Thursday, November 11, 2010

ಅವಳು ನನ್ನಾಕೆ...


ಅವಳು ನನ್ನಾಕೆ... 
ಹುಣ್ಣಿಮೆಯ ರಾತ್ರಿಯಲ್ಲಿ
ನಿಂತಿದ್ದ ಸುಂದರ ಹುಡುಗಿಯ
ಸೌಂದರ್ಯದ ಸೊಬಗನ್ನು ಕಂಡು
ಚಂದಿರನೂ ಕೂಡ ಒಮ್ಮೊಮ್ಮೆ ಕಣ್ಣು ಮಿಟಿಕುಸುತ್ತಿದ್ದ
ಬಹುಶಃ ಇರಬೇಕು ಅವಳು ನನ್ನಾಕೆ..!

ಬೆಳ್ಳಂಬೆಳಗಿನ ಮುಂಜಾನೆಯಲ್ಲಿ
ಜುಳು ಜುಳು ಹರಿಯುವ ಜಲಧಾರೆಯಲಿ
ಮಿಂದು ಬರುತ್ತಿದ್ದ ಯುವತಿಯ ಕಂಡ
ಆ ಸೂರ್ಯನೂ ಒಂದು ಕ್ಷಣ ಕೆಂಪಾಗಿದ್ದ
ನನಗನಿಸುತ್ತೆ ಅವಳು ನನ್ನಾಕೆ..!

ಇಂದ್ರಲೋಕದ
ರಂಗು ರಂಗುನ ನೃತ್ಯಮಂದಿರದಲ್ಲಿ
ನಾಟ್ಯಮಯೂರಿ ನಾರಿಯರ ಸಮ್ಮುಖದಲ್ಲಿ
ನಾರ ಮಡಿಯಲ್ಲಿ ಬಂದ ನಾರಿಯ ನೆಡೆಗೆಯ ಕಂಡು
ನೃತ್ಯ ಮಂದಿರದ ಸಭೆಯೇ ಒಮ್ಮೆ ದಂಗು ಬಡಿದಂತಿತ್ತು
ಬಹುಶಃ ಇರಬೇಕು ಅವಳು ನನ್ನಾಕೆ..!

ಕಡು ಕಗ್ಗತ್ತೆಲೆಯ ನಡು ರಾತ್ರಿಯಲಿ
ಧರೆಗಿಳಿದ ದೇವತೆಯ
ಮೋಹಕ ಕಣ್ಣುಗಳನೋಟಕ್ಕೆ
ಅವಳನ್ನು ಸೃಷ್ಟಿಸಿದ ಬ್ರಹ್ಮನಿಗೂ ಒಮ್ಮೆ ಮೋಹ ಉಂಟಾಯಿತು
ಬಹುಶಃ ಇರಬೇಕು ಇವಳು ನನ್ನಾಕೆ..?


SATISH N GOWDA

10 comments:

ಸೀತಾರಾಮ. ಕೆ. / SITARAM.K said...

ನಾರುಮುಡಿಯಲ್ಲಿ ಇ೦ದ್ರನ ನರ್ತನ ಶಾಲೆಗೆ ನಿಮ್ಮವಳೇಕೆ ಬರಬೇಕು ತಿಳಿಯಲಿಲ್ಲ. ನಾರಿ ಗೆ ಪ್ರಾಸವಾಗಿ ನಾರು ಮುಡಿಯನ್ನ ಸೇರಿಸಿ ಅರ್ಥಕ್ಕೆ ದಕ್ಕೆ ತರುವದು ತರವಲ್ಲ.

ಹಳ್ಳಿ ಹುಡುಗ ತರುಣ್ said...

super agide gowdre...

SATISH N GOWDA said...

ಸೀತಾರಾಂ ಸರ್ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ....
"ನಾರು ಮುಡಿ" ಇದು ತಪ್ಪು
"ನಾರು ಮಡಿ" ಇದು ಒಪ್ಪು
"ಮುಡಿ " ಎಂದರೆ ಕೊದಲು
"ಮಡಿ " ಎಂದರೆ ವಸ್ತ್ರ
ಪಾಂಡವರು ವನವಾಸಕ್ಕೆ ಹೊರಟಾಗ ಧರಿಸಿದ್ದ ಬಟ್ಟೆಗಳನ್ನು "ನಾರ ಮಡಿ " ಎಂದು ಕರೆದರು
ರಂಗು ರಂಗುನ ನೃತ್ಯಮಂದಿರದಲ್ಲಿ = ಬಣ್ಣ ಬಣ್ಣದ ನೃತ್ಯ ಮಂದಿರದಲ್ಲಿ
ನಾಟ್ಯಮಯೂರಿ ನಾರಿಯರ ಸಮ್ಮುಖದಲ್ಲಿ = ಚಂದದ ಡ್ಯಾನ್ಸ್ ಮಾಡೋ ಹುಡುಗಿಯರ ಮುಂದೆ
ನಾರ ಮಡಿಯಲ್ಲಿ ಬಂದ ನಾರಿಯ ನೆಡೆಗೆಯ ಕಂಡು = ಅಷ್ಟೇನೂ ಚಂದವಲ್ಲದ ಬಟ್ಟೆ ತೊಟ್ಟು ಸುಮ್ಮನೆ ನಡೆದಾಡುವ ಹುಡುಗಿಯ ಕಂಡು
ನೃತ್ಯ ಮಂದಿರದ ಸಭೆಯೇ ಒಮ್ಮೆ ದಂಗು ಬಡಿದಂತಿತ್ತು = ಅಲ್ಲಿ ನೆರೆದಿದ್ದ ಅಷ್ಟೂ ಜನ ಡ್ಯಾನ್ಸ್ ಮಾಡುವ ಹುಡುಗಿಯರನ್ನು ನೋಡುವುದನ್ನು ಬಿಟ್ಟು ಇವಳ ನಡೆಯನ್ನು ನೋಡುತ್ತಿದ್ದರು
ಬಹುಶಃ ಇರಬೇಕು ಅವಳು ನನ್ನಾಕೆ..! = ನನ್ನ ಮನಸ್ಸಿಗೆ ಅನಿಸುತ್ತೆ ಅವಳೇ ಇರಬೇಕು ನನ್ನಾಕೆ (ಅತಃ ಸುಂದರಿಯನ್ನ ಅಸೆ ಪಡುತ್ತಿದೆ ಈ ಮನಸ್ಸು )


ಇದು ಆ ಪ್ಯಾರದ ವಿಶ್ಲೇಷಣೆ ತಪ್ಪಿದ್ದರೆ ಹೇಳಿ ಮತ್ತೊಮ್ಮೆ ತಿದ್ದುತ್ತೇನೆ
ತಿಳಿ ಹೇಳಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು
SATISH N GOWDA

SATISH N GOWDA said...

ಹಳ್ಳಿ ಹುಡುಗ ತರುಣ್ ರವರೆ ಧನ್ಯವಾದಗಳು ಹೀಗೆ ನನ್ನವಳಲೋಕಕ್ಕೆ ನಿಮ್ಮ ಬೇಟಿ ನಿರಂತರವಾಗಿರಲಿ .....

Shashi jois said...

ಸತೀಶ್ ಕವನ ಚೆನ್ನಾಗಿದೆ..ನಿಮ್ಮಾಕೆ ಚೆನ್ನಾಗಿದ್ದಾಳೆ.

balasubramanya said...

ಸತೀಶ್ ಕವಿತೆ ಚೆನ್ನಾಗಿದೆ .ಸೂಪರ್

SATISH N GOWDA said...

ಶಶಿ ಜೋಯೇಸ್ ... ಮೇಡಂ ರವರೆ ನನ್ನವಳಲೋಕಕ್ಕೆ ಸ್ವಾಗತ
ಮುಂದೆಯೂ ಕೂಡ ಈಗೇ ಕಾಮೆಂಟ್ ಮಾಡುತ್ತಿರಿ

SATISH N GOWDA said...

ನಮ್ಮೊಳಗೊಬ್ಬ ರವರೆ ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ , ನನ್ನವಳಲೋಕಕ್ಕೆ ಸ್ವಾಗತ

ಅನಂತ್ ರಾಜ್ said...

ಉತ್ತಮ ಹೋಲಿಕೆಗಳಿ೦ದ ಕವನವನ್ನು ಅ೦ದಗೊಳಿಸಿದ್ದೀರಿ. ಸುಭಾಶಯಗಳು ಸತೀಶ್.


ಅನ೦ತ್

SATISH N GOWDA said...

ತುಂಬಾ ಧನ್ಯವಾದಗಳು ಅನಂತ ರಾಜ್ ಸರ್ . ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಮತ್ತಷ್ಟು ಕವಿತೆಗಳನ್ನು ಬರೆಯುತ್ತೇನೆ ಹೀಗೇ ನಿಮ್ಮ ಬೇಟಿ ನನ್ನವಳಲೋಕಕ್ಕೆ ನಿರಂತರವಾಗಿರಲಿ ...