ಹೊಡಾಡುವ B M T C ಎಂದರೆ ಹಾಸ್ಯ ಕಥೆಯುಳ್ಳ ಸಿನಿಮಾಗಳಿಗೇನು ಕಮ್ಮಿ ಇಲ್ಲ ..!
ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಕೆಂಪು ಬಣ್ಣದ BUS ಬಂದೊಡನೆ ನಿಲ್ಲುವ ಬಸ್ಸಿನೊಳಗೆ ಅಷ್ಟೇ ನೀಟಾದ ಸಮವಸ್ತ್ರ ದರಿಸಿ ಕಸಿ ಬಿಸಿ ಅಂತ ಹತ್ತೋ ಹೈಸ್ಕೊಲ್ ಹುಡುಗಿಯರ ಗುಂಪು ಒಂದು ಕಡೆ ಯಾದರೆ, TIP TOP JEENS ಹಕೊಂಡಿರೋ COLLAGE ಹುಡುಗಿಯರ ಗುಂಪು ಇನ್ನೊಂದು ಕಡೆ, ಎಲ್ಲರು ಒಂದೇ ಒಟ್ಟಿನಲ್ಲಿ ಕಸಿ ಬಿಸಿ ಅಂತ ಬಸ್ ಹತ್ತಬೇಕು ಹೇಗಾದರೂ ಮಾಡಿ ಕಿಟಕಿ ಪಕ್ಕ ಸೀಟ್ ಸಂಪಾದಿಸಿ, ಕುತ್ಕೊಂಡು ರಸ್ತೆಯಲ್ಲಿ ಹೋಗೋ ಬರೋರನ್ನ ನೋಡ್ಕೊಂಡು ಹರಟೆ ಹೊಡಿಬೇಕು . ಕಣ್ಣುಮುಚ್ಚಿ ಕಣ್ಣು ತೆಗೆಯೋದೊರೊಳಗೆ BUS STOP ನಲ್ಲಿದ್ದ ಅಷ್ಟೂ ಜನ ಖಾಲಿ BUS ನಲ್ಲಿರುವ ಅಷ್ಟೂ ಸೀಟ್ ಬರ್ತಿ ಇದರ ಮದ್ಯ ಕಚೇರಿಗಳಿಗೆ ಹೋಗೋ ಕೆಲ ಹುಡುಗಾ ಅಥವಾ ಹುಡುಗಿಯರು ಪಾಡು ಹೇಳತೀರದು ಜೊತೆಯಲ್ಲಿ ಟಿಫಿನ್ ಬಾಕ್ಸ್ . ಕಷ್ಟ ಪಟ್ಟು ಹತ್ತಿ ಯಾವುದೊ ಒಂದು ಸೀಟ್ ನಲ್ಲಿ ಪವಡಿಸಿ ನಿಟ್ಟುಸಿರು ಬಿಡುವವರೆ ಹೆಚ್ಚು ಇನ್ನೂ ಮಿಕ್ಕವರದ್ದು ಸೀಟಿನ ಪಕ್ಕದಲ್ಲಿ ನಿಂತು ಸೀಟ್ ಎಲ್ಲಿ ಸಿಗುತ್ತೋ ಎಂದು ಕಾಯತ್ತ ಇರ್ತಾರೆ ಇನ್ನೂ ಕೆಲವರದ್ದು ಅರ್ಜೆಂಟ್ ಆಫೀಸಿನ ಕೆಲಸ ಇದ್ದು ಪಾಪ ಯಾವಾಗ್ ಸ್ಟಾಪ್ ಬರುತ್ತದೋ ಎಂದು ವಾಚ್ ನೋಡೋತಿರುತ್ತಾರೆ
ಸದಾ ಕಿಟಕಿ ಪಕ್ಕ ಕೂರೊ ಹುಡುಗಿಯರಿಗೆ ಅಪ್ಪಿ ತಪ್ಪಿ ಸೀಟ್ ಸಿಗಲಿಲ್ಲ ಎಂದರೆ ಇರಸು ಮುರಿಸು ಕಿಟಕಿ ಪಕ್ಕ ರೆಗುಲರ್ ಅಲ್ಲದೆ ಟೆಂಪ್ರವರಿ ಕೂರೊ ಪಾಪ ಕೆಲಸಕ್ಕೆ ಹೋಗೋ ಅಂಟಿ ಯಂದಿರೆನಾದರೂ ಕೊತರೆ ಇಲ್ಲಸಲ್ಲದ ಸಿಟ್ಟು ಇನ್ನೂ ಕೆಲ ಹುಡುಗಿಯರು ಎಲ್ಲಿ ಇಳಿಯುತ್ತರೋ ಎಂದು ಹದ್ದಿನ ಕಣ್ಣಿನ ತರ ನೋಡುತ್ತಲೇ ಇರುತ್ತಾ ಆ ಸೀಟ್ ಖಾಲಿ ಅದ ತಕ್ಷಣ ಗಬಕ್ಕನೆ ಸೀಟ್ ಕಸಿದುಕೊಳ್ಳುವ ಪರಿ ರೋಮಾಂಚಕ ಅದರೊ ಕೆಲವರದ್ದು ಒರೆ ನೋಟ . ಕಿಟಿಕಿ ಪಕ್ಕ ಕೂರುವ ಬ್ಲಾಕ್ DRESS ಹುಡುಗಿಗೆ ಯಾವಾಗಲು ತನ್ನ ಪ್ರಿಯಕರನಿಗೆ MEASSEGES ರವಾನಿಸುವುದೇ ದೊಡ್ದಕೆಲಸ , ಡ್ರೈವರ್ ಸೀಟ್ ನಾ ಹಿಂದೆ ಕುಳಿತು ಕೊಳ್ಳುವ ರೆಡ್ ಟಾಪ್ ವೈಟ್ ಪ್ಯಾಂಟ್ ನ ಹುಡುಗಿಗೆ ಬರೇ ಫೋನ್ ನಲ್ಲಿ ಮಾತಾಡುವುದು ಬಿಟ್ಟರೆ ಪಕ್ಕದಲ್ಲಿ ಯಾರನ್ನು ಮಾತಾಡಿಸೋ ಟೈಮ್ ಇಲ್ಲ . ಮತ್ತು ಸಮವಸ್ತ್ರ ಧರಿಸಿರುವ ಹೈಸ್ಕೊಲ್ ಹುಡುಗಿಯರದ್ದು ತಲಹರಟೆ ಹಿಡಿ ಬಸ್ ನಲ್ಲಿರುವ ಜನರು ತನ್ನತ್ತ ನೋಡಿದರು ತಲೆ ಕೆಡಿಸಿಕೊಳ್ಳುವುದಿಲ್ಲ . ಇನ್ನೂ ಬಿಳಿ ಶರ್ಟ್ ಕಪ್ಪು ಪ್ಯಾಂಟಿನ ಯಾವದೋ ಮಾಲ್ ನಲ್ಲಿ ಕೆಲಸ ಮಾಡುವ ಅಂಟಿ ನಕ್ಕಿದ್ದೆ ಕಂಡಿಲ್ಲ , ಎರಡನೇ ಸ್ಟಾಪ್ ನಲ್ಲಿ ಹತ್ತುವ ಹುಡುಗಿಯಂತೂ ಎವುದದಾರು ಟೆಂಪಲ್ ಬಂದರೆ ಒಂದು ನೂರು ಸಲ ತನ್ನ ಎದೆಗು ತುಟಿಗೂ ಕೈ ತಾಕಿಸುವ ಯತ್ನ (ಕೈ ಮುಗಿಯೋ ಪರಿ ) ರಾಜಾಜಿನಗರದ 6th ಬ್ಲಾಕ್ನಲ್ಲಿ ಇಳಿಯೋ ಹುಡುಗಿ ತನ್ನ ಬಸ್ ಸ್ಟಾಪ್ ನವರೆಗೂ ನಿತ್ಕೊಂಡೆ ಅಲ್ಲ-ಅಲ್ಲಾ ಸೀಟಿಗೆ ಅಂಟಿಕೊಂಡೇ ಕೈಲಿರುವ ಮೊಬೈಲಿನಿಂದ ಎಸ್ ಎಮ್ ಎಸ್ ಸೆಂಡಿಸುವ ಆತುರ.ಫುಟ್ ಬೋರ್ಡ್ ನಲ್ಲಿ ನಿಂತ್ಕೊಳೋ ಕಪ್ಪು ಬಣ್ಣದ ಪ್ಯಾಂಟ್ ಬಿಳಿಯ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಟೈ ತೊಟ್ಕೊಂಡಿರೋ ಹುಡುಗಿ ಫೋನ್ ಕಿವಿಯಲ್ಲಿ ಇಟ್ಕೊಂಡರೆ ಹೆಗಲ ಮೇಲಿರೋ ಬ್ಯಾಗ್ ಕದ್ದು ಕೊಂಡು ಹೋದರು ಸಹ ಗೊತ್ತಾಗಲ್ಲ . ಇವರೆಲ್ಲರಿಗೋ ಹೋಲಿಸಿದರೆ ಕೆಂಪು ಚುಡಿದಾರ ಹಾಕಿರೋ ಜಿಂಕೆ ಮರಿ ಥರಾ ಇರೋ ಹುಡುಗಿ ಲೇಸು BUS STOP ನಲ್ಲಿ BOOK ಇಡಿದು ಕೊಂಡರೆ ತನ್ನ COLLAGE ಬರೋ ವರಿಗೂ ಯಾರನ್ನು ಮಾತಾಡಿಸೋಲ್ಲ ತಿರಿಗೂ ನೋಡಲ್ಲ ತನ್ನ ಪಾಡಿಗೆ ತಾನು ಓದಿಕೊಂಡು ಇರ್ತಾಳೆ ಇಷ್ಟೆಲ್ಲಾ ಅದರೂ ಪಕ್ಕದಲ್ಲಿರುವ ಬೋಪನಿಗೆ ಬೇರೊಬ್ಬರ ಕೈಲಿರುವ ದಿನ ಪತ್ರಿಕೆಯನ್ನ ಕಸಿದು ಕೊಂಡು ಬಿಟ್ಟಿಓದುವ ಚಪಲ. ಇಷ್ಟೆಲ್ಲಾ ಕಾಮಿಡಿಯ ನಡುವೆ ಕಂಡಕ್ಟರ್ ಮಾವನ "ಯಾರನ್ನು ಕೇಳಿದರು ಪಾಸ್ ಪಾಸ್ ಎಂತಾರೆ ಯಾರು ಕಾಸು ಕೊಡೋರೇ ಇಲ್ಲ " ಅನ್ನೋ ಡೈಲಾಗ್ ಇವತ್ತಿಂದೋ ನೆನ್ನೆಯದ್ದೋ ನೆನಪಿಗೆ ಬರ್ತಿಲ್ಲ ....!
SATISH N GOWDA
cell +91 98447 73489
e-mail
satishgowdagowda@gmail.com
sati_gowda@yahoo.com
my blog
www.nannavalaloka.blogspot.com
No comments:
Post a Comment