ಹೇಗೇ ಶುರು ಮಾಡಬೇಕೋ ತೋಚುತ್ತಿಲ್ಲ ಕಣೇ ಹೋದ ವರ್ಷವೆಲ್ಲ ನನ್ನನ್ನ ಪ್ರೀತ್ಸೋ ಪ್ರೀತ್ಸೋ ಅಂತ ನನ್ನ ಬೆನ್ನ ಹಿಂದೆ ಬಿದ್ದಿದ್ದೆ ನೆನಪಿದೆಯ ...? iam love with u ಅಂತ bord ಹಿಡಿದುಕೊಂಡು ಒಂದಿನ ನನ್ನ ರೋಮಿನ ತನಕ ಬಂದಿದ್ದೆ ನೆನಪಿದೆಯ ...? ನನಗೋ ಮನಸಿನಲ್ಲಿರುವವಳು ನಿನಲ್ಲ ಅಂತ ಹೇಗೇ ಹೇಳಲಿ ಅನ್ನುವುದು ತೋಚದೆ ಪೆಕರು ಪೆಕರುಅಗಿ ನಿಂತಿದ್ದೆ . ನೀನು ಅತ್ತು. ಗೊಗೆರೆದು ಬೆನ್ನಿಗೆ ಗುದ್ದು ಮಾಡಿ please ಕಣೋ ನನಗೇನು ಕಡಿಮೆ ಆಗಿದೆ ಹೇಳು ..? ನಾನು ಚನ್ನಾಗಿಲ್ವ ..? ಓದಿಲ್ವಾ ..? ಅಥವಾ ನಿನ್ನ ಟೆಸ್ಟ್ಗೆ ಒಗ್ಗೊಲ್ಲವ ಹೈಟು ನಿನಗಿಂತ ಎರಡಿಂಚು ಕಡಿಮೆ ಇದೀನಿ ಅಷ್ಟೇ ..! ನಿನಗೆ ಬೇಕಂದ್ರೆ ಒಂಚೂರು ದಪ್ಪ ಆಗ್ತೀನಿ ಹೇ ಹುಡುಗ ಸತ್ಯ ಹೇಳ್ತೀನಿ ಕೇಳೋ ಹುಡುಗಾ Realy love with u dear ನೀನು ನನ್ನನ್ನು ಪ್ರೀತಿ ಮಾಡ್ತೀನಿ ಅಂತ ಒಂದೇ ಒಂದ್ಸಲಿ ಹೇಳೋ ಅಲ್ಲಿ ನನ್ನದು ಅಂತ ಏನೂ ಇರಲ್ಲ ಎಲ್ಲಾ ನಿನ್ನ ಆಣತೆಯಂತೆ ನೆಡೆದು ಕೊಳ್ಳುತ್ತೇನೆ . ನಿನ್ನ ದಿನಕೊಂದು ಸಿನಿಮಾ ನೋಡೋ ಹುಚ್ಚಿಗೆ ನಾನೂ ಬಲಿಯಗುತ್ತೇನೆ ಆದರೆ ಅವೆರಡನ್ನು ಬಿಟ್ಟು ..! ಒಂದು ನೀನು ನಿಮಿಷಕ್ಕೆ ಹತ್ತು ಸಲ ಎಳೆದು ಬಿಡ್ತಿಯಲ್ಲ ಸಿಗರೇಟಿನ ಹೋಗೆ ಅದು ಮತ್ತೆ ಕಣ್ಣು ಮಿಟಿಕಿಸದೇ ಹುಡುಗಿಯರನ್ನ ನೋಡ್ತಿಯಲ್ಲ ಅದು ಇದೆಲ್ಲ ನನಗೀಗೆ ಗೊತ್ತಾಯಿತು ಅಂಥಾನ ಲೋ ಹುಡುಗಾ ನಿನ್ನ ಬಗ್ಗೆ ನನಗೆಲ್ಲ ಗೋತ್ತು ಕಣೋ ...! ಇಲ್ಲ ಅನ್ನಬೇಡ Please ನನಗೆ ನಿನ್ನ ಮುಖ ನೋಡದೆ ಇರೋಕ್ಕೆ ಆಗ್ತಿಲ್ಲ ಕಣೋ, ನೀನು ಹೇಗೇ ಇದ್ದರೂ ನಾನು ಸಹಿಸಿಕೊಂಡು ನಿನ್ನ ಜೊತೆ ಜೀವನ ಮಾಡ್ತೀನಿ ಅಂತ ಹೇಳ್ತಿದ್ದಿಯಲ್ಲ ಕೇಳು ಪ್ರೀತಿಯ ಹುಡುಗಿ ನಿನ್ನ ಮೇಲೆ ನನಗೀಗ ಮನಸಾಗಿದೆ . so iam love with u now .
ಹೇ ಹುಡುಗಿ ನಿನಗೆ ಗೋತ್ತಾ ಈ ಬಡ್ಡಿ ಮಗಂದು ಈ ಪ್ರಿತೀನೆ ಹಾಗೇ ಕಣೇ ಯಾರೋ ನನ್ನನ್ನ ಪ್ರಿತಿಸ್ತಿದಿನಿ ಅಂದಾಗ ....! ಇವಳಿಗೆ ಮಾಡೋದಕ್ಕೆ ಬೇರೇ ಕೆಲಸ ಇಲ್ವಾ ಅನಿಸಿಬಿಡುತ್ತೆ . ಅದೇ ಅವಳು ದೂರ ಅದಾಗ ಛೀ ಅವಳನ್ನ ತುಂಬಾ miss ಮಾಡ್ಕೊತಿದಿನಿ ಅಂತ ಅನಿಸುತ್ತೆ . realy i miss u dear .ಹೇ ಪಾಪು ಮನಸ್ಸು ನೀನಿಲ್ಲದೆ ಬೇಕೋ ಅಂತಿದೆ ಕಣೇ ನೀನು ನನಗೆ ಕೊಟ್ಟ ಪ್ರೀತಿಯ ಉಡುಗೊರೆಯನ್ನ ಹುಡುಕಿ ಎತ್ತಿಟ್ಟುಕೊಂಡಿದ್ದೇನೆ ಗೋತ್ತಾ ...! ಅವತ್ತೇಕೋ ಸುಮ್ಮನೆ ಕುಳಿತಿದ್ದ ನನಿಗೆ ನೀನು ಕಾಡಿದ ಪರಿ ಸ್ವಲ್ಪ ಸಮಯದ ನಂತರ ನಾನು ಸತ್ತರು ಪರವಾಗಿಲ್ಲ ನಿನ್ನನ್ನು ಆಗಲೇ ನೋಡಬೇಕು ಅನಿಸಿಬಿಡ್ತು ಕಣೇ ನಿನ್ನ ಹಾಸ್ಟೆಲ್ ಅತ್ರ ಹೋದರೆ ಅವಳು ಊರಿಗೆ ಹೋಗಿ ಒಂದು ಘಂಟೆ ಆಯಿತು ಅಂದ್ರು .ಅವತ್ತು ಇಡೀ ದಿನಾ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತು ಅತ್ತು ಬಿಟ್ಟೆ ಗೋತ್ತಾ ಪಾಪು . ಆ ಕಲ್ಲಿಗೋ ಕನಿಕರ ಬಂತೇನೆ ಗೊತ್ತಿಲ್ಲ ....? ನನಗೆ ಗೋತ್ತು ನಿನಗೆ ಸಿಟ್ಟು ಬಂದಿದೆ ಅಂತ ಆದರೆ ಏನೂ ಮಾಡಲಿ ಮನಸ್ಸು ನೀನೇ ಬೇಕು ಅಂತಿದೆ ಕಣೇ ..! ಅವಗೆಲ್ಲ ನಿನ್ನ ಮುಖ ನೋಡೋಕ್ಕೆ ಬೇಜಾರು ಆಗ್ತಿತ್ತು ನಿಜ ,ಈಗ ಅದೇ ಮುಖ ನೋಡ್ಬೇಕು ಅಂತ ಕಂಗೊಲೀಸುತ್ತಿದ್ದೇನೆ , ನಿನ್ನ ನಗು ನೋಡಬೇಕು ಅಂತ ಅನಿಸ್ತಾ ಇದೆ ಕಣೇ .ಮಾತು ಕೇಳಬೇಕೆನಿಸುತ್ತಿದೆ ನನ್ನೆಲ್ಲಾ ಮೌನ ನಾ ಕಟ್ಟಿಟ್ಟು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನಿನ್ನಿಷ್ಟದ ಹಾಡನ್ನ ನನ್ನೆದೆ ಹೊಳಗಡೆ ಗೊನಗಬೇಕಿದೆ ಎಲ್ಲಿ ಹೋದೆ ಸುಂದರ ಹುಡುಗಿ ...? ಹೇ ನಿಜ ಹೇಳು ನನ್ನ ನೀನು ಟೆಸ್ಟ್ ಮಾಡ್ತಿಲ್ಲ ತಾನೆ ..?
ಮುಂದಿನ ಬಾನುವಾರದಂದು ನಿನಗೆ i love u ಹೇಳಲಿಕ್ಕೆ ಕಾದು ಕುಳಿತಿದ್ದೇನೆ . ಎದೆಯಲ್ಲಿ ಅದೆಂತದ್ದೋ ಪುಳಕವಿದೆ , ಆಸೆ ಇದೆ , ಅಧಮ್ಯ ಉತ್ಸಾಹವಿದೆ , ನೂರು ಜನ್ಮಕ್ಕಾಗುವಷ್ಟು ಪ್ರೀತಿ ಇದೆ , ಜೊತೆಗೆ ಭಯವು ಇದೆ ಇವತ್ತು ಕೂತು ಮಾತಾಡಿಕೊಳ್ಳೋದೇ ಬೇಡೆ . ಜೆಸ್ಟ್ ನೀನು ಸಿಗು ಸಾಕು ತಾಳಿಕಟ್ಟಿ ಬಿಡುತ್ತೇನೆ .ಈವತ್ತಿನಿಂದ ನೀನು ನನ್ನವಳು ಅದೇನು ಪಟ್ಟದ ರಾಣಿ ಅಂತಾರಲ್ಲ ಹಾಗೇ ನಿನ್ನ ನೋಡ್ಕೋತೀನಿ . ನಿನ್ನ ರವಕೆಯ ಹುಕ್ ಹಾಕುವುದರಿಂದ ಹಿಡಿದು ಮುಡಿಗೆ ಮಲ್ಲಿಗೆ ಹೂ ಮುದಿಸುವುದರ ತನಕ ಎಲ್ಲಾ ಜವಾಬ್ದಾರಿ ನನ್ನದು "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೇ ಮಹಾ ರಾಣಿಯ ಹಾಗೇ ಎಲ್ಲಾ ಕೆಲಸ ಮಾಡಿ ಮುಗಿಸುವೆ " ತಪ್ಪು ನನ್ನದಾಗಿದೆ ನಿಜ . ಹಾಗಂತ ಮತ್ತೊಮ್ಮೆ ಕಾಡಬೇಡ ಕಣೇ . ಸತಾಯಿಸಬೇಡ ,ಕೊಲ್ಲಬೇಡ ನನ್ನೆಲ್ಲಾ ತಪ್ಪುಗಳನ್ನು jest ಕ್ಷಮಿಸಿ ಬಿಡೇ .
ಇದೆ ಬಾನುವಾರ ಬೆಳಗ್ಗೆ ನಾನು ನೀನು ಸೇರೋ ಅದೇ ಲಾಲ್ ಬಾಗ್ ನಾ ಎಡ ತಿರುವಿನಲ್ಲಿ ಪುಟ್ಟ ಹೊವಿನ ಗಿಡದ ಹತ್ತಿರ ಕಾಯತ್ತ ನಿಂತಿರುತ್ತೇನೆ ಅವತ್ತಿನಿಂದ ಬದುಕೊದಾದರೆ ಇಬ್ಬರು ಒಟ್ಟಿಗೆ ಬದುಕೋಣ ಸತ್ತರು ಕೋಡ ಒಟ್ಟಿಗೆ ...! ಬರ್ತಿಯಲ್ಲ ನೀ ಬರದಿದ್ದರೆ ನಾ ಬದುಕೊಲ್ಲ ಅನ್ನೋದು ನಿನಗೆ ಗೊತ್ತಿರಲಿ .....!
SATISH N GOWDA
e-mail
my blog's
No comments:
Post a Comment