(ಚಿತ್ರ ಕೃಪೆ ಗೂಗೆಲ್ )
ನಿನ್ನಯ ನೆನಪು...ಮರೆತಿಲ್ಲ ನಾ ನಿನ್ನನ್ನು
ಮರೆಯಲು ಸಾಧ್ಯವಿಲ್ಲ ನಿನ್ನಯ ನೆನಪನ್ನು
ನಿನ್ನ ನೆನಪೊಂದೆ ನನ್ನ ಜೀವ
ಹೇಗೆ ಮರಯಲಿ ಗೆಳತಿ ನಾ ನಿನ್ನನ್ನ..?
ಹತ್ತಿರದಲ್ಲಿ ನೀನಿಲ್ಲ
ನಿನ್ನಯ ನೆನಪು ನನ್ನದೆಯಲ್ಲಿ ಮಾಸಿಲ್ಲ
ಮರೆತರೂ ಮರೆಯಲಾಗದ ನೆನಪು ನೀ ಕೊಟ್ಟ ಪ್ರೀತಿ
ಹೇಗೆ ಮರೆಯಲಿ ಹೇಳು ನೀ ಕೊಟ್ಟ ಪ್ರೀತಿಯ ಬಳ್ಳಿಯನ್ನ..?
ಅಳಿಸಲು ಮನಸಿಲ್ಲ ನಿನ್ನ ನೆನೆಪನ್ನ
ಉಳಿಸಲು ನೀನಿಲ್ಲ ನೆನಪಿನ ಸಾಲನ್ನ
ತೊದಲುತ್ತಿರುವ ಯುವ ಪ್ರೀತಿ ನಂದು
ಹೇಳು ಗೆಳತಿ ನಾ ಹೇಗೆ ಮರೆಯಲಿ ನಿನ್ನನ್ನ..?
ನೀ ಕೊಟ್ಟ ಪ್ರೀತಿಯ ನೆನಪಿನ ದೀಪದಿಂದ
ಜಗತ್ತನ್ನೇ ಬೆಳಗಿಸಲು ಹೊರಟಿರುವ ಹುಚ್ಚು ಮನಸ್ಸು ನಂದು
ಹುರಿದುಂಬಿಸಲು ನೀನಿಲ್ಲ, ಹಿಂತಿರುಗಲು ಮನಸಿಲ್ಲ
ಹೇಳು ಗೆಳತಿ ಮುಂದೇನು ಮಾಡಲಿ..?
ಕಣ್ಣ ಬಿಟ್ಟರೆ ನೀ ಕಾಣಲ್ಲ
ಕಣ್ಣು ಮುಚ್ಚಿದರೆ ನಿನೇ ಎಲ್ಲಾ
ನಿನ್ನ ನೆನಪಿನ ವೇದನೆ ಪಾತಳಕ್ಕಿಂತ ಆಳ
ಅನುಭವಿಸುವ ನನಗೇ ಗೊತ್ತು ಅದರ ಯಾತನೆ
ಹೇಗೆ ಮರೆಯಲಿ ಹೇಳು ಗೆಳತಿ ನಾ ನಿನ್ನನ್ನ..?
ನಿನ್ನಯ ನೆನಪು...
SATISH N GOWDA
9 comments:
nice lines... keep it up :)
chennagide sathish. keep it up.
preethisdooru bittodre manassige baro vedane ella thumba chennagi kavya maya vagi barediddiri. good
ಮಾನಸ ಮೇಡಂ ರವರಿಗೆ ನನ್ನವಳಲೋಕಕ್ಕೆ ಸ್ವಾಗತ ........
ಅಳಿಸಲು ಮನಸಿಲ್ಲ ನಿನ್ನ ನೆನೆಪನ್ನ
ಉಳಿಸಲು ನೀನಿಲ್ಲ ನೆನಪಿನ ಸಾಲನ್ನ
ತೊದಲುತ್ತಿರುವ ಯುವ ಪ್ರೀತಿ ನಂದು
ಹೇಳು ಗೆಳತಿ ನಾ ಹೇಗೆ ಮರೆಯಲಿ ನಿನ್ನನ್ನ..?
ee nalku salugalu tumba channagive satish keep writing
ಅಳಿಸಲು ಮನಸಿಲ್ಲ ನಿನ್ನ ನೆನೆಪನ್ನ
ಉಳಿಸಲು ನೀನಿಲ್ಲ ನೆನಪಿನ ಸಾಲನ್ನ
ತೊದಲುತ್ತಿರುವ ಯುವ ಪ್ರೀತಿ ನಂದು
ಹೇಳು ಗೆಳತಿ ನಾ ಹೇಗೆ ಮರೆಯಲಿ ನಿನ್ನನ್ನ..?
ವಿದ್ಯಾ ಕಾಮೆಂಟ್ ಸಿದಕ್ಕೆ ಧನ್ಯವಾದಗಳು ನನ್ನವಳಲೋಕಕ್ಕೆ ಸ್ವಾಗತ
ಹೀಗೇ ಓದುತ್ತಿರಿ ......
ಧನ್ಯವಾದಗಳು ಸಂಗೀತಾ ನಿಮ್ಮ ಅಬಿಪ್ರಾಯಕ್ಕೆ ನಾ ಚಿರಋಣಿ ....
ಮುಂದಿನ ಸಾಲುಗಳನ್ನು ಓದಿ ನಿಮ್ಮ ಮನಸ್ಸಿಗೆ ಹಿಡಿಸಬಹುದು ,ನನ್ನವಳಲೋಕಕ್ಕೆ ಸ್ವಾಗತ
ಕವನದ ಸಾಲುಗಳು ತುಂಬಾ ಚನ್ನಾಗಿವೆ ಸತೀಶ್. ಮುಂದುವರೆಸಿ..
ಧನ್ಯವಾದಗಳು ಅನಾಮಿಕ ನನ್ನವಳಲೋಕಕ್ಕೆ ಸ್ವಾಗತ
Post a Comment