Saturday, October 2, 2010

ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!


              (ಚಿತ್ರ ಕೃಪೆ ಗೂಗಲ್ )
         ನಮ್ಮೊರ ಹುಡುಗಿಯರು ದೊಡ್ಡವರಾಗಿದ್ದಾರೆ ......!

                       ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....! ಲಡಕಿ..... ಈ ಡೈಲಾಗ್  ಎಲ್ಲೋ  ಕೇಳಿದೀನಿ...! ಅನಿಸ್ತಿದೆ ಆಲ್ವಾ  Canfuse ಬೇಡ ..! ಇದು "ನಾಗರಹಾವು " ಚಿತ್ರದ ಅಂಬಿ ಹುಡುಗಿಯರನ್ನ ರೇಗಿಸುವು ಪರಿ  ಇದೀಗ ಈ ಹಾಡು ಬದಲಾಗಿದೆ ಹೇಗೇ ಅಂತ ಕೇಳಿ ... !  F M  ರೇಡಿಯೋ ಗಳಲ್ಲಿ    ವ್ಹ್ಹಾರೆವ್ಹಾ ....! ಮೇರಿ ಬುಲ್...! ಬುಲ್.....!  ಲಡಕಿ.....  ತಿರಗಕಿಲ್ಲ್ವಾ ಹೋಗು....! ಹೋಗು ...! ಹೋಗ್ತಾ ಅಂಗೆ ಅಪ್ಪನ ಕಾಲದ ಸೂಪರ್ ಹಿಟ್ ಸಾಂಗನ ಕೇಳ್ಕೊಂಡು ಹೋಗು ..!  ಹಾಗಂತ  ನಮ್ಮ ಊರಿನ ಹುಡುಗಿಯರೇನು ಕಮ್ಮಿ ಇಲ್ಲ "ಕಾಲಕ್ಕೆ ತಕ್ಕಂತೆ ತಾಳ "ಅನ್ನೋ ಹಾಗೆ  ಅವರೂ ಕೋಡ  ಪ್ರೇಮದ ಪತ್ರ ಹೋಗಿ ಎಲ್ಲಾ ಮೊಬೈಲ್ ಬಂದಿದೆ ಇವರಿಗೆ ಎಲ್ಲಾ ಮೊಬೈಲ್ ಲ್ಲೇ , ಮೊಬೈಲ್ ಬಿಟ್ಟರೆ ಬೇರೇ ಲೋಕ ತಿಳಿಯದು ಮೊದಲೆಲ್ಲ ಒಂದು ಹುಡುಗ ಹುಡುಗಿಗೆ ಪ್ರಪೋಸೆ ಮಾಡಿದರೆ ಅವಳು ಸ್ವಲ್ಪ ಯೋಚನೆ  ಮಾಡಿ ಬೆಳಗ್ಗಿ ಉತ್ತರ ಹೇಳುತಿದ್ದಳು ದ್ಯರ್ಯ ಇಲ್ಲದ ಹುಡುಗಿಯರು ತನ್ನ  ಉಡುಗೆಯ  ಮೊಲಕ ಪ್ರಿಯಕರನಿಗೆ  ಪ್ರೇಮ  ಪತ್ರ ನೀಡುತ್ತಿದ್ದಳು  ಹೇಗೆಂದರೆ  ರೆಡ್  -ಒಪ್ಪಿಗಿಇಲ್ಲ ಯಲ್ಲೋ - ವೈಟೆ ಮಾಡ್ತಿದ್ದೇನೆ  ಬ್ಲೂ - ನಾನು ನಿನ್ನನ್ನ ಪ್ರಿತಿಸ್ತಿದೇನೆ  ಅಂತ ನಮ್ಮ ಚಿಂದಿ -ಚೋರ್ ಹುಡುಗರು ಅರ್ಥ  ಮಾಡಿ ಕೊಳ್ಳುತ್ತಿದ್ದರು ,                   ಈ ಹದಿಹರೆಯದ  ಮನಸ್ಸೇ ಹೀಗೇ  ಅರ್ದ ಬೆಂದ ಮಡಿಕೆಯ ಹಾಗೆ  "ಎಲ್ಲವೂ ತಿಳಿದಂತೆ ಹೋಗಿ ಏನೋ ತಿಳಿಯದಾಯಿತು ಸರ್ವಜ್ಞ "   ಅನ್ನೋ ಹಾಗೇ ಇಲ್ಲಿ ಎಲ್ಲವೂ ಅರೆ -ಬರೇ ಕಲಿತು ಕುತೋಹಲದ ಮದ್ಯಯೇ ಇವರ ಜೀವನ ಸಾಗುತಿರುತ್ತದೆ  ಸಮಾನ ವಯಸ್ಸಿನ ಗೆಳೆಯರು  ಮನದಾಳದ  ಮಾತುಗಳು  , ಸ್ವಚಂದವಾದ ಕನಸುಗಳು  .ನೆಚ್ಚಿನ ಗೆಳತಿಯರ  ಹೊಸ ಹೊಸ ಟೇಸ್ಟ್ ಗಳು    . ಈ ಮೂಲಕ ಕಾಲೇಜುಗಳಲ್ಲಿ  ಹುಡುಗ ಹುಡುಗಿಯರನ್ನು ಚುಡಾಯಿಸುವುದು  ಒಬ್ಬರೊನ್ನಬ್ಬರು ಪರಿಚಯಿಸಿಕೊಳ್ಳುವುದು , ಹುಡುಗರು  ಹುಡುಗಿಯರಿಗೆ  ಹೊಡೆಯುವ   ಡೈಲಾಗ್ ಗಳು    ಇವೆಲ್ಲವೂ ವಿಬಿನ್ನ ರೀತಿಯ ಮಾಯಾಲೋಕಕ್ಕೆ ಈ ನಮ್ಮೊರಿನ ಹುಡುಗಿಯರನ್ನು ಕರೆದೊಯ್ಯುವ ನಾನಾ ಪ್ರಯತ್ನಗಳು ,               ಈಗಿನ ಕಾಲೇಜುಗಳಲ್ಲಿ  ಹುಡುಗ ಹುಡುಗಿಯ ಬೇದವಿಲ್ಲದೆ ಇರುವುದು ಒಂದು ರೀತಿಯ ಅಗತ್ಯವಾದರೂ ಕೆಲವೊಮ್ಮೆ ಇದು ಮಿತಿಯಾದರೆ .....? ಯೋಚಿಸಿ ನೋಡಿ ...! ಇದೆಲ್ಲವನ್ನು ಮರೆತು ನಮ್ಮೊರಿನ ಹುಡುಗಿಯರು ಜೀವನವನ್ನ ಎಂಜಾಯ್  ಮಾಡ್ತಿದ್ದಾರೆ  ಅಂದರೆ ಮೆಚ್ಚಲೇ ಬೇಕು ಅದಕ್ಕೆ ನಾ ಹೇಳಿದ್ದು ನಮ್ಮೊರ ಹುಡುಗಿಯರು ತುಂಬಾ ಬೆಳೆದಿದ್ದಾರೆ... ಅದರಲ್ಲೂ ನಮ್ಮ ಪಡ್ಡೆ ಹುಡುಗರು ಕೇಳ್ಬೇಕಾ ....? ಒಂದು ಒಳ್ಳೆ ಹುಡುಗಿ ಕಾಲೇಜುಗೇ ಬಂದರೆ "ಯಾರೇ ನೀ ದೇವತೆಯ "  ಅಂತ ಹಾಡಕ್ಕೆ ಶುರುಮಾಡ್ತಾರೆ   ಅಕಸ್ಮಾತ್  ಹುಡುಗಿ  ಕಾಲೇಜುಗಳಲ್ಲಿ  ಬೇಗ ಬಂದರೆ " ಬಾರೆ ...! ಬಾರೆ ..! ಚಂದದ  ಚಲುವೆಯೇ  ಬಾರೆ...!  ಅಪ್ಪಿ ತಪ್ಪಿ ಆ ಹುಡುಗಿ ನಕ್ಕರೆ  " ಸುಮಸುಮ್ನೆ ನಗ್ತಾಳೆ " ಅಂತಾರೆ     ಹೀಗೇ ಒಂದಿಲ್ಲದ  ಒಂದು  ಹಾಡಿನ ಮೂಲಕ ಹುಡುಗಿಯನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡ್ತಾರೆ  ಇವೆಲ್ಲ ಹುಡುಗರು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಕೆಲ ಹುಡುಗಿಯರು ಪಡ್ಡೆ ಹುಡುಗರನ್ನು ಕಂಡು ಕಾಣದೆಯೇ "ಪೂಲ್ಸ್ " ಗಳು  ಎಂದು  ಮೂಗು  ತಿರಿಗಿಸಿಕೊಂಡು ಹೊರಡೋ ಹುಡುಗಿಯರಿರುತ್ತಾರೆ ಇಂತ ಹುಡುಗಿಯರು ಕೋಡ  ಚತುರರೆ ಆದರೆ ತೋರಿಸಿಕೊಳ್ಳಲ್ಲ ಅಷ್ಟೇ . ಆದರೆ  ವೇಟಿಂಗ್   ರೋಮ್  ನಲ್ಲಿ ಕುಳಿತು ತನ್ನ ಗೆಳತಿಯರೊಂದಿಗೆ ಹುಡುಗರು ರೇಗಿಸುವ ಮತ್ತು ಚುಡಾಯಿಸುವ ವಿಷಯ ಗಳನ್ನೇ ಚರ್ಚೆ ಮಾಡುವುದಂತೋ ನಿಜ ಎಲ್ಲಾ  ತಮಾಷೆಗೆ  ...! ತಮಾಷೆಗೆ ...!                        ಇದನ್ನೆಲ್ಲಾ ಮಾಡುತ್ತಾ  ಹುಡುಗಿಯರು ತುಂಬಾ ಬುದ್ದಿವಂತರಾಗಿದ್ದರೆ  ಹೇಗೆಂದರೆ ತನ್ನತ್ತ ಬರುವ ಹುಡುಗರಿಗೆ ಹೇಗೇ ,ಎಲ್ಲಿ ,ಚಳ್ಳೆ ಹಣ್ಣು ತಿನಸಬೇಕೆಂಬುದು  ನಮ್ಮೊರ ಹುಡುಗಿಯರು ತುಂಬಾ  ಚಾನ್ನಗಿ ತಿಳಿದುಕೊಂಡಿದ್ದಾರೆ   ಹುಡುಗರ ಕೈಗೆ ಸಿಕ್ಕು ಸಿಕ್ಕದ ಹಾಗೇ   ತನ್ನ ಸೌಂದರ್ಯ ವನ್ನು ಕಾಪಾಡಿಕೊಂಡು ಬರುತ್ತಿದ್ದಾಳೆ   "ವ್ಹ್ಹಾ ರೆ ವ್ಹಾ ....! ಮೇರಿ ಬುಲ್...! ಬುಲ್.....!  ಹಾಟ್ಸ್ ಅಪ್ ಟು    ನಮ್ಮೊರ ಹುಡುಗಿಯರು "                   "ಹಾಗೇ ನನ್ನದೊಂದು ಚಿಕ್ಕ ಮನವಿ  ದಯವಿಟ್ಟು  ಸುಮಸುಮ್ನೆ ಫೋನ್ ಮಾಡೋ ಹುಡುಗರನ್ನ ಅಥವಾ ನೀವೇ ಕಾಲ್ ಮಾಡಿ ಫ್ರಿಂಡ್   ಮಾಡ್ಕೊಳ್ಳೋ  ಹುಡಗರನ್ನ  ನಿಮ್ಮ ಚಿಕ್ಕ ಚಿಕ್ಕ ಸಂತೋಷ ಗಳಿಗೋಸ್ಕರ    ಒಮ್ಮೆಲೇ ಡ್ರಾಪ್ ಮಾಡಬೇಡಿ  ಪ್ಲೀಸ್  ಯಾಕೆಂದರೆ   ನೀವೇನೋ ವಿಶಾಲ ಹೃದಯದವರು ಆದರೆ ಅವರು  ಪುಟ್ಟ ಹೃದಯದ  ಹುಚ್ಹು ಪ್ರೇಮಿಗಳು ನೀವೂ ಶೋಕಿ ಮಾಡಿ, ನಾನು ಬೇಡ ಅನ್ನಲಿಲ್ಲ  ಆದರೆ  ಹರೇಹುಡುಗರ ಮನಸ್ಸು ನೋಯಿಸಬೇಡಿ   ಅವರು ಪಡೋ ನೋವು ತುಂಬಾ ದೊಡ್ಡದು "  ಒಮ್ಮೊಮ್ಮೆ ಅತ್ಮಾತ್ಯೆ ಗಳಿಗೋ ಪ್ರಯತ್ನ ಪಡಬಹುದು ಜೋಕೇ ....!  ಒಮ್ಮೆ ಯೋಚಿಸಿ ನೋಡಿ  ಯೋಚನೆ ಮನುಕುಲಕ್ಕೆ ದೇವರು ಕೊಟ್ಟ ಬಹುದೊಡ್ಡ ಉಡುಗೊರೆ ....! 

SATISH N GOWDA 

Tuesday, September 28, 2010

ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ



ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ

          ಹೇ.....! ಅಮೋಘ ಈ ನಡುವೆ ಬರ್ತಾ ಬರ್ತಾ ನಿಂದು ಜಾಸ್ತಿ ಆಯಿತು   ಕಣೇ ನಾನೇನು ನಿನ್ನ ಅಸ್ತಿ ಕೇಳಿದ್ನ, ಇಲ್ಲ ನಿನ್ನ ಅಂತಸ್ತು ಕೇಳಿದ್ನ Atlist ಒಂದು ದಿನಾ ನಾನ್ ಜೊತೆ Trip  ಹೋಗೋಣ ಬಾರೇ ಅಂತ ಕೇಳಿದೆ ತಪ್ಪಾ......? ಅಷ್ಟಕ್ಕೆ ಇಷ್ಟೊಂದ್  ಕೋಪಾನಾ U Stuped, ಹುಡುಗಿಯರಿಗೆ ಕೊಪಾ ಇರಬೇಕು ಆದ್ರೆ ನಿನ್ ಥರಾ ನಾ ಅಯ್ಯೋ .....! 
           ನನಗೂ  ಸುಮಾರು ಹುಡಿಗಿಯರು ಗೊತ್ತು ಆದ್ರೆ ಮೊಗಿನ ತೊದಿಯಲ್ಲೇ ಕೋಪ ಇಟ್ಕೊಂಡಿರೋ  ಹುಡುಗಿನಾ ನಾನು ನಿನ್ನೆ ನೋಡ್ತಿರೋದು  ಹುಡುಗಿಯರಿಗೆ ಕೋಪ ಒಳ್ಳೆಯದಲ್ಲ ತಿಳ್ಕೋ ಈ ಥರಾ ಕೋಪ ಇದ್ರೆ ಜೇವನದಲ್ಲಿ ಮುಂದೆ  ಬರೋದು ತುಂಬಾ ಕಷ್ಟ ,
                            ಓ ......! ಗೊತಯಿತು ಕಣೇ 
ಅಮೋಘ ,ನಾನು Mysore ನವಳು ಅಂತಾನ ಆಗಿನ ಕಾಲದ   ಕವಿಗಳಿಂದ ಹಿಡಿದು ಈಗಿನ  ಕಾಲದ ಸಿನಿಮ ಸ್ಟಾರ್ ಗಳ ವರಗೂ  Mysore   ಹುಡುಗಿರನ್ನ   ತುಂಬಾ ಹೊಗಳ್ತಾರೆ So  Bengalore  ರಲ್ಲಿ ಚನ್ನಾಗಿರೋ ಹುಡುಗಿಯರಿಲ್ಲ ಅಂತಾನ......!  ಹೋಗೆಲೇ ದಡ್ಡಿ ನೀನು . "ಪುಸ್ತಕದ ಬದನೆ ಕಾಯಿ ಸಂಬಾರಿಗೆ ಬರೋಲ್ಲ" ಅಂತ ಗೊತ್ತು  ತಾನೆ..?  ಅವನು ಯಾವೋನೋ "ದೇವದಾಸ್ " ಅಂತೆ  ಅವನಿಗೋ ಕೊಡ ನಿನ್ ಥರಾ ಹುಡುಗಿನೇ ಸಿಕ್ಕಿರಬೇಕು ಅದಕ್ಕೆ ತಲೆ ಕೆಡ್ಸ್ಕೊಂಡು ರೋಡ -ರೋಡಲ್ಲಿ  ಕೊಡ್ಕೊಂಡ್   ಫೋಸ್ ಕೊಡ್ತಿದ್ದ ಅಂತ ಕಾಣುತ್ತೆ 

                              ಆದರೋ ನೀನು ಒಳ್ಳೆಯವಳು ಕಣೇ
ಅಮೋಘ ಹೇ ಹುಡುಗಿ  ಇಷ್ಟೊತ್ತು  ಹೇಳಿದ್ದು ನೀನು ಟ್ರಿಪ್ ಬರಲಿಲ್ಲವಲ್ಲ ಅಂತ ಕೋಪಕ್ಕೆ ವರೆತು ಬೇರೆ ಏನೂ ಇಲ್ಲ Sorry  ಕಣೇ ಅಮೋಘ ಓಕೆ ನಾ .....! ಸರಿ ಹೇಗಿದ್ದೀಯ......? ಚನ್ನಗಿದಿಯ....? ಚನ್ನಾಗಿ ಇರ್ತಿಯ ಬಿಡು ,ಯಾಕೆ ಅಂದ್ರೆ ನನಾಲ್ವ  ನಿನಗೆ ಹೃದಯ  ಕೊಟ್ಟಿರೋದು ಅದನ್ನ ಇಟ್ಕೊಂಡು   ಚನ್ನಾಗಿ ಇರ್ತಿಯ ....! ನನ್ನ ಮನಸು ಅನ್ನೋ ಹೋವಿನ ಬಿಜಾನ  ನಿನ್ನೆದೆಯಲ್ಲಿ ನೆಟಿದಿನಿ ಅದನ್ನ ಸರಿಯಾಗಿ ಕಾಪಾಡ್ಕೊ , ಓ ನಿನಗೆ ಹೇಳೋದು ಮರ್ತಿದ್ದೆ ನಿನಗೆ Red Rose ಅಂದ್ರೆ ಇಷ್ಟ ಅಲ್ವಾ ಅದು Red Rose  ಹೂ ಬಿಡೊತ್ತೆ , ನಿನಗೋ ಈ ನಡುವೆ ನನ್ನ ಕಂಡರೆ ಇಷ್ಟ ಅಂತ ಗೊತಾಯ್ತು ಏನ್ ಮಾಡ್ತಿಯ ನಿನಗೆಪಾಪ,Exams Busy  ಆ ದೇವರಲ್ಲಿ ಕೆಳ್ಕೊತಿನಿ ನನ್ನ ಅಮ್ಮು ಗೇ ಬೇಗ ಎಕ್ಷ್ಸಮ್ಸ ಮೊಗಿಲಪ್ಪ ಅಂತ O K ನಾ ,
                    ಹೇ   
ಅಮೋಘ  ನೀನಿಲ್ಲದ ಜೀವನ ನನಿಗೆ ಬೇಡ ಅನಿಸಿತಿದೆ ಕಣೇ .  ನಿನಗೊತ್ತಾ ನಾನು "ಆಕಾಶ್ " Move  ನಾ 10 ಸರಿ ನೋಡಿದೀನಿ ಕಣೇ ಅದು ನೀನು ಹೇಳಿದಿಯಲ್ಲ "ನೀನೇ ನೀನೇ"  ಹಾಡಿಗೋಸ್ಕರ ನೀನು ನನ್ನ Life  ನಲ್ಲಿ ಅಷ್ಟೊಂದು ಬೇರೆತೋ  ಹೋಗಿದಿಯ   ನೀನು ಮಾತಾಡ್ತಿದ್ದ ಮಾತುಗಳು ಆ ಸಿಹಿ ನೆನಪುಗಳು....! ನೀನು ನಾನು ಓಕಳಿ ಪುರಂ ನಲ್ಲಿ ಆಡಿದ ತುಂಟಾಟ ಗಳು ಎಲ್ಲಾ ನನ್ನ  ಮನಸಿನಲ್ಲಿ ಹಾಗೇ ಉಳಿದುಬಿಟ್ಟಿದೆ   ಕಣೇ ಅಮೋಘ. 
                    ನನಿಗನಿಸುತ್ತೆ  ನಿನೆನಾದ್ರು ಮತ್ತೆ ನನಿಗೆ ಸಿಗದಿದ್ರೆ "ಚಲುವಿನ ಚಿತ್ತಾರಾ " Move   ನಲ್ಲಿ Climax  ಗೇ ಗಣೇಶ್  ಅಕೊತನಲ್ಲ ಆ ಗೆಟಪ್ ನ  Tilar ಗೇ ನಾನೆ Ader ಕೊಟ್ಟೋ Stich  ಮಾಡಿಸ  ಬೇಕಾಗುತ್ತೆ   ಕಣೇ 
                  Please....! ಕಣೇ ನೀನು ಮತ್ತೆ ನನ್ನ Life ಗೇ ಬಂದುಬಿಡೇ
ಅಮೋಘ  ಹೇ ಇಷ್ಟಕ್ಕೂ ನಾನ್ನು-ನಿನ್ನಾ ಪ್ರೀತಿಗೆ ವಯಸೆಷ್ಟು  ಗೊತ್ತಾ ......? ಒಂದು ವರ್ಷ ಅಂದ್ರೆ 12ತಿಂಗಳು ಈ 12ತಿಂಗಳಲ್ಲಿ ನಿನ್ನಾ- ನನ್ನಾ ಪ್ರೀತಿ ಎಷ್ಟೋ ಎತ್ತರಕ್ಕೆ ಬೆಳದಿದೆ ಅಂದ್ರೆ ಈ ಪ್ರಪಂಚ ದಲ್ಲಿ ಯಾರೇ ಬಂದ್ರು ....... ಅಷ್ಟೇ ಯಾಕೇ ನಾನ್ನು-ನಿನ್ನಾ ಹುಟ್ಟಿಸಿದನಲ್ಲ ಆ ಬ್ರಹ್ಮನೇ ಬಂದ್ರು ನಾನು ಕಟ್ಟಿರೂ ಕನಸಿನ ಗೋಪುರದ ಒಂದೇ -ಒಂದು ಕಲ್ಲು ಬಿಳಿಸೊಕೆ   ಆಗೋಲ್ಲ ಅಷ್ಟೋ ಪವಿತ್ರವಾಗಿದೆ ನಾನು ನಿನಗೋಸ್ಕರ ಕಟ್ಟಿರೋ  ತಾಜ್ಮಹಲ್, ಹೇಗೋ P U Exams ಆದಮೇಲೆ Bengalore ಗೇ ಬರ್ತಿಯಲ್ಲ....! ನೀನೇ ನೊಡ್ತಿಯ ....!
                            ಹೇ ನಿನಗೊತ್ತಾ .....? ಮರಳುಗಾಡಿನಲ್ಲೋ   ಕೊಡ ಕೆಲವೊಂದು ಸರಿ ಮಳೆ ಬರುತಂತೆ So ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು ನಾನು ಕೊಡ ನಿನ್ನ ಎದೆಯಲ್ಲಿರಿವ ಮಳೆಯಂತ ಪ್ರಿತಿಯನ್ನ ನನ್ನ ಮೇಲೇ ಸುರಿಸ್ತಿಯ ಅಂತ  ಕಾಯಿತ  ಇದೀನಿ ಕಣೇ
ಅಮೋಘ......!

ನಿನ್ನ ಉತ್ತರಕ್ಕೆ ಕಾಯುತಿರುವ ಪ್ರೀತಿಯ ಗೆಳೆಯ
SATISH N GOWDA 
9844773489 

Monday, September 27, 2010

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

 ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿ
ಅಂದದ ತೊದಲು ನುಡಿ
ಕಚಗುಳಿ ಇಡುವ ಕಣ್ಣ ನೋಟ
ರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆ
ಸುಂದರ , ರಮಣೀಯ , ಮನೋಹರ ...

ನನ್ನ ನಿನ್ನ ಮಿಲನ 
ಹೇಳಲಾಗದ ಪದಗಳ ನಯನ 
ಗೀಚಿ ಬರೆದರೂ ಕೂಡ 
ಮುಗಿಯಲಾರದ ಪ್ರೇಮ ಕವನ .

ದೇವರ ಮಹಿಮೆ ನಾ ಕಾಣೆ ಗೆಳತಿ 
ನಿನ್ನ ಕಣ್ಣ ನೋಟಕ್ಕೆ ನಾನದೆ 
ಸಿಪ್ಪೆಕಳಚಿದ ಬಾಳೆಹಣ್ಣಿನಂತೆ ,
ಭೂಮಿಯಲ್ಲಿ  ಬಿದ್ದು ಒದ್ದಾಡುವ ಮೀನಿನಂತೆ .

ನಿನ್ನ ಒಂದು ಸ್ಪರ್ಶಕ್ಕೆ 
ಕ್ಷಣರ್ದದಲ್ಲಿ   ಮೂಡಿದ ಸಂಚಲನ 
ಯಾವ ಬಿರುಗಾಳಿಗೂ ಕಡಿಮೆ ಇರಲಿಲ್ಲ ,
ಮತ್ತು ಬರಿಸುವ ಮದುರೆಯು ಅದಕ್ಕೆ ಸಾಟಿಯೇನಿಲ್ಲ.

ಏನಿದೆಯೋ ದೇವರೇ .....!
ಹೆಣ್ಣಿನ ಮನಸ್ಸಿನಲ್ಲಿ ನಾನಂತು ಅರಿಯೆ 
ತೊಳೆದು ಒರಸಿದರೋ ಕಾಣದ 
ಸುವರ್ಣಾಕ್ಷರಗಳ  ಸರಮಾಲೆ .

ಕೊಡಿಸಿ , ಗುಣಿಸಿ , ಭಾಗಿಸಿದರೋ 
ಬಾರದ ಉತ್ತರ ಹೆಣ್ಣು , ಮತ್ತು 
ಅವಳ ಮನಸ್ಸಿನ ಚಿತ್ರಗಳ ಭಾವನೆ 
ಹೆಣ್ಣನ್ನು ಸೃಷ್ಟಿಸಿದ   ದೇವರೇ 
ನಿನಗಿದೋ ನನ್ನದೊಂದು ಸಲಾಂ ....

.
ಅಪರೋಪಕ್ಕೊಮ್ಮೆ ಸಿಕ್ಕ ಹುಡುಗಿ ...
SATISH N GOWDA

Thursday, September 16, 2010

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

(ಚಿತ್ರ ಕೃಪೆ ಗೂಗಲ್ )


ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..

ಏನೋ ಆಗಿದೆ ನನಗೇನೋ ಆಗಿದೆ 
ಏನೆಂದು ಕೇಳ ಬೇಡ ನೀನು,
ನೀ .. ಸಿಗಲಿಲ್ಲ ವಾದ್ದರಿಂದ 
ನನ್ನೀ ಜೀವನ ಬೇಸರವಾಗಿದೆ .

ಹುಡುಕಾಡಿದೆ ನಿನ್ನನ್ನು 
ಸುತ್ತಾಡಿದೆ ನಿನ್ನ ಮನೆಯನ್ನು 
ಧಣಿದು ಬಸವಳಿದಿರುವೆ, ಆದರೋ
ಹುಡುಕಲಾಗಲಿಲ್ಲ ನಿನ್ನ ಸುಳಿವನ್ನು .

ಕೊರಗುತಿಹೇನು ನಿನ್ನ ನೆನೆಪಲ್ಲೆ
ನೊಂದು , ಬೆವರುತಿಹೇನು ನೀನಿಲ್ಲದ ನೋವಲ್ಲೆ 
ಸುಮ್ಮನೆ ಕೂರಲು  ಮನಸಿಲ್ಲ,
ನಿನ್ನ ಹುಡುಕುವ ಉತ್ಸಾಹವೂ ನನಗಿಲ್ಲ .

ಕಾರಣ ಹೇಳದೆ ಹೋರಟು ಹೋದ ಗೆಳತಿ ನೀನು ,
ನೀನಿಲ್ಲದ ಕಾರಣ ಜೀವನ ಸಾಗಿದೆ 
ತಂತಿ ಮುರಿದ ವೀಣೆಯ ರೀತಿ....,
ನಾವಿಕನಿಲ್ಲದ ದೋಣಿಯ  ರೀತಿ...!

ಎಲ್ಲಿಂದ ಬಂದ ಜೀವನವೋ ತಿಳಿಯದು 
ಎಲ್ಲಿಗೀ ಪಯಣವೋ ತಿಳಿಯದು 
ಕಾಲ ಬಂದಂತೆ ಕಳೆಯೆತಿಹೇನು ಜೀವನ ,
ಜೀವನದ ಮರೆಯಲ್ಲಿ ಸಾಗುತಿದೆ ನನ್ನೀ ಪಯಣ .

ಅಂದು...! ಇಂದು ..!ಎಂದೂ...!
ನನ್ನದೊಂದೇ ಶಪಥ 
ಪ್ರೀತಿ ನಿನ್ನಯ ಮಡಿಲಿಗೆ 
ದೇಹ ಪ್ರಕೃತಿಯ ಸೊಬಗಿಗೆ ....!

ಇಂತಿ ನೊಂದ ಜೀವ 
SATISH N GOWDA  

Saturday, September 4, 2010

ಯೋಚಿಸ ಬೇಡ ,ಪ್ರೀತಿಸಿ ನೋಡು ....

(ಚಿತ್ರ ಕೃಪೆ ಅಂತರ್ಜಾಲ )

ಪ್ರೀತಿಸಿ ನೋಡು ....

ಕನ್ನಡಿಯ
ಮುಂದೆ
ನಿಂತು
ನೀ ನಿನ್ನ 
ಪ್ರೀತಿಯ 
ಬಿಂಬ  
ಕಾಣುವಂತೆ
ಪ್ರಿತಿಯಲ್ಲಿಯೋ  
ನಿನ್ನ 
ಪ್ರೀತಿಯಬಿಂಬ 
ಕಾಣುತ್ತಿಯ
ಯೋಚಿಸ  ಬೇಡ
ಒಮ್ಮೆ 
ಪ್ರೀತಿಸಿ ನೋಡು ...

ಪ್ರೀತಿಸಿ ನೋಡು ....
SATISH N GOWDA

ಸೌಂದರ್ಯವತಿ ...


(ಚಿತ್ರ ಕೃಪೆ ಅಂತರ್ಜಾಲ)
ಸೌಂದರ್ಯವತಿ ...
ಇವಳ್ಯಾರ ಮಗಳೋ ನಾ ಕಾಣೆ
ಒಂದು ವಾರೆ ನೋಟದಿಂದ
ತನ್ನ ಗುಲಾಮನನ್ನಾಗಿ ಮಾಡಿಕೊಂಡ 
ಮೊದಲ ಹುಡುಗಿ 

ಆ ತುಂಟ ತನದ ಹುಡುಗಿ
ಬರೀ ಕಣ್ಣ ಸನ್ನೆಯಲ್ಲೇ 
ನನ್ನ ಹೃದಯ ಸ್ಪರ್ಶಿಸಿದ
ಮೊದಲ ಬೆಡಗಿ 

ಒಂದು ಮಿಂಚಿ ಮರೆಯಾಗುವ 
ಮುಗುಳ್ನಗೆಯಿಂದ ನೀನೇ
ನನ್ನ ಬಾಳ ಸಂಗಾತಿ
ಎಂದ ಸೌಂದರ್ಯವತಿ ...

ಸೌಂದರ್ಯವತಿ ...
SATISH N GOWDA

Friday, August 27, 2010

ವಾರೇ..... ವಾಹ್.

( ಚಿತ್ರ ಕೃಪೆ ಅಂತರ್ಜಾಲ)

ವಾರೇ..... ವಾಹ್.......

ನಮ್ಮೂರಿನ ಕೆಸರು ಗದ್ದೆಯಲ್ಲಿ
ಸೊಗಸಾಗಿ ಬೆಳದ ಹುಲ್ಲಿನ ಮದ್ಯ
ಸುಂದರವಾಗಿ ಕಂಡ
ಹುಡುಗಿಯೊಬ್ಬಳ ಜೊತೆಯಲ್ಲಿ
ಅಣ್ಣಾವ್ರ ಹಾಡು ಹಾಡಿಕೊಂಡು
ಹಾಗೆ ಸುಮ್ಮನೆ
ಒಂದು ಲುಕ್ ಕೊಟ್ಟರೆ
ಎನ್ ಮಜಾ ಅಂತೀರಾ...!
ವಾರೇ..... ವಾಹ್.....

ಬೆಂಗಳೊರಿನ M G ರಸ್ತೆಯಲ್ಲಿ
ಧೋ ಎಂದು ಸುರಿಯುತ್ತಿರುವ ಮಳೆಯ ಮದ್ಯ
ಇಷ್ಟವಾದ ಹುಡುಗಿಯನ್ನು
ಹೃದಯಕ್ಕೆ ಅಪ್ಪಿಕೊಂಡು
ರಸ್ತೆಯಲ್ಲಿ, ಸುರಿಯುತ್ತಿರುವ ಮಳೆಯಲ್ಲಿ
ಹಾಗೆ ಒಂದು ರೌಂಡ್ ಬಂದರೆ
 
ವಾರೇ..... ವಾಹ್.....
ಎನ್ ಮಜಾ ಅಂತೀರಾ...!

ರಾತ್ರಿಯ ನವಿರಾದ ನಿದ್ರೆಯಲ್ಲಿ
ಸುಂದರವಾದ ಕನಸಿನ ಒಳಗೆ
ಪ್ರೀತಿಸಿದ ಹುಡುಗಿಯನ್ನ
ಕಲ್ಪನೆ ಮಾಡಿಕೊಂಡು
ಬೆಳಗ್ಗೆ ಕಣ್ಣು ಬಿಡೊ ಸಮಯದಲ್ಲಿ
ಅಮ್ಮನ ಬದಲು
ಪ್ರೀತಿಸಿದ ಹುಡುಗಿ
ಕಾಫ್ಫಿ  ಮಾಡಿಕೊಂಡು ಬಂದರೆ....
ಎನ್ ಮಜಾ ಅಂತೀರಾ...!
 
ವಾರೇ..... ವಾಹ್....

ವಾರೇ..... ವಾಹ್.
SATISH N GOWDA

Sunday, August 22, 2010

ಎನೋ ಒಂಥರಾ..!

                                               (ಚಿತ್ರ ಕೃಪೆ ಅಂತರಜಾಲ )
ಎನೋ ಒಂಥರಾ..!

ಮರೆಯಲಾಗದ ನಿನ್ನಯ
ಪ್ರೇಮಗೀತೆಯಲ್ಲಿ
ಅಳಿಸಲಾಗದ ಸಾಲುಗಳನ್ನು
ನೆನೆಸಿಕೊಂಡರೆ
ಮನಸ್ಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ..!

ಹಳೆಯ ನಿನ್ನಯ ಹಾಡು,
ಜಿನುಗುವ ತುಂತುರು ಮಳೆಯಲ್ಲಿ
ನೆನೆ, ನೆನೆಯುತ್ತಾ...
ಮೂಗಿನ ತುದಿಯಲ್ಲಿ ಗುನುಗಿದರೆ
ಈ ಪುಟ್ಟ ಹೃದಯದಲ್ಲಿ
ಹೇಳಲಾಗದ
ಎನೋ ಒಂಥರಾ ಉಲ್ಲಾಸ ಸಂತೋಷ..!

ಮುಂಜಾನೆಯ ಬೆಳದಿಂಗಳಲ್ಲಿ
ಬೆಚ್ಚನೆಯ ಕನಸು ಬೀಳೊದೆ ಒಂಥಾರ ಉಲ್ಲಾಸ.
ಆ ಕನಸು ನೀನಾದರೆ....?
ನೀನೇ ನಾನದರೆ....?
ಮನಸಿನಲ್ಲಿ ಅನಿಸದೆ ಇರದು
ಎನೋ ಒಂಥರಾ ಉಲ್ಲಾಸ...!

ಪ್ರೀತಿಯ ಮಳೆಯಲ್ಲಿ ನಾನು,
ನನ್ನ ಈ ಪುಟ್ಟ ಹೃದಯದಲ್ಲಿ ನೀನು,
ಒಮ್ಮೆ ಹಾಗೆ ಕಣ್ಣಮುಂದೆ ನೆಡೆದಾಡುತ್ತಿದ್ದರೆ,
ಅಥಾವ ಹೃದಯದ  ಹತ್ತಿರದಲ್ಲಿ
ನಿನ್ನನ್ನು ತಬ್ಬಿಕೊಂಡರೆ, ಎನೋ
ಒಂಥರಾ ಉಲ್ಲಾಸ ಸಂತೊಷ....!

ಎನೋ ಒಂಥರಾ..!
SATISH N GOWDA

ಮಳೆಯಲಿ ಜೊತೆಯಲಿ ಚಿತ್ರದ ಸವಿ ನೆನೆಪು ನನ್ನವಳಜೋತೆ 
ನೋಡಲು ಇಲ್ಲಿ ಕ್ಲಿಕ್ಕಿಸಿ ...
http://nannavalaloka.blogspot.com/2010/01/blog-post_06.html

Wednesday, August 18, 2010

ಇದು ನನ್ನ ಬಾಲ್ಯದ ನೆನಪು...!

            
  ಹಾರುವ ಹಕ್ಕಿಯಾಗಿ

      ಪ್ರತಿಬಾರಿ ಸ್ವತಂತ್ರ್ಯ ದಿನಾಚರಣೆ ಬಂದಾಗಲೂ ನನಗೆ ನನ್ನ ಬಾಲ್ಯ ಊಮ್ಮಳಿಸಿಬರುತ್ತದೆ . ಗರಿ-ಗರಿ ಚಡ್ಡಿ ಬಿಳಿ ಅಂಗಿ ತೊಟ್ಟು ನಾನು ಮತ್ತು ನನ್ನ ಗೆಳೆಯರು ಶಾಲೆಗೆ ಓಡುತ್ತಿದ್ದೆವು . ನಮ್ಮೂರಿನಿಂದ ಶಾಲೆ ಸ್ವಲ್ಪ ದೂರವಿತ್ತು . ಹೀಗಾಗಿ ಬೆಳಗ್ಗೆ ನಸುಕಿನ ವೇಳೆಯಲ್ಲೆ ನಮ್ಮ ಪಯಣ ಆರಂಭವಾಗುತ್ತಿತ್ತು. ಜೊತೆಗೆ ಅಕ್ಕ ಕೊಡಿಟ್ಟುಕೊಟ್ಟ ಸುಮಾರು ಏಳೆಂಟು ಬಣ್ಣದ ಹೂವುಗಳು. ಜೋತೆಗೆ ನನ್ನ ಹೈದಾರು ಜನ ಗೆಳೆಯ ಗೆಳತಿಯರು . ಚುಮು ಚುಮು ಚಳಿಯಲ್ಲಿ ಮಂಜುಕರಗಿ , ಇಷ್ಟಿಷ್ಟೆ ಬೆಳಕು ಮೂಡುವ ಹೊತ್ತಿಗೆ ನಾವು ಶಾಲೆ ಸೇರುತ್ತೆದ್ದೆವು. ಮೋಡದಿಂದ ಕೆಳಗಿಳಿದು ಬಂದ ದೇವರ ಮಕ್ಕಳ ಹಾಗೆ .... ತಂದ ಹೂಗಳನ್ನು ಶಾಲೆಯಲ್ಲಿ ಬಿಡಿಸಿದ ಭೂಪಟದಲ್ಲಿ ಅಲಂಕರಿಸುವ ಮೂಲಕ ನಮ್ಮ ಕೆಲಸ ಶುರುಗೊಳ್ಳುತ್ತಿತ್ತು.
                ಸ್ವಾತಂತ್ರದಿನಾಚರಣೆಯ ದಿನದಂದು ಶಾಲೆಗೆ ಮೂದಲು ಬರಿತ್ತಿದ್ದವರು ನಾವೆ. ಆನಂತರ ಸುವರ್ಣ ಟೀಚರ್ ಬರುತ್ತಿದ್ದರು ನಾವೆಲ್ಲ ಹೊಗಿ ಅವರು ಬಸ್ ಬರುವುದನ್ನೆ ಕಾಯ್ದು ಶಾಲೆಯ ಕೀಯನ್ನು ಮೊದಲು ಹಕ್ಕಿ ತರುತ್ತೆದ್ದೆವು . ತದ ನಂತರ ಶಾಲೆಯ ಹಕ್ಕಿಗಳಂತೆ ಇತರೆ ಸ್ನೇಹಿತರು,ಸ್ನೇಹಿತೆಯರು ಬರುತ್ತಿದ್ದರು . ನಾವೆಲ್ಲರು ಬಿಳಿಯ ಶರ್ಟ್ ಮತ್ತು ನೀಲಿಯ ಚಡ್ಡಿ ತೊಟ್ಟು ಎಲ್ಲರೂ ಕೊಕ್ಕರೆಗಳಂತೆ ಕಾಣುತ್ತೆದ್ದೆವು . ಎಲ್ಲವೂ ಶುಭ್ರ, ಹಾಗತಾನೆ ಹುಟ್ಟುವ ಸೂರ್ಯಕೊಡ  ನಮ್ಮನ್ನು ಕಂಡು , ನಮ್ಮ ಶುಭ್ರತೆಯನ್ನು ಕಂಡು ನಾಚಿ ಒಮ್ಮೆ ಕಣ್ಣು ಮಿಟುಕಿಸುತ್ತಿದ್ದ. ನಮ್ಮೂರಿನ ಹಿರಿಯರು ದ್ವಜವನ್ನು ಕಟ್ಟಿ ಅದೋರೊಳಗೆ ನಾವು ತಂದಿರುತ್ತಿದ್ದ ಬಿಡಿ ಹೂವುಗಳನ್ನು ಹಾಕಲು ಹೇಳುತ್ತಿದ್ದರು. ನಾವೆಲ್ಲ ಇಬ್ಬನಿಯ ಮುತ್ತುಗಳ ಇನ್ನೂ ಹಾರದ ಕೆಂಪು ಗುಲಾಬಿಯ ರೆಕ್ಕೆಗಳನ್ನು ಬಿಡಿಸಿ ರಾಷ್ಟ್ರದ್ವಜದೊಳಗೆ ಹಾಕುತ್ತಿದ್ದೆವು. ಅಂದಿನ ದಿನ ನಮ್ಮಲ್ಲಿ ಏನೋ ಪುಳಕ , ಉಕ್ಕಿಬರುವ ಉಲ್ಲಾಸ, ಶಾಲೆಯ ಮುಂದೆ ದೊಡ್ಡದಾದ ಭೂಪಟವನ್ನು ಬಿಡಿಸಿ ಅದರೋಳಗೆ ನಮ್ಮನ್ನು ಸಾಲು ಸಾಲಾಗಿ ನಿಲ್ಲಿಸುತ್ತಿದ್ದರು . ನಾವೆಲ್ಲ ಅಭಿಮಾನದಿಂದ ಕತ್ತೆತ್ತಿಕೊಂಡು ಪಟಪಟಿಸುವ ರಾಷ್ಟ್ರದ್ವಜವನ್ನು ನೋಡುತ್ತಿದ್ದೆವು.

        ನಮ್ಮೊರಿನ ಹಿರಿಯ ಜೀವ ರಾಮಜ್ಜ ದ್ವಜಾರೋಹಣ ಮಾಡುತ್ತಿದ್ದರು . ಮಕ್ಕಳೆ ಸತ್ಯ ನುಡಿಯಿರಿ, ಒಳ್ಳೆಯದನ್ನೆ ಪ್ರೀತಿಸಲು ಕಲಿಯಿರಿ, ಸ್ವಾತಂತ್ರ್ಯ ನಮಗೆ ತುಂಭಾಕಷ್ಟದಿಂದ ಬಂದದ್ದು. ದೇಶದ ಎಷ್ಟೊ ಮಹಾನುಬಾವರು ಇ ಮುತ್ತಿಗಾಗಿ ತನ್ನ ಪ್ರಾಣವನ್ನೆ ಇತ್ತಿದ್ದಾರೆ ಎಂಬ ಮುತ್ತಿನಂತ ಮಾತುಗಳನ್ನಾಡುತ್ತಿದ್ದರು. ನಾವು ಮೇಲುದ್ವನಿಯಲ್ಲಿ "ಜನಗಣ ಮನ" ಮತ್ತು "ಒಂದೇ ಮಾತರಂ" ಹಾಡಿ . ನಿಂಬೆಹುಳಿ ಚಾಕಲೇಟ್ ಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆಗ ಮಾತ್ರ ಸ್ವಲ್ಪ ಗಲಾಟೆಯಾಗುತ್ತಿತ್ತು.
     ನಂತರ ಭಾಷಣದ್ದು ನಾನು ಮಾತ್ರ ಸ್ವಾತಂತ್ರದಿನಾಚರಣೆಗೆ ಒಂದು ತಿಂಗಳು ಇರುವಾಗಲೆ ಭಾಷಣ ಬರಿಸಿಕೊಂಡು ಕಂಠಪಾಠಮಾಡುತ್ತಿದ್ದೆ . ಎಂಥಾ ಸಂಬ್ರಮ ಎನ್ನುತ್ತಿರಾ...? ನಿಶ್ಕಲ್ಮಶ ಮನಸ್ಸಿನಿಂದ ಮಾಡಿದ ಭಾಷಣಕ್ಕೆ ಚಿತ್ರಪಟದಲ್ಲಿರುವ ಗಾಂಧಿ ತಾತನೇ ಎದ್ದು ಬಂದು ಕೆನ್ನೆಗೆ ಮುತ್ತು ಕೊಡುತ್ತಿದ್ದನೋ ಎನೋ....! ಆಷ್ಟು ಮಾದುರ್ಯವಾಗಿರುತ್ತಿತ್ತು . ಇದು ನನ್ನ ಬಾಲ್ಯದ ನೆನಪು...!
      ಈಗ ಮತ್ತೆ ಅದೇ ಸ್ವಾತಂತ್ರ್ಯದಿನ ಬಂದಿದೆ . ನನಗೀಗ ೨೫ರವಯಸ್ಸು ಮೊದಲಿನಂತೆ ಖುಷಿ ಇಲ್ಲ, ಉತ್ಸಹವಿಲ್ಲ, ಯಾರೊ ಕಳುಹಿಸಿದ ಒಂದು ಮೆಸೇಜ್ ಗೆ ಸೇಮ್ ಟು ಯು ಎಂದು ರಿಪ್ಲೇ ಕುಟ್ಟಿ ಮುಖ ಕೆಳಗೆ ಹಾಕಿಕೊಂಡು ಕುಳಿತಿದ್ದೆನೆ . ನನ್ನ ಮನೆ ಎದುರಿಗೆ ಮಲ್ಲಿಗೆ ಮೊಗ್ಗಿನಂತ ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೊಗುತ್ತಿದ್ದಾರೆ. ಆ ಮೊಗ್ಗಿನ ಮನಸ್ಸಿನಂತ ಮಕ್ಕಳೊಂದಿಗೆ ದ್ವಜಾರೊಹಣ ನೋಡಲು ಹೋಗುವ ಆಸೆ. ಅವರ ನಡುವೆ ನಿಂತು ಅವರದೇ ಆದ ಮೇಲು ದ್ವನಿಯಲ್ಲಿ ಜನಗಣ ಮನ ಹಾಡುವ ಆಸೆ, ಮಕ್ಕಳೆ ಒಳ್ಳೆಯದನ್ನೆ ಕಲಿಯಿರಿ ಎಂದು ಹೇಳುವ ಆಸೆ, ಮನೆಮುಂದೆ ಇರುವ ಸುಂದರ ಹೂವುಗಳನ್ನು ಕಿತ್ತುಕೊಂಡು ಹೋಗಿ ದ್ವಜದಲ್ಲಿ ಹಾರಿಸುವ ಆಸೆ, ಆದರೆ ಕಳ್ಳ ಮನಸ್ಸು ಸಿಕ್ಕಾ-ಪಟ್ಟೆ ಸೊಂಬೆರಿಯಾಗಿಬಿಟ್ಟಿದೆ.
     ಆದರೆ ಈ ಬಾರಿ ಹೋಗೆ.. ಹೊಗುತ್ತೆನೆ ಎದರುಮನೆಯ ಪುಟಾಣಿಗೊಂದು ಚುಟುಕಾದ ಬಾಷಣ ಬರೆದುಕೊಟ್ಟಿದ್ದೆನೆ . ನಾನು ಚಿಕ್ಕವನಾಗಿದ್ದಾಗ ನನ್ನ ಸುವರ್ಣಾ ಟೀಚರ್ ಬರೆದುಕೊಟ್ಟಿದ್ದರಲ್ಲ ಅದೇ ಭಾಷಣವನ್ನ ಒಂದೇ ಒಂದು ಪ್ಯಾರ. ಆ ಚೂಟಿ ಮಾಡುವ ನನ್ನದೇ ಭಾಷಣ ಕೇಳಲು, ನನ್ನದೇ ಬಾಲ್ಯಕ್ಕೆ ಮರಳ ಹೊರಟಿದ್ದೆನೆ .ಹೌದು ಈ ಬಾರಿ ಖಂಡಿತಾ ದ್ವಜಾರೋಹಣಕ್ಕೆ ಹೋಗಿಬರುತ್ತೆನೆ ಎಳೆಯ ಮಗುವಾಗಿ ...... ಹಾರುವ ಹಕ್ಕಿಯಾಗಿ....

SATISH N GOWDA

Tuesday, August 17, 2010

ಹೇ ಗಾಗ್ರ ಚಲುವೆ


ಹೇ ಗಾಗ್ರ ಚಲುವೆ..

ಹಾಲಿನಂತೆ ಉಕ್ಕಿ ಹರಿಯುವ
ಚಂದ್ರನ ಬೆಳದಿಂಗಳಲ್ಲಿ
ಕಂಡ ಸುಂದರ ಹುಡುಗಿಯ
ಚಂದದ ವರ್ತೆನೆಗೆ ಹುಟ್ಟಿದ
ನನ್ನೀ ಕವಿತೆ ....


ಹೇ ಗಾಗ್ರ ಚಲುವೆ
ನೀ ನೆಡೆಯೋ ರೀತಿಗೆ
ನಿನ್ನ ಬಳಕೋ ಸೊಂಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನೀ ನಾಡೊ ಮಾತಿಗೆ
ನಿನ್ನ ಕಣ್ಣನೋಟಕ್ಕೆ
ಮನಸೋತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಬಿಸಿ ಅಪ್ಪುಗೆಗೆ
ನೀ ಕೊಡುವ ಸಿಹಿಮುತ್ತಿಗಾಗಿ
ಆತೊರೆಯುತಿಹದು
ನನ್ನೀ ಮನಸ್ಸು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?

ಹೇ ಗಾಗ್ರ ಚಲುವೆ
ನಿನ್ನ ಸಿಹಿ ನೆನೆಪಿಗೆ
ಒಂದಿಷ್ಟು ಕಹಿ ಮುನಿಸಿಗೆ
ಮನಸೊತಿಹೆನು ಬರುವೆಯ
ನೀ ನನ್ನ ಬಾಳಸಂಗಾತಿಯಾಗಿ..?
 ಹೇ ಗಾಗ್ರ ಚಲುವೆ
SATISH N GOWDA