Friday, June 25, 2010

ನಿನ್ನ ಮಗನಿಗೆ ನನ್ನ ಹೇಸರು ಇಡಬೇಡ...

 ಸಂಗೀತಾ ನಿನ್ನ ಮಗನಿಗೆ ನನ್ನ ಹೇಸರು ಇಡಬೇಡ...

         ಈ ಪ್ರಪಂಚದಲ್ಲಿ ಮೋಸ ಹೋಗುವವರು ಇರುವವರೆಗು ಮೋಸ ಮಾಡುವವರು ಇದ್ದೆ ಇರ್ತಾರಂತೆ. ಎಂಬುದು ದೊಡ್ಡವರ ಮಾತು ಅಕ್ಷರಶಃ ನಿಜ ಅಂತ ನನಗೆ ಮೊನ್ನೆ ಗೊತ್ತಾಯಿತು ಹೇಗೆ ಅಂತ ಕೇಳ್ತಿಯ...? ಕೆಲವೊಮ್ಮೆ ನಮಗರಿವಿಲ್ಲದೆ ನಾವು ಮೋಸ ಹೊಗಿರುತ್ತೆವೆ.  ನಾ ಹೇಳೊದನ್ನ ಮೋಸ ಎನ್ನುವ ಬದಲು ನಿನ್ನಿಂದ ಕಲಿತ ಪಾಠ ಅಂತ ನಾನು ತಿಳಿದುಕೊಂಡಿದ್ದೆನೆ. ನನ್ನ ಸ್ನೇಹಿತರೆಲ್ಲ ಹೇಳ್ತಿದ್ದರು ಹುಡುಗಿಯರನ್ನ ಜಾಸ್ತಿ ನಂಬಬೇಡ ಕಣೊ ಮುಟ್ಟಾಳ, ಜೊತೆಯಲ್ಲೆ ಇರ್ತಾರೆ ನಿಂಜೋತೆ ಸಿನಿಮಾಗೂ ಬರ್ತಾರೆ, ಪಾರ್ಕುಗಳಿಗೂ ಬರ್ತಾರೆ, ಅಮೇಲೆ ಒಂದಿನ ಇದೆಲ್ಲ ಬರೀ frendship ಅಲ್ವ ಅಂತ ಎನೋ ಗೊತ್ತಿಲ್ಲದೆ ಇರುವವರ ತರ ಕೈ ಕೋಟ್ಟು ಎಸ್ಕೇಪ್ ಅಗ್ತಾರೆ, ಹುಡುಗಿಯರು ಊಸರಹುಳ್ಳಿ ಜಾತಿಗೆ ಸೇರಿದವರು ಕ್ಷಣ ಕ್ಷಣಕ್ಕೆ ಬಣ್ಣ ಬದಲಿಸುತ್ತಾ ಇರ್ತಾರೆ ಅಂತ ಇನ್ನೂ ಎನೇನೊ ಹೇಳಿದ್ದರು.....  ಆದ್ರೆ ನಾನು ಮಾತ್ರ ಇದ್ಯಾವುದಕ್ಕು ಕಿವಿ ಕೊಡದೆ ನೀನೆ Gold, ನೀನೆ ನನ್ನ ಅಪ್ಪಟ ಬಂಗಾರ‍ ಅಂದುಕೊಂಡಿದ್ದೆ ಆದರೆ ನೀನು ಮಾಡಿದ್ದಾದರು ಏನು...?
           ನಾವು ದಿನ ಬೇಳಗಾದರೆ ಏನೆಲ್ಲಾ ಮಾತಾಡ್ತಿದ್ದಿವಿ ಒಂದು ಸರಿ ನೆನೆಪಿಸಿಕೊ...! ನೀನೆಲ್ಲಿ ನೆನೆಸ್ಕೊತಿಯ..? ಅದರಲ್ಲು ನೀನೀವಾಗ ಬೇರೊಬ್ಬನ ಮನೆಯ ಓಡತಿ ಅಲ್ಲವೇ..? ಆದರೆ ನನಗೇ ನೆನಪಿದೆ ಹೇಳ್ತಿನಿ ಕೇಳಿಸಿಕೊ..! ನಾನು ನೀನು ಹೆಚ್ಚು ಕಮ್ಮಿ ನಮ್ಮ ಮದುವೆ,ಮದುವೆಯಾಗಿ ನಮ್ಮ ಮಕ್ಕಳಗೆ ಹೆಸರಿಟ್ಟು ಯಾವ ಸ್ಕೂಲಿಗೆ ಸೇರಿಸಬೇಕು, ವರ್ಷಕ್ಕೆ ಗಂಡು ಮಗುವಾದರೆ ಎಷ್ಟು ಖರ್ಚು ಬರುತ್ತೆ ಅದೇ ಹೆಣ್ಣುಮಗುವಾದರೆ ಎಷ್ಟು ಖರ್ಚು ಬರುತ್ತೆ , ಅವನ ವ್ಯಾನ್ ಪೀಸ್ ಎನು..? ಅವನ ಟೈಮಿಂಗ್ಸ ಏನು ಅಂತೆಲ್ಲ think ಮಾಡಿದ್ವಿ ಅಲ್ವಾ...? ಆದರೆ ನೀನು ಮಾಡಿದ್ದು ಏನು , "ಮನಸ್ಸು ಒಬ್ಬನಿಗೆ, ದೇಹ ಒಬ್ಬನಿಗೆ" ಅನ್ನೊ ಹಾಗೆ  ಮಾಡಿಬಿಟ್ಟೆಯಲ್ಲ ಇದು ನಿನಗೇ ಸರೀನಾ...? ನಾನು ನಿನಗೆ ಏನು ದ್ರೋಹ ಮಾಡಿದ್ದೆ ಅಂತ ನೀನು ಬೇರೊಬ್ಬನನ್ನು ನನ್ನ ಜಾಗದಲ್ಲಿ ಕುಳ್ಳರಸಿ ಅವನಜೋತೆ ಮದುವೆಗೆ ಒಪ್ಪಿಕೊಂಡೆ..? ನಾನಿಲ್ಲಿ ಹಗಲಿರುಳು ನಮ್ಮಿಬ್ಬರ ಮುಂದಿನ ಭವಿಷ್ಯದ ಕನಸು ಕಾಣುತ್ತಿದ್ದರೆ, ನೀನು ಮಾತ್ರ ನಿನ್ನ ಭಾವಿಪತಿಯೊಂದಿಗೆ ನಿನ್ನ ಮುಂದಿನ ಜೀವನದ ಕನಸುಕಾಣುತ್ತಿದ್ದಿಯ ಅಲ್ವಾ..?
           ಛೀ.. ನೀವು ಹುಡುಗಿಯರೆ ಇಷ್ಟು ಕಣೇ.. ಕನಸೆಂದರೆ ಎನು ಅಂತ ಗೊತ್ತಿಲ್ಲದವನ ಕನಸಲ್ಲಿ ಬಂದು ದಿನಾ ರಾತ್ರಿ ಕಾಡ್ತಿರ ಅಮೇಲೆ ನನಸಾಗೊ ಟೈಮ್ ನಲ್ಲಿ ಏಸ್ಕೇಪ್ ಅಗ್ತಿರಾ..! ಒಂದು ಹುಡುಗ ನಿಮ್ಮನ್ನ ಪ್ರೀತಿ ಮಾಡ್ತಿದ್ದಾನೆ ಅಂತ ಗೊತ್ತಾದರೆ ಇಂದು ಮುಂದು ಯೋಚನೆ ಮಾಡದೆ ok  ಅಂತ ಹೇಳ್ತಿರ ಪಾಪ ಅವನಗೆ ನೂರಾರು ಕನಸಗಳನ್ನ ನೀವೆ ಕಟ್ಟಿ ಕೊಡ್ತೀರ ಅ ಕನಸುಗಳಿಗೆ ಒಂದು ಅರ್ಥ ಕಂಡುಕೊಳ್ಳೊ ಟೈಮ್ ನಲ್ಲಿ ನಡು ನೀರಿನಲ್ಲಿ ಕೈಕೋಟ್ಟು ಓಡೊಗ್ತಿರಾ .ಇದು ನನ್ನ ಜೀವನದಲ್ಲಿ ನೇಡೆದಿರೊ ಕಥೆಯಲ್ಲ, ಕಾಮನಾಗಿ ಹೇಳ್ತಿರೊದು ಇನ್ನು ನಿನ್ನ ವಿಷಯಕ್ಕೆ ಬಂದರೆ ನನಗೆ ನೀನು ಮಾಡಿರೊ ತಪ್ಪಿಗೆ ಆ ನಿನ್ನ ಹುಟ್ಟಿಸಿದನಲ್ಲ ಆ ದೇವರು ಕೂಡ ನಿನ್ನನ್ನ ಕ್ಷೇಮಿಸೊಲ್ಲ.
       ಹಾಯ್ ಸಂಗೀತಾ ನಾನು ಹೀಗೆಲ್ಲ ಹೇಳ್ತಿನಿ ಅಂತ ಬೇಜಾರು ಮಾಡಿಕೊಳ್ಳ ಬೇಡ Please ಮತ್ತೆನು ಮಾಡೊದು ಮನಸ್ಸಿನ ತುಂಬ ನಿನ್ನ ನೆನೆಪುಗಳೇ ತುಂಬಿವೆ. ನನ್ನ ಈ ಸಮಯ ಸಂದರ್ಭ ಹಾಗೆ ಮಾತಾಡುಸುತ್ತಿದೆ. ನನ್ನ ದುಃಖನ ಬೇರೆ ಯಾರ ಹತ್ರ ಹೇಳಿದರು ನನ್ನ ಹುಚ್ಚ ಅಂತಾರೆ. ಎನ್ ಮಾಡೊದು ಗೊತ್ತಾಗುತಿಲ್ಲ ಕಣೇ ಹೃದಯದಲ್ಲಿ ಹೇಳಿಕೊಳ್ಳಲಾಗದಷ್ಟು ನೋವಿದೆ, ಅದನ್ನೆಲ್ಲ ಯಾರ ಹತ್ರ ಹೇಳೊದು ಗೊತ್ತಾಗುತ್ತಿಲ್ಲ, ಹೋಗಲಿ ನಿನ್ನ ಎಲ್ಲಾ ನೆನುಪುಗಳನ್ನ ನನ್ನ ಜೊತೆ ಸಾಮಾಧಿ ಮಾಡೊಣ ಅಂದ್ರೆ ನನ್ನೆ ನಂಬಿಕೊಂಡ ಅಪ್ಪ-ಅಮ್ಮ ಪ್ರೀತಿಯ ಒಬ್ಬ ತಮ್ಮ ಇದ್ದಾರೆ. ಅಮೇಲೆ ಒಂದು ಹುಡುಗಿ ಗೂಸ್ಕರ ಈ ಪ್ರಪಂಚದಲ್ಲಿ ಬದುಕೋಕೆ ಹಾಗದೆ ಆತ್ಮಾಹತ್ಯ ಮಾಡಿಕೊಂಡ ಅಂತ ತಿಳ್ಕೊತ್ತಾರೆ.
             ನಾನು ಮುಂದಕ್ಕೆ ಏನೂ ಹೇಳೊಲ್ಲ ಯಾಕೆಂದ್ರೆ ನನಗೆ ಅಂತ ಒಂದು ಹುಡುಗಿ ತನ್ನ ಹೃದಯ ಕೊಡೊಕೆ ಮುಂದೆ ಬಂದಿದ್ದಾಳೆ ಅವಳು ಕೂಡ ನಿನ್ನ ತರ ಮುದ್ದುಮುದ್ದಾಗಿ ಇದ್ದಾಳೆ ಒಟ್ಟಿನಲ್ಲಿ ಹೊಸ ಹುಡುಗಿ ಜೊತೆ , ಹಳೆಹುಡುಗಿಯ ನೆನೆಪುಗಳು. ಹಳೇ ಹುಡುಗಿಯ ಪ್ರೀತಿಯಲ್ಲಿ ಹೊಸ ಹುಡುಗಿಯ ಮಿಲನ ಇದನ್ನೆಲ್ಲ ನೊಡ್ತೀದ್ದರೆ ನಾನು ನಿಜವಾಗಿ ಹುಚ್ಚನಾಗೊದರಲ್ಲಿ ಎರಡು ಮಾತಿಲ್ಲ ಬಿಡು.
ಇಲ್ಲ ಕಣೇ ಸಂಗೀತಾ ನೀನು ನನ್ನ ಮನಸ್ಸುನ್ನ ತುಂಬಾ ನೊಹಿಸಿಬಿಟ್ಟೆ ಕಣೇ. ನಾನು ನಿನಗೇ ಒಂದು ಪ್ರಶ್ನೆ ಕೇಳಬೇಕು ಕಣೇ ...! ಏನಿಲ್ಲ ನಿನ್ನ ಡ್ರಸ್ ಹೊಳೆಗೆ ಹಾಕೊ ಪೆಟ್ಟಿಕೋಟ್  ಯಾವ ಕಲ್ಲರ್ ತಗೊಂಡರೆ ನನಗೆ ಸೂಟ್ ಅಗುತ್ತೆ ಹೇಳೊ ಅಂತ ಫೋನ್ ಮಾಡ್ತಿದ್ದ ಹುಡುಗಿ ನೀನು , ಲೈಫ್  ಲಾಂಗ್ ಸಂಸಾರ ಮಾಡೊ ಹುಡುಗನ್ನ ತಗೊಬೇಕು ಅಂದ್ರೆ ನಾನು ನೆನಪಿಗೆ ಬರಲಿಲ್ಲವ ನಿನಗೆ...?  ಸರಿ ನಾನು ನಿನ್ನ ಜೊತೆ ಜಾಸ್ತಿ  ಮಾತಾಡೋಲ್ಲ  ಕಣೇ ನೀನಿವಾಗ ಬೇರೊಬ್ಬನ ಹೆಂಡತಿ. ಏನೆ ಹಾಗಲಿ ನಾನು ಪ್ರೀತಿ ಮಾಡಿದ ಹುಡುಗಿಯನ್ನ ಚನ್ನಾಗಿಟ್ಟಿರಪ್ಪ ಅಂತ ಆ ದೇವರಿಗೆ ನನ್ನ ಕಡೆಯಿಂದ ಕೆಳ್ಕೊತಿನಿ.
         ಇಷ್ಟೆಲ್ಲ ಆದ್ರೂ ನನ್ನದೂಂದು ಕೋರಿಕೆ ಕಣೇ ಹುಡುಗಿ ಅಕಸ್ಮಾತ್ ನಿನಗೆ ಮಗು ಆದರೆ ದಯವಿಟ್ಟು ನನ್ನ ಹೇಸರು ಇಡಬೇಡ ಪ್ಲೀಸ್ ಯಾಕೆಂದ್ರೆ ನಿನ್ನ ಬಾವಿಪತಿಯದ್ದು ಕೂಡ ದೇವನಹಳ್ಳಿನೇ... ಹೋ ನನಗೇಗೆ ಗೊತ್ತಾಯಿತು ಅಂತಾನಾ..ಆ ನಾನು ಲವ್ ಮಾಡಿದ್ದು ಹುಡುಗಿ ಚನ್ನಾಗಿರಬೇಕು ಅಂತ ಅವನ ಬಗ್ಗೆ ವಿಚಾರಿಸಿದ್ದೆ. ಅಮೇಲೆ ನಾನು ಎಲ್ಲಿಯಾದ್ರು ದೆವಾಸ್ತಾನಕ್ಕೆ ಹೊದಾಗ ನೀನು ಬರೊದು... ಅಲ್ಲಿ ನನ್ನ ಹೇಸರಿನ ನಿನ್ನ ಮಗನನ್ನು ಕರೆಯೋದು ನನ್ನ ಜೋತೆ ಬಂದಿರೊ ಹುಡುಗಿಗೆ ಅನುಮಾನ ಬರೊದು ಅವಳು ಮನೆಯಲ್ಲಿ ಹೋಗಿ ನನಗೆ  ಕ್ಲಾಸ್ ತಗೋಳೊದು ನನಗೆ ಇಷ್ಟ ಇಲ್ಲ ಅದಕ್ಕೆ ಹೇಳಿದ್ದು ನಿನ್ನ ಮಗನಿಗೆ ನನ್ನ ಹೇಸರು ಇಡಬೇಡ...




SATISH N GOWDA
9844773489
www.nannavalaloka.blogspot.com

No comments: