
ಶಕ್ತಿಶಾಲಿಯಾಗಿರುವ ಪಚ್ಚ ಕರ್ಪೂರವನ್ನು
ಮೂರ್ತಿಗೆ ಬಳಿದು, ಸಾಕಷ್ಟು ಸಮಯದ ನ೦ತರ
ಮೂರ್ತಿಯನ್ನು ತೊಳೆದು ಅಭಿಷೇಕ
ಮಾಡಲಾಗುತ್ತದೆ. ಹೀಗೆ ಶತಮಾನಗಳಿ೦ದ
ಮೂರ್ತಿಗೆ ಅದರಿ೦ದ ಅಭಿಷೇಕ ಮಾಡುತ್ತಾ
ಬ೦ದಿದ್ದರೂ, ಮೂರ್ತಿಯು ಒ೦ದಿಷ್ಟು
ಹೊಳಪನ್ನು ಕೂಡಾ ಕಳೆದುಕೊ೦ಡಿಲ್ಲ,
ಸ್ವಲ್ಪವೂ ಭಗ್ನವಾಗಿಲ್ಲ. ಶತಮಾನಗಳ ಹಿ೦ದೆ
ಹೇಗಿತ್ತೋ ಈಗಲೂ ಹಾಗೆಯೇ ಇದೆ.
4] ಬೆಳಿಗ್ಗೆ ಮೂರ್ತಿಗೆ ನೀರು & ಹಸುವಿನ
ಹಾಲಿನಿ೦ದ ಅಭಿಷೇಕ ಮಾಡಿದ ನ೦ತರ,
ಮೂರ್ತಿಯ ಮೇಲೆ ಬೆವರಿನ ಹನಿಗಳು
ಮೂಡುತ್ತವೆ.!! ಅವುಗಳನ್ನು ಸ್ವಚ್ಛಗೊಳಿಸಿ
ನ೦ತರ ಅಲ೦ಕಾರ ಮಾಡಲಾಗುತ್ತದೆ.
5] ಅನೇಕ ಜನ ಅರ್ಚಕರಿಗೆ ಮೂರ್ತಿಯ
ಪಾದವನ್ನು ಸ್ಪರ್ಶಿಸುವಾಗ, ಜೀವ೦ತ
ಪಾದವನ್ನು ಸ್ಪರ್ಶಿಸಿದ ಅನುಭವಗಳಾಗಿವೆ.
6] ಪುರಾಣಗಳ ಪ್ರಕಾರ ಈ ವಿಗ್ರಹ
ದೇವತೆಗಳಿ೦ದಾಗಲಿ ಅಥವಾ ಶಿಲೆಯಿ೦ದಾಗಲಿ
ಮಾಡಿದ್ದಲ್ಲ.ಅದು ಜನರ ಕಣ್ಣಿಗೆ ಶಿಲೆಯ೦ತೆ
ಕಾಣುತ್ತದೆ ಅಷ್ಟೇ.
7] ತಜ್ನರ ಪ್ರಕಾರವೂ ಈ ವಿಗ್ರಹ ಭೂಮಿಯ
ಮೇಲಿನ ಶಿಲೆಯಿ೦ದ ಮಾಡಲ್ಪಟ್ಟಿದ್ದಲ್ಲ. ಅವರ
ಪ್ರಕಾರ ಇದು ಭೂಮಿಯ ತಳಭಾಗದಲ್ಲಿನ
ಒತ್ತಡದಿ೦ದು೦ಟಾದ ಶಿಲೆಯಿರಬಹುದು ಅಥವಾ
ಇದು ಅನ್ಯಗ್ರಹದಿ೦ದ ಬ೦ದ
ಶಿಲೆಯಾಗಿರಬಹುದು.!!
8] ಗ್ರ೦ಥಗಳ ಪ್ರಕಾರ ಈ ವಿಗ್ರಹ ಯುಗಗಳ
ಹಿ೦ದೆಯೇ ಉದ್ಭವಿಸಿದ್ದು ಎ೦ದಿದ್ದರೆದಿದ್ದರೆ,
ಆಧುನಿಕ ಅಧ್ಯಯನಗಳ ಪ್ರಕಾರ ಈ ವಿಗ್ರಹ
ಎಷ್ಟು ಹಳೆಯದ್ದು ಎ೦ಬುದಕ್ಕೆ ಯಾವುದೇ
ಖಚಿತ ಆಧಾರಗಳಿಲ್ಲ.
9] ರಾತ್ರಿಯ ಸಮಯದಲ್ಲಿ ಅಥವಾ ನೈವೇದ್ಯ
ಸಮರ್ಪಣೆಗಾಗಿ ಗರ್ಭಗುಡಿಯ ಬಾಗಿಲು
ಮುಚ್ಚಿದ ಕೆಲ ಸ೦ದರ್ಭಗಳಲ್ಲಿ, ಒ೦ದು ಬೆಕ್ಕು
ಗರ್ಭಗುಡಿಯಿ೦ದ ನಿಗೂಢವಾಗಿ
ಹೊರಬರುತ್ತದೆ. ಅದು ಬರುವ ದಾರಿಗಳಾಗಲಿ
ಅಥವಾ ಹೇಗೆ ಪ್ರತ್ಯಕ್ಷವಾಗುತ್ತದೆ
ಎನ್ನುವುದಾಗಲಿ ಎಲ್ಲವೂ ನಿಗೂಢ.!!
Saturday, July 11, 2015
AGE OF SONG
AGE OF SONG
1 to 6year👶
Laali laali jojo..
7 to 13👦
Twinkle Twinkle
Little Star..
14 to 25👱
Preetiyalli
Iro Sukha..
26 to 40👨
Noorondu
Nenapu..
41 to 50..👲
Yarige Beku
E Loka..
51 to 70👳
Yellige Payana..
Yaavudo Daari..
Above 70👴
No Songs,
Only Music🎶🎶
Danka Naka,
Naka Naka..
Dank Nakaa..... 😃😃
AGE OF SONG
SATISH N GOWDA
1 to 6year👶
Laali laali jojo..
7 to 13👦
Twinkle Twinkle
Little Star..
14 to 25👱
Preetiyalli
Iro Sukha..
26 to 40👨
Noorondu
Nenapu..
41 to 50..👲
Yarige Beku
E Loka..
51 to 70👳
Yellige Payana..
Yaavudo Daari..
Above 70👴
No Songs,
Only Music🎶🎶
Danka Naka,
Naka Naka..
Dank Nakaa..... 😃😃
AGE OF SONG
SATISH N GOWDA
Monday, December 27, 2010
ಅಂದೊಂದಿತ್ತು "ಅಮ್ಮನ ಸೀರೆ "
ಅಂದೊಂದಿತ್ತು "ಅಮ್ಮನ ಸೀರೆ "
ಹೊಡೆದ ಹಣೆ ರಕ್ತವನ್ನ
ಓರೆಸುವ ಕರವಸ್ತ್ರವಾಗಿತ್ತು,
ಮುರಿದ ಕಾಲ ಕಟ್ಟುವ
ಮೊದಲ ಬಟ್ಟೆಯೂ ಅದಾಗಿತ್ತು .
ಧಣಿದು ಬಂದ ಬೆವರಿಗೆ
ಆಸರೆಯಾಗಿತ್ತು "ಅಮ್ಮನ ಸೀರೆ "
ಕೊಡಿಟ್ಟ ಪುಡಿಗಾಸಿನ
ಪೆಟ್ಟಿಗೆಯಾಗಿತ್ತು"ಅಮ್ಮನ ಸೀರೆ "
ನೆನೆದು ಬಂದ ತಲೆಯ
ಒರೆಸುತ್ತಿತ್ತು "ಅಮ್ಮನ ಸೀರೆ "
ಚಳಿಗಾಲದಲ್ಲಿ ಬೆಚ್ಚನೆಯ
ಕಂಬಳಿಯಾಗಿತ್ತು "ಅಮ್ಮನ ಸೀರೆ "
ಹೊತ್ತು ತರುವ ಮಡಿಕೆಗೆ
ಒತ್ತಡಿಯಾಗಿತ್ತು "ಅಮ್ಮನ ಸೀರೆ "
ಕಿತ್ತು ತಿನ್ನುವ ದೇಹಕ್ಕೆ
ರಕ್ಷಣೆಯಾಗಿತ್ತು "ಅಮ್ಮನ ಸೀರೆ "
ಇಂದಿನ ನಾರಿಗೆ ಸೀರೆ ಎಲ್ಲಿದೆ
ತುಂಡು Jeens Jacket ಗಳ ಮೋಹ ಹೆಚ್ಚಾಗಿದೆ
ಇನ್ನೆಲ್ಲಿದೆ ಕೈ ವರೆಸುವ ಕರವಸ್ತ್ರ .
ಮುರಿದ ಕಾಲಿಗೆ ಕಟ್ಟುವ ಬಟ್ಟೆ .
"ಅಮ್ಮನ ಸೀರೆ "
SATISH N GOWDA
ಅಂದೊಂದಿತ್ತು "ಅಮ್ಮನ ಸೀರೆ "
ಅಂದೊಂದಿತ್ತು "ಅಮ್ಮನ ಸೀರೆ "
"ಅಮ್ಮನ ಸೀರೆ "
"ಅಮ್ಮನ ಸೀರೆ "
Thursday, December 23, 2010
( ನಿಜವಾದ ಪ್ರೇಮಿಗಳಿಗೆ ಮಾತ್ರ )
ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು
ಈ ಕಥೆಗಾರನ ಒಂದು ಪ್ರೇಮ ಸಂದೇಶ
ಪ್ರೇಮಿಗಳೆ ಎಚ್ಚರ !
ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು
ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು
ಪ್ರೀತಿ ಅಂದರೆ ಏನು....???
ಪ್ರೀತಿಲಿ ಏನಿದೆ...???
ಅದು ಪ್ರೀತ್ಸೊರಿಗೆ ಮಾತ್ರ ಗೊತ್ತು.ಪ್ರೀತಿ ಅಂದರೆ ಒಂದು ಚಟ.ಸಿಗರೇಟ್ ಸೇದೋದು ಬಿಡು ಅಂದ್ರೆ ಬಿಡಬಹುದು, ಕುಡಿಯೋದು ಬಿಡೋ ಅಂದ್ರೆ ಬಿಡಬಹುದು.ಆದ್ರೆ ಬಿಡಿಸಲಾಗದ ಒಂದೇ ಒಂದು ಚಟ ಅಂದ್ರೆ ಪ್ರೀತಿನೇ. ಪ್ರೀತಿಲಿ ಕಷ್ಟ-ಸುಖ, ನೋವಿ-ನಲಿವು ಎಲ್ಲಾ ಇದೇ ಆದರೆ ಎಷ್ಟೇ ನೋವಿದ್ರು ಅದನ್ನು ಮರೆಸುವಂತಹ ಶಕ್ತಿ ಪ್ರೀತಿಲಿದೆ. ಪ್ರೀತಿಗೊಸ್ಕರ ಯಾರ್ಯಾರೋ ಏನೇನೋ ಸಾಧನೆ ಮಾಡ್ತಾರೆ. ಪ್ರೀತಿಗಾಗಿ ಕೈ ಕುಯ್ದುಕೊಂತಾರೆ ಅಪ್ಪ-ಅಮ್ಮನ್ನು ಹೆದರಿಸಿ ಮದುವೆನೂ ಆಗ್ತಾರೆ ಇನ್ನೂ ಸ್ವಲ್ಪ ಜನ ಮುಟ್ಟಾಳರು ಪ್ರಾಣನೇ ಕಳ್ಕೊಳ್ತಾರೆ.ಸತ್ತು ಸಾಧಿಸೋದು ಪ್ರೀತಿ ಅಲ್ಲ ಇದ್ದು ಜಯಿಸೋದೆ ಪ್ರೀತಿ. ಪ್ರೀತಿಲಿ ಮೇಲು ಕೀಳೆಂಬ ಜಾತಿ-ಭೇಧವಿಲ್ಲ,ಬಡವ-ಶ್ರೀ ಮಂತನೆಂಬ ಭೇಧವಿಲ್ಲ.ಎಷ್ಟೋ ತಂದೆ-ತಾಯಿಗಳು ಮಕ್ಕಳ ಭವಿಷ್ಯ ನೋಡದೇ ಬರ್ಈ ಆಸ್ತಿ-ಅಂತಸ್ತು ಎಂಬ ವ್ಯಾಮೋಹದಿಂದ ಪ್ರೇಮಿಗಳನ್ನು ದೂರ ಮಾಡ್ತಾರೆ. ಈ ಕಾಲದಲ್ಲಿ ಹುಡುಗರಿಂದ ಮೋಸ ಹೋಗೋ ಹುಡುಗಿಯರಿಗಿಂತ ಹುಡ್ಗೀರಿಂದ ಮೋಸ ಹೋಗೋ ಹುಡುಗರ್ಏ ಜಾಸ್ತಿ.ಈ ಹುಡ್ಗೀರು ಪ್ರೀತಿ ಮಾಡಬೇಕಾದ್ರೆ ಯಾರ ಮಾತು ಕೇಳಲ್ಲ. ಮದುವೆ ಆಗಬೇಕಾದ್ರೆ ಅಪ್ಪ-ಅಮ್ಮನ ನೆನಪು ಬರುತ್ತೆ.ಮನಸ್ಸು ಕೊಟ್ಟಿದ್ದು ನಾನು ಮರೆತು ಮದುವೆಯಾದೇಯೇನು....???
ಮರೆಯ ಬೇಡವೇ ಹೃದಯಾ ಈ ನನ್ನ ಪ್ರೀತಿಯ
ಕರೆಯ ಬೇಡವೇ ಹೃದಯಾ ಈ ನನ್ನ ಪ್ರಾಣವ !!!
ಹಸಿವೆಂದರೆ ಗೊತ್ತಿಲ್ಲ
ನಿದಿರೇನು ಬರೋದಿಲ್ಲ
ಹಗಲಿರುಳು ತಿಳಿದಿಲ್ಲ
ಹಾಳಾದರು ಪ್ರೀತೀಲ್ ಬಿದ್ದೋರೆಲ್ಲ !!!
ಹುಡುಗರು ಪ್ರೀತಿ ಕೇಳಿದರೇ....
ಹುಡುಗಿಯರು ಪ್ರಾಣವನ್ನೇ ಕೇಳ್ತಾರೆ !!!
ಹಕ್ಕಿ ಮರಿಗಾಗಿ ಮರದಲ್ಲಿ ಗೂಡು ಕಟ್ಟಿದರೆ...
ಹುಡುಗರು ಹುಡುಗಿಯರಿಗಾಗಿ ಮನದಲ್ಲಿ ಗೂಡು ಕಟ್ತಾರೆ !!!
ಪ್ರೀತಿಸೋ ಹುಡುಗರ್ಏ ಇಗೋ ನನ್ನ ಪ್ರೇಮ ಸಂದೇಶ
ನೀವು ಪ್ರೀತಿಸಿದ ಹುಡುಗಿ ನಿಮಗೆ ಸಿಗಲ್ಲಿಲ್ಲ ಅಂತ ಬೇಜಾರು ಮಾಡ್ಕೋಬೇಡಿ ನಿಮ್ಮನ್ನು ಪ್ರೀತಿಸುವ ಹುಡುಗಿ ನಿಮಗೆ ಸಿಕ್ಕೇ ಸಿಕ್ತಾಳೆ.ನಾವು ಪ್ರೀತಿಸಿದ ಹುಡುಗಿ ನನ್ನೇ ಲವ್ ಮಾಡಬೇಕು, ನನ್ನನ್ನೇ ಮದುವೆಯಾಗಬೇಕು ನನ್ ಜೊತೇನೆ ಬಾಳಬೇಕು ಅಂದ್ರೆ ಅದು ಪ್ರೀತಿನೇ ಅಲ್ಲ ಬರ್ಈ ಸ್ವಾರ್ಥ !!! ನಾವು ಪ್ರೀತಿಸಿದ ಹುಡುಗಿ ಎಲ್ಲೇ ಇದ್ರು ಹೇಗೇ ಇದ್ರೂ ಚೆನ್ನಾಗಿ ಇರಬೇಕು ಅನ್ನೋದೇ ನಿಜವಾದ ಪ್ರೀತಿ. ನೀವು ಇಷ್ಟು ತ್ಯಾಗ ಮಾಡಿ ಸಾಕು ನಿಮ್ಮ ಜೀವನವೇ ಸಾರ್ಥಕ ಈ ಪ್ರಪಂಚದಲ್ಲಿ ಸಾವಿರಾರು ಜೀವಿಗಳು ಅದರಲ್ಲಿ ಯಾರ ಪ್ರೀತಿ ಯಾರಿಗೋ....ಯಾರ ಹೃದಯ ಇನ್ಯಾರಿಗೋ....
ಹಾಗೇನೆ ಪ್ರೀತಿಸೋ ಹುಡುಗಿಯರೇ ನಿಮಗೂ ನನ್ನ ಪ್ರೇಮ ಸಂದೇಶ
ಯಾರಾದರೂ ಹುಡುಗರು ಬಂದು ನಿಮಗೆ ಪ್ರಪೋಸ್ ಮಾಡಿದರೆ ನಿಮಗೆ ಇಷ್ಟ ಇದ್ರೆ ಪ್ರೀತಿ ಮಾಡಿ ಇಲ್ಲ ಅಂದ್ರೆ ಆಗೋಲ್ಲ ಅಂತ ನೇರವಾಗಿ ಹೇಳಿ ಪ್ಲೀಸ್ ಸುಮ್ನೆ ಪ್ರಾಣ ಹಿಂಡಬೇಡಿ ಯಾಕಂದ್ರೆ ಹುಡುಗ್ರು ನಿಮ್ಮನ್ನು ಹೃದಯಕ್ಕೆ ಕೊನೆಗೆ ದೇವತೆಗೂ ವರ್ಣನೆ ಮಾಡಿ ಹೋಲಿಸುತ್ತಾರೆ ಜನ್ಮ ಕೊಟ್ಟ ತಂದೆ-ತಾಯಿಗೋಸ್ಕರ ಪ್ರಾಣ ಕೊಟ್ಟಿರೋ ಘಟನೆ ಇತಿಹಾಸದಲ್ಲೆಲ್ಲೂ ಇಲ್ಲ ಅಂತಹದರಲ್ಲಿ ನಿನ್ನೆ ಮೊನ್ನೆ ಬಂದ ನಿಮಗೋಸ್ಕರ ಪ್ರಾಣನೆ ಕೊಡೊಕೆ ಸಿದ್ದವಾಗಿರುತ್ತಾರೆ ಪ್ಲೀಸ್ ಹುಡುಗರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ ಅವರಿಗೂ ಬದುಕಲು ಅವಕಾಶ ಕೊಡಿ !!!
ಬದುಕೋರಿಗೆ ಭೂ ಲೋಕ
ಸಾಯೋರಿಗೆ ಯಮಲೋಕ
ಪ್ರೀತ್ಸೋರಿಗೆ ಪ್ರೇಮಲೋಕ
ನಿಮಗಾಗಿ ನನ್ನ ಹೃದಯಲೋಕ
ಪಾರ್ಕು ಸಿನಿಮಾ ಸುತ್ತೋದಲ್ಲಾ ಪ್ರೀತಿ
ಮದುವೆಯಾಗಿ ಮಕ್ಕಳು ಮಾಡೋದಲ್ಲಾ ಪ್ರೀತಿ
ಕಾಫಿ ಡೇಲಿ ಕಾಲ ಕಳೆಯೋದಲ್ಲಾ ಪ್ರೀತಿ
ಕಣ್ಣು ತೆರೆದು ಕನಸು ಕಣೋದೇ ಈ ಪ್ರೀತಿ
ಪ್ರೀತಿ ಎಷ್ಟು ಎತ್ತರವೋ ನಿಜವಾಗಿ ಪ್ರೀತಿಸೋರಿಗೆ ಅದು ಹತ್ತಿರ.........
ಪ್ರೀತಿಗೋಸ್ಕರ ಸಾಯೋದಾಗಲಿ, ಸಾಯಿಸೋದಾಗಲಿ ಇನ್ನೊಬ್ಬರಿಗೆ ನೋವು ಮಾಡುವುದಾಗಲೀ ಮಾಡಿದರೆ ಅದು ಪ್ರೀತಿ ಅಲ್ಲ ಪ್ರೀತಿಗೆ ಮಾಡಿದ ಅವಮಾನ....
ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ....?????
Wednesday, November 24, 2010
ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....
ನಾ ಓದುವ school ನಲ್ಲಿ ಹೀಗೊಂದು ಘಟನೆ ನೆಡೆದಿತ್ತು....
ಓದುವ ಮುನ್ನ....
ಪ್ರಿಯ ಬ್ಲಾಗಿಗರೇ... ಈ ಲೇಖನವನ್ನು ಪ್ರಕಟಿಸಿದ್ದು ಯಾರ
ಮನಸ್ಸು ನೊಯಿಸಲಿಕ್ಕಾಗಲಿ ,ಅಥಾವ ಓಲೈಸಲಿಕ್ಕಾಗಲಿ ಅಲ್ಲ.
ಕೆಲವೊಮ್ಮೆ ಇಂತಹ ಘಟನೆಗಳು ಗೊತ್ತಿದ್ದೊ ಅಥವ ಗೊತ್ತಿಲ್ಲದೆಯೊ
ನಮ್ಮ ಮದ್ಯ ನೆಡೆದುಹೊಗುತ್ತವೆ ಅಂತಹ ನೂರಾರು ಘಟನೆಗಳಲ್ಲಿ ಇದು
ಸಹ ಒಂದು. ಹೆಂಗೆಳೆಯರ ಮನಸ್ಸಿನಲ್ಲಿ ನನ್ನ ಮೇಲೆ ಕ್ಷಮೆ ಇರಲಿ.....
ಸುಮಾರು 8-10 ವರ್ಷಗಳ ಹಿಂದೆ ...ನಾನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ S S L C ಓದುತ್ತಿದ್ದ ಸಮಯ School Day ಅಂತ ಒಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಇಟ್ಟುಕೊಂಡಿದ್ದರು ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಮೇಡಂ, ಯಾರಾದರು ಕಥೆ, ಕವನ, ಚುಟುಕು ಹಾಸ್ಯ, ನಾಟಕ, ಇತ್ಯಾದಿಗಳಲ್ಲಿ ಭಾಗವಹಿಸುವವರು ತಮ್ಮ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು ಎಂದು ಮೇಮೊ ಕಳುಹಿಸಿದ್ದರು. ನನ್ನ ತರಗತಿಯ ಹೈದಾರು (ಪಕ್ಕಾ ಲೋ ಕ್ಲಾಸ್) ಹುಡುಗರ ಗುಂಪಿನ ನಾಯಕ ನಾನು , ಎಲ್ಲರೂ ಕುಳಿತುಕೊಂಡು ಕೆಲಕಾಲದ ಚರ್ಚೆಯ ನಂತರ ಒಂದು ನಾಟಕ ಮಾಡಿಯೇ ತೀರುವುದಾಗಿ ನಿರ್ಣಯಸಿದೆವು.
ನಾಟಕದ ಒಳ ಅರ್ಥ: 1947ರ ಸ್ವಾತಂತ್ರ್ಯಕ್ಕೂ ಮೂದಲು ಭಾರತ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದಾಗ ಭಾರತೀಯರು ಯಾವುದೆ ಸಭೆ, ಸಮಾರಂಭ ನೆಡೆಸುವಂತಿರಲಿಲ್ಲ, ನಾಲ್ಕೈದು ಜನ ಗುಂಪು ಕಟ್ಟಿಕೊಂಡು ರಸ್ತೆಗಳಲ್ಲಿ ಮಾತನಾಡುವಂತಿರಲಿಲ್ಲ ಹಾಗು ಯಾವುದೇ ವಿಷಯಗಳನ್ನು ಚರ್ಚಿಸುವಂತಿರಲಿಲ್ಲ. ಹಾಗೇನಾದರು ಅವರ ಮಾತಿಗೆ ಮೀರಿ ನೆಡೆದಿದ್ದಲ್ಲಿ ಬ್ರಿಟೀಷ್ ಕಾರ್ಯಕರ್ತರು ನಮ್ಮನ್ನು ಗುಂಡಿಟ್ಟು ಕೊಲ್ಲುತ್ತಿದ್ದರು. ಈ ಅರ್ಥ ಬಿಂಬಿಸುವಂತ ನಾಟಕ ಆಡುವುದು ಎಂದು ನಮ್ಮ-ನಮ್ಮಲ್ಲಿ ತೀರ್ಮಾನಿಸಿಕೊಂಡೆವು ಅದಕ್ಕೆ ಎಲ್ಲರ ಸಮ್ಮತಿಯು ಇತ್ತು. ಸರಿ next day ಇಂದ ನಾಟಕದ ಪ್ರಾಕ್ಟೀಸ್ ಶುರುವಾಯಿತು.
ನಾಟಕದ ಅಂತಿಮ ಪ್ರಾಕ್ಟೀಸ್:ಎಲ್ಲಾ ಪ್ರಾಕ್ಟೀಸ್ ಮುಗಿಯಿತು ನಾವೊಂದು ನಾಲ್ಕೈದು ಜನ ರಸ್ತೆಯಲ್ಲಿ ಮತಾನಾಡುತ್ತಿದ್ದಾಗ ಬ್ರಿಟಿಷ ಅದಿಕಾರಿಯಾದ ನೀನು ನಮ್ಮನ್ನು "ಆ.... ಡಮಾರ್. ಆ ಡಮಾರ್....." ಎಂದು ಪಿಸ್ತೂಲಿನಿಂದ ಕೊಲ್ಲ ಬೇಕು ಎಂದು "ರವಿ" ಯನ್ನು ನೇಮಿಸಿದೆವು. ಅವನಿಗೆ ಸ್ವಲ್ಪ ನಾಲಿಗೆ ತೊದಲಿತ್ತು. ಅವನಿಗೆ ಎಷ್ಟು ಹೇಳಿಕೊಟ್ಟರು ನಾಯಿಬಾಲ ಡೊಂಕು ಎಂಬಂತೆ ಆ..... ಡಗಾರ್. ಆ ಡಗಾರ್.... ಎನ್ನುತ್ತಿದ್ದ. ಡಗರ್ ಎಂದರೆ ಅಗಷ್ಟೆ ವೇಶ್ಯಚಾರಿಣಿ ಎಂಬ ಅರ್ಥಕ್ಕೆ ಮಾರ್ಪಾಡುತ್ತಿದ್ದ ದಿನಗಳು ಅವು. ಇದನ್ನೆಲ್ಲ ಅರಿಯದ ಮುಗ್ದ ಮನಸ್ಸಿನ ಪುಟ್ಟ ಯುವಕರಾದ ನಾವು ನಾಟಕ ಪ್ರದರ್ಶಿಸುವ ದಿನ ಬಂದೇ ಬಿಟ್ಟಿತ್ತು.
ನಾಟಕದ ಸ್ಟೇಜಿನಲ್ಲಿ: ಅಂದಿನ ದಿನ ಒಂದು ರೀತಿಯ ಭಯ, ಅತಂಕ ನಮ್ಮಲ್ಲಿ ಮನೆ ಮಾಡಿತ್ತು. " ರೋಗಿ ಬಯಸಿದ್ದು ಹಾಲು,ಅನ್ನ. ಡಾಕ್ಟರ್ ಹೇಳಿದ್ದೂ ಹಾಲು, ಅನ್ನ" ಎನ್ನುವ ಹಾಗೆ ನಮ್ಮ ಹೆಸರನ್ನು ಕೊನೆಯಲ್ಲಿ ಸೇರಿಸಿದ್ದರು. ನಾಟಕ ಶುರುವಾಯಿತು 15 ನಿಮಿಷಗಳ ನಮ್ಮ ನಾಟಕವನ್ನು ನೋಡಲು ಜನರು ಹುಮ್ಮಸ್ಸಿನಿಂದ ಕೇಕೆ ಹಾಕುತ್ತಿದ್ದರು ( ನಾಟಕದ ವಿಷಯ ಪಾಪ ಅವರಿಗೊ ಗೊತ್ತಿಲ್ಲ) ನಾವು ರಸ್ತೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅದಿಕಾರಿಯಾದ ರವಿ ನಮ್ಮನ್ನು ಗುರಿಯುಟ್ಟು ಆ....ಡಗಾರ್. ಆ.....ಡಗಾರ್ ಎನ್ನುತ್ತಿದ್ದರೆ ಅಲ್ಲಿದ್ದ ಅಷ್ಟು ಜನ ಸಿಳ್ಳೆಹೊಡೆದು ನಗುತ್ತಿದ್ದರು. ಮುಂದಿನ ಸೀಟುಗಳಲ್ಲಿ ಕುಳಿತ ಹುಡುಗಿಯರತ್ತ ಪಿಸ್ತೂಲ್ ಗುರಿಮಾಡಿ ಆ...ಡಗಾರ್. ಆ....ಡಗಾರ್ ಎನ್ನುತ್ತಿದ್ದಾಗ ಹುಡುಗಿಯರು ಕೂಡ ಕೇಕೆ ಹಾಕಿ ನಗುತ್ತಿದ್ದರು. ಅಷ್ಟೇ ಆದರೆ ಜನ enjay ಮಾಡಿ ನಕ್ಕು ಮನೆಗೆ ಹೋಗುತ್ತಿದ್ದರೋ ಎನೋ..! ಅದರೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಮ್ಮ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ಮೇಡಂ ಕಡೆಗೊ ಗುರಿಮಾಡಿ ಆ....ಡಗಾರ್. ಆ..ಡಗಾರ್ ಎಂದ. ಅಲ್ಲಿದ್ದ ಅಷ್ಟೊ ಜನ ಶಿಕ್ಷಕರೂ ಸೇರಿ ನಗಲು ಪ್ರಾಂರಬಿಸಿದರು. ನಾಟಕ ಮುಗಿಯುತು ಅವರೆಲ್ಲ ಎದ್ದು ಮನೆಗೆ ಹೊರಟು ಹೋದರು ನಮಗೆ ಕಾದಿತ್ತು "ಮಾರಿ ಹಬ್ಬ"
next day : ನಾವೆಲ್ಲ ನಾರ್ಮಲ್ ಹಾಗಿ ಶಾಲೆಗೆ ಹೊದೆವು ಹುಡುಗರೆಲ್ಲ ನಮ್ಮ ನಾಟಕ ಮೆಚ್ಚಿಕೊಂಡಿದ್ದರು ಬೆಳಗಿನ ಪ್ರಾರ್ಥನೆ ಮುಗಿದು ಶಾಲೆಗೆ ಹೊಗುವ ಸಮಯದಲ್ಲಿ ಸತೀಶ್ ಅವನ ಗ್ರೂಪ್ ಪ್ರಾಂಶುಪಾಲರನ್ನ ಕಾಣತಕ್ಕದ್ದು ಎಂದು ಮೇಮೋ ಕಳಿಹಿಸಿ ಕರೆಸಿಕೊಂಡರು. ಕಾರಣ ಗೊತ್ತಿರಲಿಲ್ಲ ಹೊಳಗಿದ್ದ ಮೇಡಂ ಬಡ್ಡಿಮಕ್ಳ ನನ್ನನ್ನೇ "ಡಗಾರ್" ಅಂತ ಕರೀತಿರಾ.... ಅಂತ ಹೇಳಿ, ನಾಟಕ ಮಾಡಿದ ತಪ್ಪಿಗೆ ಬಾಸುಣಿಗೆ ಬರೊ ತರ ಹೊಡೆದು ಕಿವಿ ಹಿಡಿದು ದಿನವಿಡೀ ಕುರ್ಚಿಯಲ್ಲಿ ಕುಳ್ಳರಸಿದ್ದರು.
SATISH N GOWDA
ಎಲ್ಲಿರುವೆ ನೀ ಚಲುವೆ
ಎಲ್ಲಿರುವೆ ನೀ ಚಲುವೆ
ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ.. ಏನೋ.. ಕಳೆದು ಕೊಂಡಂತಿದೆ.
ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?
ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?
ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೋಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?
ಎಲ್ಲಿರುವೆ ನೀ ಚಲುವೆ
SATISH N GOWDA
ನಿನ್ನ ಪ್ರೀತಿಗೆ ದಾಸನಾಗಲು..?
ನಿನ್ನ ಪ್ರೀತಿಗೆ ದಾಸನಾಗಲು..?
ನಿನ್ನ ಸುಂದರ ರೂಪ
ನನ್ನ ಕನಸಲ್ಲಿ ಬಂದು
ನ್ನನ್ನೆಲ್ಲ ರಾತ್ರಿಗಳನ್ನು
ಒಂದೇ ಸಮನೆ ಲೋಟಿ ಮಾಡುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರಿಯತಮನಾಗಲು..?
ಜೇನಿನ ಹನಿಯಂತ ನಿನ್ನ ಪ್ರೀತಿ
ನ್ನನ್ನೀ ಹೂವಿನಂತ ಮನಸ್ಸುನ್ನು
ಸದ್ದಿಲ್ಲದೇ ದಿನೇ ದಿನೇ ದೋಚಿ ಹೊಯ್ಯುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?
ಸದಾ ನಿನ್ನದೇ ನೆನಪುಗಳು
ನನ್ನ ಈ ಪುಟ್ಟ ಹೃದಯದಲ್ಲಿ
ದಿನಕಳೆದಂತೆ ರಾಶಿಯಾಗುತ್ತಿವೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ಶರಣಾಗಲು..?
ನಾಳಿನ ಕನಸುಗಳನ್ನು ಹೊತ್ತ ನನ್ನೀ ದೇಹ
ದಿನ ಬೆಳಗಾಗುವುದುರೊಳಗಾಗಿ
ನಿನ್ನ ನೆನಪುಗಳೊಂದಿಗೆ ಮಿಲನವಾಗುತ್ತಿದೆ
ಹೇಳು ಗೆಳತಿ ನಾನೇನು ಮಾಡಬೇಕು
ನಿನ್ನ ಪ್ರೀತಿಗೆ ದಾಸನಾಗಲು..?
ನಿನ್ನ ಪ್ರೀತಿಗೆ ದಾಸನಾಗಲು..?
SATISH N GOWDA
Friday, November 12, 2010
ನೆಚ್ಚಿನಗೆಳತಿಗೊಂದು ಆಹ್ವಾನ
ನೆಚ್ಚಿನಗೆಳತಿಗೊಂದು ಆಹ್ವಾನ
ಬಣ್ಣ-ಬಣ್ಣದ ಕನಸುಗಳನ್ನು ಹೊತ್ತ ತೇರು ನಾನು
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ನೀ ಕೂರೆ ಬಂದು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..
ಕಡಲತೀರದ ಮುತ್ತನ್ನು ಹಿಡಿದಿಡುವೆ ಅಲ್ಲೆ
ನಕ್ಷತ್ರಗಳನ್ನು ಬರಸೆಳೆದು ನಾ ಕೊಡುವೆ ನಲ್ಲೆ
ಸಿಹಿಮುತ್ತನ ಸುರಿಮಳೆಯನ್ನೆ ಸುರಿಸುವೆ ನಿಂತಲ್ಲೆ
ಮರೆಯದೆ ಬಂದುಬಿಡು ನೀ ಹುಡುಗಿ ಒಮ್ಮೆ.
ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು
ಹೇಳದೇ ಹೋದ ನೀ, ಮತ್ತೆ ಬರುವುದಾದರು ಎಂದು.
ಮನ್ನಿಸೇ ಹುಡುಗಿ ಈ ಭಗ್ನ ಪ್ರೇಮಿಯನ್ನ
ಮಾಡಲಾರೆ ಇನ್ನೊಮ್ಮೆ ಇಂತಹ ತಪ್ಪನ್ನ
ಕ್ಷಣವಾದರು ಒಮ್ಮೆ ನೀ ನೋಡಬಾರದೆ ನನ್ನನ್ನ
ಹಗಲುಗನಸಲ್ಲೂ ಪರಿತಪಿಸುತ್ತಿರುವೆ ನಾ ನಿನ್ನನ್ನ.
ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ
ಮೆಲ್ಲ-ಮೆಲ್ಲನೆ ಹಜ್ಜೆಯನಿಕ್ಕುತಾ ನೀ ಕೂರೆ ಬಂದು
ಹೊತ್ತು ತಿರುಗುವೆ ಇಂದ್ರಲೋಕದ ಹಾದಿಯಲ್ಲಿ ನಿನ್ನ
ಕಿಂಚಿತ್ತು ಅಯಾಸವಾಗದ ಹಾಗೆ ನನ್ನ ಮನದನ್ನೆಯನ್ನ..
ಕಡಲತೀರದ ಮುತ್ತನ್ನು ಹಿಡಿದಿಡುವೆ ಅಲ್ಲೆ
ನಕ್ಷತ್ರಗಳನ್ನು ಬರಸೆಳೆದು ನಾ ಕೊಡುವೆ ನಲ್ಲೆ
ಸಿಹಿಮುತ್ತನ ಸುರಿಮಳೆಯನ್ನೆ ಸುರಿಸುವೆ ನಿಂತಲ್ಲೆ
ಮರೆಯದೆ ಬಂದುಬಿಡು ನೀ ಹುಡುಗಿ ಒಮ್ಮೆ.
ಸ್ವಚ್ಚ ಮನಸ್ಸಿನ ಹುಚ್ಚು ಪ್ರೀತಿ ನಿಂದು
ಕ್ಷಣಕಾಲ ಯೋಚಿಸದೆ ಒಲ್ಲೆ ಎಂದ ಮನಸ್ಸು ನಂದು
ನಿನ್ನ ಪ್ರೀತಿಸುವ ತವಕದಲ್ಲಿ ಕಾದು ಕುಳಿತಿಹೆನು ಇಂದು
ಹೇಳದೇ ಹೋದ ನೀ, ಮತ್ತೆ ಬರುವುದಾದರು ಎಂದು.
ಮನ್ನಿಸೇ ಹುಡುಗಿ ಈ ಭಗ್ನ ಪ್ರೇಮಿಯನ್ನ
ಮಾಡಲಾರೆ ಇನ್ನೊಮ್ಮೆ ಇಂತಹ ತಪ್ಪನ್ನ
ಕ್ಷಣವಾದರು ಒಮ್ಮೆ ನೀ ನೋಡಬಾರದೆ ನನ್ನನ್ನ
ಹಗಲುಗನಸಲ್ಲೂ ಪರಿತಪಿಸುತ್ತಿರುವೆ ನಾ ನಿನ್ನನ್ನ.
ನಿನಗಾಗಿಯೇ ಹುಟ್ಟಿ ಬರುವೆ ನಾ ಇನ್ನೊಮ್ಮೆ
ನಿನ್ನನ್ನೇ ವರಿಸುವ ಕಾಯಕದೀ ಮತ್ತೊಮ್ಮೆ
ಕೊಡು ಗೆಳತಿ ಪ್ರೀತಿಯನ್ನು ಮಗದೊಮ್ಮೆ
ಮರೆಯಲಾರೆ ಜನ್ಮಜನ್ಮಕ್ಕೂ ನಿನ್ನನ್ನ ಇನ್ನೊಮ್ಮೆ
ನೆಚ್ಚಿನಗೆಳತಿಗೊಂದು ಆಹ್ವಾನ
SATISH N GOWDA
Thursday, November 11, 2010
ಅವಳು ನನ್ನಾಕೆ...
ಅವಳು ನನ್ನಾಕೆ...
ಹುಣ್ಣಿಮೆಯ ರಾತ್ರಿಯಲ್ಲಿ
ನಿಂತಿದ್ದ ಸುಂದರ ಹುಡುಗಿಯ
ಸೌಂದರ್ಯದ ಸೊಬಗನ್ನು ಕಂಡು
ಚಂದಿರನೂ ಕೂಡ ಒಮ್ಮೊಮ್ಮೆ ಕಣ್ಣು ಮಿಟಿಕುಸುತ್ತಿದ್ದ
ಬಹುಶಃ ಇರಬೇಕು ಅವಳು ನನ್ನಾಕೆ..!
ಬೆಳ್ಳಂಬೆಳಗಿನ ಮುಂಜಾನೆಯಲ್ಲಿ
ಜುಳು ಜುಳು ಹರಿಯುವ ಜಲಧಾರೆಯಲಿ
ಮಿಂದು ಬರುತ್ತಿದ್ದ ಯುವತಿಯ ಕಂಡ
ಆ ಸೂರ್ಯನೂ ಒಂದು ಕ್ಷಣ ಕೆಂಪಾಗಿದ್ದ
ನನಗನಿಸುತ್ತೆ ಅವಳು ನನ್ನಾಕೆ..!
ಇಂದ್ರಲೋಕದ
ರಂಗು ರಂಗುನ ನೃತ್ಯಮಂದಿರದಲ್ಲಿ
ನಾಟ್ಯಮಯೂರಿ ನಾರಿಯರ ಸಮ್ಮುಖದಲ್ಲಿ
ನಾರ ಮಡಿಯಲ್ಲಿ ಬಂದ ನಾರಿಯ ನೆಡೆಗೆಯ ಕಂಡು
ನೃತ್ಯ ಮಂದಿರದ ಸಭೆಯೇ ಒಮ್ಮೆ ದಂಗು ಬಡಿದಂತಿತ್ತು
ಬಹುಶಃ ಇರಬೇಕು ಅವಳು ನನ್ನಾಕೆ..!
ಕಡು ಕಗ್ಗತ್ತೆಲೆಯ ನಡು ರಾತ್ರಿಯಲಿ
ಧರೆಗಿಳಿದ ದೇವತೆಯ
ಮೋಹಕ ಕಣ್ಣುಗಳನೋಟಕ್ಕೆ
ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಒಮ್ಮೆ ಮೋಹ ಉಂಟಾಯಿತು
ಬಹುಶಃ ಇರಬೇಕು ಇವಳು ನನ್ನಾಕೆ..?
SATISH N GOWDA
Wednesday, November 10, 2010
ಆಕಸ್ಮಿಕವಾಗಿ ನೆಡೆದ ಅಚಾತುರ್ಯ.
(ಚಿತ್ರ ಕೃಪೆ ಅಂತರ್ಜಾಲ )
ಆಕಸ್ಮಿಕವಾಗಿ ನೆಡೆದ ಅಚಾತುರ್ಯ.ತುಂಭಾದಿನಗಳಿಂದ (ಸೆಪ್ಟೆಂಬರ್ ತಿಂಗಳಿನಿಂದ) ಈ ಘಟನೆ ನನ್ನ ಮನಸಿನಲ್ಲಿತ್ತು ಏಕೋ ಎನೋ ಬರವಣಿಗೆಯ ರೂಪ ಕೊಡಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಒಲ್ಲದ ಮನಸ್ಸಿನಿಂದ ಈ ಘಟನೆಗೊಂದು ಲೇಖನ ರೂಪ ಕೊಡುವ ಪ್ರಯತ್ನದಲ್ಲಿ.....
ಓದುವ ಮುನ್ನಾ...... ಗೊತ್ತಿಲ್ಲದೆ ನೆಡದ ಈ ಘಟನೆಯ ಕಥಾನಯಕಿಗೆ ಕ್ಷಮೇಯಾಚಿಸುತ್ತಾ..
ಅಳಿದುಳಿದ ನೆನಪಿನೊಂದಿಗೆ ಘಟನೆ ಹೀಗಿದೆ ,,,,,,,
ಪ್ರತಿತಿಂಗಳು ಕೆಲವು ಮಾಸ ಪತ್ರಿಕೆಗಳನ್ನು(ರೂಪತಾರ, ಗೃಹಶೋಭ.ಚಿತ್ತಾರ. ಇತ್ಯಾದಿ..) ಕೊಂಡು ಓದುವ ಅಭ್ಯಾಸ ನನ್ನದು. ಅದೇ ರೀತಿ ಸೆಪ್ಟಂಬರ್ ತಿಂಗಳ ರೂಪತಾರ ಪತ್ರಿಕೆಯನ್ನು ತೆಗೆದು ಕೊಳ್ಳುವ ಎಂದು ನಮ್ಮ ಮನೆಯ ಪಕ್ಕದಲ್ಲೆ ಇದ್ದ ಒಂದು ಪುಸ್ತಕ ಮಳಿಗೆಗೆ ಬೇಟಿ ಕೊಟ್ಟೆ ನನ್ನ ದುರಾದೃಷ್ಟಕ್ಕೆ ಆ ಮಳಿಗೆಯಲ್ಲಿ ಅವತ್ತು ಒಂದು ಸುಂದರ ಹುಡುಗಿ ಇದ್ದಳು. ರೂಪತಾರವನ್ನು ನೋಡುತ್ತಾ ಅದರಲ್ಲಿರುವ ದಪ್ಪನೆಯ ಒಂದು ಕವರ್ ಕಣ್ಣಿಗೆ ಬಿತ್ತು(ಪುಸ್ತಕದ ಒಳಗಡೆ ಪ್ಯಾಕಿಂಗ್ ಮಾಡಲಾಗಿತ್ತು ) ಅದನ್ನು ವಿಚಾರಿಸಲು ಸಲುವಾಗಿ,
ನಾನು : ರೀ ಈ ಪುಸ್ತಕದಲ್ಲಿ ಏನಿದೆ
ಹುಡುಗಿ: ನೀವೇ ಓದಿ ಸರ್.
ನಾನು : ಅದು ಸರಿ ರಿ ಪುಸ್ತಕ ಪ್ಯಾಕಿಂಗ್ ಆಗಿದೆಯಲ್ಲ ..?
ಹುಡುಗಿ: Open ಮಾಡಿ ನೋಡಿ ಸರ್ (ನಗೆಮುಖದಿಂದ)
ನಾನು: ದುಡ್ಡು ಕೊಡದೆ Open ಮಾಡಬಹುದಾ..?
ಹುಡುಗಿ: ಹಾಗೆಲ್ಲಾ ಅಗೋಲ್ಲ ಸರ್ ದುಡ್ಡುಕೊಟ್ಟೆ Open ಮಾಡಬೇಕು ( ಕೋಪದಿಂದ)
ನಾನು : ಅದು ಸರಿ ರಿ ನೋಡಬೇಕಲ್ಲ ಒಳಗೇನಿದೆ ಅಂತ..!
ಹುಡುಗಿ: ಮನೆಗೆ ತಗೊಂಡು ಹೋಗಿ ನೋಡಿಸರ್ (ಮತ್ತೆ ಕೋಪದಿಂದ)
ನಾನು : ಸರಿ ಕೋಡಿ .
ಇಷ್ಟೇಲ್ಲ ಆದರೂ ಪುಸ್ತಕದ ಒಳಗಡೆ ಏನಿದು ಎಂದು ಗೊತ್ತಾಗಲಿಲ್ಲ. ಅಲ್ಲಿಂದ ಮನೆಗೆ ಬಂದು Open ಮಾಡಿದರೆ ಶಾಕ್ ಒಳಗಡೆಇದ್ದದ್ದು "Wisper " . ಸಂಚಿಕೆಯ ಮುಖಪುಟದ ಮೇಲೆ "ಈ ಸಂಚಿಕೆಯೊಂದಿಗೆ ಒಂದು "Wisper " ಉಚಿತ" ಎಂದು ಬರೆದಿತ್ತು. ..! ಅಯ್ಯೋ.. ದೇವರೆ ಸುಮ್ಮ-ಸುಮ್ಮನೆ ಒಂದು ಹುಡುಗಿಯ ಮನಸ್ಸು ನೊಯಿಸಿಬಿಟ್ಟೆನಲ್ಲ ಎಂದು ಕೊಂಡು ...... ನಾನು ಹೇಗಿದ್ರು ಬ್ಯಾಚುಲರ್ ನನಗೇನಕ್ಕೆ ಇದು, ಸರಿ ಇದನ್ನು ಅವಳಿಗೇ ಕೊಟ್ಟು Sorry ಕೇಳಿಕೊಂಡು ಬರುವ ಎಂದು ಹೊರಟೆ.
ನಾನು: ಸಾರಿ ರಿ..
ಹುಡುಗಿ: ಮೌನ (ಕೋಪದ ಕಣ್ಣುಗಳಿಂದ)
ನಾನು : ನಿಜವಾಗಲು ನನಗೆ ಗೊತ್ತಿರಲಿಲ್ಲ.
ಹುಡುಗಿ: ಮೌನ (ಮುಗುಳ್ನಕ್ಕು)
ನಾನು : ಇದು ನನಗೆ ಬೇಡ ನೀವೆ ಇಟ್ಕೊಳ್ಳಿ.
ಹುಡುಗಿ: ಕೋಪದಿಂದ ನೋಡುತ್ತಾ (ಒಂದು ಲುಕ್ ಕೊಟ್ಟು ತಲೆಬಗ್ಗಿಸಿಕೊಂಡಳು)
ಸರಿ ಒಲ್ಲದ ಮನಸ್ಸಿನಿಂದ ಆ ಕವರ್ ಅನ್ನು ಅಲ್ಲಿಟ್ಟು ಹೊರಟೆ ಆ ದಿನದಿಂದ ಇವತ್ತಿನ ವರೆಗೊ ಆ ಹುಡುಗಿ ನನ್ನ ನೋಡಿದ ತಕ್ಷಣ ಮೌನವಾಗುತ್ತಾಳೆ....... ಕಾರಣ ಗೊತ್ತಿಲ್ಲ..! ಘಟನೆ ನೆಡೆದು ತಿಂಗಳುಗಳು ಕಳೆದರು ನನ್ನನ್ನು ಕಂಡ ಅವಳಿಗೆ ,ಅವಳನ್ನು ಕಂಡ ನನಗೆ ಆವರಿಸುವ ಮೌನ ಮಾತ್ರ ದೂರವಾಗಿಲ್ಲ.
ಪ್ರಿಯ ಸ್ನೇಹಿತರೆ ಈ ಲೇಖನ ಓದಿದ ನಿಮಗೆ ಏನನಿಸುತ್ತದೊ
ಒಂದು ಕಾಮೆಂಟ್ ಮೂಲಕ ತಿಳಿಸಿ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ.
SATISH N GOWDA
Sunday, November 7, 2010
ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೇ ...
ರೀ ....... !ಮೇಡಂ ಸುತ್ತಿ ಬಳಸಿ ಯಾಕ್ರಿ ಮಾತು ! ಇದ್ದದ್ದು ಇದ್ದಂಗೆ ಹೇಳಿಬಿಡ್ತೀನಿ ಕೇಳಿ. ... ನಾನು ನಿಮ್ಮನ್ನು ಪ್ರೀತಿಸ್ತಾ ....! ಇದೀನಿ ನಿಮ್ಮ ಮೇಲೇ ನಂಗೆ ಹಾಳಾದ್ದು ಮೋಹ ಶುರು ಆಗಿದೆ . ಸ್ವಲ್ಪ ದಿನಗಳ ಹಿಂದೆ ಅವತ್ತು ವಿಜಯನಗರದ ಅಯ್ಯಂಗಾರ್ ಬೇಕರಿಗೆ ಅಂತ ಬಂದಿದ್ರೆಲ್ವ ಅವಾಗ ನಾನು ನಿಮ್ಮನ್ನ ನೋಡಿದೆ ಕಣ್ರೀ.! ತ್ಹೊಥ್ ಅವತ್ತಿನಿಂದ ನನ್ನ ಮನುಸು ನನ್ನ ಮಾತೇ ಕೆಳ್ತಿಲ್ಲ ಕಣ್ರೀ ........ ..!ಅವತ್ಹ್ಹು ನಿಮ್ಮನ್ನ ನೋಡಿದ ಕ್ಷಣ ದಿಂದ ಹೇಗಾದರು ಮಾಡಿ ನಿಮ್ಮನ್ನ ಮಾತಾಡ್ಬೇಕು ಅಂತ ಅನಿಸುತ್ತೆ ಆದರೆ ಹಾಳಾದ್ದು ದ್ಯರ್ಯ ಇಲ್ಲ ಕಣ್ರೀ .ಅದರೂ ಕೊಡ ನಿಮ್ಮ ಮೇಲಿನ ಪ್ರೀತಿ ದಿನೇ ದಿನೇ ಜಾಸ್ತಿ ಅಗ್ಥಇದಿಯಲ್ಲ ಇದಕ್ಕೆ ಏನಂಥ ಕರೀಬೇಕೂ ಅರ್ಥನೇ ಆಗ್ತಿಲ್ಲ ಕಣ್ರೀ ..!
ರೀ .. ಮೇಡಂ ನಿಜ ಹೇಳ್ಬೇಕು ಅಂದ್ರೆ ನೀವು ಸಾದಾರಣ ಸುಂದ್ರಿನೇ ನಮ್ಮ ಊರಲ್ಲೇ ಸ್ವಲ್ಪ ಹುಷಾರಾಗಿ ಹುಡಿಕಿದರೆ ನಿಮಗಿಂತ ಸುಂದರ ವಾಗಿರೋ ಹುಡಿಗೀರು ದೇವರಾಣೆಗೂ ಸಿಕ್ತಾರೆ ಆದ್ರೆ ಏನ್ ಮಾಡೋದು ನನ್ನ ಮನಸು ನೀವೇ ಬೇಕು ಅಂತ ಕೇಳ್ತಿದೆ .! ನೀವು ನೋಡಿದ್ರೆ ದೂರದಲ್ಲಿರೋ ಅಯ್ಯಂಗಾರ್ ಬೇಕರಿಗೆ ಬರ್ತಿರ . ಅಲ್ಲಿ ಸರಿಯಾಗಿ ಇಪ್ಪತೈದು ನಿಮಿಷ ವ್ಯಾಪಾರ ಮಾಡಿ ಹೋಗಿಬಿಡ್ತಿರಾ ಆಗೆಲ್ಲ ನಂಗೆ ಅದಿಷ್ಟು ಸಂತೋಷ ಆಗುತ್ತೆ ಗೊತ್ತ ಮೇಡಂ ....? ಇಡೀ ದಿನಾ ನಿಮ್ಮನ್ನೇ ನೋಡೋ ಆಸೆ !ಹಾಗೆ ನೋಡ್ತಾ ಇರಬೇಕು ಅನಿಸುತ್ತೆ ........!
ಮೊನ್ನೆ ದೀಪಾವಳಿ ಬಂತಲ್ಲ ಅವತ್ತು ಏನಾಯ್ತು ಗೊತ್ತಾ ಮೇಡಂ .....?
ದಿಪಾವಳಿಗೆ ಅಂತ ರಜೆ ಸಿಕ್ತಲ್ಲ . ಅ ನೆಪದಲ್ಲಿ ಆರಾಮಾಗಿ ಊರಿಗೆ ಹೊರಟೆ ಚಿಕ್ಕಬಳ್ಳಾಪುರ ತಲುಪಿದ್ದೆ ತಡಾ ಇದ್ದಕಿದ್ದಂತೆ ನಿಮ್ಮ ನೆನಪಾಯಿತು ಸರಿ ಹೇಳಿ .. ಕೇಳಿ .. ದೀಪಾವಳಿ ರಜೆ ಇದೆಯಲ್ಲ ? ಆ ನೆಪದಲ್ಲಿ ನೀವು ಅಯ್ಯಂಗಾರ್ ಬೇಕರಿಗೆ ಬಂದೇ.. ಬರ್ತೀರಾ.. ಹಾಗೆ ಬಂದವರು ಇಪ್ಪತೈದು ನಿಮಿಷ ವ್ಯಾಪಾರ ಮಾಡಿ ಅವತ್ಹ್ಹು ಸಂಜೆ ಪಟಾಕಿ ಹೊಡಿಯೋ ನೆಪದಲ್ಲಿ ಮನೆ ಇಂದ ಹೊರಗೆ ಇರ್ತಿರಾ ಅನ್ನಿಸಿಬಿಡ್ತು , ನಿಮ್ಮನ್ನು ನೋಡಲೇ ಬೇಕು ಹೇಗಾದರು ಮಾಡಿ ಮಾತಾಡಿಸಲೇ ಬೇಕು ಅನಿಸ್ಥ್ಹು ಕಣ್ರೆ .. ಮತ್ತೆ ವಾಪಸು ಅದೇ ವಿಜಯನಗರದ ಅಯ್ಯಂಗಾರ್ ಬೇಕರಿ ಗೆ ಬಂದೇ , ಸಂಜೆ ಬೇಕರಿ ಅತ್ರ ನಿಮ್ಮನ್ನು ನೋಡಿದೆ ದೂರದಿಂದಲೇ ಒಂದು ಲುಕ್ ಕೊಟ್ಟೆ . ನಿಮಗೆ ಕಾಣಿಸುವ ಹಾಗೆ ಒಂದು ಸ್ಮೈಲ್ ಕೊಟ್ಟೆ . ನೀವು ನನ್ನ ನೋಡ್ತಿರೋ ಹಾಗೆ ಒಮ್ಮೆ ಕಣ್ಣು ಹೊಡೆದೆ .. ನೀವು ಏನೂ ಅನ್ನಿಲಿಲ್ವಲ್ಲ ಅದನ್ನು ಕಂಡು ನನೆಗೆ ಸ್ವಲ್ಪ ದ್ಯರ್ಯ ಬಂತು ಕಣ್ರೆ ,,,,,,, ಅವತ್ತ್ತು ರಾತ್ರಿ ನೋಡಿದ್ರೆ ನಿಮ್ಮ ಇಂದೇ ಮುಂದೆ ನಿಮ್ಮ ಅಣ್ಣ ಇದ್ರೂ ಮೇಡಂ ... ನಾನು ಹೇಗೆ ನಿಮ್ಮನ್ನ ಮಾತಾಡಿಸಲು ಸಾದ್ಯ ಹೇಳಿ ? ಅವರು ನನಗಿಂತ ಸಿನಿಯರ್ ಗಳು ಧಹಿಕವಾಗಿ - ಆರ್ಥಿಕವಾಗಿ ಕೊಡ ನನಗಿಂತ ಜೋರಗಿದ್ರು . ನಾನೇನಾದ್ರು ಅವತ್ಹ್ಹು ನಿಮ್ಮನ್ನ ಮಾತಾಡಿಸಿದರೆ ನನ್ನ ಮೊಳೆ ಮುರಿತಿದ್ರು ಅನಿಸುತ್ತೆ , ಹಾಗಾಗಿ ನಾನು ಏನೋ ಮಾತಾಡದೆ ವಾಪಸ್ಸು ಬಂದೇ ........!
ಆದರೆ ಇವಾಗ ಯಾವ ಭಯನು ಇಲ್ಲ .....! ಇವಾಗ ಹೇಳ್ತಿನೆ ಕೇಳಿ ನಾನು ನಿಮ್ಮನ್ನ ತುಂಬಾ ಪ್ರಿತಿಸ್ಥಾ ಇದೀನಿ ಕಣ್ರೆ ....ನೀವು ಇಲ್ಲ ಅಂದ್ರೆ ನಾನು ಸತ್ತೆ ಹೋಗ್ತೀನಿ ಕಣ್ರೀ ........!
ನಿಮ್ಮ-ನನ್ನ ಪ್ರೀತಿಯ ವಿಷಯ ಹೇಗೂ ನಿಮ್ಮ ಮನೆಯವರಿಗೆ ಗೂತ್ತಾಗಿ ಹೋಗಿದೆ ನನ್ನನ್ನ ಕರೆದು ಎಚ್ಚರಿಕೆ ಕೊಟ್ಟಿದ್ದಾರೆ .ನನ್ನ ಮಗಳ ತಂಟೆಗೆ ಬರಬೇಡ.....!ಬಂದ್ರೆ ಕಾಲೂ ಕೈ ಮುರೀತೀನಿ ... ನಿನ್ನದು ಯಾವ ಊರೂ.. ...ಯಾರೂ ನೀನು...!ನನ್ನ ಮಗಳನ್ನು ಪ್ರಿತಿಸಬೇಡ ದ್ವೇಷಿಸು ಅಂತ ನನ್ನ ಮನಸಿಗೆ ನೋವಗೂ ಥರ ನಡೆದುಕೊಂಡಿದ್ದಾರೆ .....!
ಅದ್ರು .....ಮೇಡಂ ..... ನಾನು ನಿಮ್ಮನ್ನು ದ್ವೆಶಿಶಲಾರೆ ಅದರ ಬದಲು ನಾನು ನಿಮ್ಮನ್ನು ಪ್ರೀತಿಸ್ತೀನಿ .... ಇವತ್ತಲ್ಲ ನಾಳೆ ದ್ಯರ್ಯ ತಂದುಕೊಂಡು ನಿಮ್ಮದೆರು ನಿಂತು "I LOVE U" ಅಂತ ಹೇಳೇ ಹೇಳ್ತೀನಿ....!ಅಲ್ಲಾ ರೀ ನಿಮ್ಮ ತಂದೆ ಪ್ರಿತಿಸ್ಬೇಡ ನನ್ನ ಮಗಳನ್ನ ದ್ವೇಷಿಸು ಅಂತ ಹೇಳ್ತಾರಲ್ಲ .ನನ್ನೆದೆಯ ತುಂಬಾ ಪ್ರೀತಿ ಇರುವಾಗ ನಾನು ಹೇಗೇ ರೀ ನಿಮ್ಮನ್ನ ದ್ವೆಶಿಸಲಿ ......?
cell 9844773489
Sunday, October 31, 2010
ನಿನ್ನಯ ನೆನಪು...
(ಚಿತ್ರ ಕೃಪೆ ಗೂಗೆಲ್ )
ನಿನ್ನಯ ನೆನಪು...ಮರೆತಿಲ್ಲ ನಾ ನಿನ್ನನ್ನು
ಮರೆಯಲು ಸಾಧ್ಯವಿಲ್ಲ ನಿನ್ನಯ ನೆನಪನ್ನು
ನಿನ್ನ ನೆನಪೊಂದೆ ನನ್ನ ಜೀವ
ಹೇಗೆ ಮರಯಲಿ ಗೆಳತಿ ನಾ ನಿನ್ನನ್ನ..?
ಹತ್ತಿರದಲ್ಲಿ ನೀನಿಲ್ಲ
ನಿನ್ನಯ ನೆನಪು ನನ್ನದೆಯಲ್ಲಿ ಮಾಸಿಲ್ಲ
ಮರೆತರೂ ಮರೆಯಲಾಗದ ನೆನಪು ನೀ ಕೊಟ್ಟ ಪ್ರೀತಿ
ಹೇಗೆ ಮರೆಯಲಿ ಹೇಳು ನೀ ಕೊಟ್ಟ ಪ್ರೀತಿಯ ಬಳ್ಳಿಯನ್ನ..?
ಅಳಿಸಲು ಮನಸಿಲ್ಲ ನಿನ್ನ ನೆನೆಪನ್ನ
ಉಳಿಸಲು ನೀನಿಲ್ಲ ನೆನಪಿನ ಸಾಲನ್ನ
ತೊದಲುತ್ತಿರುವ ಯುವ ಪ್ರೀತಿ ನಂದು
ಹೇಳು ಗೆಳತಿ ನಾ ಹೇಗೆ ಮರೆಯಲಿ ನಿನ್ನನ್ನ..?
ನೀ ಕೊಟ್ಟ ಪ್ರೀತಿಯ ನೆನಪಿನ ದೀಪದಿಂದ
ಜಗತ್ತನ್ನೇ ಬೆಳಗಿಸಲು ಹೊರಟಿರುವ ಹುಚ್ಚು ಮನಸ್ಸು ನಂದು
ಹುರಿದುಂಬಿಸಲು ನೀನಿಲ್ಲ, ಹಿಂತಿರುಗಲು ಮನಸಿಲ್ಲ
ಹೇಳು ಗೆಳತಿ ಮುಂದೇನು ಮಾಡಲಿ..?
ಕಣ್ಣ ಬಿಟ್ಟರೆ ನೀ ಕಾಣಲ್ಲ
ಕಣ್ಣು ಮುಚ್ಚಿದರೆ ನಿನೇ ಎಲ್ಲಾ
ನಿನ್ನ ನೆನಪಿನ ವೇದನೆ ಪಾತಳಕ್ಕಿಂತ ಆಳ
ಅನುಭವಿಸುವ ನನಗೇ ಗೊತ್ತು ಅದರ ಯಾತನೆ
ಹೇಗೆ ಮರೆಯಲಿ ಹೇಳು ಗೆಳತಿ ನಾ ನಿನ್ನನ್ನ..?
ನಿನ್ನಯ ನೆನಪು...
SATISH N GOWDA
Friday, October 29, 2010
ದೇವರವ್ನೆ ನೀ ನೈಂಟಿ ಹೊಡಿ
ದೇವರವ್ನೆ ನೀ ನೈಂಟಿ ಹೊಡಿ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಒಳ್ಳೆ ಕಾರ್ಡು ಬಿತ್ತು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ತು ಅಂದ್ರೆ, ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ ಕಳ್ನನನ್ಮಗಂದು
ನಾವಾಡಬೇಕು ದೇವರನ್ನೇ ನೆಚ್ಚಿಕೊಂಡು
ಒಂದೇ ಆಟ ಒಂದೇ ಆಟ ಎಂದುಕೊಂಡು ಎಂಡಿನಲ್ಲಿ
ಸೇರಬೇಕು ಸಾಲ ಎಂಬ ಸುಡುಗಾಡು
ನಾವ್ ನಮ್ಮ ಹೆಣ ನಾವುಗಳೇ ಹೊತ್ತುಕೊಂಡು
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ಸಾಯಬೇಡ ಅಷ್ಟು ಬೇಗ
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ
ದೇವರವ್ನೆ ನೀ ನೈಂಟಿ ಹೊಡಿ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಯಾವ್ದು ಇಲ್ಲಿ ಅಂದರ್ ಆಯ್ತು
ಯಾವ್ದು ಇಲ್ಲಿ ಬಾಹರ್ ಆಯ್ತು
ಯಾವ್ದು ಇಲ್ಲಿ ಅಂದರ್ ಆಯ್ತು, ಯಾವ್ದು ಇಲ್ಲಿ ಬಾಹರ್ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವು ಗ್ಯಾಪು ಕೊಡದೆ ಆಡಬೇಕು ಮುಚ್ಚಿಕೊಂಡು
ಸಿಂಪಲ್ ಮಂದಿ ನಾವ್ ಶೋಕಿಗಂತ ಆಡುತೀವಿ
ಹೆದ್ರೋಲ್ಲ ಮನೆ-ಮಠ ಮಾರಿಕೊಂಡ್ರು
ಪಾಪ ಪಾಂಡವರೇ ಹೆಂಡ್ತೀನ ಕಳಕೊಂಡ್ರು
ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ
ಸಾಲ, ಜಾಸ್ತಿ ಆದ್ರೆ ಆಗ್ಲಿ ಬಿಡಿ
ದೇವರವ್ನೆ ಮನೆ ಮಾರಿ ಬಿಡಿ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಆಂಜನೇಯಂಗೆ ಜೈ ಅಂದುಬಿಡಿ
ಆಂಜನೇಯಂಗೆ ಜೈ ಅಂದುಬಿಡಿ
ದೇವರವ್ನೆ ನೀ ಕಾರ್ಡು ಹೊಡಿ
SATISH N GOWDA
Wednesday, October 20, 2010
ನೀ ನನ್ನ ಪ್ರೀತಿಯ ದೇವತೆ ಕಣೇ....
ನೀ ನನ್ನ ಪ್ರೀತಿಯ ದೇವತೆ ಕಣೇ...
ಓದುವ ಮುನ್ನ.....
ಇದು ಕೇವಲ ಕಾಲ್ಪನಿಕ ಬರವಣಿಗೆ
ಇದು ಕೇವಲ ಕಾಲ್ಪನಿಕ ಬರವಣಿಗೆ
ಯಾರ ಜಿವನಕ್ಕೋ ಸಂಬಂದ ಪಟ್ಟಿರುವುದಿಲ್ಲ
ಇದುನ್ನು ಕೇಳುವ ಹಕ್ಕು ಯಾವುದೇ ಹುಡುಗಿಗಾಗಲಿ
ಅಥವಾ ಯಾವುದೇ ಮಹಿಳೆಗಾಗಲಿ ಇರುವುದಿಲ್ಲ ..
(ಚಿತ್ರಗಳು ಅಂತರ್ಜಾಲದಿಂದ ಆಯ್ದುಕೊಳ್ಳಲಾಗಿದೆ )
ಹಾಯ್ ಸುಷಿ.. ( ನಾ ನನ್ನ ದೇವತೆಗೆ ಇಟ್ಟ ಪ್ರೀತಿಯ ಹೇಸರು) ನಮ್ಮಿಬ್ಬರ ಮಾತಿನ ಒಪ್ಪಂದದ ನಂತರ ನಾನಂತು ನಿನ್ನನ್ನ ನೆನಸಿಕೊಳ್ಳುವುದನ್ನ ಬಿಟ್ಟಿದ್ದಿನಿ ಕಣೇ ಆದರೋ ನಿನ್ನ ನೆನಪು ದುಮಿಕ್ಕುವ ಜಾಲಧಾರೆಯಂತೆ ಕಾಡುತ್ತಿರುತ್ತದೆ ನೆನ್ನೆ ನನ್ನ ಕನಸಲ್ಲಿ ಬಂದುಕಾಡಿದ ನಿನ್ನಯ ನೆನಪು ಅವಿಸ್ಮರಣಿಯ... ಈ ಪ್ರಪಂಚದ ಪರಿವೆ ಇಲ್ಲದೆ ರಾತ್ರಿ ತಿಂದುಂಡು ಮಲಗಿದ್ದೆ, ನಿನ್ನಯ ನೆನೆಪಿನ ಕನಸು ನನ್ನನ್ನು ಒಮ್ಮೆ ಬೆಚ್ಚಿಬಿಳಿಸುವಂತೆ ಮಾಡಿತ್ತು. ನಿನ್ನೆಯ ಕನಸು ಬಂದ ಬಗೆ...
ಈಡೀ ಕಗ್ಗತ್ತೆಲೆಯನ್ನು ಸೂರ್ಯ
ಒಮ್ಮೆಲೆ ನುಂಗಿದ ಹಾಗೆ...
ಅಯಾಗಿ ಮಲಗಿದ್ದವನ ಕನಸಲ್ಲಿ
ಭೂಮಿ ಪ್ರಳಯವಾದ ಹಾಗೆ....
ಒಂದು ದೈತ್ಯ ಕಲ್ಲು ಬಂಡೆ
ತಂತಾನೆ ಬಂದು ಎದೆಗೆ ಅಪ್ಪಳಿಸಿದ ಹಾಗೆ...
ಇದ್ದಕ್ಕಿದ್ದಂತೆ ಈ ಭೂಮಿ
ಪಾತಳಕ್ಕೆ ಕುಸಿದು ಬಿದ್ದ ಹಾಗೆ....
ಮರುಭೂಮಿಯಲ್ಲಿ ಬಿಸುವ
ಬಿರುಗಾಳಿಯ ಹಾಗೆ....
ನಿಜ ಅಲ್ವೆನೆ ಸುಷಿ... ಕಾಲ ಎಷ್ಟೊಂದು ಕ್ರೂರಿ ಅಲ್ವಾ..? ಪ್ರೀತ್ಸೊ ಹೃದಯಗಳನ್ನ ಹುಡುಕಿ... ಹುಡುಕಿ.. ಕೊಲ್ಲೊದೆ ಈ ಕಾಲದ ನಿಯಮ ಅಂತ ನನಗನಿಸುತ್ತೆ.. ಕಣೇ. ನಿನ್ನಯ ನೆನುಪುಗಳು ನನ್ನೆದೆಯಲ್ಲಿ ಇನ್ನು ಮಾಸಿಲ್ಲ ಕಣೇ ಹುಡುಗಿ ಹಿಮಾಲಯ ಬೆಟ್ಟದಿಂದ ಜಿನುಗುವ ಮಂಜಿನಹನಿಯ ಹಾಗೆ ಈ ಪ್ರಾಣ ಇರೊವರೆಗೊ ಜಿನುಗುತ್ತಲೇ ಇರುತ್ತದೆ . ನೀನು ಹೇಳಿದ ಒಂದು ಚಿಕ್ಕ ಪದ (ನನ್ನನ್ನು ಮರೆತು ಬಿಡು ಸತೀಶ) ನನ್ನೆಲ್ಲ ಕನಸುಗಳನ್ನ ಸುಡುವ ಕಾಳ್ಗಿಚ್ಚಿನಂತೆ ಹಬ್ಬುತ್ತದೆ ಎಂದು ನಾನು ಬಾವಿಸಿರಲಿಲ್ಲ ನಾ ನಿನ್ನ ಮರೆಯೋದ...?
ಅದು ಸಾದ್ಯವಿಲ್ಲದ ಮಾತು.
ಯಾಕೆ ಗೊತ್ತಾ....?
ಲೇ ದಡ್ಡಿ
ಭೊಮಿ ಆಕಾಶ ಎಲ್ಲದರೂ ಒಂದಾಗುತ್ತಾ...?
ಸೂರ್ಯ- ಚಂದ್ರ ಎಲ್ಲದರೂ ಸೇರುತ್ತಾರ...?
ಸಮುದ್ರ ಯಾವಗಲಾದ್ರು ಬರಿದಾಗುತ್ತಾ...?
ನಾ ಹೇಳಿದ ಇವಿಷ್ಟರಲ್ಲಿ ಯಾವದಕ್ಕಾದರು ಹೌದು ಅಂತ ಉತ್ತರ ಕೊಡು ಸಾಕು ಆ ಕ್ಷಣದಲ್ಲೆ ನಾ ನಿನ್ನನ್ನ ಮರೆಯುವ ಪ್ರಯತ್ನ ಮಾಡುತ್ತೆನೆ ....! ಅಗೊಲ್ಲ ಅಲ್ವ....! ಹಾಗೆ ನಾನು ನಿನ್ನ ಮರೆಯೊಕೆ ಅಗೊಲ್ಲ ಕಣೇ ಹುಡುಗಿ ನೀ ನನ್ನ ಜೀವ ಕಣೇ. ಬೇಕಾದರೇ ಪ್ರಾಣ ಬಿಡು ಅಂತ ಹೇಳು ಬಿಟ್ಟುಬಿಡುತ್ತೆನೆ ನನ್ನನ್ನ ಮರೆತುಬಿಡು ಅಂತ ಮಾತ್ರ ಹೇಳಬೇಡ ಕಣೇ ಸುಷಿ ...
ನಿನ್ನನ್ನ ನಾ ಮರೆಯಲು ಕಾರಣಗಳಿಲ್ಲ . ನಿನ್ನ ನೆನಪುಗಳು ನನ್ನಲ್ಲಿ ಸವೆಯುದೂ ಇಲ್ಲ .
ನೆನಪಾದೆ ಇಂದು ನೀನು ... ಹಾಗೆ ಸುಮ್ಮನೆ...
ಹೇ ಗೆಳತಿ
ಅಂದು ನೀ ಕೊಟ್ಟ
ಪ್ರೀತಿಯ ಸಿಹಿ ಮುತ್ತುಗಳನ್ನ
ಮರಯಲಾದೀತೆ ಇಂದು..?
ಹೇ ಗೆಳತಿ
ಅಂದು ನೀನಾಡಿದ
ಪಿಸುಮಾತಿನ
ಕಲರವವನ್ನ
ಮರಯಲಾದೀತೆ ಇಂದು..?
ಹೇ ಸುಷಿ ನನ್ನ ನೆನಪಿನ ಚೀಲದಲ್ಲಿ ಹೇಳಲಾಗದ ಕವಿತೆಗಳ ಸರಮಾಲೆ. ಗೀಚಿಬರೆದರೂ ಮಗಿಯದ ಪ್ರೇಮದ ಸಂದೇಶಗಳನ್ನ ಅವಿತಿಟ್ಟುಕೊಂಡಿದ್ದೆನೆ ಹೇ ಹುಡುಗಿ "ನೀ ನನ್ನ ಪ್ರೀತಿಯ ದೇವತೆ" ಕಣೇ ಈ ಭಕ್ತನ ಕೂಗು ನಿನಗೆ ಕೇಳಿಸದಿದ್ದರೆ ನಾನು ಹುಟ್ಟಿದ್ದೆ ದಂಡ.... "ಕೂಗಿ.. ಕೂಗಿ ಕರೆದರೂ ನಾನು ಕೇಳಲಿಲ್ಲವೇ ಒಮ್ಮೆ ಬಂದು ಹೋಗೆ ನೀನು ಕರುಣೆ ಇಲ್ಲವೇ.."
ನೀನಿಲ್ಲದ ನಾನು.......
ನಾನಾಡುವ ಈ ಮಾತು ವ್ಯರ್ಥ.
ಉಸಿರಾಡುವ ಗಾಳಿ ವ್ಯರ್ಥ.
ನಾ ನೋಡುವ ಕಣ್ಣು ವ್ಯರ್ಥ.
ನಾ ಹುಟ್ಟಿದ ಈ ಜನ್ಮ ವ್ಯರ್ಥ.
ಇನ್ನೊಮ್ಮೆ, ಮತ್ತೊಮ್ಮೆ , ಮಗದೊಮ್ಮೆ ಯೋಚನೆ ಮಾಡು ಸುಷಿ ನಾ ನಿನ್ನ ಮೇಲಿಟ್ಟ ಪ್ರೀತಿ ಯಾವ ಮಜ್ನುಗೂ ಕಡಿಮೇನಿಲ್ಲ ಈ ಜನ್ಮ ಪೂರ್ತಿ ನಿನ್ನ ಪ್ರೀತಿನ ಕಾಯುವ ದಾಸ ನಾನು. ನಿನ್ನ ಪ್ರೀತಿ ಪಡೆಯಲೇಂದೆ ಆ ಬ್ರಹ್ಮನಲ್ಲಿ ವರ ಪಡೆದು ಹುಟ್ಟಿದ ಕೂಸೆ ನಾನು . ಪಡೆಯದೆ ಹೊದರೆ ನಿನ್ನ ಪ್ರೀತಿ ನನ್ನಂತ ಪಾಪಿ ಇನ್ನೊಬ್ಬನಿಲ್ಲ ನನಗೇಂದೆ ಇನ್ನೊಂದು ಜನ್ಮವಿದ್ದರೆ ಅದು ಕೂಡ ನಿನ್ನ ಪ್ರೀತಿಗೆ ಮುಡಿಪು.....
ನಿನ್ನ ಪ್ರೀತಿಯ ಕಾಯಕ
SATISH N GOWDA
ಅವಳ ಬಗ್ಗೆ ಇಣುಕು ನೋಟ
ನೆಚ್ಚಿನ ಗೆಳತಿಗೆ ಮೊದಲ ಪ್ರೀತಿಯ ಪತ್ರ .....
http://nannavalaloka.blogspot.com/2009/12/hi-sushma.html
"ನನ್ನುಡುಗಿಗೆ ಪ್ರೇಮಿಗಳ ದಿನದ ಕಿರು ಕಾಣಿಕೆ "
http://nannavalaloka.blogspot.com/2010/02/blog-post_11.html
Sunday, October 17, 2010
ಮೋಹಕ ಕಂಗಳ ಚಲುವೆಗೆ ...
ಮೋಹಕ ಕಂಗಳ ಚಲುವೆಗೆ ...
ಮಳೆಗಾಲ ಮುಗಿದರು ಇಲ್ಲಿ ವರ್ಷಧಾರೆ ನಿಂತಿಲ್ಲ ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ. ಆ ಮಳೆ ಬಂದ ರಬಸದಷ್ಟೇ ಕಾಡಾಲಾರಾ0ಬಿಸಿತ್ತು ನಿನ್ನಯ ನೆನೆಪು ಹೇ ಹುಡುಗಿ ಈ ಮಳೆಗೂ ನಿನ್ನ ನನ್ನ ಪ್ರೀತಿಗೂ ಏನೋ ಒಂತರ ಅನುಬಂಧ ,ನಂಟು ನಮ್ಮಿಬ್ಬರ ಪ್ರೀತಿ ಚಿಗುರಿದ ದಿನವನ್ನು ನೆನೆದು ನೋಡು ...! ಅಂದು ನಾವಿದ್ದದ್ದು ನಿಮ್ಮೂರಿನ ಆ ಮಲೆನಾಡ ಗುಡ್ಡದ ಮೇಲೆ ನನ್ನ ಪ್ರೀತಿಯ ಕರೆಗೆ ಒಗುಟ್ಟು ನಿನ್ನೆಲ್ಲ ಕೆಲಸಗಳನ್ನು ಬಿಟ್ಟು .ಅಂದು ಮಧುರ ಭಾಂದವ್ಯ ದೊಂದಿಗೆ ನನ್ನ ನಿನ್ನ ಪ್ರೀತಿಗೆ ಅಂಕಿತ ಹಾಡಿದ್ದೆ ನೆನಪಿದೆಯ ..? ಹುಡುಗಿ ಹಾಗೇ ನೀನು ನನಗೆ I LOVE U 2 ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ನಮ್ಮಿಬ್ಬರ ಪ್ರೀತಿಗೆ ಹನಿಯ ಸಿಂಚನ ಮಾಡಿದ್ದ . ನನ್ನ ಪ್ರೀತಿಯ ಗುಬ್ಬಚಿ ಮರಿ ಒದ್ದೆಯಗದಿರಲೆಂದು ಎದೆಯತೋಳಲ್ಲಿ ನಿನ್ನನ್ನು ಸೇರಿಸಿದ್ದೆ . ಮೊದಲಿನಿಂದಲೂ ಅಷ್ಟೇ ಮಳೆ ಬಂತೆಂದರೆ ಸಾಕು ನನ್ನೆಲ್ಲಾ ನೆನಪುಗಳ ಹಕ್ಕಿಗೆ ರೆಕ್ಕೆ ಬಿಚ್ಚಿ ಹಾರೋ ಸಮಯ ಶುರುವಾಯಿತೆಂದೇ ಅರ್ಥ ಇದು ನೆನ್ನೆ ಮೊನ್ನೆಯದಲ್ಲ ಸರಿ ಸುಮಾರು ನನ್ನ ಬಾಲ್ಯದಿಂದಲೂ ಕೋಡ ಅದು ನಿನಗೂ ಗೊತಿಲ್ಲದ ವಿಷಯವೇನಲ್ಲ ಬಿಡು .ಆದರೆ ಅಂತಹ ಎಷ್ಟೋ ಮಳೆಯದಿನಗಳು ನಮ್ಮಿಬ್ಬರನ್ನ ಭಾವುಕರನ್ನಗಿಸಿವೆ ಅಲ್ಲವೇನೆ ಪಾಪು ...!
ಕಳೆದ ವಾರ ನಾನು ನನ್ನ ಸ್ನೇಹಿತರ ಜೊತೆಗೊಡಿ ನಿಮ್ಮೂರಿನ ಕೆಲ ಪ್ರವಾಸಿ ತಾಣಗಳನ್ನು ಸುತ್ತಾಡಿ ಕೊನೆಗೊಮ್ಮೆ ಆಕಸ್ಮಿಕವಾಗಿ ನಾವು ಪ್ರತಿ ಬೇಟೆಯಲ್ಲೂ ಕುಳಿತು ಕೊಳ್ಳೋ ಜಾಗದಲ್ಲಿ ಹೋಗಿ ಕುಳಿತೆ . ಆಕಸ್ಮಿಕವೋ ಅಥವಾ ಅದೃಷ್ಟವೋ ಎಂಬಂತೆ ವರುಣರಾಯ ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದ .ಆಗ ಕಾಡಿತ್ತು ಏಕಾಂಗಿತನ ಅವಾಗ ನಿನ್ನ ನೆನಪಿನೊಂದಿಗೆ ಹುಟ್ಟಿದ ಕವನವೇ ಇದು ಹೇಗೂ ಮುಂದಿನ ರಜಾ ದಿನಗಳಲ್ಲಿ ನಾನು ನಿಮ್ಮ ಊರಿಗೆ ಬರ್ತಿದೀನಿ ನಿನ್ನ ಹೆಜ್ಜೆಯ ಜೊತೆ ಹೆಜ್ಜೆ ಸೇರಿಸುವ ಆಸೆ, ಕೈ ಕೈ ಹಿಡಿದು ಒಂದಿಡೀ ದಿನ ನಿನ್ನ ಜೊತೆ ಸಾಗುತ್ತಾ ನಿಮ್ಮೂರಿನ ಬೆಟ್ಟ ಗುಡ್ಡಗಳನ್ನು ಪರಿಚಯಸು ನಮ್ಮಿಬ್ಬರಿಗೆ ಆಸರೆಯಾಗಿ ವರುಣರಾಯ ಜೊತೆಯಲ್ಲಿ ಇದ್ದೇ ಇರುತ್ತಾನೆ ಒಂದಿಷ್ಟು ಸಮಯ ಪ್ರೀತಿಯ ಲೋಕದಲ್ಲಿ ರಾಜ ರಾಣಿ ಯಾಗಿ ಮೆರೆದಾಡುವ ಹಾಗೇ ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅದರಲ್ಲಿ ನನ್ನ ಪ್ರತಿಬಿಂಬ ಕಾಣುವ ಆಸೆಯಾಗಿದೆ ಹಾಗೇ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು ಹೇ ಪಾಪು ರೆಡಿಯಾಗಿರು ....!
SATISH N GOWDA
9844773489
Saturday, October 9, 2010
ಹೇಳು ಹುಡುಗಿ ನೀನ್ಯಾರೆ...?
ಹೇಳು ಹುಡುಗಿ ನೀನ್ಯಾರೆ...?
ಹೇ ಹುಡುಗಿ
ನೀ ತೊಟ್ಟರೆ ಲಂಗಾ-ದಾವಣಿ
ರಾಜಕುಮಾರಿಯೂ ಎದ್ದು ಬಂದಾಳಲ್ಲಾ
ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು.
ನಿನ್ನ ನಗುವ ಕಂಡ ರಾಜಕುಮಾರ
ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು
ನಿನೇನು ಹುಡುಗಿಯೋ ಅಥವಾ
ಧರೆಗೀಳಿದು ಬಂದ ಇಂದ್ರಲೋಕದ
ಸ್ಪಪ್ನ ಸುಂದರಿಯೋ...?
ಹೇ ಹುಡುಗಿ
ನೀ ತೊಟ್ಟರೆ ಗಾಗ್ರ ಚೋಲಿಯ
ನಾಚಿ ನಿಂತಾನಲ್ಲಾ
ನಿನಗೆ ಜನ್ಮ ಕೊಟ್ಟ ಆ ಬ್ರಹ್ಮ,
ಧುಮಕ ಹೊಂಟಾನಲ್ಲಾ,
ಆ ಸಮುದ್ರಕ್ಕೆ ಈ ಸೂರ್ಯ
ನಿನೇನು ಹುಡುಗಿಯೋ ಅಥವಾ
ಸೌಂದರ್ಯದ ರಾಕ್ಷಸಿಯೋ..?
ಹೇ ಹುಡುಗಿ
ನೀ ತೊಟ್ಟರೆ ಸ್ಯಾರಿ, ರವಕೆಯ
ಓಡಿ ಬಂದಾರಲ್ಲಾ
ನಿನ್ನ ನೋಡಲು ರೆಂಬೆ,ಊರ್ವಶಿ,ಮೇನಕೆಯರು
ಸಾರ ಹೊರಟಾರಲ್ಲಾ
ದೇವಲೋಕದ ಇಂದ್ರನೆ ಮೇಲೆ ಯುದ್ದವ
ನಿನೇನು ಹುಡುಗಿಯೋ ಅಥವ ದೇವ ಕನ್ಯಯೋ...?
ನೀ ನಿಂತರೆ ಕಣ್ಣ ಮುಂದೆ
ಕಾಣದಾಯಿತು ಮುಂದಿನ ಪ್ರಪಂಚ
ಬಾರದಾಯಿತು ಮಾತುಗಳ ಸ್ವರಮಾಲೆ
ನಿನ್ನ ಹೊಗಳಲು ಚಂದದ ಪದಗಳಿಲ್ಲ
ನಾ ನೋಡಲು ಈ ಪ್ರಪಂಚದಲ್ಲಿ ಎನೋ ಉಳಿದಿಲ್ಲ
ನೆನ್ನೆ ಮೊನ್ನೆಯವರಿಗೊ ನೀ ಕಾಣಲಿಲ್ಲ
ಹೇಳು ಹುಡುಗಿ ನೀನ್ಯಾರೆ...?
ನೀ ತೊಟ್ಟರೆ ಲಂಗಾ-ದಾವಣಿ
ರಾಜಕುಮಾರಿಯೂ ಎದ್ದು ಬಂದಾಳಲ್ಲಾ
ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು.
ನಿನ್ನ ನಗುವ ಕಂಡ ರಾಜಕುಮಾರ
ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು
ನಿನೇನು ಹುಡುಗಿಯೋ ಅಥವಾ
ಧರೆಗೀಳಿದು ಬಂದ ಇಂದ್ರಲೋಕದ
ಸ್ಪಪ್ನ ಸುಂದರಿಯೋ...?
ಹೇ ಹುಡುಗಿ
ನೀ ತೊಟ್ಟರೆ ಗಾಗ್ರ ಚೋಲಿಯ
ನಾಚಿ ನಿಂತಾನಲ್ಲಾ
ನಿನಗೆ ಜನ್ಮ ಕೊಟ್ಟ ಆ ಬ್ರಹ್ಮ,
ಧುಮಕ ಹೊಂಟಾನಲ್ಲಾ,
ಆ ಸಮುದ್ರಕ್ಕೆ ಈ ಸೂರ್ಯ
ನಿನೇನು ಹುಡುಗಿಯೋ ಅಥವಾ
ಸೌಂದರ್ಯದ ರಾಕ್ಷಸಿಯೋ..?
ಹೇ ಹುಡುಗಿ
ನೀ ತೊಟ್ಟರೆ ಸ್ಯಾರಿ, ರವಕೆಯ
ಓಡಿ ಬಂದಾರಲ್ಲಾ
ನಿನ್ನ ನೋಡಲು ರೆಂಬೆ,ಊರ್ವಶಿ,ಮೇನಕೆಯರು
ಸಾರ ಹೊರಟಾರಲ್ಲಾ
ದೇವಲೋಕದ ಇಂದ್ರನೆ ಮೇಲೆ ಯುದ್ದವ
ನಿನೇನು ಹುಡುಗಿಯೋ ಅಥವ ದೇವ ಕನ್ಯಯೋ...?
ನೀ ನಿಂತರೆ ಕಣ್ಣ ಮುಂದೆ
ಕಾಣದಾಯಿತು ಮುಂದಿನ ಪ್ರಪಂಚ
ಬಾರದಾಯಿತು ಮಾತುಗಳ ಸ್ವರಮಾಲೆ
ನಿನ್ನ ಹೊಗಳಲು ಚಂದದ ಪದಗಳಿಲ್ಲ
ನಾ ನೋಡಲು ಈ ಪ್ರಪಂಚದಲ್ಲಿ ಎನೋ ಉಳಿದಿಲ್ಲ
ನೆನ್ನೆ ಮೊನ್ನೆಯವರಿಗೊ ನೀ ಕಾಣಲಿಲ್ಲ
ಹೇಳು ಹುಡುಗಿ ನೀನ್ಯಾರೆ...?
ಹೇಳು ಹುಡುಗಿ ನೀನ್ಯಾರೆ...?
SATISH N GOWDA
Saturday, October 2, 2010
ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!
(ಚಿತ್ರ ಕೃಪೆ ಗೂಗಲ್ )
ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!
ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ಈ ಡೈಲಾಗ್ ಎಲ್ಲೋ ಕೇಳಿದೀನಿ...! ಅನಿಸ್ತಿದೆ ಆಲ್ವಾ Canfuse ಬೇಡ ..! ಇದು "ನಾಗರಹಾವು " ಚಿತ್ರದ ಅಂಬಿ ಹುಡುಗಿಯರನ್ನ ರೇಗಿಸುವು ಪರಿ ಇದೀಗ ಈ ಹಾಡು ಬದಲಾಗಿದೆ ಹೇಗೇ ಅಂತ ಕೇಳಿ ... ! F M ರೇಡಿಯೋ ಗಳಲ್ಲಿ ವ್ಹ್ಹಾರೆವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ತಿರಗಕಿಲ್ಲ್ವಾ ಹೋಗು....! ಹೋಗು ...! ಹೋಗ್ತಾ ಅಂಗೆ ಅಪ್ಪನ ಕಾಲದ ಸೂಪರ್ ಹಿಟ್ ಸಾಂಗನ ಕೇಳ್ಕೊಂಡು ಹೋಗು ..! ಹಾಗಂತ ನಮ್ಮ ಊರಿನ ಹುಡುಗಿಯರೇನು ಕಮ್ಮಿ ಇಲ್ಲ "ಕಾಲಕ್ಕೆ ತಕ್ಕಂತೆ ತಾಳ "ಅನ್ನೋ ಹಾಗೆ ಅವರೂ ಕೋಡ ಪ್ರೇಮದ ಪತ್ರ ಹೋಗಿ ಎಲ್ಲಾ ಮೊಬೈಲ್ ಬಂದಿದೆ ಇವರಿಗೆ ಎಲ್ಲಾ ಮೊಬೈಲ್ ಲ್ಲೇ , ಮೊಬೈಲ್ ಬಿಟ್ಟರೆ ಬೇರೇ ಲೋಕ ತಿಳಿಯದು ಮೊದಲೆಲ್ಲ ಒಂದು ಹುಡುಗ ಹುಡುಗಿಗೆ ಪ್ರಪೋಸೆ ಮಾಡಿದರೆ ಅವಳು ಸ್ವಲ್ಪ ಯೋಚನೆ ಮಾಡಿ ಬೆಳಗ್ಗಿ ಉತ್ತರ ಹೇಳುತಿದ್ದಳು ದ್ಯರ್ಯ ಇಲ್ಲದ ಹುಡುಗಿಯರು ತನ್ನ ಉಡುಗೆಯ ಮೊಲಕ ಪ್ರಿಯಕರನಿಗೆ ಪ್ರೇಮ ಪತ್ರ ನೀಡುತ್ತಿದ್ದಳು ಹೇಗೆಂದರೆ ರೆಡ್ -ಒಪ್ಪಿಗಿಇಲ್ಲ ಯಲ್ಲೋ - ವೈಟೆ ಮಾಡ್ತಿದ್ದೇನೆ ಬ್ಲೂ - ನಾನು ನಿನ್ನನ್ನ ಪ್ರಿತಿಸ್ತಿದೇನೆ ಅಂತ ನಮ್ಮ ಚಿಂದಿ -ಚೋರ್ ಹುಡುಗರು ಅರ್ಥ ಮಾಡಿ ಕೊಳ್ಳುತ್ತಿದ್ದರು , ಈ ಹದಿಹರೆಯದ ಮನಸ್ಸೇ ಹೀಗೇ ಅರ್ದ ಬೆಂದ ಮಡಿಕೆಯ ಹಾಗೆ "ಎಲ್ಲವೂ ತಿಳಿದಂತೆ ಹೋಗಿ ಏನೋ ತಿಳಿಯದಾಯಿತು ಸರ್ವಜ್ಞ " ಅನ್ನೋ ಹಾಗೇ ಇಲ್ಲಿ ಎಲ್ಲವೂ ಅರೆ -ಬರೇ ಕಲಿತು ಕುತೋಹಲದ ಮದ್ಯಯೇ ಇವರ ಜೀವನ ಸಾಗುತಿರುತ್ತದೆ ಸಮಾನ ವಯಸ್ಸಿನ ಗೆಳೆಯರು ಮನದಾಳದ ಮಾತುಗಳು , ಸ್ವಚಂದವಾದ ಕನಸುಗಳು .ನೆಚ್ಚಿನ ಗೆಳತಿಯರ ಹೊಸ ಹೊಸ ಟೇಸ್ಟ್ ಗಳು . ಈ ಮೂಲಕ ಕಾಲೇಜುಗಳಲ್ಲಿ ಹುಡುಗ ಹುಡುಗಿಯರನ್ನು ಚುಡಾಯಿಸುವುದು ಒಬ್ಬರೊನ್ನಬ್ಬರು ಪರಿಚಯಿಸಿಕೊಳ್ಳುವುದು , ಹುಡುಗರು ಹುಡುಗಿಯರಿಗೆ ಹೊಡೆಯುವ ಡೈಲಾಗ್ ಗಳು ಇವೆಲ್ಲವೂ ವಿಬಿನ್ನ ರೀತಿಯ ಮಾಯಾಲೋಕಕ್ಕೆ ಈ ನಮ್ಮೊರಿನ ಹುಡುಗಿಯರನ್ನು ಕರೆದೊಯ್ಯುವ ನಾನಾ ಪ್ರಯತ್ನಗಳು , ಈಗಿನ ಕಾಲೇಜುಗಳಲ್ಲಿ ಹುಡುಗ ಹುಡುಗಿಯ ಬೇದವಿಲ್ಲದೆ ಇರುವುದು ಒಂದು ರೀತಿಯ ಅಗತ್ಯವಾದರೂ ಕೆಲವೊಮ್ಮೆ ಇದು ಮಿತಿಯಾದರೆ .....? ಯೋಚಿಸಿ ನೋಡಿ ...! ಇದೆಲ್ಲವನ್ನು ಮರೆತು ನಮ್ಮೊರಿನ ಹುಡುಗಿಯರು ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ ಅಂದರೆ ಮೆಚ್ಚಲೇ ಬೇಕು ಅದಕ್ಕೆ ನಾ ಹೇಳಿದ್ದು ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ... ಅದರಲ್ಲೂ ನಮ್ಮ ಪಡ್ಡೆ ಹುಡುಗರು ಕೇಳ್ಬೇಕಾ ....? ಒಂದು ಒಳ್ಳೆ ಹುಡುಗಿ ಕಾಲೇಜುಗೇ ಬಂದರೆ "ಯಾರೇ ನೀ ದೇವತೆಯ " ಅಂತ ಹಾಡಕ್ಕೆ ಶುರುಮಾಡ್ತಾರೆ ಅಕಸ್ಮಾತ್ ಹುಡುಗಿ ಕಾಲೇಜುಗಳಲ್ಲಿ ಬೇಗ ಬಂದರೆ " ಬಾರೆ ...! ಬಾರೆ ..! ಚಂದದ ಚಲುವೆಯೇ ಬಾರೆ...! ಅಪ್ಪಿ ತಪ್ಪಿ ಆ ಹುಡುಗಿ ನಕ್ಕರೆ " ಸುಮಸುಮ್ನೆ ನಗ್ತಾಳೆ " ಅಂತಾರೆ ಹೀಗೇ ಒಂದಿಲ್ಲದ ಒಂದು ಹಾಡಿನ ಮೂಲಕ ಹುಡುಗಿಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡ್ತಾರೆ ಇವೆಲ್ಲ ಹುಡುಗರು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಕೆಲ ಹುಡುಗಿಯರು ಪಡ್ಡೆ ಹುಡುಗರನ್ನು ಕಂಡು ಕಾಣದೆಯೇ "ಪೂಲ್ಸ್ " ಗಳು ಎಂದು ಮೂಗು ತಿರಿಗಿಸಿಕೊಂಡು ಹೊರಡೋ ಹುಡುಗಿಯರಿರುತ್ತಾರೆ ಇಂತ ಹುಡುಗಿಯರು ಕೋಡ ಚತುರರೆ ಆದರೆ ತೋರಿಸಿಕೊಳ್ಳಲ್ಲ ಅಷ್ಟೇ . ಆದರೆ ವೇಟಿಂಗ್ ರೋಮ್ ನಲ್ಲಿ ಕುಳಿತು ತನ್ನ ಗೆಳತಿಯರೊಂದಿಗೆ ಹುಡುಗರು ರೇಗಿಸುವ ಮತ್ತು ಚುಡಾಯಿಸುವ ವಿಷಯ ಗಳನ್ನೇ ಚರ್ಚೆ ಮಾಡುವುದಂತೋ ನಿಜ ಎಲ್ಲಾ ತಮಾಷೆಗೆ ...! ತಮಾಷೆಗೆ ...! ಇದನ್ನೆಲ್ಲಾ ಮಾಡುತ್ತಾ ಹುಡುಗಿಯರು ತುಂಬಾ ಬುದ್ದಿವಂತರಾಗಿದ್ದರೆ ಹೇಗೆಂದರೆ ತನ್ನತ್ತ ಬರುವ ಹುಡುಗರಿಗೆ ಹೇಗೇ ,ಎಲ್ಲಿ ,ಚಳ್ಳೆ ಹಣ್ಣು ತಿನಸಬೇಕೆಂಬುದು ನಮ್ಮೊರ ಹುಡುಗಿಯರು ತುಂಬಾ ಚಾನ್ನಗಿ ತಿಳಿದುಕೊಂಡಿದ್ದಾರೆ ಹುಡುಗರ ಕೈಗೆ ಸಿಕ್ಕು ಸಿಕ್ಕದ ಹಾಗೇ ತನ್ನ ಸೌಂದರ್ಯ ವನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ "ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಹಾಟ್ಸ್ ಅಪ್ ಟು ನಮ್ಮೊರ ಹುಡುಗಿಯರು " "ಹಾಗೇ ನನ್ನದೊಂದು ಚಿಕ್ಕ ಮನವಿ ದಯವಿಟ್ಟು ಸುಮಸುಮ್ನೆ ಫೋನ್ ಮಾಡೋ ಹುಡುಗರನ್ನ ಅಥವಾ ನೀವೇ ಕಾಲ್ ಮಾಡಿ ಫ್ರಿಂಡ್ ಮಾಡ್ಕೊಳ್ಳೋ ಹುಡಗರನ್ನ ನಿಮ್ಮ ಚಿಕ್ಕ ಚಿಕ್ಕ ಸಂತೋಷ ಗಳಿಗೋಸ್ಕರ ಒಮ್ಮೆಲೇ ಡ್ರಾಪ್ ಮಾಡಬೇಡಿ ಪ್ಲೀಸ್ ಯಾಕೆಂದರೆ ನೀವೇನೋ ವಿಶಾಲ ಹೃದಯದವರು ಆದರೆ ಅವರು ಪುಟ್ಟ ಹೃದಯದ ಹುಚ್ಹು ಪ್ರೇಮಿಗಳು ನೀವೂ ಶೋಕಿ ಮಾಡಿ, ನಾನು ಬೇಡ ಅನ್ನಲಿಲ್ಲ ಆದರೆ ಹರೇಹುಡುಗರ ಮನಸ್ಸು ನೋಯಿಸಬೇಡಿ ಅವರು ಪಡೋ ನೋವು ತುಂಬಾ ದೊಡ್ಡದು " ಒಮ್ಮೊಮ್ಮೆ ಅತ್ಮಾತ್ಯೆ ಗಳಿಗೋ ಪ್ರಯತ್ನ ಪಡಬಹುದು ಜೋಕೇ ....! ಒಮ್ಮೆ ಯೋಚಿಸಿ ನೋಡಿ ಯೋಚನೆ ಮನುಕುಲಕ್ಕೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ ....!
SATISH N GOWDA
Tuesday, September 28, 2010
ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ
ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ
ಹೇ.....! ಅಮೋಘ ಈ ನಡುವೆ ಬರ್ತಾ ಬರ್ತಾ ನಿಂದು ಜಾಸ್ತಿ ಆಯಿತು ಕಣೇ ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್ ಕೋಪಾನಾ U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....!
ನನಗೂ ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ ಹುಡುಗಿನಾ ನಾನು ನಿನ್ನೆ ನೋಡ್ತಿರೋದು ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ ಬರೋದು ತುಂಬಾ ಕಷ್ಟ ,
ಓ ......! ಗೊತಯಿತು ಕಣೇ ಅಮೋಘ ,ನಾನು Mysore ನವಳು ಅಂತಾನ ಆಗಿನ ಕಾಲದ ಕವಿಗಳಿಂದ ಹಿಡಿದು ಈಗಿನ ಕಾಲದ ಸಿನಿಮ ಸ್ಟಾರ್ ಗಳ ವರಗೂ Mysore ಹುಡುಗಿರನ್ನ ತುಂಬಾ ಹೊಗಳ್ತಾರೆ So Bengalore ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......! ಹೋಗೆಲೇ ದಡ್ಡಿ ನೀನು . "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು ತಾನೆ..? ಅವನು ಯಾವೋನೋ "ದೇವದಾಸ್ " ಅಂತೆ ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ ಕೊಡ್ಕೊಂಡ್ ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ
ಆದರೋ ನೀನು ಒಳ್ಳೆಯವಳು ಕಣೇ ಅಮೋಘ ಹೇ ಹುಡುಗಿ ಇಷ್ಟೊತ್ತು ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry ಕಣೇ ಅಮೋಘ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ ನಿನಗೆ ಹೃದಯ ಕೊಟ್ಟಿರೋದು ಅದನ್ನ ಇಟ್ಕೊಂಡು ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆಪಾಪ,Exams Busy ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
ಹೇ ಅಮೋಘ ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ . ನಿನಗೊತ್ತಾ ನಾನು "ಆಕಾಶ್ " Move ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ" ಹಾಡಿಗೋಸ್ಕರ ನೀನು ನನ್ನ Life ನಲ್ಲಿ ಅಷ್ಟೊಂದು ಬೇರೆತೋ ಹೋಗಿದಿಯ ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ ಕಣೇ ಅಮೋಘ.
ನನಿಗನಿಸುತ್ತೆ ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move ನಲ್ಲಿ Climax ಗೇ ಗಣೇಶ್ ಅಕೊತನಲ್ಲ ಆ ಗೆಟಪ್ ನ Tilar ಗೇ ನಾನೆ Ader ಕೊಟ್ಟೋ Stich ಮಾಡಿಸ ಬೇಕಾಗುತ್ತೆ ಕಣೇ
Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ ಅಮೋಘ ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ಎದೆಯಲ್ಲಿರಿವ ಮಳೆಯಂತ ಪ್ರಿತಿಯನ್ನ ನನ್ನ ಮೇಲೇ ಸುರಿಸ್ತಿಯ ಅಂತ ಕಾಯಿತ ಇದೀನಿ ಕಣೇ ಅಮೋಘ......!
ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
SATISH N GOWDA
9844773489
9844773489
Subscribe to:
Posts (Atom)















